ಪಯಣ – 2

February 16, 2011 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗಳೂರು ಹೋಬಳಿಲಿ ಹವ್ಯಕ ಭಾಷೆಲಿ ಭೇದ ಇಲ್ಲೆ, ಆದರೆ ಅನೇಕ ಪ್ರಭೇದಂಗೊ ಇದ್ದು. ಒಂದು ವಿಶಿಷ್ಟವಾದ್ದು ಚೊಕ್ಕಾಡಿಭಾಷೆ.
ಕನ್ನಡಕ್ಕೆ ಹೆಚ್ಚು ಹತ್ತರೆ ಇಪ್ಪ ಇದರ ಪ್ರತ್ಯಯಂಗೊ ವಾಕ್ಯ ರೀತಿಗೊ ಇತರ ಭಾಶೆಂದ ತುಂಬ ವ್ಯತ್ಯಸ್ತ.
ನಮ್ಮ ಬೈಲಿನ ಕಾವಿನಮೂಲೆಮಾಣಿ ಅವನ ಮನಸ್ಸಿನ ತನ್ನ ಮಾತೃಭಾಶೆಲೇ ನಮ್ಮ ಬೈಲಿಲಿ ಹೇಳ್ತ°.
ಬನ್ನಿ, ಕಾವಿನಮೂಲೆ ಮಾಣಿಯ ಶುದ್ದಿಗಳ ಕೇಳುವೊ°, ಪ್ರೋತ್ಸಾಹಿಸುವೊ°, ಚೊಕ್ಕಾಡಿಭಾಶೆಯ ಕಲಿವ°.
ಯೇವದಾರು ಶಬ್ದ ಸಂಶಯ ಬಂದರೆ ಒಪ್ಪ ಕೊಟ್ಟು ಕೇಳಿಕ್ಕಿ, ಆತಾ?

ಅಂದು ಯಾವಾಗಲೋ ಒಂದು ದಿನ ಊರಿಂದ ಬೆಂಗ್ಳೂರಿಗೆ ಹೋಗುವಾಗ ರೈಲಿಲಿ ಕೂತು ಮನಸ್ಸಿಗೆ ಕಂಡದ್ರ ಬರ್ದಿತ್ತಿದ್ದೆ. (ಇಲ್ಲಿ ಅದೆ)
ಇಂದು ಅದೇ ಭಾರತೀಯ ರೈಲ್ವೇ ನನ್ನ ಇಷ್ಟು ದೂರ ತಂದು ಕೂರ್ಸಿಯೆದೆ, ದಿಲ್ಲಿಲಿ !

ಕೆಲಸದ ಹುಡುಕಾಟಲ್ಲಿ ತಲೆ ಹಾಳು ಮಾಡಿಕೊಳ್ಳದ್ದವು ಯಾರಿದ್ದಾವೆ ?
ನಾನೂ ಸ್ವಲ್ಪ ಸಮಯ ತಲೆ ಬಿಶಿ ಮಾಡಿ ಮನಸ್ಸು ಹುಳಿ ಮಾಡಿಕೊಂಡೆ. ಅವಾಗ ಸಿಕ್ಕಿದ್ದು ಈ ಕೆಲಸ.
ಡೆಲ್ಲಿ ಲಿ ಕೆಲಸ ಹೇಳಿಯಾಗುವಾಗಲೇ ಎಲ್ಲವ್ರದ್ದೂ ಒಂದೇ ಪ್ರಶ್ನೆ, ಅಷ್ಟು ದೂರವಾ ? ಎಂತಕೆ ? ಇಲ್ಲಿಯೇ ಸಿಕ್ಕುದಿಲ್ವಾ ಒಳ್ಳೆ ಕೆಲಸ ?
ನನಿಗೆ ಇಂಥಾ ಒಂದು ಬ್ರೇಕ್ ಅಪ್ ಬೇಕಿತ್ತು. ಹಿಮ ಆಗುವ ಆಸೆ !

ದಿಲ್ಲಿ ಹೇಳಿರೆ ಉತ್ತರ ಭಾರತದ ಹೃದಯ. ಅಲ್ಲಿಂದ ಹಿಮಾಲಯ ತುಂಬಾ ಹತ್ರ !
ಆ ಆಸೆಯೇ ನನ್ನ ಇಷ್ಟು ದೂರ ಕರ್ಕೊಂಡು ಬಂತು ಹೇಳಿರೂ ತಪ್ಪಾವ್ಕಿಲ್ಲ.
ಅದೊಂದು ದಿನ ಸೀದಾ ರೈಲು ಹತ್ತಿ ಡೆಲ್ಲಿಗೆ ಬಂದೇ ಬಿಟ್ಟೆ. ರೈಲಿಲಿ ಹೋಗುದು ಹೇಳಿರೆ ತುಂಬಾ ಖುಶಿ ನನಿಗೆ. ರೈಲು ಹೇಳಿರೆ ಒಂದು ಮಿನಿ ಭಾರತದ ಹಾಂಗೆ ಅಲ್ವಾ ?
ಬೆಂಗ್ಳೂರಿಂದ ರಿಸರ್ವೇಶನ್ ಸಿಕ್ಕದ್ದೆ ಚೆನ್ನೈಗೆ ಹೋಗಿ ಅಲ್ಲಿಂದ ಡೆಲ್ಲಿಗೆ ರೈಲು ಹತ್ತಿದೆ. ಊರು ಸುತ್ತುದು ಹೇಳಿರೆ ಯಾರಿಗೆ ಖುಶಿಯಾಗುದಿಲ್ಲ ???
ಚೆನ್ನೈಲಿ ನನ್ನ ಫ್ರೆಂಡ್, ದೂರದ ನೆಂಟ್ರು ರಾಧಿಕನ ಮನೆಗೆ ಹೋಗಿ ಮಾತಾಡ್ಸಿ, ಊಟ ಮಾಡಿಯೂ ಆಯ್ತು.

ಡೆಲ್ಲಿಲಿ ಪರಿಚಯದವು ಯಾರಾರು ಇದ್ದಾವಾ ಹೇಳಿ ಮೊದಲೇ ಅಲೋಚನೆ ಮಾಡಿತ್ತಿದ್ದೆ.
ಅವಾಗ ಚಿಕ್ಕಯ್ಯ ಹೇಳಿದ, ನಮ್ಮ ಶೆಟ್ರು ಇದ್ದಾವಲ್ಲಾ ? ನಾನು ಮಾತಾಡ್ತೇನೆ. ಆ ಜನ ಎಲ್ಲಾ ವ್ಯವಸ್ತೆ ಮಾಡೀತು ಹೇಳಿ.
ವಸಂತ ಶೆಟ್ಟಿ ಯ ನಂಬರೂ ಕೊಟ್ಟ ಚಿಕ್ಕಯ್ಯ.

ಡೆಲ್ಲಿ ಯ ನಿಜಾಮುದ್ದೀನ್ ರೈಲ್ವೆ ಸ್ಟೇಶನ್ ಲಿ ಬಂದು ಇಳಿಯುವಾಗ ಎಂತದೋ ಒಂದು ಹೆದ್ರಿಕೆ.
ಗೊತ್ತು ಪರಿಚಯ ಇಲ್ಲದ್ದ ಜಾಗೆಲಿ ಒಬ್ಬನೇ ಬಂದದ್ದು ಇದೇ ಮೊದಲು. ಭಾರೀ ಜಾಗ್ರತೆ ಬೇಕು ಹೇಳಿ ಎಲ್ಲವೂ ಹೇಳಿಯೇ ಕಳ್ಸಿದ್ದು.
ಆದ್ರೂ ಒಂದು ಪೊಟ್ಟು ಧೈರ್ಯ ಮಾಡಿ ಹೊರಟಾಗಿಯೆದೆ. ನೀರಿಗೆ ಇಳುದ ಮೇಲೆ ಚಳಿ ಹೇಳಿ ಹಿಂದೆ ಬರುಕಾಗ್ದಲ್ವಾ ?

ಹಾಂಗೂ ಹೀಂಗೂ ಡೆಲ್ಲಿಯ ಕರ್ನಾಟಕ ಸಂಘಕ್ಕೆ ಬಂದು ತಲ್ಪಿದೆ. ಅಲ್ಲಿ ಉಳ್ಕೊಳ್ಳುಕೆ ವ್ಯವಸ್ತೆ ಮಾಡಿ ಆಗಿತ್ತು ಶೆಟ್ರು.
ಮರುದಿನ ಗುರ್ಗಾಂವಿಗೆ ಹೊರಟೆ. ದಾರಿ ಕೇಳಿಕೊಂಡು ಹೋಗುದು ಬೆಂಗ್ಳೂರಿನಷ್ಟು ಸುಲಭ ಅಲ್ಲ ಇಲ್ಲಿ.
ಯಾರತ್ರ ಕೇಳಿರೂ ಸರಿಯಾದ ದಾರಿ ಹೇಳಿಯಾವು ಹೇಳಿ ನಂಬುವ ಹಾಂಗೆ ಇಲ್ಲ. ಇಫ್ಕೋ ಚೌಕಕ್ಕೆ ಬಂದು ಅಲ್ಲಿಂದ ಹೊಸ ಕಂಪೆನಿಗೆ ದಾರಿ ಹುಡ್ಕಿಯಾಗುವಾಗ ಸಾಕು ಸಾಕಾಯ್ತು.

*************

ಮನುಷ್ಯ ಎಷ್ಟು ಸ್ವಾರ್ಥಿ ಅಲ್ವಾ ?
ನಮ್ಮ ಒಟ್ಟಿಗೆ ಇದ್ದವು ಬಿಟ್ಟು ಹೋದ ಮೇಲೆ ಸ್ವಲ್ಪವೇ ಸಮಯಲ್ಲಿ ಅವರ ನೆನಪ್ಪೂ ನಮ್ಮ ಬಿಟ್ಟು ಹೋಗ್ತೆ !
ನಾವು ಒಟ್ಟಿಗೆ ಕಳುದ ಎಲ್ಲಾ ಸುಂದರ ಕ್ಷಣಗಳು ನೆನಪ್ಪಾಗಿ ಉಳಿತ್ತೆ, ಸ್ವಲ್ಪ ದಿನ ಕಳುದ ಮೇಲೆ ಅದೂ ಮಾಸಿ ಹೋಗ್ತೆ !

ಅಜ್ಜ ನಮ್ಮ ಬಿಟ್ಟು ಹೋಗಿ ಎರಡು ವರ್ಷ ಆಗ್ತಾ ಬಂತು. ಲ್ಯಾಪ್‌ಟಾಪಿಲಿ ಕುರುಟಿಕೊಂಡು ಇರುವಾಗ ಅಜ್ಜನ ಫೋಟೋ ಇರುವ ಫೋಲ್ಡರ್ ಕಂಡತ್ತು.
ತೆಗುದು ನೋಡಿರೆ, ಅಜ್ಜನ ನೆಗೆ ಮಾಡಿಕೊಂಡಿರುವ ಮೋರೆ !
ಎಲ್ಲಾ ಫೋಟೋ ನಾನೆ ತೆಗುದ್ದು. ನನ್ನ ಹತ್ರ ಕ್ಯಾಮರಾ ಇರಲ್ಲ ಮೊದುಲು. ಡಿಗ್ರಿ ಲಿ ಆಲ್ ಇಂಡಿಯಾ ಟೂರು ಹೋವುಕಾಗುವಾಗ ಒಂದು ಕ್ಯಾಮರಾ ತೆಕ್ಕೊಂಡೆ.
ರೀಲು ಹಾಕುವ ಕೊಡೆಕ್ ಕ್ಯಾಮರ. ಅವಾಗ ಅಜ್ಜನ ಫೋಟೊ ತೆಗ್ದ ನೆನಪ್ಪಿಲ್ಲ. ಮತ್ತೆ ಡಿಗ್ರಿ ಮುಗುಸಿ ಕಾಫಿ ಡೇ ಲಿ ಕೆಲಸಕ್ಕೆ ಸೇರಿದ ಮೇಲೆ, ತಂಗಿಯ ಮದುವೆಗಾಗುವಾಗ ಡಿಜಿಟಲ್ ಕ್ಯಾಮರಾ ತೆಕ್ಕೊಂಡೆ.
ಮತ್ತೆ ಅಜ್ಜನ ಸುಮಾರು ಫೋಟೊ ತೆಗ್ದೇನೆ. ಈಗ ಮನೆಲಿ ಗೋಡೆ ಮೇಲೆ ಇರುವ ಅಜ್ಜನ ಫೋಟೊವ ನಾನೇ ತೆಗುದ್ದು.

ಹುಟ್ಟಿ ಬೆಳ್ದ ಮನೆ ಬಿಟ್ಟು ಎರಡೂವರೆ ಸಾವಿರ ಕಿಲೋಮೀಟರ್ ದೂರ ಬಂದು ಕೂತಿದ್ದೇನೆ !
ಮೂರು ತಿಂಗಳಾಯ್ತು ಮನೆಗೆ ಹೋಗದ್ದೆ. ನಾಡುದ್ದು ಹೊರಡುದು ಊರಿಗೆ.
ಅದ್ಯಾಕೋ ಗೊತ್ತಿಲ್ಲ, ಇದ್ದಕ್ಕಿದ್ದ ಹಾಂಗೆ ಲ್ಯಾಪ್ ಟಾಪಿಲಿ ಇರುವ ಎಲ್ಲಾ ಫೋಟೋ ನೋಡುಕೆ ಶುರು ಮಾಡಿದೆ.
ಮನೆಲಿ ತೆಗ್ದ ಫೋಟೋಗಳ ನೋಡುವಾಗಳೇ ಒಂಥರಾ ಬೇಜಾರಾವುಕೆ ಶುರುವಾಯ್ತು. ಮನೆ ನೆನಪ್ಪು ಯಾರಿಗೆ ಆಗುದಿಲ್ಲ ?
ಅಮ್ಮ, ಅಪ್ಪ, ಅಜ್ಜಿ, ಚಿಕ್ಕಯ್ಯ, ಚಿಕ್ಕಮ್ಮ, ತಮ್ಮಂದ್ರು, ತಂಗಿ, ಅದ್ರ ಅಮ್ಳಿ ಮಕ್ಕುಳು, ಭಾವ, ಮನೆ, ತೋಟ, ದನದ ಹಟ್ಟಿ, ಹೀಂಗೆ ಎಲ್ಲವೂ ಕಣ್ಣು ಮುಂದೆ ಸಾಲಿಕಟ್ಟಿ ಬಂತು.
ಅಜ್ಜನ ಫೋಟೋ ನೋಡುವಾಗ ಕಣ್ಣಿಲಿ ನೀರು ಬಂತು.
*************

ಅಜ್ಜನ ನೆನಪ್ಪಾಗುವಾಗ ನನ್ನ ಕಣ್ಣಿಗೆ ಕಟ್ಟುದು ಒಂದೇ ಒಂದು ದೃಶ್ಯ, ಅಜ್ಜ ನಮ್ಮ ಬಿಟ್ಟು ಹೋದ ದಿನ, ತಣ್ಣಗಾದ ಅಜ್ಜನ ಕಾಲು ಹಿಡ್ಕೊಂಡು ನಾನು ಕೂಗಿದ್ದು.
ಆ ಕಾಲಿನ ಮೇಲೆಯೇ ಅಲ್ವಾ ನಾನು ಸಣ್ಣಾಗಿರುವಾಗ ಮನಿಕ್ಕೊಂಡಿದ್ದದ್ದು ? ಹಾಲಿಲಿ ರಸ್ಕು ಅದ್ದಿ ಅಜ್ಜ ನನ್ನ ಬಾಯಿಗೆ ಕೊಟ್ಟುಕೊಂಡಿದ್ದದ್ದು ?
ನಾನು ರಸ್ಕು ತಿಂದು ಮನಿಕ್ಕೊಂಡಿರುವಾಗಲೇ ತಾಚಿ ಮಾಡಿದ್ದು ? ಅಜ್ಜ ತೀರಿಕೊಂಡ ದಿನ ಮಂಗ್ಳೂರು ಆಸ್ಪತ್ರೆಂದ ಆಂಬ್ಯುಲೆನ್ಸಿಲಿ ಮನೆಗೆ ಬರುವಾಗ ನಾನು ಹಟ ಮಾಡಿ ಅಜ್ಜನ ಒಟ್ಟಿಗೆ ಕೂತೆ.
ನನಿಗೆ ಆ ಕಾಲಿನ ಮುಟ್ಟುವೇಕಿತ್ತು, ಅಕೇರಿಯಾಣ ಸರ್ತಿ. ಮತ್ತೆ ಯಾವತ್ತೂ ಸಿಕ್ಕುದಿಲ್ಲ ನಾನು ಮನಿಕ್ಕೊಂಡಿದ್ದ ಆ ಕಾಲು ನನಿಗೆ.
ಮನೆಗೆ ಬಂದು ಅಜ್ಜನ ದಕ್ಷಿಣಕ್ಕೆ ತಲೆ ಇರ್ಸಿ ದರ್ಭೆಲಿ ಮನಿಗಿಸಿದ ಮೇಲೂ ಕಾಲು ಬಿಡುವೇಕು ಹೇಳಿ ಕಾಣಲ್ಲ ನನಿಗೆ.

ಅಜ್ಜನ ಆಸ್ಪತ್ರೆಗೆ ಸೇರ್ಸಿ ಅಜ್ಜ ಸೀರಿಯಸ್ ಹೇಳಿ ಆದ ಮೇಲೆ ಕೂಡ್ಲೇ ಹೊರಟು ಬಾ ಹೇಳಿ ಅಪ್ಪ ಫೋನ್ ಮಾಡಿದ್ವು.
ಬೆಂಗ್ಳೂರಿಂದ ಮಂಗ್ಳೂರಿಗೆ ಬಸ್ಸಿಲಿ ಬರುವಾಗಲೇ ಕೂಗುಕೆ ಶುರುಮಾಡಿತ್ತಿದ್ದೆ ನಾನು. ಆಸ್ಪತ್ರೆಗೆ ಬಂದು ತಲ್ಪಿಯಾಗುವಾಗ ಅಜ್ಜನಿಗೆ ಆಕ್ಸಿಜನ್ ಹಾಕಿ ಮನುಗಿಸಿತ್ತಿದ್ವು.
ಪಲ್ಸ್ ರೇಟ್ ಚೂರು ಚೂರೇ ಕಮ್ಮಿ ಆಗ್ತಾ ಬರ್ತಿತ್ತು. ಕಣ್ಣೆದುರೇ ಅಜ್ಜ ನಮ್ಮಂದ ದೂರ ಆಗ್ತಾ ಇತ್ತಿದ್ರು ಆದ್ರೆ ನಮ್ಮ ಕೈಲಿ ಎಂತದೂ ಮಾಡುಕೆ ಆಗದ್ದ ಸ್ಥಿತಿ.
ಅಜ್ಜ ಇಚ್ಛಾ ಮರಣಿ.
ನಾನು ಇನ್ನು ಮನೆಗೆ ಬರುದಿಲ್ಲ, ಟ್ಯಾಂಕಿಗೆ ನೀರು ತುಂಬ ತುಂಬ್ಸಿ, ಹೇಳುವೇಕಾದವುಕ್ಕೆಲ್ಲಾ ಹೇಳಿ – ಅಜ್ಜ ಮನೆಂದ ಆಸ್ಪತ್ರೆಗೆ ಹೊರಡುವಾಗ ಹೇಳಿದ ಮಾತು.
ಸುಮಾರು ಸಮಯಂದಲೇ ಅಮ್ಮನಿಗೆ ಆರ್ಡರ್ ಆಗಿತ್ತು ಅಜ್ಜಂದು. ಕರಟ ಬಿಸಾಕುಕಾಗ್ದು, ಒಲೆಗೂ ಹಾಕುಕಾಗ್ದು.
ನನಿಗೆ ಬೇಕು ಎಲ್ಲಾ ಕರಟ ಎರಡು ಗೋಣಿ ತುಂಬಾ ಆಗಿತ್ತು ಅಜ್ಜ ಕೂಡಿಟ್ಟ ಕರಟ ! ಮಳೆಗಾಲ ಕರಟ ಬೇಕು, ಇಲ್ಲದ್ರೆ ಕಷ್ಟ ಆದೀತು ಅಜ್ಜನಿಗೆ ಹೋವುಕೆ ಮೊದಲೇ ಅಪರಕಾರ್ಯದ ಚಿಂತೆ.

ನೀನು ಹೋದ್ರೆ ಹನ್ನೊಂದು ದಿನ ಪಾರಾಯಣ ಎಲ್ಲ ಮಾಡ್ಸೆ ನಾನು ಹೇಳಿ ಅಪ್ಪ ಅಜ್ಜನ ಹತ್ರ ತಮಾಷೆ ಮಾಡಿತ್ತಿದ್ವು ಒಂದು ದಿನ.
ಅವಾಗ ಅಂಗಳಲ್ಲಿ ಇದ್ದ ಆಳುಗಳ ತೋರ್ಸಿ ಒಂದೇ ಮಾತು ಕೇಳಿದ್ದು ಅಜ್ಜ, ಪಾರಾಯಣ ಮಾಡ್ಸದ್ರೆ ಅಷ್ಟೆ ಹೋಯ್ತು, ಇವುಕ್ಕೆಲ್ಲಾ ಮೂರೂ ದಿನ ಹೊಟ್ಟೆ ತುಂಬಾ ಊಟ ಆದ್ರೂ ಹಾಕ್ಸುತ್ತಿಯೋ ಇಲ್ವೋ ?

*************

ನನ್ನ ಇಲ್ಲಿಯೇ ಸುಡುವೇಕು ಅಜ್ಜ ಮೊದಲೇ ಜಾಗೆ ತೋರ್ಸಿ ಆಗಿತ್ತು.
ಆಸ್ಪತ್ರೆಗೆ ಹೋಗುವ ದಿನ ಸುಡುವ ಜಾಗೆಗೆ ಹೋಗುವ ದಾರಿಲಿ ಪಾಲ ಹಾಕ್ಸುಕೆ ಹೇಳಿಯೇ ಅಜ್ಜ ಮನೆಂದ ಹೊರಟದ್ದು.
ಬದುಕಿನ ಎಲ್ಲಾ ಕರ್ತವ್ಯವನ್ನೂ ಮುಗ್ಸಿ ನಿಶ್ಚಿಂತೆಂದ ಹೊರಡುವ ಧೈರ್ಯ ಯಾರಿಗದೆ ?
ಅಜ್ಜ ಗ್ರೇಶಿದ ಹಾಂಗೇ ಆಯ್ತಲ್ಲಾ ? ಅಜ್ಜನ ಸುಡುವಾಗ ಸುತ್ತಲೂ ನಿತ್ತು ನೋಡಿದ ಜನ ಎಷ್ಟು ? ಅಜ್ಜನಿಗೆ ಆ ಲೆಕ್ಕಾಚಾರವೂ ಇತ್ತಾ ?
ಸಾಯುಕೆ ಎಷ್ಟೋ ದಿನ ಮೋದಲೇ ಅಜ್ಜನಿಗೆ ಕನಸು ಬೀಳ್ತಾ ಇತ್ತಂತೆ, ವಿಮಾನಲ್ಲಿ ಹಾರಿದ ಹಾಂಗೆ, ಬೇರೆ ಯಾವುದೋ ಲೋಕಕ್ಕೆ ಹೋದ ಹಾಂಗೆ, ಅಲ್ಲಿ ಎಲ್ಲವೂ ಉರ್ಬುಳಿ ಇರುವ ಹಾಂಗೆಲ್ಲಾ ಕನಸು !
ಮನೆಯ ಕೆಂಪಿ ದನ ಯಾವಾಗಲೂ ದಕ್ಷಿಣಕ್ಕೆ ಮೋರೆ ಹಾಕಿ ಸುಯಿಂಪುದು, ಹಾಯುಕೆ ಹೋಗುದು ಮಾಡಿಕೊಂಡಿತ್ತು.
ನವುಗೆ ಕಾಣದ್ದ ಯಮ ಕೆಂಪಿಗೆ ಕಾಣ್ತಿತ್ತಾ ?

ಅಜ್ಜನಿಗೆ ದನದ ಮೇಲೆ, ದನಗಳಿಗೆ ಅಜ್ಜನ ಮೇಲೆ ಇದ್ದ ಪ್ರೀತಿಯ ಹೇಂಗೆ ಹೇಳ್ಲಿ ?
ಪಾಪ, ಆದ್ರೆ ಸಾಯುಕೆ ಮೊದಲಾಣ ದೀಪಾವಳಿಯ ಗೋಪೂಜೆ ಅಜ್ಜ ಮಾಡುಕಾಗ್ಲೇ ಇಲ್ಲ.
ಆ ಸರ್ತಿ ಅಪ್ಪ ಗೋಪೂಜೆ ಮಾಡಿದ್ದು. ಆರತಿಗೆ ಆಗುವಾಗ ಅಜ್ಜ ಸಣ್ಣ ಮಕ್ಕಳ ಹಾಂಗೆ ತಾಳ ಹಿಡ್ಕೊಂಡು ನಿತ್ತಿದ್ರು.
ಅಜ್ಜನ ಮೋರೆಲಿದ್ದ ಆ ನೆಗೆಲಿ ಖುಷಿ ಇತ್ತಾ ಅಥವಾ ವಿಷಾದವಾ ? ಆ ಫೋಟೊವ ತೆಗಿಯುವ ದೌರ್ಭಾಗ್ಯವೂ ನನ್ನದೇ ಆಯ್ತು.

ನಾವು ಸಣ್ಣಾಗಿರುವಾಗ ಮನೆಲಿ ಎಷ್ಟು ದನ, ಎಮ್ಮೆ ಇತ್ತು ?
ಒಂದೇ ಒಂದು ಜಾನುವಾರನ್ನೂ ಮಾರುವ ಹಾಂಗೆ ಇರಲ್ಲ. ಎಷ್ಟು ದೊಡ್ಡ ಹಟ್ಟಿ ಇತ್ತು ? ಮನೆಯಷ್ಟೇ ದೊಡ್ಡ ಜಾನುವಾರು ಹಟ್ಟಿ !
ನನಿಗೆ ಈಗಳೂ ನೆನಪ್ಪದೆ, ಅದೊಂದು ದಿನ ಅಪ್ಪ ಯಾವುದೋ ಒಂದು ದನ ಮಾರಿದ್ವು. ಅಜ್ಜ ಮಧ್ಯಾನ ಪೂಜೆ ಮಾಡ್ತಾ ಇದ್ರು ದೇವರೊಳಗೆ.
ನಾನು ಹಟ್ಟಿಂದ ಓಡಿ ಹೋಗಿ ಅಜ್ಜನ ಹತ್ರ ಹೇಳಿತ್ತಿದ್ದೆ, ಅಜ್ಜಾ ಬೇಗ ಪೂಜೆ ಮಾಡಿ ಬನ್ನಿ, ಅಪ್ಪ ಅಲ್ಲಿ ದನ ಮಾರ್ತಾ ಇದ್ದಾವೆ ನಾನು ಅವಾಗ ಸಣ್ಣ, ಈಗ ಬೆಳುದು ಗೋಣ ಆಗಿದ್ದೇನೆ, ಆದ್ರೆ ಈಗ ಎಲ್ಲಿ ಅದೆ ಆ ಗೋ ಪ್ರೇಮ ?
ಮನೆಗೆ ಹೋದ್ರೆ ಒಂದು ದಿನ ಹಟ್ಟಿಗೆ ಹೋಗುದಿಲ್ಲ ! ಕರು ಬಿಡುಕೆ ಗೊತ್ತೇ ಇಲ್ಲ. ಮೊದುಲು ಹಟ್ಟಿಗೆ ಹೋಗಿ ಸೆಗಣಿ ಆದ್ರೂ ತೆಗಿತ್ತಾ ಇತ್ತಿದ್ದೆ, ಈಗ ಅದೂ ಇಲ್ಲ. ನೆಂಟ್ರ ಹಾಂಗೆ ಮನೆಗೆ ಹೋಗಿ ಎರಡು ಮೂರು ದಿನ ಇದ್ದು ಬರ್ತೇನೆ ಅಷ್ಟೇ !

*************

ಚಳಿ ಆಗ್ತಾ ಅದೆ ಇಲ್ಲಿ. ಉತ್ತರ ಭಾರತದ ಚಳಿ ಹೇಳಿರೆ ಎಂತ ಹೇಳಿ ಈಗ ಗೊತ್ತಾಗ್ತಾ ಅದೆ. ಹಗಲೂ ಚಳಿ, ಬಿಸಿಲಿನ ಪತ್ತೆಯೇ ಇಲ್ಲ ! ಆಫೀಸಿಗೆ ಬೈಕಿಲಿ ಬರುವಾಗ ಪ್ರಾಣ ಹೋದ ಹಾಂಗೆ ಆಗ್ತೆ.
ಚಳಿಲಿ ಕೂತುಕೊಂಡು ಕಂಪ್ಯೂಟರ್‌ಲಿ ಟೈಪ್ ಮಾಡುವಾಗ ಎಲ್ಲವೂ ನೆಂಪಾಗ್ತಾ ಅದೆ.
ಬೆಂಗ್ಳೂರಿನ ಬದುಕ್ಕೇ ಬೇರೆ ಇತ್ತು. ಶೋಭಾ ಡೆವಲಪರ್ಸ್‌ಲಿ ಕೆಲಸ ಮಾಡಿಕೊಂಡಿದ್ದಾಗ ಬೇರೆಯೇ ಜನ ಆಗಿತ್ತಿದ್ದೆ ನಾನು. ಬೇಕಾಬಿಟ್ಟಿ ಇತ್ತಿದ್ದೆ. ಹೊಸ ಕೆಲಸ ಕಲಿಯುವ ಮಾತು ಬಿಡಿ, ಇರುವ ಕೆಲಸವನ್ನೂ ಸರಿ ಮಾಡಿಕೊಂಡಿತ್ತಿಲ್ಲ.
ಉದಾಸಿನದ ಮುದ್ದೆ ಆಗಿತ್ತಿದ್ದೆ ಅಲ್ಲಿ ಇರುವಾಗ.
ಆದ್ರೆ ಇಲ್ಲಿ ಪೂರ್ತಿ ಉಲ್ಟಾ ! ಕೆಲಸ ಕಲಿತ್ತಾ ಇದ್ದೇನೆ.
ಹೊಸ ಊರು, ಹೊಸ ಜನ, ಹೊಸತ್ತು ಪ್ರಪಂಚ ! ಬದುಕಿನ ಹೊಸ ಹೊಸ ಮುಖಂಗಳ ಪರಿಚಯ ಆಗ್ತಾ ಅದೆ ಇಲ್ಲಿ. ಬದುಕ್ವೇಕಾರೆ ಎಷ್ಟು ಮುಖವಾಡ ಹಾಕ್ವೇಕು ಇಲ್ಲಿ ? ಉಫ್ !

ಆದ್ರೆ ಒಂದು ಮಾತ್ರ ಸತ್ಯ. ಬದುಕಿನ ಹತ್ತು ಮುಖಂಗಳ ಕಾಣ್ತಾ ಇದ್ದೇನೆ ಇಲ್ಲಿ.

*************

ಜೀವನದ ಪಯಣ ನನ್ನ ಎಲ್ಲೆಲ್ಲಿಗೋ ಎಳ್ಕೊಂಡು ಬಂದದೆ.
ಮತ್ತೆ ಹಿಂದೆ ತಿರುಗಿ ಹೋಗದ್ದಷ್ಟು ದೂರ ಅಂತೂ ಖಂಡಿತಾ ಅಲ್ಲ. ಮತ್ತೆ ಹೊರಡ್ತಾ ಇದ್ದೇನೆ ನಾಳೆ, ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್.

ಸಂಪರ್ಕಲ್ಲಿ ಕ್ರಾಂತಿ ಆದಷ್ಟೂ ಜಾಸ್ತಿ ಮನುಷ್ಯ ಮನುಷ್ಯ ದೂರ ಆಗ್ತಾವೆ ಅಲ್ವಾ ???
ಮನೆ, ಊರಿಂದ ತುಂಬಾ ದೂರ ಬಂದು ಬಿಟ್ಟಿದ್ದೇನೆ. ಸಾವಿರಾರು ಕಿಲೋಮೀಟರ್ ದೂರ ಬಂದು ಮತ್ತೆ ಮನೆಗೆ ಹೋಗುವಾಗ ಮನಸ್ಸಿಲಿ ಎಂತ ಎಲ್ಲಾ ಬಂದು ಹೋಗ್ತೆ.
ಹಳೆ ವಿಷಯ, ಬೇಕಾದ್ದು, ಬೇಡದ್ದು ಎಲ್ಲವೂ ಕಣ್ಣ ಮುಂದೆ ಬರ್ತೆ.

ನಾಳೆ ಇಷ್ಟೊತ್ತಿಗೆ ರೈಲಿಲಿ ಇರ್ತೇನೆ.
ಅದೇ ರಶ್ಶು, ಆದ್ರೆ ಹೊಸ ಹೊಸ ಮೋರೆ, ಹೊಸ ವ್ಯಕ್ತಿತ್ವ, ಜನರ ಗಜಿಬಿಜಿ ಮಾತು, ಮಾರಿಕೊಂಡು ಬರುವವರ ಬೊಬ್ಬೆ, ಚಾಯ್ ಚಾಯ್ ಗರಮಾ ಗರಂ ಚಾಯ್ ಎರಡು ದಿನ ಕಳುದ್ರೆ ಬೆಂಗ್ಳೂರಿಲಿ ಇರ್ತೆನೆ.
ಯಶ್ವಂತಪುರ ರೈಲ್ವೆ ಸ್ಟೇಶನ್, ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್, ಕಾಣಿಯೂರು ಬಸ್ಸು ಹತ್ತಿ ನಿಂತಿಕಲ್ಲಿಲಿ ಇಳುದು ಪಾಜಪಳ್ಳಕ್ಕೆ ಬಂದು ಅಲ್ಲಿಂದ ಬೊಮ್ಮಣಮಜಲಿಲ್ಯಾಗಿ, ಹೊಳೆ ದಾಟಿ, ಮುತ್ತಪ್ಪನ ಮನೆ ದಾಟಿ, ಗದ್ದೆ ಕರೆಲಿ ಮುಂದೆ ಹೋಗಿ, ಕೆಜಿ ಮಾವನ ಮನೆ ಕಳುದು, ಗೋಕುಲದ ಗೇಟು ದಾಟಿ ಚಡಾವು ಹತ್ತಿ ಬಾಲಕೃಷ್ಣನ ಮನೆ ಹತ್ರ ಎಡತ್ತಿಗೆ ತಿರುಗಿರೆ ನಮ್ಮ ಮನೆ ಬರ್ತೆ.
ಮತ್ತೆ ಸುರೇಂದ್ರಣ್ಣನ ಮದುವೆ ಗೆ ಹೊರಡುವೇಕು, ಆ ದಿನ ರಾತ್ರಿ ಮತ್ತೆ ಬೆಂಘ್ಳೂರಿಗೆ, ಮರುದಿನ ಅಮಿತ್ ನ ಮದುವೆ, ಮಂಗಳವಾರ ಸುಪ್ರಭನ ಮದುವೆ, ಶುಕ್ರವಾರ ನನ್ನ ಬದ್ಧ, ಶನಿವಾರ ಮಂಗ್ಳೂರಿಂದ ಮತ್ತೆ ರೈಲು ಹತ್ತುವೇಕು ಡೆಲ್ಲಿಗೆ.
ಎಷ್ಟಾದ್ರೂ ಬದುಕು ಮುಗಿಯದ್ದ ಪಯಣ ಅಲ್ವಾ ???

ಪಯಣ - 2, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಕಾವಿನಮೂಲೆ ಮಾಣಿ
  ಅಕ್ಷಯರಾಮ ಕಾವಿನಮೂಲೆ

  ಓದಿ, ಅಭಿಪ್ರಾಯ ಹೇಳಿದ ಎಲ್ಲವಕ್ಕೂ ಧನ್ಯವಾದ :-)

  [Reply]

  VA:F [1.9.22_1171]
  Rating: 0 (from 0 votes)
 2. shivakumar

  ನಿನ್ನ ಅಜ್ಜನಿಗೆ ನಮ್ಮಲ್ಲಿಗೆ ಬಂದಾಗ ವೀಶೇಷವಾಗಿ ಗಟ್ಟದ ಮೆಲಾಣ ಕ್ರಮಲ್ಲಿ ನಿರುೞಿ ಎಲ್ಲ ಹಾಕಿ ಮಾಡಿದ ಪಲಾವು ಬಡಿಸಿದ್ದು ಅದರ ಅವು ಇಶ್ತಪಟ್ಟದ್ದು ,ಅವರ ಮತ್ಥು ಅಮಳ ಅಜ್ಜನ ಒಡನಾತಟ ಎಲ್ಲಾ ನೆಂಪಾಯ್ಥು ಬಾವ

  [Reply]

  ಕಾವಿನಮೂಲೆ ಮಾಣಿ

  ಅಕ್ಷಯರಾಮ ಕಾವಿನಮೂಲೆ Reply:

  ಅಮಳದ ಅಜ್ಜ, ಮನೆ ಅಜ್ಜನ ಜೀವನ ಅನುಭವ ಹೇಳುದು ಅದೆ ಅಲ್ಲಾ ? ಅದು ಅಪಾರ….. ಅದಿಕ್ಕೆ ಬೆಲೆ ಕಟ್ಟುಕೆ ಕಷ್ಟ ! ಮನೆಲಿ ಹಿರಿಯವು ಇದ್ರೆ ಅದಿಕ್ಕಿಂತ ದೊಡ್ಡ ಆಸ್ತಿ ಬೇರೆ ಇಲ್ಲ…… ನೆರೆಕರೆ ಯ ಎಲ್ಲರತ್ರ ನಾನು ಕೇಳಿಕೊಳ್ಳುದು ಇಷ್ಟೇ….. ಮನೆಲಿ ಹಿರಿಯವು ಇದ್ರೆ, ಅವರ ಜೀವನ ಅನುಭವವ ಕೇಳಿ ತಿಳ್ಕೊಳ್ಳಿ….. ಅದರ ದಾಖಲಿಸುಕೆ ಪ್ರಯತ್ನ ಮಾಡಿ….. ನನ್ನ ಅಜ್ಜ ಹೊವುಕೆ ಮೊದಲೆ ನಾನು ತುಂಬಾ ಪ್ರಯತ್ನಪಟ್ಟೆ ಆದರೂ ಎಷ್ಟೋ ವಿಚಾರ ಅವರೊಟ್ಟಿಗೆ ಹೋಯ್ತು :-( ಅಮಳದ ಅಜ್ಜ ಇದ್ದಾವೆ….. ಅವರ ಹತ್ರ ಮಾತಾಡಿ ಅವರ ಜೀವನ ಸಾರವ ತಿಳ್ಕೊಳ್ಳುವ ಪ್ರಯತ್ನ ಮಾಡುವೇಕು….. ಆದ್ರೆ ಇಂದ್ರಾಣ ಗಡಿಬಿಡಿಯ ಬದುಕಿಲಿ ಸಮಯ ಹೊಂದಿಸಿಕೊಳ್ಳುಕೆ ಆಗ್ತಾ ಇಲ್ಲ :-(

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣಪಟಿಕಲ್ಲಪ್ಪಚ್ಚಿಸಂಪಾದಕ°ಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣದೊಡ್ಮನೆ ಭಾವಪೆರ್ಲದಣ್ಣಪೆಂಗಣ್ಣ°ವೆಂಕಟ್ ಕೋಟೂರುವಿಜಯತ್ತೆಶರ್ಮಪ್ಪಚ್ಚಿಅಕ್ಷರದಣ್ಣಶುದ್ದಿಕ್ಕಾರ°ಶ್ರೀಅಕ್ಕ°ಕೊಳಚ್ಚಿಪ್ಪು ಬಾವಪವನಜಮಾವಅನುಶ್ರೀ ಬಂಡಾಡಿನೆಗೆಗಾರ°ಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುವೇಣಿಯಕ್ಕ°ಕಾವಿನಮೂಲೆ ಮಾಣಿಒಪ್ಪಕ್ಕಡಾಮಹೇಶಣ್ಣಕೆದೂರು ಡಾಕ್ಟ್ರುಬಾವ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ