ಜಾಗೆ `ಮಾರಿ’ ಪೈಸೆ ಮಾಡಿ; ಆದರೆ ಜಾಗೆ `ಕೊಟ್ಟು’ ಬಡವಾಗೆಡಿ..

ಬೈಲಿಲೇ ಸಿಕ್ಕುತ್ತ ತರಾವರಿ ಹಣ್ಣುಗೊ ಯೇವದಿದ್ದು ಹೇದು ನಾವು ಕಳುದವಾರ ಮಾತಾಡಿದ್ದು.
ಮದಲಿಂಗಾದರೆ ನಾನನಮುನೆ ಕಾಟು(ಕಾಡು) ಹಣ್ಣುಗೊ-ಕಾಯಿಗೊ-ಹುಳಿಗೊ ಎಲ್ಲವೂ ಇದ್ದತ್ತು;
ಬೋಳುಗುಡ್ಡೆಗಳಲ್ಲಿ ಬಿಂಗಿಮಕ್ಕೊಗೆ ತಿಂಬಲೆ ಸಿಕ್ಕಿಂಡಿದ್ದತ್ತು; ಎಲ್ಲೋದರ ರುಚಿಯೂ ನೋಡ್ಳೆ ಎಡಿಗಾಗಿಂಡಿದ್ದತ್ತು.
ಈಗ ಕಾಲಿಜಾಗೆಯೇ ಇಲ್ಲೆ ಬಿಡಿ! ಇಪ್ಪ ಜಾಗೆಗೂ ಎಲ್ಲ ಬೇಲಿಬಲುಗಿ “ಇದು ಎನ್ನದು” ಹೇದು ಗುರ್ತ ಮಾಡಿದ್ದು ಸಮಾಜ.
ಎಷ್ಟೋ ಕಾಲುದಾರಿಗೊ ಮುಚ್ಚಿದ್ದು, ಎಷ್ಟೋ ಮಾರ್ಗಂಗೊ ಮೋರೆಪೀಂಟುಸಿದ್ದು, ಎಷ್ಟೋ ದಿಕ್ಕೆ ಕಟ್ಟಪುಣಿಗೊ ಕಾಣೆ ಆಯಿದು!
ನಮ್ಮ ಅಜ್ಜಂದ್ರು ಪುನಾ ಹುಟ್ಟಿಬಂದರೆ ಅವಕ್ಕೆ ಊರೇ ಗುರ್ತ ಸಿಕ್ಕ!
ಅಪ್ಪೋ!!
~
ಮನ್ನೆ ಆಚಮನೆ ದೊಡ್ಡಣ್ಣನ ಮಗಳಿಂಗೆ ಬಾರ್ಸಿದ್ದು ನಿಂಗೊಗೆ ಗೊಂತಿದ್ದನ್ನೇ? ಅಲ್ಲಿಗೆ ಅಪುರೂಪದ ಬೊಂಬಾಯಿಬಾವ° ಬಂದದೂ ನಿಂಗೊಗೆ ಅರಡಿಗು. ಉಂಡಿಕ್ಕಿ ಸಂಸಾರಸಮೇತ ಅವು ಮಾಷ್ಟ್ರುಮಾವನಲ್ಲಿಗೆ ಬಂದಿತ್ತವು, ಅಲ್ಲದೋ? ಅಲ್ಲಿಗೆ ಕಳುದವಾರ ಶುದ್ದಿ ನಿಂದಿತ್ತಿದ್ದು.
ಅಲ್ಲಿಗೆತ್ತಿ ಅಪ್ಪದ್ದೇ, ಏನೊಳ್ಳೆದು, ಹಳೆಪರಿಚಯ ಹೊಸತ್ತಾಗಿ, ಹೆಮ್ಮಕ್ಕಳ ಮಾತುಕತೆ ಶುರು ಆಗಿ, ಮಕ್ಕಳ ಬೊಬ್ಬೆ ಶುರು ಆದ್ದದು ಮಾತಾಡಿದ್ದಿಲ್ಲೆ.
ಬೊಂಬಾಯಿ ಬಾವನೂ, ಮಾಷ್ಟ್ರುಮಾವನೂ, ಆಚಮನೆ ದೊಡ್ಡಪ್ಪನೂ ಕೂದುಗೊಂಡು ಲೋಕಾಭಿರಾಮ ಮಾತಾಡಿದವು – ಹೇಳ್ತದರ ನಿಂಗೊ ಅಂದಾಜಿಮಾಡಿಪ್ಪಿ.
ಅಲ್ಲಿ ಮಾತಾಡುವಗ ಎಂತ ಶುದ್ದಿ ಬಂತು?  ಅಂಬಗ ಮಾತಿಂಗೆ ಬಂದದೇ ಈ ವಾರದ ಶುದ್ದಿ; ಆಗದೋ! 🙂
~
ಬೊಂಬಾಯಿ ಬಾವನ ಬಗ್ಗೆ ಕಳುದ ವಾರ ಮಾತಾಡುವಗ ಒಪ್ಪಣ್ಣಂಗೆ ಒಂದು ಶುದ್ದಿ ಹೇಳುಲೆ ಬಿಟ್ಟೋಯಿದು.
ಅವು ಬೊಂಬಾಯಿಲಿ ದುಡುದು ಮಾಡಿದ ದೊಡಾ ಪೈಸೆಲಿ ನಮ್ಮ ಬೈಲಕರೆಲಿ ಒಂದು ದೊಡಾ ಜಾಗೆ ಮಾಡಿದ್ಸವು – ಹೇಳ್ತದು.
ಪೇಟೆಂದ ನಮ್ಮ ಬೈಲಿಂಗೆ ಬತ್ತ ದಾರಿಲೇ – ಕುಂಞತ್ತೆಮನೆಯ ಹತ್ತರೆ ಆಗಿ, ದೊಡ್ಡ ಮಾರ್ಗದ ಕರೇಲೆ – ಎರಡೆಕ್ರೆ ಜಾಗೆ ಅಂದೇ ಬರೆಶಿ ಮಡಗಿದ್ದವು.
ಅವರ ಪಿತ್ರಾರ್ಜಿತ ಆಸ್ತಿ ಓ ಅಲ್ಲಿ – ಪಟ್ಟಾಜೆ ಹೊಡೆಲಿ ಇದ್ದರೂ, ಇದೊಂದು ಅವರದ್ದೇ ಆಸಕ್ತಿಲಿ ಸ್ವಾರ್ಜಿತ ಮಾಡಿಗೊಂಡದು.
ಮುಂದೆ ಒಂದಿನ ರಿಠೇರ್ಡು ಅಪ್ಪ ಕಾಲಕ್ಕಾತು ಹೇಳಿಗೊಂಡೋ ಏನೋ – ಏನೇ ಆದರೂ ನಮ್ಮ ಊರಿಲೇ ನೆಲೆಯೂರುವ ಅಂದಾಜು! ಒಳ್ಳೆದೇ.
~
ಮೊನ್ನೆ ಮಾತಾಡುವಗ ‘ಕಾಸ್ರೋಡಿಲಿ ಸಣ್ಣ ಜಾಗೆ ಕೊಡುದು ಏನಾರು ಇದ್ದರೆ ತೆಗೇಕು’ – ಹೇಳಿದವು ಮಾಷ್ಟ್ರುಮಾವನ ಹತ್ತರೆ.
ಅಂದು ಮಾಡಿದ ಓ ಆ ಪೇಟೆಕರೆ ಜಾಗೆ ಇಲ್ಲೆಯೋ, ಅದರ ಕೊಡ್ತ ಅಂದಾಜಿಯೋ – ಆಚಮನೆ ದೊಡ್ಡಪ್ಪ° ಕೇಳಿದವು.
‘ಅಲ್ಲ, ಅದರ ಕೊಡ್ಳಿಲ್ಲೆ, ಇದೊಂದು ಇದ್ದರೆ ಮಾಡಿಗೊಂಬೊ°, ಮುಂದಕ್ಕೆ ಒಳ್ಳೆ ಕ್ರಯ ಬಂದಪ್ಪಗ ಕೊಡ್ಳೆ ಒಂದು ಇರಳಿ – ಹೇದು. ಮುಂದೆ ಜಾಗೆ ಮಾರುವ ಒಯಿವಾಟು ಸುರುಮಾಡುವ ಅಂದಾಜು.
ಈಗ ಒಂದು ಕ್ರಯಕ್ಕೆ ತೆಗದ ಜಾಗೆಯ ಮಾರಿ, ಅದರಿಂದ ಒಳ್ಳೆ ಕ್ರಯದ ಜಾಗೆ ಮಾಡುದು; ಹೀಂಗೇ ಕೈಯಾನ ಕೈ ಮಾಡಿ ಅಪ್ಪಗ ಅದುವೇ ಒಂದು ಒಯಿವಾಟು ಆವುತ್ತು’ – ಹೇಳ್ತದು ಬೊಂಬಾಯಿ ಬಾವನ ಅಭಿಪ್ರಾಯ.
ಕುಣಿಯ ಕಟ್ಟಂದ ಒಂದು ಸೊಪ್ಪು ತಪ್ಪಲೆ ಒಳ ಹೋಗಿದ್ದ ಮಾಷ್ಟ್ರುಮಾವ° ಬಂದಕೂಡ್ಳೇ ಹೇಳಿದವು ’ಜಾಗೆ ಮಾರೆಕ್ಕು, ಆದರೆ ಜಾಗೆ ಕೊಡ್ಳಾಗ’ ಹೇದು.

ಕೊಟ್ಟ ಜಾಗೆ ನಮ್ಮದಲ್ಲ!

~
ಜಾಗೆಮಾರುದು – ಜಾಗೆ ಕೊಡುದು; ಎರಡುದೇ ಒಂದೇ ಹೇದು ಗ್ರೇಶುದು ಬೇಡ – ಹೇಳಿಗೊಂಡು ಮಾಷ್ಟ್ರುಮಾವನೇ ಅದರ ವಿವರಣೆ ಸುರುಮಾಡಿದವು.
~
ಜಾಗೆ ಕೊಡುದು:
ನಮ್ಮ ಹುಟ್ಟು-ಬೆಳವಣಿಗೆ ಆದ ಒಂದು ನಿರ್ದಿಷ್ಟ ಜಾಗೆ ಇದ್ದು ಹೇಳಿ ಆದರೆ, ನಮ್ಮ ಹೆರಿಯೋರು ಉದಿಸಿ, ಬಾಳಿ, ಬೆಳಗಿದ ಜಾಗೆ ಇದ್ದು ಹೇದು ಆದರೆ, ನಮ್ಮ ಪಿತ್ರಾರ್ಜಿತವಾದ ಆಸ್ತಿ ಇದ್ದು ಹೇದು ಆದರೆ ಅದು ನಮ್ಮ ಜೀವನದ ಮೂಲಭೂತವಾದ ಜಾಗೆ.
ನಮ್ಮ ಬಾಲ್ಯ, ನಮ್ಮ ಸಂಸ್ಕಾರ, ನಮ್ಮ ಆಚಾರ-ವಿಚಾರಂಗೊ, ಇದೆಲ್ಲವೂ ಆ ಜಾಗೆಲೇ ನೆಡದಿರ್ತು.
ದನ, ಹಟ್ಟಿ, ಜಾಲು, ತೋಟ, ಕೈತೋಟ, ನೆಟ್ಟಿತೋಟ, ಬಾವಿ, ಕೆರೆ, ದಾಸನ ಹೂಗು, ತೋಡು – ಇದೆಲ್ಲವೂ ಆ ಪರಿಸರದ್ದೇ ನಮ್ಮ ತಲೆಲಿ ಅಚ್ಚಾಗಿ ನಿಂದಿರ್ತು.  ಆ ಚಿತ್ರಂಗೊ ಸಾವನ್ನಾರ ನಮ್ಮ ಮನಸ್ಸಿಂದ ಹೋವುತ್ತಿಲ್ಲೆ.
ಪ್ರಾಥಮಿಕವಾಗಿಪ್ಪ, ಹೆರಿಯೋರಿಂದ ಬಂದ ಈ ಜಾಗೆಯ ನಾವು ನಮ್ಮ ಕಿರಿಯರಿಂಗೆ ಎತ್ತುಸೆಕ್ಕು.
ಈಗಾಣ ಕಾಲಲ್ಲಿ ಜಾಗೆಗೊಕ್ಕೆ ವಿಪರೀತ ಕ್ರಯ!
ಹೆಚ್ಚು ಕ್ರಯ ಸಿಕ್ಕುತ್ತು ಹೇಳಿಗೊಂಡು ಈ ಮೂಲಭೂತ ಅಸ್ತಿತ್ವದ ಜಾಗೆಯನ್ನೇ ಒಂದುದಿನ ಯೇವದಾರು ಕೊಚ್ಚಿಯ ಜೆನಕ್ಕೋ, ಶಾಂತಿಪ್ರಿಯ ಧರ್ಮದ ಟೊಪ್ಪಿಗೋ ಮಣ್ಣ ಕೊಟ್ಟತ್ತು ಹೇಳಿ ಆದರೆ ಎಂತಕ್ಕು?
ನಾವು ಬಾಲ್ಯಲ್ಲಿ ನೋಡಿ ಬೆಳದ ಯೇವ ಚಿತ್ರಣವೂ ಮುಂದೆ ಕಾಣ್ತಿಲ್ಲೆ,
ನಮ್ಮ ಹೆರಿಯೋರು ನೆಡಕ್ಕೊಂಡು ಬಂದ ದೇವರೊಳ, ಬೂತಸ್ಥಾನ, ಬ್ರಮ್ಮರಕ್ಕಸ ಗುಡಿ, ನಾಗನ ಕಟ್ಟೆ – ಯೇವದೂ ಮತ್ತೆ ಕಾಂಬಲೆ ಸಿಕ್ಕುತ್ತಿಲ್ಲೆ,
ಕುಟುಂಬದ ಎಲ್ಲೋರುದೇ ಒಟ್ಟು ಸೇರಿ ಆಚರಣೆ ಮಾಡಿದ ದೀಪಾವಳಿ, ಕೆಡ್ವಾಸ – ಹೀಂಗಿರ್ತ ಹಬ್ಬಂಗಳ ಪುನಾ ಆ ಜಾಗೆಲಿ ಆಚರುಸಲೆ ಎಡಿತ್ತಿಲ್ಲೆ.
ಎಲ್ಲದಕ್ಕಿಂತ ಹೆಚ್ಚಾಗಿ, ನಮ್ಮ ಸಂಸ್ಕಾರದ ನಮ್ಮ ಅಸ್ತಿತ್ವದ ಭಾಗ ಆಗಿಪ್ಪ ನಮ್ಮ ಮನೆ ಹೆಸರು ನಮ್ಮ ಕೈಲಿ ಇರ್ತಿಲ್ಲೆ!
ಉದಾಹರಣೆಗೆ:
ಪೊಸವಣಿಕೆ ಭಾವನ ಕೈಲಿ ಪೊಸವಣಿಕೆ ಇಲ್ಲೆ, ಹಳೆಮನೆ ಅಪ್ಪಚ್ಚಿಯ ಕುಟುಂಬಲ್ಲಿ ಹಳೆಮನೆ ಇಲ್ಲೆ, ದೊಡ್ಡಮಾಣಿ ಭಾವನ ಕೈಲಿ ದೊಡ್ಡಮಾಣಿ ಇಲ್ಲೆ, ಮೋಂತಿಮಾರು ಮಾವನ ಕೈಲಿ ಮೋಂತಿಮಾರು ಇಲ್ಲೆ!
ಅಸ್ರಪ್ ಪೊಸವಣಿಕೆ! ಯೂಸುಪ್ ಹಳೆಮನೆ! ಇಬ್ರಾಯಿ ದೊಡ್ಡಮಾಣಿ!! – ಹು!! ಇದರೆಲ್ಲ ಗ್ರೇಶಲೂ ಎಡಿತ್ತಿಲ್ಲೆ!!
(ಅಂದೊಂದರಿ ಮಾಣಿಪ್ಪಾಡಿಯ ಕತೆ ಮಾತಾಡಿದ್ದು ನಾವು, ನೆಂಪಿದ್ದೋ?)
ಸಮಾಜ ನಮ್ಮ ಗುರುತುಸುದೇ ನಮ್ಮ ಜಾಗೆಯ ಮೂಲಕ.
ಇಂತಾ ದಿಕ್ಕೆ ಇಪ್ಪ, ಇಂತವನ ಮಗ°, ಇಂತವ° – ಹೇದು. ಹಾಂಗಿಪ್ಪಗ ನಾವು ನಮ್ಮ ಜಾಗೆಯನ್ನೇ ಕೊಟ್ಟು, ಕಳಕ್ಕೊಂಬಲಾಗ – ಹೇಳ್ತದು ಈ “ಜಾಗೆ ಕೊಡುವ” ವಿಚಾರದ ಅಂತಃಸತ್ವ.
ಕಣ್ಣೆದುರಿನ ಉದಾಹರಣೆಯೂ ಬೈಲಿಲೇ ಇಪ್ಪಗ, ಆಚಮನೆ ದೊಡ್ಡಪ್ಪನೂ ಸೇರಿಗೊಂಡು ವಿವರುಸಿದವು.
ಒಂದು ಮನೆಲಿ ಅಣ್ಣ-ತಮ್ಮ ಇಬ್ರು! – ಬೊಂಬಾಯಿಬಾವಂಗೆ ಹೇಂಗೂ ಗುರ್ತ ಇಲ್ಲೇದು ಹೆಸರು ಹೇಳಿದ್ದವಿಲ್ಲೆ ಆಚಮನೆ ದೊಡ್ಡಪ್ಪ°!
ಪಿತ್ರಾರ್ಜಿತ ದೊಡಾ ಆಸ್ತಿಯ ಪಾಲು ಮಾಡುಸಿಗೊಂಡ ತಮ್ಮ, ಅಂಬೆರ್ಪಿಲಿ ಆ ಜಾಗೆಯ ಒಂದು ಮಮ್ಮದೆಗೆ ಮಾರಿಕ್ಕಿ, ಸಿಕ್ಕಿದ ಪೈಶೆಲಿ ಪೇಟೆಕರೆಲಿ ಹತ್ತು ಸೆಂಟ್ಸು ಕಾಲಿಜಾಗೆಯೂ, ಅದರ್ಲಿ ಒಂದು ಮನೆಯೂ ಕಟ್ಟಿಗೊಂಡ°.
ಪೈಶೆ ಮುಗಿವನ್ನಾರ ಪೇಪರು ತರುಸಿದ°. –ಹಾ°, ಒಪ್ಪಣ್ಣಂಗೆ ಅಂದಾಜಿ ಆತು, ಆರ ಶುದ್ದಿ ಇದು – ಹೇಳ್ತದು.
ಪೈಶೆ ಮುಗುದ ಮತ್ತೆ?  ಮತ್ತೆ – ಕಾಲಿ! ಈಗ ಯೇವದೋ ಒಂದು ಅಂಗುಡಿಗೆ ಲೆಕ್ಕ ಬರವಲೆ ಹೋಪದಡ.
ಅವರ ಬಗ್ಗೆ ಇನ್ನೂ ತುಂಬ ವಿವರ ಒಪ್ಪಣ್ಣಂಗೆ ಅರಡಿಗು; ಇನ್ನೊಂದರಿ ವಿವರವಾಗಿ ಹೇಳುವೊ°, ಇಂದು ಬೇಡ.
ಇವಂಗೆ ಕೊಟ್ಟ ಆ ಮೂರುಕಾಸಿನ ಬೆಲೆಗೆ ಆ ಮಮ್ಮದೆ ಪುನಾ ಜಾಗೆ ಕೊಡುಗೊ?
ಇವೆಲ್ಲ ಜಾಗೆ ಕೊಟ್ಟು ಕೆಟ್ಟವು.
ಇನ್ನು ಪುನಾ ಮದಲಾಣ ಹಾಂಗೆ, ಅವರ ಹೆರಿಯೋರ ರಾಜ್ಯವ ಕಟ್ಳೆ ಎಡಿಗೋ?! – ಕೇಳಿದವು ಮಾಷ್ಟ್ರುಮಾವ°.
~
ಜಾಗೆಮಾರುದು:
ಜಾಗೆ ಕೊಡುದು ಹೇದರೆ ಎಂತ –ಹೇದು ಗೊಂತಾತಲ್ಲದೋ? ಇದು ಇನ್ನೊಂದು – ಜಾಗೆ ಮಾಡುದು.
ನಮ್ಮ ಮೂಲಭೂತ ಜಾಗೆಯ ಒಳಿಶಿಗೊಂಡು, ಅಲ್ಲೇ ಜೀವನ ಮಾಡಿಗೊಂಡು, ಬೇರೆ ಹೊಸ ಜಾಗೆ ತೆಗವದು – ಮಾರುದು – ತೆಗವದು – ಮಾರುದು!
ಇದೊಂದು ಜೀವನೋಪಾಯದ ದಾರಿ ಆಯಿಪ್ಪಲೂ ಸಾಕು, ಅದೇ ಅವನ ಒಯಿವಾಟು ಆಯಿಪ್ಪಲೂ ಸಾಕು.
ಎಷ್ಟೇ ಹೊಸ ಜಾಗೆ ತೆಗೆಯಲಿ, ಕ್ರಯ ಬಂದ ಮತ್ತೆ ಮಾರಲಿ – ಆದರೆ ಆ ಮೂಲಜಾಗೆಯ ಹಾಂಗೇ ಒಳಿಶಿಗೊಳೆಕ್ಕು – ಹೇಳ್ತ ಉದ್ದೇಶ ಇದರ ಮಾಡ್ತವಂಗೆ ಇರ್ತು.
ಉದಾಹರಣೆಗೆ, ಜೋಗಿಬೈಲು ಮಾವಂಗೆ ದೊಡ್ಡಾ ಒಯಿವಾಟು ಪುತ್ತೂರಿಲಿ.
ಪೇಟೆಕರೆಲಿ ಒಂದು, ಬಷ್ಟೇಂಡಿನ ಹಿಂದೆ ಇನ್ನೊಂದು, ರಾಮಜ್ಜನ ಕೋಲೇಜಿನ ದಾರಿಲೆ ಮತ್ತೊಂದು – ಹಾಂಗೆ ಒಟ್ಟು ಮೂರು ಜಾಗೆ ಇದ್ದಡ ಈಗ ಅವರ ಕೈಲಿ.
ತೆಗದು ಆರು ತಿಂಗಳಾತು, ಕ್ರಯ ಏರಿಗೊಂಡಿದ್ದು – ಒಳ್ಳೆ ಪಾರ್ಟಿ ಬಂದ ಕೂಡ್ಳೆ ಕೊಡುದೇ – ಹೇಳ್ತವು ಅವು.
ಆಗಲಿ, ಎಷ್ಟೇ ಕೊಡ್ಳಿ ಬಿಡ್ಳಿ, ಅವರ ಜೋಗಿಬೈಲು ಜಾಗೆಯ ಒಳಿಶಿಗೊಂಡು, ಅಲ್ಲಿ ಕೃಷಿ-ಹಟ್ಟಿ-ದನ-ಸಂಸಾರ ಎಲ್ಲವನ್ನೂ ಬೆಳೆಶಿಗೊಂಡು ಬತ್ತಾ ಇದ್ದವಲ್ಲದೋ! – ಹಾಂಗೆ ಇರೆಕ್ಕು – ಹೇಳಿದವು ಮಾಷ್ಟ್ರುಮಾವ°.
ಇದು ಜಾಗೆ ಮಾರುದು. ಒಯಿವಾಟಿಂಗೆ ಬೇಕಾಗಿ.
~
ನಮ್ಮ ಊರಿಲಿ ಆರಾರೊಬ್ಬ° ಒಂದು ಕಾರ್ಯ ಸುರುಮಾಡಿರಾತು, ಅದು ಒಳ್ಳೆದೋ – ಕೆಟ್ಟದೋ ವಿವೇಚನೆ ಮಾಡದ್ದೇ ಕೆಲವು ಜೆನ ಅನುಸರುಸುಗಡ. ಒಳ್ಳೆದಾದರೆ ಅನುಸರುಸಲಿ, ಆದರೆ ವಿವೇಚನೆ ಮಾಡೆಡದೋ!
ಉದಾಹರಣೆಗೆ, ಅಜ್ಜಕಾನಬಾವ° ಅಂದು ಹೇಳಿದ ಲೊಟ್ಟೆ ಕತೆ ನೆಂಪಾವುತ್ತು:
ದೊಡ್ಡಬಾವ° ಒಂದರಿ ಮಾವುಂಗಲ್ಲು ಮೂರುಮಾರ್ಗ ಸೇರ್ತ ಜಾಗೆಲಿ ನಿಂದಲ್ಲೇ ಮೂರುಸುತ್ತ ಬಂದವವಡ. – ಹತ್ತರೆ ನಿಂದುಗೊಂಡು ನೋಡಿದ ಬೆಳಿಟೊಪ್ಪಿ ಜೆನವುದೇ ಸುತ್ತ ಬಂತು.
ಬೆಳಿಟೊಪ್ಪಿಯ ಪಳ್ಳಿಯ ಐವತ್ತು ಟೊಪ್ಪಿಗೊ- ಅವರ ಗುರು ಸುತ್ತ ಬಪ್ಪದು ನೋಡಿ ಅವುದೇ ತಿರುಗಲೆ ಸುರುಮಾಡಿದವು,
ಈಗ ಆ ಊರಿನ ಪಳ್ಳಿಯೋರೆಲ್ಲ ದಿನಕ್ಕೊಂದರಿ ಬಂದು ಅಲ್ಲಿ ಸುತ್ತು ಹಾಕಿ ಹೋವುತ್ತದು ವಾಡಿಕೆ ಅಡ!
ಹಾಂಗಾಗಿಯೇ ಅದಕ್ಕೆ ಈಗ “ಮಾವುಂಗಲ್ಲು ಸರ್ಕಲ್ಲು(ವೃತ್ತ)” ಹೇಳ್ತದಡ.
ದೊಡ್ಡಬಾವ° ಸುತ್ತು ಬಂದದೆಂತಕೆ? – ಯೇವದೋ ಶಾಲೆ ಬೋರ್ಡು ನೋಡ್ಳೆ ಆಯಿಕ್ಕು!!
ಇದು ಆ ಟೊಪ್ಪಿಜೆನಕ್ಕೆ ಗೊಂತಿದ್ದೋ, ಅದು ವಿವೇಚನೆ ಇಲ್ಲದ್ದೆ ತಿರುಗಿತ್ತು, ಈಗ ಸರ್ಕಲ್ಲು ಒರೆಂಗೆ ಎತ್ತಿತ್ತು!
ಇನ್ನು ಆ ಲೆಕ್ಕಲ್ಲಿ ದೊಡ್ಡಭಾವಂದು ‘ತಿರುಗುತ್ತ ಮೂರ್ತಿ’ ಒಂದು ಸ್ಥಾಪನೆ ಆವುತ್ತೋ ಏನೋ – ಉಮ್ಮ!
(ಹು, ಈ ಲೊಟ್ಟೆಕತೆ ನಂಬಿಕ್ಕೆಡಿ. ಅಭಾವನ ರೈಲು ಕೇಳಿರಾಗ!)

ಅದೇನೇ ಇರಳಿ, ಒಬ್ಬ ಮಾಡಿದ್ದರ ಅಂಧಾನುಕರಣೆ ನಮ್ಮ ಊರಿಲಿ ಇದ್ದು – ಹೇಳ್ತದು ಇದರ ತಾತ್ಪರ್ಯ.
ಹೆಚ್ಚಿನ ಜಾಗೆ ಕೊಟ್ಟು ಹೋಪದೂ ಇದೇ ಕಾರಣಕ್ಕಾಗಿಯೇ ಹೇಳ್ತದು ಅವರ ಅಭಿಪ್ರಾಯ.
ಒಬ್ಬ° ಕೊಟ್ಟ° – ಇನ್ನೊಬ್ಬ° ಕೊಟ್ಟ° – ಸುತ್ತುಮುತ್ತ ಎಲ್ಲೋರುದೇ ಕೊಟ್ಟವು!
ಮತ್ತೆ ಒಳುದ ಒಬ್ಬಂಗೆ ಉಸುಲು ಕಟ್ಟುತ್ತ ಪರಿಸ್ಥಿತಿ. ಮನಸ್ಸಿಲ್ಲದ್ದರೂ ಅನಿವಾರ್ಯವಾಗಿ ಕೊಟ್ಟ°.
ಇದೇ ಕಾರಣಕಾಗಿ ಕಾಸ್ರೋಡಿನ ಕೆಲವು ಪರಿಸರಂಗಳಲ್ಲಿ ಈಗ ಹಿಂದುಗಳ ಸಂಕೆಯೇ ಕಮ್ಮಿ.
ಕೆಲವು ದಿಕ್ಕೆ ಊರಿಂಗೆ ಊರೇ ನಮ್ಮ ಕೈಲಿಲ್ಲೆ ಈಗ. ಪೂರಾ ಪಚ್ಚೆಕೊಡಿ. ಛೇ!
(ಬಂಡಾಡಿಅಜ್ಜಿ ತಂಬುಳಿಮಾಡ್ತ ಪಚ್ಚೆಕೊಡಿ ಅಲ್ಲ!)
~
ಇದೂ ಒಂದು ನಮುನೆಲಿ ಅತಿಕ್ರಮಣವೇ ಅಲ್ಲದೋ – ನಮ್ಮ ಸಂಸ್ಕಾರದ ಮೇಲೆ ಆವುತ್ತಾ ಇಪ್ಪ ಧಾಳಿ ಅಲ್ಲದೋ – ಅನುಸುದು ಒಂದೊಂದರಿ ಮಾಷ್ಟ್ರುಮಾವಂಗೆ.
ಸರ್ಪಮಲೆಮಾವ° ಓ ಮೊನ್ನೆ ಒಂದು ಕಾದಂಬರಿ ಓದಿದ ಶುದ್ದಿ ಹೇಳಿತ್ತಿದ್ದವು.
ತಿಂಮೋಜ ಹೇಳ್ತ ಜೆನ ಪೋರ್ಚುಗೀಸರ ಸೈನ್ಯದ ಒಟ್ಟಿಂಗೆ ಸೇರಿ – ಆದಿಲ್ ಶಾನ ದರ್ಬಾರು ನಿಲ್ಲುಸಲೆ ಹೆರಟತ್ತಡ.
ಆದ್ಸೆಂತರ? ಅಕ್ಕಿತಿಂತೋನು ಹೋದರೆ ಉಮಿ ತಿಂತೋನು ಬಕ್ಕು –  ಪೋರ್ಚುಗೀಸರು ಇಡೀ ಸಮಾಜವನ್ನೇ ಸಮಾ ಗೀಸಿದವಡ!
ಅದರ ಬಗ್ಗೆ ವಿವರವಾಗಿ ಸರ್ಪಮಲೆಮಾವನೇ ಹೇಳುಗೋ ಏನೋ. ಉಮ್ಮ! 😉
~
ಇಂದು ಸಿಕ್ಕುವ ದೊಡ್ಡ ಪೈಶೆಗೆ ಜಾಗೆ ಕೊಟ್ಟರೆ, ನಾವು ಆ ಪೈಶೆಲಿ ಬೇರೆಮನೆ ಮಾಡಿ ಆರಾಮಲ್ಲಿ ಬದುಕ್ಕುಗು.
ಆದರೆ ಭೂಮಿಲಿ ಮಣ್ಣಾದ ನಮ್ಮ ಅಜ್ಜಂದ್ರು, ಅಜ್ಜಿಯಕ್ಕೊ, ನಮ್ಮ ದನಗೊ, ನಮ್ಮ ಅಡಕ್ಕೆತೋಟ – ಎಲ್ಲ ಎಲ್ಲಿಗೆ ಹೋಯೆಕ್ಕು?
ನಾವು ಕೊಟ್ಟದನ್ನೇ ತೆಕ್ಕೊಳ್ತ ಭೂತ-ಬಂಡಾರಂಗೊ ಎಲ್ಲಿಗೆ ಹೋಪದು?
ನಮ್ಮ ಜಾಗೆಯ ರಕ್ಷಣಗೆ ಇದ್ದಿದ್ದ ಬ್ರಮ್ಮರಕ್ಕಸಂಗೆ ಎಂತ ಗೆತಿ?
ನಾವು ಜಾಗೆ ಕೊಡುವಗ ಒಳ್ಳೆಜೆನ ನೋಡಿಯೇ ಕೊಡ್ತು ಮಡಿಕ್ಕೊಂಬ, ನವಗೆ ಇಪ್ಪ ಭಾವನೆ ಆ ಜೆನಕ್ಕೆ ಇರ್ತಿಲ್ಲೆ.
ನಮ್ಮತ್ರಂದ ತೆಕ್ಕೊಂಡ ನಾಕುಪಾಲು ಪೈಶೆಗೆ ಆ ಜೆನ ಇನ್ನೊಂದಕ್ಕೆ ಮಾರ್ತು, ನಮ್ಮ ಕಣ್ಣೆದುರೇ.
ಅಷ್ಟಪ್ಪಗ – ಒಳ್ಳೆ ಹೋಗಿ ಮಂಡೆಲಿ ಆವುತ್ತತ್ತೆ!
~
ಇತಿಹಾಸಲ್ಲಿ ಮೊಗಲರಿಂದ, ಕ್ರಿಶ್ಚನಿನೋರಿಂದ ಎಷ್ಟೋ ದಿಕ್ಕೆ, ಎಷ್ಟೋ ವಿಧಲ್ಲಿ ಆಕ್ರಮಣ ಆಯಿದು ನಮ್ಮ ಸಮಾಜದ ಮೇಲೆ.
ಈಗ – ಇಬ್ರಿಂದಲೂ ಒಟ್ಟಾಗಿ – ಆವುತ್ತಾ ಇಪ್ಪ ಆಕ್ರಮಣವೇ ಇದು.
ಇದರ ನಾವು ತಡೇಕಾರೆ ನಾವೆಲ್ಲರೂ ಒಟ್ಟಾಗಿ ನಿಂದು “ಜಾಗೆ ಕೊಡೆ” ಹೇದು ಗಟ್ಟಿಯಾಗಿ ಹೇಳೇಕಡ.
ಮಾಷ್ಟ್ರುಮಾವ° ಹೇಳಿದವು.
~
ಅಂತೇ ಹೀಂಗೇ ಮಾತಾಡುವಗ ಈ ಸಂಗತಿ ಕೆಮಿಗೆ ಬಿದ್ದದು ತಲೆಲಿ ಕೊರವಲೆ ಸುರು ಆತು.
ಬೊಂಬಾಯಿಬಾವಂಗೆ ಈ ಶುದ್ದಿ ಎಲ್ಲ ಮಾಷ್ಟ್ರುಮಾವ° ಹೇಳೇಕಾಗಿ ಇಲ್ಲೆ, ಅವಕ್ಕೇ ಅರಡಿಗು. ಆದರೂ – ಹಳ್ಳಿಲಿ ಹಾಂಗೇ ಅಲ್ಲದೋ, ಒಂದರ ಮಾತಾಡ್ಳೆ ಸುರುಮಾಡುವಗ ಎಲ್ಲವೂ ಬಕ್ಕು!
ಬೊಂಬಾಯಿಬಾವ ಜಾಗೆ ಮಾರುಗು, ಆದರೆ ಜಾಗೆ ಕೊಡ್ತವಿಲ್ಲೆ ನಿಘಂಟು. ನಿಂಗೊ?
~
ಒಂದೊಪ್ಪ: ಜಾಗೆ ಕೊಡೆಕಾರೆ ಭಾವನೆಯನ್ನೂ ಕೊಡೆಕ್ಕಾವುತ್ತು.

ಒಪ್ಪಣ್ಣ

   

You may also like...

33 Responses

 1. ನೀರ್ಕಜೆ ಮಹೇಶ says:

  ಹಿಂದೆ ಇದ್ದೆ ಹೇಳಿರೆ ಬರೇ ಸಪೋರ್ಟ್ ಮಾಡುಲಲ್ಲ.. ನಿಂಗಳ ದಾರಿಲೇ ಬತ್ತಾ ಇದ್ದೆ 🙂

  • jayashree.neeramoole says:

   ಶುದ್ದಿ ಕೇಳಿ ತುಂಬಾ ಖುಷಿ ಆವುತ್ತಾ ಇದ್ದು… ಅತ್ಯಂತ ಒಳಿತಾಗಲಿ ಹೇಳಿ ಹೃದಯಾಂತರಾಳದ ಶುಭ ಹಾರೈಕೆಗ…
   ಹೊಸ ಜೀವನಕ್ಕೆ ಹೊಂದಿಗೊಮ್ಬನ್ನಾರ ಎಂತಾರೂ ತಪ್ಪು ಮಾಡಿದನೋ ಹೇಳುವ ಸಣ್ಣ ಅಳುಕು ಇರುತ್ತು ಮನಸ್ಸಿಲ್ಲಿ… ಒಂದರಿ ಹೊಂದಿಗೊಂಡ ಮೇಲೆ ‘ಆ ಹಿಂಸೆ,ಕ್ರೌರ್ಯ,ಅವ್ಯವಸ್ಥೆ ಬಗ್ಗೆ ನಿತ್ಯ ಪೇಪರಿಲ್ಲಿ, ಟಿ.ವಿ. ಲ್ಲಿ ನೋಡುವಾಗ ಆನೆಷ್ಟು ಒಳ್ಳೆ ನಿರ್ಧಾರ ತೆಕ್ಕೊಂಡೆ ಹೇಳಿ ನಮ್ಮ ಮೇಲೆ ನಮಗೆ ಹೆಮ್ಮೆ ಎನಿಸುತ್ತು…

 2. ಕಳಾಯಿ ಗೀತತ್ತೆ says:

  ಜಾಗೆ ಕೊಡೆಕಾರೆ ಭಾವನೆಯನ್ನೂ ಕೊಡೆಕ್ಕಾವುತ್ತು.
  ಅಪ್ಪು..

 3. ೧೯೭೦ರ ಅಂದಾಜಿಂಗೆ ಬಂದ ಕುಟುಂಬ ಯೋಜನೆ-ನಾವಿಬ್ಬರು ನಮಗಿಬ್ಬರು-ಹೇಳುವದರ progressive ಅನಿಸಿಕೊಂಡ ನಾವು ಹವ್ಯಕರು ಸಮಾಜಲ್ಲಿ ಪ್ರಥಮತಃ ಅಳವಡಿಸಿಕೊಂಡು ಅದರ ಫಲವಾಗಿ ಇಂದು ಕುಟುಂಬದ ಜನಸಂಖ್ಯೆ ಬರೇ ಎರಡು ಮಕ್ಕೊಗೆ ಸೀಮಿತವಾಗಿ ಊರಿಲ್ಲಿ ನಿಂಬಲೆ ಆರೂ ಇಲ್ಲದ್ದ ಹಾಂಗೆ ಆದ್ದದು ಹೇಳಿ ಎನ್ನ ಅನಿಸಿಕೆ,ಬಯಲಿನವು ವಿಮರ್ಶೆಗೆ ತೆಕ್ಕೊಳಿ..

  • ನೀರ್ಕಜೆ ಮಹೇಶ says:

   ” ವಿದ್ಯಾರ್ಹತಗೆ ಸರಿಯದ ಕೆಲಸ ಅವರವರ ಊರಿಲಿ ಇಲ್ಲದೆ ಇಪ್ಪದು ” ಹೇಳ್ತದು ಹೆಚ್ಚು ಸರಿ ಹೇಳಿ ಎನ್ನ ಅಭಿಪ್ರಾಯ.

 4. ಭಾಗ್ಯಲಕ್ಶ್ಮಿ says:

  ವಸ್ತು ನಿಷ್ಟವಾಗಿ ಯೋಚನೆ ಮಾಡಿದರೆ ಸಮಾಜಲ್ಲಿ ವಿದ್ಯಾವಂತರು ಹೆಚ್ಹಾದ್ದದು, ಅದಕ್ಕೆ ತಕ್ಕದ ವೈದ್ಯಕೀಯ ಬೆಳವಣಿಗೆ ಇದರಿಂದಾಗಿ ಅರಿವಾದ ಮಿತ ಸಂತಾನದ ಯೋಗ್ಯತೆ, ವಿದ್ಯಾರ್ಹತಗೆ ಸರಿಯದ ಕೆಲಸ ಅವರವರ ಊರಿಲಿ ಇಲ್ಲದೆ ಇಪ್ಪದು ಪುರುಷ ಪ್ರಧಾನ ಸಮಾಜ ( ಕೊಟ್ಟ ಹೆಣ್ಣು ಕುಲಂದ ಹೆರ ಹೇಳುವ ಮನೋಭಾವನೆ,) ಇದರಿಂದಾಗಿ ಅಪ್ಪನ ಮನೆಯ ಆಸ್ಥಿಯ ಬಯಸದ್ದ ಸ್ವಾಭಿಮಾನಿ ಮಗಳಕ್ಕ ಇದೆಲ್ಲವೂ ಕಾರಣ೦ಗೊ ಕಾಣ್ತು.
  ಇತರ ಸಮಾಜದವಕ್ಕೆ ಇಂದ್ರಾಣ ಕಾಲ್ಲಲ್ಲಿಯುದೆ ಕೃಷಿ ಮಾಡುಸುಲೆ ಎಡಿವ ಅರ್ಹತೆ , ಅವರಲ್ಲಿ ಇಪ್ಪ ವಿಧ್ಯಭಾಸದ ಕೊರತೆ, ಮಿತ ಸಂತಾನದ ಅರಿವು ಇನ್ನುದೆ ಬಾರದ್ದದು , ವಸ್ತು ನಿಷ್ಟವಾಗಿ ಹೋಲುಸಿದರೆ ಗೊ೦ತಾವುತ್ತು.

  * ಜಾಗೆ ಕೊಡೆಕಾರೆ ಭಾವನೆಯನ್ನೂ ಕೊಡೆಕ್ಕಾವುತ್ತು

  ಒಂದರ ಗಳಿಸಿಗೊ೦ಬಲೆ ಇನ್ನೊ೦ದರ ಕಳಕ್ಕೊಳ್ತು . ಒಂದರ ಕಳಕ್ಕೊ೦ಬಗ ಇನ್ನೊ೦ದರ ಗಳಿಸಿಗೊಳ್ತು. ಇದು ಎಲ್ಲಾ ವಸ್ಥು –ವಿಶಯ೦ಗಳಲ್ಲಿ ಅಡಗಿಪ್ಪ ಸಾರ್ವಕಾಲಿಕ ಸತ್ಯ.

 5. ತೆಕ್ಕುಂಜ ಕುಮಾರ ಮಾವ° says:

  ಪೇಟೆ ವಾಸ್ತವ್ಯ ಜೀವನೋಪಾಯಕ್ಕೆ ಅನಿವಾರ್ಯ ಅಷ್ಟೆ. ಅಲ್ಲಿವರೆಗೆ ಇದ್ದು ಮತ್ತೆ ಸಾಕು ಮಾಡಿ ಹಳ್ಳಿಗೆ ಹಿಂದಿರುಗುವ ಯೋಚನೆ ಮಾಡ್ಲಕ್ಕು.
  ಎಂಗೊ ಪೇಟೆ ಬಿಟ್ಟು ಹಳ್ಳಿಗೆ ಹೋಗಿ ಇಪ್ಪಲೆ ಒಂದು ಕಾಲು ಮಡಿಗಿ ಆಯಿದು. ಮಡಗಿದ ಕಾಲು ಹಿಂದೆ ಬಾರ.

 6. jayashree.neeramoole says:

  ಅನಿವಾರ್ಯವಾಗಿ ಪೇಟೆಲ್ಲಿದ್ದರೂ ಕಷ್ಟಪಟ್ಟು ಹಳ್ಳಿಲ್ಲಿ ಜಾಗೆ ನೋಡಿಗೊಳ್ಳುತ್ತಾ ಇಪ್ಪ ಕುಮಾರ ಮಾವನ ಹಾಂಗೂ ಹಳ್ಳಿಯ ಜಾಗೆ ನೋಡಿಗೊಮ್ಬಲೆ ಬೇಕಾಗಿ ಪೇಟೆ ಕೆಲಸವನ್ನೇ ಬಿಟ್ಟ ರವಿ ಭಾವ ಇವರೆಲ್ಲ ನೋಡುವಗ ‘ವಂದೇ ಮಾತರಂ’ ಹೇಳಿ ಸೆಲ್ಯೂಟ್ ಹೊಡೆಕು ಹೇಳಿ ಆವುತ್ತು…

  http://oppanna.com/shuddi/ravi-sajankabettu-petenda-hallige

 7. ಸುಮನ ಭಟ್ ಸಂಕಹಿತ್ಲು. says:

  ಒಪ್ಪ ಮಾಹಿತಿ ಇಪ್ಪ, ಒಪ್ಪ ಶುಧ್ಧಿ ಒಪ್ಪಣ್ಣ,
  ~ಸುಮನಕ್ಕ…

 8. ಕಮ್ಮಜೆ ಕಿಶೋರ says:

  ಒಪ್ಪಣ್ಣ , ಒಳ್ಳೆಯ ವಿಷಯ. ನಿಂಗ ಇದರ ಒಂದು podcast ಮಾಡಿರೆ ಒಳ್ಳೆದಿತ್ತು . ಓದುದರ ಬದಲು ಕೇಳುಲೆ ಸುಲಭ. ಧನ್ಯವಾದ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *