ಕಾಡುವ ಮನಸು ಹೇಳಿದರೂ ಕೇಳ್ತಿಲ್ಲೆ…!

October 23, 2011 ರ 12:58 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನು ಗ್ರೇಶಿದ್ದೆಲ್ಲಾ ನಡದ್ದಿಲ್ಲನ್ನೇ ಹೇಳ್ತ ಬೇಜಾರಂತು ಎನಗಿಲ್ಲೆ. ಆ ಕೂಸು ಎನಗೆ ಸಿಕ್ಕಿದ್ದಿಲ್ಲೆ ಹೇಳ್ತ ದುಃಖವೂ ಇಲ್ಲೆ. ನಿಜ ಹೇಳೇಕ್ಕಾದರೆ ನಾವು ಗ್ರೇಶಿದ್ದೆಲ್ಲಾ ನಡೆದರೆ ಜೀವನಲ್ಲಿ ಎಂತ ಥ್ರಿಲ್ ಇರ್ತು ಹೇಳುವ ಅದರ ಮಾತನ್ನೇ ಮತ್ತೆ ಮತ್ತೆ ಮನನ ಮಾಡಿಗೊಂಡು ಅದರ ಮರತ್ತಾ ಇದ್ದೆ. ನಮ್ಮ ಹಣೆಲಿ ಬ್ರಹ್ಮ  ಎಂತ ಬರದ್ದನೋ, ಅದರ ಹೊರತಾಗಿ ಬೇರೇನೂ ನಡೆಯ ಹೇಳುವ ಮಾತೂ ಎನಗೆ ಗೊಂತಿಲ್ಲದ್ದೆ ಇಲ್ಲೆ.

ಆದರೆ ಮನಸ್ಸು ಬಿಡಕ್ಕಲ್ಲದಾ. ಆನು ಯಾವುದರ ಮರೆಕೂ ಹೇಳಿ ಇದ್ದನೋ ಅದನ್ನೇ ಮತ್ತೆ ಮತ್ತೆ ನೆನಪುಸುತ್ತು. ಎಲ್ಲರೂ ಮನಸ್ಸು ಚಂಚಲ ಹೇಳಿ ಹೇಳ್ತವು. ಆದರೆ ಎನ್ನದು ಈ ವಿಷಯಲ್ಲಿ ಅಚಂಚಲ! ಇರುಳು ಮನುಗುಲೆ ಹೆರಡುವಾಗ ಕಾಡುತ್ತು. ಒಬ್ಬನೇ ಕೂದುಗೊಂಡು ಇಪ್ಪಗಳೂ ಸ್ಮೃತಿ ಪಟಲಕ್ಕೆ ಬಡಿದು ಕಣ್ಣಿಲ್ಲಿ ನೀರು ತರುಸುತ್ತು. ಏ ಮನಸ್ಸೇ ನೀನು ಏಕೆ ಹೀಂಗೆ? ಅಷ್ಟಕ್ಕೂ ಆನು ಮಾಡಿದ ತಪ್ಪಾದರೂ ಎಂತರ? ಪ್ರೀತಿಸುದು ತಪ್ಪಾ? ಪ್ರೀತಿಸಿದ ಕೂಸು ಎನಗೆ ಸಿಕ್ಕದ್ದರೆ ಅದು ಎನ್ನ ತಪ್ಪಾ?

~

ಪ್ರೀತಿ. ಅದೇ ಇಂಗ್ಲೀಷಿಲ್ಲಿ ಲವ್ ಹೇಳಿ ಹೇಳ್ತವಲ್ಲಾ ಅದರ ಕಲ್ಪನೆಯೇ ಎನಗೆ ಇತ್ತಿಲ್ಲೆ. ಆದರೆ ಅದೊಂದು ದಿನ ಆ ಕೂಸಿನ ಕಂಡಪ್ಪಗ ಎನಗೇ ಗೊಂತಿಲ್ಲದ್ದ ಹಾಂಗೆ ಅದರ ಪ್ರೀತಿಸಲೆ ಶುರು ಮಾಡಿದೆ. ವಿದ್ಯೆ, ಕೆಲಸಕ್ಕೆ ಯಾವತ್ತೂ ಮೊದಲ ಪ್ರಾಮುಖ್ಯತೆ ಕೊಟ್ಟ ಆನು, ಪ್ರೀತಿಗೆ ಕೊಟ್ಟದು ಎರಡನೇ ಪ್ರಾಮುಖ್ಯತೆ. ಬಹುಶಃ ಅದೇ ತಪ್ಪಾತ ಹೇಳಿ ಈಗ  ಅನುಸುತ್ತು.

ಕಾಲೇಜು ಜೆಗಿಲಿಲ್ಲ ಆ ಕೂಸು ನೆಡಕ್ಕೊಂಡು ಹೋಪಗ ಎಲ್ಲಾ, ಕೂಸಿನ ಹತ್ತರೆ ಮಾತಾಡೆಕ್ಕು ಹೇಳಿ ಅನಿಸಿಗೊಂಡು ಇತ್ತಿದು. ಆದರೆ ಎನ್ನ ಆಂತರ್ಯದ ಬುದ್ಧಿ ಅದಕ್ಕೆ ಅಡ್ಡಕಾಲು ಹಾಕಿತ್ತು. ಕೆಲಸ ಸಿಕ್ಕಿದ ನಂತರವೇ ಕೂಸಿನ ಹತ್ತರೆ ಮಾತಾಡ್ತೆ ಹೇಳ್ತ ನಿರ್ಧಾರವ ಅಂದು ತೆಕ್ಕೊಂಡೆ. ಅಷ್ಟಪ್ಪಗ ಕೂಸು ನಿನಗೆ ಸಿಕ್ಕದ್ದೇ ಇದ್ದರೆ?- ಹೇಳಿ ಮನಸು ಎಚ್ಚರಿಕೆ ಕೊಟ್ಟುಕೊಂಡು ಇತ್ತಿದು. ಆದರೆ ಬುದ್ಧಿ ಮಾತ್ರ ಸಿಕ್ಕದ್ದರೆ ಹೋಗಲಿ ಹೇಳುವ ಧೈರ್ಯವ ತೋರಿಸಿತ್ತು. ಹಾಂಗಾದರೂ ಒಂದೆರೆಡು ಸರ್ತಿ ಮಾತಾಡ್ಳೆ ಪ್ರಯತ್ನಿಸಿದೆ. ಆದರೆ ಹೆದರಿಕೆ ಆಗಿ ಹೋತು. ಹೋಗಲಿ ಕೆಲಸ ಸಿಕ್ಕಿದ ನಂತರ ಮಾತನಾಡುವ ಹೇಳಿ ಸುಮ್ಮನೆ ಕೂದೆ.

ಇದರ ಮಧ್ಯೆ ಪರೀಕ್ಷೆ, ಪ್ರಾಜೆಕ್ಟ್ ಹೇಳಿ ತುಂಬಾ ಬ್ಯುಸಿ ಆಗಿ ಹೋದೆ. ಕೂಸಿನ ದೂರಂದಲೇ ನೋಡುವಾಗ ಕೊಶಿ ಆಗಿಯೊಂಡು ಇತ್ತಿದು. ಒಂದೇ ಹೊಡೇಣ ಲವ್ವಿಲ್ಲಿಯೂ ಅಷ್ಟು ಸುಖ ಇದ್ದೋಳಿ ಗೊಂತಾದ್ದು ಅಂಬಗಳೇ! ಆ  ಕೂಸಿನದ್ದೂ ಹೇಳಿ ಎನ್ನತ್ತರೆ ಇದ್ದದು ಅದರ ಮೊಬೈಲ್‌ ನಂಬರು ಮಾತ್ರ!. ಅದುದೇ ಬಾರಿ ಭಂಙಲ್ಲಿ ಸಂಗ್ರಹಿಸಿದ್ದು!  ದಿನಾಗೊಳು ಅದರ ಮೊಬೈಲ್‌ ನಂಬರು ನೋಡಿಗೊಂಡು ಮನುಗುತ್ತಿದ್ದೇ ವಿನಃ ಒಂದು ಮೆಸೇಜು ಕಳಿಸಿದ್ದಿಲ್ಲೆ.

ಅಷ್ಟಪ್ಪಗಳೇ ಕಾಲೇಜು ಮುಗುಕ್ಕೊಂಡು ಬಂತು. ಕೆಲಸ ಹುಡುಕ್ಕಿ ಎನ್ನ ಕಾಲ ಮೇಲೆ ನಿಂಬ ಸಮಯವೂ ಬಂತು. ಕೆಲಸ  ಹುಡುಕ್ಕಲೇ ನಾವು ದೂರಕೆ ಹೋಗಿಯೂ ಆತು ಕೂಸಿನ ನೆಂಪಿಲ್ಲಿ. ಕೆಲಸ ಇನ್ನೂ ಸಿಕ್ಕದಿದ್ದರೂ ಕೂಸಿನ ನೆನವಗ ಎಲ್ಲ ಮರದು ಹೋಗಿಯೊಂಡಿತ್ತು. ಪ್ರೀತಿ ಹೇಳಿದರೆ ಹೀಂಗಿರ್ತಾ? ಎನಗಂತು ಗೊಂತಿತ್ತಿಲ್ಲೆ. ಅದೆಂತಹ ಮಧುರ ಏತನೆಗೊ ಅಂಬಗ! ಅದರ ಯೋಚನೆಲಿ ವರಕ್ಕು ಬಪ್ಪಗ ರಜ್ಜ ನಿಧಾನ ಆದರೂ ಅದರಲ್ಲಿ ಒಂದು ಕೊಶಿ ಇರ್ತಿತ್ತು :)ಉದಿಯಪ್ಪಗಳೂ ಹಾಂಗೆ ಎದ್ದಪ್ಪಗ ಒಂದರಿ ಕೊಶಿ ಅಕ್ಕು. ಹಲ್ಲು ತಿಕ್ಕಲೆ ಹೋಪಗ ವಾಸ್ತವ ನೆಂಪಾಗಿಯೊಂಡಿತ್ತು.

ಎರಡು ತಿಂಗಳ ಹುಡುಕಾಟದ ನಂತರ ದೇವರ ದಯೆಂದ ದೊಡ್ಡ ಸಂಬಳದ ಕೆಲಸ ಅಲ್ಲದ್ದರೂ ತಕ್ಕ ಮಟ್ಟಿನ ಕೆಲಸ ಆತು.  ಛೇ..ಮನಸ್ಸಿನ ಕೊಶಿಯ ಒಂದರಿ ನಿಂಗೊ ನೋಡೆಕ್ಕಿತ್ತು ಅಂಬಗ. ಆ ಕೂಸಿನ ಹತ್ತರೆ ಮಾತಾಡುವ ಸಮಯ ಬಂತಲ್ಲಾ ಹೇಳ್ತ ಸಂತೋಷ ಮನಸ್ಸಿಂಗೆ. ಎನ್ನ ಬುದ್ದಿಗೆ ಗುರಿ ಸಾಧಿಸಿದ ಸಂಭ್ರಮ. ಆದರೆ ಮೊದಲ ತಿಂಗಳ ಸಂಬಳ ಬರ್ಲಿ ಹೇಳಿ ಮನಸ್ಸಿನ ಆಸೆಗೆ ಬುದ್ಧಿ ತಣ್ಣೀರು ಎರಚಿತ್ತು. ಕೂಸಿನ ಹತ್ತರೆ ಮಾತಾಡುವ ಯೋಜನೆ ಮತ್ತೆ ಮುಂದೆ ಹೋತು. ಅದಾ ಅಕೇರಿಗೂ ಸಂಬಳ ಬಂತು.. ಮನಸ್ಸಿನ ವೇದನೆ ಕಂಡು ಬುದ್ಧಿಗೂ ಬೇಜಾರಾಗಿತ್ತು ಹೇಳಿ ಕಾಣ್ತು. ಈ ಸರ್ತಿ ಎಂತ ಬೇಕಾದರೂ ಮಾಡು ಹೇಳಿ ಅದು ಸುಮ್ಮನೆ ಆತು. ಯುದ್ಧ ಗೆದ್ದ ಸಂಭ್ರಮಲ್ಲಿ ಮನಸ್ಸು. ಹಾರಾಟವೊ ಚೀರಾಟವೊ.. ಯಬ ಎನಗರಡಿಯ. ಬುದ್ಧಿ ಹೇಳಿತ್ತು..- ತುಂಬ ಹಾರಡ ಒಂದು ವೇಳೆ ಸಿಕ್ಕದ್ದರೆ ಎಂತ ಮಾಡುವೆ ಹೇಳಿ. ಆದರೂ ಕೇಳಿದ್ದಿಲ್ಲೆ.

ಮೊಬೈಲಿಲ್ಲಿ ಕೂಸಿನ ನಂಬರು ನೋಡಿ ಫೋನು ಮಾಡ್ಳೇ ಹೆರಟಪ್ಪಗ..ಮನಸ್ಸಿನ ಬೆಟ್ರಿ ಸರಕ್ಕನೆ ಇಳುದತ್ತು! ಮೊದಲೇ ಕೂಸುಗ ಹೇಳಿದರೆ ಆಗ ಎನಗೆ. ಇನ್ನು ಒಂದರಿಯೂ ಮಾತಾಡದ್ದ ಕೂಸಿಂಗೆ ಫೋನ್‌ ಮಾಡಿ ಮಾತಾಡಿದರೆ ಹೇಂಗಕ್ಕು? ಹಾಂಗಾಗಿ ಫೋನ್‌ ಮಾಡದ್ದೆ ಮೆಸೇಜು ಕಳುಸುವ ನಿರ್ಧಾರ ಮಾಡಿದೆ. ಧೈರ್ಯ ಮಾಡಿ ಒಂದು ಮೆಸೇಜು ಕಳುಸಿದೆ. ಆಚ ಹೊಡೆಂದ ಮೆಸೇಜು ಬೈಂದಿಲ್ಲೆ. ಎದೆ ಡುಭ್‌ ಡುಭ್‌ ಹೇಳಲೆ ಶುರು ಆತು. ಮನಸ್ಸಿಂಗೆ ಏನೋ ಧೈರ್ಯ. ಮತ್ತೆ ಮತ್ತೆ ಮೆಸೇಜು ಕಳಿಸಿದೆ. ಫ್ರೆಂಡ್‌ಶಿಪ್‌ ಹಾಂಗೆ ಹೀಂಗೆ ಹೇಳಿ ಹೇಳಿದೆ. ಇವ ಆರೋ ಅಂಡೆ ಪಿರ್ಕಿ, ಇವನ ಉಪದ್ರ ತಡವಲೆ ಎಡಿತ್ತಿಲ್ಲೆ  ಹೇಳಿ ಗ್ರೇಶಿತ್ತೋ ಏನೊ ಕೂಸು; ಮೆಸೇಜು ಮಾಡಿಯೇ ಬಿಟ್ಟತ್ತು. ಪಾಪ ಅದಕ್ಕೆಂತ ಗೊಂತು ಆನು ಪ್ರೀತಿಲಿ ಬಿದ್ದಿದೆ ಹೇಳಿ! ಮೊಬೈಲಿನ ಇನ್‌ಬಾಕ್ಸಿಲ್ಲಿ ಅದರ ಮೆಸೇಜು ಕಂಡ ಕೂಡ್ಳೆ ಮನಸ್ಸು ಎಲ್ಲಾ ದೇವರನ್ನು ಒಂದರಿ ನೆನೆದತ್ತು.

ಆ ನಂತರ ಇಬ್ರೂ ಪರಸ್ಪರ ಮೆಸೇಜು ಕಳುಸಲೆ ಸುರುಮಾಡಿದೆಯ. ಕೂಸಿನ ಮೊಬೈಲ್‌ನ ಇನ್‌ಬಾಕ್ಸ್‌ ತುಂಬಾ ಎನ್ನ ಮೆಸೇಜು ತುಂಬಿದ್ದರೆ ಎನ್ನ ಇನ್‌ ಬಾಕ್ಸಿಲ್ಲಿ ಇದ್ದದ್ದು ಅದರ ಎರಡಡೊ ಮೂರೊ ಮೆಸೇಜು ಮಾತ್ರ! ಅಷ್ಟಾದರೂ ಬಂದುಗೊಂಡು ಇತ್ತಲ್ಲದಾ ಹೇಳ್ತ ಕೊಶಿ ಮನಸ್ಸಿಂಗೆ.  ದಿನಕ್ಕೆ ಒಂದಾದರೂ ಅದರ ಮೆಸೇಜು ಬಾರದ್ದರೆ ಮನಸ್ಸಿಂಗೆ ಸಮಾಧಾನ ಇರ್ತಿತ್ತಿಲ್ಲೆ. ಪ್ರೀತಿಲೂ ಅತ್ಯಂತ ಸುಂದರವಾದ ಭಾವಾನುಭವ ಇದ್ದು ಹೇಳಿ ಗೊಂತಾದ್ದು ಎನಗೆ ಅಂಬಗಳೆ.  ಈ ಸಂದರ್ಭದಲ್ಲಿಯೇ ಮನಸ್ಸು ಬುದ್ಧಿಯ ಓವರ್ ಟೇಕ್‌ ಮಾಡಿತ್ತು.

ಇಬ್ರೂದೆ ಮೆಸೇಜಿಲ್ಲಿ ಹಲವು ವಿಚಾರಂಗಳ ಮಾತಾಡಿಗೊಂಡಿತ್ತೆಯ. ಲವ್‌ ಒಂದರ ಬಿಟ್ಟು! ನಾಳೆ  ಹೇಳುವ ಹೇಳಿ ಹಲವು ನಾಳೆಗೊ ಕಳುದರೂ ಹೇಳ್ಳೆ ಎಡಿಗಾಯಿದಿಲ್ಲೆ. ಲವ್‌ ಪ್ರೊಪೋಸ್‌ ಮಾಡ್ಳೆ ಅಷ್ಟು ಹೆದರಿಕೆ ಆವುತ್ತಾ? ಉಮ್ಮಪ್ಪ ಆವುತ್ತಾಯ್ಕು ಇಲ್ಲದ್ದರೆ ಎನಗೆ ಯೇವಗಳೇ ಹೇಳಿ ಆವುತ್ತಿತಿಲ್ಲೆಯಾ?

ಮೆಸೇಜಿಲ್ಲಿ ಅಂತ ವಿಚಾರ ಹೇಳ್ಳೆ ಸರಿ ಆವುತ್ತಿಲ್ಲೆ ಹೇಳಿಗೊಂಡು ಮುಖತಾಃ ಬೇಟಿ ಅಪ್ಪಗ ಹೇಳುವ ಹೇಳಿ ಸುಮ್ಮನಾದೆ. ನಾವು ಹೇಳುದು ಒಂದು. ಆದ್ದದ್ದು ಮತ್ತೊಂದು ಹೇಳ್ತ ಹಾಂಗೆ.. ಎನ್ನ ಮನಸ್ಸಿನ ಓಟಕ್ಕೆ ಮೊದಲ ಬ್ರೇಕ್‌ ಬಿದ್ದತ್ತು. ಸಡನ್ನಾಗಿ ಕೂಸು ಮೆಸೇಜು ಮಾಡುದರ ನಿಲ್ಸಿತ್ತು.  ಒಂದು ದಿನ ಮೆಸೇಜು ಬಾರದ್ದೆ ಇದ್ದರೆ ಎನಗೆ ಕೂದಲ್ಲಿ ಕೂಬಲೆ ಎಡಿಗಾಗಿಯೊಂಡು ಇತ್ತಿಲ್ಲೆ. ಅಂತದ್ದರಲ್ಲಿ ಎರಡು ಮೂರು ದಿನ ಆದರೂ ಮೆಸೇಜು ಬೈಂದಿಲ್ಲೆ ಹೇಳಿದರೆ ಎನಗೆ ಹೇಂಗಾಗಿರ?

ಕಾಲ ಮಿಂಚಿ ಹೋಗಿತ್ತು. ಕೂಸು ಮೆಸೇಜು ಮಾಡುವವರೆಗೆ ಆನೂ ಮೆಸೇಜು ಮಾಡ್ತಿಲ್ಲೆ ಹೇಳ್ತ ತೀರ್ಮಾನ ಮಾಡಿದೆ. ಮೆಸೇಜು ಕಳುಸುದರ ನಿಲ್ಲಿಸಿದೆ. ಒಟ್ಟಿಂಗೆ ಎನಗೆ ಒರಕ್ಕು ಬಪ್ಪದೂ ನಿಂದತ್ತು. ಭಾರವಾದ ಮನಸ್ಸಿನ ತುಂಬಾ ಅದೇ ಆಲೋಚನೆ. ಮನಸ್ಸಿಂಗೆ  ಏತನೆ ಹಿಡಿದತ್ತು. ಗೆಡ್ಡ ಬೆಳದು ತೊರುಸಲೆ ಶುರು ಆತು.

ಎಷ್ಟು ದಿನ ಹೇಳಿ ಹೀಂಗಿಪ್ಪಲೆ ಸಾಧ್ಯ. ಹಿಂದಂದ ನಿಧಾನವಾಗಿ ಬಂದುಗೊಂಡು ಇದ್ದ ಬುದ್ಧಿ ಈಗ ಜಾಗೃತ ಆತು. ಮನಸ್ಸಿನ ಓವರ್ ಟೇಕ್‌ ಮಾಡಿ ಅಡ್ಡ ಹಾಕಿತ್ತು. ಜೀವನ ಹೇಳಿದರೆ ಇಷ್ಟೇ ಅಲ್ಲ. ಜೀವನಲ್ಲಿ ಇನ್ನೂ ಹಲವು ವಿಚಾರಂಗ ಇದ್ದು ಹೇಳ್ತ ಬುದ್ಧಿವಾದವನ್ನು ಹೇಳಿತ್ತು.

ಆ ಕೂಸಿಂಗೆ ಮದುವೆ ಆದ ವಿಷಯ ಕೊನೆಗೆ ಒಂದು ದಿನ ಗೊಂತಾತು. ಮನಸ್ಸು ಪೂರ್ತಿ ಕಲಂಕಿ ಹೋತು. ಆದರೆ ಎಂತು ಮಾಡ್ಳೆ ಎಡಿಯ, ಆನು ಹೋದ್ದು ಲವ್ವಿನ ಏಕಮುಖ ಸಂಚಾರ ಮಾರ್ಗಲ್ಲಿ ಇದಾ.. ಎನ್ನ ಹಣೆಬರಹ ಇಷ್ಟೇ ಹೇಳಿ, ಬುದ್ಧಿ ಆ ಕೂಸಿನ ಭವಿಷ್ಯಕ್ಕೆ ಹಾರೈಸಿತ್ತು.

ಎನ್ನ ಜೀವನ ಅತ್ಲಾಗಿ ಮುಂಗಾರು ಮಳೆ, ಇತ್ಲಾಗಿ ಮುಸ್ಸಂಜೆ ಮಾತು ಪಿಚ್ಚರುಗಳಾಂಗೂ ಆತಿಲ್ಲನ್ನೇ ಹೇಳಿ ಮನಸ್ಸು ಕೊರಗುತ್ತು. ಆನು ಯಾವಾಗಲು ಮುಸ್ಸಂಜೆ ಮಾತು ಪಿಚ್ಚರಿನ ಏನಾಗಲೀ..ಮುಂದೆ ಸಾಗು ನೀ… ಹೇಳ್ತ ಪದ್ಯವ ಹೇಳಿಗೊಂಡು ಸಂತೋಷವಾಗಿ ಇರ್ತೆ. ಆದರೆ ಮನಸ್ಸು ಮಾಂತ್ರ ಮುಂಗಾರು ಮಳೆಲಿ ಗಣೇಶ ಮಳೇಲಿ ನೆನಕ್ಕೊಂಡು ಬೇಜಾರಿಲ್ಲಿ ಹೇಳುವ ಪದ್ಯವ ಗುನುಗುತ್ತು.

ಪಿಚ್ಚರಿಲ್ಲಿ ಆದರೆ ಅದಕ್ಕೆ ಒಂದು ಅಂತ್ಯ ಹೇಳಿ ಇದ್ದು. ನಮ್ಮ ಜೀವನಲ್ಲಿ ಅಂತ್ಯ ಬಪ್ಪದು ನಾವು ಸಾವಾಗಲೇ. ಅಲ್ಲಿವರೆಗೆ ನಾವು ಬದುಕ್ಕಲೇ ಬೇಕು. ನಮ್ಮ ಎದುರು ಬಪ್ಪ ದಃಖ ದುಮ್ಮಾನ ಸಂತೋಷ ಸುಖವ ಅನುಭವಿಸಲೇ ಬೇಕು. ಈ ಸಂಗತಿ ಮನಸ್ಸಿಂಗೆ ಹೇಂಗೆ ಗೊಂತಪ್ಪದು? ಮೊಬೈಲಿಲ್ಲಿ ಇಪ್ಪ ಕೂಸಿನ ನಂಬರವನ್ನೇ ನೋಡಿಗೊಂಡು ಎನ್ನ ತಲೆ ತಿಂತಾ ಇದ್ದು…

ಮತ್ತೆ ಮತ್ತೆ ಕಾಡೆಡ ಮನಸೇ… ನಿಂಗಳಾದರೂ ಒಂದಾರಿ ಹೇಳಿಕ್ಕಿ,,,

~

ರಾಮಜ್ಜನ ಕಾಲೇಜಿಂಗೆ ಹೋಪ ದಾರಿಲಿ ಸಿಕ್ಕುವ ರೈಲಿನ ಸಂಕದ ಹತ್ತರೆ ಮೊನ್ನೆ ಬೋಚ ಬಾವ ನಡಕ್ಕೊಂಡು ಹೋಪಗ ಕಾಗದದ ಉಂಡೆ ಒಂದು ಕಾಲಿಂಗೆ ಸಿಕ್ಕಿತ್ತಡ.  ಅದರ ಬಿಡಿಸಿ ಓದಿದ. ಸರೀ ಅರ್ಥ ಆಗದ್ದೆ ಮಡಿಕೇರಿ ದಸರಾಕ್ಕೆ ಹೋದಿಪ್ಪಗ ಅಲ್ಲಿ ನಮ್ಮ ಚುಬ್ಬಣ್ಣನ ಕಂಡು ಅವಂಗೆ ಕಾಗದ ಕೊಟ್ಟ. ಚುಬ್ಬಣ್ಣ ಬೋಚಂಗೆ ಕಾಗದವ ಪೂರ್ತಿ ಓದಿ ಹೇಳಿದ. ಕಾಗದವ ಓದಿಸಿಕ್ಕಿ ಬೋಚಬಾವಂ ಸೀದ ಬಂದದು ಎನ್ನ ಹತ್ತರಂಗೆ. ಈ ಕಾಗದಲ್ಲಿ ಇಪ್ಪದರ ಬೈಲಿಂಗೆ ಹಾಯೆಕ್ಕು ಹೇಳ್ತದು ಅವನ ಕೋರಿಕೆ. ವಿಷಯ ಎಂತ ಹೇಳಿದರೆ, ಈ ಕಾಗದ ಸಿಕ್ಕಿದ ವಿಚಾರವ ಅವ ಪೆಂಗಣ್ಣಂಗೆ ಆಗಲೀ, ನೆಗೆ ಮಾಣಿಗೆ ಆಗಲೀ ಹೇಳಿದ್ದಾಂಲ್ಲೆ. ಬೋಚಂಗೆ ಬೇಜಾರು ಅಪ್ಪಲಾಗ ಹೇಳಿ ಆ ಕಾಗದಲ್ಲಿ ಇಪ್ಪದರ ಆನಿಲ್ಲಿ ಬರದ್ದೆ.

ಪ್ರೀತಿಲಿ ಕೆಪ್ಪಣ್ಣ

ಕಡೇಂಗೆ ಒಂದು ಮಾತು: ಪ್ರೀತಿಸಿದ ಕೂಸು ಸಿಕ್ಕದ್ದರೂ ತೊಂದರಲ್ಲೆ. ಜೀವನ ಪ್ರೀತಿ ಸಿಕ್ಕಲೇ ಬೇಕು. ಕೂಸಿನ ಪ್ರೀತಿಸದ್ದರೆ ಸಾರ ಇಲ್ಲೆ.. ಜೀವನವ ನಾವು ಪ್ರೀತಿಸಲೇ ಬೇಕು.. ಎಂತ ಹೇಳ್ತಿ?

ಕಾಡುವ ಮನಸು ಹೇಳಿದರೂ ಕೇಳ್ತಿಲ್ಲೆ…!, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ವಾಸ್ತವಿಕತೆಲ್ಲಿ ಬುದ್ಧಿ ಮತ್ತು ಮನಸ್ಸು ಚಿಂತನೆ ಲಾಯಕ ಆಯ್ದು. ಸಂಯಮ ಮತ್ತು ಜವಾಬ್ದಾರಿ ಎರಡೂ ಮನಸ್ಸಿಲ್ಲಿ ಯೇವತ್ತೂ ಇರೆಕ್ಕು. ಆತುರಲ್ಲಿ ಆಚಾತುರ್ಯ ನಡೆದರೆ ಮುಂದೆ ಒಂದಿನ tv9ಲಿ ನಮ್ಮ ಕತೆ ಬಕ್ಕು!!. ಕೊನೆ ಮಾತು ಇನ್ನೂ ಲಾಯಕ ಆಯ್ದು ಹೇಳಿತ್ತು -‘ಚೆನ್ನೈವಾಣಿ’.

  [Reply]

  ಡೈಮಂಡು ಭಾವ

  ಸೂರ್ಯ Reply:

  ಚೆನ್ನೈ ಬಾವ…ಒಪ್ಪ ಕಂಡು ಕೊಶಿ ಆತು…ಇಂತ ಅಚಾತುರ್ಯ ಎಂದು ನಡೆಯದೇ ಇರಲಿ…ಟಿವಿ ಚಾನೆಲ್‌ಗಳಲ್ಲಿ ಬಾರದ್ದೇ ಇರಲಿ ಹೇಳ್ತ ಹಾರೈಕೆಯೂ ನಮ್ಮದು…

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಸಂದರ್ಭ ನಮ್ಮ ಕಾಯಿತ್ತಿಲ್ಲೆ. ಅದರ ಉಪಯೋಗ ಮಾಡಿಗೊಳ್ಳೆಕ್ಕು.
  ಮನ್ಸಸ್ಸಿನ ದ್ವಂದಂಗಳ ಹೇಳಿದ್ದು ಲಾಯಿಕ ಆಯಿದು. (ನೂರೊಂದು ನೆನಪು ಎದೆಯಾಳದಿಂದ….)
  ಜೀವನವ ಪ್ರೀತಿಸೆಕ್ಕು- ಒಳ್ಳೆ ಮಾತು

  [Reply]

  ಡೈಮಂಡು ಭಾವ

  ಸೂರ್ಯ Reply:

  ಅಪ್ಪಚ್ಚಿ ಒಪ್ಪಕ್ಕೆ ಧನ್ಯವಾದ…
  ಕಾಯದ್ದ ಸಂದರ್ಭ ನಮ್ಮ ಜೀವನಲ್ಲಿ ಬಪ್ಪದೇ ಬೇಡ ಹೇಳಿ ಮೊಂಡು ವಾದ ಮಾಡುವ ಜೆನಂಗ ಇದ್ದವಿದಾ…
  ನಿಂಗ ಹೇಳಿದಾಂಗೆ ಅದರ ಉಪಯೋಗ ಮಾಡಿದರೆ ಇಂತಹ ಕತೆಗ ನಡೆವ ಸಾಧ್ಯತೆ ಕಡಮ್ಮೆ.

  [Reply]

  VA:F [1.9.22_1171]
  Rating: 0 (from 0 votes)
 3. ವಿದ್ಯಾ ಎಸ್

  ಕೆಪ್ಪಣ್ಣೋ……….. ಲೇಖನ ಲಾಯಕ ಆಯಿದಾತೋ…….. ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ ………..
  ಹೇಳಿ ಜರ್ನಲಿಸಂ ಡಿಪಾರ್ಟ್ಮೆಂಟಿನ ಜೆಗುಲಿಲಿ ನಿಂದುಗೊಂಡು ಹೇಳಿಗೊಂಡು ಇದ್ದದು ಇದರನ್ನೋ ಹೇಂಗೆ…………… ತಲೆ ಬೆಶಿ ಅಪ್ಪಗ ಅದಾ ಒಂದೊಂದಾರಿ ಈ ಸಂಜೆ ಯಾಕಾಗಿದೆ ನೀನಿಲ್ಲದೆ ………… ಹೇಳಿ ಹೇಳಿಗೊಡಿದ್ದದಿದಾ………………ಹೆಹೆಹೆಹೆಹೆಹೆ………. ಎಂತ ಕಥೆ ಇದು>>>>>>…..

  [Reply]

  VA:F [1.9.22_1171]
  Rating: 0 (from 0 votes)
 4. ಡೈಮಂಡು ಭಾವ
  ಸೂರ್ಯ

  ಒಹೋ ವಿದ್ಯಕ್ಕೊ ಕೊಶಿ ಆತಪ್ಪಾ ನಿನ್ನ ಒಪ್ಪ ಕಂಡು :)
  ಇದು ಎನ್ನ ಕಥೆ ಅಲ್ಲಾ ಆತೊ… ಬೋಸ ಬಾವಂಗೆ ಸಿಕ್ಕಿದ ಕತೆ.. ಆದರ ಆನಿಲ್ಲಿ ಹೇಳಿದ್ದಷ್ಟೇ ಬೇಕಾದರೆ ಪೆಂಗ. ನೆಗೆ ಮಾಣಿಯ ಹತ್ತರೆ ಕೇಳು..

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಅಪ್ಪು ಸೂರ್ಯಭಾವ ಈ ಪೆಂಗ. ನೆಗೆ ಮಾಣಿ…ಇವ್ವೆಲ್ಲ ಆರು? 😉

  [Reply]

  VN:F [1.9.22_1171]
  Rating: 0 (from 0 votes)
 5. ಚುಬ್ಬಣ್ಣ
  ಚುಬ್ಬಣ್ಣ

  ಅದಾ..! ಸುಮಾರು ಸಮಯ ಆದ ಮತ್ತೆ ನಮ್ಮ ಸೂರ್ಯ ಬಯಲಿ೦ಗೆ ಇಳುದಾ ಇದಾ..!
  ಏವತ್ರಾಣ ಹಾ೦ಗೆ ತೃಲ್ಲಿ೦ಗ್ ಸ್ಟೋರಿ ಬರದು ಪತ್ರಕರ್ತ ಹೇಳಿ ಶಭಾಶ ಗಿರಿಪಡದಾ.
  ಚಿತ್ರಣ ಲಾಯಕೆ ಆಯಿದು ಭಾವ.

  ಕಡೇ೦ಗು ಆ ಕಾಕತದ ಉ೦ಡೆ ಬೋಚನ ಕೈಗೆ ಸಿಕ್ಕುತಾ೦ಗೆ ಮಾಡಿದ್ದು ಆರು ಹೇಳಿ ಗೊ೦ತಾಯಿದೇ ಇಲ್ಲೆ.. 😉

  [Reply]

  VN:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ
  ಸೂರ್ಯ

  ಅದಾ ಚುಬ್ಬಣ್ಣ.. ಒಪ್ಪಕ್ಕೆ ಧನ್ಯವಾದ…
  ಬೋಸ ನಿನ್ನತ್ರೆ ಬಂದ ಅಲ್ಲದಾ ಕಾಗದವ ಓದಿಸಿದ್ದು ಅಂಬಗ ಅವ ಹೇಳಿದ್ದನೇಲ್ಲೆಯಾ?..

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಕಾಲೇಜು ಮಾಣಿಯೊಬ್ಬನ ಮಾನಸಿಕ ತುಮುಲವ ಚೆಂದಕೆ ಬರದ್ದ° ಕೆಪ್ಪಣ್ಣ. ಸುರುವಿಂಗೆ ಕೆಪ್ಪಣ್ಣ, ಇಷ್ಟೆಲ್ಲ ಕಾರ್ಬಾರು ಮಾಡಿದ್ದನೊ ಹೇಳಿ ಮನಸ್ಸಿಲ್ಲಿ ಅನುಸಿತ್ತದ. ಮತ್ತೆ ಗೊಂತಾತು ಕಾಗದದ ಉಂಡೆಲಿದ್ದ ಕತೆ ಹೇಳಿ. ನಿಗೂಢತೆಯ ಕಡೆಂಗೆ ವರೆಗೆ ಒಳುಸಿದ್ದದು ಲಾಯಕಾಯಿದು. ಆನು ಗ್ರೇಶಿದ್ದೆಲ್ಲಾ ನಡದ್ದಿಲ್ಲನ್ನೇ ಹೇಳ್ತ ಬೇಜಾರಂತು ಎನಗಿಲ್ಲೆ ಹೇಳೆಂಡೇ ಇನ್ನುದೆ ಮನಸ್ಸಿಲ್ಲಿ ಮಡಗೆಂಡು ಬೇಜಾರು ಮಾಡ್ತಾ ಇದ್ದ ನಮ್ಮ ಕಥಾ ನಾಯಕ.

  ಕಥೆಯ ಮನ್ನೆಯೇ ಓದಿದರೂ ಒಪ್ಪ ಕೊಡ್ಳೆ ತಡ ಆತದ. ಕತೆಯ ಶೈಲಿ ಲಾಯಕಿದ್ದು. ಕೆಪ್ಪಣ್ಣನ ಅನುಭವದ ಕಥೆಗೊ ಬೈಲಿಂಗೆ ಬತ್ತಾ ಇರಳಿ.

  [Reply]

  VA:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಛೇ ಹಾಂಗೆ ಅಪ್ಪಲೆ ಅವುತಿತ್ತಿಲ್ಲೆ.
  “ತಿರುಗಿ ನೋಡಿದ ಮೋರೆ ಮಱೆಯಾಗಿಹೋದ್ದೇಕೋ
  ತಿರುಗ ತಿರುತಿರುಗಿ ನೋಡದ್ದೇಕೋ “

  [Reply]

  VN:F [1.9.22_1171]
  Rating: 0 (from 0 votes)
 9. ಬೋಸ ಬಾವ
  ಬೋಸ ಬಾವ

  ಏ ಭಾವ..
  ನಿನ್ನ ದಿಸೆಲಿ ಆಗ ಆತ..!
  ಏನಾರು ಮಸಾಲೆ ಕಾಕಿ ಹೋಳು ದೊ??

  ಕೆಪ್ಪಣ್ಣ ಬರೆಕಾದಲ್ಲಿ ಬೋಚ ಹೇಳಿ ಬರದ್ದೊ?? ಏ? 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿಪುತ್ತೂರುಬಾವಶರ್ಮಪ್ಪಚ್ಚಿಅನು ಉಡುಪುಮೂಲೆಹಳೆಮನೆ ಅಣ್ಣಚುಬ್ಬಣ್ಣಕಜೆವಸಂತ°ಪುಣಚ ಡಾಕ್ಟ್ರುಸುಭಗಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶಾ...ರೀಕೇಜಿಮಾವ°ಗೋಪಾಲಣ್ಣದೀಪಿಕಾವಿನಯ ಶಂಕರ, ಚೆಕ್ಕೆಮನೆಅಕ್ಷರ°ಯೇನಂಕೂಡ್ಳು ಅಣ್ಣಪವನಜಮಾವಪೆಂಗಣ್ಣ°ಅಜ್ಜಕಾನ ಭಾವಬಟ್ಟಮಾವ°ನೆಗೆಗಾರ°ವೆಂಕಟ್ ಕೋಟೂರುಶಾಂತತ್ತೆಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ