ವಿಷು ಸ್ಪರ್ಧೆ 2014: ಕವನ ದ್ವಿತೀಯ : “ಹಬ್ಬದ ಗೌಜಿ” – ವಿ. ಬಿ. ಕುಳಮರ್ವ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2014ಕವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕ ಶ್ರೀ ವಿ.ಬಿ.ಕುಳಮರ್ವ,ಕು೦ಬಳೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಶ್ರೀ ವೆಂಕಟ ಕೃಷ್ಣ ಎಂ.ಎನ್ - ಇವರಿಂದ ಕವನ ದ್ವಿತೀಯ ಪ್ರಶಸ್ತಿ ಪಡೆತ್ತಾ ಇಪ್ಪ ಶ್ರೀ ವಿ.ಬಿ.ಕುಳಮರ್ವ

ಶ್ರೀ ವೆಂಕಟ ಕೃಷ್ಣ ಎಂ.ಎನ್ – ಇವರಿಂದ ಕವನ ದ್ವಿತೀಯ ಪ್ರಶಸ್ತಿ ಪಡೆತ್ತಾ ಇಪ್ಪ ಶ್ರೀ ವಿ.ಬಿ.ಕುಳಮರ್ವ

~

ಹಬ್ಬದ ಗೌಜಿ:

ಹಬ್ಬದ ಗೌಜಿಲಿ
ಚುಬ್ಬನ ಮೀಶಲೆ
ಅಬ್ಬಗೆ ರಜವೂಯೆಡೆಯಿಲ್ಲೆ |
ಅಬ್ಬಿಯ ನೀರಿಲಿ
ಒಬ್ಬನೆ ಮಿ೦ದವ
ಕಬ್ಬಿನ ಗೆ೦ಟಿನ ಹಾ೦ಗಿದ್ದ° ||

ಉದಿ ಉದಿಯಪ್ಪಗ
ಮದಲೇಯೇಳುವ
ಮುದಿಯಜ್ಜಜ್ಜಿಯ ಕಾಲ್ ಹಿಡಿವೊ° |
ಗೆದ್ದೆಯ ತೋಟದ
ಉದ್ದಕೆ ಬಗ್ಗಿದ
ಕದಳೀ ಬಾಳೆಯ ಕೊನೆ ತಪ್ಪೊ° ||

ಸೇಮಗೆ ಕಾಯಲು
ಸೀಮಗೆ ದೊಡ್ಡದು
ರಾಮನ ಪೂಜೆಗೆ ಪರಮಾನ್ನ |
ಕಾಮನ ಸುಟ್ಟವ°
ಸೋಮನ ಹೊತ್ತವ°
ಸಾಮಜ ಚರ್ಮವ ಸುತ್ತಿದವ° ||

ಬ೦ದೇ ಬ೦ತಿದ
ಚೆ೦ದಕೆ ಪೆರಣತೆ
ಉದ್ದಿನ ಕೊಟ್ಟಿಗೆ ಬಲಿಯ೦ದ್ರ° |
ಕ೦ದನ ಮನಸಿನ
ಸ೦ದಿಲಿ ಮಿ೦ಚುಗು
ಮು೦ದಿನ ಸ೦ಭ್ರಮ ವಿಷುಕಣಿಯ ||

ದಸರಾ ಚೌತಿ ತೊ
ಳಸಿಪೂಜೆ ಜೆತೆಲಿ
ಮಸರುಕುಡಿಕೆಯಷ್ಟಮಿ ಷಷ್ಠಿ |
ಕಸವುಡುಗಿ ನೈದ
ಹೊಸ ಹೂಮಾಲೆಯ
ಅಸುರಾರಿಗೆ ನಾವರ್ಪಿಸುವೊ° ||

(ವಿ.ಸೂ. : ಹಬ್ಬದ ಗೌಜಿ ಪದ್ಯ ನಡುಗನ್ನಡದ ಶರಷಟ್ಪದಿ ಛ೦ದಸ್ಸಿಲಿ ಬರದ್ದದು.
ಈ ಪದ್ಯಲ್ಲಿ ರಾಮನವಮಿ, ಕಾಮದಹನ, ದೀಪಾವಳಿ, ದಸರಾ, ಚೌತಿ, ತೊಳಶಿಪೂಜೆ, ಮಸರುಕುಡಿಕೆ, ಅಷ್ಟಮಿ, ಷಷ್ಠಿ ಮೊದಲಾದ ಹತ್ತು ಹಬ್ಬಗಳ ಸೂಚನೆಯಿದ್ದು.)

~*~*~

ಸಂಪಾದಕ°

   

You may also like...

10 Responses

 1. K.Narasimha Bhat Yethadka says:

  ಪದ್ಯ ಭಾರೀ ಲಾಯಕಾಯಿದು ವೆಂಕಪ್ಪಣ್ಣ.ಅಭಿನಂದನೆ.

 2. ಭಾವಯ್ಯ ಪದ್ಯ ಬಹು ಕೊಶಿ ಇದ್ದು. ಮಕ್ಕಳೂ ಚೆಂದಕೆ ರಾಗಲ್ಲಿ ಓದುಗು.

 3. ತೆಕ್ಕುಂಜ ಕುಮಾರ ಮಾವ° says:

  ತೆಂಕಣ ಸೀಮೆಲಿ
  ಕನ್ನಡದಿಂಪಿನ
  ಹಾರುಸುವಾ ಈ ದೊಡ್ಡಕುಳ |
  ಹವ್ಯಕ ಭಾಷೆಲಿ
  ಪದ್ಯವ ಬರದೂ
  ರೈಸಿದವಯ್ಯಾ ಕುಳಮರ್ವ ||

  ಅಭಿನಂದನೆಗೊ, ಮಾವ.

  • ಶೈಲಜಾ ಕೇಕಣಾಜೆ says:

   ಅಪ್ಪು…… ಅವರ ಶಿಷ್ಯೆ ಹೇಳುಲೆ ಎನಗೂ ಹೆಮ್ಮೆ ಅನುಸುತ್ತು…
   ಅಭಿನಂದನೆಗೊ ಮಾಷ್ಟ್ರೇ….

 4. ಲಲಿತಾಲಕ್ಷ್ಮೀ ಎನ. ಭಟ್ಟ says:

  ಹರೇರಾಮ.ಕುಳವರ್ಮ ಅವರೇ ಕವನ ಚೆಂದಾಜು, ವೋದಿ ಕುಶಿ ಆತು. ಅಭಿನಂದನೆಗಳು- ಲಲಿತಾಲಕ್ಷ್ಮೀ

  • ಶ್ಯಾಮಣ್ಣ says:

   ಲಲಿತಕ್ಕ… ಕುಳವರ್ಮ ಅಲ್ಲ… ಕುಳಮರ್ವ… 🙂

   • ಬೊಳುಂಬು ಗೋಪಾಲ says:

    ಶ್ಯಾಮಣ್ಣನ ಕಣ್ಣು ಒಳ್ಳೆಸೂಕ್ಷ್ಮ ಇದ್ದಾನೆ. ಇಟ್ ಇಸ್ ಜಸ್ಟ್ ಜಂಬ್ಲಿಂಗ್ ಆಫ್ ಲೆಟರ್ಸ್ ಯಾಹ್.
    ಹಬ್ಬಂಗಳ ಪದ್ಯ ತುಂಬಾ ಲಾಯಕಾಯಿದು. ಅಭಿನಂದನೆಗೊ.

 5. ಬಾಲಣ್ಣ (ಬಾಲಮಧುರಕಾನನ) says:

  ಪದ್ಯ ಪಷ್ಟಾಯಿದು ವೆಂಕಪ್ಪಣ್ಣ ,ಅಭಿನಂದನೆಗೊ.

 6. ಚೆನ್ನೈ ಭಾವ° says:

  ಭಾರೀ ಲಾಯಕ ಆಯ್ದು ಕವನ

 7. ಶಾರದಾಗೌರೀ says:

  ಕುಳಮರ್ವ ಮಾವನ ಪದ್ಯ ಭಾರೀ ಚೆಂದ ಆಯಿದು.
  ಹಬ್ಬದ ಗೌಜಿಗ ಪದ್ಯದ ಸಾಲುಗಳಲ್ಲಿ ಚೆಂದಲ್ಲಿಯೇ ಬಯಿಂದು..
  ಪ್ರಶಸ್ತಿ ಗಳಿಸಿದ್ದಕ್ಕೆ ಅಭಿನಂದನೆಗೊ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *