ಯೋಗಲ್ಲಿ ಡಾಕುಟ್ರೇಟು ಸಿಕ್ಕಿತ್ತಡ…….

May 7, 2012 ರ 10:02 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮರದ ಎಲೆಗಳ ಎಡೆಲಿ ಇಪ್ಪ ಕಾಯಿ ನಮ್ಮ ಕಣ್ಣಿಂಗೆ ಕಾಣ್ತಿಲ್ಲೆ. ಹಾಂಗೇ ನಮ್ಮಲ್ಲಿ ಇಪ್ಪ ಕೆಲವು ಪ್ರತಿಭೆಗೊ ಕೂಡ.
ಕಾಟುಕುಕ್ಕೆ ದೇವಸ್ಥಾನಂದ ಒಂದು ಮೈಲಿ ದೂರಲ್ಲಿ ಇಪ್ಪ ಕೈಯ್ಯಂಕೂಡ್ಲು ಮನೆಯ ಗಣಪತಿ ಭಟ್ , ಶಂಕರಿ ದಂಪತಿಗಳ ಹೆರಿ ಮಗನೇ ಉದಯ ಕುಮಾರ.

ನಮ್ಮ ಉದಯಣ್ಣ

ಇವು ಯೋಗ ವಿಜ್ಞಾನದ ಬಗ್ಗೆ ಬರದ “ಎಸ್ಸೆಸ್ ಮೆಂಟ್ ಆಫ್ ದಿ ಎಫೆಕ್ಟ್ ಆಫ್ ಯೋಗ ಥೆರಪಿ ಆನ್ ಸೈನೆಸೈಟಿಸ್ ಯೂಸಿಂಗ್ ಇನ್ಫ್ರಾರೆಡ್ ಥರ್ಮಲ್ ಇಮೇಜಿಂಗ್ ಸಿಸ್ಟಮ್” ಹೇಳ್ತ ಪ್ರಬಂಧಕ್ಕೆ ಮಂಗ್ಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟು ಪದವಿ ಕೊಟ್ಟಿದು.
ಅಲ್ಲದ್ದೆ ಭಾರಿ ಲಾಯ್ಕದ ಪ್ರಬಂಧ ಹೇಳ್ತ ಪುರಸ್ಕಾರವೂ ಸಿಕ್ಕಿದ್ದು.

ಮಂಗ್ಳೂರಿನ ವಿಶ್ವವಿದ್ಯಾನಿಲಯಲ್ಲಿ ಯೋಗವಿಜ್ಞಾನ ವಿಭಾಗ ಶುರುವಾದ್ದು 1998ರಲ್ಲಿ .
ಈ 14 ವರ್ಷಲ್ಲಿ ಯೋಗವಿಜ್ಞಾನಲ್ಲಿ ಡಾಕುಟ್ರೇಟು ಮಾಡಿದ್ದು ನಮ್ಮ ಉದಯಣ್ಣನೇ ಅಡ.

ಮಾನವ ಪ್ರಜ್ಞೆ , ಯೋಗ ವಿಜ್ಞಾನದ ಪ್ರಾಧ್ಯಾಪಕಂದೆ, ಅಧ್ಯಕ್ಷಂದೆ ಆಗಿಪ್ಪ ಡಾಕುಟ್ರೇಟ್ ಪದವಿ ಪಡದ ಕೆ. ಕೃಷ್ಣ ಭಟ್ಟರ ಮಾರ್ಗದರ್ಶನಲ್ಲಿ ಈ ಪ್ರಬಂಧವ ಸಿದ್ಧಪಡ್ಸಿದ್ದವು.
ಭಾರತ ಸರಕಾರದ ವಿಜ್ಞಾನ , ತಂತ್ರಜ್ಞಾನ ಇಲಾಖೆ ಕೊಟ್ಟ ಇಂಡೋರಶ್ಯನ್ ಸಹಯೋಗದ ಸಂಶೋಧನಾ ಯೋಜನೆಯ ಅಡಿಲಿ ಕೆಲಸ ಮಾಡಿ ಈ ( ಪಿ. ಹೆಚ್ . ಡಿ.) ಪ್ರಬಂಧ ತಯಾರಾಯ್ದು.

ಈ ಉದಯಣ್ಣ ಹತ್ತನೇ ಕ್ಲಾಸ್ಸಿನ ವರೆಗೆ ಕಲ್ತದು ಕಾಟುಕುಕ್ಕೆ ಶಾಲೆಲಿ.
ಅಡ್ಯನಡ್ಕಲ್ಲಿ ಪಿ.ಯು.ಸಿ. ಓದಿ, ಪುತ್ತೂರಿನ ವಿವೇಕಾನಂದಲ್ಲಿ ಡಿಗ್ರಿ ಕಲ್ತದು.
ಅಲ್ಲಿಂದ ಎಮ್ಮೆಸ್ಸಿ ಓದುಲೆ ಕೊಣಾಜೆಗೆ ಎತ್ತಿದವು. 2005ರಲ್ಲಿ ಯೋಗ ವಿಜ್ಞಾನಲ್ಲಿ ಚಿನ್ನದ ಪದಕ ಸಿಕ್ಕಿತ್ತು. ಆದರೆ ಪ್ರಚಾರ ಬಯಸದ್ದ ನಮ್ಮ ಉದಯಣ್ಣನ ಸುದ್ದಿ ಆರಿಂಗೂ ಗೊಂತೇ ಆಯಿದಿಲ್ಲೆ.

ನಮ್ಮ ಸಮಾಜಲ್ಲಿ ಇಂಥ ಒಬ್ಬ ಪ್ರತಿಭಾಶಾಲಿ ಇದ್ದವು ಹೇಳುದು ನವಗೆ ಒಂದು ಹೆಮ್ಮೆಯ ವಿಚಾರ.

ವಿಶೇಷ ಎಂತ ಹೇಳಿರೆ ಉದಯಣ್ಣ ನಮ್ಮ ಹರಿಯೊಲ್ಮೆ ಕೂಸು ಸೌಮ್ಯನೊಟ್ಟಿಂಗೆ ದಾಂಪತ್ಯ ಜೀವನಕ್ಕೆ ಕಾಲು ಮಡುಗಿದ ದಿನವೇ ಅವರ ಪ್ರಬಂಧಕ್ಕೆ ಡಾಕುಟ್ರೇಟು ಸಿಕ್ಕಿದ್ದು!
ಉದಯಣ್ಣ ಪ್ರಬಂಧ ಬರದು ಒಪ್ಪುಸಿ ಕಾದುಕೂದುಗೊಂಡು ಇತ್ತಿದ್ದವಡ.
ಆದರೆ ಗೃಹಸ್ಥ ಹೇಳ್ತ ಪದವಿ ಸಿಕ್ಕಿದ ದಿನವೇ ಡಾಕುಟ್ರೇಟು ಪದವಿ ಸಿಕ್ಕಿದ್ದು ಭಾರಿ ಆಶ್ಚರ್ಯ ಅಲ್ಲದಾ…?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ಈ ಶುಧ್ಧಿಗೆ ಅಭಿಪ್ರಾಯ ಹೇಂಗೆ ಬರವದಪ್ಪಾ?

  ಯಾವತ್ತಿನಂತೆ ಈ ಶುಧ್ಧಿದೆ ಬರದ್ದು ಭಾರೀ ಲಾಯಿಕ ಆಯಿದು ಅನು.
  ಶುಧ್ಧಿಲಿಪ್ಪ ಉದಯಣ್ಣ ಎನ್ನ ತಂಗೆ ಗಂಡ ಭಾವನೆ ಹೇಳಿ ಎನಗೆ ಹೆಮ್ಮೆ ಆವ್ತು.
  ದೇವರ ದಯಂದ ಎಲ್ಲಾ ಒಳಿತಾಗಲಿ ಅವರ ಬಾಳಿಲ್ಲಿ ಹೇಳಿ ತುಂಬು ಮನಸ್ಸಿಲ್ಲಿ ಹಾರೈಸುತ್ತೆಯೊ.

  ಮತ್ತೊಂದು ಸಂತೋಷ ಹೇಳಿರೆ ಬಾಲ್ಯಂದ ಪರಿಚಯ ಇಪ್ಪ ಅನುವಿನ ಎಷ್ಟೋ ವರ್ಷದ ಮೇಲೆ ಉದಯ-ಸೌಮ್ಯರ ಮದುವೆಲಿ ಕಂಡು ಮಾತಾಡ್ಸಿದ್ದೆ ಹೇಳಿ. ಅದರ ಮಗನ ಕಾರ್ಯಕ್ರಮ ಬಗ್ಗೆ ತುಂಬಾ ಕೇಳಿತ್ತಿದ್ದೆ, ನಿಜವಾಗಿ ನೋಡ್ಲೆದೆ ಅವಕಾಶ ಆತು ಸಟ್ಟುಮುಡಿ ದಿನ…

  ಹೀಂಗೆ ಬರೆತ್ತಾ ಇರು,
  ~ಸುಮನಕ್ಕ…

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬಹಳ ಸಂತೋಷ.ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 3. ದೀಪಿಕಾ
  ದೀಪಿಕಾ

  ಉದಯಣ್ಣ೦ಗೆ ಅಭಿನ೦ದನೆಗೊ!

  [Reply]

  VN:F [1.9.22_1171]
  Rating: 0 (from 0 votes)
 4. ಹರೀಶ್ ಕೇವಳ

  ಎನ್ನ ಕ್ಲಾಸು ಮೆಟ್\ ರೂ೦ಮೆಟ್, ಆದ ಆತ್ಮೀಯ ಉದಯ ಕುಮಾರ್, ಡಾ.ಉದಯ ಆದ ಸ೦ದರ್ಭಲ್ಲಿ ಅವ೦ಗೆ ಅಭಿನ೦ದನಗೊ…

  [Reply]

  VA:F [1.9.22_1171]
  Rating: 0 (from 0 votes)
 5. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಉದಯಣ್ಣಂಗೆ ಅಭಿನಂದನೆಗೊ!!!
  ಶುದ್ದಿ ಹೇಳಿದ ಅಕ್ಕಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ
  ಡೈಮಂಡು ಭಾವ

  ಉದಯಣ್ಣಂಗೆ ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)
 7. ಸುವರ್ಣಿನೀ ಕೊಣಲೆ
  Suvarnini Konale

  ಉದಯಣ್ನಂಗೆ ಅಭಿನಮ್ದನೆಗೊ, ಅವ್ವು ಸಂಶೋಧನೆ ಮಾಡಿದ ವಿಷಯ ತುಂಬಾ ಲಾಯ್ಕಿದ್ದು, ಸೈನಸೈಟಿಸ್ ಸಮಸ್ಯೆಗೆ ಯೋಗ ಚಿಕಿತ್ಸೆಲಿ ಉತ್ತಮ ಪರಿಹಾರ ಇದ್ದು, ಆದರೆ ಅದರ ವೈಜ್ಞಾನಿಕವಾಗಿ ಸಿದ್ಧಪಡ್ಸಿದ್ದವು ಉದಯಣ್ನ.
  ಇವ್ವು ತುಂಬಾ ಸಜ್ಜನ ವ್ಯಕ್ತಿ, ಒಂದರಿ ಆನು ಎನ್ನ ವಿದ್ಯಾರ್ಥಿಗಳ ಕರಕ್ಕೊಂಡೂ ಒಂದು ಯೋಗಾಸನ ಸ್ಪರ್ಧೆಗೆ ಹೋಗಿಪ್ಪಗ ಅಲ್ಲಿ ತೀರ್ಪುಗಾರರಾಗಿ ಬಂದಿತ್ತಿದ್ದವು, ಅಲ್ಲಿ ಸಿಕ್ಕಿ ತುಂಬ ಲಾಯ್ಕಕ್ಕೆ ಮಾತಾಡಿದ್ದವು. down to earth ಹೇಳ್ತಿಲ್ಲೆಯ..ಹಾಂಗಿದ್ದ ವ್ಯಕ್ತಿತ್ವ :)

  [Reply]

  ಉದಯ ಯೋಗ Reply:

  ಎನ್ನ ಬಗ್ಗೆ ಶುದ್ದಿ ಬರೆದ ಅನುಪಮ ಉಡುಪಮೂಲೆ ಇವಕ್ಕೆ ಧನ್ಯವಾದ೦ಗ… ಮತ್ತೆ ಇದಕ್ಕೆ ಪ್ರತಿಕ್ರಿಯಿಸಿದ ಎಲ್ಲೊರಿ೦ಗೂ ಧನ್ಯವಾದ…. ಆದರೆ ಹೊಗಳಿದ್ದು ಜಾಸ್ತಿ ಆತು ಹೇಳಿ ಅನಿಸುತ್ತು….

  [Reply]

  VA:F [1.9.22_1171]
  Rating: +2 (from 2 votes)
 8. venkatbhatedneer

  oppa kodale
  oppa
  eille
  eiddavarathre
  oppa kodusikki
  eiddare
  koduve

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ದೇವಸ್ಯ ಮಾಣಿಶ್ಯಾಮಣ್ಣವಾಣಿ ಚಿಕ್ಕಮ್ಮಅಕ್ಷರ°ಬೊಳುಂಬು ಮಾವ°ಸಂಪಾದಕ°ಕಜೆವಸಂತ°ಕಾವಿನಮೂಲೆ ಮಾಣಿಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣಮಾಲಕ್ಕ°ನೆಗೆಗಾರ°ಶಾಂತತ್ತೆಪೆಂಗಣ್ಣ°ವೇಣಿಯಕ್ಕ°ಪುಟ್ಟಬಾವ°ಒಪ್ಪಕ್ಕಕಳಾಯಿ ಗೀತತ್ತೆದೊಡ್ಮನೆ ಭಾವಚೂರಿಬೈಲು ದೀಪಕ್ಕಅನಿತಾ ನರೇಶ್, ಮಂಚಿಗೋಪಾಲಣ್ಣಜಯಗೌರಿ ಅಕ್ಕ°ಡಾಮಹೇಶಣ್ಣರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ