ಆನಂದಲಹರಿಯ ಅಶೋಕವನಲ್ಲಿ ಅದ್ವೈತಗುರುಗಳ ಚಾತುರ್ಮಾಸ್ಯ!!

September 17, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಕ್ಷಾ ವೈ ಮಾಸಾಃ – ಹೇಳಿ ಧರ್ಮಶಾಸ್ತ್ರ ಹೇಳ್ತು – ವಿದ್ವಾನಣ್ಣ ಮಾತು ಸುರು ಮಾಡಿದವು

ಅವು ಮಾತಾಡುದು ಕಮ್ಮಿ. ಅಪುರೂಪಲ್ಲಿ ಮಾತಾಡಿರೆ ಮುತ್ತುಗಳೇ ಉದುರುಗು.
ವಿದ್ವಾನಣ್ಣನ ಗುರ್ತ ಇದ್ದಲ್ಲದೋ – ವಯೋವೃದ್ಧರಲ್ಲ, ಜ್ಞಾನವೃದ್ಧರಾಗಿಪ್ಪ ನಮ್ಮ ಬೈಲಿನ ಅಮೂಲ್ಯರು.
ಸರೀ ಗುರ್ತ ಇದ್ದವರತ್ರೆ ಎಷ್ಟೂ ಮಾತಾಡುಗು, ಮುತ್ತುಗಳ ಜೋಡುಸಿದ ನಮುನೆ – ಗುರ್ತ ಇಲ್ಲದ್ದೋರ ಹತ್ತರೆ ಎಲ್ಲ ಚೆಂದಕೆ ನೆಗೆಮಾಡುಗು, ಮುತ್ತುಗೊ ಕಾಣ್ತ ನಮುನೆ!
ನಮ್ಮ ಬಟ್ಟಮಾವನ ಒಳ್ಳೆತ ಗುರ್ತ ಇದ್ದು ಅವಕ್ಕೆ!
~
ಮೊನ್ನೆ ಬೈಲಿಂದ ಅಶೋಕೆಗೆ ಹೋಗಿತ್ತಿದ್ದೆಯೊ°. ಎಲ್ಲೋರು ಅಲ್ಲ, ಕೆಲವು ಜೆನ.
ನಮ್ಮೋರಲ್ಲಿ ಎಲ್ಲೋರಿಂಗೂ ಒಂದೇ ದಿನ ಪುರುಸೊತ್ತು ಆವುತ್ತಿಲ್ಲೆ ಇದಾ.. ಹಾಂಗಾಗಿ ಆರಿಂಗೆಲ್ಲ ಪುರುಸೊತ್ತು ಆವುತ್ತೋ ಅವೆಲ್ಲ ಸೇರುದು, ತೆರಕ್ಕಿಲಿಪ್ಪ ಬೈಲಿನೋರು ಅವರ ಪುರುಸೋತಿಲಿ ಬಪ್ಪದು, ಅಲ್ಲಿ ಒಟ್ಟಪ್ಪದು –  ಹೇಳಿಗೊಂಡು ನಿಗಂಟು ಮಾಡಿದವು ಗುರಿಕ್ಕಾರ್ರು.

ದೊಡ್ಡಬಾವಂಗೆ ಶಾಲೆ ಇದ್ದ ಕಾರಣ ಶೆನಿವಾರ ಹೆರಡುದಡ. ಎಡಪ್ಪಾಡಿಬಾವ° ಮೊನ್ನೆಂದಲೇ ಅಶೋಕೆಲೇ ಇದ್ದನಡ.
ಶರ್ಮಪ್ಪಚ್ಚಿ, ಬೊಳುಂಬುಮಾವ ಎಲ್ಲ ಕೊಡೆಯಾಲಂದ ಒಟ್ಟಾಗಿ ಮರದಿನ ಬತ್ತವಡ, ಶ್ರೀಅಕ್ಕ ನಾಳ್ತಿಂಗೆ ಬಪ್ಪದಡ, ಮನೆಯೋರ ಒಟ್ಟಿಂಗೆ.
ದ್ವಾರಕದಣ್ಣ ಮಿಂಚಿನಡ್ಕಬಾವನೊಟ್ಟಿಂಗೆ ಬಂದುಬಿಟ್ಟ, ಗೋಕರ್ಣಲ್ಲಿ ರುದ್ರವುದೇ ಹೇಳಿಕ್ಕಿ ಹೋಪಲೆ.
ಬೆಂಗುಳೂರಿಂದ ಪೆರ್ಲದಣ್ಣ ಬಪ್ಪ ವಾರ ಬತ್ತದಡ.
ಮತ್ತೆ ಊರೂರಿಂದ ವಲಯ ಲೆಕ್ಕಲ್ಲಿ ಬಪ್ಪೋರು ಬಂದುಗೊಂಡೇ ಇದ್ದವಿದಾ, ಅವರವರ ಪುರುಸೋತಿಲಿ!

ಹಾಂಗೆ – ಮೊನ್ನೆ ಕೆಲಾವು ಜೆನ ಹೋದ್ದದು.
ಹೋಪಗ ಬಟ್ಟಮಾವನ ಸಂಗಾತಕ್ಕೆ ಅಜ್ಜಕಾನಬಾವ° ಇತ್ತಿದ್ದ.
ಗುರಿಕ್ಕಾರ್ರೇ ಎದುರಿದ್ದೊಂಡ ಕಾರಣ ದಾರಿಗೆ ಏನೂ ತೊಂದರೆ ಆಯಿದಿಲ್ಲೆ.
ಯೇವ ಹೊತ್ತಿಂಗೆ ಹೆರಡ್ತದು, ಎಲ್ಲಿ ಇಳಿತ್ತದು, ಹೇಂಗೆ- ಏನು ತಾನು ಹೇಳಿ ಮೊದಲೇ ವೆವಸ್ತೆ ಮಾಡಿತ್ತಿದ್ದವು, ಎಡಪ್ಪಾಡಿಬಾವನತ್ರೆ ಕೇಳಿಗೊಂಡು.
~
ಊರಿಂದ ಇರುಳಾಣ ರೈಲಿಂಗೆ ಹತ್ತಿ, ಕುಮುಟಲ್ಲಿ ನೆಡುಇರುಳು ಇಳುದು, ಬ್ರಾಹ್ಮೀ ಮೂರ್ತಕ್ಕೆ ಅಶೋಕೆಗೆ ಎತ್ತಿತ್ತು.
ಕುಮಟಂದ ಕಾರು ಮಾಡಿಗಂಡು ಹೋದ್ದದಿದಾ!
ಪ್ರಶಾಂತ ವಾತಾವರಣಲ್ಲಿ ಕಬ್ಬುಗಸ್ತಲೆ.
ಇಡೀ ಅಶೋಕೆಯೇ ವಿಶ್ರಾಂತಿಲಿದ್ದೋ
– ನಿನ್ನೇಣ ಬಚ್ಚಲು ತಣುದು ಇಂದ್ರಾಣ ಶುಭ್ರತೆಗೋಸ್ಕರ ರಜಾ ಪುರುಸೊತ್ತು ಮಾಡಿಗೊಂಡಿದೋ ಕಂಡತ್ತು!
~

ಆ ಮೂರುಗಂಟೆಯ ಪಿರಿಪಿರಿ ಚಳಿಮಳೆಗೆ ಲೈಟು ಹಿಡ್ಕೊಂಡು ಹೂಗು ಕೊಯಿತ್ತ ಹೆಮ್ಮಕ್ಕಳ ಕಂಡತ್ತು – ಆರದು – ಓ ಸಾವಿತ್ರಿಅಕ್ಕ.
ಪೂಜಗೆ ಹೂಗಿನ ವೆವಸ್ತೆ ಮಾಡ್ತ ಉಸ್ತುವಾರಿಯ ಸೊಂತ ಆಸಕ್ತಿಲಿ ವಹಿಸಿಗೊಂಡಿದವಡ.
ಕಳುದೊರಿಶ ಕಲ್ಕತ್ತೆಲಿದೇ ಇದೇ ಶ್ರದ್ಧೆಲಿ ಮಾಡಿದ್ದವಡ! ಇಂದುದೇ ಮಾಡ್ತಾ ಇದ್ದವು.
ಇಡೀ ಅಶೋಕೆ ಜೇನೊರಕ್ಕಿಲಿ ಇಪ್ಪಗ ಎದ್ದು ಲೈಟು ಹಿಡ್ಕೊಂಡು ಹೂಗು ಕೊಯಿವದು! ಯಬ್ಬ – ಶ್ರದ್ಧೆಯೇ!
~
ಎತ್ತಿ ಒಂದರ್ಧ ಗಂಟೆ ಮೆಲ್ಲಂಗೆ ತಲೆ ಅಡ್ಡ ಹಾಕಿದೆಯೊ°, ದಾರಿ ಬಚ್ಚಲು ಹೋಪಲೆ – ಅಲ್ಲೇ ಚೆಪ್ಪರಲ್ಲಿ, ಕರೇಲಿ.
ಬಟ್ಟಮಾವಂಗೆ ಒರಕ್ಕು ಬಪ್ಪ ಹೊತ್ತಿಲಿ ಸಿಕ್ಕದ್ದರೆ ಮತ್ತೆ ಒರಕ್ಕಿಲ್ಲೆ!
ಸುದರ್ಶನಹೋಮ, ವಾಸ್ತು – ಎಲ್ಲ ಇದ್ದರೆ ಮತ್ತೆ ಆ ದಿನ ಒರಗಲಿಲ್ಲೆಡ, ನಿಘಂಟು!
ಈಗೀಗ ಪ್ರಾಯ ಆದ ಮತ್ತೆ ಅಂತೂ ಹಾಂಗೇ ಆಗಿ ಹೋಯಿದು.
~
ನಾಕು ಗಂಟೆಯ ಹೊತ್ತಿಂಗೆ ಪರಿವಾರದ ಕೆಲವು ಜೆನ ಅಣ್ಣಂದ್ರು ಎದ್ದವು.  ಚಳಿಗೂ ಬೇಗ ಏಳ್ತವನ್ನೆ, ಗಟ್ಟಿಗರು ಹೇಳಿ ಅನುಸಿ ಹೋತು.
ಒರಕ್ಕು ಬರೆಕ್ಕೇ – ಎಂಗಳೂ ಎದ್ದೆಯೊ. ಸಾಬೊನು ಚೆಂಡಿಹರ್ಕು ಬೇಗಿಂದ ಕಟ್ಟಿಗೊಂಡು ಅಲ್ಲೇ ನೂರೈವತ್ತು ಗಜ ದೂರಲ್ಲಿ ಇಪ್ಪ ಬೆಶ್ನೀರಕೊಟ್ಟಗೆ ಹೊಡೆಂಗೆ ನೆಡಕ್ಕೊಂಡು ಹೋದೆಯೊ.

ಸಾಗರದ ಸತ್ಯಮಾವ ಮೀವಲೆ ಹೆರಟೋರು ಸಿಕ್ಕಿದವು, ಚಾತುರ್ಮಾಸ್ಯದ ಸುರುವಾಣ ದಿನಂದಲೇ ಅವು ಈ ಹೊತ್ತಿಂಗೇ ಮೀವಲೆ ಹೋವುತ್ತವಿದಾ!
– ಏನು-ಒಳ್ಳೆದು ಮಾತಾಡಿದೆಯೊ.
ಗುರುಗೊ ಈ ಹೊತ್ತಿಂಗೇ ಏಳ್ತವಡ, ನಿತ್ಯ ದಿನಚರಿ ಅಂಬಗಳೇ ಆರಂಭ ಆವುತ್ತಡ..
ಎದ್ದು ಶುಭ್ರವಾಗಿ ಆಸನ-ಯೋಗ-ಪ್ರಾಣಾಯಾಮ ಆಗಿ, ಅಧ್ಯಯನ ಆರಂಭ ಮಾಡ್ತವಡ, ಸತ್ಯಮಾವ ಹೇಳಿದವು.
ಮೀವಲೆ ಹೋಪ ಅಂಬೆರ್ಪಿಲಿ ಇದ್ದ ಕಾರಣ ಜಾಸ್ತಿ ಮಾತಾಡ್ಳೆ ಆಯಿದಿಲ್ಲೆ. ಮತ್ತೆ ಕಾಂಬ ಹೇಳಿಕ್ಕಿ ಒಂದು ಕೊಟ್ಟಗೆಗೆ ಓಡಿದವು.
~
ಎಂಗಳ ಎಲ್ಲೋರದ್ದೂ ಮೀಯಾಣ ಆದ ಮತ್ತೆ, ಆರು ಗಂಟೆ ಅಂದಾಜಿಂಗೆ ರಜಾ ಬೆಣ್ಚಿ ಆತಿದಾ..
ಅಲ್ಲೇ ಕೆಳದಿಕೆ ಅಶೋಕೆಯ ಮಲ್ಲಿಕಾರ್ಜುನ ಸ್ವಾಮಿಯ ಗುಡಿಯ ಹತ್ತರಂಗೆ ಹೋದೆಯೊ°, ನೆಡಕ್ಕೊಂಡು!
ಒಳದಾರಿಲೆ ಹೋವುತ್ತರೆ ಎರಡು ಪರ್ಲಾಂಗು, ಮಾರ್ಗಲ್ಲೆ ಹೋವುತ್ತರೆ ಅರ್ದ ಮೈಲು ಅಕ್ಕೋ ಏನೋ!
ಚೆರ್ಪು ಹಾಕಿಂಡು ಹೋಪಲಾಗ, ಅಲ್ಲಿ ಹೋಮ ಆವುತ್ತಾ ಇದ್ದು ಹೇಳಿ ಗುರಿಕಾರ್ರು ಹೇಳಿದವು, ಹಾಂಗಾಗಿ ಮಾರ್ಗಲ್ಲೇ ಹೋದ್ದು.
– ಚೆರ್ಪು ಹಾಕದ್ದೆ ನಮ್ಮ ಶುಬತ್ತೆ ದೇವರೊಳಂಗೂ ಹೋವುತ್ತಿಲ್ಲೆ, ಇನ್ನು ಇಲ್ಲಿಗೆ ಬಂದರೆ ಎಂತ ಮಾಡ್ತೋ – ಅಜ್ಜಕಾನ ಬಾವನ ಬಿಂಗಿ ಸುರು ಆತು. ದಿನ ಉದಿಆದರೆ ಅವಂಗೆ ಬಿಂಗಿ ಸುರು ಅಕ್ಕು- ಒಂದೊಂದರಿ ಅಜ್ಜಕಾನದತ್ತೆ ಬಯಿಗು!
~
ಅಶೋಕೆಯ ಮಲ್ಲಿಕಾರ್ಜುನನ ಪರಿಸರ ಎತ್ತಿತ್ತು.
ಕುಂಞಿಜಿಂಕೆಗೆ ಹುಲಿ ಆಶ್ರಯ ಕೊಟ್ಟೊಂಡಿದ್ದ ಅ-ಶೋಕವನ ಇದಾಗಿತ್ತಡ,
ಶಂಕರಾಚಾರ್ಯರಿಂಗೆ ಅತ್ಯಂತ ಪವಿತ್ರವಾಗಿ ಕಂಡ ಭೂಮಿ ಅಡ ಇದು. ಇಲ್ಲಿಯೇ ಅವು ಶಿಷ್ಯರಿಂಗೆ ಗುರುವಾಣಿ ಹೇಳಿ,
ನಮ್ಮ ಈ ಮಠದ ಪರಂಪರೆ ಆರಂಭ ಅಪ್ಪಲೆ ಕಾರಣ ಆತು – ಹೇಳಿ ಬಟ್ಟಮಾವ° ಹೇಳಿದವು.
ಇಲ್ಲೊಂದು ಭವ್ಯವಾದ ಮಂದಿರ ಬತ್ತು – ನಮ್ಮ ಮೂಲಮಟವೂ ಇಲ್ಲಿಯೇ ಇತ್ತು, ಸದ್ಯಲ್ಲೇ ಬತ್ತು.
ಓ ಅದಾ, ಅಲ್ಲಿ ಈಗಾಗಲೇ ಅದರ ಆರಂಭದ ಕಾರ್ಯಂಗೊ ಆರಂಭ ಆಯಿದು –  ಗುರಿಕ್ಕಾರರು ಮುಂದುವರುಸಿದವು.

ಅಲ್ಲೇ ಹತ್ತರೆ ಹೋಪ ಒಂದು ಕಣಿಲಿ ಅಶೋಕೆಯ ತೀರ್ಥ ಹರುಕ್ಕೊಂಡು ಹೋಯ್ಕೊಂಡಿತ್ತು.
ಆ ಪವಿತ್ರ ನೀರಿಲಿ ಸಂಧ್ಯಾವಂದನೆ ಮಾಡಿದವು ಬಟ್ಟಮಾವ, ಎಂಗಳೂ ಸೇರಿಗೊಂಡೆಯೊ°.
ಉದಯದ ಕಾಲಲ್ಲಿ ಸೂರ್ಯಂಗೆ ಅರಿಗ್ಯ ಬಿಟ್ಟೆಯೊ° – ಪ್ರಶಾಂತ ವಾತಾವರಣಲ್ಲಿ ನಿರ್ಮಲ ಮನಸ್ಸು!
ರೈಲಿನ ಪ್ರಯಾಣ ಹೇಳ್ತ ಜಡ ಸಂಪೂರ್ಣವಾಗಿ ಹೋಯಿದು.
ನೀರಿನ ಜುಳುಜುಳು ಮಾಂತ್ರ, ಬೇರೆಂತದೂ ಶಬ್ದ ಇಲ್ಲೆ. ರಜ ಹೊತ್ತು ಅಲ್ಲೇ ಕಳದು, ನಿರ್ಮಲತೆಗೆ ಕೆಮಿಕೊಟ್ಟೆಯೊ°.
~
ನೆಡಕ್ಕೊಂಡೇ ಚಾತುರ್ಮಾಸ್ಯದ ಚೆಪ್ಪರದ ಹೊಡೆಂಗೆ ಪುನಾ ಬಂದಾತು, ಆಗ ಕಸ್ತಲೆಗೆ ಕಾಂಬಲೆ ಎಡಿಗಾಗದ್ದ ಅಶೋಕೆಯ ಸುಂದರ ಚಿತ್ರಣ ನಮ್ಮ ಎದುರು ಈಗ ಕಂಡುಗೊಂಡು ಇದ್ದು.
ತಟ್ಟುಕಡುದು ಮಾಡಿದ ಒಂದು ಪವಿತ್ರ ಜಾಗೆ – ಜಾಗೆಯ ಪಾವಿತ್ರ್ಯತೆ ಇಂದು ನಿನ್ನೇಣದ್ದಲ್ಲ, ಸಾವಿರಾರು ಒರಿಶ ಹಿಂದಾಣದ್ದು.
ನಿಸರ್ಗದ ಎಡೆಲಿ ಇಪ್ಪ ವೆವಸ್ತೆ ಒಳದಿಕೆ ಸ್ವಾಭಾವಿಕವಾದ ವಾತಾವರಣ – ಅದುದೇ ಸಾವಿರಾರು ಒರಿಶ ಹಿಂದಾಣದ್ದು.
ಅದರ್ಲಿ ಒಂದು ಭವ್ಯವಾದ ಚೆಪ್ಪರ. ಅಡಕ್ಕೆಮರ – ಮುಳಿ – ಬೆಳುಲು ಎಲ್ಲ ಹಾಕಿದ ಸ್ವಾಭಾವಿಕ ರಚನೆ, ಸಾವಿರ ಒರಿಶ ಮದಲುದೇ ಅದೇ ನಮುನೆಲಿ ಇರ್ತಿತು!
ಕುತ್ತಕಂಡೆ ಜಾಗೆಗಳಲ್ಲಿ ಅತ್ತಿತ್ತೆ ಹೋಪಲೆ ಹಂಚಿನ ತುಂಡು – ಜಲ್ಲಿಕಲ್ಲು ಎಲ್ಲ ಹಾಕಿದ ಸಮತಟ್ಟುಗೊ.
ಯತಿಶ್ರೇಷ್ಟರೊಬ್ಬರು ಬಂದು ನೆಲೆಸುಲೆ ಎಂತೆಲ್ಲ ವೆವಸ್ತೆ ಬೇಕೋ – ಆ ಎಲ್ಲಾ ಸ್ವಾಭಾವಿಕ ರಚನೆಗೊ ಅಲ್ಲಿತ್ತು.
ಅಶೋಕೆಯ ನೈಸರ್ಗಿಕತೆ ಕಂಡು ಮನಸ್ಸು ಕೊಶಿ ಆತು. ಪ್ಲೇಶ್ಟಿಕು ಒಂದು ತುಂಡುದೇ ಇಲ್ಲದ್ದೆ, ಸಂಪೂರ್ಣ ಸ್ವಾಭಾವಿಕತೆಯ ಆಚರುಸುವೊ° ಹೇಳಿ ಗುರುಗೊ ಆದೇಶ ಹೆರಡುಸಿದ್ದವಡ, ಗುರಿಕ್ಕಾರ್ರು ಹೇಳಿದವು.
(ಅಶೋಕೆಲಿ ಪ್ಳೇಶ್ಟಿಕಿನ ಅಭಾವ ಅಭಾವ – ಹೇಳಿ ಅಜ್ಜಕಾನಬಾವಂಗೆ ಒಂದು ಶುದ್ದಿ ಸಿಕ್ಕಿತ್ತಷ್ಟಪ್ಪಗ!)
~

ಸರೀ ಬೆಣ್ಚಿ ಆತು. ಶಾಲು ಹೊದಕ್ಕೊಂಡು, ಉರುಟು ಕಳ ಮಾಡಿ ಅಲ್ಲೇ ಕೂದುಗೊಂಡು – ಜೋರು ಶಬ್ದಬಾರದ್ದ ಹಾಂಗೆ – ಕುಣುಕುಣು ಮಾತಾಡಿಗೊಂಡೆಯೊ°. ಅಲ್ಲೇ ಇದ್ದಿದ್ದ ಎಡಪ್ಪಾಡಿಬಾವಂಗೆ ಮಿಂದಾತು, ಬಂದು ಸೇರಿಗೊಂಡ°.
ಅಲ್ಯಾಣ ವೆವಸ್ತೆಯ ಬಗೆಗೆ ಸುಮಾರು ವಿಚಾರಂಗಳ ಹೇಳಿದ°. ಚೆಪ್ಪರ ರಚನೆ, ನೀರಿನ ವೆವಸ್ತೆ, ವಾಹನ ವೆವಸ್ತೆ, ಅದು-ಇದು ಹೀಂಗಿರ್ತದು ಎಲ್ಲ! ಎಡಪ್ಪಾಡಿಬಾವಂಗೆ ಒರಕ್ಕಿಂದ ಏಳುಸಿರೂ ಅದೆಲ್ಲ ಬಾಯಿಪಾಟ ಇಕ್ಕಿದಾ! ನವಗೆ ತಲಗೇ ಹೋಗ. 😉
~
ಪರಿವಾರದ ಅಣ್ಣಂದ್ರು ಓಡಿ ಓಡಿ ಕೆಲಸ ಮಾಡ್ತವು. ಈಗ ಪೂಜಗಾತಲ್ಲದೋ – ಹಾಂಗಾಗಿ.
ಗುರುಗೊ ಪೂಜೆ ಮಾಡ್ತ ವಿಚಾರವ ನಾವು ಅಂದೊಂದರಿ ಮಾತಾಡಿತ್ತಿದ್ದು. (ಇದಾ, ಇಲ್ಲಿದ್ದು)
ಅದೇ ಶ್ರೇಷ್ಠತೆಲಿ, ಅದೇ ಗಾಂಭೀರ್ಯಲ್ಲಿ ಇಂದು ಉದಿಯಪ್ಪಗ ಇನ್ನೊಂದು ಪೂಜೆ.
ದಿನಇಡೀಕ ನೆಗೆಮೋರೆಲಿ ಇಪ್ಪ ಗುರುಗೊ ಅತ್ಯಂತ ಗಾಂಭೀರ್ಯತೆಲಿ ಇಪ್ಪ ಕಾಲ.
ಎದುರೇ ಇಪ್ಪ ಗುರ್ತದವನನ್ನೂ ಗಮನುಸದ್ದ ಕಾಲ,
(ನಿಲೀಮಿತ) ನಿಮೀಲಿತ ಮನಸ್ಸಿಲಿ ಶ್ರೀರಾಮನ-ಶ್ರೀಶಂಕರನ-ಅದ್ವೈತತೆಯ ಏಕಧ್ಯಾನ ಮಾಡ್ತ ಕಾಲ..
ಇಂದಿನವರೆಗಿನ ಮೂವತ್ತಾರು ಶಂಕರರುದೇ ಬಪ್ಪ ಕಾಲ..!

ಸ್ವಾಭಾವಿಕ ಸಿಕ್ಕುತ್ತ ಹೂಗಿನ-ಅದರ ಮಾಲೆಗಳ – ಸಾವಿತ್ರಿ ಅಕ್ಕ ಕಟ್ಟಿದ್ದು! – ಶ್ರೀರಾಮಂಗೆ ಅಲಂಕಾರ ಮಾಡಿದವು,
ಪರಿವಾರದ ಎಲ್ಲೋರುದೇ, ಮನಾರಕ್ಕೆ ಚಕ್ಕನಕಟ್ಟಿ ಕೂದುಗೊಂಡಿದವು – ರುದ್ರ ಹೇಳುಲೆ ಸುರು ಮಾಡಿದವು.
ಮಂತ್ರ ಅರಡಿವ ಬಟ್ಟಮಾವಂದೇ ಸೊರಸೇರುಸಿದವು.
ಪೂಜೆ ಆವುತ್ತಾ ಇದ್ದು. ಆರಾಧ್ಯ ದೇವರಿಂಗೆ ಧ್ಯಾನ – ಆವಾಹನೆ – ಆಸನ – ಸ್ನಾನ – ಅರ್ಘ್ಯ – ಪಾದ್ಯ – ಇತ್ಯಾದಿಗಳ ತಂತ್ರಪೂರ್ವಕ ಸಮರ್ಪಣೆ ಮಾಡುದು ಗೊಂತಾಗಿಯೊಂಡು ಇತ್ತು.
ನೈವೇದ್ಯ ಆಗಿ ಮಂಗಳಾರತಿಯೂ ಆತು. ಮಂಗಳಕರ ಪೂಜೆ ನೋಡ್ಳೆ ಸಿಕ್ಕಿದ್ದಕ್ಕೆ ಮನಸ್ಸು ಪುಳಕವೂ ಆತು!
~
ಪೂಜೆ ಆಗಿ ರಜ ಹೊತ್ತು ಪುರುಸೊತ್ತು.
ಗುರುಗೊ ಪೀಠಕ್ಕೆ ಬಪ್ಪದು ಹನ್ನೆರಡು ಗಂಟಗೆ – ಹೇಳಿದವು ಅರವಿಂದಪ್ಪಚ್ಚಿ.
~
ಅಂಬಗ ಇನ್ನಾಣ ಕಾರ್ಯಕ್ರಮ ಎಂತರ? – ಪಲಾರ.
ಅಲ್ಲೇ ಮೇಗೆ ನೂರು ಗಜ ದೂರಲ್ಲಿ ಒಂದು ಮನೆ ಇದ್ದು. ನಮ್ಮ ಗುರುಪೀಟದ ಶಿಷ್ಯರದ್ದೇ ಅಡ.
ಅಶೋಕೆಯ ಪುಣ್ಯಭೂಮಿ ನಮ್ಮ ಗುರುಗಳ ಸಾನ್ನಿಧ್ಯಕ್ಕೆ ಸಿಕ್ಕೆಕ್ಕಾರೆ ಅವರ ಕಾರ್ಯ ತುಂಬ ಇದ್ದಡ.
ಅಂದೇ ಆ ಜಾಗೆಯ ತನ್ನ ಹತ್ತರೆ ಮಡಿಕ್ಕೊಂಡು, ಗುರುಗಳ ಯೋಚನೆ ಬಪ್ಪಗ ಪೀಠಕ್ಕೆ ಸಮರ್ಪಣೆ ಮಾಡಿದ್ದವಡ, ತುಂಬಾ ದೊಡ್ಡ ಮನಸ್ಸು ಅಡ! – ಹೇಳಿದವು ಗುರಿಕ್ಕಾರರು. ಅಪ್ಪು! ಜಾಗೆಯೇ ಇಲ್ಲದ್ದರೆ ಎಂತದೂ ಮುಂದುವರಿತ್ತಿತಿಲ್ಲೆ ಇದಾ!!
~
ಮಾತಾಡಿಗೊಂಡೇ ಅವರ ಮನಗೇ ಎತ್ತಿತ್ತು! ಅಷ್ಟೆಂತ ಶ್ರೀಮಂತಿಕೆ ಇತ್ತಿಲ್ಲೆ, ಆದರೆ ಹೃದಯಶ್ರೀಮಂತಿಕೆ ತುಂಬಾ ಇದ್ದ ಹಾಂಗೆ ಇತ್ತು!
ಮನೆಹೆಮ್ಮಕ್ಕೊ ಬನ್ನಿ ಹೇಳಿ ಒಂದು ಹಂತಿ ಸಾಲಿಲಿ ಕೂರುಸಿದವು!
ಅವಲಕ್ಕಿ, ಸಜ್ಜಿಗೆ, ಕ್ಷೀರ – ಎರಡೆರಡು ಸರ್ತಿ ಕೇಳಿ ಹಾಕಿಗೊಂಡೆಯೊ ಆನುದೇ ಅಜ್ಜಕಾನ ಬಾವನುದೇ.
ಸಾಮಾನ್ಯವಾಗಿ ಬಳುಸುವೋರು ಹಂತಿಲಿ ಕೂದೋರ ನೋಡುದು ಕಮ್ಮಿ, ಆದರೆ ಎಂಗಳ ನೋಡಿದವು!  ಎರಡೆರಡು ಸರ್ತಿ ಕೇಳಿ ಹಾಕಿಯೊಂಬಗ ನೋಡದ್ದೆ ಹೋಕೋ! ಅದುದೇ ಕೋಂಗ್ರೇಟಿನ! 😉
ಅದಿರಳಿ – ತಿಂಡಿ ತಿಂದಾತು, ಕೈಮೋರೆ ತೊಳದಾತು!
ಇನ್ನೆಂತರ?
~

ಶ್ರೀ ಉಪನ್ಯಾಸ

ಹನ್ನೆರಡು ಗಂಟೆ ಒರೆಗೆ ಪುರುಸೊತ್ತೇ!
ಒಪಾಸು ಅಶೋಕೆಯ ಜಾಗೆಗೆ ಬಂದು ಕಾಲುನೀಡಿ ಕೂದುಗೊಂಡೆಯೊ°.
ಎದುರು ಬೆಳುಲಿನ ಮಾಡಿನವೇದಿಕೆ ಕಂಡತ್ತು, ಮಧ್ಯಲ್ಲಿ ರಾಜಗಾಂಭೀರ್ಯಲ್ಲಿ ಕೂಪಲೆ ಗುರುಪೀಠ.
ಅದರ ಹಿಂದೆ ಒಂದು ದೊಡಾ ಬೇನರು! ಅದರ್ಲಿ ಅಶೋಕೆಲಿ ಆವುತ್ತಾ ಇಪ್ಪ ಹದಿನೇಳನೇ ಚಾತುರ್ಮಾಸ್ಯಕ್ಕೆ ಶುಭಕೋರುವ- ಹೇಳಿ ಎಲ್ಲ ಬರದಿತ್ತಿದ್ದು.  ಶ್ರೀ ವಿಕೃತಿ ಸಂವತ್ಸರದ ಆಷಾಢ ಶುದ್ಧ ಪೂರ್ಣಿಮೆಯಿಂದ ಭಾದ್ರಪದ ಶುದ್ಧ ಪೂರ್ಣಿಮೆ ಪರ್ಯಂತ – ಜುಲಾಯಿ ಇಪ್ಪತ್ತೈದರಿಂದ ಸೆಪ್ಟಂಬರು ಇಪ್ಪತ್ತಮೂರರ ಒರೆಂಗೆ ಹೇಳಿಯೂ ಬರಕ್ಕೊಂಡಿತ್ತು.

ಚತುರ್ಮಾಸ ಹೇಳಿರೆ ನಾಲ್ಕುತಿಂಗಳಲ್ಲದೋ – ಅಂಬಗ ಅಲ್ಲಿ ಎರಡೇ ತಿಂಗಳು ಕಾಣ್ತಷ್ಟೆ – ಹೇಳಿದ ಅಜ್ಜಕಾನಬಾವ°!
ಅವಂಗೆ ಹಾಂಗಿರ್ತದು ಬೇಗ ತಲಗೆ ಬಕ್ಕು. ಉಶಾರಿ ಅವ°!!
ಎಲ್ಲೋರುದೇ ಚಾತುರ್ಮಾಸ್ಯ ಹೇಳ್ತವು, ಆದರೆ ಅದರ ಮೂಲ ಎಷ್ಟು ಜೆನಕ್ಕೆ ಅರಡಿಗು?
ಕೇಳಿರೆ ನಮ್ಮ ಗುರಿಕ್ಕಾರುರು ಟ್ಟೆಟ್ಟೆಟ್ಟೆ. ಬಟ್ಟಮಾವಂಗುದೇ ರಜ ಅರಡಿಗಷ್ಟೇ! ಪೂರ್ತ ಅರಡಿಯ.
ಎಂತಾಯಿಕ್ಕಂಬಗ –  ಮಾತಾಡಿಗೊಂಡಿಪ್ಪಗ ಅಲ್ಲೇ ಆಚ ಕರೇಲಿ ಆಗಿ ವಿದ್ವಾನಣ್ಣ ಬಂದವು.
~
ನಮ್ಮ ಬಟ್ಟಮಾವನ ಕಂಡು ಸಂತೋಷಲ್ಲಿ ನೆಗೆಮಾಡಿದವು. ಬಟ್ಟಮಾವ° ನಮಸ್ಕಾರಮಾಡಿ ಹತ್ತರೆ ಬಂದು ಕೂಪಲೆ ಹೇಳಿದವು.
ಅಷ್ಟೆಂತ ಅಂಬೆರ್ಪಿಲಿ ಇಲ್ಲದ್ದ ವಿದ್ವಾನಣ್ಣ ಬಂದು ಕೂದವು.
ಕಳಲ್ಲಿ ಕೂದುಗೊಂಡ ವಿದ್ವಾನಣ್ಣನ ಹತ್ತರೆ ಬಟ್ಟಮಾವ ಅದೇ ಪ್ರಶ್ಣೆಯ ಕೇಳಿದವು. ಚಾತುರ್ಮಾಸ್ಯ ಹೇಳಿರೆ ಎರಡೇ ತಿಂಗಳೋ ಅಂಬಗ? – ಹೇಳಿಗೊಂಡು.
ಒಂದುಕ್ಷಣ ಸುಮ್ಮನೆ ಇದ್ದಿಕ್ಕಿ, ಒಂದು ಉದ್ದ ಉಸುಲು ತೆಗದು ಮಾತಾಡ್ಳೆ ಸುರುಮಾಡಿದವು ವಿದ್ವಾನಣ್ಣ.
ಶಾಸ್ತ್ರ ವಾಕ್ಯವನ್ನೇ ತೆಗದು ಮಾತಾಡಿದವು: ಪಕ್ಷಾ ವೈ ಮಾಸಾಃ – ಪಕ್ಷವನ್ನೇ ಮಾಸ ಹೇಳಿ ಅನುಗಣನೆ ಮಾಡ್ತ ಮರಿಯಾದಿ ಇದ್ದು ನಮ್ಮದರ್ಲಿ – ಹೇಳಿಗೊಂಡು. ಬಟ್ಟಮಾವಂಗೂ ವಿದ್ವಾನಣ್ಣಂಗೂ ಮಾತುಕತೆ ಆದರೆ ನಮ್ಮಾಂಗಿರ್ತೋರು ಒರಗುದೊಂದೇ ಬಾಕಿ! 😉

ಬಟ್ಟಮಾವನ ಸಂಶಯಂಗೊ ಇನ್ನುದೇ ಮುಂದುವರುದತ್ತು.
ಬಟ್ಟಮಾವಂಗೆ ಮಂತ್ರ ಅರಡಿಗು, ಆದರೆ ಹೀಂಗಿರ್ತ ಶಾಸ್ತ್ರಸೂಕ್ಷ್ಮಂಗೊ ಎಲ್ಲ ಗೊಂತಿಪ್ಪೋರಿಂದ ತಿಳ್ಕೊಂಗು!
ವಿದ್ವಾನಣ್ಣ ಮಾತಾಡಿಂಡೇ ಇತ್ತಿದ್ದವು. ಕೆಲವೆಲ್ಲ ತಲಗೆ ಹೋತು, ಕೆಲವೆಲ್ಲ ತಲೆಮೇಲಂದ ಹೋತು.!!
ಚಾತುರ್ಮಾಸ್ಯದ ಬಗ್ಗೆ ಸಣ್ಣ ವಿವರಣೆ ವಿದ್ವಾನಣ್ಣ ಕೊಟ್ಟೋಂಡು ಹೋದವು:
ಕಾಲಕ್ಕೆ ಅದರದ್ದೇ ಆದ ಮಹತ್ವ ಇದ್ದು. ಕಾಲದ ಧರ್ಮ ಇರ್ತು. ಬೇಸಗೆ ಕಾಲದ ಧರ್ಮ – ಸೆಕೆ ಅಪ್ಪದು, ಮಳೆಗಾಲದ ಧರ್ಮ ಮಳೆಬಪ್ಪದು – ಹೀಂಗೆ. ಇದರ ಪರಿಣಾಮ ಜೀವಕೋಟಿಯ ಮೇಲೆ ಆವುತ್ತು.
ಕಾಲಕ್ಕೆ ತಕ್ಕಂತೆ ಆಹಾರ, ವಿಹಾರ, ವಸ್ತ್ರ, ಇದರ್ಲಿ ವಿತ್ಯಾಸ ಬತ್ತು. ಕಾಲ ಬದಲಾದ ಹಾಂಗೆ ಮನಸ್ಸುದೇ ಬದಲಾವುತ್ತು.
ಮನಸ್ಸು ಮಾಂತ್ರ ಅಲ್ಲ, ಒಳಮನಸ್ಸುದೇ ಬದಲಾವಣೆಯ ಬಯಸುತ್ತು.
ಈ ನಾಲ್ಕು ತಿಂಗಳುಗಳ ಕಾಲ ಒಳಮನಸ್ಸು ಏಕಾಂತತೆಯ ಬಯಸುತ್ತು  ಕಾಲದ ತನಂದಾಗಿ ಅದಕ್ಕೆ ಅನುಕೂಲತೆ ಒದಗುಸುತ್ತು.
ಈ ಸಮೆಯಲ್ಲಿ ಒಳಮನಸ್ಸಿಂಗೆ, ಆಂತರ್ಯಕ್ಕೆ ಇಳಿವಲೆ ಬೇಕಾದ ಪರಿಸರವ ಕಾಲವೇ ಸಹಜವಾಗಿ ರೂಪಿಸಿ ಕೊಡ್ತು.
– ಮಳೆಯ ಕಾಲ ಅಲ್ಲದೋ – ಹಾಂಗೆ.
ಹಾಂಗಾಗಿ, ಈ ಸಂಧ್ಯಾಕಾಲಲ್ಲಿ ಒಬ್ಬನೇ ದೇವರ ಒಟ್ಟಿಂಗಿರಿ – ಹೇಳಿ ಋಷಿಗೊ ಮದಲಿಂಗೇ ಹೇಳಿದ್ದವು.
ಆಹಾರ ಕ್ರಮಲ್ಲಿ ವಿತ್ಯಾಸ ಮಾಡಿಗೊಂಡು, ಸಹಜತೆಯ ಒಳಗೊಂಡು, ಮನಸ್ಸಿನ ಆಂತರ್ಯಲ್ಲಿ ಇಳುಕ್ಕೊಂಡು, ಅಧ್ಯಾತ್ಮಿಕ ಚಿಂತನೆಯ ಮಾಡಿಗೊಂಡು – ಇಪ್ಪದೇ ಚಾತುರ್ಮಾಸ್ಯದ ಮೂಲ ಉದ್ದೇಶ ಹೇಳಿದವು.
ಮಳೆಗಾಲಲ್ಲಿ ಕೀಟ-ಕ್ರಿಮಿಗೊ, ಚರಂಗೊ-ಜೀವಿಗೊ ಜಾಸ್ತಿ. ಹಾಂಗೆ, ಕಾಲಿನಡಿಂಗೆ ಸಿಕ್ಕಿ ಅವರ ಪ್ರಾಣನಾಶ ಅಪ್ಪದು ಬೇಡ – ಹೇಳ್ತ ಉದ್ದೇಶಂದ ಪ್ರಯಾಣ ಇಲ್ಲದ್ದೆ ಒಂದೇ ದಿಕ್ಕೆ ವಾಸ ಮಾಡುದುದೇ ಚಾತುರ್ಮಾಸ್ಯದ ಲಕ್ಷಣ ಅಡ.
ಚಾತುರ್ಮಾಸ್ಯಲ್ಲಿ ಊಟದ ಕ್ರಮಲ್ಲಿದೇ ವಿತ್ಯಾಸ ಮಾಡ್ಳಿದ್ದು.
ಒಂದೇ ದಿಕ್ಕೆ ಇದ್ದುಗೊಂಡು, ಶಾಕವ್ರತ (ಬರೇ ತರಕಾರಿ ಮಾಂತ್ರ ತಿಂಬದು), ಪಯೋ ವ್ರತ (ಬರೇ ನೀರು ಮಾಂತ್ರ),      ದಧಿ ವ್ರತ (ಮೊಸರು ಮಾಂತ್ರ), ಧಾನ್ಯ ವ್ರತ (ದ್ವಿದಳ ಧಾನ್ಯಂಗೊ ಮಾಂತ್ರ) ಹೀಂಗೆ ಆಹಾರ ಸೇವನೆಲಿ ನಿರ್ದಿಷ್ಟತೆಯ ಅಳವಡುಸಿಗೊಂಡು ಹೋಪದು – ಜೊತೆಜೊತೆಗೆ ಸತ್ಸಂಗ, ಪ್ರವಚನಗಳ ಮಾಡುದರ ಮೂಲಕ ಆಧ್ಯಾತ್ಮಿಕ ವ್ರತವನ್ನುದೇ ಮಾಡುದು – ಎಲ್ಲದಕ್ಕೂ ಚಾತುರ್ಮಾಸ್ಯವೇ ಸೂಕ್ತ ಸಮಯ!

– ವಿದ್ವಾನಣ್ಣ ಒಂದರಿ ಮಾತು ನಿಲ್ಲುಸಿದವು..

ಅಂಬಗ ಇದು ಸನ್ಯಾಸಿಗೊಕ್ಕೆ ಮಾಂತ್ರ, ಮುನಿಗೊಕ್ಕೆ ಮಾಂತ್ರ – ಹಾಂಗೆಂತಾರು ಇದ್ದೋ – ಕೇಳಿದ ಅಜ್ಜಕಾನಬಾವ.
ಹಾಂಗಿಲ್ಲೆ, ಎಲ್ಲಾ ಮನುಷ್ಯರಿಂಗೂ ಇದು ಇರ್ತು. ಅವರವರ ಆಶ್ರಮಧರ್ಮಕ್ಕನುಗುಣವಾಗಿ ವ್ರತಲ್ಲಿ ವಿತ್ಯಾಸ ಆವುತ್ತು – ಹೇಳಿದವು.
ಗೃಹಸ್ಥನ ಚಾತುರ್ಮಾಸ್ಯಕ್ಕೂ, ಸನ್ಯಾಸಿಯ ಚಾತುರ್ಮಾಸ್ಯಕ್ಕೂ ವ್ಯತ್ಯಾಸ ಇಕ್ಕು.
ಸನ್ಯಾಸಿಯ ಚಾತುರ್ಮಾಸ್ಯಕ್ಕೂ, ಪೀಠಾಧಿಪತಿಯ ಚಾತುರ್ಮಾಸ್ಯಕ್ಕೂ ವಿತ್ಯಾಸ ಇರ್ತು – ಹೇಳಿದವು.
ಗೃಹಸ್ಥನ ಚಾತುರ್ಮಾಸ್ಯಂದಾಗಿ ಅವನ ಮನೆ ಬೆಳಗುಗು – ಒಂದು ಚೆಂಬು ನೀರಿಂದ ಒಬ್ಬನ ಆಸರು ಇಳುದ ನಮುನೆ.
ಅದೇ, ಒಬ್ಬ ಪೀಠಾಧಿಪತಿಯ ಚಾತುರ್ಮಾಸ್ಯಂದಾಗಿ ಒಂದಿಡೀ ಸಮಾಜವೇ ಬೆಳಗುಗು – ಒಂದು ಕೆರೆಯ ನೀರಿಂದ ಒಂದು ಬೈಲೇ ಬೆಳಗಿದ ಹಾಂಗೆ.
ಎಲ್ಲವನ್ನೂ ಬಿಟ್ಟ ಸನ್ಯಾಸಿ, ಸಮಾಜಕ್ಕೆ ಬದ್ಧರಾಗಿಪ್ಪ ಪೀಠ – ಇದೆರಡರ ಸಂಗಮವೇ ಪೀಠಾಧಿಪತಿ.
ಹಾಂಗಾಗಿ, ಪೂಜೆ ಇತ್ಯಾದಿಗಳ ಅವಶ್ಯಕತೆ ಇಪ್ಪದು ಸಮಾಜಕ್ಕೋಸ್ಕರ. ವ್ರತ ಇಪ್ಪದು ಸ್ವಂತಕ್ಕೋಸ್ಕರ – ಪೀಠಾಧಿಪತಿಗಳ ಆಂತರ್ಯಲ್ಲಿಪ್ಪ ಮುನಿಗೋಸ್ಕರ
– ಒಂದರಿ ನಿಲ್ಲುಸಿದವು.

ಒಟ್ಟಾರೆಯಾಗಿ ಚಾತುರ್ಮಾಸ್ಯ – ಹೇಳಿರೆ ಚತುರ್ಮಾಸಕ್ಕೆ (ನಾಕು ತಿಂಗಳಿಂಗೆ) ಸಂಬಂಧಿಸಿದ್ದು. ಶಾಂಕರ ಪರಂಪರೆಲಿ ನಾಲ್ಕು ಪಕ್ಷ ಆಚರಣೆ ಮಾಡ್ತು, ಬೇರೆ ಕೆಲವು ಪರಂಪರೆಲಿ ನಾಕು ತಿಂಗಳ ಚಾತುರ್ಮಾಸ್ಯ ಆಚರಣೆದೇ ಇರ್ತು – ಹೇಳಿದವು.

ಅಷ್ಟಪ್ಪಗ ಸತ್ಯಮಾವ° ಓಡಿಬಂದು, ವಿದ್ವಾನಣ್ಣನ ಬಲದ ಕೆಮಿಯ ಹತ್ತರೆ ಬಗ್ಗಿ, ಗುರುಗೊ ಬಪ್ಪಲೆ ಹೇಳಿದವು – ಹೇಳಿಕ್ಕಿ ಹೋದವು.
ಹ್ಮ್, ಎಂತಾರು ಸಾಹಿತ್ಯಿಕ, ಸೃಜನಾತ್ಮಕ, ಬೌದ್ಧಿಕ ಕಾರ್ಯ ಇದ್ದರೆ ವಿದ್ವಾನಣ್ಣ ಆ ಕಾರ್ಯಲ್ಲಿ ಒಳಗೊಳ್ತವಡ, ಹಾಂಗೇ ಎಂತಾರು ಅಗತ್ಯತೆ ಇಕ್ಕೋ ಏನೋ – ಹೇಳಿ ಗ್ರೇಶಿಗೊಂಡೆಯೊ°.
ವೆಬುಸೈಟಿನ ಸಂಬಂಧಿ ಎಂತದೋ ಮೀಟಿಂಗು ಇತ್ತಡ, ಹಾಂಗೆ ಒಳ ಹೋಗಿ ಬತ್ತೆ – ಹೇಳಿಕ್ಕಿ, ಬಟ್ಟಮಾವನ ಹತ್ರೆ ಮತ್ತೆ ಸಿಕ್ಕುವೊ° ಹೇಳಿಗೊಂಡೇ ನೆಗೆನೆಗೆ ಮಾಡಿ ಎದ್ದು ಹೆರಟವು.
ಚೆ, ಎಷ್ಟೂ ವಿಶಯ ಇದ್ದು ಮಾತಾಡ್ತರೆ – ಅಲ್ಲದೋ!
– ಹೇಳಿ ಎಂಗೊ ವಿಚಾರಮಾಡಿಗೊಂಡೇ, ಅರ್ದ ಗಂಟೆ ಕಳಾತು.
~
ನೋಡುನೋಡಿಗೊಂಡು ಇಪ್ಪಗಳೇ ಜೆನ ತುಂಬಿತ್ತು.
ಅರ್ದ ಗಂಟೆಯ ಕೆಳ ಬರೇ ಐವತ್ತು ಇದ್ದದು, ಈಗ ಐನೂರಕ್ಕೆ ಹತ್ತರೆ ಆಯಿದು!  ಹಾಂಗೆ ಗುರ್ತದವರತ್ರೆ ಏನು-ಏನು ಮಾತಾಡುವಗ ಗಂಟೆ ಹನ್ನೆರಡು ಬಡುದತ್ತು.
~
ಸಹಸ್ರಶೀರುಷಾ-ಪುರುಷಃ – ಶಾಸ್ತ್ರಿಮಾವ ಒಳಾಂದ ಮಂತ್ರಹೇಳಿಗೊಂಡು ನೆಡಕ್ಕೊಂಡು ಬಪ್ಪದು ಕೇಳಿತ್ತು. ಅವರ ಹಿಂದೆ ಗುರುಗಳೂ ಇತ್ತಿದ್ದವು. ಹನ್ನೆರಡು ಗಂಟೆ ಹೇಳಿರೆ ಹನ್ನೆರಡು ಗಂಟೆಯೇ!! – ಹೇಳಿದವು ಗುರಿಕ್ಕಾರ್ರು!
ಧ್ವಜಾರೋಹಣ ಆತು.
ಅಜ್ಞಾನ ತಿಮಿರ ಮಾರ್ತಂಡರಾಗಿಪ್ಪ, ಸುಜ್ಙಾನ ತೇಜೋಮಯಪ್ರದೀಪರಾಗಿ, ಶರಾವತೀ ತೀರವಾಸಿಗೊ ಆಗಿಪ್ಪ ಗೋಕರ್ಣ ಮಂಡಲಾಧೀಶ್ವರ ಸನ್ನಿಧಾನಕ್ಕೆ ಪರಾಕು ಹೇಳಿದವು ಪರಿವಾರದವು!
ಎಲ್ಲೊರುದೇ ಬೋಪರಾಕ್ ಹೇಳಿ ಅನುಮೋದಿಸಿದವು.
ಶಂಕ ಉರುಗಿದವು, ಗುರುವಂದನೆ ಆತು, ಸರ್ವರೂ ನಮಸ್ಕಾರ ಮಾಡ್ಬೇಕೂ – ರಜನೀಶಣ್ಣ ದೊಡ್ಡಸೊರಲ್ಲಿ ಹೇಳಿದ – ಅವನ ಸೊರ ಅವನಿಂದಲೂ ದೊಡ್ಡ!
ನಮಸ್ಕಾರ ಮಾಡಿ ಕೂದುಗೊಂಡೆಯೊ.
ಒಟ್ಟಿಂಗೇ ನಿಂದೋರುದೇ ಕೂಪಲಪ್ಪಗ ಎಂಗೊ ಬೇರೆಬೇರೆ ಆಗಿತ್ತು. ಅಷ್ಟುದೇ ರಶ್ಶು!
ಗುರಿಕ್ಕಾರ್ರು ಸುರೂವಾಣ ಸಾಲಿನ ಎರಡ್ಣೇ ಜೆನ, ಬಟ್ಟಮಾವ ಎರಡ್ಣೇ ಸಾಲಿನ ಸುರೂವಾಣೋರು.
ಅಜ್ಜಕಾನಬಾವ° ನಾಲ್ಕನೇಸಾಲಿನ ಸುರೂವಾಣವ°, ಒಪ್ಪಣ್ಣ ನಾಲ್ಕನೇ ಸಾಲಿನ ಎರಡ್ಣೇಯವ°!

ಅದೇ ಸಾಲಿನ ಹತ್ತರೆ ಒಬ್ಬ ಕುರ್ಶಿಲಿ ಕೂದೊಂಡು ಮೈಕ್ಕ ಸರಿ ಮಾಡಿಗೊಂಡು ಇತ್ತಿದ್ದ. ಅವನ ಹೆಸರು ಗಣಪತಿ ಅಡ. ನೋಡೊಗೊಳೇ ಗೊಂತಾಗಿಯೊಂಡು ಇದ್ದತ್ತು. 😉
ಅವ° ಅಲ್ಲಿ ಕೂದಂಡು ರೆಕಾರ್ಡು ಮಾಡಿದ ಗುರುಗಳ ಮಾತುಗಳ ಈಗ ವೆಬುಸೈಟಿಲಿ ಹಾಕುತ್ತವಡ, ಜೆಡ್ಡು ಡಾಗುಟ್ರು ಹೇಳಿತ್ತಿದ್ದವು. (ಇದಾ, ಸಂಕೊಲೆ ಇಲ್ಲಿದ್ದು)
~
ಫಲಸಮರ್ಪಣಗೆ ಸಮೆಯ ಆತು.
ತೊಳಶಿಮಾಲೆ, ಪಲ ಎಲ್ಲ ತಂದೋರು ಸಮರ್ಪಣೆ ಮಾಡಿಗೊಂಡವು.
ಅದಾದ ಮತ್ತೆ ಗುರುಗೊ ತೀರ್ಥ ಕೊಟ್ಟವು. ಸಾಲಿಲಿ ನಿಲ್ಲುಸಿ.

ಸಭಾಕಾರ್ಯಕ್ರಮ ಸುರು ಆತು, ಅತಿಥಿ-ಅಭ್ಯಾಗತರಾಗಿ ಹೆರಿಯೋರನ್ನೂ ಕೂರುಸಿದವು – ಎರಡೆರಡು ಮಾತಾಡುಸಿದವು.
ಅದಾದ ಕೂಡ್ಳೆ, ಎಲ್ಲಕ್ಕಿಂತ ಮುಖ್ಯವಾದ ಪ್ರವಚನ ಸುರು ಆತು.

ಜೆನಂಗೊ ಪೂರ ಕಾದು ಕೂದಿತಿದ್ದವು – ಸಂಪೂರ್ಣ ನಿಃಶಬ್ದ!
ಒಂದು ಅಕ್ಕ° ಶಿವಾನಂದಲಹರಿಯ ಶ್ಲೋಕಂಗಳ ಶೃತಿಪೆಟ್ಟಿಗೆ ಮಡಿಕ್ಕೊಂಡು ಹೇಳಿತ್ತು, ರಾಗಲ್ಲಿ.
ಹತ್ತು – ಹದಿನೈದು ಹೇಳಿದ ಕೂಡ್ಳೇ ಗುರುಗೊ ಪ್ರವಚನ ಆರಂಭ ಮಾಡಿದವು.
ಶಂಕರ- ಶಂಕರನ ಶಿವ- ಶಿವನ ಆನಂದ – ಆನಂದದ ಲಹರಿ – ಎಲ್ಲದಕ್ಕೂ ನಮಸ್ಕಾರ ಮಾಡಿಗೊಂಡು, ಆನಂದ ಲಹರಿ ಹೇಳಿರೆ ಎಂತರ, ಪುರುಷ-ಪ್ರಕೃತಿ ಹೇಳಿರೆ ಎಂತರ, ಜೀವನದ ಉದ್ದೇಶ ಎಂತರ – ಎಲ್ಲವನ್ನುದೇ ಸರಳ ಉದಾಹರಣೆಗಳಲ್ಲಿ ವಿವರುಸಿಗೊಂಡು ಹೋದವು.
ಅಂಬಗಾಣ ಜೆನಂಗೊಕ್ಕೆ ಅರ್ತ ಅಪ್ಪಲೆ ಆದಿ ಶಂಕರಾಚಾರ್ಯರು ಬರದವು. ಈಗಾಣ ಶಂಕರಾಚಾರ್ಯರು ಅದರ ಈಗಾಣ ಜೆನಂಗೊಕ್ಕೆ ಅರ್ತ ಅಪ್ಪಹಾಂಗೆ ವಿವರುಸಿದವು!
ಪ್ರವಚನದ ಎಡೇಡೆಲಿ ಅವು ಕೊಟ್ಟ ಉದಾಹರಣೆಗೊ, ಉಪಕತೆಗೊ, ರೂಪಕಂಗೊ, ಚಿಂತನೆಗೊ, ವಾಕ್ಯಂಗೊ – ಎಂತವಂಗೂ ತಲಗಿಳಿತ್ತು!
ಸನ್ಯಾಸಿ ಹೇಳಿರೆ ಗೋಟುಕಾಯಿಯ ಹಾಂಗೆಡ. ಹೆರಂದ ತುಂಬ ಕಠಿಣ, ಒಳ ತುಂಬ ಮೃದು.
ಹೆರಂದ ನಾರು – ನಾರು, ಕರಟದಷ್ಟು ಗಟ್ಟಿ ಬಂಧನ, ಮುತ್ತು, ಬಳ್ಳಿ – ಎಲ್ಲವೂ ಇರ್ತು, ಆದರೆ ಒಳ?
ಒಳ ಯಾವ ಬಂಧನಕ್ಕೂ ಒಳಪಡದ್ದ ಕಾಯಿ ಇರ್ತು! ಕರಟಕ್ಕೆ ಅಂಟದ್ದೇ, ಬೇರೆಯಾಗಿ ವೈರಾಗ್ಯವ ಅನುಬವಿಸಿಗೊಂಡು ಇರ್ತು!!
– ಷೇ, ಎಷ್ಟು ಅದ್ಭುತ ಕಲ್ಪನೆ!! ಹೇಳಿ ಅನುಸಿ ಹೋತು.
ನಮ್ಮ ಗುರುಗೊಕ್ಕೆ ಒರಿಶ ಪೂರ್ತಿ ಹೀಂಗೆ ಒಂದೇ ದಿಕ್ಕೆ ಇದ್ದು ಚಿಂತನೆ ಮಾಡುವ ಅವಕಾಶ ಇದ್ದರೆ ಇನ್ನೂ ಹೀಂಗಿರ್ತದು ಸಾವಿರ ಸಾವಿರ ಉದಾಹರಣೆಗೊ ಬಕ್ಕನೇ – ಹೇಳಿ ಅನುಸಿತ್ತು..

ಪ್ರವಚನ ಮುಗುದತ್ತು.
ಸಭಾಕಾರ್ಯಕ್ರಮವೂ.

ಸಭೆ ಮುಗುದ ಮೇಗೆ ಮೌನ ಮಂತ್ರಾಕ್ಷತೆ.
ಶಂಕವ ಒಂದರಿ ಉರುಗಿದ ಮತ್ತೆ ಸಂಪೂರ್ಣ ಮವುನ. ಇನ್ನೊಂದರಿ ಉರುಗುವನ್ನಾರ.
ಮಂತ್ರಾಕ್ಷತೆ ಸಿಕ್ಕಿದ ಕೂಡ್ಳೆ ಉಂಬಲೂ ಆತು.
~
ಮೇಗೆ ಊಟ ಸುರು ಆಯಿದು ಹೇಳಿದ ಕೂಡ್ಳೇ ಹೆರಟೆಯೊ – ಆರು ಹೇಳಿದ್ದು ಹೇಳಿಯೂ ನೋಡದ್ದೆ.
ಹಶು ಆಗಿತ್ತಿದಾ, ಪ್ರವಚನದ ತೂಕಕ್ಕೆ ಕೋಂಗ್ರೇಟುದೇ ಕರಗ್ಗು!!
ಸುರೂವಾಣ ಹಂತಿಗೇ ಉಂಡಿಕ್ಕಿಬಂದೆಯೊ° – ಚೆಂದಕೆ, ಪಾಯಿಸ ಎಲ್ಲ ಹಾಕಿಂಡು. ಅಜ್ಜಕಾನ ಬಾವ ಎರಡು ಸರ್ತಿ ಹಾಕಿಂಡ, ಬಳುಸುವವ ಮೋರೆ ನೋಡಿದ್ದನಿಲ್ಲೆ! 😉
~
ಊಟ ಆಗಿ ಒಪಾಸು ಬಪ್ಪಗಳೂ ಗುರುಗೊ ಪೀಠಲ್ಲೇ ಇದ್ದವು. ಜೆನಂಗೊ ಅವರವರ ಪ್ರಾರ್ಥನೆಗಳ, ಅರಿಕೆಗಳ ಹೇಳ್ತ ಸಮೆಯ ಇದಾ.
ಬೈಲಿಂಗೆ ಇಡೀ ಆಶೀರ್ವಾದ ಮಾಡಿ – ಹೇಳಿಗೊಂಡು ಒಂದು ಪ್ರಾರ್ಥನೆ ಮಾಡಿತ್ತು, ದೂರಂದಲೇ.

ಅಲ್ಲೇ ಒಂದರಿ ಹೆರ ಸುತ್ತಿ ಬಪ್ಪೊ° – ಹೇಳಿ ಹೆರಟೆಯೊ.
ಅದಾ, ಮತ್ತೆ ಸಾವಿತ್ರಿಅಕ್ಕ! ಮೂರು ಗಂಟೆ ಅಪ್ಪಗಳೇ ಇರುಳಾಣ ಪೂಜೆಗೆ ಹೂಗು ಸಿದ್ಧ ಮಾಡ್ಳೆ ಸುರು.
– ಯಬ್ಬ! ಅವರ ಬಗೆಗೆ ಅದಾಗಲೇ ಇಪ್ಪ ಅಭಿಮಾನ ಜಾಸ್ತಿ ಆತು.
ಪಂಜ ಪಟೇಲರ ಸೊಸೆ, ತುಂಬ ಹಿರಿಯವು. ಚಾತುರ್ಮಾಸ್ಯದ ಅಷ್ಟನ್ನೂ ನೆಡೆಶುವ ತಾಕತ್ತು ಅವಕ್ಕಿದ್ದು!
ನಾವೆಲ್ಲ ಮನೆ ಪೂಜಗೆ ಹೂಗಿನ ಆದುಹಾಕಿ ತೋರುಸುತ್ತ ಕಾಳಜಿಂದಲೂ ಚೆಂದಕೆ ಆ ಕಾರ್ಯವ ಮಾಡ್ತವಡ!
ಸುಮಾರು ಜೆನ ಅಶಕ್ತರ ಸಾಂಕಿ, ಧರ್ಮಾರ್ಥ ಬೆಳೆಶಿ ಧರ್ಮಕಾರ್ಯ ಮಾಡ್ತವಡ.
ಎಲ್ಲೋರಿಂಗೂ ಕಾಂಬ ಹಾಂಗೆ ಸೇವೆ ಮಾಡ್ಳೆ ಎಷ್ಟು ಜೆನವೂ ಇದ್ದವು, ಆದರೆ ಆರಿಂಗೂ ಕಾಣದ್ದ ಹಾಂಗೆ ಸೇವೆ ಮಾಡೆಕ್ಕಾರೆ ಆಂತರ್ಯ ಎಷ್ಟು ನಿಸ್ಪೃಹ ಆಗಿರೇಕು, ಅಲ್ಲದೋ?!
ಒಂದರ್ಥಲ್ಲಿ ಸಾವಿತ್ರಿಅಕ್ಕಂಗೂ ಇದೊಂದು ಚಾತುರ್ಮಾಸ್ಯವೇ! ಎಂತ ಹೇಳ್ತಿ?
~
ನಾಕುಗಂಟೆ ಸುಮಾರಿಂಗೆ ನಮ್ಮ ವಲಯದೋರ ಎಲ್ಲ ಕೂರುಸಿದವು. ಗುರುಗೊ ಭೇಟಿಗೆ ಸಿಕ್ಕಿದವು.
ಬಟ್ಟಮಾವನ ಗುರ್ತ ಹಿಡುದು ಮಾತಾಡುಸಿದವು, ಗುರಿಕ್ಕಾರ್ರು ಪರಿಚಯ ಹೇಳಿದವು, ಅಜ್ಜಕಾನಬಾವನ ಮೊದಲೇ ಗೊಂತಿದ್ದ ಕಾರಣ ಗುರ್ತದ ನೆಗೆಮಾಡಿದವು, ಒಪ್ಪಣ್ಣನತ್ರೂ!
ಆಗ ಪೂಜೆಲಿ ಇದ್ದ ಗುರುಗಳೇ ಬೇರೆ, ಈಗ ಇಪ್ಪ ಗುರುಗಳೇ ಬೇರೆ!!
ಶುದ್ಧ ಕುಂಬ್ಳೆ ಸೀಮೆಯ ಹಳೆ ಭಾಷೆಲಿ ಹತ್ತು ನಿಮಿಶ ಮಾತಾಡಿದವು.
ಯಾವಗ ಬಂದದು, ಯೇವತ್ತು ಹೆರಡುದು, ಉಳುಕ್ಕೊಂಬ ವೆವಸ್ತೆ ಹೇಂಗಿದ್ದು – ಎಲ್ಲವನ್ನುದೇ, ಮನೆಯ ಹಿರಿಯರು ತೋರುಸಿದ ಅದೇ ಕಾಳಜಿಯ ತೋರುಸಿದವು.
ಚಾತುರ್ಮಾಸ್ಯ ವ್ರತ ಹೇಂಗಾವುತ್ತಾ ಇದ್ದು ಗುರುಗಳೇ – ಕೇಳಿದವು ಬಟ್ಟಮಾವ°.
ಹದಿನೇಳು ಚಾತುರ್ಮಾಸ್ಯಲ್ಲಿ ಇದು ಶ್ರೇಷ್ಟ – ಹೇಳಿದವು.
ಹ್ಮ್, ಅಪ್ಪಡ, ಇಷ್ಟರವರೆಗೆ ಆದ ಚಾತುರ್ಮಾಸ್ಯಲ್ಲಿ ಇದು ಅತ್ಯಂತ ಕೊಶಿ ಕೊಟ್ಟ ಚಾತುರ್ಮಾಸ್ಯ ಅಡ.
ಅಪ್ಪಲೇಬೇಕನ್ನೆ, ಶಂಕರಾಚಾರ್ಯರಿಂಗೇ ಇಲ್ಲಿ ಕೊಶೀ ಆಗಿತ್ತಡ, ಹಾಂಗೆಯೇ ಅವು ಅಶೋಕೆಯ ಹುಡುಕ್ಕಿದ್ದು, ಈಗ ಸಾವಿರದ ಇನ್ನೂರೊರಿಷ ಕಳದು ಅದೇ ಜಾಗೆಲಿ ಶಂಕರಾಚಾರ್ಯರಿಂಗೆ ಕೊಶಿಯ ಚಾತುರ್ಮಾಸ್ಯ ಸಿಕ್ಕಿಗೊಂಡಿದ್ದು!

ಮತ್ತೆ ಗುರಿಕ್ಕಾರರತ್ರೆ ಸಂಘಟನೆ, ಜವಾಬ್ದಾರಿಯ ಬಗ್ಗೆ ರಜ ಮಾತಾಡಿಗೊಂಡಿತ್ತಿದ್ದವು.
ಇನ್ನೊಂದು ತಿಂಗಳಿಲಿ ನಮ್ಮ ಊರಿಂಗೆ ಬತ್ತೆಯೊ ಹೇಳಿದವು,
ಖಂಡಿತಾ ಬನ್ನಿ, ಸ್ವಾಗತಮ್ – ಹೇಳಿಗೊಂಡು, ಆಶೀರ್ವಾದ ತೆಕ್ಕೊಂಡು ಹೆರಟೆಯೊ.
~
ಆ ದಿನ ಅಲ್ಲೇ ಇದ್ದುಗೊಂಡು, ಇರುಳಾಣ ಪೂಜೆ ನೋಡಿಗೊಂಡು, ಮರದಿನ ಗೋಕರ್ಣಕ್ಕೂ ಹೋಗಿಂಡು, ರುದ್ರ ಹೇಳಿಕ್ಕಿ, ಮರದಿನ ಇರುಳಿಂಗೆ ಮನಗೆತ್ತಿದೆಯೊ.
ಅಶೋಕೆಯ ಶುದ್ದಿಯೇ ಇಷ್ಟುದ್ದ ಆತು. ಗೋಕರ್ಣದ ಶುದ್ದಿ ಇನ್ನೊಂದರಿ ಮಾತಾಡುವೊ, ಆಗದೋ?
~
ಈ ಸರ್ತಿಯಾಣ ಚಾತುರ್ಮಾಸ್ಯ ಕೊಶಿ ಆಯಿದು ಹೇಳಿ ಗುರುಗಳೇ ಹೇಳಿದ ಮಾತು ಕೆಮಿಲಿ ಕೇಳಿಗೊಂಡೇ ಇತ್ತು.
ಅವಕ್ಕೇ ಕೊಶೀ ಆದ ಚಾತುರ್ಮಾಸ್ಯಲ್ಲಿ ಪಾಲ್ಗೊಳ್ಳುದು ಎಷ್ಟು ಪುಳಕದ ವಿಚಾರ!!
ಅಲ್ಲದೋ?
ಶಂಕರಾಚಾರ್ಯರೇ ಇದ್ದ ಜಾಗೆಲಿ, ಶಂಕರಾಚಾರ್ಯರ ಚಾತುರ್ಮಾಸ್ಯಲ್ಲಿ, ಶಂಕರಾಚಾರ್ಯ ವಿರಚಿತ ಶಿವಾನಂದ ಲಹರಿಯ ಪ್ರವಚನದ ಒಟ್ಟಿಂಗೆ, ಪ್ರಶಾಂತ ವಾತಾವರಣಲ್ಲಿ ಆನಂದದ ಲಹರಿಯ ಅನುಭವಿಸುವ ಯೋಗ ನಮ್ಮದಾಗಲಿ!
~

ನಮ್ಮ ಗುರುಗೊಕ್ಕೆ ನಾವು ಮಾಂತ್ರ ಶಿಷ್ಯರು ಅಲ್ಲ. ಹವ್ಯಕರು ಅಲ್ಲದ್ದೆ ಬೇರೆ ಹದಿನೆಂಟು ಜನಾಂಗ ಶಿಷ್ಯವರ್ಗ ಇದ್ದು. ಅವು ಎಲ್ಲೊರೂ ಒಟ್ಟುಸೇರುವ° ಜಾತ್ಯಾತೀತ ಕ್ಷಣ – ಈ ಚಾತುರ್ಮಾಸ್ಯ.
ಊರು ಊರಿಂದ, ಬೇರೆ ಬೇರೆ ದಿಕ್ಕಂದ ಬಂದ ಶಿಷ್ಯರೆಲ್ಲ ಒಂದೇ ದಿಕ್ಕೆ ಸೇರುವ ಅಪೂರ್ವ ಅನುಭವ ಅದು. ಬೇರೆ ಎಲ್ಲಿಯೂ ಸಿಕ್ಕದ್ದದು!

ನಾಳ್ತು ಇಪ್ಪತ್ತಮೂರಕ್ಕೆ ಚಾತುರ್ಮಾಸ್ಯದ ಕೊನೇದಿನ. ಮತ್ತೆ ಸೀಮೋಲ್ಲಂಘನ ಆಗಿ ಆ ವ್ರತ ಮುಗಿಶುತ್ತವು.
ಬನ್ನಿ, ಎಡಿಗಾರೆ ಒಂದರಿ ಆದರೂ ಚಾತುರ್ಮಾಸ್ಯಲ್ಲಿ ಭಾಗಿ ಅಪ್ಪೊ°.
ನವಗಾಗಿ, ನಮ್ಮ ಸಮಾಜಕ್ಕಾಗಿ ಇಪ್ಪ ಸಾವಿರಾರು ಒರಿಶ ಹಿಂದಾಣ ಪರಂಪರೆಯ ಉಳುಶಿ, ಬೆಳೆಶುವೊ.

ಎಂತ ಹೇಳ್ತಿ?

ಒಂದೊಪ್ಪ: ಅಶೋಕೆ ಇದ್ದಲ್ಲಿ ಆನಂದ ಲಹರಿ ಇಕ್ಕು, ಆನಂದ ಲಹರಿ ಇದ್ದಲ್ಲೇ ಅಶೋಕ ಇಕ್ಕಷ್ಟೇ.
ಇದೆರಡೂ ಇಪ್ಪದೇ ಸೌಭಾಗ್ಯ, ಆ ಸೌಭಾಗ್ಯವೇ ಚಾತುರ್ಮಾಸ್ಯ!

ಸೂ:

 • ಅಜ್ಜಕಾನಬಾವನ ’ಅಶೋಕೆಲಿ ಪ್ಲೇಶ್ಟೀಕು ಅಬಾವ’ದ ಶುದ್ದಿ: ಸಂಕೊಲೆ
 • ಪ್ಲೇಶ್ಟಿಕು ಬೂತದ ಬಗ್ಗೆ ಬೊಳುಂಬುಮಾವನ ಹುಂಡುಪದ್ಯ: ಸಂಕೊಲೆ
 • ಪ್ಳೇಶ್ಟಿಕಿನ ಬಗ್ಗೆ ಸಂಪೂರ್ಣ ಮಾಹಿತಿ ಶುದ್ದಿ ಶರ್ಮಪ್ಪಚ್ಚಿ ಹೇಳಿದ್ದು ಇಲ್ಲಿದ್ದು: ಸಂಕೊಲೆ
 • ಹರೇರಾಮ ವೆಬುಸೈಟಿನ ಆಶೀರ್ವಚನದ ಸಂಕೊಲೆ: http://hareraama.in/category/videos-audios/audio/
 • ಚಾತುರ್ಮಾಸ್ಯದ ಪಟಂಗೊ: ಸಂಕೊಲೆ

ವಿ.ಸೂ: ಅಶೋಕೆಯ ಕೆಲವು ಚೆಂದದ ಪಟಂಗೊ, ಗೌತಮಣ್ಣ ತೆಗದು ಕಳುಸಿದವು:

ಹೆಚ್ಚಿನ ಪಟಂಗೊ ಹರೇರಾಮದ ವೆಬುಸೈಟಿಲಿ ಇದ್ದಡ: http://hareraama.in/photogallery

ಆನಂದಲಹರಿಯ ಅಶೋಕವನಲ್ಲಿ ಅದ್ವೈತಗುರುಗಳ ಚಾತುರ್ಮಾಸ್ಯ!!, 4.4 out of 10 based on 5 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ, ಅಶೋಕೆಯ ಬಗ್ಗೆ ಬರವಲೆ, ಅನುಭವ ಹೇಳುಲೆ ಹೇಳಿದರೆ ಅಲ್ಲಿಗೆ ಹೋದೋರದ್ದು ಪ್ರತಿಯೋಬ್ಬಂದು ನೂರು ನಾಲಗೆ ಅಕ್ಕು.. ಅಂಥಾ ಮಧುರ, ಅವಿಸ್ಮರಣೀಯ ಅನುಭವ, ಖುಷಿ. ಅದರ ನೀನು ತುಂಬಾ ಚೆಂದಲ್ಲಿ ಮನ ಮುಟ್ಟುವ ಹಾಂಗೆ ವಿವರ್ಸಿದ್ದೆ. ಹೋಗದ್ದವಕ್ಕೆದೆ ಒಂದರಿ ಹೋಗಿ ಬಂದ ಹಾಂಗೆ ಆದಿಕ್ಕು, ಇನ್ನು ಹೋಪ° ಹೇಳಿ ಆದಿಕ್ಕು. ನೀನು, ಅಲ್ಲಿಗೆ ಹೋಪ ಕ್ರಮವೂ, ಕಾರ್ಯಕ್ರಮ ನಡವ ಕ್ರಮವನ್ನೂ ಕ್ರಮಲ್ಲಿ ವಿವರಣೆ ಕೊಟ್ಟಿದೆ. ಒಪ್ಪ ಒಪ್ಪ ಆಯಿದು ಶುದ್ದಿ.

  ವಿದ್ವಾನಣ್ಣ ಹೇಳಿದ ವಿಷಯಂಗಳ ತುಂಬಾ ಚೆಂದಲ್ಲಿ ಬೈಲಿಂಗೆ ಹೇಳಿದ್ದೆ. ಚಾತುರ್ಮಾಸ್ಯ ವ್ರತ ಎಲ್ಲೋರೂ ಮಾಡ್ಳಕ್ಕು ಹೇಳಿ ಗೊಂತಾದ್ದು ಒಳ್ಳೇದಾತು. ಇನ್ನಾಣ ಸರ್ತಿಗೆ ನವಗೂ ಚಾತುರ್ಮಾಸ್ಯವ ಗಂಭೀರವಾಗಿ ಮನನ ಮಾಡಿ ಆ ಮಾಸಂಗಳಲ್ಲಿ ಶ್ರದ್ಧಾ ಭಕ್ತಿಲಿ ಇಪ್ಪಲಕ್ಕು. ಮನೆಗಳ ಬೆಳಗುಸುಲೆ ಅಕ್ಕು.
  ಸಂಸ್ಥಾನ ಈ ಚಾತುರ್ಮಾಸ್ಯಲ್ಲಿ ಕೊಟ್ಟ ಸಂದೇಶಂಗ ಎಲ್ಲವೂ ಪಠಣ, ಮನನ ಯೋಗ್ಯದ್ದು. ಎಲ್ಲವುದೇ ನಾವು ಎಷ್ಟು ಸರ್ತಿ ಕೇಳಿದರೂ ಸಾಲ. ಹಾಂಗೆ ಕೇಳುಲೂ ಅಪ್ಪ ಹಾಂಗೆ ಒಪ್ಪಣ್ಣ, ಕೆಳ ಸಂಕೋಲೆಲಿ ಕೊಟ್ಟಿದ°, ಒಳ್ಳೇದಾತು.

  ಅಶೋಕೆಲಿ ನಡೆತ್ತಾ ಇಪ್ಪ ಚಾತುರ್ಮಾಸ್ಯಲ್ಲಿ, ಆ ಪುಣ್ಯ ಸ್ಥಳಕ್ಕೆ ಅಂದು ಬಂದವರಲ್ಲಿ ಕೆಲವರಿಂಗೆ ಸಭಾ ವೇದಿಕೆಯ ಅಲಂಕರಿಸಿ, ಪೀಠದ ಎದುರು ನಿಂದು ಸಭೆಯ ಉದ್ದೇಶಿಸಿ ಎರಡು ಮಾತು ಮಾತಾಡುವ ಅವಕಾಶವ ಸಂಸ್ಥಾನ ಕೊಡ್ತವು. ಈ ಅವಕಾಶ ನಮ್ಮ ಬೈಲಿನ ಮಾಷ್ಟ್ರು ಮಾವನ ಸಣ್ಣ ಮಗಂಗೆದೆ ಆಗೊಸ್ತು 22 ಕ್ಕೆ ಆದಿತ್ಯವಾರ ಸಿಕ್ಕಿದ್ದು. ನಮ್ಮ ಬೈಲಿಂಗೆ ಹೆಮ್ಮೆಯ ವಿಷಯ ಇದು. ಸಂಸ್ಥಾನ ಕೊಟ್ಟ ಗೌರವವ ನಮ್ರತೆಲಿ ಸ್ವೀಕರಿಸಿದ್ದ° ನಮ್ಮ ಮಾಣಿ. ಸಂಸ್ಥಾನ ಮನದುಂಬಿ ‘ಶಂಕರಾಚಾರ್ಯರ ಪಾದಗಳೆತ್ತರ ಬೆಳೆಯುವಷ್ಟು ಆಶೀರ್ವಾದ’ ಹೇಳಿ ಹೇಳುದು ಕೇಳುವಾಗ ರೋಮಾಂಚನ ಆವುತ್ತು. ಇದು ಬೈಲಿಲಿ ಇಪ್ಪ ಎಲ್ಲೋರೂ ಕೇಳಿ. ಶಿವಾನಂದ ಲಹರಿ ಪ್ರವಚನದ ಭಾಗ -3 ರಲ್ಲಿ ಇದ್ದು.
  ಚಿತ್ರಪಟಲ್ಲಿ ಅಶೋಕೆಯ ಚಾತುರ್ಮಾಸ್ಯಲ್ಲಿ ನಡದ ಕಾರ್ಯಕ್ರಮಂಗಳ ಪಟಂಗ ಇದ್ದು. ಅದನ್ನೂ ನೋಡಿ ಆನಂದಪಡುಲಕ್ಕು.
  ಈ ಸರ್ತಿಯಾಣ ಚಾತುರ್ಮಾಸ್ಯ ನಿಜವಾಗಿಯೂ ಅದ್ಭುತವೇ!!

  ಇಂದು ನಾವು ದುಡಿತ್ತಾ ಇಕ್ಕು, ಭೂಮಿಯ ಯಾವ ಭಾಗಲ್ಲಿ ಆದರೂ ಇಕ್ಕು. ನಮ್ಮ ಮೂಲ ಜಾಗೆಯ ಬಿಟ್ಟು ಹೋದಿಕ್ಕು ಹೊಟ್ಟೆ ಪಾಡಿಂಗೆ!! ಆದರೆ ನಮ್ಮ ಮೂಲ ಜಾಗೆಯ ಬಿಡ್ಲೇ ಆವುತ್ತಿಲ್ಲೆ ಅಲ್ಲದಾ? ಒಂದು ವೇಳೆ ಬಿಟ್ಟರೆ ನಾಳೆ ನಮ್ಮ ನಂತರದವು ಖಂಡಿತಾ ಹುಡ್ಕೆಕ್ಕಾಗಿ ಬಕ್ಕು ಅವರ ಮೂಲವ. ಇದು ಶಾಶ್ವತ ಸತ್ಯ!!!
  ಹಾಂಗೆ ನಮ್ಮ ಪೂರ್ವ ಜನ್ಮದ ಪುಣ್ಯಲ್ಲಿ ನವಗೆ ಈಗ ಮೂಲ ಮಠದ ಕೆಲಸಕ್ಕೆ ಸೇರಿಗೊಂಬ ಅವಕಾಶ ಸಿಕ್ಕಿದ್ದು. ಆ ಜಾಗೆಯ ನವಗೆ ಹೇಳಿ ಒಳಿಶಿ ಕೊಟ್ಟ ದೇವಶ್ರವ ಶರ್ಮರ ಪೂರ್ವಜರಿಂಗೂ ನಾವು ಋಣಿಗಳಾಗಿರೆಕ್ಕು. ಅಂದು ಅವು ಒಬ್ಬರು ಅಷ್ಟು ನವಗೆ ಬೇಕಾಗಿ ಮಾಡಿಪ್ಪಗ ಈಗ ನವಗೆ ಎಲ್ಲೋರಿಂಗೂ ಸೇರಿ, ಒಟ್ಟಾಗಿ, ಒಂದಾಗಿ ನಮ್ಮ ಮೂಲ ಮಠವ ಗಟ್ಟಿ ಮಾಡ್ಲೆ ಎಡಿಯದಾ? ಇದು ನಮ್ಮೆಲ್ಲರ ಕರ್ತವ್ಯವುದೇ ಅಲ್ಲದಾ?
  ಒಂದೊಪ್ಪ ಲಾಯ್ಕಾಯಿದು. ಅರ್ಥಪೂರ್ಣ ಆಗಿದ್ದು.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [‘ಶಂಕರಾಚಾರ್ಯರ ಪಾದಗಳೆತ್ತರ ಬೆಳೆಯುವಷ್ಟು ಆಶೀರ್ವಾದ’]
  ನಮ್ಮ ಮಾಷ್ಟ್ರು ಮಾವನ ನಣ್ಣ ಮಗಂಗೆ ಈ ಆಶೀರ್ವಾದ ಸಿಕ್ಕಿದ್ದು ನವಗೆ ಎಲ್ಲರಿಂಗೂ ಹೆಮ್ಮೆಯ ವಿಶಯ. ಇದರ ಕೇಳಿ ಅಪ್ಪಗ ಹೃದಯ ತುಂಬಿ ಬಂತು. ಅವನ ಪ್ರತಿಭೆಗೆ ಮತ್ತೆ ಸಮಾಜ ಹಿತ ಕಾರ್ಯಂಗೊಕ್ಕೆ ಸಂದ ದೊಡ್ಡ ಗೌರವ ಕೂಡಾ. ಆನು ಹೋದ ದಿನ ಅಶೋಕೆಲಿ ಬೇರೆಯವಕ್ಕೆ ಸನ್ಮಾನ ಮಾಡುವಾಗ, ಆ ಜಾಗೆಲಿ “ಅವನ” ಕಂಡ ಹಾಂಗೆ ಆಗಿ ತುಂಬಾ ಕೊಶೀ ಆತು. ಮಾಣಿ ಇನ್ನೂ ಎತ್ತರಕ್ಕೆ ಬೆಳವದು ನೋಡುವ ಆಶಯ. ಸಂಸ್ಥಾನದ ಆಶೀರ್ವಾದದೊಟ್ಟಿಂಗೆ ನಮ್ಮದು ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: +3 (from 3 votes)
 2. ಬಂಡಾಡಿ ಅಜ್ಜಿ
  ಬಂಡಾಡಿ ಅಜ್ಜಿ

  ಸಂತೋಷ ಆತು ಒಪ್ಪಣ್ಣೊ… ಚಾತುರ್‌ಮಾಸ್ಯಕ್ಕೆ ಹೋಪಲೆಡಿಯದ್ದರೂ ಹೋಗಿಬಂದಾಂಗೇ ಆತು.
  ಪುಣ್ಯವಂತೆ ಸಾವಿತ್ರಿ, ಅಲ್ಲಿ ಸೇವೆ ಮಾಡುಲೆ ಸಿಕ್ಕಿತ್ತನ್ನೆ…
  ಹೇಳಿದಾಂಗೆ ನಮ್ಮ ಇತ್ತಲಾಗಿ ಎಲ್ಲ ಹೂಗೇ ಇಲ್ಲೆ ಈಗ.. ನಿತ್ಯದೇವರಿಂಗೆ ಮಡುಗಲೇ ಸಿಕ್ಕುತ್ತಿಲ್ಲೆ.. ಅಲ್ಲಿ ಆವುತ್ತೋ..? ಜಾಜಿ ಬಳ್ಳಿ ಇದ್ದರೆ ಒಳ್ಳೆದು… ಈಗ ಒಳ್ಳೆತ ಆವುತ್ತದಾ..

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  alli ittu ajji.. saavitrakkana hugilli raama devaru mulugittidda..

  [Reply]

  VA:F [1.9.22_1171]
  Rating: +1 (from 1 vote)
 3. ಗಣೇಶ ಮಾವ°

  ನಿನ್ನೆ ಎಂಗ ನಾಕು ಜೆನ ಪುಳ್ಳರುಗ ಅಶೋಕೆಗೆ ಹೋಗಿ ಬೈಲಿಂಗೆ ಎತ್ತಿದಷ್ಟೇ..ಈ ಲೇಖನ ಓದಿದ ಮೇಲೆ ಒಂದರಿ ತಿರೂಗ ಅಶೋಕೆಗೆ ಹೋಗಿ ಬಂದ ಹಾಂಗೆ ಆತು.ಸವಿಸ್ತಾರವಾದ ಲೇಖನಲ್ಲಿ ಅಶೋಕೆಯ ಸಂಪೂರ್ಣ ಚಿತ್ರಣವ ಲೇಖನದ ಮೂಲಕ ತೋರ್ಸಿಕೊಟ್ಟ ಒಪ್ಪಣ್ಣಾ,,,ನಿನಗೆ ಬೈಲಿನ ಪರವಾಗಿ ಹೃದಯ ತುಂಬಿದ ಧನ್ಯವಾದಂಗ…
  ಹ,ಮತ್ತೊಂದು ವಿಷಯ.. ಆನು ಇಲ್ಲಿ ಹೇಳದ್ರೆ ತಪ್ಪಾವ್ತು..ಗುರುಗೊ ಆಶೀರ್ವಚನಲ್ಲಿ ಹೇಳಿತ್ತವು..ಈಗಾಣ ೩೬ನೆ ಶಂಕರಾಚಾರ್ಯರು ಉತ್ಸವ ಮೂರ್ತಿ ಹೇಳಿ..ಎನಗೆ ಅದರ ಕೇಳಿ ರೋಮಾಂಚನ ಆತು.ಇನ್ನು ಮುಂದೆ ಬಪ್ಪ ಪ್ರವಚನದ ಸೀಡಿಲಿ ಅದರ ವಿಸ್ತಾರವ ನಿಂಗೋಗೆ ತಿಳಿವಲೆ ಎಡಿಗು. ಅದರ ತಾತ್ಪರ್ಯ ಎಂಥ ಹೇಳಿರೆ ನಮ್ಮ ಗುರುಗಕ್ಕೆ ಹೊಡಾಡಿದರೆ ಮೂವತ್ತಾರೂ ಗುರುಗಕ್ಕೆ ಹೊಡಾಡಿದ ಹಾಂಗೆ ಆಗಿ ನೇರವಾಗಿ ನಾರಾಯಣಂಗೆ ತಲುಪುತ್ತಡ ..ಎಂಗೋ ಅದರ ಸ್ವೀಕಾರ ಮಾಡ್ತ ಉತ್ಸವ ಮೂರ್ತಿ ಮಾತ್ರ..ಇಲ್ಲಿ ಎಂಥ ಅಭಿವೃದ್ಧಿ ಆವ್ತು ಅದು ಅವು ಎಂಗಳ ಮೂಲಕ ಆ ಗುರುಗಳ ಸಂಕಲ್ಪ ಅಷ್ಟೇ.. ಹೇಳಿ ಹೇಳಿದವು ಗುರುಗೊ…
  ಎನಗೆ ಕಂಡತ್ತು ಅವರ ವಿಸ್ತೃತ ರೂಪ ಅಪರಿಮಿತ ಹೇಳಿ,ಎಂಥಕೆ ಹೇಳಿರೆ ಅಶೋಕೆಯ ಸಂಪೂರ್ಣ ಚಿತ್ರಣ ಅಲ್ಲಿಗೆ ಹೋಪಲೆ ಎಡಿಗಾಗದ್ದವಕ್ಕೆ ನಮ್ಮ ಬೈಲಿಲಿ ಒಪ್ಪಣ್ಣನ ಮೂಲಕ ಅದು ಬಿತ್ತರಗೊಂಡ ರೀತಿ ನೋಡಿರೆ ಆ ಗುರುಗಳ ಶಕ್ತಿ ಎಷ್ಟು ಅಪರಿಮಿತ ಹೇಳುದಕ್ಕೆ ಬೇರೆ ಸಾಕ್ಷಿ ಬೇಕಾ?ಈ ಮೂಲಕ ನಮ್ಮ ಗುರು ಪರಂಪರಗೆ ಬೈಲಿನ ಎಲ್ಲೋರು ಮಾಡುವ ಚರಣ ಪ್ರಣಾಮಂಗ …
  ಹರೇ ರಾಮ..

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಆ ೪ ಜನ ಪುಳ್ಳರುಗಳಲ್ಲಿ ಆನುದೇ ಇದ್ದೆ. ಅಬ್ಬಾ ಆ ಸಾವಿತ್ರಕ್ಕನ ಶ್ರಧೆಯೆ, ಕೊನೆಯ ೨ ದಿನ ಅಕ್ಕನ್ಗೆ ಜೊರು ಜ್ವರ. ಆದರುದೆ ಕೆಲಸಕ್ಕೆ ತಡ ಮಾಡಿದ್ದಿಲ್ಲೆ – ಮಾಡದ್ದೆ ಕೂಯಿದಿಲ್ಲೆ. ಮೆಚ್ಚಿದೆ ಅಕ್ಕನ ಶ್ರಧೆಯ… ಗುರುಗಳ ಮಾತು ಕೇಳುವಾಗಲಂತೂ ಕಣ್ಣು ತುಂಬಿತ್ತು…

  [Reply]

  VA:F [1.9.22_1171]
  Rating: +2 (from 2 votes)
 4. premalatha

  ಚೆಂದಕೆ ಬರದ್ದೆ ತಮ್ಮಾ..
  ಆಹ್ಹಾ..! – “.ನಮ್ಮಾನ್ಗಿರ್ತೋರು ಒರಗೊದೊಂದೇ ಬಾಕಿ “, ಮತ್ತೆ “ಕೆಲವೆಲ್ಲ ತಲೆಗೆ ಹೋತು..ಇನ್ನು ಕೆಲವೆಲ್ಲ ತಲೆಮೆಲಂದ ಹೋತು..” :)

  …………ಆದರೆ ” ಅಶೋಕೆ ” ಮಾತ್ರ ಹೃದಯಕ್ಕೇ ಇಳಿತ್ತು, ಅಲ್ಲದಾ?
  ಹಳೆಮನೆ ಶರ್ಮರು’ ಬರದಹಾಂಗೆ ಮತ್ತೆ ಮತ್ತೆ ಅದನ್ನೇ ಬಯಸುಗು ಮನಸ್ಸು.
  ಬಯಸಿ ಬಂದವಕ್ಕೆ ಬಯಸಿದ್ದೆಲ್ಲ ಸಿಕ್ಕುಗು ಅಲ್ಲಿ. ಧರ್ಮ ಶ್ರೀಮಂತಿಕೆಯ ‘ರಾಮರಾಜ್ಯ’ವೆ ನೆಲೆಗೊಳ್ಳುಗಲ್ಲಿ…

  [Reply]

  VA:F [1.9.22_1171]
  Rating: 0 (from 0 votes)
 5. ಡೈಮಂಡು ಭಾವ
  ಸೂರ್ಯ

  ಒಪ್ಪಣ್ಣ.. ಕ್ಷಮಿಸೆಕ್ಕು ಒಪ್ಪ ಕೊಡುವಾಗ ರಜ್ಜ ತಡವಾತು..
  ನಿಜ ಹೇಳೆಕ್ಕಾರೆ ನಾಲ್ಕು ದಿನಗಳ ಹಿಂದೆಯೇ ಆನು ಈ ಲೇಖನ ಓದಿತ್ತೆ.. ಎಂಥರ ಬರೆಕು ಹೇಳಿ ಗೊಂತಾಯಿದಿಲ್ಲೆ…ಈ ಲೇಖನ ಓದಿಯಪ್ಪಗ ಅಶೋಕೆಗೆ ಹೋದ ಅನುಭವ ಆತು, ಶ್ರೀ ಗುರುಗಳ ಆಶಿರ್ವಚನ ಕೇಳಿದಾಂಗೆ ಆತು…
  ಈ ವರ್ಷ ಅಶೋಕೆಗೆ ಹೋಪಲೆ ಆಯಿದಿಲ್ಲೆ ಹೇಳ್ತ ಬೇಜಾರು ಎನಗಿದ್ದು, ಈ ಲೇಖನ ಆ ಬೇಜಾರಿನ ಭಾಗಶಃ ಕಡಮ್ಮೆ ಮಾಡಿದ್ದು.
  ಧನ್ಯೋಸ್ಮಿ …
  ಹರೇರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ದೊಡ್ಡಮಾವ°ಡಾಗುಟ್ರಕ್ಕ°ಪುತ್ತೂರುಬಾವದೊಡ್ಮನೆ ಭಾವಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಸರ್ಪಮಲೆ ಮಾವ°ಶರ್ಮಪ್ಪಚ್ಚಿಡಾಮಹೇಶಣ್ಣನೀರ್ಕಜೆ ಮಹೇಶಚುಬ್ಬಣ್ಣಚೆನ್ನೈ ಬಾವ°ಪುಟ್ಟಬಾವ°ವೇಣಿಯಕ್ಕ°ಅಡ್ಕತ್ತಿಮಾರುಮಾವ°ಸುವರ್ಣಿನೀ ಕೊಣಲೆಬೋಸ ಬಾವವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿಗೋಪಾಲಣ್ಣವೇಣೂರಣ್ಣಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ