Oppanna.com

ಕಡ್ಡಿಯ ಗುಡ್ಡೆ ಮಾಡುದು ಹೇಂಗೆ….?

ಬರದೋರು :   ಅನು ಉಡುಪುಮೂಲೆ    on   20/03/2012    11 ಒಪ್ಪಂಗೊ

ಅನು ಉಡುಪುಮೂಲೆ

ಒಂದು ದೊಡ್ಡ ಗೆರೆ . ಅದರ ಮುಟ್ಟದ್ದೆ  , ಉದ್ದದ್ದೆ ಸಣ್ಣ ಮಾಡೆಕ್ಕು ಹೇಳಿರೆ ಎಂತ ಮಾಡ್ಲೆ ಎಡಿಗು……?

ಅದರಂದ ರಜ ದೊಡ್ಡ ಗೆರೆ ಇನ್ನೊಂದು ಎಳದರೆ ಮದಲೇ ಇದ್ದ ಗೆರೆ ಸಣ್ಣ ಆತಿಲ್ಯೋ….? ಇದು ಬುದ್ಧಿವಂತಿಕೆ ! ಈ ಕತೆ ಸಾಧಾರಣ ಎಲ್ಲರಿಂಗೂ ಗೊಂತಿಕ್ಕಲ್ಲದಾ…?
ಬೆಟ್ಟ ಬಾಬರನ ಹತ್ತರೆ ಬಾರದ್ದರೆ ಎಂತ ಮಾಡುದು…? ಬಾಬರನೇ ಬೆಟ್ಟದ ಹತ್ತರೆ ಹೋಪದು
ಅಷ್ಟೆ. ಎಷ್ಟು ಸುಲಭದ ವಿಷಯ ಅಲ್ಲದಾ…?
ಆನು ಎಂತ ಹೇಳ್ಲೆ ಹೆರಟದು ಹೇಳಿ ಆಲೋಚನೆ ಮಾಡೆಡಿ. ವಿಷಯಕ್ಕೆ ಬತ್ತೆ.
ಎಂಗಳ ಬಟ್ಟಮಾವಂಗೆ ಶಿಷ್ಯ ವರ್ಗದವರ  ಮನೆ ಒಕ್ಕಲು ಮಾಡ್ಸುಗ ತನಗೂ ಒಂದು ಒಳ್ಳೆ ಮನೆ ಕಟ್ಟುಸಿದರೆ ಅಕ್ಕನ್ನೇ ಹೇಳಿ ತೋರಿತ್ತು. ಬಟ್ಟ ಮಾವಂದು ಹಳೇ ಕಾಲದ ಮನೆ .ಒಳ ಎಲ್ಲ ಕತ್ತಲೆ ಕತ್ತಲೆ. ಕುತ್ತ ನಿಂದರೆ ಅಟ್ಟ ತಲಗೆ ತಾಗುಗು.ಸರಿಯಾಗಿ ಗಾಳಿ ಬೆಳಕು ಒಳ ಬತ್ತಿಲ್ಲೆ!

ಬಟ್ಟಮಾವನ ಅಬ್ಬೆಗೆ ಪ್ರಾಯ ಆತಿದಾ… ಎಂತ ಮಾಡ್ಳೂ ಎಡಿತ್ತಿಲ್ಲೆ. ಹೆಂಡತಿಗೂ ಬಂಙ ಆವುತ್ತು.  ಬಪ್ಪವು ,ಹೋಪವು  ,ಆಳು -ಕಾಳುಗ ಎಲ್ಲರಿಂಗೂ ಮಾಡಿ ಹಾಕೆಡದಾ? ಬಟ್ಟ ಮಾವಂಗೆ ಕಾರ್ಯಕ್ರಮಕ್ಕೆ ಹೋಪಲೆ ಇದ್ದರೆ ಸಮಯಕ್ಕೆ ಸರಿಯಾಗಿ ಹೆರಡ್ಸಿ  ಬಿಡೆಡದಾ ?
ವ್ಯವಸ್ಥೆಗ ಸರಿ ಇಲ್ಲದ್ದರೆ ಕೆಲಸ  ಆಗ. ಇನ್ನು ಮಗಂಗೆ ಮದುವೆ ಮಾಡ್ಸುವ ಅಲೋಚನೆ ಇದ್ದು.   ಮದುವೆ ಆಗಿ ಈ ಮನಗೆ ಬಪ್ಪ ಸೊಸೆಗೂ ಬಂಙ ಅಪ್ಪದು ಬೇಡ ಹೇಳಿ ಬಟ್ಟ ಮಾವ ಮುಂದಾಲೋಚನೆ ಮಾಡಿದವು. ಮದುವೆಂದ ಮದಲೇ ಹೊಸ ಮನೆ ಕಟ್ಟುಸಿದರೆ ಅಕ್ಕು ಹೇಳಿ ಅಂದಾಜಿ ಮಾಡಿದವು.
ತರವಾಡು ಮನೆ. ಪೂಜೆ,ಹಬ್ಬ ಹರಿದಿನಂಗಳ ಆಚರಿಸಿಗೊಂಡು ಬಪ್ಪ ಮನೆ. ವರ್ಷಕ್ಕೊಂದರಿ ಕುಟುಂಬವು ಎಲ್ಲಾ ಸೇರಿದರೆ ೩೦೦- ೪೦೦ ಜನ ಅಕ್ಕು. ಹಾಂಗಿಪ್ಪ ಮನೆಯ ಸೀದ ಮುರುದು ತೆಗವಲೆ ಎಡಿಗೋ…?

ಬಟ್ಟ ಮಾವ ಜೋಯಿಷ ಮಾವನ ಕರೆಸಿ ಒಂದು ಪ್ರಶ್ನೆ ಮಡುಗಿಸಿದವು. ಮನೆ ಮುರುದು ತೆಗವದು ದೇವರಿಂಗೆ ಸಮಾಧಾನ ಇಲ್ಲೆ ಹೇಳಿ ಪ್ರಶ್ನೆಲಿ ಕಂಡತ್ತು. ಎಂತ ಮಾಡುದು….?ಬಟ್ಟ ಮಾವಂಗೆ ಬೇಜಾರಾತಿದ….

ಇಪ್ಪ ಮನೆಯನ್ನೇ ರಿಪೇರಿ ಮಾಡ್ಸಿದರೆ ಹೇಂಗೆ …..? ಇದು ಬಟ್ಟ ಮಾವನ ತಲಗೆ ಹೊಳದಪ್ಪಗ  ಜೋಯಿಷ ಮಾವನಲ್ಲಿ ಕೇಳಿಯೇ ಬಿಟ್ಟವು.
ಅಂಬಗ  ಅಟ್ಟ ,ಮುಚ್ಚಿಗೆ  ಎಲ್ಲ ತೆಗೆಯದ್ದೆ ರಿಪೇರಿ ಮಾಡ್ಸುಲೆ ಅಡ್ಡಿ ಇಲ್ಲೆ ಹೇಳಿ ಆತು.
ಒಂದು ರೀತಿಲಿ ಒಳ್ಳೆದೇ ಆತಿದಾ. ಟೇರೇಸು ಮನೆ ಎಲ್ಲ ಕಡೆಲಿಯೂ ಇದ್ದು . ಚಾವಡಿಲಿ ಹಳೆ ಕ್ರಮದ ಬಾಜಿರೆ ಕಂಬ ಇಪ್ಪ,ಅಟ್ಟಕ್ಕೆ ಮರದ ಮುಚ್ಚಿಗೆ ಇಪ್ಪ ಮನೆ ಈಗ ಕಾಂಬಲೆ ಸಿಕ್ಕ. ಹಾಂಗಿಪ್ಪಗ  ಅದರ ಒಳಿಶಿಗೊಂಡರೆ  ಮುಂದಾಣ ತಲೆಮಾರಿನವಕ್ಕೆ ಅದೊಂದು ದೊಡ್ಡ ಆಸ್ತಿ ಅಕ್ಕು.

ಅಂದಿಂದ ಸುರುವಾತಿದ ಬಟ್ಟ ಮಾವನ ಸಂಭ್ರಮ….. ಮಾಡ್ಸಿದಷ್ಟು ಕೆಲಸ ವ್ಯವಸ್ಥಿತವಾಗಿ ಆಯೆಕ್ಕು ಹೇಳುದು ಅವರ ಆಶಯ. ಹಾಂಗಾಗಿ ಗಡಿಬಿಡಿ ಮಾಡದ್ದೆ ಸರಿಯಾಗಿ ಪ್ಲೇನು ಮಾಡ್ಯೊಂಡೇ ಕೆಲಸ ಸುರು ಮಾಡುದು ಹೇಳಿ ನಿರ್ಧಾರ ಮಾಡಿದವು. ಆತ್ಮೀಯರು,  ಸದ್ಯ ಹೊಸ ಮನೆ ಕಟ್ಟುಸಿದವರಲ್ಲಿಗೆ ಎಲ್ಲ ಹೋಗಿ ಸಲಹೆ ಎಲ್ಲ ತೆಕ್ಕೊಂಡವು. ಒಳ್ಳೆ ಇಂಜಿನಿಯರನ ಕಂಡು ಮಾತಾಡಿ ಮನೆ ರಿಪೇರಿಗೆ ಬೇಕಾದ ರೂಪುರೇಷೆ ಎಲ್ಲ ತಯಾರಾತು.
ಹೊಸ ಮನೆ ಕಟ್ಟುದಾದರೆ ಬಂಙ ಇಲ್ಲೆ ಈ ರಿಪೇರಿ ಕೆಲಸ ಹೇಳಿ ಆದರೆ ಕೆಲಸಕ್ಕೆ ಜೆನ ಸಿಕ್ಕುತ್ತಿಲ್ಲೆ.ಕೆಲಸಕ್ಕೆ ಹೇಂಗೋ ಜನರ ಹಿಡುದಾತು.

ಇಲ್ಲಿ ಸಮಸ್ಯೆ ಹೇಳಿರೆ ಅಟ್ಟ ತಲಗೆ ತಾಗುತ್ತ ಹಾಂಗೆ ಇದ್ದು ಅದರ ತಾಗದ್ದ ಹಾಂಗೆ ಮಾಡುದು ಹೇಂಗೆ……?ಅಟ್ಟವ ತೆಗದು ಎತ್ತರ ಮಾಡ್ಲೆ ಆಗ….!
ಈಗ ಈ ಶುದ್ದಿಯ ಪೀಠಿಕೆ ಎಂತಗೆ ಹಾಂಗೆ ಬಂತು ಹೇಳಿ ಗೊಂತಾತ…?
ಅಟ್ಟವ ಎತ್ತರ ಮಾಡದ್ದರೆ ಎಂತಾತು ನೆಲವನ್ನೇ ತಗ್ಗುಸಿದರೆ ಆತಿಲ್ಲೆಯಾ….?

ಸಣ್ಣ  ಸಣ್ಣ ಕಿಟಿಕಿಗ ಇಪ್ಪಲ್ಲಿ ದೊಡ್ಡ ದೊಡ್ಡ ಕಿಟಿಕಿಗಳ ಕೂರ್ಸಿ ಅಪ್ಪಗ ಗಾಳಿ ಬೆಳಕು ಬೇಕಾದಷ್ಟು ಒಳ ಬಂತಿದಾ…
ಎಂಥಾ ಒಳ್ಳೆ ಐಡಿಯಾ…..

IDEA CAN CHANGE YOUR LIFE !!!!

ಹಳೆ ಮನೆಯ ಸ್ವರೂಪವ ಬದಲಾಯಿಸದ್ದೆ ನಮಗೆ ಬೇಕಾದ ಹಾಂಗೆ ಇಪ್ಪ ವ್ಯವಸ್ಥಿತವಾದ ಮನೆ ತಯಾರಾತಿದಾ..
ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇರ್ತು. ಕಡ್ಡಿಯ ಗುಡ್ದೆ ಮಾಡುದು ಹೇಳಿಗೊಂಡು ಸಣ್ಣ ಸಣ್ಣ ವಿಷಯಂಗಳ ದೊಡ್ದ ಮಾಡಿ ಚಿಂತೆ ಮಾಡುವ ಬದಲು ಕೂದು ಅಲೋಚನೆ ಮಾಡಿರೆ ಪರಿಹಾರ ಸಿಕ್ಕುಗು.
ಬಟ್ಟ ಮಾವನ ಮನೆ ಒಕ್ಕಲಿಂಗೆ ಹೋಗಿ ಪಾಚ ಉಂಡಿಕ್ಕಿ ಬಂದಪ್ಪಗ ಈ ಸುದ್ದಿಯ ಬೈಲಿಲಿ ಹೇಳದ್ದರೆ ಆಗ ಹೇಳಿ ಕಂಡತ್ತು. ಹಾಂಗೆ …….

~*~*~

11 thoughts on “ಕಡ್ಡಿಯ ಗುಡ್ಡೆ ಮಾಡುದು ಹೇಂಗೆ….?

  1. ಅನುಪಮಕ್ಕ,
    ನಿಂಗಳ ಶುದ್ದಿಗಳ ಈಗ ನೆಗೆಮಾಡಿಂಡೇ ಓದುತ್ಸು ಹೇದು ಆವುತ್ತನ್ನೇಪ್ಪಾ!
    ಇದಂತೂ ಭಾರೀ ಚೆಂದ ಆಯಿದು.

    ಬಟ್ಟಮಾವನ ಕೆಣಿಯೂ, ಇದ್ದದರ ಇದ್ದಹಾಂಗೆ ಬೈಲಿಂಗೆ ಮುಟ್ಟುಸಿದ ಕೆಣಿಯೂ – ಎರಡೂ ಪಷ್ಟಾಯಿದು.
    ಯೇ ಅಕ್ಕಾ, ಗುಟ್ಟಿಲಿ ಒಂದು ಕೇಳ್ತೆ : ಮನೆ ನೆಲಕ್ಕ ಗರ್ಪುವಗ ಎಂತಾರು ’ಗಟ್ಟಿ’ ಸಿಕ್ಕಿದ್ದಡವೋ? (ಮಣ್ಣಾಂಗಟ್ಟಿ ಆದರೆ ಹೇಳಿಕ್ಕೆಡಿ) 😉

  2. ಃ-) ಸೂಪರ್ ಆಯಿದು ಲೇಖನ. ಅ೦ಡರ್ ಪಿನ್ನಿ೦ಗ್ ಹೇಳ್ತ ವ್ಯವಸ್ಥೆಲಿ ಹೀ೦ಗೆಯೇ ಗೋಡೆ ,ಮಾಡು ಎ೦ತ ತೆಗೆಯದ್ದೆ, ಬುನಾದಿಯನ್ನೇ ಬದಲುಸಲೆ ಆವ್ತು..

  3. ಈಗಣ ಕಾಲಲ್ಲಿ ಮನೆ ಕಟ್ಟುಲೂ ಎಡಿಗು ಫ್ಲ್ಯಾಟ್ ಕಟ್ಸುಲೂ ಎಡಿಗು ಈಗ ಬಟ್ಟ ಮಾವಂದ್ರ ಕಾಲ!!

  4. ಅ೦ತೂ ತರವಾಡು ಮನೆ ಒಳುದತ್ತನ್ನೇ,ಸದ್ಯ.
    ಕೆಲಸ ಸುಮಾರು ಆಗಿಕ್ಕು.ನೆಲವ ತಗ್ಗುಸಿದ್ದು ಒಳ್ಳೆ ಬುದ್ಧಿವ೦ತಿಕೆ.ಮರದ ಕ೦ಭಕ್ಕೆ ಕೆಳಾ೦ದ ಕಲ್ಲಿನ ಕ೦ಭ ಕೊಟ್ತು ಭದ್ರ ಮಾಡಿದವೋ?

    1. ತರವಾಡು ಮನೆ ಅದರ ಮೂಲ ಸ್ವರೂಪ ಬದಲಾಗದ್ದೆ ಒಳುದತ್ತು….

      ಕೆಲಸ ಕಂಡಾಬಟ್ಟೆ ಆಯಿದು. ಮರದ ಕಂಭವ ತೆಗೆಯದ್ದೆ , ನೆಲ ತಗ್ಗುಸುವಾಗ ಕಂಬದ ಕೆಳಾಣ ಕಲ್ಲುಗಳ ತೆಗೆಯದ್ದೆ ಹಾಂಗೇ ಉಳಿಸಿ ಅದಕ್ಕೆ ಸರಿಯಾದ ಆಕಾರ ನೀಡಿದ್ದವು.

  5. ಮನಸ್ಸು ಸರಿ ಆದರೆ ಉಸಿರಾಟ ಸರಿ ಇರುತ್ತು,ಉಸಿರಾಟವ ನಿಯಂತ್ರಿಸಿ,ಕ್ರಮೀಕರಿಸಿ ಮನಸ್ಸನ್ನೂ ಹಿಡಿತಲ್ಲಿ ಮಡುಗಲೆ ಅಕ್ಕು=ಹೇಳಿ ಶ್ರೀ ಶ್ರೀ ರವಿಶಂಕರ್ ಹೇಳಿ ತೋರಿಸಿದ್ದು ನೆನಪಾತು.

  6. ತುಂಬಾ ಒಳ್ಳೆ ವಿಚಾರ… ಒಳ್ಳೆ ಲೇಖನ… ನಿಂಗಳ ಬಟ್ಟ ಮಾವ ಮಾಡಿದ ಕೆಲಸ ಎಲ್ಲರಿಂಗೂ ಆದರ್ಶ…

    “ಕಡ್ಡಿಯ ಗುಡ್ದೆ ಮಾಡುದು ಹೇಳಿಗೊಂಡು ಸಣ್ಣ ಸಣ್ಣ ವಿಷಯಂಗಳ ದೊಡ್ದ ಮಾಡಿ ಚಿಂತೆ ಮಾಡುವ ಬದಲು ಕೂದು ಅಲೋಚನೆ ಮಾಡಿರೆ ಪರಿಹಾರ ಸಿಕ್ಕುಗು.”
    ಎಷ್ಟೋ ವಿಷಯಂಗಳಲ್ಲಿ ನಾವು ಇಂದು ಇದನ್ನೇ ಮಾಡುತ್ತಾ ಇಪ್ಪದು… ಎಂತೆಂತದೋ ದೊಡ್ಡ ದೊಡ್ಡ ಸಂಸ್ಯೆಗೊಕ್ಕೆ ಪರಿಹಾರ ಕಂಡುಗೊಂಡ ನಮಗೆ ಇಂದು ಮನಸ್ಸು ಮಾಡಿರೆ ಕೃಷಿಲಿ ಎದುರಾವುತ್ತಾ ಇಪ್ಪ ಸಮಸ್ಯೆಗಳ ಬಿಡುಸುಲೆ ಎಡಿಯದ? ಆ ಮೂಲಕ ಹವ್ಯಕರ ಜೀವನದ ಮೂಲಾಧಾರ ಕ್ಷೇತ್ರವ ಹವ್ಯಕರಿಂಗೆ ಒಳಿಶಿಗೊಮ್ಬಲೆ ಎಡಿಯದ?

    IDEA CAN CHANGE YOUR LIFE !!!!
    OPPANNA.COM CAN CHANGE OUR SOCIETY!!!!

    1. ಅಕ್ಕ ನಿಂಗ ಹೇಳಿದ ವಿಷಯ ನೂರಕ್ಕೆ ನೂರು ಸತ್ಯ……

      oppanna.com ನಮ್ಮ ಹವ್ಯಕ ಸಮಾಜಲ್ಲಿ ಒಂದು ಮಹತ್ತರ ಬದಲಾವಣೆ ತಪ್ಪದರಲ್ಲಿ ಸಂಶಯವೇ ಇಲ್ಲೆ. ನಮ್ಮ ಸಮಾಜದ ಉದ್ಧಾರಕಾಗಿ ಇದರ ಕೊಡುಗೆ ಅಪಾರ…….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×