ಮಂಗಳೂರಿಲ್ಲಿ ದೀಪಾವಳಿ ಹಬ್ಬದ ವಿಶೇಷ ಆಚರಣೆ

ಹವ್ಯಕ ಮಂಡಲ ಹಾಂಗೂ ಮಂಗಳೂರಿನ  ಬೇರೆ ಬೇರೆ ವಲಯಂಗಳ ಸಹಯೋಗಲ್ಲಿ ಮಂಗಳೂರಿನ ಹವ್ಯಕರೆಲ್ಲೋರು ಒಟ್ಟು ಸೇರಿ ದೀಪಾವಳಿಯ ವಿಜೃಂಭಣೆಲಿ ಆಚರಿಸಿದವು.  ಶ್ರೀ ಮಹಾಲಕ್ಷ್ಮಿ ಪೂಜೆ ಹಾಂಗೂ ಗೋಪೂಜೆ,  ಮಹಿಳೆಯರಿಂದ  ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ, ಪುರುಷರಿಂದ ವಿಷ್ಣು ಸಹಸ್ರನಾಮ ಪಾರಾಯಣ ಎಲ್ಲವುದೆ ಚೆಂದಕೆ ನೆಡದತ್ತು.  ನಂತೂರಿನ ಶ್ರೀ ಭಾರತೀ ಕಾಲೇಜಿನ ಶಂಕರಶ್ರೀ ಸಭಾಂಗಣಲ್ಲಿ ಇದು ನೆಡದತ್ತು.   ಹವ್ಯಕ ಬಾಂಧವರು ಸಾಕಷ್ಟು ಸಂಖ್ಯ್ಲೆಲಿ  ಸೇರಿ,  ಪೇಟೆಲಿಯು ದೀಪಾವಳಿಯ ಗೌಜಿಲಿ ಆಚರಣೆ ಮಾಡಿದವು.  ಎರಡು ಗಂಟಗೇ ಹೆಮ್ಮಕ್ಕೊ ಎಲ್ಲ ಸೇರಿ ಮುಳ್ಳುಸೌತೆ ಕೊಟ್ಟಿಗೆ ತಯಾರಿಗೆ ಏರ್ಪಾಟು ಮಾಡಿದವು.  ಅಕ್ಕಿ ಉದ್ದು ಕಡದು, ಮುಳ್ಳು ಸೌತೆ ಕೊಚ್ಚಲು ಸೇರುಸಿ, ಬಾಳೆಲೆ ಬಾಡುಸಿ, ಹಿಟ್ಟು ಹಾಕಿ ಮಡುಸಿ ಅಟ್ಟಿನಳಗೆಲಿ ಮಡಗಿ ಬೇಶಿದವು.  ಇನ್ನೂರು ಇನ್ನೂರೈವತ್ತು ಜೆನಕ್ಕೆ ಏರ್ಪಾಟು ಹೇಳಿರೆ ಕಡಮ್ಮೆಲಿ ಆವ್ತೋ.  ಇದರೊಟ್ಟಿಂಗೆ ಪುಳಿಯೋಗರೆಯುದೆ, ಅವಲಕ್ಕಿ ಕಲಸಿದ್ದದುದೆ ಆಯೆಕು.   ಹೆಮ್ಮಕ್ಕಳ ಉತ್ಸಾಹವೇ ಉತ್ಸಾಹ.    ನಾಲ್ಕು ಗಂಟೆ ಅಪ್ಪಗ ಜೆನ ಸೇರ್ಲೆ ಸುರು ಆತು  ಕತ್ಲೆಪ್ಪಗ ಅವಲಕ್ಕಿ, ಕಾಪಿಯುದೆ ಇತ್ತು.  ಎಲ್ಲೋರುದೆ ಶಾಸ್ತ್ರೀಯ ಉಡುಗೆ ತೊಡುಗೆಲಿ ಬಂದು ಕಾರ್ಯಕ್ರಮಲ್ಲಿ ಭಾಗವಹಿಸಿದ್ದದು ಕಾರ್ಯಕ್ರಮಕ್ಕೆ ಇನ್ನುದೆ ಕಳೆಕೊಟ್ಟತ್ತು.

ಹವ್ಯಕ ಮಂಡಲದ ಧಾರ್ಮಿಕ ಪ್ರಮುಖರಾಗೆಂಡಿಪ್ಪ ಶ್ರೀಯುತ ಅಮೈ ಶಿವಪ್ರಸಾದ್  ಭಟ್ ಅವರ ನೇತೃತ್ವಲ್ಲಿ,  ಕಾಲೇಜಿನ ಸಂಚಾಲಕರಾದ ಶ್ರೀ ವೈ.ವಿ.ಭಟ್ ದಂಪತಿಗೊ ಪೂಜೆಯ ನೆರವೇರಿಸಿದವು.  ಕಡೆಂಗೆ ಶ್ರೀ ಅಮೈ ಶಿವ ಪ್ರಸಾದ್ ಭಟ್,  ಆಶೀರ್ವಚನ ನೀಡಿದವು.  ಶ್ರೀ ಗುರುಗೊ ದಾರಿ ತೋರುಸಿದ ಹಾಂಗೆ ನಾವೆಲ್ಲ ಒಟ್ಟು ಸೇರಿ ಹಬ್ಬ ಹರಿದಿನಂಗಳ ಆಚರಿಸುತ್ತಾ ಇದ್ದು, ಎಲ್ಲೋರು ಒಟ್ಟು ಸೇರಿ ಹೀಂಗೆ ಪೂಜೆ ಮಾಡುವುದರಿಂದ ಹೆಚ್ಚಿನ ಫಲ ಸಿಕ್ಕುತ್ತು.  ಲಕ್ಷ್ಮಿ ಹೇಳಿರೆ ಚಂಚಲೆ, ಅದು ಸ್ಥಿರವಾಗಿ ನಿಂಬಲೆ,  ಹಾಂಗೆ “ಅರ್ಥಂ”ದಾಗಿ ಬಪ್ಪ ತೊಂದರೆ ನಿವಾರಣೆಗಾಗಿ ವಿಷ್ಣು ಸಹಿತ ಲಕ್ಷ್ಮಿಯ ನಾವು ಪೂಜಿಸುತ್ತು. ಒಟ್ಟಿಂಗೆ  ಗೋಪೂಜೆಯನ್ನು ನಾವು ಮಾಡಿದ್ದು.  ಎಲ್ಲೋರು ಒಟ್ಟಿಂಗೆ ಸೇರಿ ದೇವತಾ ಕಾರ್ಯಂಗಳ ನಾವು ಹೀಂಗೆ ಮಾಡ್ತಾ ಇಪ್ಪೊ, ಇದರಿಂದ ನಮ್ಮ ಸಂಘಟನೆಗೂ ಬಲ ಬತ್ತು, ಹೇಳಿ ಎಲ್ಲೋರನ್ನು ಹರಸಿದವು.  ಮಂಗಳಾರತಿ, ಪ್ರಸಾದ ವಿತರಣೆ ಕಳುದಿಕ್ಕಿ, ರುಚಿ ರುಚಿಯಾದ ಮುಳ್ಳುಸೌತೆ ಕೊಟ್ಟಿಗೆ, ಚಟ್ಣಿ, ರವೆ, ಕಲಸಿದ ಅವಲಕ್ಕಿ ಎಲ್ಲೋರ ಹಸಿವು ತಣುಸಿತ್ತು.  ದುರುಸು ಬಾಣ, ಪಟಾಕಿ, ಸುರು ಸುರು ಕಡ್ಡಿ ಕಣ್ಮನ ತಣಿಸಿತ್ತು.  ಅಂತೂ ಈ ದೀಪಾವಳಿ ಆಚರಣೆ ಎಲ್ಲೋರಿಂಗು ಕೊಶಿ ಕೊಟ್ಟತ್ತು.

ಕಾರ್ಯಕ್ರಮ ಮುಗುಶಿ ಮನಗೆ ಎತ್ತಿ ಅಪ್ಪಗ, ಗುಡುಗು ಸಿಡಿಲು ಭರ್ಜರಿ ಮಳೆಯುದೆ ಜಡ್ಪಿತ್ತು.  ವರುಣಂಗುದೆ  ದೀಪಾವಳಿ ಆಚರಿಸುವೋ ಹೇಳಿ ಕಂಡತ್ತೋ ಹೇಳಿ.

 

 

ಬೊಳುಂಬು ಮಾವ°

   

You may also like...

6 Responses

 1. ಕೆ. ವೆಂಕಟರಮಣ ಭಟ್ಟ says:

  ಪೇಟೆಯವಕ್ಕೆ ಗೋಪೂಜೆಗೆ ಅವಕಾಶ ಸಿಕ್ಕಿದ್ದು, ಅದರ ಮಹತ್ವ ಮಕ್ಕೊಗೆ ಗೊಂತಪ್ಪಲೆ ಒಂದು ಒಳ್ಳೇ ವಿಷಯ. ಹರೇ ರಾಮ.

 2. ತೆಕ್ಕುಂಜ ಕುಮಾರ ಮಾವ° says:

  ಎಲ್ಲೋರು ಕೂಡಿ ಹಬ್ಬ ಆಚರಿಸಿರೆ ಆ ಗಮ್ಮತ್ತೆ ಪ್ರತ್ಯೇಕ. ಹಬ್ಬದ ಶುಭಾಶಯಂಗೊ.

 3. ಮರುವಳ ನಾರಾಯಣ says:

  ಚೆಂದದ ಫೋಟೋಂಗೊ

 4. ಚೆನ್ನೈ ಭಾವ° says:

  ಹೀಂಗೆ ನಿಂಗೊ ಹೆಮ್ಮಕ್ಕಳೇ ಸೇರಿಗೊಂಡು ಇಟ್ಟು ಗೌಜಿ ಮಾಡ್ಳೆ ಹೆರಟ್ರೆ ಮತ್ತೆ ಅಡಿಗೆ ಸತ್ಯಣ್ಣ° ಎಂತ ಮಾಡ್ಸು ಮಾವ°?!!

  ಆಗಲಿ. ನಿಂಗೊ ಗೌಜಿ ಮಾಡಿ ಸುದ್ದಿ ಮಾಡಿದ್ದಲ್ಲದ್ದೆ ಬಾಕಿ ಜಾಗೆಲಿಯೂ ಹೀಂಗಿರ್ತ ಹುರುಪು ಬರ್ಲಿ ಹೇದು ಅನುಕರಣೀಯ ಎನಿಸಿದ್ದಿ. ಹರೇ ರಾಮ .

  ಪಟಂಗೊ ಮುದ ನೀಡಿತ್ತು.

 5. ಸುದ್ದ್ದಿ ಮತ್ತು ಫೋಟೋಗ ಭಾರಿ ಚೆಂದ ಇದ್ದು ಬೊಳುಂಬು ಮಾವ

 6. ಗೌಜಿ ಆಯಿದಡ ಶುದ್ದಿ ಕೇಳಿದೆ.. ಇದರ ಓದಿ ಪಟ ಕ೦ಡಪ್ಪಾಗ ನಿಜ ಆತು
  ಪುಳಿಯೋಗರೆ ಮಾತ್ರ ಸತ್ಯಣ್ಣ° ಮಾಡಿದ್ದು ಹೇಳಿ ಶುದ್ದಿ…
  ಬೊಳುಂಬು ಮಾವ….ಲಾಯಿಕ್ಕಾಯಿದು ಶುದ್ದಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *