Oppanna.com

ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ

ಬರದೋರು :   ಹಳೆಮನೆ ಮುರಲಿ    on   12/11/2017    4 ಒಪ್ಪಂಗೊ

ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ

ತೆಂಗಿಲ್ಲಿ ಈಗ ಎರಡು ವಿಧದ ಕೀಟ ಹಾವಳಿ ನಮ್ಮೂರಿಲ್ಲಿ ವ್ಯಾಪಕವಾಗಿ ಕಾಣ್ತಾ ಇದ್ದು. ಒಂದು ಎಲೆ ಕೊರಕ ಹುಳು, ಇನ್ನೊಂದು ಬಿಳಿ ಹಾತೆ. ಇದೆರಡುದೇ ತೆಂಗಿನ ಮಡಲಿನ ಅಡಿ ಭಾಗಲ್ಲಿಪ್ಪದರಿಂದ ಪಕ್ಕಕ್ಕೆ ಗಮನಕ್ಕೆ ಬತ್ತಿಲ್ಲೆ. ಬೇಸಗೆಲಿ ಹೊಳೆ ಕರೇಲಿ ಎಲೆ ಕೊರಕ ಹುಳುವಿನ ಬಾಧೆ ಉಲ್ಬಣಾವಸ್ಥೆಲಿತ್ತಿದ್ದು, ಆದರೆ ಹಲವು ಜೆನ ಇದರ ಬರಗಾಲ ಪರಿಸ್ಥಿತಿ ಹೇಳಿ ಗ್ರಹಿಸಿದ್ದವು.

ಈಗ ಕಾಸರಗೋಡು, ಮಂಗ್ಳೂರು, ಕೇರಳದ ಭಾಗಂಗಳಲ್ಲಿ ಬಿಳಿ ಹಾತೆಯ ಹಾವಳಿ ತೀವ್ರ ತರವಾಗಿದ್ದು. ದಿನಂದ ದಿನಕ್ಕೆ ಸಾವಿರಗಟ್ಲೆ ಹುಳು ಹಾತೆಯಾಗಿ ಬಿಡುಗಡೆ ಆಗಿ ಬೆಳೆತ್ತಾ ಇದ್ದು. ಮಡಲಿನ ಅಡಿಭಾಗಲ್ಲಿ ಮೊದಲು ಪೌಡರ್ ಹಾಕಿದ ಹಾಂಗೆ ಕಾಣ್ತು. ಇದು ಹೆಚ್ಚಾಗುತ್ತಾ ಹೋಗಿ ಅದರ ಮಲಿನಲ್ಲಿ ಬೂಸುರು ಬೆಳದು ಎಲ್ಲಾ ಕಪ್ಪು ಕಪ್ಪಾಗಿ ಹೇಸಿಗೆ ಕಾಂಬಗ ಜೆನಗೊಕ್ಕೆ ಗೊಂತಾವ್ತು. ಅದು ಕೆಳಂಗೆ ಅರುದು ಬೀಳುಲುದೆ ಸುರು ಅಪ್ಪಗ ಎಂತದೋ ತೊಂದರೆ ಭಾರೀ ಭಯಂಕರ ಹೇಳಿ ತಿಳ್ಕೋಳ್ತವು.

ಆದರೆ ಇದು ಅಷ್ಟೊಂದು ಭಯಂಕರ ಅಲ್ಲ. ಆದರೆ ಮೇಲಾಣ ಎಲೆ ಕೊರಕ ಹುಳು ಕೆಲವೊಂದು ಸರ್ತಿ ಭಯಂಕರ ಆಯಿದು.

ಬಿಳಿ ಹಾತಗೆ ನೈಸರ್ಗಿಕ ವೈರಿ ಕೀಟಂಗೊ ಇದ್ದು, ಕೊತ್ತಂಬರಿ ಹುಳುವಿನಂತಹದ್ದು, ಆದರೆ ಅವುಗಳ ಸಂಖ್ಯೆ ಕಮ್ಮಿ.

ಬೇಪೆಣ್ಣೆ 100 ಲೀಟರಿಂಗೆ ಸಾಬೂನು ದ್ರಾವಣಲ್ಲಿ 50 ಮಿ.ಲೀ. ಅಥವಾ ಇಮಿಡಾಕ್ಲೋಪ್ರಿಡ್*  100 ಲೀಟರಿಂಗೆ 50 ಮಿ.ಲೀ. ಪ್ರಮಾಣಲ್ಲಿ ಸ್ಪ್ರೇ ಮಾಡುಲಕ್ಕು ಹೇಳಿ ಶಿಫಾರಸು. ಆದರೆ ತೆಂಗಿನ ಮಡಲಿನ ಅಡಿಯಂಗೆ ಸ್ಪ್ರೇ ಮಾಡುವ ಬಂಙ ಮಾಡುವವಕ್ಕೇ ಗೊಂತು. ಕಾಯಿ ಕೊಯಿವಲೇ ಜೆನ ಸಿಕ್ಕುತ್ತಿಲ್ಲೆ, ಇನ್ನೆಲ್ಲಿಂದ ಮದ್ದು ಸಿಂಪರಣೆ ಮಾಡುಸುವದು ಹೇಳುವ ಚಿಂತೆ ಬೇರೆ. ಒಟ್ಟಾರೆ ನಿಸರ್ಗಂದಲೇ ಇದರ ಹತೋಟಿ ಆಯೆಕ್ಕಷ್ಟೆ.

ಬಿಳೀ ಹಾತೆ ತೆಂಗು, ಬಾಳೆ, ಹುಲ್ಲು ಮುಂತಾದ್ದಲ್ಲಿ ವೃದ್ಧಿ ಆವುತ್ತು. ಅದು ಒಂದು ರೀತಿಯ ಜೇನು ಸ್ರವಿಸಿದ್ದಲ್ಲಿ ಕಪ್ಪು ಶಿಲೀಂಧ್ರ ಬೆಳೆತ್ತು, ಹಾಂಗೆ ತೆಂಗಿನ್ ಗರಿ ಕಪ್ಪು-ಕಪ್ಪಾಗಿ ಕಾಣ್ತು.

ಇಮಿಡಾಕ್ಲೋಪ್ರಿಡ್  ಎಸ್ ಎಲ್ 17.8% (*ಕೋನ್ಫ಼ಿಡೋರ್, ಟಾಟಾಮಿಡಾ, ಹೀರೋ, ಮಿಡಾ, ಎಡ್ಮಿಟ್, ಸೀಮರ್, ಇಂಡಿಮಿಡಾ, ಇಂಪಾಕ್ಟ್, ಸುಪರ್ ಮಿಂಡಾ,  ಸುಪರ್ ಮಾಸ್ಟರ್ ಬ್ರಾಂಡುಗಳಲ್ಲಿ) ಕೀಟನಾಶಕ ವ್ಯಾಪಾರಿಗಳಲ್ಲಿ ಸಿಕ್ಕುತ್ತು. ಜೇನು ಹುಳಕ್ಕೆ ಮಾರಕ ಇದು. ಸಿಕ್ಕಾಪಟ್ಟೆ ಕೀಟನಾಶಕ ಸ್ಪ್ರೇ ಮಾಡೆಡಿ, ಪರಿಭ್ರಾಂತಿಯೂ ಬೇಡ, ಇವೆಲ್ಲಾ ನೈಸರ್ಗಿಕವಾಗಿಯೇ ಹತೋಟಿಗೆ ಬಪ್ಪ ಸಾಧ್ಯತೆ ಹೆಚ್ಚು ಹೇಳಿ ತಿಳ್ಕೊಂಬ, ಸಮಾಧಾನಲ್ಲಿ ಕಾಯುತ್ತಾ ಒಳ್ಳೆ ನಾಳೆಗೆ ಹಾರೈಕೆ ಮಾಡುವ.

 

ಹಳೆಮನೆ ಮುರಲೀಕೃಷ್ಣ

 

 

ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ:

www.cpcri.gov.in

ICAR-Central Plantation Crops Research Institute
Kudlu PO, Kasaragod – 671 124
Phone: 04994 232895, 232893, 232894, 233090

 

4 thoughts on “ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ

  1. ಕೃಷಿಕನ ನೆಲೆಲಿ ಯಾವ ಪರಿಹಾರ ಕಂಡುಗೊಂಬಲಕ್ಕು, ಒಬ್ಬ ಕೃಷಿ ಅಧಿಕಾರಿಯಾಗಿ ಯಾವ ಸಲಹೆ ಕೊಡ್ಲಕ್ಕು ಹೇಳಿ ಸ್ಪಷ್ಟವಾಗಿ ನಿರೂಪಿಸಿದ್ದು.

  2. ಕೃಷಿಗೆ ಸಂಬಂಧಿಸಿದ ಲೇಖನ ಎಂತ ನಮ್ಮಲ್ಲಿ ಕಮ್ಮಿ ಹೇಳಿ ಯೋಚನೆ ಮಾಡಿರೆ,ಇದಾ,ಇಲ್ಲಿ ಒಂದು ಲೇಖನ. ಲಾಯಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×