ಶಮ್ಮಿಯ ಮದುವೆ : ದೃಶ್ಯ 02

ನಾಟಕದ ಮೊದಲ ದೃಶ್ಯ ಇಲ್ಲಿದ್ದು

~
ಪಾತ್ರ ವರ್ಗ:
ಸುದರ್ಶನ      : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ 55
ಪ್ರಮೀಳಾ       : ಸುದರ್ಶನನ ಹೆಂಡತ್ತಿ. ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ       : ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ 23, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ            : ಮದುವೆ ದಲಾಲಿ , ವರ್ಷ 60 ಹೇಳಿ ಮಡಗಲಕ್ಕು.
ಕೇಶವಣ್ಣ        : ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ    : ಒಂದನೇ ಮಾಣಿ ವರ, ವರ್ಷ 28, ಹಣೆಲಿ ವಿಭೂತಿ, ಪಂಚೆ, ಅಂಗಿ
ವಿಷ್ಣು ಮೂರ್ತಿ : ಎರಡನೇ ಮಾಣಿ ವರ, ವರ್ಷ 29, ಪೇಂಟು ಶರ್ಟು
ಸುರೇಶ         : ಮೂರನೇ ಮಾಣಿ ವರ. ವರ್ಷ 28, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.

ದೃಶ್ಯ ೨ :

(ಅದೇ ಮನೆಯ ದೃಶ್ಯ)

ಕೇಶವಣ್ಣ : (ಗುರಿಕ್ಕಾರ  ಕೇಶವಣ್ಣನ ಪ್ರವೇಶ) ಸುದರ್ಶನಣ್ಣ , ಇದ್ದೀರೊ ಮನೆಲಿ.

ಸುದ : (ಒಳಾಂದಲೇ)  ಹಾಂ. ಆರು.  ಓ ಕೇಶವನೊ.  ಬಾ.  ಎಂಥ ಮಠದೋನ ಸವಾರಿ ಇಲ್ಲಿವರಗೆ ?

ಕೇಶವ : ಜವಾಬ್ದಾರಿ ಕೊಟ್ಟ ಮೇಲಿ ಅದರ ನಿರ್ವಹಿಸ್ಸೆಕ್ಕಾನೆ ?

ಸುದ : ಬಾ ಕೂರು.

ಪ್ರಮೀಳ : ಹರೇ ರಾಮ ಕೇಶವಣ್ಣ.

ಕೇಶವ :   ಹರೇ ರಾಮ ಪ್ರಮೀಳಕ್ಕ.

ಸುದ : ಇದಾ, ಕೇಶವಣ್ಣಂಗೆ ಒಂದು ಗ್ಲಾಸು ನೀರು ತಾ, ನೀರು ಎಂತ ..  ಕೇಶವ, ಎನಗೆ ರಜಾ ಹೆರ ಹೋಪಲಿದ್ದು. ಎಂತ ಬಂದದು ?

ಕೇಶವ  : ಈ ವರ್ಷಾಣ ದೀಪದ ಕಾಣಿಕೆ, ಮತ್ತೆ ಮನೆಹಣ.  ಬಿಂದು ಸಿಂಧು, ಮುಷ್ಟಿ ಅಕ್ಕಿ  . .

ಸುದ : ಹಾ. ಸಾಕು ಸಾಕು. ಗುರುಗಳ ಸವಾರಿ ಇದ್ದು, ಅದಕ್ಕೆ, ಮತ್ತೆ ಈ ವರ್ಷ ಎಂತದೋ ಮಹಾನಂದಿ ವರ್ಷಡಲ್ದೊ.  ಅದಕ್ಕೆ ಒಂದಿಷ್ಟು. ಮತ್ತೆ ಬೇರೆಂತಾರು ಹೊಸ ಕಲೆಕ್ಷನ್ನು ಇದ್ದಾ.  ಅಲ್ಲ ನಿಂಗೊಗೆ ಬೇರೆ ಎಂತ ಕೆಲಸ ಇಲ್ಲೆಯೋ ಹೇಳಿ.  ಎಂಗೊ ಕೊಡುವೋರು ಕೊಟ್ಟು ಕೊಟ್ಟು ಎಂತ ಆಯೆಕ್ಕು.

ಕೇಶವ  : ಸುದರ್ಶನಣ್ಣ,  ಇಲ್ಲಿ ಮುಖ್ಯವಾಗಿ ಎರಡು ವಿಷಯಂಗೊ ಇದ್ದು.  ಒಂದು ತೆಕ್ಕೊಂಬ ವಿಷಯ, ಇನ್ನೊಂದು ಕೊಡುವ ವಿಷಯ.  ಗುರುಗಳೇ ಹೇಳಿದ್ದವು,   ಆರಿಂಗೆ ಕೊಡ್ಳೆ ಮನಸ್ಸಿದ್ದೋ ಅವರತ್ರಂದ ಮಾಂತ್ರ ತೆಕ್ಕೊಳ್ಳಿ. ಮತ್ತೆ ನಾವು ಸಮಾಜಂದ ಎಷ್ಟೋ ತೆಕ್ಕೊಂಡಿರ್ತು. ಪ್ರತಿಯಾಗಿ ನಾವು ಕೊಡೆಕಪ್ಪದು ನಮ್ಮ ಕರ್ತವ್ಯವುದೆ ಅಲ್ಲದೊ ? ಕೊಡ್ಳೆ ಶಕ್ತಿ ಎಷ್ಟು ಇರ್ತು ಹೇಳುವುದರಿಂದ ಮನಸ್ಸೆಷ್ಟಿದ್ದು ಹೇಳುವದು ಮುಖ್ಯ ಆವ್ತು .  ಮತ್ತೆ ಮನೆ ಹಣ ಸಂದಾಯ ಆಗದ್ರೆ ಮಾಂತ್ರ ನಮ್ಮ ಮಠದ ಶಿಷ್ಯತ್ವ ಬೇಡ ಹೇಳಿ ಮಾಡಿದ್ದವು ಹೇಳಿ ಲೆಕ್ಕ.

ಸುದ : ಎಂತ ಎಂತ ಹೆದರ್ಸುದಾ ?  ಎಂತ ಬೇಕಾದರೂ ಹೇಳು, ಎನ್ನಂದ ಕೊಡ್ಳೆ ಎಡಿಯ, ಮನಸ್ಸುದೆ . . ಹ್ಹಾ.  ಇದ ರಜಾ ಇತ್ಲಾಗಿ ಬಾ. ಅಲ್ಲ ಗುರುಗಳ ಬಗ್ಗೆ ಎಂತೊ ಗುಸು ಗುಸು .. ಹಾಂಗೆ ಹೀಂಗೆ ಎಂತೆಲ್ಲಾ ಕೇಳಿ ಬಂತು.  ಅಲ್ಲ ಆನು  ಅದೇ ಆ.  ಬೆಂಗ್ಳೂರು ಪೇಪರಿಲ್ಲಿ ಓದಿದ್ದಪ್ಪಾ.. ಎಂತ ಎಂತಾಡ ಸಂಗತಿ ಅದು.

ಕೇಶವ  : ಸುದರ್ಶನ,  ಹಾಂಗಿರ್ತ ಪೇಪರಿಲ್ಲಿ ಬಂದದರ ಎಲ್ಲಾ ನಂಬುತ್ತೆಯೊ ನೀನು. ಅವು ಪೈಸೆ ಕೊಟ್ರೆ ಒಂದು ಬರೆತ್ತವು, ಕೊಡದ್ರೆ ಬೇಡದ್ದದು ಬರೆತ್ತವು.  ಅದರೆಲ್ಲ ನೋಡಿ ಎಂತೆಂತಾರು ಮಾತಾಡೆಡ.  ನಮ್ಮ ಗುರುಗೊ ಹೇಂಗೆ,  ಎಂತ ಹೇಳಿ ನಮ್ಮೋರಿಂಗೆ ಮಾಂತ್ರ ಅಲ್ಲ, ಹೆರಾಣೋರಿಂಗು ಚೆಂದಕೆ ಗೊಂತಿದ್ದು. ನಮ್ಮಲ್ಲೇ ಕೆಲವು ಜೆನ..  ಹುಂ. ಹೇಳಿ ಪ್ರಯೋಜನ ಇಲ್ಲೆ.   ಸರಿ ಅಂಬಗ ಆನು ಬತ್ತೆ.  ಆದರೆ ಸುದರ್ಶನ ಮನೆಲಿ ಮದುವೆ ಅಪ್ಪಲಿಪ್ಪ ಕೂಸಿದ್ದು ॒. . . ಹೀಂಗೆಲ್ಲ ಕೊಡದ್ದೆ ಇಪ್ಪದು ಸರಿಯಲ್ಲ ಹೇಳಿ ಎನ್ನ ಅಂದಾಜು.

ಸುದ : ಸರಿ, ಎನಗೆ ಲೇಟಾವ್ತು, ಅಕ್ಕಂಬಗ ನೀನಿನ್ನು ಹೆರಡು. (ಕೇಶವಣ್ಣ ಹೋವ್ತವು)

ಇನ್ನಾಣ ದೃಶ್ಯ ಬಪ್ಪವಾರ ನೋಡುವೋ

ವೇಣು ಮಾಂಬಾಡಿ

   

You may also like...

3 Responses

 1. ಶ್ಯಾಮಣ್ಣ says:

  ಸುದರ್ಶನಂಗೆ ಮಠಕ್ಕೆ ಕೊಡೆಕ್ಕಾದ್ದರ ಕೊಡ್ಳೆ ಎಡಿಯದ್ದರೂ ಬೇಡದ್ದ ಸುದ್ದಿ ಮಾತಾಡ್ಳೆ ಆಸಕ್ತಿ ಇದ್ದಲ್ಲದಾ? ಏಂ….?

 2. ಚೆನ್ನೈ ಭಾವ says:

  ಹೆ ಹೆ ಹೆ ಶ್ಯಾಮಣ್ಣ!! 😀

  ಒಟ್ಟಾರೆ ಸುದರ್ಶನಣ್ಣ ತೆರಕ್ಕಿಲ್ಲಿತ್ತಿದ್ದರಿಂದ ಎರಡ್ನೇ ದೃಶ್ಯ ಬೇಗ ಮುಗುತ್ತಪ್ಪೋ . ಕೇಶವಣ್ಣನ ಎರಡು ಆ ಮಾತು ಲಾಯಕ ಆಯ್ದು.

 3. ತೆಕ್ಕುಂಜ ಕುಮಾರ ಮಾವ° says:

  ವೇಣುವಣ್ಣ ಈ ಸರ್ತಿ ಬೇಗ ಪರದೆ ಎಳದವು ಕಾಣುತ್ತು. ಅಲ್ಲ ನವಗೆ ಅಂಬೆರ್ಪು ಇಲ್ಲೆ, ಇನ್ನಾಣದ್ದೂ ಬೇಗ ಬರಲಿ.
  ಶ್ಯಾಮಣ್ಣನ ಒಗ್ಗರಣೆ ಪಷ್ಟಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *