Oppanna.com

ಸಂವಹನಲ್ಲಿ ಆಡುನುಡಿಯ ಮಹತ್ವ ವಿಷು ಸ್ಪರ್ಧೆ 2015- ಪ್ರಬ೦ಧ ಸ್ಪರ್ಧೆ ಪ್ರಥಮ

ಬರದೋರು :   ಸಂಪಾದಕ°    on   08/09/2015    6 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015 ರ ಪ್ರಬ೦ಧ ಸ್ಪರ್ಧೆಲಿ  ಪ್ರಥಮ ಬಹುಮಾನ ಪಡೆದ ಬರಹ.
ಲೇಖಕ ಶ್ರೀ ಗುಣಾಜೆ ರಾಮಚಂದ್ರ ಭಟ್ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

DSC_8595
ಸಂವಹನಲ್ಲಿ ಆಡುನುಡಿಯ ಮಹತ್ವ

ಆದಿ ಮಾನವನ ಕಾಲಲ್ಲಿ ಭಾಷೆ ಉದಯ ಅಪ್ಪದಕ್ಕಿಂತ ಮದಲು ಕೈಕರಣದ ಸಂಕೇತ ಭಾಷೆ ಇತ್ತಡ. ನಿಧಾನಲ್ಲಿ ಕ್ರಮೇಣ, ಹಲವು ಶಬ್ಢಂಗಳ ಮುಖಾಂತ್ರ ಒಬ್ಬನ ಅಭಿಪ್ರಾಯವ ಇನ್ನೊಬ್ಬಂಗೆ ತಿಳುಶುಲೆ ಪ್ರಯತ್ನಂಗೊ ನಡದು,ಭಾಷೆಗೊ ಹುಟ್ಟಿ ಬೆಳವಲೆ ಸುರುವಾದಿಕ್ಕು. ಭಾಷೆ ಮಾತಿನ ಉದ್ಧೇಶವೇ ಸಂವಹನ ನಡಶುದು. ಬಹು ಹಿಂದಾಣ ಕಾಲಲ್ಲಿ ಜೆನರ ನಡೂಕೆ ಸಂಪರ್ಕ ಕಡಮ್ಮೆ ಆದ ಕಾರಣಂದ ಪ್ರತ್ಯೇಕ ಭಾಷೆಗೊ ಹುಟ್ಟಿ ಬೆಳದತ್ತು.ಆಡುನುಡಿ ಹೇಳಿರೆ ಒಂದು ಗುಂಪಿನ ಜೆನಂಗೊ ಅವರವರ ಮನಸ್ಸಿಲಿಪ್ಪ ಅಭಿಪ್ರಾಯಂಗಳ ಇನ್ನೊಬ್ಬರಿಂಗೆ ಅರಡಿವ ಹಾಂಗೆ ಹೇಳ್ಲಿಪ್ಪ ಶಬ್ಢಂಗಳ ವ್ಯವಸ್ಥಿತ ಗುಂಪು ಅಥವಾ ವಾಕ್ಯ. ಸಂವಹನ ಹೇಳಿರೆ ಮಾತು. ಇಂದಿನ ಕಾಲಲ್ಲಿ ಜೆನಂಗೊ ಎಷ್ಟೇ ಕಲ್ತು ಎರಡೆರಡು ಡಿಗ್ರಿಗಳ ಪಡದರೂ ಒಂದೇ ಭಾಷೆಲಿ ಮಾತ್ನಾಡುವವು ಮದುವೆ,ಉಪನಯನ,ಮನೆ ಒಕ್ಕಲು ಇತ್ಯಾದಿ ಅನ್ಪತ್ಯ(ಜೆಂಬಾರ) ಸಮಾರಂಭಲ್ಲಿ ಕಂಡಪ್ಪಗ ಮಾತ್ನಾಡುದು ಅಬ್ಬೆ ಭಾಷೆಲ್ಲಿಯೇ(ತಾಯ್ನುಡಿ) ಅಲ್ಲದೊ? ಹೀಂಗೆ ಮಾತುಕತೆಗಳ ಸಂವಹನಲ್ಲಿ ಆಡುನುಡಿ(ಅಬ್ಬೆ ಭಾಷೆ) ಮುಖ್ಯ ಪಾತ್ರವ ವಹಿಸಿದ್ದು.
ಆಡುನುಡಿ ( ಮಾತ್ನಾಡುವ ಭಾಷೆ) ನಮ್ಮ ಬದುಕಿನ ಸರ್ವಸ್ವ. ಅಬ್ಬೆ ಭಾಷೆಲಿ ಶಿಕ್ಷಣ ಪಡೆಯೆಕ್ಕು.‘ಬೇರೆ ಭಾಷೆಯ ಮುಖಾಂತ್ರ ಶಿಕ್ಷಣ ಪಡದರೆ ಅದು ನಮ್ಮ ನಾವೇ ಕೊಂದ ಹಾಂಗೆ’ ಹೇಳಿ ಮಹಾತ್ಮಾ ಗಾಂಧೀಜಿ ಹೇಳಿದ್ದವು. ಹೇಳಿರೆ,ಆಡುನುಡಿಲ್ಲಿ ಕಲ್ತರೆ ಸರಿಯಾಗಿ ಪಾಠಂಗಳ ಗ್ರೇಶುಲೆ ಸುಲಭ ಸಹಜ. ಜಪಾನ್, ಚೀನಾ ಮೊದಲಾದ ದೇಶಂಗಳಲ್ಲಿ ಆಡುನುಡಿಲೇ ಪಾಠ ಮಾಡುದಡ. ಆ ದೇಶಂಗೊ ಒಳ್ಳೇತ ಅಭಿವೃದ್ಧಿ ಆಗಿ ಅಲ್ಯಾಣ ಭಾಷೆ, ಸಾಹಿತ್ಯಂಗಳೂ ಬೆಳಕ್ಕೊಂಡು ಬೈಂದು. ಹಾಂಗೆ ಹೇಳಿ ನಾವು ಇಂಗ್ಳೀಶು ಭಾಷೆ ಹಾಂಗೆ ಬೇರೆ ಭಾಷೆಗಳ ಕಲಿವಲಾಗ ಹೇಳಿ ಇಲ್ಲೆ. ಇಂಗ್ಳೀಶು ಒಂದು ಅಂತಾರಾಷ್ಟೀಯ ಭಾಷೆ ಆಗಿದ್ದು. ಅದನ್ನೂ ಸರಿಯಾಗಿ ಕಲಿಯೆಕ್ಕು.ಆದರೆ ನಾವು ಒಂದೇ ಭಾಷೆ ಮಾತ್ನಾಡುವವು ಒಟ್ಟಪ್ಪಗ, ಸುಖದುಃಖಂಗಳ ಹೇಳುವಗ ಆಡುನುಡಿಯ ನಾವು ಒಳುಶಿರೆ ಮಾತ್ನಾಡಿರೆ ಬೇರೆ ಭಾಷೆಗಳ ಕಲಿವಲೂ ಸುಲಭ ಆವುತ್ತು. ಅವರವರ ಭಾಷೆಲ್ಲಿ ಉದಾಹರಣೆ ಕೊಡುತ್ತರೆ, ಹವಿಕರು ಹವಿಗನ್ನಡಲ್ಲಿ, ಶಿವಳ್ಳೀ ಬ್ರಾಹ್ಮಣರು ಶಿವಳ್ಳಿ ತುಳುವಿಲ್ಲಿ, ಕೊಂಕಣಿಗೊ ಕೊಂಕಣಿಲ್ಲಿ, ಮಲೆಯಾಳಿಗೊ ಮಲೆಯಾಳಲ್ಲಿ ಎಷ್ಟು ಚೊಕ್ಕಕ್ಕೆ ಸಹಜವಾಗಿ ಕೃತಕತೆ ಇಲ್ಲದ್ದೆ ನೆಗೆ ಮಾಡ್ಯೊಂಡು ಮಾತ್ನಾಡ್ತವು.! ಇದರೆಲ್ಲ ಗಮನಿಸಿರೆ ಸಂವಹನಲ್ಲಿ ಅಬ್ಬೆಭಾಷೆ( ಆಡುನುಡಿ) ಎಷ್ಟು ಮುಖ್ಯ ಹೇಳಿ ಗೊಂತಾವುತ್ತು.
ಆಡುನುಡಿಲ್ಲಿ ಕೆಲವು ವ್ಯೆತ್ಯಾಸಂಗೊ ಕಂಡು ಬತ್ತು. ಉದಾಹರಣೆಗೆ ಹವಿಗನ್ನಡಲ್ಲಿ ಕುಂಬಳೆ ಸೀಮೆ, ಸುಳ್ಯ ಪಂಜ ಸೀಮೆ, ಕೊಡೆಯಾಲ, ಪುತ್ತೂರು, ಉತ್ತರಕನ್ನಡ ಜಿಲ್ಲೆಲ್ಲಿ ಮಾತ್ನಾಡ್ತದು, ಆದರೂ ಅಲ್ಪಸ್ವಲ್ಪ ರಜ ರಜ ವ್ಯೆತ್ಯಾಸ ಕಾಣ್ತು. ಇದು ಸಹಜವೆ. ಹಾಂಗೆ ಕನ್ನಡಲ್ಲಿ ಮೈಸೂರು, ಬೆಂಗಳೂರು, ಧಾರವಾಡ, ಕೊಡೆಯಾಲ ಹೇಳಿ ವ್ಯೆತ್ಯಾಸಂಗೊ ಇದ್ದು. ಹಾಂಗೆ ಅಂತಾರಾಷ್ಟ್ರೀಯ ಭಾಷೆ ಆಗಿಪ್ಪ ಇಂಗ್ಳೀಶಿಲ್ಲೂ ಇಂಗ್ಳೇಂಡು, ಅಮೇರಿಕ, ಭಾರತಲ್ಲಿ ಮಾತ್ನಾಡುವ ಭಾಷೆಲ್ಲಿ, ಉಚ್ಛಾರಲ್ಲಿ ತುಂಬ ಭೇದಂಗೊ ಕಂಡು ಬತ್ತು. ಆದರೆ ಸಂವಹನ ಭಾಷೆಲ್ಲಿ ರಜರಜ ವ್ಯೆತ್ಯಾಸ ಕಂಡರೂ ಅರ್ಥ ಮಾಡ್ಲೆ ಅಷ್ಟು ಕಷ್ಟ ಇಲ್ಲೆ.
ಒಂದು ಆಡು ಭಾಷೆ ಮಾತ್ನಾಡುವವು ಇದ್ದರೆ ಆ ಭಾಷೆ ಪ್ರತಿನಿತ್ಯ ಹರ್ಕೊಂಡು ಹೋಪ ಹೊಳೆ ನೀರಿನ ಹಾಂಗೆ. ಆಡು ಭಾಷೆಯ ಉಪಯೋಗ್ಸುವವು ಕಡಮ್ಮೆ ಆವುತ್ತಾ ಹೋದರೆ ಅಥವಾ ಉಪಯೋಗ್ಸದ್ದೆ ಇದ್ದರೆ ಆ ಭಾಷೆ ನಿಂದ ನೀರಕ್ಕು, ಬತ್ತುಗು. ಹಾಂಗೆ ಹೇಳಿ ನಾವು ಮಾತ್ನಾಡುವಾಗ ಸಂದರ್ಭಕ್ಕೆ ತಕ್ಕ ಹಾಂಗೆ ಬೇರೆ ಭಾಷೆಲ್ಲಿ ಮಾತ್ನಾಡುಲೆ ಆಗ ಹೇಳಿ ಇಲ್ಲೆ. ಹೀಂಗೆ ನಾವು ಗ್ರೇಶುಲೂ ಆಗ. ನಾವು ಆಡುನುಡಿಲಿ ಮಾತ್ನಾಡುವಗ, ಉದಾಹರಣೆಗೆ ಹವಿಗನ್ನಡ, ಕನ್ನಡಲ್ಲಿ ಕಂಡಾಬಟ್ಟೆ ಅನಗತ್ಯ ಇಂಗ್ಳೀಶು ಶಬ್ದ0ಗಳ ಉಪಯೋಗ್ಸುದು ಈಗೀಗ ಕಂಡು ಬತ್ತು. ಇದರಿಂದ ನಮ್ಮ ಆಡುನುಡಿಯ ಚೆಂದ ಹಾಳಾಗಿ ಕ್ರಮೇಣ ನಮ್ಮ ಭಾಷೆ ಬತ್ತದ ತೋಡಿನ ಹಾಂಗೆ ಅಕ್ಕು.
ಅಡುನುಡಿ ನಮ್ಮ ನೆತ್ತರಿಲ್ಲಿ ಉಸಿಲಿಲ್ಲಿಯೂ ಇದ್ದು. ಮಕ್ಕೊ ಹುಟ್ಟಿ ಒಂದು ವರಿಶದೊಳ ಅಮ್ಮ,ಅಬ್ಬೆ, ಅಪ್ಪ°, ಬೇಕು, ಬೇಡ ಹೇಳುಲೆ ಹೆರಿಯರಿಂದ ಬಳುವಳಿಯಾಗಿ ಸಹಜವಾಗಿ ಕಲಿತ್ತವು. ಆ ಶಬ್ಧಂಗೊ ‘ಬಾಲಭಾಷೆ’ಲ್ಲಿರ್ತು. ಅದರ ಕೇಳುಲೆ ಚೆಂದ. ಇಂದು ನಮ್ಮ ಕನ್ನಡ,ಹವಿಗನ್ನಡ ಹಾಂಗೆ ಬೇರೆ ಭಾಷೆಗಳ ದೇಸಿ ಶಬ್ದ0ಗಳಾದ ಅಮ್ಮ,ಅಪ್ಪ°,ಮಾವ°, ಚಿಕ್ಕಪ್ಪ, ದೊಡ್ಡಪ್ಪ°, ಅತ್ತೆ ಶಬ್ಧಂಗೊ ಮಾಯ ಆಗಿ ಬದಲಿಂಗೆ ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ ಶಬ್ಧಂಗೊ ಬಳಕೆಗೆ ಬೈಂದು. ನಮ್ಮಹವಿಕರ ಆಡುಮಾತಿಲ್ಲಿಪ್ಪ ದೇವರೊಳ, ಅಟ್ಟುಂಬೊಳ, ಬೆಶ್ನೀರಕೊಟ್ಟಗೆ, ಕೊಟ್ಟಗೆ, ಕೈಸಾಲೆ, ಅಶನ, ಹೆಜ್ಜೆ ಮದಲಾದ ಶಬ್ಧಂಗಳ ಬದಲಿಂಗೆ ಇಂಗ್ಳೀಶಿನ ಪ್ರೇಯರ್ ರೂಮ್, ಕಿಚನ್, ಬಾತ್ ರೂಂ, ಶೆಡ್,ಹಾಲ್, ರೈಸ್ ಶಬ್ದ0ಗೊ ಹೊಕ್ಕು ಆಯಿದು. ಚೆಂಡಿ ಹರ್ಕು, ನೀರುಡೆ ಶಬ್ಧದ ಬದಲಿಂಗೆ ಬಾತ್ ಟವೆಲ್ ಹೇಳ್ತವು. ಹೀಂಗೆ ಹವಿಕರ ಮಾತ್ರ ಅಲ್ಲ, ಎಲ್ಲರ ಆಡುಮಾತಿಲ್ಲಿ ಇಂಗ್ಳೀಶು ಶಬ್ಧಂಗೊ ಕಲಬೆರಕೆ ಆವ್ತಾ ಇದ್ದು.ಇಂಗ್ಳೀಶಿನ ಹಾಂಗೆ ಬೇರೆ ಶಬ್ದ0ಗಳ (ಭಾಷೆಗಳ) ಉಪಯೋಗ್ಸಲೆ ಆಗಲೇ ಆಗ ಹೇಳಿ ಇಲ್ಲೆ. ಆದರೆ ಅನಗತ್ಯ ಉಪಯೋಗ್ಸಿದರೆ ನಮ್ಮ ಭಾಷೆಯ ಮೂಲ ಚೌಕಟ್ಟೇ ಲಗಾಡಿ ಕುಟ್ಟ ಎದ್ದು ಹೋಕು. ನಮ್ಮ ಕನ್ನಡ, ಹವಿಗನ್ನಡ ಆಡುನುಡಿಲ್ಲಿ ಉಪಯೋಗ್ಸುವ ಸೋದರತ್ತೆ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪ°, ಅಪ್ಪಚ್ಚಿ,(ಚಿಕ್ಕಪ್ಪ) ಇದಕ್ಕೆಲ್ಲ ಇಂಗ್ಳೀಶಿಲಿ ಎರಡೇ ಶಬ್ದ0ಗೊ. : ಆಂಟಿ,ಅಂಕಲ್. ನೋಡಿ, ಗಮನಿಸಿ. ನಮ್ಮ ಆಡುನುಡಿ ಎಷ್ಟು ಶ್ರೀಮಂತ ಹೇಳಿ !ಅಂಬಗ ನಾವು ಸರಿಯಾಗಿ ಯೋಚಿಸಿರೆ ಅಬ್ಬೆ ಭಾಷೆ ಆಡುನುಡಿಲ್ಲಿ ಎಷ್ಟೆಲ್ಲ ವಿಧವಿಧದ ಶಬ್ಧಂಗೊ ಇದ್ದು ಹೇಳಿ ಗೊಂತಕ್ಕು,ಅರಡಿಗು !
ಸಂವಹನ ಹೇಳಿರೆ ನಾವು ಒಂದು ಗುಂಪಿನವು, ಸಮಾಜದ ಬಂಧುಬಳಗದವು ಮಾತ್ನಾಡುವ ದೇಸಿ ಭಾಷೆ ಒಳಿಯೆಕ್ಕಾರೆ ಬೆಳೆಯೆಕ್ಕಾರೆ ಅದರಲ್ಲೇ ನಾವು ವ್ಯವಹರುಸೆಕ್ಕು, ಮಾತಾಡೆಕ್ಕು. ನಮ್ಮ ಸಂಸ್ಕೃತಿ, ಸಾಹಿತ್ಯ, ಜನಪದ ರಚನೆ ಹೆಚ್ಚೆಕ್ಕಾರೆ ನಾವು ಏವತ್ತೂ ಸಂವಹನ ಮಾಡುವಗ ನಮ್ಮ ಭಾಷೆಯ ಮಾತ್ರ ಉಪಯೋಗ್ಸೆಕ್ಕು. ಭೂತ ಕಟ್ಟುವವು ತುಳು, ಮಲೆಯಾಳಲ್ಲಿ ಪದ್ಯಂಗಳ ತಂಬರೆ ಬಡಿತ್ತಾ ಹಾಡ್ತವು. ಭೂತಂಗೊ ತುಳುವಿಲ್ಲಿ ಮಲೆಯಾಳಲ್ಲಿ ಮಾತಾಡ್ತವು. ಒಂದು ಭಾಷೆ ಒಳುದು ಬೆಳೆಯೆಕ್ಕಾರೆ ಬರೀ ಕೃತಿ ರಚನೆ ಆದರೆ ಸಾಲ. ಭಾಷೆಯ ನಿತ್ಯ ನಾವು ಉಪಯೋಗ್ಸೆಕ್ಕು. ನಮ್ಮ ಭಾಷೆಯ ಮಾತಾಡ್ಲೆ ನಾವು ನಾಚಿಕೆ ಪಡ್ಲಾಗ, ಕೀಳರಿಮೆ ಇಪ್ಪಲಾಗ.
ಆಡುನುಡಿ ಎಷ್ಟು ಮುಖ್ಯವಾದ್ದು ಹೇಳಿರೆ ಇದಕ್ಕೆ ಸಮರ್ಥನೆಯಾಗಿ ಕೆಲವು ಹೆಸರು ಮಾಡಿದ ಕವಿ, ಸಾಹಿತಿಗಳ ಹೆಸರು ಹೇಳೆಕ್ಕು. ಉದಾ: ದಿ| ಕೆ. ಪರಮೇಶ್ವರ ಭಟ್ ಬಾಳಿಲ ಇವು ಮಾಸ್ಟ್ರ ಕೆಲಸ ಮಾಡ್ಯೊಂಡು ಮಕ್ಕಳ ಸಾಹಿತ್ಯ ರಚಿಸಿ ಹೆಸರಾಯಿದವು. ಇವು ‘ಧರ್ಮವಿಜಯ’ ಹೆಸರಿಲಿ ಮಹಾಭಾರತ ಕತೆಯ ಹವಿಗನ್ನಡಲ್ಲಿ ಬರದು ಹೆಸರು ಪಡದ್ದವು. ಹಾಂಗೇ ‘ಕಿಟ್ಟಣ್ಣನ ಪ್ರೀತಿ’ ಕೃತಿಯ ಹವಿಗನ್ನಡಲ್ಲಿ ಬರದ್ದವು. ಹಾಂಗೇ ಕುವೆಂಪು, ಬೇಂದ್ರೆ, ಕಾರಂತ , ಪು.ತಿ,ನ.ಮುಂತಾದ ಸಾಹಿತಿಗೊ,ಕವಿಗೊ ಆಡುನುಡಿ ಕನ್ನಡಲ್ಲಿ ಕೃತಿಗಳ ಬರದು ಶಾಶ್ವತ ಹೆಸರು ಪಡದ್ದವು.
‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ’ಹೇಳಿರೆ ಹೆತ್ತಬ್ಬೆ, ಹೊತ್ತ ನಾಡು ಸ್ವರ್ಗಕ್ಕಿಂತ ಹೆಚ್ಚು ಹೇಳಿ ಅರ್ಥ. ಹಾಂಗೆಯೇ ನಮ್ಮ ಆಡುನುಡಿ (ಅಬ್ಬೆ ಭಾಷೆ) ನವಗೆ ಸ್ವರ್ಗ ಸಮಾನ, ಆಡುನುಡಿ(ಅಬ್ಬೆ ಭಾಷೆ). ಹುಬ್ಬೆಯ ಮಳೆ ಭೂಮಿಗೆ, ಶಿಶುವಿಂಗೆ ಅಬ್ಬೆಯ ಹಾಲಿನ ಹಾಂಗೆ ಹೇಳುವ ಮಾತಿದ್ದು. ಪರ ಊರಿಲ್ಲಿ, ದೇಶಲ್ಲಿ ಒಂದೇ ಭಾಷೆಯ ಮಾತ್ನಾಡುವವು ಸಿಕ್ಕಿಯಪ್ಪಗ ಮಾತಾಡುದು ಅದೇ ಭಾಷೆಲ್ಲಿ. ಅದು ಅಮೃತ ಸಮಾನ. ಕನ್ನಡ ಮಾತ್ನಾಡುವವು ಎಷ್ಟೇ ಇಂಗ್ಳೀಶಿನ ನೀರು ಕುಡುದ ಹಾಂಗೆ ಕಲ್ತರೂ ಬೇನೆ ಅಪ್ಪಗ ಹೇಳುದು ‘ಅಯ್ಯೋ ದೇವರೆ’ ಹೇಳಿ. ಹೀಂಗೆ ಆಡುನುಡಿ ಅಷ್ಟು ಸರಳ ಸಹಜವಾದ್ದು. ‘ಹೆತ್ತವಕ್ಕೆ ಹೆಗ್ಗಣ ಮುದ್ದು’ ಹೇಳ್ತ ಗಾದೆಯ ಹಾಂಗೆ ಅವರವರ ಆಡುನುಡಿ, ಅಬ್ಬೆ ಭಾಷೆ ಮಹತ್ವವಾದ್ದು, ಕೆಮಿಗೆ ಕೇಳ್ಲೆ ಸಂಗೀತದ ಹಾಂಗೆ !
ತುಂಬ ಸಹಜವಾಗಿ ನಮ್ಮ ಒಳಮನಸ್ಸಿನ ಬಿಡಿಸಿ ಭಾವನೆಗಳ, ಅಭಿಪ್ರಾಯಂಗಳ ಚಂದಕ್ಕೆ ಹೇಳುಲೆ ಆಡುನುಡಿಗಿಪ್ಪಷ್ಟು ಶಗ್ತಿ ಬೇರೆ ಭಾಷೆಗೆ ಖಂಡಿತಾ ಇಲ್ಲೆ. ಆರೇ ಇರಲಿ, ಬೇರೆ ಭಾಷೆಲಿ ಮಾತಾಡುವಗ ಸಹಜತೆ ಕಮ್ಮಿ. ಹೀಂಗೆ ಆಡುನುಡಿ,ಅಬ್ಬೆಭಾಷೆ, ಆಡುಗರ ಜೀವದ ಉಸುಲಿನ ಹಾಂಗೆ. ಬೇರೆ ಭಾಷೆ ಕೃತಕವಾಗಿ ಉಸುಲು ತೆಕ್ಕೊಂಡು ಬಿಟ್ಟ ಹಾಂಗೆ. ಬೇರೆ ಭಾಷೆಯ ಮಾತ್ನಾಡುವವ್ವು ಇದ್ದರೆ ಮಾತ್ರ ಆ ಭಾಷೆ ಒಳಿಗು, ಬೆಳೆತ್ತು. ಒಂದು ಭಾಷೆಯ ಮಾತ್ನಾಡುವವು ತುಂಬ ಕಮ್ಮಿಯಾಗ್ಯೊಂಡು, ಕೃತಿಗೊ ಮಾತ್ರ ಒಳುದರೆ ಆ ಭಾಷೆ ಮೃತ(ಸತ್ತ) ಭಾಷೆ ಅಕ್ಕು. ಉದಾ: ಸಂಸ್ಕೃತ, ಪಾಲಿ, ಮಾಗಧಿ, ಪ್ರಾಕೃತ, ಲ್ಯಾಟಿನ್ ಇತ್ಯಾದಿ. ನಾವು ನಮ್ಮ ಅಡುನುಡಿಲ್ಲಿ ಸಹಜವಾಗಿ ‘ಮಾತ್ನಾಡುವೊ°, ಚರ್ಚೆ ಮಾಡುವೊ°, ಬೆರವೊ°, ಬೇಜಾರವ ಮರತ್ತು ನೆಗೆ ಮಾತ್ನಾಡುವೊ°. ಹೆತ್ತಬ್ಬೆಯ ಹೇಂಗೆ ಮರವಲೆಡಿಯದೊ ಹಾಂಗೆ ನಮ್ಮ ನಮ್ಮ ಆಡುನುಡಿ ಗುಡಿಯ ಕಟ್ಟುವೊ°, ಒಳುಶುವೊ°, ಬೆಳೆಶುವೊ°.
~~~<>~~~

6 thoughts on “ಸಂವಹನಲ್ಲಿ ಆಡುನುಡಿಯ ಮಹತ್ವ ವಿಷು ಸ್ಪರ್ಧೆ 2015- ಪ್ರಬ೦ಧ ಸ್ಪರ್ಧೆ ಪ್ರಥಮ

  1. ಹೆತ್ತವಕ್ಕೆ ಹೆಗ್ಗಣ ಮುದ್ದು ನವಗೆ ನಮ್ಮ ಭಾಷೆ ಮುದ್ದು . ಗಂಭೀರ ಪ್ರಬಂಧಕ್ಕೆ , ಬಹುಮಾನಕ್ಕೆ ಅಭಿನಂದನೆಗೊ

  2. ನಮ್ಮ ಮನೆಲಿ ದಿನನಿತ್ಯ ಬಳಸುವ ಪದಂಗಳ ಒಳುಶುವ ಮೂಲ ಕರ್ತವ್ಯ ನಮ್ಮದು . ಒಳ್ಳೆ ನುಡಿಗಟ್ಟುಗಳ ಬಳಸಿ ಬರದ ತೂಕದ ಪ್ರಬ೦ಧಕ್ಕೆ ಧನ್ಯವಾದ . ಗುಣಾಜೆ ಮಾವಂಗೆ ಅಭಿನಂದನೆಗೋ . ನಿಂಗಳ ಸಾಹಿತ್ಯ ಕೃಷಿ ಬೆಳೆಯಲಿ .

  3. ಪ್ರಬಂಧ ಲಾಯಕಾಯಿದು. ನಮ್ಮ ಆಡುನುಡಿಯ ಬಳಸಿ ಬೆಳಸುವೊ. ಪ್ರಥಮ ಬಹುಮಾನ ಬಾಚಿಯೊಂಡ ಗುಣಾಜೆ ಅಣ್ಣಂಗೆ ಅಭಿನಂದನೆಗೊ.

  4. ಎನ್ನ ಬರಹವ ಮೆಚ್ಚಿದ ತೆಕ್ಕುಂಜೆ ಭಾವಂಗೂ , ವಿಜಯಕ್ಕಂಗೆ ಆಭಾರಿ
    – ಗುಣಾಜೆ ರಾಮಚಂದ್ರ ಭಟ್

  5. ವಿಷಯ ಮಂಡನೆ, ಭಾಷೆ ಎಲ್ಲ ಚೊಕ್ಕ ಆಯಿದು. ಗುಣಾಜೆ ಮಾಷ್ಟ್ರಿಂಗೆ ಅಭಿನಂದನೆಗೊ.

  6. ಪ್ರಬಂಧ ಒಳ್ಳೆದಾಯಿದು. ಸಂದರ್ಭೋಚಿತ ಗಾದೆ,ವಿವರಣೆ ಇದ್ದುಗೊಂಡು ತೂಕ ಇದ್ದು . ಗುಣಾಜೆ ಮಾಸ್ಟ್ರಿಂಗೆ ಅಭಿನಂದನೆಗೊ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×