Oppanna.com

ವಾತ್ಸಲ್ಯಮಯಿ ಅಮ್ಮಂದಿರ ಬಗ್ಗೆ….

ಬರದೋರು :   ಡೈಮಂಡು ಭಾವ    on   05/04/2010    4 ಒಪ್ಪಂಗೊ

ಡೈಮಂಡು ಭಾವ

ಈ ಲೇಖನವ ಈ ಮೊದಲು ಎನ್ನ ಬ್ಲೋಗಿಲ್ಲಿ ಬರದಿತ್ತೆ.  ನಮ್ಮ ಬಯಲಿನವೆಲ್ಲರೂ ಓದಲಿ ಹೇಳ್ತ ಉದ್ದೇಶಂದ ಇಲ್ಲಿ ಮತ್ತೊಂದರಿ ಬರತ್ತಾ ಇದ್ದೆ… ಸುಮ್ಮನೆ ಹಾಂಗೆ ಓದಿಕ್ಕಿ  ಆತಾ….

~ ~ ~

ಆ ಎರಡು ಅಕ್ಷರದಲ್ಲಿ ಅದೆಂತ ಅದ್ಭುತ ಇದ್ದೋ ಏನೋ… ಆ ಪದ ಕೇಳಿದ ಓದಿದ ಕೂಡಲೇ ಮೈ ಜುಂ ಹೇಳ್ತು.

ಅಬ್ಬೆ ಬಾಬೆಯ ಆಡುಸುದು…ಎಷ್ಟು ಚೆಂದ,

’ಅಮ್ಮ’ -ನಿನಗೆ ನೀನೇ ಸಾಟಿ… ನಿನ್ನ ಕರುಣೆ, ಪ್ರೀತಿ, ವಾತ್ಸಲ್ಯ ಮರೆಯಲಾಗದ್ದು, ಜೀವನ ಪರ್ಯಂತ ಪ್ರತಿ ದಿನ ಪ್ರತಿ ಕ್ಷಣ ಎಲ್ಲರೂ ನಿನ್ನನೆನೆಯಕ್ಕು..
ಆ ಬ್ರಹ್ಮನ ಸೃಷ್ಟಿಲಿ ಅತ್ಯಮೂಲ್ಯ, ಬೆಲೆಕಟ್ಟಲಾಗದ್ದ ಸೃಷ್ಟಿ ಯಾವುದಾದರು ಇದ್ದರೆ ಅದು ಅಮ್ಮ ಮಾತ್ರ.
ಟಿವಿಲಿ ಅಥವಾ ರೇಡಿಯಲ್ಲಿಯಾ ಅಮ್ಮಂದ್ರ ಕುರಿತಾಗಿಪ್ಪ ಪದ್ಯ ಬಪ್ಪಗ ತದೇಕ ಚಿತ್ತಂದ ನಾವು ಕೇಳ್ತು. ಪದ್ಯವ ನಾವು ಮನಸ್ಸಿಲ್ಲೇ ಗುನುಗುತ್ತು. ಅದರ ಕೇಳ್ತಾ ಇಪ್ಪಗ ನಾವು ಬೇಡ ಬೇಡ ಹೇಳಿದರೂ ಕಣ್ಣಿನ ಕರೇಲಿ ಹಾಂಗೆ ಸುಮ್ಮನೆ ಕಣ್ಣೀರು ಹರಿತ್ತಿಲ್ಲೆಯಾ…. ಅಮ್ಮನ ಶಕ್ತಿಯೇ ಅಂತಾದ್ದು. ಆ ಹೊತ್ತಿಲ್ಲಿ ನಮ್ಮ ಮನಸಿಲ್ಲಿ ಅಮ್ಮ ಬಂದು ಕೂತಿರ‍್ತು. ಆ ಪದ್ಯಂಗ ಏವ ಭಾಷೆಲಿಯೇ ಇರಲಿ…ಎಲ್ಲರ ಮನಸ್ಸಿಂಗೆ ನಾಟುತ್ತು.
ಕೆಲವು ವರ್ಷ ಹಿಂದೆ ಹೋಪ.. ನಮ್ಮ ಬಾಲ್ಯಕ್ಕೆ… ನಾವು ಜೀವನಲ್ಲಿ ಮರೆಯಲಾಗದ್ದ ಹೆಚ್ಚಿನ ಘಟನೆಗೋ ಬಾಲ್ಯಲ್ಲೆ ನಡೆದ್ದು. (ಅಲ್ಲದಾ?) ಇಂದು ನಾವು ಅದರ ನೆಂಪು ಮಾಡುವಾಗ ಬೆಚ್ಚನೆಯ ಅನುಭವ ನೀಡ್ತು. ಆಟ, ಪಾಠ, ತುಂಟಾಟ, ಊಟ ಎಲ್ಲವುದೆ ಚೆಂದ. ನಾವು ಬೇಜಾರಿಲಿಪ್ಪಗ, ಏಕಾಂತಲಿಪ್ಪಗ ಸುಮ್ಮನೆ ಆಲೋಚನೆ ಮಾಡಿದರೆ ಸಾಕು. ಸುರುಳಿ ಸುತ್ತಿದ ಹಾಸಿಗೆಯ ಬಿಡಿಸಿದ ಹಾಂಗೆ ಅಂಬಗಾಣ ನೆನಪುಗ ಒಂದೋದಾಗಿ ನಮ್ಮ ಸ್ಮೃತಿಪಟಲಲ್ಲಿ ಬಿಚ್ಚಿಗೊಳ್ತಾ ಹೋಯ್ತು. ದೂರಲ್ಲಿಪ್ಪ ನಮ್ಮ ಮಾಣಿಯೊಂಗಕ್ಕೆ, ಕೂಸೂಗೊಕ್ಕೆ ಇದುವೇ ಸಂಗಾತಿಗ. ಬಾಲ್ಯ ಜೀವನದುದ್ದಕ್ಕೂ ಅಮ್ಮ ಇಪ್ಪದರಿಂದಾಗಿಯೇ ನವಗೆ ಆ ಘಟನೆಗೊ ಇಂದಿಂಗೂ ಕಾಡ್ತಾ ಇಪ್ಪದು.
ದೇವತೆಯಾಗಿ, ತಾಯಿಯಾಗಿ, ಗುರುವಾಗಿ ಫ್ರೆಂಡಾಗಿ ಅಮ್ಮ ಮಾಡದ್ದ ಸೇವೆ ಇಲ್ಲೆ. ಅದಕ್ಕೆ ಹಿರಿಯರು ಅಮ್ಮಂಗೆ ದೇವತೆ, ಗುರುವ ಸ್ಥಾನ ನೀಡಿದ್ದವು. (ಮಾತೃ ದೇವೋ ಬವ. ಮಕ್ಕೊಗೆ ಮನೆಯೇ ಮೊದಲ ಪಾಠ ಶಾಲೆ, ಅಮ್ಮನೇ ಗುರು). ಮಕ್ಕ ಎಷ್ಟೇ ದೊಡ್ಡ ತಪ್ಪು ಮಾಡಲಿ. ಕ್ಷಮುಸುವ ದೊಡ್ಡ ಗುಣ ಅಮ್ಮಂದ್ರಿಂಗೆ ದೈವದತ್ತವಾಗಿ ಬಯಿಂದು. ಅದಕ್ಕೆ ಅಮ್ಮನ ಕ್ಷಮಾಯಾಧರಿತ್ರಿ ಹೇಳಿಯೂ ಹೇಳ್ತವು. ಎಷ್ಟೇ ಕಷ್ಟ ಪಟ್ಟರೂ, ದುಃಖ ಅನುಭವಿಸಿದರೂ, ಅದರ ಮನಸ್ಸಿಲ್ಲೇ ಮಡುಕ್ಕೊಂಡಿಕಷ್ಟೇ ಹೊರತು, ಮಕ್ಕಳ ಎದುರು ತೋರುಸವು. ಅವು ಬಯಸುವುದು ಮಕ್ಕಳ ಸುಖ ಮಾತ್ರ.
ನಿನ್ನ ಇಷ್ಟು ದೊಡ್ಡ ಮಾಡೆಕ್ಕಾರೆ ಆನು ಎಷ್ಟು ಕಷ್ಟ ಪಟ್ಟಿದೆ ಹೇಳ್ತದು ನಿನಗೆ ಗೊಂತಿದ್ದಾ? ಹೇಳ್ತ ಮಾತು ಅಪ್ಪಂದ್ರ ಬಾಯಿಲಾದರೂ ಬಂದು ಹೋಕು. ಆದರೆ ಅಮ್ಮನ ಬಾಯಿಲಿ ಯಾವತ್ತು ಆ ಮಾತು ಬಾರ.
ಅಮ್ಮಂದ್ರ ಬಗ್ಗೆ ಎಷ್ಟು ಬರದರೂ, ಹೇಳಿದರೂ ಕಮ್ಮಿಯೇ. ಮಕ್ಕಳ ಜೀವನ ರೂಪಿಸುವಲ್ಲಿ ಅವು ಮಾಡುವ ಕೆಲಸಂಗ ಎಲೆಯ ಹಿಂದೆ ಇಪ್ಪ ಕಾಯಿಗಳ ಹಾಂಗೆ. ಅದು ಆರಿಂಗು ಗೊಂತಾಗ ಆದರೆ ಅವು ಅವರ ಕೆಲಸವ ಯಾವಾಗಲೂ ಮಾಡಿಕೊಂಡು ಹೋವ್ತವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಯೇ.
ನಾವು ನಡೆವ ಪ್ರತಿ ಹೆಜ್ಜೆಲಿ ಅಮ್ಮಂದ್ರ ಶ್ರಮ ಇದ್ದು. ಜೀವನದ ನಾಟಕದಲ್ಲಿ ಅಮ್ಮಂದ್ರ ಪಾತ್ರ ದೊಡ್ಡದು. ಅವರ ನಿಸ್ವಾರ್ಥ, ಪ್ರೀತಿ ಕರುಣೆ, ವಾತ್ಸಲ್ಯ ಮಾರ್ಗದರ್ಶನಲ್ಲಿ ಮಿಂದೆದ್ದ ನವಗೆ ಜೀವನದ ದಾರಿಲಿ ಸರಾಗವಾಗಿ ನೆಡವಲೆ ಸಾಧ್ಯ ಆಯುತ್ತು. ಪರಿಸ್ಥಿತಿ ಹೀಂಗಿಪ್ಪಗ ಅಮ್ಮಂದ್ರಿಗೇ ಹೇಳಿ ಪ್ರತ್ಯೇಕವಾಗಿ ಒಂದು ದಿನ ತೆಗೆದು ಮಡಗಿ ’ಮದರ‍್ಸ್ ಡೇ’ ಹೇಳಿ ಆಚರಿಸುವುದು ನಮ್ಮ ಸಮಾಜದ ದೊಡ್ಡ ಚೋದ್ಯ.
ನಮ್ಮ ಹತ್ತರೆ ಯಾವಾಗಲೂ ಇಪ್ಪವರ ಬೆಲೆ ಅಂಬಗ ನವಗೆ ಗೊಂತಾವುತ್ತಿಲ್ಲೆ. ಅವು ನಮ್ಮಿಂದ ದೂರಲ್ಲಿ ಇಪ್ಪಗ ಅವರ ಮೌಲ್ಯ ಅರ್ಥ ಆವ್ತು. ಜೀವನದ ಬಂಡಿ ಓಡುಸಲೆ ಮನೆ ಬಿಟ್ಟು ದೂರ ದೂರದ ಊರುಗೊಕ್ಕೆ ಹೋದವೆಲ್ಲಾ ಇದರ ಕಳಕ್ಕೊಳ್ತಾ ಇದ್ದವು. ಆನು ಮೊದಲೇ ಹೇಳಿದಾಂಗೆ ಅವಕ್ಕೆ ಆ ನೆಂಪುಗಳೇ ಸಂಗಾತಿಗ. chaussure nike pas cher ಅದರ ಮತ್ತೆ ಮತ್ತೆ ಮೆಲುಕು ಹಾಕಿ ಹಿಂದೆ ಕಳೆದ ಮಧುರ ಕ್ಷಣಗಳನ್ನು ಸವಿಯ ಅನುಭವಿಸುತ್ತಾ ಇದ್ದವು.
ಇದುವರೆಗೆ ಈ ಭೂಮಿಲಿ ಹುಟ್ಟಿದ ಆರಿಂಗೂ ಅಮ್ಮನ ಋಣ ತೀರುಸಲೆ ಎಡಿಗಾಯಿದಿಲ್ಲೆ ಹೇಳಿದರೆ, ಅಮ್ಮ ಅದೆಂತ ದೊಡ್ಡ ತ್ಯಾಗ ಮಾಡಿದ್ದು ಹೇಳಿ ಅರ್ಥ ಮಾಡಿಕೊಂಬಲೆ ಆರಿಂಗೂ ಕಷ್ಟ ಆಗ.. ಅಲ್ಲದಾ?
ಕಡೇ ಮಾತು: ಜಗತ್ತಿಲ್ಲಿ ಎಷ್ಟೋ ಮಕ್ಕೊಗೆ ಅಮ್ಮಂದ್ರಿಲ್ಲೆ. ಇನ್ನೆಷ್ಟೊ ಅಮ್ಮಂದ್ರಿಗೆ ಮಕ್ಕ ಇಲ್ಲೆ. ಇಬ್ಬರ ಶೋಕವೂ ಒಂದೇ ರೀತಿಯಾದ್ದು. ಅಂಥ ಪರಿಸ್ಥಿತಿ ಆರಿಂಗೂ ಬಪ್ಪಲಾಗ ಹೇಳ್ತದೆ ಹಾರೈಕೆ.

ಎನ್ನ ಈ  ಲೇಖನ ಎಲ್ಲಾ ಅಮ್ಮಂದ್ರಿಗೆ ಅರ್ಪಣೆ.

ಪ್ರೀತಿಲಿ ಕೆಪ್ಪಣ್ಣ

*ಚಿತ್ರ ಕೃಪೆ: ಗೂಗಲ್‌

4 thoughts on “ವಾತ್ಸಲ್ಯಮಯಿ ಅಮ್ಮಂದಿರ ಬಗ್ಗೆ….

  1. ಜನ್ಮ ದಿನದ ಬಗ್ಗೆ, ಅಬ್ದುಲ್ ಕಲಾಮ್ BBC ಗೆ ಕೊಟ್ಟ ಇಂಟರ್ವ್ಯೂ ಲ್ಲಿ ಹೇಳಿದ ಮಾತು:
    “The only day in your life when you cried and your mother was smiling”
    ಅಮ್ಮಂಗೆ ಮಕ್ಕಳ ಮೇಲಿನ ಮಮತೆಯ ಎಷ್ಟು ಲಾಯಿಕಲ್ಲಿ ಹೇಳಿದ್ದ. ಅಲ್ಲದ

  2. ಶಂಕರಾಚಾರ್ಯರು – ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾನ ಭವತಿ!!
    ಹೇಳಿದ್ದು ಅದಕ್ಕೇ ಅಡ.
    ಮಾಷ್ಟ್ರುಮಾವ ಹೇಳಿದವು.

  3. ಅಮ್ಮ ಹೇಳುವ ಶಬ್ದವ ವಿವರುಸುಲೆ ಅಷ್ಟು ಸುಲಭ ಇಲ್ಲೆ.. ಆ ಒಂದು ಶಬ್ದಲ್ಲೇ ಎಲ್ಲವೂ ಅಡಗಿದ್ದು…
    ಪ್ರತಿಯೊಂದು ಅಮ್ಮನೂ ಬೇರೆ ಬೇರೆ ಆದರೂ ಪ್ರೀತಿ, ವಾತ್ಸಲ್ಯ ಒಂದೇ…
    ನಾವು ಹುಟ್ಟಿದ ದಿನ ಎಲ್ಲೋರೂ ನವಗೆ ಶುಭಾಶಯ ಹೇಳ್ತವು.. ನಾವು ಸ್ವೀಕರಿಸುತ್ತು…
    ಆ ದಿನ ನಾವು ನಿಜವಾಗಿ ನಮ್ಮ ಜನ್ಮಕ್ಕೆ ಕಾರಣರಾದ ಅಪ್ಪ, ಅಮ್ಮನ ನೆನೆಸೆಕ್ಕು…
    ನಾವು ಹುಟ್ಟಿದ ದಿನ ನಮ್ಮ ಅಮ್ಮ ಏನೆಲ್ಲಾ ಅನುಭವಿಸಿತ್ತು ಹೇಳಿ ನಾವು ಒಂದರಿ ನೆನಪಿಸುವ ದಿನ ಹೇಳಿ ಎನಗೆ ಅನಿಸುತ್ತು…
    ಎಂತ ತೊಂದರೆ ಬಂದರೂ ಕೂಡ್ಲೇ ನೆನಪ್ಪಪ್ಪದು ಅಮ್ಮನ… ಅಮ್ಮ ಇಲ್ಲದ್ದೆ ಯಾವುದೂ ಇಲ್ಲೆ..
    ಅಮ್ಮಂಗೆ ಎಷ್ಟು ಪ್ರಾಯ ಆದರೂ ಅಮ್ಮನ ಎದುರು ನಾವು ಮಕ್ಕಳೇ.., ಯಾವಾಗಲೂ ಸಣ್ಣವೇ…
    ಕಡೇ ಮಾತು ಹೇಳಿ ಹೇಳಿದ ವಿಷಯ ನಿಜವಾಗಿ ಮನ ಕಲಕುತ್ತು… ನಿನ್ನ ಹಾರೈಕೆ ನಮ್ಮೆಲ್ಲರ ಹಾರೈಕೆ…
    ಎಲ್ಲ ಅಮ್ಮಂದ್ರಿನ್ಗೂ ಒಳ್ಳೆದಾಗಲಿ.. ಎಲ್ಲಾ ಅಮ್ಮಂದ್ರ ಮಕ್ಕ ಒಳ್ಳೆಯ ಪ್ರಜೆಗ ಆಗಲಿ…

    1. ನಿಂಗಳ ಪ್ರತಿಕ್ರಿಯೆಗೆ ಧನ್ಯವಾದ…
      ಆನು ಬರೆಯದ್ದ ಕೆಲವು ಅಂಶಗಳ ನಿಂಗ ಹೇಳಿದ್ದಿರಿ..
      ಒಂದೇ ಮಾತಿಲ್ಲಿ ಹೇಳೆಕ್ಕಾದರೆ, ನಿಜವಾಗಲೂ ಅಮ್ಮ ಗ್ರೇಟ್‌…
      ಹೀಂಗೆ ಓದುತ್ತಿರಿ… ಒಪ್ಪ ಕೊಡ್ತಾ ಇರಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×