ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ

May 3, 2012 ರ 10:01 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಏರ್ಪಾಡು ಮಾಡಿದ “ವಿಷು ವಿಶೇಷ ಸ್ಪರ್ಧೆ-2012” ರ ಪ್ರಬಂಧ ವಿಭಾಗಲ್ಲಿ ಪ್ರಥಮ ಬಹುಮಾನ ಸಿಕ್ಕಿದ ಬರಹ.
ಪ್ರಬಂಧದ ಲೇಖಕಿ ವಿಜಯಾ ಸುಬ್ರಹ್ಮಣ್ಯ, ಕುಂಬಳೆ.

ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ

ಪರಮ ಪಾವನವಾದ ಭಾರತ ದೇಶದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೇರಳ, ಕಾಸರಗೋಡು ಜಿಲ್ಲೆ ಒಳ ಇಪ್ಪ ಆಡು ಭಾಷೆಗಳಲ್ಲಿ ಹವ್ಯಕ ಭಾಷೆಯೂ ಒಂದು.
ಹವ್ಯಕರ ಸಂಸ್ಕೃತಿ ಸಂಪ್ರದಾಯವೂ ಹಬ್ಬಂಗಳೂ ವಿಶೇಷ. ಈ ನಿಟ್ಟಿಲ್ಲಿ  ಯುಗಾದಿ ಅತ್ಯಂತ ವಿಶೇಷ. ಯುಗಾದಿಯ ಭಾರತದೆಲ್ಲೆಡೆ ಆಚರಿಸುತ್ತವಾದರೂ ಹವ್ಯಕರಲ್ಲಿ ಅದೊಂದು ವಿವಿಧತೆ.

ಲೇಖಕಿ, ವಿಜಯಾ ಸುಬ್ರಹ್ಮಣ್ಯ

ಯುಗದ ಆದಿಯೇ ಯುಗಾದಿ.
ಪುರಾಣೇತಿಹಾಸಕಾರರ ಹೇಳಿಕೆಯೂ ಯುಗ ಬದಲಿದ ದಿನವೇ ಯುಗಾದಿ.  ಈ “ಯುಗಾದಿ” ಅಥವಾ “ವಿಷು” ಹೇಳುವ ವಿಶೇಷ ಹಬ್ಬದಾಚರಣೆ ಹವ್ಯಕ ಪರಂಪರೆಯ ವಿಶಿಷ್ಟ ಕೊಡುಗೆ.
“ವಿಷುವ”
ಹೇಳ್ತ ಮೂಲ ಶಬ್ಧ “ವಿಷು”  ಹೇಳಿ ಆತಡ. “ವಿಷವ” ಹೇಳಿರೆ, ಹಗಲು-ಇರುಳು ಒಂದೇ ರೀತಿ (ಒಂದೇ ಸಮಯ) ಇಪ್ಪ ದಿನ.
ಇದಕ್ಕೆ ಸಂಸ್ಕೃತಲ್ಲಿ ಒಂದು ವಾಕ್ಯ ಸಮರಾತ್ರಿಂ ದಿವೇ ಕಾಲೇ ವಿಷುವದ್ ವಿಷುವಂ ತತ್| ಹೇಳಿ ಇದ್ದು.
ಯುಗಾದಿಲಿ ಎರಡು ವಿಧ. ಒಂದು ಚಾಂದ್ರಮಾನ ಇನ್ನೊಂದು ಸೌರಮಾನ. ಈ ಸೌರಮಾನ ಯುಗಾದಿಯೇ “ವಿಷು”.

ವಸಂತ ಋತುವಿನ ಮದಲಾಣ ಹಬ್ಬ.
ಚಿಗುರೆಲೆ, ಫಲ ಪುಷ್ಪ, ಕೋಗಿಲೆ ಗಾನ ಹೀಂಗೆ ಪ್ರಕೃತಿಗೆ ಮದಿಮ್ಮಾಳಿನ ಮೆರುಗು. ಹೊಸತನ-ಹೊಸ ಹುರುಪು-ಜೀವನೋತ್ಸಾಹ ಈ ಕಾಲಲ್ಲಿ ಉಂಟಾವುತ್ತ ಕಾರಣವೇ ನವ ದಂಪತಿಗೊಕ್ಕೆ ಈ ಹಬ್ಬಲ್ಲಿ ಪ್ರಾಧಾನ್ಯತೆ

ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ | ಹೇಳಿ ಸಂಸ್ಕೃತಲ್ಲಿ ಒಂದು ನುಡಿಗಟ್ಟೂ ಇದ್ದು.
ವಸಂತ ಕಾಲ ಬಂದಪ್ಪಗ ಕಾಕೆ ಏವದು ಕೋಗಿಲೆ ಏವದು ಹೇಳಿ ಗೊಂತಕ್ಕು.
ಹೇಳಿರೆ, ಕಾಲ ಬಂದಪ್ಪಗ ಅವರವರ ನಿಜ ಬಣ್ಣ ಗೊಂತಕ್ಕು ಹೇಳ್ತ ತತ್ವವೂ ಇದರಲ್ಲಿ ಅಡಗಿದ್ದು. ಈಗಿನ ಎರಡು ರೀತಿಯ ಯುಗಾದಿಗಳ ತೋರಮಟ್ಟಿಂಗೆ ನೋಡುವೊ°

ಚಾಂದ್ರಮಾನ ಯುಗಾದಿ:
ಇದು ಉತ್ತರ ಕನ್ನಡ ಪ್ರದೇಶಲ್ಲಿ ಜಾಸ್ತಿ ಆಚರಣೆ.
ಚಂದ್ರನ ಬೆಣ್ಚಿಗೆ, ಚಲನೆಗೆ ಸೂರ್ಯನೇ ಆಧಾರ ಹೇಳಿಯೊಂಡು ಚಾಂದ್ರಮಾನ ಯುಗಾದಿ ಸುರುಮಾಡಿದವು ನಮ್ಮ ಪೂರ್ವಜರು.
ಅಂದೇ ಹೊಸ ಸಂವತ್ಸರ, ಹೊಸ ಪಂಚಾಂಗ ಆರಂಭ. ಶಾಲಿವಾಹನ “ಶಕೆ” ಯೂ ಅಂದೇ ಸುರು ಅಪ್ಪದು. ಇದು ಚೈತ್ರಮಾಸದ ಶುಕ್ಲ ಪಕ್ಷದ ಪಾಡ್ಯ ದಿನ ಆವುತ್ತು.

ಚೈತ್ರಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇ ಹನಿ|
ಶುಕ್ಲ ಪಕ್ಷೇ ಸಮಗ್ರಂತು ತದಾ ಸೂರ್ಯೋದಯೇ ಸತಿ||

ಇದು ಸಂಸ್ಕೃತ ಶ್ಲೋಕ. ಚೈತ್ರ ಮಾಸದ ಸುರುವಾಣ ಸೂರ್ಯೋದಯ ಅಪ್ಪಾಗ ಚತುರ್ಮುಖ ಬ್ರಹ್ಮನೂ ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನಡ.

ಮಂಗಳ ಸ್ನಾನ, ಹೊಸ ವಸ್ತ್ರ ಧಾರಣೆ, ಮನೆ ಮುಂದೆ ತಳಿರು ತೋರಣ, ರಂಗೋಲಿ ವೈವಿಧ್ಯ, ಬೇವು-ಬೆಲ್ಲ ತಿಂಬದು, ಪಂಚಾಂಗ ಶ್ರವಣ, ವಿಶೇಷ ಸಿಹಿ ಅಡುಗೆಲ್ಲ ಇಂದ್ರಾಣ ವಿಶೇಷ, ಕಷ್ಟ-ಸುಖಂಗಳ ಒಂದೇ ಸಮನಾಗಿ ಸ್ವೀಕರಿಸೆಕ್ಕು ಹೇಳುವ ತತ್ವವೇ ಬೇವು-ಬೆಲ್ಲ ತಿಂಬ ಉದ್ದೇಶ.
ಇವಿಷ್ಟು ಪ್ರತಿ ವರ್ಷದ ಸಂಪ್ರದಾಯ ಆದರೆ ಇದಕ್ಕೂ ಹೊರತಾಗಿ ಹೊಸ “ಮದುವೆ ಮಕ್ಕಳ” (ನವದಂಪತಿ) ಕರೆಸಿ ಸಮ್ಮಾನ ಮಾಡಿ ಉಡುಗೊರೆ ಕೊಡ್ತವು. ಯುಗಾದಿಗೆ ಮನೆ ಮಂದಿ ದೂರ ಇದ್ದವೆಲ್ಲ ಒಟ್ಟು ಸೇರಿ ಹಬ್ಬದೂಟ ಉಂಬದು ಎಲ್ಲ ಮನೆಗಳಲ್ಲೂ ಇದ್ದು.

ಸೌರಮಾನ ಯುಗಾದಿ:
ಇದು ದಕ್ಷಿಣ ಕನ್ನಡ, ಕೇರಳ, ಕಾಸರಗೋಡು ಜಿಲ್ಲೆಲಿ ಆಚರಣೆ ಜಾಸ್ತಿ.
ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡುವಾಗ ಮೇಷ ಸಂಕ್ರಮಣ. ಅರ್ಥಾತ್ ಸೌರಮಾನ ಯುಗಾದಿ ಅಥವಾ “ವಿಷು”.
ಭೂಮಿಲಿ ಅಪ್ಪ ಕಾಲ ಪರಿವರ್ತನಗೆ ಸೂರ್ಯನೇ ಕಾರಣ ಹೇಳಿ ಸೌರಮಾನ ತಿಂಗಳ ಲೆಕ್ಕ ಹಾಕಿ ಆಚರಣೆ.

ಹವ್ಯಕರು ಸೂರ್ಯೋಪಾಸಕರು. ಗಾಯತ್ರೀ ಮಂತ್ರ, ಸೂರ್ಯ ನಮಸ್ಕಾರ ಎಲ್ಲವೂ ಇದರ ಸಂಕೇತ.
ಮೇಷ ಸಂಕ್ರಮಣದ ಮಾರಣೆ ದಿನ “ವಿಷು ಕಣಿ”. ಹೊಸ ವರ್ಷದ ಹೊಸ ತಿಂಗಳ ಒಂದು “ಹೊದ್ದು” (ಇಂಗ್ಲಿಷ್ ತಿಂಗಳ ತಾರೀಕು ಇದ್ದ ಹಾಂಗೆ “ಹೊದ್ದು” ಹೇಳಿರೆ).

ವಿಷು ಕಣಿ :
ಕಣಿ ಹೇಳಿರೆ ಇಲ್ಲಿ ಶಕುನ. ಹೊಸ ವರ್ಷದ ಸುರುವಾಣ ದಿನ ಸುರುವಿನ ಗಳಿಗೆ ಪ್ರಥಮವಾಗಿ ಒಳ್ಳೆ ಶಕುನ ಆಯೆಕ್ಕು ಹೇಳಿ ಹಿಂದಿನ ಇರುಳೇ ಇದರ ಜೋಡಣೆ ಮಾಡಿ ಮಡುಗಿಯೊಂಬದು.
ಫಲವಸ್ತುಗಳ, ಸುವಸ್ತುಗಳ ಜೊತೆಲಿ ಅರಿಶಿಣ, ಕುಂಕುಮ, ಗಂಧಾಕ್ಷತೆ, ಎಲೆ-ಅಡಕ್ಕೆ, ನಗ-ನಾಣ್ಯ ಹೀಂಗೆ ಎಲ್ಲವನ್ನೂ ಒಪ್ಪ ಓರಣಲ್ಲಿ ಮಡಗಿಕ್ಕಿ ಮೇಲೆ ಶ್ರೀ ಗುರುಗಳ, ಮನೆ ದೇವರ ಫೋಟೋ ಮಡಗಿ ಒಳ್ಳೆ ಎಣ್ಣೆ ದೀಪ ಎಣ್ಣೆ-ನೆಣೆ ಮಾಡಿ ತಯಾರು ಮಾಡಿ ಮಡುಗೆಕ್ಕು.
ಮಾರಣೆ ದಿನ (ಕಣಿದಿನ) ಉದಿ ನಸ್ಕಿಂಗೇ ಎದ್ದು ಮನೆ ಹೆಮ್ಮಕ್ಕೊ ಮೋರೆ ತೊಳಕ್ಕೊಂಡು ಬಂದು ದೀಪ ಹೊತ್ತಿಸಿ ಶಂಖ ಊದೆಕ್ಕು.
ದೀಪದತ್ರೆ ಒಂದು ಹರಿವಾಣಲ್ಲಿ ಬೆಳ್ತಿಗೆ ಅಕ್ಕಿ ಅದರ ಮೇಲೆ ಸೊಲಿಯದ್ದ ತೆಂಗಿನಕಾಯಿ, ಕಾಯಿ ಮೇಲೆ ಸೇಡಿ ಬರೆ ಹಾಕಿಕ್ಕಿ ಒಂದೆರಡು  ಎಳೆ ಸಿಂಗಾರ ಅಥವಾ ಬಿಳಿ ಹೂಗು ಮಡಗಿರೆಕು.
ಇವಿಷ್ಟನ್ನು ಸಣ್ಣ ಮಕ್ಕಳಿಂದ  ತೊಡಗಿ ಮನೆಲಿ ಇದ್ದ ಎಲ್ಲರೂ ಹಲ್ಲು ತಿಕ್ಕಿ ಮೋರೆ ತೊಳಕ್ಕೊಂಡು  ಬಂದು ಮದಾಲು ನೋಡಿಕ್ಕಿ, ಹೆಮ್ಮಕ್ಕೊ ಅರಶಿಣ-ಕುಂಕುಮ, ಗಂಡು ಮಕ್ಕೊ ಗಂಧಾಕ್ಷತೆ ಹಾಕಿಯೊಂಡು ಹಿರಿಯವಕ್ಕೆ ನಮಸ್ಕಾರ ಮಾಡೆಕ್ಕು.
ಹಿರಿಯವು ಕಿರಿಯವಕ್ಕೆ ಆಶೀರ್ವಾದ ಮಾಡೆಕ್ಕು. ನಮಸ್ಕಾರ ಮಾಡುವ ಕ್ರಮ ಮಾಣಿಯಂಗೊ ಅಭಿವಾದನ  (ಹಿರಿಯರ ಬಲ ಕಾಲಿನ ತಮ್ಮ ಬಲದ ಕೈಲಿಯೂ ಎಡಕಾಲಿನ ಎಡ ಕೈಲಿಯೂ ಮುಟ್ಟಿ ಬಗ್ಗಿ ನಮಸ್ಕಾರ) ಮಾಡುವ ಕ್ರಮ. ಕೂಸುಗೊ ಹೊಡಾಡುವದು.

ಹಿಂದಿನ ಕಾಲಲ್ಲಿ ಒಕ್ಕಲುಗೊ, ಕೆಲಸದವು ಕಣಿ ತಪ್ಪದು ಹೇಳಿ ಇತ್ತು.
ಯಾವುದೇ ಫಲ ವಸ್ತುಗಳ ರೆಜ ತೆಕ್ಕೊಂಡು ಬಂದು ಜೆಗಿಲಿಲಿ ಮಡಗಿ ಮನೆಯವರೆಲ್ಲರಿಂಗೆ ನಮಸ್ಕಾರ ಮಾಡುವ ರೂಢಿ ಇತ್ತು. ಮುಂಡಾಂಗಿ ಒಲಿಯ ಹಸೆ ಮಾಡುವ ಹರಿಜನಂಗೊ ಹಸೆ ತಕ್ಕು.
ಅವು ಹೋಪಗ  ತೆಂಗಿನಕಾಯಿ, ಮಾಡಿದ ಉದ್ದಿನ ಕೊಟ್ಟಿಗೆ ಕೊಡುವದು. ಹಾಂಗಾಗಿ ಯಾವುದೇ ಕೃಷಿ ಮನೆತನಲ್ಲಿ ಉದ್ದಿನ ಕೊಟ್ಟಿಗೆ ವಿಷು ಹಬ್ಬಕ್ಕೆ ಹೇರಳವಾಗಿ ಮಾಡೆಕ್ಕಾವುತ್ತು.
ಸಂಕ್ರಮಣ ದಿನವೇ ಕಡೆ-ಕೊಡಿ ಕಟ್ಟಿದ ಬಾಳೆಲೆಲಿ ಕೊಟ್ಟಿಗೆ ಮಾಡಿ ಬೇಶಿ ಮಡುಗ್ಗು. ಅದಕ್ಕೆ ಕಾಯಿ ಹಾಲು ಅಥವಾ ಬಾಳೆ ಹಣ್ಣಿನ ರಸಾಯನ ಮಾಡುಗು. ಅಳಿಯ-ಮಗಳಿಂಗೆ ಸಮ್ಮಾನ ಇದ್ದರೆ ವಿಶೇಷ ಔತಣದೂಟ ಇಕ್ಕು. ಅವಕ್ಕೆ ಇಬ್ರಿಂಗೂ ಚಿನ್ನದ ಉಂಗಿಲು ಕೊಡುವ ಪದ್ಧತಿ ಇದ್ದು. ಬಡವರಾದರೆ ಸೀರೆ ವೇಷ್ಟಿ ಕೊಡುಗು.

ವಿಷು ಕಣಿ ದಿನ ಧನ-ಕನಕಾದಿಗಳ ಮನೆಂದ ಹೆರ ಕೊಡ್ಲಾಗ, ಒಳ ಮಡುಗೆಕ್ಕು ಅದೊಂದು ’ಪುಲುಸು’ ವರ್ಷಾರಂಭಲ್ಲಿ ಮಡಗುವಂತಾದ್ದು ಹವ್ಯಕರಲ್ಲಿ ಪಾರಂಪರಿಕ ನಂಬಿಕೆ ಇದ್ದು. ಆದರೆ ಉದ್ದಿನ ಕೊಟ್ಟಿಗೆ, ತೆಂಗಿನ ಕಾಯಿ, ಪಾಯಸ-ಭಕ್ಷ್ಯಂಗೊ ಕೊಡ್ತವು. ಗದ್ದೆ ಬೇಸಾಯ ಇದ್ದವು ವಿಷುಕಣಿ ದಿನ ನೇಗಿಲು ಹಾಕದ್ದೆ (ಹೂಡುವದು) ಇರವು. ಹೂಡ್ಲೆ ಅದೇ ಒಳ್ಳೆ ಮುಹೂರ್ತ. ವಿಷುವಿಂದ ಮತ್ತೆ ಮುಂಗಾರು ಮಳೆ ಏವಗಳೂ ಬಪ್ಪಲೆ ಸಾಧ್ಯತೆ ಇದ್ದು ಹೇಳಿ ಲೆಕ್ಕ. ಆಸ್ತಿ ಲೆಕಾಚಾರಂಗೊ, ಸಾಲಕೊಟ್ಟು, ತೆಗವ ವ್ಯವಹಾರಂಗೊಲ್ಲ ವಿಷುವಿನ ಗಡು.

ಆಚರಣೆಯ ಅಗತ್ಯ:

 1. “ಬೇರಿನ ಸವಿ ಬಾಳಿಲ್ಲಿ”- ನಮ್ಮ ಸಂಸ್ಕೃತಿ ಸಂಪ್ರದಾಯವೇ ನಮ್ಮ ತಾಯಿ ಬೇರು.
  ಯಾವುದೇ ಮರಕ್ಕೆ ತಾಯಿ ಬೇರಿನ ಆಧಾರ ತಪ್ಪಿದರೆ ಮರದ ಭವಿಷ್ಯ ಇಲ್ಲೆ. ಹಾಂಗಾಗಿ ಯುಗಾದಿ, ದೀಪಾವಳಿ, ಕೃಷ್ಣಾಷ್ಟಮಿ, ಚೌತಿ,ಶಿವರಾತ್ರಿ, ನವರಾತ್ರಿ ಮೊದಲಾದ ಹಬ್ಬಂಗೊ, ಅದರ ತತ್ವಂಗಳಲ್ಲಿ ನಮ್ಮ ಜೀವನದ ಅರ್ಥವೇ ಅಡಗಿದ್ದು ಹೇಳಿ ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗೊ ಅವರ ಆಶೀರ್ವಚನಲ್ಲಿ ಹೇಳುದು ಕೇಳಿದ್ದೆ.
  ಈ ರೀತಿ ಚಿಂತನೆ ಮಾಡುವಾಗ ನಮ್ಮ ಸಂಸ್ಕೃತಿಯೇ ನಮ್ಮ ಸಂಪತ್ತು ಹೇಳಿ ಅರ್ಥ ಆವುತ್ತು
 2. ಇಂತಹ ಆಚರಣೆಗೊ ಹಿರಿಯವರಿಂದ ಬೇಡುವ ಆಶೀರ್ವಾದ, ಕಿರಿಯವಕ್ಕೆ ಮಾಡುವ ಆಶೀರ್ವಾದಂಗೊ ನಮ್ಮ ಮಾನಸಿಕ ಸಮತೋಲನ ಕಾಪಾಡ್ಳೆ ಒಳ್ಳೆಯ ದಾರಿ.
 3. ಹಿರಿಯವು ತಮ್ಮ ಎರಡು ಅಂಗೈಗಳನ್ನೂ ಕಿರಿಯವರ ತಲೆಗೆ ಸ್ಪರ್ಶಿಸಿ ಆಶೀರ್ವದಿಸುವಾಗ, ಒಂದು ಶಕ್ತಿ ಸಂಚಾರ ಆಗಿ ಒಳ್ಳೆಯ ಬೆಳವಣಿಗೆ ಆವುತ್ತು.
 4. ಕಿರಿಯವು ಬಗ್ಗಿ ನಮಸ್ಕಾರ ಮಾಡುವಾಗ ಹಿರಿಯವರ ಹೃದಯಚಕ್ರಂದ, ಕೈಂದ ಹಾಂಗೂ ಕಣ್ಣಿಂದ ಒಂದು ಕಾಂತಿ ಸಂಚಾರ ಆಗಿ ಸೇರುತ್ತು. ಇದು ಕಿರಿಯರ ಪುರೋಭಿವೃದ್ಧಿಗೆ ಒಳ್ಳೆದು.
 5. ಈಗೀಗ ತರವಾಡು ಮನೆಲಿ ಒಬ್ಬನೇ ಕೃಷಿಕನಾಗಿ ಇರ್ತ. ಬಾಕಿ ಎಲ್ಲೋರೂ ದೂರದ ಪಟ್ಟಣಂಗಳಲ್ಲಿ ಉದ್ಯೋಗಲ್ಲಿರ್ತವು.
  ಅವಕ್ಕೆಲ್ಲ ಅವರವರ ಕೆಲಸಂದ ಹಬ್ಬದ ರಜೆಲಿ ಮನೆಗೆ ಬಂದು ಎಲ್ಲರೊಟ್ಟಿಂಗೆ ಸಾಮರಸ್ಯಲ್ಲಿ ಬೆರೆತ್ತ ಬಾಂಧವ್ಯ ಒಳಿತ್ತು. ಈಗಿನ ಮಕ್ಕೊಗೆ ನಮ್ಮ ಸಂಪ್ರದಾಯ ಆಚರಣೆ ಅರಡಿತ್ತು.
 6. “ಕಾಟುಕೋಳಿಗೆ ಸಂಕ್ರಾಂತಿ ಇದ್ದೋ?” ಹೇಳಿ ಹವ್ಯಕ ಭಾಷೆಲಿ ಒಂದು ಗಾದೆ.
  ಹೇಳಿರೆ ಹಬ್ಬ ಹರಿದಿನಂಗಳ ಆಚರಿಸದ್ರೆ ಜೀವನಕ್ಕೆ ಅರ್ಥ ಇಲ್ಲೆ (ಏಕಾದಶಿ ದಿನವ ಹರಿ ದಿನ ಹೇಳ್ತವು)
 7. ತಲೆ ತಲಾಂತರಂದಲೇ ಆಚರಿಸಿಯೊಂಡು ಬಪ್ಪ ಹಬ್ಬ-ಹರಿದಿನಂಗೊ, ಶುಭ ಕಾರ್ಯಂಗೊ, ಮದುವೆ, ಉಪನಯನಂಗೊ ಹೀಂಗಿದ್ದ ಹೆಳೆಲಿ ಎಲ್ಲರೂ ಸೇರುವಗ ಪರಸ್ಪರ ಕಷ್ಟ-ಸುಖಂಗಳ, ಕ್ಷೇಮ ಸಮಾಚಾರಂಗಳ ವಿನಿಮಯ ಮಾಡಿಗೊಂಡರೆ ಆಧ್ಯಾತ್ಮಿಕ ಭಾವ, ಮನಸ್ಸಿಂಗೆ ನೆಮ್ಮದಿ, ದೈವೀ ಕೃಪೆ ಸಿಕ್ಕುತ್ತು. ಈ ರೀತಿ ಅಚಲ ನಂಬಿಕೆ ಉಂಟಾವುತ್ತು.
 8. ಯುಗಾದಿ ದಿನ ಪಂಚಾಂಗ ಶ್ರವಣ ಮಾಡುವದರಿಂದ ವರ್ಷ ಪೂರ್ತಿ ಅವಕ್ಕವಕ್ಕೆ ಅನ್ವಯ ಅಪ್ಪ ವಿಶೇಷ ಫಲಾಫಲ ತಿಳ್ಕೊಂಬಲಕ್ಕು.
 9. ಧಾರ್ಮಿಕ ಮಹತ್ವವನ್ನೂ ಆರೋಗ್ಯದ ಗುಟ್ಟನ್ನು ಕಷ್ಟ ಸುಖಂಗೊ ಜೀವನಲ್ಲಿ ಬಪ್ಪದಿಪ್ಪದು ಹೇಳ್ತ ಸೂಚನೆಯೊಟ್ಟಿಂಗೆ  ಯುಗಾದಿ ಕೊಡುತ್ತು.
 10. ನವ ದಂಪತಿಗೊಕ್ಕೆ “ಯುಗಾದಿ-ವಿಷು” ಏಕೆ ವಿಶೇಷ ಕೇಳಿರೆ ಅವರಲ್ಲಿ ಮುಂದಿನ ಜೀವನಕ್ಕೆ  ನವ ಚೈತನ್ಯ, ಹೊಸತನ , ಸತ್ಸಂತಾನ ಉಂಟಾಯೆಕ್ಕು ಹೇಳ್ವ ತತ್ವ. ವಸಂತ ಋತು ಆ ರೀತಿಲಿ ಇದ್ದನ್ನೆ!
 11. ನೆಂಟರಿಷ್ಟರೊಟ್ಟಿಂಗೆ ಕುಟುಂಬದವರೊಟ್ಟಿಂಗೆ ಜನಜೀವನಕ್ಕಿದು ಬೆಸುಗೆ.
 12. ಹಿರಿಯರ ಕಾಲಲ್ಲಿ ಹಾಂಗಿದ್ದತ್ತಡ! ನಮ್ಮ ಕಾಲಲ್ಲಿ ಹೀಂಗೆ! ಎನ್ನ ಕಾಲ ಕಳುದ ಮತ್ತೆ ಹೇಂಗೊ! ಯಾವುದಕ್ಕೂ ಕಾಲ ಕೂಡಿ ಬರೆಕು ಹೇಳಿ ಹವ್ಯಕ ಭಾಷೆಲಿ ಒಂದು ಮಾತಿದ್ದು.
  ಅಂದರೆ ಕಾಲ ನಿಧಾನಂದ ವ್ಯತ್ಯಾಸ ಅಪ್ಪದು. ಕಾಲ ವೈಪರೀತ್ಯವೂ ಇದೇ ಅರ್ಥ. ಸಮಯ…….. ಉದಿ, ಕಸ್ತಲೆ ನಿಸ್ಚಿತ ಸಮಯಕ್ಕೆ ವ್ಯತ್ಯಾಸ ಅಪ್ಪದು.

ಹವ್ಯಕ ಭಾಷೆಯ ಉಳುಶಿ-ಬೆಳೆಶುಲೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ, ಕೆಲವು ಹವ್ಯಕ ಕಥಾ ಸ್ಪರ್ಧೆಗೊ ನೆಡೆತ್ತಾ ಬತ್ತು.
ಹೀಂಗೆ ಕಾಲ ಕೂಡಿ ಬಯಿಂದು ಹೇಳಿ ಸಂತೋಷ ತಯಿಂದು.
ಇದು ಇನ್ನೂ ಅಭಿವೃದ್ಧಿ ಆಗಲಿ.
ಇದರ ನೆಡೆಶುತ್ತವರ ಕನಸು “ನಂದನ” ಸಂವತ್ಸರಲ್ಲಿ ನನಸಾಗಲಿ ಹೇಳ್ತಾ ಸರ್ವರಿಂಗೂ ಶ್ರೀ ಗುರು ದೇವತಾನುಗ್ರಹ ಕೂಡಿ ಬರಲಿ ಹೇಳಿ ಹಾರೈಕೆ ಹೇಳ್ತೆ

|| ಹರೇ ರಾಮ||

~*~*~

ಲೇಖಕರ ವಿಳಾಸ:

 • ಶ್ರೀಮತಿ ವಿಜಯಾ ಸುಬ್ರಹ್ಮಣ್ಯ,
  “ಕಾರ್ತಿಕೇಯ”, ನಾರಾಯಣಮಂಗಳ,
  ಕುಂಬಳೆ, ಕಾಸರಗೋಡು.
  671321


ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. smita

  laika iddu doddamma..:),vishuvina vishesha gontatu…:):)

  [Reply]

  VA:F [1.9.22_1171]
  Rating: 0 (from 0 votes)
 2. naveena.krishna
  Naveena Krishna

  Laika aaidhu doddamma :) … innu innu baretha iri…prize batta irli…

  [Reply]

  VA:F [1.9.22_1171]
  Rating: 0 (from 0 votes)
 3. ವಿಷ್ಣು ನಂದನ
  ವಿಷ್ಣು ನಂದನ

  ಪ್ರಬುದ್ದ ಲೇಖನ. ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 4. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಚೆಂದದ ಲೇಖನ ವಿಜಯತ್ತೆ.

  [Reply]

  VN:F [1.9.22_1171]
  Rating: 0 (from 0 votes)
 5. ಸುವರ್ಣಿನೀ ಕೊಣಲೆ
  Suvarnini Konale

  ಪ್ರಬಂಧ ಲಾಯ್ಕಾಯ್ದು, ಮಾಹಿತಿಪೂರ್ಣವಾದ ಲೇಖನ :)

  [Reply]

  VA:F [1.9.22_1171]
  Rating: 0 (from 0 votes)
 6. ವಿದ್ಯಾಶ್ರೀ

  ಲೇಖನ ತುಂಬಾ ಲಾಯ್ಕಾಯಿದು ದೊಡ್ಡತ್ತೆ..ಬಹುಮಾನ ಗಳಿಸಿದ್ದಕ್ಕೆ ಅಭಿನಂದನೆಗೊ.. ನಮ್ಮ ಹವ್ಯಕ ಸಂಸ್ಕೃತಿಲಿಪ್ಪ, ನಮಗೆಲ್ಲ ವಿಶೇಷವಾದ “ವಿಷು” ಹಬ್ಬದ ಆಚರಣೆಯ ಮಹತ್ವ, ವಿಷುಕಣಿಯ ವಿವರಣೆ, ಹೀಂಗೆ ಕಿರಿಯವಕ್ಕೆ ಗೊಂತಿಲ್ಲದ್ದ ಹಲವಾರು ಸಂಗತಿಗೊ ಗೊಂತಾತು ಈ ಲೇಖನ ಓದಿ.. :)

  [Reply]

  VA:F [1.9.22_1171]
  Rating: 0 (from 0 votes)
 7. ವಿಜಯತ್ತೆ
  ವಿಜಯಾ ಸುಬ್ರಹ್ಮಣ್ಯ, ಕುಂಬಳೆ

  ಲೇಖನ ಓದಿ ಅಭಿಪ್ರಾಯ ಹೇಳಿದ ಎಲ್ಲರಿಂಗೂ, ಇನ್ನು ಓದುತ್ತವಕ್ಕೂ, ಆಚರಣೆ ಮಾಡ್ತವಕ್ಕೂ ಅನಂತ ಧನ್ಯವಾದಂಗೊ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾನೆಗೆಗಾರ°ಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆಗಣೇಶ ಮಾವ°ಹಳೆಮನೆ ಅಣ್ಣಪೆಂಗಣ್ಣ°ವಸಂತರಾಜ್ ಹಳೆಮನೆಬೋಸ ಬಾವಶ್ಯಾಮಣ್ಣಪವನಜಮಾವಚೂರಿಬೈಲು ದೀಪಕ್ಕಯೇನಂಕೂಡ್ಳು ಅಣ್ಣಶಾಂತತ್ತೆಡಾಗುಟ್ರಕ್ಕ°ಕಾವಿನಮೂಲೆ ಮಾಣಿಕೆದೂರು ಡಾಕ್ಟ್ರುಬಾವ°ಪುತ್ತೂರಿನ ಪುಟ್ಟಕ್ಕಮುಳಿಯ ಭಾವಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವನೀರ್ಕಜೆ ಮಹೇಶವೇಣಿಯಕ್ಕ°ವಿದ್ವಾನಣ್ಣಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ