Oppanna.com

ಸಮರ್ಪಣೆಲಿಪ್ಪ ಸಂತೃಪ್ತಿಯೇ ಸಂಸಾರದ ಮೂಲ ಮಂತ್ರ

ಬರದೋರು :   ಒಪ್ಪಣ್ಣ    on   09/05/2014    10 ಒಪ್ಪಂಗೊ

ಪುತ್ತೂರಿಲಿ ಕಾವ್ಯ-ಗಾನ-ಯಾನ ಮುಗಾತು ಹೇದರೆ ಒಂದರಿಯಾಣ ಜೆಂಬ್ರಂಗೊ ಮುಗುತ್ತು ಹೇದು ಲೆಕ್ಕವೋ?
ಅಲ್ಲಪ್ಪಾ. ಒಂದರಿಯಾಣದ್ದು ಸುರು ಆತು ಹೇದು ಲೆಕ್ಕ!
ಇನ್ನು ತೆಕ್ಕೊಳಿ, ಇತ್ಲಾಗಿ ಪೆರ್ಲದ ತಮ್ಮನ ಮದುವೆ, ಅತ್ಲಾಗಿ ಸರ್ಪಂಗಳ ಕೂಸಿನ ಮದುವೆ, ಸಾಮೆತ್ತಡ್ಕ ಅಣ್ಣನ ಮನೆ ಒಕ್ಕಾಲು, ಅದರೊಟ್ಟಿಂಗೆ ಸಾರಡಿಲಿ ಪೂಜೆ, ಆಚಹೊಡೆಲಿ ಗುಣಾಜೆ ಕುಂಞಕ್ಕನ ಮದುವೆ, ಈಚಿಕ್ಕೆ ಅಮ್ಮುಪೂಜಾರಿಯಲ್ಲಿ ಪೂಜೆ, ಮಾಷ್ಟ್ರುಮಾವನಲ್ಲಿ ಪುಳ್ಳಿಯ ನಾಮಕರಣ, ಆಚಕರೆ ತರವಾಡುಮನೆಲಿ ಪತ್ನಾಜೆ, ಮತ್ತೊಂದಿಕ್ಕೆ ದೇವಕಾರ್ಯ, ಊರ ದೇವಸ್ಥಾನಂಗಳಲ್ಲಿ ಜಾತ್ರೆ, ಬ್ರಮ್ಮಕಲಶಂಗೊ – ಹೀಂಗೆ ಹತ್ತು ಹಲವು ಕಾರ್ಯಕ್ರಮಂಗೊ.
ಹೋಗದ್ರೆ ಹೇಳ್ಳಾತು – ಹೋದರೆ ಬಚ್ಚಲಾತು – ಒಟ್ಟಾರೆ ಎಂತಮಾಡುದು ಹೇದು ಬೋಚಬಾವಂಗೆ ಅರಡಿಯದ್ದೆ ಕುತ್ತ ಕೂದುಗೊಂಡಿದ್ದ.
ಎಂತಕ್ಕೂ ಗಡಿಬಿಡಿ ಮಾಡ್ತು ಬೇಡ, ಒಂದೊಂದು ಹೊಡೆಂದಲೇ ಮುಗುಶೆಂಡು ಬಪ್ಪೊ – ಹೇದು ಬೋಚಬಾವ ಸಮದಾನ ಮಾಡಿಗೊಂಡಿದನದ ಈಗ!
ಹೊಡೆಂದ – ಹೇದರೆ ಬಳುಸಿದ ಬಾಳೆಯ ಒಂದು ಹೊಡೆಂದಲೋ – ಉಮ್ಮಪ್ಪ!

~

ಹೊಡೇಂದ ಲೆಕ್ಕ ಹಾಕಿರೆ ಮದಾಲು ಸಿಕ್ಕುತ್ತದು ಮಾಷ್ಟ್ರುಮಾವನ ಮನೆ ನಾಮಕರಣವೇ ಇದಾ. ಹಾಂಗೆ, ಅಲ್ಲಿಂದಲೇ ಸುರು ಮಾಡಿರೆ ಕೊಡಿ ಎತ್ತುಸುಲೆ ಎಡಿಗಷ್ಟೆ. ನೆರೆಕರೆ ಜೆಂಬ್ರ ಇದಾ, ವೆವಸ್ತೆ ಎಲ್ಲ ಎಲ್ಲಿಗೆತ್ತಿತ್ತು, ಎಂತಾರು ಆಯೇಕೋದು ಕೇಳುವೊ – ಹೇದು ಒಂದುಗಳಿಗೆ ಮಾಷ್ಟ್ರುಮಾವನ ಮನೆಗೆ ನಿನ್ನೆ ಹೊತ್ತೋಪಗ ಹೋದೆ.
ಶಾಮಿಯಾನ ಹಾಕುತ್ತ ಇಬ್ರಾಯಿಯೂ, ನಿತ್ಯಗೆಲಸದ ಸುಕುಮಾರನೂ ಜಾಲಿಲೇ ಇತ್ತಿದ್ದವು. ಮಾಷ್ಟ್ರುಮಾವ ಮಾತಾಡ್ಳೆ ಬಂಙ ಆವುತ್ತು ಹೇದು ಎಲೆತುಪ್ಪಿತ್ತಿದ್ದವು. ಮಳೆ ಬರ್ತಾ ಉಂಟಲ್ಲ ಮಾಷ್ಟ್ರೆ, ಶಾಮಿಯಾನದ ಬದಲು ಶೀಟು ಒಳ್ಳೆದು – ಹೇದು ಇಬ್ರಾಯಿ ಒಪ್ಪುಸಿಗೊಂಡಿತ್ತು. ಸೆಖೆ ಜಾಸ್ತಿ ಅಕ್ಕು, ತಿಂಬ ಎಲೆಂದ ಹಿಡುದು ಉಂಬ ಎಲೆ ಒರೆಂಗೆ ಎಲ್ಲವೂ ಬೇಗ ಬಾಡುಗು – ಹೇದ್ ಮಾಷ್ಟ್ರುಮಾವ ಆಲೋಚನೆ ಮಾಡಿಗೊಂಡಿದ್ದ ಹಾಂಗೆ ಕಂಡತ್ತು. ದೊಡ್ಡೋರ ಮಾತುಕತೆಲಿ ನಾವು ಎಡೆಲಿ ತಲೆ ಹಾಕುಸ್ಸು ಎಂತಕೇದು – ಸೀತ ಒಳ ಹೋದೆ.

ಅಮೇರಿಕಂದ ಬಂದ ಮಾ.ಮಾ.ದೊ.ಮಗಂಗೆ ವಿಮಾನದ ಒರಕ್ಕು ಬಾಕಿ ಆಯಿದಾಡ, – ಅರೆ ಒರಕ್ಕಿಲಿ ಇದ್ದೋನು ಮಾತಾಡ್ಳೆ ಸಿಕ್ಕಿದನೋ, ಒಂದೆರಡು ನಿಮಿಷ ಮಾತಾಡಿದೆ. ಅಷ್ಟಪ್ಪಾಗ ಮಾಷ್ಟ್ರುಮಾವಂದೇ ಹೆರಾಣ ಮಾತುಕತೆ ಮುಗುಶಿ ಬಂದವು, ಎಲೆತಟ್ಟೆ ಬುಡಕ್ಕೆ.

~

ಕಾರ್ಯಕ್ರಮ, ಅದರ ವೆವಸ್ತೆ, ಅಡಿಗೆ, ವೈದೀಕರು, ಸಾಮಾನು , ರೂಢಿಮಾಡುಸ್ಸು – ಹೀಂಗೇ ಹತ್ತು ಹಲವು ಶುದ್ದಿ ಮಾತಾಡಿಗೊಂಡು ಇಪ್ಪಾಗ ಕಾಟುಮಾವಿನಣ್ಣಿನ ಜ್ಯೂಸು ತಂದವು ಅತ್ತೆ. ಜಾಲಬುಡಲ್ಲಿ ಬಿದ್ದ ಮಾವಿನಣ್ಣಿನ ಉಪಾಯಲ್ಲಿ ಜ್ಯೂಸು ಮಾಡಿದವು ಅತ್ತೆ. ಮಾವನತ್ರೆ ಮಾತಾಡಿಗೊಂಡು ಇಪ್ಪಾಗ, ನಾಮಕರಣಂದ ಸಂಸ್ಕಾರಂಗಳ ಬಗ್ಗೆ ಹೊರಳಿತ್ತು. ಚೆನ್ನೈಭಾವ ಬರದ ಹದ್ನಾರು ಸಂಸ್ಕಾರಂಗಳ ಪುಸ್ತಕದ ಉಲ್ಲೇಖವೂ ಆತು. ಸಂಸ್ಕಾರದ ಒಟ್ಟಿಂಗೇ ನಮ್ಮ ಸಂಸ್ಕೃತಿಯ ಬಗ್ಗೆಯೂ ಮಾತುಗೊ ಬಂತು. ಮುಖ್ಯವಾಗಿ, ಸಾಂಸಾರಿಕವಾಗಿ ಪರಸ್ಪರ ಇಪ್ಪ ಸಮರ್ಪಣೆಯ ಬಗ್ಗೆ ಮಾತಾಡಿದವು.

~

ಸಮರ್ಪಣೆಲಿಪ್ಪ ಸಂತೃಪ್ತಿಯೇ ಸಂಸಾರದ ಮೂಲ ಮಂತ್ರ. ಈ ಸಂತೃಪ್ತಿಯೇ ಮುಂದಾಣ ಸಮರ್ಪಣೆಗೆ ಕಾರಣ. ಸಂಸಾರ ಸಾಗೇಕಾರೆ ಪರಸ್ಪರ ಹೊಂದಾಣಿಕೆ, ಸಮರ್ಪಣೆ, ಸೇವಾ ಮನೋಭಾವ ಇರೆಕ್ಕು, ಇರ್ತು. ಅದಿದ್ದರೆ ಮಾಂತ್ರಾ ಸಂಸಾರ ಸರೀ ನೆಡಗಷ್ಟೆ – ಹೇಳಿದವು ಮಾಷ್ಟ್ರುಮಾವ.

ಹಾಂಗೆಲ್ಲ ಸೀತ ಹೇಳಿಂಡು ಹೋದರೆ ಒಪ್ಪಣ್ಣಂಗೆ ಅರ್ತ ಅಕ್ಕೋ? ಆಗ. ಆಗ ಹೇದು ಮಾಷ್ಟ್ರುಮಾವಂಗೂ ಅರಡಿಗು. ಅದಕ್ಕೇ ನಿಧಾನಕ್ಕೆ, ಅರ್ತ ಅಪ್ಪ ಹಾಂಗೇ – ಇನ್ನೊಂದರಿ ಹೇದವು.

~

ಗೆಂಡ – ಹೆಂಡತ್ತಿ ಸಂಸಾರ ರಥದ ಎರಡು ಚಕ್ರಂಗೊ. ಒಂದು ಚಕ್ರಕ್ಕೆ ಸುಲಾಬ ಆಯೇಕಾರೆ ಇನ್ನೊಂದು ಚಕ್ರ ತಾಂಗೇಕು. ಪರಸ್ಪರ ಸಮರ್ಥುಸೇಕು, ಹೊಂದಿಗೊಳೇಕು. ಹಾಂಗೆ ಹೊಂದಿಗೊಂಡ್ರೇ ಅಕ್ಕಷ್ಟೆ ಸಂಸಾರ.

ಗೆಂಡ ಮದುವೆ ಆಗಿ ಹೆಂಡತ್ತಿಯ ಕರಕ್ಕೊಂದು ಬಂದಪ್ಪದ್ದೇ ತನ್ನ ಜೀವನವ ಆರಂಭ ಮಾಡ್ತ. ಅದಕ್ಕಾಗಿ ತುಂಬಾ ಸಮಯ ಅರ್ಪಿಸುತ್ತ. ಸಮಯದ ಒಟ್ಟಿಂಗೇ ಪ್ರೀತಿ, ಪೈಶೆ, ಕಾಳಜಿ – ಎಲ್ಲವನ್ನುದೇ ಕೊಡ್ತ. ಬೇಕು ಬೇಕಾದಲ್ಲಿ ಹೊಂದಿಗೊಂಡು, ತನ್ನ ಆಶೆ-ಅವಲಂಬನೆಗಳ ಹಂಚಿಗೊಂಡು ಮನೆ ಕಟ್ಟುತ್ತ.

ಹೆಂಡತ್ತಿಯ ಕೈ ಹಿಡುದ ತಾನುಮಾಂತ್ರ ಜೀವನಕ್ಕೇ ಸಮರ್ಪಣೆ ಮಾಡಿದೆ ಹೇದು ಒಂದೊಂದರಿ ಗೆಂಡ ಗ್ರೇಶುಲಿಕ್ಕು. ಆದರೆ, ನಿಜಾರ್ಥಲ್ಲಿ ಹಾಂಗಲ್ಲ, ಇಬ್ರದ್ದೂ ಕೊಡುಕೊಳ್ಳುವಿಕೆ ಇರ್ತು. ಒಂದು ಲೆಕ್ಕಲ್ಲಿ ನೋಡಿರೆ ಅರ್ಪಣೆಲಿ ಹೆಂಡತ್ತಿಯ ಪಾಲೇ ಜಾಸ್ತಿ. ನಮ್ಮ ಸಂಸ್ಕಾರಲ್ಲಿ – ಹೆಮ್ಮಕ್ಕಳೇ ಹೆಚ್ಚು ಹೊಂದಿಗೊಂಬದು, ಹೆಚ್ಚು ಬಿಟ್ಟುಕೊಟ್ಟು ಮನೆಯ ಕಟ್ಟುದು – ಹೇದವು.

~

ಹೆಂಡತ್ತಿ ಆಗಿ ಮನೆಗೆ ಬತ್ತೋ – ತನ್ನ ಅಪ್ಪಮ್ಮನ ಬಿಟ್ಟು ಮನೆ ಹೆರಡುದೇ ಮೊದಲಾಣ ಸಮರ್ಪಣೆ.
ಅದಾಗಿ, ತನ್ನ ಮನೆತನವ ಬಿಟ್ಟು ಗೆಂಡನ ಮನೆಯ ಹೆಸರಿನ ಅಳವಡುಸಿಗೊಳ್ತು. ಇನ್ನೊಂದು ಸಂಸ್ಕಾರಕ್ಕೆ ಹೊಂದಿಗೊಂಡು ಬದ್ಕುತ್ತೆ – ಹೇದು ಮಾನಸಿಕವಾಗಿ ಸಮರ್ಪಣೆ ಮಾಡಿಗೊಳ್ತು.
ಅದಾಗಿ, ಗೆಂಡನ ಒಟ್ಟಿಂಗೆ ಜೀವನ ನೆಡೆಶುತ್ತು. ಮನೆಯ ಆಗುಹೋಗುಗಳ ಎಡಕ್ಕಿಲಿ ತನ್ನದೇ ಆದ ಆಶೆ ಆಕಾಂಕ್ಷೆಗಳ ಸುಮಾರು ಕಳಕ್ಕೊಳ್ತು. ಕೆಲವದರ ಮುಚ್ಚಿಮಡಗುತ್ತು, ಕೆಲವು ಕಳದು ಹೋವುತ್ತು. ಕೆಲವು ಆಶೆಗೊ ಮಾಂತ್ರ ಈಡೇರುಗು ಅಷ್ಟೆ.

ಅದಾಗಿ, ಗೆಂಡನ ಮನೆತನ ವೃದ್ಧಿಗೊಳುಶುತ್ತು, ಗರ್ಭವತಿ ಆವುತ್ತು. ಅದೂ – ತನ್ನ ಮನೆತನಕ್ಕೋಸ್ಕರ.
ಒಂಭತ್ತು ತಿಂಗಳು ಆ ಬಾಬೆಯ ಹೊರ್ತು. ಸುಮಾರು ಬೇನೆಬೇಜಾರಂಗೊ, ಕಷ್ಟ ನಷ್ಟಂಗೊ ಬಂದು ಒದಗುತ್ತು. ಒಂದು ಸುಮುಹೂರ್ತಲ್ಲಿ ಮಗುವಿಂಗೆ ಜನನ ಕೊಡ್ತು. ಅಮ್ಮ ಹೇಳ್ತ ಮಾನಸಿಕ ಕುಷಿಗಾಗಿ ಪ್ರಸವ ವೇದನೆ ಹೇಳ್ತ ದೈಹಿಕ ಬೇನೆಯ ನುಂಗಿಯೊಳ್ತು. ಇಷ್ಟಪ್ಪಗ ತನ್ನ ದೇಹವೇ ತುಂಬಾ ಬದಲಾಗಿರ್ತು. ಅದಾಗಿ ಮಗುವಿಂಗೆ ಹಾಲಿನ ರೂಪಲ್ಲಿ ಅಮೃತ ಕೊಡುವಗ ಹಲವು ವಿಷಂಗಳ ತನ್ನ ದೇಹಲ್ಲೇ ಮಡಿಕ್ಕೊಳ್ತು. ಮಗುವಿನ ಒಳಿತಿಂಗಾಗಿ ತನ್ನ ದೇಹಲ್ಲಿ ಹಲವು ಕೆಡುಕುಗಳ ಉಂಟುಮಾಡಿರ್ತು, ಉಂಟಾಗಿರ್ತು. ಇದೆಲ್ಲವೂ ಆ ಹೆಮ್ಮಕ್ಕಳ ಸಮರ್ಪಣೆ.

ಬಂದ ಮಗುವಿನ ಆರೈಕೆ, ಪೋಚಕಾನಕ್ಕೇದು ಸಮಯ ತುಂಬವ ಸಮರ್ಪಣೆ ಮಾಡಿ ಆ ಬಾಬೆಯ ಬೆಳೆಶುತ್ತು. ಬಾಬೆಯ ಉಜ್ವಲ ಭವಿಷ್ಯಕ್ಕಾಗಿ, ಭವಿತವ್ಯಕ್ಕಾಗಿ ಮಾಡ್ತ ಸಮರ್ಪಣೆಗೊ ಹೇಳಿಕ್ಕಲೆಡಿಯ.

ಅಮ್ಮ ಇಷ್ಟೆಲ್ಲ ಮಾಡಿದ ಆ ಬಾಬೆ ತನ್ನ ಅಪ್ಪನ ಮನೆತನವನ್ನೇ ಪ್ರತಿನಿಧಿಸುದು. ಮಗುವಿನ ಹೆಸರಿಲಿಯೂ ಅಪ್ಪನ ಮನೆತನದ ಹೆಸರೇ ಅಳವಡಿಕೆ ಆಗಿರ್ತು- ಹೇದು ಮಾಷ್ಟ್ರುಮಾವ ನೆಗೆಮಾಡಿದವು.

~

ಅವರ ಪುಳ್ಳಿಯ ನಾಮಕರಣದ ವಿಷಯ ನೆಂಪಾತೋ ಏನೋ. ಉಮ್ಮಪ್ಪ.

~
ಅದೇನೇ ಇರಳಿ, ಸಂಸಾರಕ್ಕಾಗಿ ಸಮರ್ಪಣೆ ಇರ್ತು. ಕೊಡು ಕೊಳ್ಳುವಿಕೆ ಚೆಂದಲ್ಲಿ ನೆಡದರೆ ಸಂಸಾರವೂ ಚೆಂದಕೆ ನೆಡಗು, ಜೀವನ ಬೆಳಗ್ಗು – ಹೇದು ಮಾಷ್ಟ್ರುಮಾವ ವಿವರ್ಸಿದವನ್ನೇ, ಅಷ್ಟು ಅರ್ಥ ಆತು ಒಪ್ಪಣ್ಣಂಗೆ.

~

ಒಂದೊಪ್ಪ: ಜೀವನ ದೈಹಿಕ, ಸಂತೃಪ್ತಿ ಮಾನಸಿಕ. ಇದೆರಡೂ ಸೇರಿರೇ ಸಂಸಾರ. ಅಲ್ಲದೋ?

10 thoughts on “ಸಮರ್ಪಣೆಲಿಪ್ಪ ಸಂತೃಪ್ತಿಯೇ ಸಂಸಾರದ ಮೂಲ ಮಂತ್ರ

  1. ಹರೇರಾಮ. ಸಮರ್ಪಣೆಯೇ ಸಂತೃಪ್ತಿ ಹೇಳುದು ನಿತ್ಯ ಸತ್ಯ. ಹೆಚ್ಚಾಗಿ ಸ್ತ್ರೀ ಸಮರ್ಪಣೆಯಲ್ಲಿ ತನ್ನ ತಾನು ಕಳ್ಕತ್ತು ಮತ್ತೆ ಅದ್ಕೆ ತಾ ಏನೋ ಸಮರ್ಪಣೆ ಮಾಡ್ತಾ ಇದ್ದೆ ಹೇಳೆಲ್ಲಾ ಕಲ್ಪನೆಲೂ ಇರ್ತಿಲ್ಲೆ. ‘ತನ್ನ ಕುಟುಂಬಕ್ಕಾಗಿ ತಾನು’ ಇಷ್ಟೇ ಅದ್ಕೆ ಗುತ್ತಪ್ಪುದು ಅಲ್ದಾ? ಸುದ್ದಿ ಚೊಲೋ ಆಜು.

  2. ಡೈಮಂಡು ಭಾವನ ಮದುವೆಯೂ…

  3. [ಸಂಸಾರಕ್ಕಾಗಿ ಸಮರ್ಪಣೆ ಇರ್ತು. ಕೊಡು ಕೊಳ್ಳುವಿಕೆ ಚೆಂದಲ್ಲಿ ನೆಡದರೆ ಸಂಸಾರವೂ ಚೆಂದಕೆ ನೆಡಗು,…..]ಒಪ್ಪಲೇ ಬೇಕಾದ ಮಾತು.ಆದರೆ ಇ೦ದ್ರಾಣ ಸ್ವಾರ್ಥ ತು೦ಬಿದ ಸಮಾಜಲ್ಲಿ ಇದರ ಕೊರತ್ತೆ ಕಣ್ಣಿ೦ಗೆ ಹೊಡವ ಹಾ೦ಗೆ ಕಾಣ್ತು! ಮಹಾಕವಿ ಕಾಳಿದಾಸ ಗೃಹಸ್ಥಾಶ್ರಮವ ಧನ್ಯ ಹೇದು ಹೊಗಳಿದ್ದದು ನೆ೦ಪು ಮಾಡ್ಸಿತ್ತಿದ ನಿ೦ಗಳ ಈ ಮಾತುಗೊ.ಧನ್ಯೋಸ್ಮಿ.ಅಭಿನ೦ದನಗೊ.ನಮಸ್ತೇ.

  4. ಹರೇ ರಾಮ, ಅರ್ಥಗರ್ಭಿತ ಶುದ್ಧಿ! ಹಾಂಗೇ ದಾನ, ತ್ಯಾಗವೂ ಸಮರ್ಪಣಾಭಾವವೆ.ಇದರೆಲ್ಲದರ ಹಿಂದೆ ಆತ್ಮಸಂತೋಷ ಒಳೇತಾಗಿ ಇದ್ದಲ್ಲೋ

  5. ಸಮರ್ಪಣೆಯೇ ಮಾನಸಿಕ ಸಂತೃಪ್ತಿ. ಎಲ್ಲ ಕೋನಲ್ಲಿಯೂ ನಿಜ. ಶುದ್ದಿಗೊಂದೊಪ್ಪ.

  6. ಹೆಮ್ಮಕ್ಕಳ ಸಮರ್ಪಣ ಮನೋಭಾವವ ಸಮರ್ಪಕವಾಗಿ ತೋರುಸಿಕೊಟ್ಟಿದ ಒಪ್ಪಣ್ಣ. ಮಾಷ್ಟ್ರು ಮಾವನ ಪುಳ್ಳಿಯ ಬಾರ್ಸದ ಗಡಿಬಿಡಿಲಿ ಬಂದ ವಿಶೇಷ ಶುದ್ದಿ ಲಾಯಕಾತು.

  7. ಈ ವಾರದ ಶುದ್ಧಿಗೆ ಎರಡೊಪ್ಪ. ಒಂದು ಎನ್ನ ಲೆಕ್ಕಲ್ಲಿ, ಇನ್ನೊಂದು ಹೇಳೆಕ್ಕೋ..?

  8. ಸಾರವತ್ತಾದ ಶುದ್ದಿ ಒಪ್ಪಣ್ಣಾ..

  9. ಸಮ ಬಾಳ್ವೆ ಸಹ ಬಾಳ್ವೆ ಸುಖ ಸಂಸಾರದ ಮಂತ್ರ ಹೇಳ್ತದರ ಚೆಂದಕ್ಕೆ ನಿರೂಪಣೆ ಆಯಿದು..ಮಾಷ್ಟ್ರುಮಾವ ನವಗೆ ಹೀಂಗೆ ವಿಚಾರಂಗಳ ಹೇಳಿಕೊಡಲಿ..

  10. ಲಾಯ್ಕ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×