ಭರತ್ ರಾಜ್ ನ ಬಾಳಿಂಗೆ ಸಹಾಯಹಸ್ತದ ಕೋರಿಕೆ

ಬೈಲಿನ ಸಹೃದಯರಿಂಗೆ ನಮಸ್ಕಾರಂಗೊ.

ಸಂಘಜೀವಿ ಮನುಷ್ಯಂಗೆ ಪರಸ್ಪರ ಅವಲಂಬನೆ ಇದ್ದೇ ಇದ್ದು. ಅವಲಂಬನೆಯೇ ಪ್ರೀತ್ಯಾದರ ಆಗಿ ಬೆಳದು ಒಂದು ಆರೋಗ್ಯಕರ ಸಮಾಜ ಆಗಿ ಬೆಳವದು.
ಇಂತಾ ಆರೋಗ್ಯಕರ ಸಮಾಜದ ಪ್ರತಿರೂಪವೇ ನಮ್ಮ ಬೈಲು.
ಬೈಲಿನ ಬ೦ಧುಗೊ ಸಮಾಜ ಸದಸ್ಯರಿ೦ಗೆ ಆರೋಗ್ಯ, ವಿದ್ಯಾಭ್ಯಾಸ ಇತ್ಯಾದಿಗಳ ಬೆಳವಣಿಗೆಗೆ ಸಕಾಯ ಮಾಡಿಗೊ೦ಡಿಪ್ಪದು ನವಗೆಲ್ಲಾ ತೃಪ್ತಿ ನೀಡ್ತಾ ಇಪ್ಪ ಸ೦ಗತಿ.
ಶಶಿಕಿರಣಂಗೆ ಆರೋಗ್ಯನಿಧಿ, ಚಿ|ವೇಣುಗೋಪಾಲಂಗೆ ಆರೋಗ್ಯನಿಧಿ – ಇತ್ಯಾದಿಗಳ ತುಂಬ ಶ್ರದ್ಧೆಲಿ ತುಂಬುಸಿ ಸಕಾಯ ಮಾಡಿದ ಕೈಗೊಕ್ಕೆ ಕೈಮುಗುದು ವಂದನೆಗೊ.
ಶಶಿಕಿರಣ, ವೇಣುಗೋಪಾಲ ಇವು ಅನಿರೀಕ್ಷಿತವಾಗಿ ಬ೦ದ ಕಷ್ಟ೦ದ ಚೇತರಿಸಿಗೊ೦ಡಿಪ್ಪಗಳೇ ಪೆರ್ಲದ ಹತ್ರೆ ಇಪ್ಪ ಬಜಕ್ಕೋಡ್ಲಿನ ಒಬ್ಬ ಒಪ್ಪಣ್ಣನ ಕೋರಿಕೆ ಬಂತು.

ಬಜಕ್ಕೂಡ್ಳಿನ ನಿವಾಸಿ ಶ್ರೀಯುತ ಭರತ್ ರಾಜ್ ಆಚಾರ್ಯಂಗೆ ಇಪ್ಪತ್ತೈದು ವರ್ಷದ ನಡು ಪ್ರಾಯ.
ಸ್ವತಃ ಸಂಪಾದನೆ ಮಾಡಿ ಮನೆಯೊರ ಸಾಂಕೆಕ್ಕಾದ ಪ್ರಾಯ.
ಆದರೆ, ವಿಧಿಯ ಆಟ – ಎರಡೂ ಮೂತ್ರಪಿಂಡ ನಿಷ್ಕ್ರಿಯ ಆಯಿದಡ.
ದಾನಿಗಳ ಸಂಪರ್ಕಕ್ಕಾಗಿ ತುಂಬಾ ಸುತ್ತಿದವು. ನಿಯಮಿತವಾಗಿ ಡಯಾಲಿಸಿಸ್ ಮಾಡಿಗೊಂಡವು.
ಅಪ್ಪ ಕೂಡಿ ಮಡುಗಿದ ಸಂಪತ್ತುದೇ ಮುಗುದತ್ತು. ಇದ್ದ ಜಾಗೆಯನ್ನೂ ಮಾರೆಕ್ಕಾಗಿ ಬಂತು.
ಮಗನ ಅಸಹಾಯಕತೆಯ ಕಂಡ ಅಮ್ಮಂಗೆ ಮಾತೃಹೃದಯ ಕರಗಿತ್ತು;
ಮಗನ ಉಜ್ವಲ ಭವಿಷ್ಯತ್ತಿಂಗಾಗಿ ತನ್ನ ಒಂದು ಮೂತ್ರಪಿಂಡವ ಕೊಡ್ಳೆ ಮುಂದೆ ಬಂದವು.

ಆದರೆ, ಅಮ್ಮನ ಮೂತ್ರಪಿಂಡವ ಮಗಂಗೆ ವರ್ಗಾಯಿಸುಲೆ ಒಂದು ಆಪರೇಷನ್ ಆಯೆಕ್ಕಾಯಿದು.
ಸುಮಾರು ಮೂರೂವರೆ ಲಕ್ಷ ರುಪಾಯಿಗಳಷ್ಟು ಖರ್ಚು ಅಕ್ಕು ಹೇಳಿ ಬೆಂಗ್ಳೂರಿನ ಬಿ.ಜಿ.ಎಸ್. ಆಸ್ಪತ್ರೆಯ ವೈದ್ಯವೃಂದ ಹೇಳಿದ್ದಡ.
ಆರ್ಥಿಕವಾಗಿ ದುರ್ಬಲರಾದ ಕುಟು೦ಬ ಇದರ ತಾಂಗುವ ಸ್ಥಿತಿಲಿ ಇಲ್ಲೆ.
ಹಾಂಗಾಗಿ, ಆರ್ಥಿಕಸಹಾಯಕ್ಕಾಗಿ ಬೈಲಿಂಗೆ ವಿನ೦ತಿ ಮಾಡಿದ್ದವು.

ನಮ್ಮ ಬೈಲಿನ ಮುಖಾಂತರ ನಮ್ಮಂದ ಸಾಧ್ಯ ಅಪ್ಪ ಸಕಾಯ ಮಾಡುವ ಪ್ರಯತ್ನಲ್ಲಿ ನೆ೦ಟ್ರೆಲ್ಲಾ ಕೈಜೋಡುಸೆಕ್ಕು ಹೇಳಿ ಕಳಕಳಿಯ ವಿನ೦ತಿ.
ಭರತ್ ರಾಜ್ ನ ಉಜ್ವಲ ಭವಿಷ್ಯತ್ತಿಂಗಾಗಿ ಕಾಣಿಕೆ ರೂಪಲ್ಲಿ ಆರೋಗ್ಯನಿಧಿ ಒಟ್ಟುಸೇರ್ಸೆಕ್ಕು – ಹೇಳಿ ನಮ್ಮ ಕೋರಿಕೆ.
ಬೈಲಿನ ಸಹೃದಯಿ ಬ೦ಧುಗಳ ಸಹಾಯದ ನಿರೀಕ್ಷೆಲಿ
~

ಸಹೃದಯಿ ಸಮಾಜ ಬಾಂಧವರು ಆರೋಗ್ಯನಿಧಿಯ ಜಮೆ ಮಾಡಿ ಸಹಾಯ ಮಾಡೆಕ್ಕು ಹೇಳಿ ಮನೆಯವರ ಕೋರಿಕೆ.
ನೇರವಾಗಿ ಭರತ್ ರಾಜ್ ನ ಖಾತೆಗೆ ವರ್ಗಾವಣೆ ಮಾಡ್ತರೆ ವಿವರಂಗೊ ಇಲ್ಲಿದ್ದು:

Name BHARATHRAJ Y B
Bank / Branch Syndicate Bank, Perla
Account No 42132200075236
IFSC code SYNB0004213

ಅಥವಾ, ನಮ್ಮ ಬೈಲಿನ ಎಕೌಂಟಿಂಗೆ ಹಾಕಿರೆ ಅವಕ್ಕೆ ಕಳುಸುತ್ತು.

Name OPPANNA NEREKARE PRATISHTAANA
Bank / Branch State Bank of India, Panambur
Account No 32272527608
IFSC code SBIN0002249

 

 

~*~

ಸೂ:

 • ಪ್ರತಿಷ್ಠಾನದ ಎಕೌಂಟಿಂಗೆ ಕಳುಸಿದವು ನಿಂಗಳ ದೇಣಿಗೆಗೆಗೆ 80G ರಶೀದಿಗಾಗಿ ಬೈಲಿನ ಆರೋಗ್ಯನಿಧಿ ಸಂಚಾಲಕರಾದ ತೆಕ್ಕುಂಜೆ ಮಾವನ ಸಂಪರ್ಕ ಮಾಡ್ಳಕ್ಕು.
  ಫೋನ್: 9535354380
 • ಭರತ್ ರಾಜ್ ನ ಹೆಚ್ಚಿನ ಮಾಹಿತಿಗೆ, ವಿವರಕ್ಕೆ, ಮಾತುಕತೆಗೆ ತಮ್ಮ ವರುಣ್ ನ ಸಂಪರ್ಕ:
  ಫೋನ್: +91 9496358348
  ಮಿಂಚಂಚೆ: ybvarun@gmail.com

ವಿವರಂಗೊ:

ಶುದ್ದಿಕ್ಕಾರ°

   

You may also like...

1 Response

 1. ಚೆನ್ನೈ ಭಾವ° says:

  ಭರತನ್ಗೆ ಬೇಗ ಅನುಕೂಲ ಕೂಡಿ ಬರಲಿ., ಶ್ರೀಘ್ರ ಗುಣಮುಖವಾಗಿ ಅರೋಗ್ಯವಾಗಿ ಸ್ವಂತ ಕಾಲಿಲಿ ನಿಂಬಾಂಗೆ ಆಗಲಿ. ನಮ್ಮಂದ ಅಪ್ಪ ಯತ್ಕಿಂಚಿತ್ ಸಹಾಯವ ಕೈ ಜೋಡುಸುವೋ°

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *