ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..!

 • DSC_2520
  ಮ೦ಗಳ೦ ಜಯ ಮ೦ಗಳ೦ ಶುಭ ಮ೦ಗಳ೦ ನಿತ್ಯ ಮ೦ಗಳ೦
 • DSC_2514
  ಸೂರ್ಯಕಾಂತಿಯ ಕಲ್ಯಾಣ
 • DSC_2512
  ಧೂಮ್ರಶಿಖೆಯ ಶರಣಾಗತಿ
 • DSC_2510
  ಶಿವ ಧೂಮ್ರಶಿಖೆಯರ ಯುದ್ಧ
 • DSC_2500
  ವೀರಭದ್ರನ ವೀರಾವೇಶ
 • DSC_2497
  ಬಾ ಮಗನೆ ವೀರಭದ್ರಾ..
 • DSC_2485
  ಗಣದೊಟ್ಟಿಂಗೆ ಯುದ್ದ
 • DSC_2482
  ಗಣಂಗಳನ್ನೇ ಕಳುಸುವ ಶಿವ (ಮುಳಿಯದ ಮಕ್ಕಳ ವೇಷ)
 • DSC_2468
  ಕುಬೇರನಲ್ಲಿಗ ಮರುತ್ತನ ನಿವೇದನೆ
 • DSC_2461
  ಅಪ್ಪ ಅಬ್ಬೆಯರಿಂದ ಮಗಳ ವಿಚಾರಣೆ
 • DSC_2455
  ಸೂರ್ಯಕಾಂತಿಯ ಅಪ್ಪ ಮರುತ್ತನೂ ಅಬ್ಬೆಯೂ
 • DSC_2444
  ಸೂರ್ಯಕಾಂತಿಯೊಟ್ಟಿಂಗೆ . . .
 • DSC_2434
  ಚಂದ್ರವರ್ಮಂಗೆ ಅಜ್ಜಿಯ ಸಹಾಯ
 • DSC_2427
  ಧೂಮ್ರಶಿಖೆ ತೊಂಡಿ ರೂಪಲ್ಲಿ
 • DSC_2414
  ಬೇಟೆಯಾಡುತ್ತ ಬ೦ದನಾಗ..
 • DSC_2413
  ಮಗ ಚಂದ್ರವರ್ಮನ ಬೇಟೆಯಾಡಲೆ ಕಳುಸಿಕೊಡುವದು
 • DSC_2410
  ಸೂರ್ಯವರ್ಮನೂ ವನಪಾಲಕನೂ
 • DSC_2409
  ಧೂಮ್ರಶಿಖಗೆ ವೃದ್ಧೆಯಾಗು ಹೇಳಿ ಶಾಪ
 • DSC_2407
  (ಮುಳಿಯದ)ಮಾಣಿಯ ತಿಂಬಲೆ ಬಂದ ಧೂಮ್ರಶಿಖೆಗೆ ಭೃಗುವಿನ ಬುದ್ದಿವಾದ
 • DSC_2528
  ಶ್ರೀ ಮುಳಿಯ ಕೇಶವಯ್ಯ ಅವರಿಂದ ಧನ್ಯವಾದ
 • DSC_2524
  ನಿಡ್ಳೆ ಗೋವಿಂದಭಟ್ಟ್ರಿಂಗೆ ಗೌರವ
 • DSC_2522
  ಮುಳಿಯ ಭಾವಯ್ಯನಿಂದ ಎರಡು ಮಾತು.
 • DSC_2583
  ಒಪ್ಪಣ್ಣ ಪ್ರತಿಷ್ಟಾನದ ಸಭೆ
 • DSC_2563
  ಬೈಲಿನೊಳ ಬೈಲು
 • DSC_2557
  ಮುಳಿಯ ಬೈಲಿಲ್ಲಿ ನಮ್ಮ ಬೈಲು

ಮೊನ್ನೆ ಶನಿವಾರ ಮುಳಿಯ  ಭಾವನ ಹೆರಿಯೋರು ಕಟ್ಟುಸಿದ ತರವಾಡು ಮನೆಯ ಒಕ್ಕಲಿನ ಕಾರ್ಯಕ್ರಮದ ಒಟ್ಟಿ೦ಗೆ ಅವರ ವ೦ಶದ ಹಿರಿಯ ಕವಿ ದಿವ೦ಗತ ಮುಳಿಯ ತಿಮ್ಮಪ್ಪಯ್ಯರು ಸುಮಾರು ನೂರು ವರ್ಷ ಹಿ೦ದೆ ರಚನೆ ಮಾಡಿದ “ಸೂರ್ಯಕಾ೦ತಿ ಕಲ್ಯಾಣ” ಹೇಳ್ತ ರಸಭರಿತ ಯಕ್ಷಗಾನ ಪ್ರಸ೦ಗವ ತೆ೦ಕು ತಿಟ್ಟಿನ ಪ್ರಸಿದ್ಧ ಕಲಾವಿದರಿ೦ದ ಆಯೋಜನೆ ಮಾಡಿತ್ತಿದ್ದವು. ಮುಳಿಯ ಬೈಲಿಲ್ಲಿ ”ಸೂರ್ಯಕಾಂತಿ ಮದುವೆ”ಯ ರಸಕ್ಷಣ೦ಗೊ ಇಲ್ಲಿದ್ದು.

ಬೊಳುಂಬು ಮಾವ°

   

You may also like...

10 Responses

 1. ಕೊಶಿ ಆತು ಮಾವಾ, ಆಟದ ಕಥೆ ಚಿತ್ರಣದ ರೂಪಲ್ಲಿ ಚೆಂದಕೆ ಸಿಕ್ಕಿತ್ತು,
  ಆನು ಅಲ್ಲಿಗೆ ತಲಪುವಗ ಅಟ ಸುರುವಾಗಿದ್ದತ್ತು,
  ಹಾಂಗಾಗಿ ಪೂರ್ತಿ ಆಟ ನೋಡ್ಳೆ ಎಡಿಯದ್ದ ಬೇಜಾರು ಇದ್ದತ್ತು,
  ಈಗ ಸಮಧಾನ ಆತು,
  ಥ್ಯಾಂಕ್ಸ್…

 2. ಚೆನ್ನೈ ಭಾವ° says:

  ಬೊಳುಂಬು ಮಾವಂಗೆ ಹರೇ ರಾಮ. ಶುದ್ದಿಯೂ ಪಟವೂ ನೋಡಿ ಕೊಶಿ ಆತಿದಾ. ಮುಳಿಯದೋರಿಂಗೆ ಧನ್ಯವಾದ, ಪ್ರತಿಷ್ಠಾನಕ್ಕೆ ಅಭಿನಂದನೆ.

  • ಉಡುಪುಮೂಲೆ ಅಪ್ಪಚ್ಚಿ says:

   ಶುದ್ದಿ ಗೊ೦ತಾಗದ್ದೆ ಹೋತನ್ನೆಭಾವ! ವರ್ತಮಾನ ಸಿಕ್ಕಿರೆ ಬಪ್ಪಲಾವುತ್ತಿದಾ?ಏ೦ತಮಾಡುವದು ಪ್ರಾಪ್ತಿ ಬೇಕನ್ನೆ! ಶುದ್ದಿಯನ್ನೂ,ಪಟವನ್ನೂ ಹಾಕಿದ ಬೊಳು೦ಬು ಮಾವ೦ಗೆ ಧನ್ಯವಾದ೦ಗೊ.ಹರೇ ರಾಮ.

 3. ಯಮ್.ಕೆ. says:

  ಪಟ೦ಗ ಚ೦ದಾಯಿದು. ಧೂಮ್ರಶಿಖೆ-ಕಾ೦ತಿ ಕ್ಯೂಟಾಗಿ ಕಾಡುತ್ತು!!!

 4. ಸೂಪರ್‌ ಆಯಿದು ಮಾವ°. ಆಟ ನೋಡಿದಾಂಗೇ ಆತು…

 5. ಹರೇ ರಾಮ.
  ಸಚಿತ್ರ-ಶುದ್ದಿ ಭಾರೀ ಲಾಯ್ಕಾಯಿದು ಬೊಳುಂಬುಮಾವ. ಅಲ್ಲಿಗೆ ಬಾರದ್ದರೂ ಆಟದ ದೃಷ್ಯಂಗೊ ಕಣ್ತುಂಬಿತ್ತು.

 6. ಕೆ.ನರಸಿಂಹ ಭಟ್ ಏತಡ್ಕ says:

  ‘ಸೂರ್ಯಕಾಂತಿ ಕಲ್ಯಾಣ’ದ ಎರಡನೆಯ ಪ್ರಯೋಗ ಭಾರೀ ಲಾಯಕಾಯಿದು ಹೇದು ಪ್ರತ್ಯಕ್ಷದರ್ಶಿಗೊ ಹೇಳಿದವು.

 7. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಸೂರ್ಯಕಾಂತಿ ಕಲ್ಯಾಣದ ಪ್ರದರ್ಶನದ ಬಗ್ಗೆ ಓದಿ ಕುಶಿ ಆತು. ಮುಳಿಯರ ಒಂದು ಕ್ಲಿಷ್ಟ ಕೃತಿ ಇದು.ಬಾಕಿ ಪ್ರಸಂಗದ ಹಾಂಗೆ ಸರಳ ಇಲ್ಲೆ.

 8. ರಘುಮುಳಿಯ says:

  ಪಟ ತೆಗದು ಬೈಲಿಲಿ ಹ೦ಚಿದ ಬೊಳು೦ಬು ಮಾವ೦ಗೆ ಧನ್ಯವಾದ.
  ಗಡಿಬಿಡಿಲಿ ಎಲ್ಲಾ ನೆರೆಕರೆಯ ನೆ೦ಟ್ರಿ೦ಗೆ ಹೇಳಿಕೆ ಹೇಳುಲೆ ಎಡಿಗಾತಿಲ್ಲೆ,ಕ್ಷಮೆ ಇರಳಿ.
  ದೊಡ್ಡಜ್ಜ ನೂರು ಬವರುಷ ಮದಲು ಬರದ ಅದ್ಭುತ ಪ್ರಸ೦ಗಲ್ಲಿ ಮೂರು ಜೆನ ಪುಳ್ಯಕ್ಕೊಗೆ ಪಾತ್ರ ವಹಿಸುವ ಯೋಗ ಸಿಕ್ಕಿದ್ದು ಎ೦ಗೊಗೆ ತು೦ಬಾ ನೆಮ್ಮದಿ ತಯಿ೦ದು.
  ಗೊಪಾಲಣ್ಣ ಹೇಳಿದ ಹಾ೦ಗೆ ಒ೦ದು ವಿಶೇಷ ನಡೆಯ ಪ್ರಸ೦ಗ ಇದು.ಉದಿಯಪ್ಪಗಾಣ ಹೊತ್ತಿಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಿದ ನಿಡ್ಲೆ ಗೋವಿ೦ದಣ್ಣನ ತ೦ಡದ ಪ್ರಯತ್ನಕ್ಕೆ ನೂರು ನಮಸ್ಕಾರ.

 9. ತೆಕ್ಕುಂಜ ಕುಮಾರ ಮಾವ° says:

  ಮುಳಿಯದಜ್ಜನ ಆಟ ನೋಡ್ಲೆ ಒಂದು ಒಳ್ಳೆ ಅವಕಾಶ ಸಿಕ್ಕಿತ್ತು.ಪೂರ್ತಿ ನೋಡ್ಲೆ ಎಡಿಗಾಯಿದಿಲ್ಲೆ.ಬೊಳೂಂಬು ಮಾವನ ಸಚಿತ್ರ ವರದಿಂದಾಗಿ ಆ ಕೊರತೆ ನೀಗಿತ್ತು.
  ತಿಮ್ಮಪ್ಪಯ್ಯರ ಮಗ,ಮಗಳು, ಅಳಿಯಂದ್ರ ಕಂಡು ಬಾಯಿ ತುಂಬ ಮಾತಾಡ್ಲೆ ಸಿಕ್ಕಿದ್ದು ಕೊಶೀ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *