Oppanna.com

ಜಳುಂಬುಳು ಬೋಚು – (ಸಂಗ್ರಹ ಹಾಡುಗೊ)

ಬರದೋರು :   ಅರ್ತಿಕಜೆ ಮಾವ°    on   08/05/2014    5 ಒಪ್ಪಂಗೊ

ಸಂಗ್ರಹ ಹಾಡುಗೊ
(ಸಂಗ್ರಹ : ಅರ್ತಿಕಜೆ ಮಾವ°)
 
ಕುಂಞಿ ಮಕ್ಕಳ ಆಡುಸುವ ಪದ್ಯಂಗೊ-
ಜಳುಂಬುಳು ಬೋಚು
ಎಮ್ಮೆ ಬೋಚು ಜಳುಂಬುಳು
ಹಶುವಿನ ಬೋಚು ಚಳಿಪಿಳಿ
ಬೋಚುಕಡವ ನೆಣೆ ಎಲ್ಲೋತು
ನೆರೆಮನೆ ಅಜ್ಜಿ ಕೊಂಡೋಡಿತ್ತು
ಕೊಂಡುಬಾ ಹೇಳಿರೆ ತಿಂದಿಕ್ಕಿ ಬಂತು
ತಿಂದು ಬಾ ಹೇಳಿರೆ ತೆಕ್ಕೊಂಡೇ ಬಂತು
ಏ ಅಜ್ಜಿ, ಇದು ಮರುಳಜ್ಜಿ
ಬೋಚು ಬಾ ಬಾ ಬೆಣ್ಣೆ ಬಾ ಬಾ ||
~~
 
 ಆನೆ.. ಆನೆ.. ಆನೆ
ಆನೆ.. ಆನೆ.. ಆನೆ
ಆನೆ ಆಡಿ ಬಪ್ಪಾಗ
ಕಾಳುಬೊಗ್ಗ° ಕಚ್ಚಿತ್ತು
ಬೊಳ್ಳುನಾಯಿ ಕೊರಪ್ಪಿತ್ತು
ಮದ್ದು ಮಾಡೋ° ಮಾವಯ್ಯ
ಮದ್ದಿನ ಚೆಟ್ಟಿ ಮನೆಲಿಲ್ಲೆ
ಎಣ್ಣೆ ಕಾಸೋ° ಅಣ್ಣಯ್ಯ
ಎಣ್ಣೆಯ ಕುಡಿಕೆ ಮನೆಲಿಲ್ಲೆ || ಆನೆ .. ಆನೆ… ಆನೆ ||
ಆನೆ ಬಂದತ್ತೊಂದಾನೆ
ಹಿತ್ಲಿಂಗೆ ಹೊಕ್ಕತ್ತು ಮದ್ದಾನೆ
ಕುಂಟಾರ ದೇವರ ಕುಂಟಾನೆ
ಮದವೂರ ದೇವರ ಮರಿಯಾನೆ || ಆನೆ .. ಆನೆ.. ಆನೆ ||
 
ತಾರಮ್ಮಯ್ಯಾ..
ತಾರಮ್ಮಯ್ಯ ತಂದು ತೋರಮ್ಮಯ್ಯ
ತಾರಮ್ಮಯ್ಯ ಯದುಕುಲದ ರಾಮಚಂದ್ರನ್ನೆ
ಇಂದಿರಾ ಮಂದಿರವೇ ನಮ್ಮಣ್ಣನ ಕೈಲಿ
ನಿಂಬೆಹಣ್ಣಿನ ಕಂಡಿರೋ… ||ತಾರಮ್ಮಯ್ಯ..||
 
ಜಾಲಕೆತ್ತಿ
ಜಾಲಕೆತ್ತಿ ಸಗಣ ಉಡುಗಿ
ಕೆಮ್ಮಣ್ಣು ಕಿಟ್ಟಿ ಸೇಡಿ ಬರದು
ಹಂದಾರೊನಕೆಲಿ ಸುಂಗಿನ ಬತ್ತ
ನಮ್ಮಣ್ಣ ಕೊಟ್ಟಾ ಸಣ್ಣಕ್ಕಿ ಬತ್ತ
ದೇವರು ಕೊಟ್ಟಾ ದೊಡ್ಡಕ್ಕಿ ಬತ್ತ ||
 
ಜೋಗುಳ
ಕೂಗೇಡ ಮಗಳೂ ಒರಗೀಗ ಸುಖಲ್ಲೀ
ತೂಗುವೆ ಜೋಗುಳ ಪದಂಗಳ ಹೇಳಿ  || ಜೋ.. ಜೋ..||
 
ಎದ್ದಿಕ್ಕಿ ಬಪ್ಪಾಗ ಆಡಲೆ ಕೊಡುವೇ
ಮುದ್ದಿನ ಕೊಟ್ಟಾನು ಎತ್ತ್ಯೊಂಡು ನಡವೇ
ಇದ್ದಷ್ಟು ಹಾಲಿನ ನಿನಗಾನು ಕೊಡುವೇ
ಮದ್ದಿನ ಕುಡುಸಲೆ ಬೇಜಾರ ಪಡುವೆ || ಜೋ.. ಜೋ..||
 
ಅಕ್ಕಂದ್ರು ಅಣ್ಣಂದ್ರು ಎಲ್ಲೋರು ಬಂದೂ
ಸಿಕ್ಕಿದ ಹಾಂಗೆಲ್ಲ ಎತ್ತೂಗು ನಿಂದೂ
ಸಕ್ಕರೆ ಹಣ್ಣಿನ ಬಾಯಿಗೆ ತಂದೂ
ತೆಕ್ಕೊಬ್ಬೊ ತಿನ್ನಬ್ಬೊ ಹೇಳೂಗು ಇಂದೂ || ಜೋ.. ಜೋ ||
 
ರಂಗೀನ ತರ ತರ ಅಂಗೀಯ ಹೊದ್ದು
ನಿನಗಾನು ತೊಡುಸುವೆ ಮಂಗಳೆ ಮುದ್ದು
ಬಂಗಾರ ಬಳೆ ಕುಟುಕಿ ಹಾಕಲೆ ಇದ್ದು
ಸಿಂಗಾರ ಮಲ್ಲಿಗೆ ತೊಡುಸುವೆ ಎದ್ದು || ಜೋ.. ಜೋ..||
 
ಕೂಸು ಕೂಸೇಳಿ ಸಸಾರವು ಜನಕೆ
ಕೂಸೇ ಅಲ್ಲದೊ ಅಬ್ಬೆಯು ನಿಜಕೆ
ಕೂಸೇ ಆಗಿರೆಕ್ಕು ಹೆಂಡತ್ತಿ ಜೋಕೆ
ಕೂಸಾದರೆಂತಾತು ಬುದ್ಧಿ ಒಳ್ಳೆದಿರೆಕು || ಜೋ.. ಜೋ..||
 
ಜೋ ಜೋ ಜೋ ಜೋ  ಜೋ ಒರಗು ಕಂದ
ಕೂಗದ್ದೆ ಮನುಗು ನೀ ಮುದ್ದಿನ ಕಣಿಯೇ
ಮುತ್ತಿನ ತೊಟ್ಳಿಂಗೆ ಚಿನ್ನದ ಕಾಲು
ಮತ್ತೆ ಆ ಕಾಲಿಂಗೆ ಪಚ್ಚೆಯ ಕೀಲು
ಮುತ್ತೈದೆಯೊರೆಲ್ಲೊರು ನಿಂದು ಸಾಲು ಸಾಲೂ
ಅರ್ತಿಲಿ ಹಾಡಿದವು ಒತ್ತಿ ಮುಂಗಾಲೂ || ಜೋ… ಜೋ..||
 
ಸುಮ್ಮನೆ ಮನುಗದ್ದರೆ ನಿನ್ನ ಆನೀಗ
ಗುಮ್ಮಂಗೆ ಕೊಡೆವೆ ನಿಲ್ಲುಸುರಾಗ
ದಮ್ಮಯ್ಯ ತಿನ್ನಿದೋ ತೆಕ್ಕೊ ಬಾಳೆಣ್ಣು
ಒಂದಾರಿ ಒರಗು ಕಂದ ಮುಚ್ಚಿ ನೀ ಕಣ್ಣಾ || ಜೋ.. ಜೋ.. ||
~ ** ~
 
 

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

5 thoughts on “ಜಳುಂಬುಳು ಬೋಚು – (ಸಂಗ್ರಹ ಹಾಡುಗೊ)

  1. ಅಪ್ಪಪ್ಪು ಮುಳಿಯ ಭಾವ ಹೇದ ಸಾಲುಗೊ ಎಲ್ಯೋ ಕೇಟಾಂಗೆ ಆವ್ತು. ಅರ್ತಿಕಜೆಮಾವ ಹೇದಾಂಗೆ ಆನೆ ಆನೆ ಆನೆ ಪದದ ಪಾಠಾಂತರವೆಯೋ ಇದೂ ಹೇದೂ ಆವ್ತು . ಧಾಟಿ ಒಂದೇ ಹಾಂಗೆ ಇದ್ದಪ್ಪೋ! . ತನ್ನ ಭಂಡಾರಂದ ಅಮೂಲ್ಯ ವಿಷಯಂಗಳ ಬೈಲಿಂಗೆ ಒಂದೊಂದೇ ತಂದುಮಡುಗುವ ಅರ್ತಿಕಜೆ ಮಾವಂಗೆ ಹರೇ ರಾಮ.

  2. ಜಾಲಕೆತ್ತಿ
    ಜಾಲಕೆತ್ತಿ ಸಗಣ ಉಡುಗಿ
    ಕೆಮ್ಮಣ್ಣು ಕಿಟ್ಟಿ ಸೇಡಿ ಬರದು
    ಹಂದಾರೊನಕೆಲಿ ಸುಂಗಿನ ಬತ್ತ
    ನಮ್ಮಣ್ಣ ಕೊಟ್ಟಾ ಸಣ್ಣಕ್ಕಿ ಬತ್ತ
    ದೇವರು ಕೊಟ್ಟಾ ದೊಡ್ಡಕ್ಕಿ ಬತ್ತ || ಈ ಹಾಡಿನ ಸುರುವಿನ ಎರಡು ಗೆರೆ ಗೊಂತಿತ್ತು ಅದರ ಪೂರ್ತಿ ಹಾಡಿನ ಗೊಂತಿದ್ದಾ ಹೇಳಿ ಸುಮಾರು ಹೆಮ್ಮಕ್ಕಳ ಹತ್ತರೆ ಕೇಳಿಗೊಂಡು ಹುಡುಕ್ಯೊಂಡು ಇತ್ತಿದೆ .ಇಲ್ಲಿ ನೋಡಿ ತುಂಬಾ ಕೊಷಿ ಆತು ಧನ್ಯವಾದಂಗ ಅರ್ತಿಕಜೆ ಮಾವ°

  3. ಆಹಾ.. ಭಾರೀ ಲಾಯ್ಕಿದ್ದು ಪದ್ಯ೦ಗೊ..
    ತೋಳು ತೋಳು ತೋಳೂ
    ತೋಳನ್ನಾರಿ ಬಪ್ಪಾಗಾ..
    ಹೇಳಿ ಒ೦ದು ಇದ್ದನ್ನೆ ಮಾವ.ಆರಿ೦ಗಾರು ನೆ೦ಪಿದ್ದೊ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×