Oppanna.com

‘ಮಹಾ’ಘೋರ ‘ಶಿವ’ನ ಮಂಗಳಕರ ‘ರಾತ್ರಿ’..!

ಬರದೋರು :   ಒಪ್ಪಣ್ಣ    on   04/03/2011    55 ಒಪ್ಪಂಗೊ

ಯೇವಕಾಲಲ್ಲಿಯೂ, ಯೇವ ಸಮೆಯಲ್ಲಿಯೂ ನಿತ್ಯನಿರಂತರವಾಗಿ ಹಬ್ಬಂಗೊ – ಗವುಜಿಗೊ ಸಿಕ್ಕೆಕ್ಕಾರೆ ನಮ್ಮ ದೇಶದ ಸಂಸ್ಕೃತಿಯೇ ಆಯೆಕ್ಕಷ್ಟೆ ಅಡ, ಮಾಷ್ಟ್ರುಮಾವ° ಹೇಳುಗು ಒಂದೊಂದರಿ.
ಅಮೆರಿಕವ ಕಂಡ ಅವರ ದೊಡ್ಡಮಗನೂ ಇದರ ಒಪ್ಪುಗು. 🙂
ನಮ್ಮಲ್ಲಿ ಒರಿಶವ ತಿಂಗಳುಗೊ ಆಗಿ ವಿಭಾಗ ಮಾಡಿಂಡು, ಅದರ ಪಕ್ಷ, ವಾರ, ದಿನ, ಘಳಿಗೆ ಹೇಳಿ ತುಂಡು ಮಾಡಿಗೊಂಡು ಅಜ್ಜಂದ್ರು ಲೆಕ್ಕ ಹಾಕುಗು. ಪ್ರತಿ ತಿಂಗಳು, ವಾರ, ದಿನವೂ ಯೇವದಾರು ದೇವರಿಂಗೆ, ದೇವಿಗೆ, ಅವರ ಆಚರಣೆಗೆ ವಿಶೇಷ – ಹೇಳ್ತ ನಂಬಿಕೆ ಜನಜೀವನಲ್ಲಿ ಜನಜನಿತ ಆಗಿದ್ದು.

ಹಾಂಗೆ ಬತ್ತ ಅನೇಕ ಆಚರಣೆಗಳಲ್ಲಿ ಶಿವರಾತ್ರಿಯೂ ಒಂದು.
~
ಪ್ರತಿ ತಿಂಗಳಿನ ಏಕಾದಶಿ ವಿಷ್ಣುವಿಂಗೆ ಹೇಂಗೆ ವಿಶೇಷವೋ, ಪ್ರತಿ ತಿಂಗಳಿನ ತ್ರಯೋದಶಿ ಶಿವಂಗೆ ವಿಶೇಷ.
ಒರಿಶದ ಎಲ್ಲಾ ತಿಂಗಳಿನ ಕೃಷ್ಣ ಪಕ್ಷ ತ್ರಯೋದಶಿಯ ದಿನಕ್ಕೆ ಹೊಂದಿಗೊಂಡು ಪ್ರದೋಷವೂ, ಮಾಸ ಶಿವರಾತ್ರಿಯೂ – ಹೇಳಿ ಆಚರಣೆ ಮಾಡ್ತವು. – ಬಟ್ಟಮಾವ° ಹೇಳಿದ್ದು ಮರದ್ದಿಲ್ಲೆ ಒಪ್ಪಣ್ಣಂಗೆ. 🙂

ಪ್ರದೋಷ:

ಪ್ರದೋಷ ಹೇಳಿತ್ತುಕಂಡ್ರೆ ಹೊತ್ತೋಪಗ ಹೇಳಿ ಅರ್ತ ಇದ್ದಾಡ.
ಸೂರ್ಯಾಸ್ತಕ್ಕೆ ತ್ರಯೋದಶಿ ತಿಥಿ ಸಿಕ್ಕಿದ ದಿನ ಪ್ರದೊಷ ಹೇಳಿ ಆಚರಣೆ ಮಾಡ್ತದು ಕ್ರಮ.

ಆ ದಿನ ಇಡೀ ಉಪವಾಸ ಕೂದು ಇರುಳಿಂಗೆ ಶಿವಪೂಜೆ ಮಾಡಿ ಶಿವನ ಸಂತೃಪ್ತಿಗೊಳುಸುತ್ತದರ ಬಗ್ಗೆ ಮೊನ್ನೆ ಶರ್ಮಪ್ಪಚ್ಚಿ ಹೇಳಿದ್ದವು. (ಸಂಕೊಲೆ)

ನೆರಿಯದಜ್ಜನ ಅರಡಿಗಲ್ಲದೋ ನಿಂಗೊಗೆ? ಬಂಙಲ್ಲೇ ಸುಖಕಂಡ ಹೆರಿಜೀವ, ಮಾಷ್ಟ್ರುಮಾವನ ಅಪ್ಪ°! ಈಗ ಇಲ್ಲೆ ಅವು, ಆದರೆ ಅವರ ಧರ್ಮಕಾರ್ಯಂಗೊ ನೆಂಪಿದ್ದು!!
ಅವು ಪ್ರತಿ ಪ್ರದೋಷದ ಪೂಜೆ ಮಾಡಿ ಇರುಳಿಂಗೆ ರುದ್ರಾಭಿಷೇಕ – ಶಿವಪೂಜೆ ಮಾಡಿ, ಬೆಣ್ತಕ್ಕಿ ಅಶನ ನೈವೇದ್ಯ ಉಣ್ತದು ಒಪ್ಪಣ್ಣಂಗೆ ನೆಂಪಿದ್ದು.
ಎಂಬತ್ತಮೂರನೇ ಒರಿಶಲ್ಲಿ ಈ ಆಚರಣೆಯ ನಿಲ್ಲುಸುತ್ತ – “ಪ್ರದೋಷ ಉತ್ಥಾನ” ಹೇಳ್ತ ವಿಶೇಷ ಕಾರ್ಯಕ್ರಮ ಕಿಳಿಂಗಾರುಬಟ್ಟಮಾವ ಬಂದು ನೆಡದ್ಸು.
ನೆರಿಯದಜ್ಜ° ಇನ್ನು ಉಪವಾಸ ಮಾಡ್ಳಿಲ್ಲೆ ಹೇಳ್ತದರಿಂದಲೂ, ಉಪವಾಸದ ಉದಿಯಪ್ಪಗ ಹಸರು ಬೇಶಿದ್ದು ಒಪ್ಪಣ್ಣಂಗೆ ಸಿಕ್ಕುತ್ತಿಲ್ಲೆ –  ಹೇಳ್ತದು ರಜ ಬೇಜಾರದ ವಿಶಯ ಆಗಿತ್ತು ಒಪ್ಪಣ್ಣಂಗೆ! 😉 🙁
ಅದಿರಳಿ, ಆ ಬಗ್ಗೆ ಇನ್ನೊಂದರಿ ಮಾತಾಡುವೊ°..
~

ಮಾಸ ಶಿವರಾತ್ರಿ:

ಉದಿಯಪ್ಪಗ ಸೂರ್ಯೋದಯಕ್ಕೆ ಕೃಷ್ಣಪಕ್ಷ ತ್ರಯೋದಶಿ ತಿಥಿ ಸಿಕ್ಕುತ್ತ ದಿನವೇ ಶಿವರಾತ್ರಿ ಆಚರಣೆ.
ತಿಂಗಳಿಂಗೊಂದರಿ ಬತ್ತಿದಾ ಕೃಷ್ಣ ಪಕ್ಷ.
ಶುದ್ಧ ಶೈವ ಪಂಥದೋರು ಪ್ರತಿ ತಿಂಗಳೂ ಈ ಮಾಸಶಿವರಾತ್ರಿಯ ಆಚರಣೆ ಮಾಡ್ತವಡ.
ದಿನ ಇಡೀ ಉಪವಾಸ ಕೂದು, ಇರುಳಿಡೀ ಜಾಗರಣೆ ಕೂದು ಶಿವನ ಆಚರಣೆ ಮಾಡ್ತದು ದಿನವಿಶೇಷ.
ಶಿವದೇವಸ್ಥಾನಲ್ಲಿಯೂ ಇದರ ವಿಶೇಷ ಆಚರಣೆ ಇಕ್ಕು.
ಆದರೆ, ನಮ್ಮ ಮನೆಗಳಲ್ಲಿ ನಿತ್ಯಕ್ಕೆ ಇದರ ಆಚರುಸುತ್ತದು ತುಂಬ ಕಮ್ಮಿ.

ನಮ್ಮಲ್ಲಿ ಪ್ರದೋಷ ಆಚರಣೆ ಮಾಡ್ತು ಆದರೆ ಮಾಸಶಿವರಾತ್ರಿ ಆಚರಣೆ ಕಮ್ಮಿ. ಅದೆಂತ ಹಾಂಗೆ? – ಹೇಳಿಗೊಂಡು ಒಂದರಿ ಬಟ್ಟಮಾವನ ಕೈಲಿ ಕೇಳಿತ್ತಿದ್ದೆ. ಒಪ್ಪಣ್ಣಂಗೂ ಒಂದೊಂದರಿ ಒಳ್ಳೆ ಸಂಶಯ ಬತ್ತು ಹೇಳಿ ನೆಗೆಮಾಡಿಗೊಂಡು ಹೇಳಿದವು –
ಶಂಕರಾಚಾರ್ಯರ ಪಂಚಾಯತನ ಪದ್ಧತಿಯ ನಾವು ಅನುಸರುಸುತ್ತು.
ಹೇಳಿತ್ತುಕಂಡ್ರೆ, ಶುದ್ಧ ಶೈವವೂ ಅಲ್ಲ, ಶುದ್ಧ ವೈಷ್ಣವವೂ ಅಲ್ಲ – ಎಲ್ಲ ದೇವರನ್ನೂ ಆಚರಣೆ ಮಾಡ್ತದು ಇದರ ಕ್ರಮ.
ಮಾಸಶಿವರಾತ್ರಿಯ ಹಾಂಗಿರ್ತ ಆಚರಣೆಗಳ ಆಳವಾಗಿ ಅನುಸರುಸದ್ದೆ ಇಪ್ಪಲೆ ಬೌಷ್ಷ ಇದೇ ಕಾರಣ
ಇಕ್ಕೋ ಏನೋ.. ಹೇಳಿದವು.
ಸರಿ ಅರಡಿಯ, ಅಂದಾಜಿಗೆ ಹೇಳಿದ್ದು – ಹೇಳಿಯೂ ಹೇಳಿಗೊಂಡವು.
~

ಮಹಾಶಿವರಾತ್ರಿ:
ಒರಿಶಕ್ಕೊಂದರಿ ಚಾಂದ್ರಮಾನ ಲೆಕ್ಕದ ಮಾಘಮಾಸ ಬತ್ತಲ್ಲದೋ?
ಆ ಮಾಘಮಾಸದ ಶಿವರಾತ್ರಿ, ಹೇಳಿತ್ತುಕಂಡ್ರೆ – ಮಾಘ ಕೃಷ್ಣಪಕ್ಷ ತ್ರಯೋದಶಿ – ಶಿವನ ಆಚರಣೆಗೆ ವಿಶೇಷವಾದ ದಿನ ಹೇಳಿ ಲೆಕ್ಕ.
ಒಳುದ ಹನ್ನೊಂದು ಕೃಷ್ಣ ತ್ರಯೋದಶಿಂದಲೂ ಆ ದಿನ ಹೆಚ್ಚು ವಿಶೇಷವಾದ್ಸು.
ಅದಕ್ಕೇ ಅದರ “ಮಹಾಶಿವರಾತ್ರಿ” ಹೇಳ್ತದಡ.

~
ನಮ್ಮ ಸಮಾಜಲ್ಲೂ ಶಿವರಾತ್ರಿ ಆಚರಣೆ ಇದ್ದೇ ಇದ್ದು.
ಆ ದಿನ ಇಡೀ ಉಪವಾಸ.

ಕಾರ್ತಿಕ ಸೋಮವಾರ ಕಾಂಬುಅಜ್ಜಿ ಮಾಡಿಗೊಂಡಿದ್ದ ಒಪ್ಪೊತ್ತು ಅಲ್ಲ. ಉಪವಾಸ.
ಒಪ್ಪತ್ತಿನ ಬಗ್ಗೆಯೇ ಒಂದರಿ ಶುದ್ದಿ ಮಾತಾಡಿದ್ದು, ನೆಂಪಿದ್ದೋ? (ಸಂಕೊಲೆ)

ಈ ಉಪವಾಸಲ್ಲಿ ನಿರಾಹಾರ ಆಗಿರೇಕು.
ಅದೆಂತ ವಿತ್ಯಾಸ? ಮಾಷ್ಟ್ರುಮಾವನ ಹತ್ತರೆ ಕೇಳಿರೆ ವಿವರವಾಗಿ ಹೇಳುಗು..

ನಿರಾಹಾರ, ಫಲಾಹಾರ, ಉಪಾಹಾರ, ಆಹಾರ – ಹೇಳ್ತದು ವಿವಿಧ ನಮುನೆ ಆಹಾರ ನಿಯಂತ್ರಣ ಆಚರಣೆಗೊ ಅಡ.
ನಿರಾಹಾರ ಹೇಳಿರೆ ಆಹಾರವೇ ಇಲ್ಲದ್ದೆ ಬರಿಹೊಟ್ಟೆಲಿ ದೇವರ ಧ್ಯಾನ ಮಾಡ್ತ ಕ್ರಮ.
ಫಲಾಹಾರ ಹೇಳಿತ್ತುಕಂಡ್ರೆ ಎಂತಾರು ಫಲವಸ್ತುಗೊ, ಹಣ್ಣು ಹಂಪಲುಗಳ ಮಾಂತ್ರ ತೆಕ್ಕೊಂಡು, ಆಚರುಸುತ್ತ ಕ್ರಮ.
ಉಪಾಹಾರ ಹೇಳಿತ್ತುಕಂಡ್ರೆ, ಲಘುವಾಗಿ ಎಂತಾರು ಆಹಾರವ – ಅಕ್ಕಿದಲ್ಲ – ಗೋಧಿದೋ, ರಾಗಿದೋ ಮಣ್ಣ – ತೆಕ್ಕೊಂಬದು ಕ್ರಮ.
(ಉಪಾಹಾರ ದಿನಲ್ಲಿ ಒಂದು ಸರ್ತಿ ಮಾಡಿರೆ ಅದಕ್ಕೆ ಒಪ್ಪೊತ್ತು (ಒಂದು + ಹೊತ್ತು) ಹೇಳ್ತದು. ಇದಾ!)
ಆಹಾರ – ಯೇವದೂ ನಿರ್ಬಂಧ ಇಲ್ಲದ್ದೆ, ಯೇವತ್ತಿನಂತೆ ಜೀವನ ಮಾಡ್ತದು. ಬೋಸಬಾವನ ಹಾಂಗೆ! 😉
ಅದಿರಳಿ.
~

ಸರ್ವ ಮಂಗಳ ರೂಪಿ, ಶ್ರೀ ಶಿವ

ಶಿವರಾತ್ರಿಯ ದಿನ ನಿರಾಹಾರ; ದೇಹದೊಳ ಇರ್ತ ಶಿವಂಗೋಸ್ಕರ ಉಪವಾಸ ಮಾಡ್ತದು.
ಸೂರ್ಯೋದಯಂದ ಮತ್ತೆ ಯೇವದೇ ಆಹಾರ ವಸ್ತು ದೊಂಡೆಂದ ಕೆಳ ಹೋಪಲಿಲ್ಲೆ!
ಬಾಯಿಲಿ ಸ್ರವಿಸುತ್ತ ಎಂಜಲುನೀರುದೇ ಆಹಾರದ ಅಂಗ ಆದ ಕಾರಣ ಅದನ್ನುದೇ ಸೇವಿಸಲೆ ಇಲ್ಲೆ.
ನಾಕುಜೆನ ಸೇರಿದಲ್ಲಿ ಗೆಡ್ಡದಮಮ್ಮದೆ ಫುತ್ ಹೇಳಿ ತುಪ್ಪುತ್ತದು ನೆಂಪಾವುತ್ತೋ?
ಆರಾರು ಇಪ್ಪಗ ಜೋರು! ಆರುದೇ ಇಲ್ಲದ್ದಲ್ಲಿ ಕರ್ಜೂರ ತಿಂದರೂ ಪೋಕಿಲ್ಲೆ! – ಹೇಳಿ ಅಜ್ಜಕಾನಬಾವ ಒಂದೊಂದರಿ ಪರಂಚುತ್ತ.
– ಆದರೆ ಈ ಉಪವಾಸ ಹಾಂಗಲ್ಲ, ಆತ್ಮಸಮಾಧಾನಕ್ಕಾಗಿ ಮಾಡ್ತದು.

~
ಹಾಂಗೆ ಉದಿಯಪ್ಪಗಳೇ ನಿರಾಹಾರ ಸುರು ಆಗಿ, ಇಡೀ ದಿನ ಶಿವನ ಧ್ಯಾನ ಮಾಂತ್ರ.
ನೆರಿಯದಜ್ಜನ ನೆಂಪುಬತ್ತು ಒಂದೊಂದರಿ!

ದೊಡ್ಡ ಬಚ್ಚಲಿನ ಕೆಲಸ ಎಂತೂ ಮಾಡವು, ಹಾಂಗಾಗಿ ರಜೆಯ ನಮುನೆಲಿ ಆರಾಮಲ್ಲಿ ಇಕ್ಕು!
ನೆರಿಯದಜ್ಜ ಆದರೆ ಮನೆಲೇ ಕೂದಂಡು – ಅವಕ್ಕೆ ಜೋಯಿಷತ್ತಿಗೆಯೂ ಇತ್ತಿದಾ – ಆರದ್ದಾರು ಜಾತಕ ಬರಗು!
ಅದಲ್ಲದ್ದೇ ಇಡೀ ದಿನ ಶಿವನ ಗುಂಗಿಲಿ, ಶಿವನ ಯೋಚನೆಲಿ, ಶಿವನ ಧ್ಯಾನಲ್ಲೇ ಇಕ್ಕು.
ರುದ್ರ, ಚಮೆ, ರುದ್ರದ ಘನ, ಶಿವಸ್ತುತಿ, ಶಿವಸ್ತೋತ್ರಂಗೊ, ಶಿವಕವಚ – ಹೀಂಗಿರ್ತದು ಹೇಳಿಗೊಂಡು ಇಕ್ಕು.
(ನಮ್ಮ ಬೈಲಿಲಿಯೂ ಶಿವರಾತ್ರಿಯ ವಾರ ವಿವಿಧ ಶಿವಸ್ತುತಿಗೊ ಬತ್ತಾ ಇದ್ದು: ಸಂಕೊಲೆ)
ಮಕ್ಕೊ ಪುರುಸೊತ್ತಿಲಿ ಸಿಕ್ಕಿರೆ ಏನಾರು ಕತೆ ಹೇಳುಗು.
~
ಶಿವನ ಬಗ್ಗೆ ಸುಮಾರು ನಂಬಿಕೆಗೊ, ಕತೆಗೊ, ಉಪಕತೆಗೊ ಇದ್ದು.
ಶಿವ- ಹೇಳಿರೆ ಮಂಗಳಕರ ಹೇಳಿ ಅರ್ತ ಅಡ.
ಶಮ್ – ಕರಾಯೇತಿ ಶಂಕರಃ – ಹೇಳಿ ಬಟ್ಟಮಾವ° ಹೇಳುಗು. ಒಳ್ಳೆದನ್ನೇ ಮಾಡುವವ° ಶಿವ ಹೇಳ್ತ ಕಲ್ಪನೆ.
ಎಲ್ಲ ದೇವರುಗೊ ಐಶ್ವರ್ಯ, ಸುಖದ ಸುಪ್ಪತ್ತಿಗೆಲಿ ಇದ್ದರೆ ಈ ದೇವರು ಬೈರಾಗಿ.
ಇವರ ಮೈಲಿಯೂ ಹಾಂಗೆ, ಒಂದು ಹುಲಿಚರ್ಮವ ಹಾವಿನ ಸೊಂಟಪಟ್ಟಿ ಮಾಡಿ ಸುತ್ತಿಗೊಂಡದು ಬಿಟ್ರೆ ಬೇರೆ ಎಂತದೂ ವಿಶೇಷ ಆಭರಣ ಇಲ್ಲೆ. ಸ್ಮಶಾನಲ್ಲಿ ಇರ್ತವಂಗೆ ಇದರಿಂದ ಹೆಚ್ಚು ಆಭರಣ ಎಂತ ಬೇಕು?
ಭಸ್ಮವನ್ನೇ ಮೈಗೆ ಹಚ್ಚಿಗೊಂಡು, ಬಾಹ್ಯ ಸೌಂದರ್ಯವ ಕನಿಷ್ಠ ಗಮನಲ್ಲಿ ಮಡಗಿ, ಏಕಾಗ್ರಚಿತ್ತನಾಗಿ ಧ್ಯಾನ ಮುದ್ರೆಲಿ ಕಾಣ್ತು ನಾವು ಶಿವನ ಚಿತ್ರಣವ.
ಹೀಂಗಿದ್ದರೂ, ಪರ್ವತರಾಜಕುಮಾರಿ ಪಾರ್ವತಿ ಇವನೇ ಆಯೇಕು ಹೇಳಿಗೊಂಡು ಹಟ ಹಿಡುದು ಮದುವೆ ಆತಡ.
ಈಗ ಆ ದಾಂಪತ್ಯಕ್ಕೆ ಡೊಳ್ಳೊಟ್ಟೆ ಗೆಣಪ್ಪಣ್ಣನೂ, ಸೇನಾಪತಿ ಸುಬ್ರಮಣ್ಯನೂ – ಮಕ್ಕೊ ಆಗಿದ್ದವು.
ಲೌಕಿಕವಾಗಿ ಸಂಸಾರಿಯಾಗಿದ್ದರೂ, ಆಂತರ್ಯಲ್ಲಿ ವೈರಾಗ್ಯಲ್ಲಿದ್ದೊಂಡು ಲೋಕಕ್ಕೆ ಮಂಗಳವ ಕೊಡ್ತದೇ ಕಾಯಕ ಆಗಿಂಡು ಇದ್ದ, ಶಿವ.

ಹೇಳಿದಾಂಗೆ, ತ್ರಿಮೂರ್ತಿಗಳಲ್ಲಿ ಒಬ್ಬ ಆಗಿ ಇವನ ಕೆಲಸ “ಲಯ”.
ಅಪ್ಪು, ಸೃಷ್ಠಿಂದಾಗಿ ಹುಟ್ಟಿದ, ಸ್ಥಿತಿಂದಾಗಿ ಬದ್ಕಿದ ಜೀವಿಗಳ ಮೋಕ್ಷಕ್ಕೆ ತಪ್ಪ ಕೆಲಸ ಇವಂಗೇ ಇಪ್ಪದು.
ಸೃಷ್ಠಿಯವ ಕೊಟ್ಟದರ, ಸ್ಥಿತಿಯವ ಬೆಳೆಶಿದ್ದರ ಒಪಾಸು ತೆಕ್ಕೊಂಬಲೆ ಇವನಂತ ಬೈರಾಗಿಯೇ ಆಗೆಡದೋ?
~
ಇದು ಶಿವನ ಬಗ್ಗೆ ಆತು.
ಇನ್ನು ಶಿವರಾತ್ರಿಯ ಬಗ್ಗೆ ಹೇಳ್ತರೆ ಒಂದು ಕತೆ ಇದ್ದು, ನೆರಿಯದಜ್ಜ ಯೇವತ್ತೂ ಹೇಳುಗು ಈ ಕತೆಯ.

ಅದೆಂತರ?

ಒಂದು ಕಾಡಿಲಿ ಒಂದು ಬೇಡ ಇತ್ತಡ.
ಕಾಡಿನ ಜೀವಿಗಳ ಬೇಟೆಮಾಡಿ ಜೀವನ ನೆಡೆಶುತ್ತದು ಅದರ ಜೀವನಪದ್ಧತಿ. ಆ ಕಾಡಿನ ಪ್ರಾಣಿಸಂಪತ್ತೇ ಅದರ ಆಹಾರದ ಭರವಸೆ.
ಬೇಟೆ ಮಾಡಿಂಡಿತ್ತು, ತಿಂದೊಂಡಿತ್ತು. ಸಂಸಾರವ ಚೆಂದಕೆ ಸಾಂಕಿಗೊಂಡಿತ್ತು!
ಆದರೆ ಎಲ್ಲ ದಿನವೂ ಒಂದೇ ನಮುನೆ ಇರ್ತೋ? ಅದೊಂದು ದಿನ ಎಂತ್ಸೂ ಸಿಕ್ಕಿತ್ತಿಲ್ಲೆ!
ದಿನ ಇಡೀ ತಿರುಗಿ ತಿರುಗಿ ಕಾಡಿಡೀ ಹುಡ್ಕಿತ್ತು, ಪೊದೆಲುಗಳ ಎಡಕ್ಕಿಲಿ ಮೇರು ಸಿಕ್ಕುತ್ತೋ ಕಾದತ್ತು, ನೀರು ಕುಡಿತ್ತಲ್ಲಿಗೆ ಜಿಂಕೆಗೊ ಬತ್ತೋ ಕಾದತ್ತು, ಕಿರುಂಚಿಗುಂಡಿಲಿ ಹಂದಿಗೂ ಬತ್ತೋ ಕಾದತ್ತು!
ಉಹೂಂ, ಒಂದೇ ಒಂದು ಇಲ್ಲೆ.
ಇಡೀ ದಿನ ತಿರುಗಿತ್ತು. ಹೊಟ್ಟೆ ತಾಳ ಹಾಕಲೆ ಸುರು ಮಾಡಿತ್ತು… (ತಾಳ ಯೇವದು ಹೇಳಿ ನೆಗೆಮಾಣಿಯೇ ಹೇಳೆಕ್ಕಟ್ಟೆ!)

ಕಸ್ತಲೆ ಆಗಿಂಡು ಬಂತು.
ಆದರೆ ಹಶು ಕೇಳ್ತೋ, ಏಯ್!
ಎಂತ ಮಾಡುತ್ಸು..
ಹಗಲಿನ ಪ್ರಾಣಿಗೊ ಒಂದೂ ಇಲ್ಲೆ, ರಾತ್ರಿಬೇಟೆಗೆ ಎಂತಾರು ದಕ್ಕುತ್ತೋ – ಹೇಳಿಗೊಂಡು ಎಚ್ಚರಿಗೆಲಿ ಇರ್ತ ಯೋಚನೆ ಮಾಡಿತ್ತು
ರಾತ್ರಿಬೋಂಟಗೆ ನೆಲಕ್ಕಲ್ಲಿ ಕೂಪಲಿಲ್ಲೆಡ, ಮರದ ಮೇಗೆ ಕೂಪದಡ – ಬಟ್ಯನೂ ಇದರ ಒಪ್ಪುತ್ತು.
ಹಾಂಗೆ ಇದುದೇ ಮರದ ಮೇಗೆ ಹತ್ತಿ ಕೂದತ್ತು – ಹದಾ ಮರ, ಮುಳ್ಳಿನ ಮರ! – ಆರಾಮಕ್ಕೆ ಒರಗಲೆ ಎಡಿಗಾದ ದೊಡ್ಡ ಮರ ಅಲ್ಲ!!

ಬಿಲ್ಲು ಬಾಣ ಕೈಲಿ ಹಿಡ್ಕೊಂಡು ಕೂದತ್ತು, ಆ ದಾರಿಲಿ ಆಗಿ ಯೇವದಾರು ಬೇಟೆ ಬತ್ತೋ – ಹೇಳಿಗೊಂಡು.
ಉಹೂಮ್
ಎಷ್ಟು ಹಶು ಆದರೂ ಒರಕ್ಕು ಬಿಡ್ತೋ – ಒರಗಿರೆ ಹಶು ಬಿಡ್ತೋ – ಇಲ್ಲೆ.
ಈಗ ಒಂದು ವೇಳೆ ಒರಕ್ಕು ಬಂದರೂ, ನಾಳೆ ಹಗಲು ಪುನಾ ಸಿಕ್ಕದ್ದರೆ – ಅದಕ್ಕೆ ಎಚ್ಚರಿಗೆಲಿ ಕೂರೆಕ್ಕಾದ್ದು ತುಂಬ ಅಗತ್ಯ.
ಹಾಂಗೆ ಬಪ್ಪ ಒರಕ್ಕನ್ನೂ ತಡದು ಕೂದುಗೊಂಡತ್ತು.

ರಜ ಹೊತ್ತಪ್ಪಗ ಪುನಾ ಒರಕ್ಕು ತೂಗಲೆ ಸುರು ಆತು!
ಇದು ಕತೆ ಆಗ ಹೇಳಿಗೊಂಡು, ಒರಕ್ಕು ತೂಗುದಕ್ಕೆ ಒಂದೊಂದೇ ಎಲೆ ಕೊಯಿದು ಕೆಳ ಹಾಕಲೆ ಸುರು ಮಾಡಿತ್ತಡ!
ಇರುಳಿಡೀ ಕಾದು, ಮರದಿನ ಉದಿ ಅಪ್ಪನ್ನಾರವೂ ಈ ಕೆಲಸ ಮಾಡಿಗೊಂಡೇ ಇತ್ತು.
ಊಹೂಂ!
ಬೇಟೆ ಒಂದೂ ಸಿಕ್ಕಿದ್ದಿಲ್ಲೆ, ಆದರೆ ಎಲೆ ಕೊಯಿದು ಹಾಕುತ್ತದರ ನಿಲ್ಲುಸಿದ್ದಿಲ್ಲೆ!
~
ಮರದಿನ ಸರೀ ಬೆಣ್ಚಿ ಆದ ಮತ್ತೆ ಬೇಜಾರಲ್ಲೇ ಕೆಳ ಇಳುದತ್ತಡ ಮರಂದ.
ಹಶುಹೊಟ್ಟೆಲೇ ಕೆಳ ಇಳುದ ನೋಡ್ತು – ಬೇಡನ ರೂಪಲ್ಲೇ ಶಿವದೇವರು ಒಂದು ಬೇಟೆಯ ಹಿಡ್ಕೊಂಡು ಪ್ರತ್ಯಕ್ಷ ಆದನಡ!
ಇದೆಂತ ಪಿರಿ?
ಅಪ್ಪು, ಶಿವಂಗೆ ಅವನ ಸೇವೆ ಮಾಡಿದ್ದಕ್ಕೆ ಕೊಶಿ ಆದ್ದು!!

ಇಡೀ ಹಗಲಿನ ದಿನ ಏಕಧ್ಯಾನಲ್ಲಿ ಉಪವಾಸ ಕೂದಿತ್ತಲ್ಲದೋ..
ಇರುಳಿಡೀ ಎಚ್ಚರಿಗೆಲಿ ಕೂದತ್ತಲ್ಲದೋ…
ಒಂದೊಂದೇ ಎಲೆ ಕೊಯಿದು ಹಾಕಿತ್ತಲ್ಲದೋ..?
– ಆ ಎಲೆ ಬಿದ್ದುಗೊಂಡು ಇದ್ದದು ಕೆಳ ನೆಲಕ್ಕಲ್ಲಿದ್ದಿದ್ದ ಶಿವಲಿಂಗದ ಮೇಲೆ ಅಡ!
– ಅದು ಬಿಲ್ವಪತ್ರೆ ಅಡ!
– ಆ ದಿನ ಶಿವರಾತ್ರಿ ಆಗಿತ್ತಾಡ!!
ಶಿವರಾತ್ರಿ ದಿನದ ಈ ವಿಶೇಷ ಸೇವೆಂದಾಗಿ ಕೊಶಿ ಆದ ಶಿವ ಸ್ವತಃ ಪ್ರತ್ಯಕ್ಷ ಆದನಡ.

ಒಂದು ಬೇಟೆಯ ವರರೂಪಲ್ಲಿ ಕೊಟ್ಟನಾಡ. ಅಷ್ಟೇ ಅಲ್ಲದ್ದೆ, ಇನ್ನು ಮುಂದೆ ಯೇವತ್ತು, ಎಷ್ಟು ಹೊತ್ತಿಂಗೆ ಬೇಕಾರೂ ಬೇಟೆ ಸಿಕ್ಕುತ್ತನಮುನೆ ವಿಶೇಷ ವರ ಕೊಟ್ಟನಡ!!
ನೆರಿಯದಜ್ಜ° ಕತೆ ಹೇಳಿದ ರೀತಿ ಈಗಳೂ ಕೆಮಿಗೆ ಬಡಿತ್ತ ನಮುನೆ ಆವುತ್ತು ಒಂದೊಂದರಿ.
ಲೊಟ್ಟೆಕತೆಯೋ, ಸತ್ಯ ಕತೆಯೋ – ಬೇಡನ ರೂಪಲ್ಲಿ ಸಾಮಾಜಿಕ ಚಿತ್ರಣ ಕೊಟ್ಟು, ಶಿವನ ಪೂಜೆ ಮಾಡೇಕು ಹೇಳ್ತರ ವಿವರುಸಿದ್ದು ತುಂಬ ಕೊಶಿ ಆಗಿತ್ತು ಒಪ್ಪಣ್ಣಂಗೆ.
ಅಂದಿಂಗೆ ಮಾಂತ್ರ ಅಲ್ಲ! ಇಂದಿಂಗೂ, ಎಂದೆಂದಿಂಗೂ..

ಮಹಾಮಂಡಲದ ಆತ್ಮ!! ಗೋಕರ್ಣದ ಶಿವಲಿಂಗ!!

~
ಇಡೀ ದಿನ ಶಿವಧ್ಯಾನ ಆದ ಮತ್ತೆ, ಇರುಳಿಂಗೆ ರುದ್ರಾಭಿಷೇಕ – ಶಿವಪೂಜೆ.
ಇರುಳಿಡೀ ಎಂತಾರು ಮಾಡಿಂಡು – ಪಂಚಾಂಗ ಪಠಣ / ಜಾತಕ ಇತ್ಯಾದಿ ಬರೆತ್ತದು / ಪ್ರಶ್ನಮಾರ್ಗಮ್ ಓದುತ್ತದು – ಎಂತಾರು ಮಾಡಿ ದಿನ ಉದಿ ಮಾಡುಗು ನೆರಿಯದಜ್ಜ.
ಎಂತೂ ಅಲ್ಲದ್ದರೆ ಪೆರಡಾಲಕ್ಕೋ, ಕಾಂಚೋಡಿಗೋ, ಈಶ್ವರಮಂಗಲಕ್ಕೋ – ಶಿವದೇವಸ್ಥಾನಕ್ಕೆ ಹೋಗಿ ರುದ್ರಹೇಳಿಕ್ಕುಗು.
ಮರದಿನ ಉದಿಯಪ್ಪಗ ಮಿಂದು ಜೆಪತಪ ಮಾಡಿಕ್ಕಿಯೇ ಆಹಾರ ಸೇವನೆ.
ಹಾಂಗೆ, ಒರಿಶದ ಶಿವರಾತ್ರಿ ಚೆಂದಕೆ ಮುಗಿತ್ತು!
~
ನೆರಿಯದಜ್ಜ° ಹಾಂಗೆ ಆಚರಣೆ ಮಾಡಿದವು. ಎಲ್ಲೋರುದೇ ಹಾಂಗೇ ಮಾಡೆಕ್ಕು ಹೇಳಿ ಇದ್ದೋ? ಇಲ್ಲೆ!!
ಇರುಳಿಡೀ ಜಾಗರಣೆ ಕೂರೇಕು – ಹೇಳ್ತ ಲೆಕ್ಕಲ್ಲಿ ಏನಾರು ಬಿಂಗಿ ಮಾಡಿರೂ ಮಾಡಿದವು, ನೆಗೆಮಾಣಿಯ ಹಾಂಗೆ!

  • ಬಟ್ಯನ ಅಳಿಯ° ಬಾಬು ಇದ್ದನ್ನೇ?
    ನಮ್ಮ ಭಾವಯ್ಯನ ತೋಟಲ್ಲಿ ಹಗಲು ಅಡಕ್ಕೆ ತೆಗವಲೆ ಹೋದಿಪ್ಪಾಗ ತೆಂಗಿನಮರಕಿಲೆ ಹೇಂಗಿದ್ದು ಹೇಳಿ ನೋಡಿ ಮಡಿಕ್ಕೊಂಗು!
    ಶಿವರಾತ್ರಿ ಇರುಳು ಅದರ ಮೆಲ್ಲಂಗೆ ಕೊಯಿದು, ಬೊಂಡ ಕೆತ್ತಿ ಕುಡುದು, ಬೊಂಡತೊಟ್ಟೆಯ ಭಾವಯ್ಯನ ಜಾಲಿಂಗಿಡ್ಕಿ ಹೋಕು!
  • ಸಂಕುವಿನ ಮಗ ಜಗ್ಗು ಇಲ್ಲೆಯೋ, ಗಡಂಗಿನ ಬೋರ್ಡು ತಂದು ಕಿಟ್ಟಣ್ಣನ ಹೋಟ್ಳಿನ ಎದುರಂಗೆ ಮಡಗ್ಗು!
    ಮರದಿನ ಕಿಟ್ಟಣ್ಣ ಹೋಗಿನೋಡುವಗ ಒಂದರಿ ಬೋಸಬಾವ° ತಲಗೆ ಕೈ ಮಡಗಿದ ಹಾಂಗೆ ಅಕ್ಕು!
  • ಬೈಲಿಂಗೆ ತಿರುಗುತ್ತ ದಾರಿಲಿ ಸಣ್ಣ ಒಂದು ಕೈತ್ತಾಂಗು ಬೋರ್ಡು ಇದ್ದಲ್ಲದೋ?, ಅದರ ಸೀತ ತಂದು ಗುಣಾಜೆ ಬೆಳಿವೇನಿನ ಹಿಂದಂಗೆ ಸಿಕ್ಕುಸುಗು ನಮ್ಮ ಸೇಕರ°!

ಇನ್ನೊಂದು ಗಮ್ಮತ್ತಿಂದಿದ್ದು:
ಈಶ್ವರಮಂಗಲ ದೇವಸ್ಥಾನಲ್ಲಿ ಶಿವರಾತ್ರಿಗ ಜಾತ್ರೆ, ಮರದಿನ ಸಮಾರಾಧನೆ ಇಪ್ಪದು ಗೊಂತಿದ್ದನ್ನೇ?
ಅಲ್ಲಿಗೆ ಸಮಾರಾಧನೆಗೆ ನೆಟ್ಟಿಕಾಯಿಗೊ / ಹಸಿರುಕಾಣಿಕೆ ಸೇವೆರೂಪಲ್ಲಿ ಬತ್ತಡ – ಎಲ್ಲವೂ ಶಿವರಾತ್ರಿಗೆ ಕಳ್ಳಿದ್ದೇ!!
ಒಬ್ಬಿಬ್ರಲ್ಲ, ಊರಿಂಗೂರೇ ಕಳ್ಳುದು! ಎಡಿಗಾದೋರು. 😉
ಇವನ ಸೊರೆಕ್ಕಾಯಿಯ ಆಚವ°, ಅವ ಮಾಡಿದ ಚೀನಿಕಾಯಿಯ ಇನ್ನೊಬ್ಬ°…
ಭಾವಯ್ಯಂದ್ರು ದೇವಸ್ಥಾನಲ್ಲಿ ಉಂಡೊಂಡು – ಹೋ ಬದನೆ ಪಷ್ಟ್ಲಾಸಿದ್ದು!, ತೊಂಡೆ ಎಳತ್ತಿದ್ದು! – ಹೇಳ್ತವು,
– ಮನಗೆ ಬಂದು ನೋಡಿರೆ ಅವರ ಬದನೆ ಸಾಲಿಲಿ ಬದನೆ ಇಲ್ಲೆ, ಸೆಸಿ ಮಾಂತ್ರ! ತೊಂಡೆ ಚೆಪ್ಪರಲ್ಲಿ ಬಳ್ಳಿಯೂ ಇಲ್ಲೆ!! 😉
ಮೊದಲಾಣಕಾಲದ ಹೀಂಗಿರ್ತ ತಮಾಶೆ ಆಚರಣೆಗೊ ಶಿವರಾತ್ರಿಯ ಅವಿಭಾಜ್ಯ ಅಂಶ ಆಗಿ ಹೋಯಿದು!

ಹ್ಮ್, ಅದೆಲ್ಲ ಶಿವನ – ಶಿವರಾತ್ರಿಗಳ – ಮಹಾಶಿವರಾತ್ರಿಯ ಮಹಿಮೆ! 😉
ಅದಿರಳಿ.
~

ನಮ್ಮ ಗೋಕರ್ಣಲ್ಲಿ ನಮ್ಮ ಮಂಡಲಾಧೀಶ್ವರ ಮಹಾಬಲೇಶ್ವರಂಗೆ ಮೊನ್ನೆಂದ ಶಿವರಾತ್ರಿ ಆಚರಣೆ ನೆಡೆತ್ತಾ ಇದ್ದು.
ಬೈಲಿಂದ ಕೆಲವು ಜೆನ ಹೋಯಿದವು / ಹೋವುತ್ತಾ ಇದ್ದವು. ಭಾರೀ ಗವುಜಿ ಇದ್ದಾಡ, ಆತ್ಮಲಿಂಗಕ್ಕೆ ಶುದ್ಧ ಗಂಗಾಜಲಾಭಿಷೇಕ ಇದ್ದಡ.
ನಿಂಗೊ ಹೋದಿರೋ? (ಹೋಗಿದ್ದರೆ ಅಲ್ಲಿಯಾಣ ಶುದ್ದಿ ಹೇಳಿಕ್ಕಿ, ಆತೋ?)
ಒಪ್ಪಣ್ಣಂಗೆ ಈ ಸರ್ತಿ ಹೋಪಲಾತಿಲ್ಲೆ, ಬೈಲಿಂದ ಹೋವುತ್ತ ದಿನ ಅಡಕ್ಕೆ ತೆಗವಲೆ ಬಾಬು ಬಂದಿತ್ತು, ಹಾಂಗೆ ಮನೆಲೇ ಶಿವರಾತ್ರಿ ಮಾಡಿದ್ದು!
ನಿಂಗಳ ಶಿವರಾತ್ರಿ ಆಚರಣೆ ಹೇಂಗಾತು? ಎಲ್ಲ ವಿವರ ತಿಳುಶಿ ಆತೋ
~
ಎಲ್ಲವನ್ನೂ ಬಿಟ್ಟು ಬೈರಾಗಿಯಾಗಿ ಸ್ಮಶಾನಲ್ಲಿ ಕೂದಿದ್ದ ಘೋರ ಶಿವನ, ದೇವರು ಹೇಳಿಗೊಂಡು ಪೂಜೆ ಮಾಡ್ತು.
ಎಂತದೂ ಬೇಡದ್ದವಂಗೆ ಎಲ್ಲವನ್ನೂ ಕೊಟ್ಟು, ಅದರ್ಲಿ ಕೃತಾರ್ಥತೆ ಕಾಣ್ತು ನಮ್ಮ ಸಮಾಜ.
ಲಯಕರ್ತನಾದ ಶ್ರೀ ಶಂಕರನ ಪೂಜೆಯ ನಾವೆಲ್ಲರೂ ಮಾಡಿ, ಮೋಕ್ಷ ದಾರಿಗೆ ಹತ್ತರೆ ಅಪ್ಪೊ, ಆಗದೋ?

ಒಂದೊಪ್ಪ: ಮೂರುಕಣ್ಣಿನ ಶಿವ° ಮಹಾಘೋರ° ಆದರೆಯೇ ಲೋಕಕ್ಕೆ ಮಂಗಳ ಅಕ್ಕಷ್ಟೇ! ಅಲ್ಲದೋ?

55 thoughts on “‘ಮಹಾ’ಘೋರ ‘ಶಿವ’ನ ಮಂಗಳಕರ ‘ರಾತ್ರಿ’..!

  1. ಎಂದಿನ ಹಾಂಗೆ ಒಪ್ಪಣ್ಣನ ಲೇಖನ ಒಪ್ಪ ಆಯ್ದು 🙂
    ಇಲ್ಲಿ ಹೇಳಿದ ಆಹಾರಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಕೆಲವು ಅಂಶಂಗಳ ಹೇಳುವ ಕಾಂಡತ್ತು.
    ನಿರಾಹಾರ: ಒಪ್ಪಣ್ಣ ಹೇಳಿದ ಹಾಂಗೆ ಯಾವುದೇ ಆಹಾರ ತೆಕ್ಕೊಳ್ಲದ್ದೆ ಇಪ್ಪದು, ಉಪವಾಸ ಹೇಳುದು ಇದನ್ನೇ. ಉಪವಾಸ ಚಿಕಿತ್ಸೆಲಿ ಕೂಡ ಇದೇ ರೀತಿ ಯಾವುದೇ ಆಹಾರ ಇಲ್ಲದ್ದೆ ಇಪ್ಪದು. ನೀರು ಮಾಂತ್ರ ಕುಡಿವ ಕ್ರಮ. ಧಾರ್ಮಿಕವಾಗಿ ಉಪವಾಸ ಮಾಡ್ತರೂ…ನಮ್ಮ ಸಂಸ್ಕೃತಿಲಿ ಎಲ್ಲವನ್ನೂ(ಆರೋಗ್ಯ) ಗಮನಲ್ಲಿ ಮಡಿಕ್ಕೊಂಡೇ ಆಚರಣೆಗಳ ಮಾಡುದು. ಏಕಾದಶಿಯ ಹೆಸರಿಲ್ಲಿಯೋ ಅಥವಾ ಇನ್ನ್ಯಾವುದೇ ಕಾರಣಂದಾಗಿ ವಾರಕ್ಕೆ ಒಂದರಿ, ಹದಿನೈದು ದಿನಕ್ಕೆ ಒಂದರಿಯೋ ತಿಂಗಳಿಂಗೊಂದರಿಯೋ ಉಪವಾಸ ಮಾಡುದು ಆರೋಗ್ಯಕ್ಕೆ ತುಂಬಾ ಒಳ್ಳೆದು 🙂
    ಫಲಾಹಾರ: ಹಣ್ಣು ಮಾಂತ್ರ ತಿಂಬದು. ಹಣ್ಣೇ ತಿನ್ನೆಕು ಹೇಳಿ ಇಲ್ಲೆ ತರಕಾರಿಯನ್ನೂ ತಿಂಬಲಕ್ಕು. ಫಲ ಆದರೆ ಆತು. ಇದರಿಂದ ಆರೋಗ್ಯಕ್ಕೆ ಒಳ್ಳೆದು. ಕರುಳು ಕ್ಲೀನ್ ಅಪ್ಪಲೆ ಒಳ್ಳೆದು, ಅದರೊಟ್ಟಿಂಗೆ ಕರುಳಿನ ಕ್ಯಾನ್ಸರ್ ಬಪ್ಪದರ ತಡೆತ್ತು. ಸುಮಾರು ರೀತಿಯ ಪೋಷಕಾಂಶಂಗೊ ಸಿಕ್ಕುತ್ತು.
    ಉಪಾಹಾರ: ಇಲ್ಲಿ ಒಂದು ಮುಖ್ಯ ಅಂಶ ಎಂತ ಹೇಳಿರೆ ರಾಗಿ ಗೋಧಿ ಇತ್ಯಾದಿ ತಿಂಬಲಕ್ಕು ಹೇಳಿ ಇಪ್ಪದಕ್ಕೆ ಇನ್ನೊಂದು ಕಾರಣ ಇಕ್ಕು, ಒಂದೇ ಹೊತ್ತು ತಿಂಬ ಕರ್ಮ ಆದ ಕಾರಣ…ಅಕ್ಕಿ ಆದರೆ ಬೇಗ ಕರಗಿ ಮುಗಿತ್ತು, ಗೋಧಿ ಅಥವಾ ರಾಗಿ ಕರಗುದು ನಿಧಾನ ..ಹಾಂಗಾಗಿ ನಿಧಾನಕ್ಕೆ ಶಕ್ತಿಯ ಬಿಡುಗಡೆ ಹೆಚ್ಚು ಹೊತ್ತು ಅಪ್ಪ ಕಾರಣ ಪಕ್ಕನೆ ಹಶು ಆಗ.ಇದರಿಂದಾಗಿ ಬೇರೆ ಕೆಲಸಕ್ಕೆ ತೊಂದರೆ ಆಗ.

    1. ಸುವರ್ಣಿನಿ ಅಕ್ಕೋ..
      ಒಪ್ಪಣ್ಣಂಗೆ ಹಳಬ್ಬರು ಹೇಳದ ಮಾತುಗೊ ಮಾಂತ್ರ ಅರಡಿಗಷ್ಟೇ!
      ಅದರ ಹಿಂದಾಣ ವೈಜ್ಞಾನಿಕತೆಯ ನಿಲುವಿಂದ ಅದರ ವಿಮರ್ಶೆ ಮಾಡಿ, ಬೈಲಿಂಗೆ ಒಳ್ಳೆ ವಿಚಾರವ ಹಂಚಿದ್ದಿ. ಸಂತೋಷ ಆತು.

      ಶಿವನೊಲುಮೆ ಸದಾ ಇರಳಿ ಹೇಳ್ತ ಆಶಯ ಒಪ್ಪಣ್ಣಂದು!

    2. ಎಲೆ , ಸೊಪ್ಪು – ತರಕಾರಿ ಒಟ್ಟಿಗೆ ಸೇರುತ್ತಲ್ಲ್ದೋ ಅಕ್ಕಾ.

  2. ಒಪ್ಪಣ್ಣಾ,

    ಶಿವರಾತ್ರಿಯ ವಿಶೇಷತೆಯ ಸಕಾಲಿಕವಾಗಿ ಬರದ್ದೆ.ಉಪಕತೆಗಳೊಟ್ತಿ೦ಗೆ ಚೆ೦ದಕೆ ಓದುಸಿಗೊ೦ಡು ಹೋತು.ಹಿರಿಯರ ಕಾಲಲ್ಲಿ ನೆಡಕ್ಕೊ೦ಡಿದ್ದ ಉಪವಾಸ೦ಗೊ ,ಆಚರಣೆಗೊ ಈಗ ಮಾಯವಾಗಿಗೊ೦ಡು ಇದ್ದು,ಅಲ್ಲದೋ?

    1. ಮುಳಿಯಭಾವಾ..
      ಭಾಮಿನಿಯ ಒಂದು ಷಟ್ಪದಿಯಷ್ಟಕೇ ಇಪ್ಪ ಸಣ್ಣ ಒಪ್ಪ!! ಕೊಶೀ ಆತು.
      ಅಪ್ಪು ಭಾವ, ಈಗಾಣ ಜೀವನಕ್ರಮಂಗಳಲ್ಲಿ ಈ ನಮುನೆ ಆಚರಣೆಗೊ ಕಾಂಬಲೇ ಇಲ್ಲೆ!! ಒಂದೊಂದರಿ ಬೇಜಾರಾವುತ್ತು! 🙁

  3. ಒಪ್ಪಣ್ಣೋ.., ಲಯಕರ್ತ ಮಹಾಶಿವನ ಮಹಿಮೆಯ ಸಾರುವ ಮಹಾಶಿವರಾತ್ರಿಯ ಮಹಾತ್ಮೆ ತುಂಬಾ ಚೆಂದಲ್ಲಿ ಬಯಿಂದು.

    ನೀನು ಹೇಳಿದ ಹಾಂಗೆ, ಸೃಷ್ಟಿಯವ° ಕೊಟ್ಟದರ, ಸ್ತಿತಿಯವ° ಬೆಳೆಶಿದ್ದರ ವಾಪಾಸು ತೆಕ್ಕೊಂಡು ಲೋಕಕ್ಕೆ ಮಂಗಳ ಉಂಟುಮಾಡುಲೇ ಇಪ್ಪ ವೈರಾಗ್ಯಮೂರ್ತಿ. ಬೈರಾಗಿಯ ಹಾಂಗೆ ಇದ್ದರೂ, ಸ್ಮಶಾನ ವಾಸಿಯೇ ಆದರೂ, ಮನಸ್ಸು ತುಂಬಿ ಪ್ರಾರ್ಥನೆ ಮಾಡಿದವರ ಉಡಿ ತುಂಬ ಕೊಡುವ ಶಂಕರ°. ಎಲ್ಲಾ ದೇವರಿಂಗೆ ಎಲ್ಲಾ ಅಲಂಕಾರಂಗ, ನಾನಾ ಪುಷ್ಪಂಗ, ನಾನಾ ಪೂಜೆಗೋ ಆಯೆಕ್ಕು. ಈ ಮಹಾಶಿವಂಗೆ ಜಲಧಾರೆ ಅಭಿಷೇಕ ಮಾಡಿ, ಬಿಲ್ವಪತ್ರೆ ಮನಸಾ ಸಮರ್ಪಿಸಿದರೆ ತೃಪ್ತನಪ್ಪ ಮೃದು ಹೃದಯಿ. ಬಾಹ್ಯಾಡಂಬರಕ್ಕೆ ಹೆಚ್ಚು ಗಮನ ಕೊಡದ್ದೆ ನಾವು ಅಂತರ್ಮುಖರಾಗಿ ನಮ್ಮ ಆತ್ಮದೇವರ ಸಾನ್ನಿಧ್ಯ ಪಡೆಯೆಕ್ಕು, ಹಾಂಗೆ ನಮ್ಮ ದೇಹದೇವರ ಕಂಡರೆ ನಮ್ಮ ಸರ್ವ ಬೆಳವಣಿಗೆ ಆವುತ್ತು ಹೇಳಿ ನವಗೆ ತೋರ್ಸಿಕೊಡುವ ಸದಾಶಿವ°. ತನ್ನ ಸೇವೆ ಮಾಡಿದವಕ್ಕೆ ದೇವಿಯ ಕೃಪೆಯೂ ಸಿಕ್ಕುತ್ತ ಹಾಂಗೆ ತನ್ನ ಅರ್ಧಶರೀರಲ್ಲಿ ಶಕ್ತಿಸ್ವರೂಪಿಣಿಯಾದ ಶಿವೆಗೆ ಜಾಗೆ ಕೊಟ್ಟ ಉಮಾಮಹೇಶ್ವರ°. ಯಾವ ರೂಪ ಹೇಳುದು? ಅವ° ಎಲ್ಲ ಲೋಕಂದ ಎಲ್ಲವನ್ನೂ ತೆಕ್ಕೊಂಬದು ಆದರೆ ಅವನ ಆರಾಧನೆಂದ ನಾವು ಎಲ್ಲವನ್ನೂ ಪಡಕ್ಕೊಂಬದು ಅಲ್ಲದಾ?

    ಒಪ್ಪಣ್ಣ, ನೆರಿಯದಜ್ಜನ ಹಾಂಗೆ ಇಪ್ಪೋರು ಈಗಾಣ ಕಾಲಲ್ಲಿ ಕಾಂಬಲೆ ಕಷ್ಟ. ಅವರ ಜೀವನಲ್ಲಿ ಅವ್ವು ಮಾಡಿದ ದೇವಕಾರ್ಯಂಗ, ಅವ್ವು ಕಲ್ತ ವಿಷಯಂಗ, ನಡದ ಜೀವನ ಶೈಲಿ ಇದು ಯಾವುದೂ ಅಲ್ಲಿಗೇ ನಿಂದಿದಿಲ್ಲೆ. ಅವರ ಸಣ್ಣ ಪುಳ್ಳಿ ಮಾಣಿಲಿ ಆ ಎಲ್ಲಾ ಗುಣಂಗ ಹಾಂಗೇ ಬಯಿಂದು ಅದರ ಶ್ರದ್ಧೆಲಿ ನಡೆಶುತ್ತನುದೇ!!! ಇದರ ಕಂಡು ಅವ್ವು ಮೇಲೆ ನಿಂದುಗೊಂಡು ಕಂಡಿತಾ ಮನಸ್ಸು ತುಂಬಿ ಆಶೀರ್ವಾದ ಮಾಡುಗು. ಅವರ ರಕ್ಷೆ ಈ ಮಾಣಿಯ ಯಾವತ್ತೂ ಕಾಯುಗು. ಅದು ಯಾವತ್ತುದೇ ಹಾಂಗೇ ಇರಲಿ ಇಡೀ ಕುಟುಂಬಕ್ಕೆ ರಕ್ಷಾಕವಚ ಆಗಿ.

    [ಮಕ್ಕೊ ಪುರುಸೊತ್ತಿಲಿ ಸಿಕ್ಕಿರೆ ಏನಾರು ಕತೆ ಹೇಳುಗು.]
    ಅದಪ್ಪು ಒಪ್ಪಣ್ಣ, ಶಿವರಾತ್ರಿ ದಿನ ನೆರಿಯದಜ್ಜನ ಪುಳ್ಯಕ್ಕೊಗೆ ಎಂತ ಅಂಬೇರ್ಪಿರ್ತು? 😉
    ಒಟ್ಟೆ ಕರಟಲ್ಲಿ ನೀರು ತುಂಬುಸುಲಿತ್ತೋ??? 😉

    ಒಪ್ಪಣ್ಣ, ನಮ್ಮ ಬೈಲಿನ ಹಿರಿಹಿರಿಹಿರಿಯರಾದ ನೆರಿಯದಜ್ಜನ ಬಗ್ಗೆ ಶುದ್ದಿಲಿ ತಿಳ್ಕೊಂಡು ಕೊಶೀ ಆತು. ಅವು ತೋರ್ಸಿದ ಮಾರ್ಗಲ್ಲಿ ನಡದರೆ ನಮ್ಮ ಜೀವನ ಸಾರ್ಥಕ ಅಕ್ಕು ಅಲ್ಲದಾ?
    ಒಂದೊಪ್ಪ ಲಾಯ್ಕಾಯಿದು. [ಮೂರುಕಣ್ಣಿನ ಶಿವ° ಮಹಾಘೋರ° ಆದರೆಯೇ ಲೋಕಕ್ಕೆ ಮಂಗಳ ಅಕ್ಕಷ್ಟೇ! ]
    ಅಪ್ಪು, ‘ಮಹಾ’ಘೋರ ‘ಶಿವ’ನ ಮಂಗಳಕರ ‘ರಾತ್ರಿ’ ಮಹಾಶಿವ ರಾತ್ರಿಲಿ ಮೂರು ಕಣ್ಣಿನ ಶಿವನ ಅನುಗ್ರಹಲ್ಲಿ ಜಗತ್ತಿಂಗೇ ಮಂಗಳ ಆಗಲಿ. ಎಲ್ಲೋರ ಮೇಲೆ ಮಹಾಘೋರ ಶಿವನ ಅನುಗ್ರಹ ಇರಲಿ.ಈ ಮಹೇಶನ ಅನುಗ್ರಹಂದ ನಮ್ಮ ಬೈಲುದೇ ಚೆಂದಲ್ಲಿ ಮುಂದರಿಯಲಿ… 🙂 🙂

    1. ಶ್ರೀಅಕ್ಕಾ..
      ಆಯಾ ವೆಗ್ತಿಗಳ ವೆಗ್ತಿತ್ವಂಗಳ ಆಯಾ ರೀತಿಲೇ ತೆಕ್ಕೊಂಡು ಶುದ್ದಿ ಕೇಳ್ತದು ನಿಂಗಳ ದೊಡ್ಡ ಗುಣಂಗಳಲ್ಲಿ ಒಂದು!
      ಹಾಂಗೆ ನೋಡಿರೆ ನೆರಿಯದಜ್ಜನ ವೆಗ್ತಿತ್ವವ ಒಪ್ಪಣ್ಣಂಗೆ ಸಮಗಟ್ಟು ವಿವರುಸಿಕ್ಕಲೇ ಎಡಿಯ, ವಿವರುಸಿದ್ದಕ್ಕಿಂತಲೂ ಸ್ಪಷ್ಟವಾಗಿ ನಿಂಗೊಗೆ ಅರ್ತ ಆಯಿದು ಅವರ!
      { ಒಟ್ಟೆ ಕರಟಲ್ಲಿ ನೀರು ತುಂಬುಸುಲಿತ್ತೋ??? } ಇದು ಭಾರೀ ಕೊಶಿ ಆತು ಅಕ್ಕ.

      ಬೈಲಿಂಗೆ ಈಶ್ವರನ ಒಲುಮೆ ಇದ್ದರೆ ಚೆಂದಕೇ ನೆಡಗು!! 🙂
      ಹರೇರಾಮ..

  4. ಒಪ್ಪಣ್ಣ ಶಿವರಾತ್ರಿ ಹಬ್ಬದ ಬಗ್ಗೆ ಸವಿವರ ಕೊಟ್ಟದಕ್ಕೆ ಧನ್ಯವಾದ೦ಗ…ಇಲ್ಲಿ ಹೇಳಿದ ಬೇಡನ ಕಥೆ ಸಣ್ಣಾಗಿಪ್ಪಗ ಕೇಳಿದ ನೆನಪಾತು..ಈ ಲೇಖನಲ್ಲಿ ಪ೦ಚಾ೦ಗವನ್ನೂ ಪರಿಚಯಿಸಿದ್ದೆ….ತು೦ಬ ಒಳ್ಳೇ ವಿಚಾರ೦ಗ ಸಿಕ್ಕಿತ್ತು..ನಮ್ಮ ಹವ್ಯಕ ಭಾಷೆಲಿ ಇಷ್ಟು ಚ೦ದ ಲೇಖನ ಬರವಲಾವುತ್ತು..ಮೊನ್ನೆ ಗೋಕರ್ಣಕ್ಕೆ ರಥೋತ್ಸವಕ್ಕೆ ಹೋಗಿ ಕಣ್ಮನ ತು೦ಬಿಸಿಕೊ೦ಡು ಬೈ೦ದೆ..ಹಾ೦ಗೆ ಗುರುಗ ಅನುಗ್ರಹಿಸುತ್ತಿಪ್ಪ ಶ್ರೀರಾಮಕಥಾಧಾರೆ ಯನ್ನೂ ಕೇಳಿದೆ..ಅ೦ತೂ ಇ೦ತೂ ಗೋಕರ್ಣದ ಶಿವರಾತ್ರಿ ಮಹೋತ್ಸವ ನಮ್ಮ ಮಠದ ಘನತೆ ಗೌರವ ಹೆಚ್ಚಿಸಿದ್ದು…ಒಳ್ಳೇ ವ್ಯವಸ್ಥೆ ಕೂಡ ಇತ್ತು…

  5. ಶಿವನ ಸಂಸಾರದ ಬಗ್ಗೆ ಕೇಳಿದ ಒಂದು ವಿನೋದ ಹೀಂಗಿದ್ದು:
    ಶಿವನ ಕುಟುಂಬ ಹೇಳಿರೆ ಮಗ ಗಣಪತಿ. ಅವನ ವಾಹನ ಎಲಿ. ಈ ಎಲಿಗೂ ಶಿವನ ಕೊರಳಿಲ್ಲಿ ಇಪ್ಪ ಹಾವಿಂಗೂ ವೈರತ್ವ. ಹಶು ಅಪ್ಪ ಹಾವು, ಎಲಿ ಯಾವಾಗ ಹಿಡುದು ತಿಂಬಲೆ ಸಿಕ್ಕುಗು ಹೇಳಿ ಕಾದೊಂಡು ಇಪ್ಪದು ಸಹಜ.
    ಇನೊಬ್ಬ ಮಗ ಸುಬ್ರಹ್ಮಣ್ಯ. ಅವನ ವಾಹನ ನವಿಲು. ನವಿಲಿಂಗೂ ಶಿವನ ಕೊರಳಿಲ್ಲಿ ಇಪ್ಪ ಹಾವಿಂಗೂ ಬದ್ಧ ವೈರತ್ವ. ಈ ಹಾವು ಯಾವಾಗ ಎನಗೆ ಆಹಾರ ಅಕ್ಕುಹೇಳಿ ನವಿಲಿಂಗೆ ಅಪ್ಪದು ಕೂಡಾ ಸಹಜವೇ.
    ಶಿವನ ಹೆಂಡತಿ ಗಿರಿಜೆ. ಆದರೆ ಶಿವ ತಲೆಲಿ ಕೂರ್ಸಿಗೊಂಡದು ಗಂಗೆಯ. ಗಿರಿಜೆಗೆ ಗಂಗೆಯ ಕಾಂಬಗ ಸವತಿ ಹಾಂಗೆ ಕಾಣದ್ದಿಕ್ಕಾ?
    ಅದರೆ ಶಿವ ಇದರ ಎಲ್ಲವನ್ನೂ ಸಂಭಾಳಿಸಿಂಡು ಹೋವ್ತ. ಅವೆಲ್ಲಾ ಒಂದೇ ಕುಟುಂಬಲ್ಲಿ ಯಾವದೇ ವೈರತ್ವ ಇಲ್ಲದ್ದೆ ಇರ್ತವು.

    great thinking..

    1. ಎಲ್ಲಾ ಸರಿ., ಆದರೆ ಎಂತಾರು ನಮ್ಮ ಶಿವ ನಮ್ಮ ಗಣಪತಿಗೆ ಹಾಂಗೆ ಮಾಡ್ಳಾವ್ತಿತ್ತಿಲ್ಲೆ ಅಲ್ಲದೋ ಭಾವ. ನಾಳೆ ನಾಳೆ ಹೇಳಿಯೇ ದೂಡಿಬಿಟ್ಟ .!

      1. ಅದಕ್ಕೇ, ರಂಗಮಾವನ ಒಂದು ಪಳಮ್ಮೆ ಇದ್ದು:

        ಮರ್ಲುಬಿಡದ್ದೆ ಮದುವೆ ಆಗ, ಮದುವೆ ಆಗದ್ದೆ ಮರ್ಲು ಬಿಡ – ಹೇಳಿಗೊಂಡು! 😉

  6. Olle lekhana bhava…

    Yenna hangippavakke hingippa lekhana thumba prayojana avutthu.

    Namma samajada vishishta aacharanego yellaringoo gonthille.

    Adaralliyu eega ondu 1970 nantharada peelige udyoga, kalivike heli ooru bittu, rajya bittu matthe eega desha bittu hopaga idelldara bagge mahithi irthille.

    Idara thilishi kottadakke dhanyavada.

  7. ಮತ್ತೆ ಶ್ರೀ ರಾಮಕೃಷ್ಣ ಮಠದ ಹಿಂದು ಧರ್ಮ ಕೋಶ ನೋಡಿದೆ-ಅದರಲ್ಲಿ ಶಿವರಾತ್ರಿ ಬಗ್ಗೆ ಕೆಲವು ದಂತಕತೆಗೊ ಇದ್ದು!
    ೧]ಒಪ್ಪಣ್ಣ ಹೇಳಿದ ಬೇಡನ ಕತೆ.
    ೨}ಇದು ಶಿವ ಹಾಲಾಹಲ ಕುಡಿದು ಲೋಕವ ಕಾಪಾಡಿದ ದಿನ ಅಡ.
    ೩]ಶಿವ-ಪಾರ್ವತಿ ಮದುವೆ ಆದ ದಿನ ಅಡ.
    ೪]ಶಿವ ತಾಂಡವ ನರ್ತನ ಮಾಡಿದ ದಿನ ಅಡ.
    ೫]ಒಂದರಿ ಬ್ರಹ್ಮಂಗೂ ವಿಷ್ಣುಗೂ ಜೋರು ಚರ್ಚೆ ಆತಡ-ತಮ್ಮಲ್ಲಿ ಆರು ಮೇಲೆ ಹೇಳಿ.ಅಷ್ಟಪ್ಪಗ ಶಿವ ಒಂದು ಮಹಾಲಿಂಗ ರೂಪಲ್ಲಿ ನಿಂದ ಅಡ.ವಿಷ್ಣು ಅದರ ಬುಡವನ್ನೂ ಬ್ರಹ್ಮ ಅದರ ತುದಿಯನ್ನೂ ನೋಡಲೆ ಹೋದವು.ಇಬ್ಬರಿಂಗೂ ಕಂಡು ಹುಡುಕ್ಕಲೆ ಆಯಿದಿಲ್ಲೆ[ಅದೂ ಇದೇ ದಿನ].ಮಹಾಲಿಂಗೇಶ್ವರ ಹೇಳುವ ಹೆಸರು ಬಂದದು ಹೀಂಗೆ!
    ೬]ಮಹಾಶಿವರಾತ್ರಿ ಮಾಘ ಕೃಷ್ಣ ಚತುರ್ದಶಿಯಂದು.ತ್ರಯೊದಶಿ ಅಲ್ಲ.
    ಎಂತದೇ ಆಗಲಿ,ಇದು ಶಿವದೇವರ ಪ್ರಶಸ್ತವಾದ ದಿನ ಹೇಳುವ ನಿರ್ಧಾರಕ್ಕೆ ಬಂದೆ.ಏಕೆ ಹೇಳಿರೆ ನಮ್ಮ ಬೇರೆಬೇರೆ ಪುರಾಣಂಗಳಲ್ಲಿ ಬೇರೆಬೇರೆ ಕತೆಗೊ ಇದ್ದು.
    ಇದರಲ್ಲಿ ೫ನೇ ಕತೆ ಬಗ್ಗೆ ಜತ್ತಿ ಈಶ್ವರ ಭಾಗವತರು ಕೇತಕಿ ವಿಲಾಸ ಹೇಳುವ ಪ್ರಸಂಗ ಬರೆದ್ದವು.ಗೋಕರ್ಣ ಕ್ಷೇತ್ರದ ಸ್ಥಳ ಪುರಾಣಲ್ಲೂ ಈ ಕಥೆ ಇದ್ದು-ಓದಿದ್ದೆ.ಕೇತಕಿ ಪುಷ್ಪ ಬ್ರಹ್ಮನ ಪರ ಲೊಟ್ಟೆ ಸಾಕ್ಷಿ ಹೇಳುವ ಕತೆ ಇದು.

  8. {ಇರುಳಿಡೀ ಜಾಗರಣೆ ಕೂರೇಕು – ಹೇಳ್ತ ಲೆಕ್ಕಲ್ಲಿ ಏನಾರು ಬಿಂಗಿ ಮಾಡಿರೂ ಮಾಡಿದವು,}
    `ತಸ್ಕರಾಣಾ೦ ಪತಯೇ ನಮಃ’ ಈ ದಿನ ಅವಕ್ಕೊ೦ದು ಅವಕಾಶ ಅಲ್ಲದೊ?
    {ನಿಂಗಳ ಶಿವರಾತ್ರಿ ಆಚರಣೆ ಹೇಂಗಾತು}
    ಇಲ್ಲಿ ಒಬ್ಬ ಜೆನ `ನಿ೦ಗಳ ನ೦ಬಿಕೆಲ್ಲಿ ಪ್ರಪ೦ಚದ ಲಯ, ಲಯಕರ್ತ ಹೇಳಿ ಇದ್ದಲ್ಲದೊ? ಆ ದೇವತೆ ಆರು?” ಹೇಳಿ ಕೇಳಿಯಪ್ಪಗ `ಶಿವ’ ಹೇಳಿ ಹೇಳಿತ್ತಿದ್ದೆ. ಶಿವರಾತ್ರಿ ಸ೦ದರ್ಭಲ್ಲಿ ಪ್ರಯತ್ನವೇ ಇಲ್ಲದ್ದೆ ದೇವರು ನಮ್ಮತ್ರೆ ಶಿವನಾಮಸ್ಮರಣೆ ಮಾಡುಸಿದವು!!

    1. {ತಸ್ಕರಾಣಾ೦ ಪತಯೇ }
      ಇಂಬ್ಯೆ ಕಂಡ್ಯೆ, ಆಯೆ ಪತ್ತಾಯೆ – ಹೇಳಿ ಬಟ್ಯ° ನೆಗೆಮಾಡುಗು ಒಂದೊಂದರಿ! 😉

      1. ಅವ್ವಾಯೆ ದಾಯೆ ತೂಯೇ ಹೇಳ್ತವನ್ನೇ ಇಲ್ಲಿ ಕೆಲವು ಕೂಡಿಗೊಂಡು!!

  9. oppanno samayakke sariyada shuddi.
    bonda kallule sikkiddilleya oppanno.
    mane hoenge baindilleyo.oppanna full bc.
    rudra helule hopale bhattamavana phone baindo eno.
    sarigattu kambale sikkuttaille.
    shuddi tumba laikaidu aatha.

    1. ಬಟ್ಟಮಾವಂಗೆ ನಾಕೈದು ದಿಕ್ಕಂದ ಕರೆ ಬಯಿಂದಡ, ಎಲ್ಲಿಗೆಲ್ಲ ಹೋಯಿದವು, ಎಲ್ಲಿಗೆಲ್ಲ ಬಿಟ್ಟಿದವು ಅರಡಿಯ. ಶಿವರಾತ್ರಿ ಕಳುದು ಸಿಕ್ಕಿದ್ದವಿಲ್ಲೆ, ರೆಜಾ ಅಂಬೆರ್ಪಿಲಿ ಇತ್ತಿದ್ದವೋ ಏನೋ.. 🙂

  10. ಲಾಯಕ್ಕ ಆಯ್ದು ಒಪ್ಪಣ್ಣೊ ಶಿವರಾತ್ರಿ ಲೇಖನ !

  11. ಭಾರೀ ಲಾಯಕ್ಕ ಆಯ್ದು ಒಪ್ಪಣ್ಣೊ ಶಿವರಾತ್ರಿ ಲೇಖನ ! ಆನು ಈ ಸರ್ತಿ ಒ೦ದು, ಎರಡೊ ಬಾಳೆ ಗೊನೆ ಸಿಕ್ಕುಗೊ ಹೇಳಿ ನೋಡ್ಯೊ೦ಡಿತ್ತಿದ್ದೆ. ಆದ್ರೆ ಆಚ ಗೆದ್ದೆಲಿ ಗೌಡ ದೊಡ್ಡಾ ಕಟ್ಟೊಣ ಕಟ್ಟಿ ಎನಗೇ ಟೊಪ್ಪಿ ಮಡುಗಿತ್ತು! 🙂

    1. ಏ ಅರ್ಗೆಂಟು ಮಾಣಿ,
      ನೀನು ಹಾಂಗೆಂತಾರೂ ಅರ್ಜೆಂಟ್ ಮಾಡಿದ್ದರೆ, ನಿನ್ನ ಗೆಂಟು ಹೊಡಿ ಮಾಡ್ತಿತ್ತಾ ಎಂತ ಆ ಗೌಡ.
      ಮತ್ತೆ ನೀನು ಅರ್ಗೆಂಟು ಮಾಣಿ ಹೋಗಿ ಅರ್ಜೆಂಟ್ ಮಾಣಿ ಆವ್ತಿತ್ತೆ 🙂

  12. ಸಕಾಲಿಕ ಬರಹಕ್ಕೆ ಹೃತ್ಪೂರ್ವಕ ಒಪ್ಪ೦ಗೊ ಒಪ್ಪಣ್ಣಾ..
    { ಮನಗೆ ಬಂದು ನೋಡಿರೆ ಅವರ ಬದನೆ ಸಾಲಿಲಿ ಬದನೆ ಇಲ್ಲೆ, ಸೆಸಿ ಮಾಂತ್ರ! ತೊಂಡೆ ಚೆಪ್ಪರಲ್ಲಿ ಬಳ್ಳಿಯೂ ಇಲ್ಲೆ!!
    ಮೊದಲಾಣಕಾಲದ ಹೀಂಗಿರ್ತ ತಮಾಶೆ ಆಚರಣೆಗೊ ಶಿವರಾತ್ರಿಯ ಅವಿಭಾಜ್ಯ ಅಂಶ ಆಗಿ ಹೋಯಿದು!

    ಹ್ಮ್, ಅದೆಲ್ಲ ಶಿವನ – ಶಿವರಾತ್ರಿಗಳ – ಮಹಾಶಿವರಾತ್ರಿಯ ಮಹಿಮೆ! }
    ಅಯ್ಯಯ್ಯೋ.. ಶುಧ್ಧ ಕಳ್ಳತನ ಅಲ್ಲದೊ ಒಪ್ಪಣ್ಣಾ ಇದು? ಇದರ ಶಿವದೇವರ ಮಹಿಮೆ ಹೇಳುವದು ಎಷ್ಟು ಸರಿ?
    ಶಿವರಾತ್ರಿಯ ಇರುಳು ದೇವರ ಧ್ಯಾನ ಮಾಡಿ೦ಡು ಅಲ್ಲದೊ ಜಾಗರಣೆ ಮಾಡೆಕಾದ್ದದು? ಅಲ್ಲದ್ದೆ ಹೀ೦ಗಿರ್ತ ಅಬಧ್ಧ ಮಾಡ್ಳಾಗ ಹೇಳಿ ಎನ್ನ ಅಭಿಪ್ರಾಯ..
    ಆನು ಸಣ್ಣಾಗಿಪ್ಪಗ ನೆಡದ ಒ೦ದು ಘಟನೆ ನೆ೦ಪು ಬತ್ತು.. ಶಿವರಾತ್ರಿಯ ಹೆಳೆಲಿ ಅ೦ದು ಇರುಳು ಆರೋ ಶುಧ್ಧ ಕಿಡಿಗೇಡಿಗೊ ಮಾರ್ಗಲ್ಲಿ ಕರೆ೦ಟು ಕ೦ಬ / ಕಲ್ಲು ಎಲ್ಲ ಹಾಕಿ ಕೃತಾರ್ಥರಾಗಿತ್ತಿದ್ದವು, ಸಾಲದ್ದಕ್ಕೆ ಇಪ್ಪ ಬೀದಿದೀಪ೦ಗೊಕ್ಕೆ ಕಲ್ಲಿಡ್ಕಿ ಬಲ್ಬು ಒಡದ್ದವುದೆ.. ಎನ್ನ ಮಾವ (ಚಿಕ್ಕಮ್ಮನ ತಮ್ಮ) ಎಲ್ಲಿಯೋ ಜಾತ್ರೆಲಿ ಅಡಿಗೆ ಕೆಲಸ ಮುಗುಶಿಯೊ೦ಡು ಮನೆಗೆ ಎ೦ತೋ ಅರ್ಜೆ೦ಟಿ೦ಗೆ ಬೇಕಾಗಿ ಉದೆಕಾಲಕ್ಕೆ ಸೈಕ್ಕಲಿಲ್ಲಿ ಬಪ್ಪಾಗ ಇದಕ್ಕೆ ಹೆಟ್ಟಿ ಬಿದ್ದು ಕೈ ಮುರುದು ವಾರಗಟ್ಳೆ ಪ್ಲಾಸ್ಟರು ಹಾಕೆಕಾಗಿ ಬಯಿ೦ದು..

    1. ಅಪ್ಪೋ ಗಣೇಶಣ್ಣ, ಒಂದಾರಿ ಶಿವರಾತ್ರಿಯಂದು ಜಾಲ್ಲಿ ನಿಂಗೊ ಬಳ್ಳಿಲಿ ಆರ್ಸಿದ್ದು ಕಾಣೆ ಆಯ್ದಡ ನಿಂಗಳಲ್ಲಿ.!

      1. ಚೆಲ ಕಷ್ಟವೇ… ಅದನ್ನುದೆ ಹೇಳಿದವೋ ಎನ್ನ ಅಣ್ಣ೦ದ್ರು ನಿ೦ಗಳ ಹತ್ರೆ!! ಎಡಿಯಪ್ಪಾ ಎಡಿಯ!!

        ಅದೆಲ್ಲ ಇರ್ಲಿ.. ಎನ್ನ ಗೆಣೇಶಣ್ಣ ಹೇಳಿ ದಿನಿಗೋಳಿ ತೊ೦ಡ ಮಾಡುತ್ಸು ಬೇಡ ಆತೋ..

    2. ಆ ಮಾಣಿಯ ಶುದ್ದಿ ಕೇಳಿ ಬೇಜಾರಾತು ಅಣ್ಣ…
      ಒಂದೊಂದರಿ ಕೆಲವು ಕುಶಾಲುಗಳಲ್ಲಿ ತೊಂದರೆಗಳೂ ಇರ್ತು, ಅಲ್ಲದೋ? 🙁

  13. ಶಿವರಾತ್ರೆ-ಬೇಡನ ಕಥೆ-ಗೊಂತಿದ್ದತ್ತಿಲ್ಲೆ. ತಿಳ್ಕೊಂಬಲೆ ಒಪ್ಪ ಆತು.. ಪ್ರದೋಷದ ವಿವರ ಹೇಂಗೂ ಶರ್ಮಪ್ಪಚ್ಚಿ ಮದಲೇ ಹೇಳಿದ್ದವು.
    ಎಂಗ ಕೈಗಾ ಬಂಧುಗೊ ಇಲ್ಯಾಣ ರಾಮಲಿಂಗೇಶ್ವರ ದೇವಸ್ಥಾನಲ್ಲಿ ರುದ್ರ ಪಠಣ ಮಾಡಿದೆಯೊ..ಉದಿಯಪ್ಪಗ, ಎಂಗೊ ವಿರಾಟ್ ಪೂಜಗೆ ತಯಾರವ್ತಾ ಇದ್ದೆಯೋ..

  14. ಇಂದು ಪೇಟೆಯ ಮನೆಗಳಲ್ಲಿ ವಿಭೂತಿ ಹೇಳಿದರೆ ಕಾರ್ ಸ್ಟ್ರೀಟ್ ನ ಕೊಂಕಣಸ್ಥರ ಅಂಗಡಿಂದ ತಂದ ಬೆಳಿ ಉಂಡೆ ಅಷ್ಟೆ,ಅಲ್ಲದ್ರೆ ಗುಂಪೆ ಗುಡ್ಡೆಂದ ತಂದ ಸೇಡಿ ಹೊಡಿಯ ಉಂಡೆ.ಆನು ಸಣ್ಣಾಗಿಪ್ಪಗ ಎನ್ನ ಅಬ್ಬೆ ಶಿವರಾತ್ರಿಯ ದಿನ ವಿಭೂತಿ ಮಾಡುಗು-ಹಾಲು ಕರವ ಊರ ದನದ ಸಗಣವ ಒಣಗಿಸಿ ಮಡುಗಿ ಶಿವರಾತ್ರಿಯ ದಿನ ಇರುಳು ಅದರ ಹೊತ್ತಿಸಿ ಬೂದಿ ಮಾಡಿ,ಅದಕ್ಕೆ ಕರವ ದನದ ಮೂತ್ರ ಹಾಕಿ ಕಲಸಿ ಉಂಡೆ ಮಾಡಿ,ಒಂದು ಸಣ್ಣ ಚೆಂಬಿಲ್ಲಿ ಕಟ್ಟಿ ದೇವರ ಕೋಣೆಲಿ ಮಡುಗ್ಗು.ಇದು ಇಡೀ ವರ್ಷಕ್ಕೆ ಇಪ್ಪ ವಿಭೂತಿ.ಶುದ್ಧ ಕುಂಕುಮ ತಯಾರಿಸುವ ನಮ್ಮ ಬಯಲು, ಶುದ್ಧ ವಿಭೂತಿಯನ್ನೂ ತಯಾರಿಸಲಿ ಹೇಳಿ ಗ್ರಹಿಸುತ್ತೆ(ಎನ್ನ ಹತ್ತರೆ ದನವೂ ಇಲ್ಲೆ,ಕಟ್ಟ್ಳೆ ಜಾಗೆಯೂ ಇಲ್ಲೆ!)
    ವಿಭೂತಿಯ ಬಗ್ಗೆ ಸಿಕ್ಕಿದ ಒಂದು ಇಂಗ್ಲೀಷ್ ಲೇಖನ-Vibhuti (meaning glory) or Bhasma (that by which our sins are destroyed and the Lord is remembered) is the holy ash that Hindus apply over their forehead and body. This holy ash is created by burning cow dung along with milk, ghee, honey, etc. It is a principle sacrament in the worship of Lord Siva, representing His burning away of our ignorance to ashes.
    The cow dung is obtained from cows that are fed sixteen varieties of medicinal leaves. The dung of these cows are collected after allowing sufficient time for digestion. The collected dung would then be formed into flat cakes and dried in the sun. 108 types of herbs, and twigs [‘Samithi’] of high medicinal value are used in the homa (http://www.hindunet.org/homa) in which the dried dung cakes are added. Six types of medicinal leaves are burnt along with these. The significance of using ash from the homa is that the impurities – physical and mental (ego, desires) are burnt off in the fire, and what remains is now pure – and the application of this ash serves as a reminder of this. The vibhuti we apply indicates that we should burn false identification with body and become free of the limitations of birth and death.
    Applying vibhuti is a much more common practice amongst Shivites.
    Vibhuti or Bhasma has medicinal properties and is used in many ayurvedic medicines. It absorbs excess moisture from the body and prevents colds and headaches.
    ಬಹುಶಃ ಈ ತರ ವಿಭೂತಿಯ ನವಗೆ ತಯಾರುಸಲೆ ಕಷ್ಟ ಹೇಳಿ ಅನ್ಸುತ್ತು

    1. ಶಂಕರಮಾವಾ..
      ನಿಂಗಳ ಒಪ್ಪಲ್ಲಿ ಇಂಗ್ಳೀಶಿಲಿ ಎಂತ್ಸದೋ ಬರಕ್ಕೊಂಡು ಇದ್ದ ನಮುನೆ ಕಂಡತ್ತು.
      ಒಪ್ಪಣ್ಣಂಗೆ ಅದೆಲ್ಲ ಓದಲೆ ಅರಡಿಯ! 🙁 😉

      ಆ ಶುದ್ದಿಯ ಚೆಂದಕೆ ನಮ್ಮ ಭಾಶೆಲಿ ಬರದು ನಮ್ಮ ಬೈಲಿಂಗೆ ಹೇಳುವಿರೋ?
      ಬೈಲಿಂಗೆ ಸ್ವಾಗತಮ್!! 🙂

      1. ಎನಗೆ ಕಳುಸುವಗಳು ಹಾಂಗೇ ಅನಿಸಿತ್ತು,ಆದರೆ ಸರಿಯಾದ ಭಾವ ಇಪ್ಪ ಸಂಸ್ಕೃತ ಶಬ್ದಂಗಳ ಅಭಾವ ಎನ್ನ ತಲೆಲಿ ಇದ್ದ ಕಾರಣ ತರ್ಜುಮೆ ಮಾಡ್ಳೆ ಹೆರಟಿದಿಲ್ಲೆ,ಅದಲ್ಲದ್ದೆ ಆ ವಿಷಯಂಗಳ ಬಯಲಿಂಗೆ ಹೇಳುವ ಆತುರವೂ ಇತ್ತು,ಕ್ಷಮೆ ಇರಲಿ.
        ನಿಂಗಳ ಮಾತಿನ ಭಾವ ಅರ್ಥ ಆತು!

  15. ಕೊಶೀ ಆದ ತಮಾಶೆಗೊ:
    [ಗೆಡ್ಡದಮಮ್ಮದೆ ಫುತ್ ಹೇಳಿ ತುಪ್ಪುತ್ತದು……….ಆರುದೇ ಇಲ್ಲದ್ದಲ್ಲಿ ಕರ್ಜೂರ ತಿಂದರೂ ಪೋಕಿಲ್ಲೆ!]
    [ಮನಗೆ ಬಂದು ನೋಡಿರೆ ಅವರ ಬದನೆ ಸಾಲಿಲಿ ಬದನೆ ಇಲ್ಲೆ, ಸೆಸಿ ಮಾಂತ್ರ! ತೊಂಡೆ ಚೆಪ್ಪರಲ್ಲಿ ಬಳ್ಳಿಯೂ ಇಲ್ಲೆ!!]
    ***
    ಕೊಶೀ ಅದ್ದು ಮಾತ್ರ ಅಲ್ಲದ್ದೆ ಹೃದಯಕ್ಕೆ ತಟ್ಟಿದ ಒಳ್ಳೆ ಮಾತುಗೊ:
    [ಈ ಉಪವಾಸ ಹಾಂಗಲ್ಲ, ಆತ್ಮಸಮಾಧಾನಕ್ಕಾಗಿ ಮಾಡ್ತದು…ದೇಹದೊಳ ಇರ್ತ ಶಿವಂಗೋಸ್ಕರ ಉಪವಾಸ ಮಾಡ್ತದು]
    [ಜೀವಿಗಳ ಮೋಕ್ಷಕ್ಕೆ ತಪ್ಪ ಕೆಲಸ ಇವಂಗೇ ಇಪ್ಪದು.] ಇದಕ್ಕೇ ಅಲ್ಲದ ಮಹಾ ಮೃತ್ಯುಂಜಯ ಮಂತ್ರ ಪಠನ ಮಾಡೆಕ್ಕು ಹೇಳುವದು.
    ***
    ಶಿವರಾತ್ರಿ ಆಚರಣೆಯ ಫಲದ ಬಗ್ಗೆ, ಬೇಡನ ಕತೆ ಲಾಯಿಕ ಆಯಿದು. ತಿಳಿಯದ್ದೆ ಬೀಳಿಸಿದ ಬಿಲ್ವವನ್ನೇ, ಶಿವ ತನಗೆ ಬೇಡ ಅರ್ಚನೆ ಮಾಡಿದ್ದ ಹೇಳಿ ತಿಳ್ಕೊಂಡು ಅವಂಗೆ ಅನುಗ್ರಹ ಮಾಡ್ತ. ಇನ್ನು ತಿಳುದು ಮಾಡಿದ ಭಕ್ತಿ ಪೂಜೆಂದಾಗಿ, ಶಿವನ ಕರುಣೆ ಸಿಕ್ಕದ್ದೆ ಇಕ್ಕಾ?
    [ನಿರಾಹಾರ, ಫಲಾಹಾರ, ಉಪಾಹಾರ, ಆಹಾರ – ಹೇಳ್ತದು ವಿವಿಧ ನಮುನೆ ಆಹಾರ ನಿಯಂತ್ರಣ ಆಚರಣೆಗೊ ಅಡ]-ಒಳ್ಳೆ ಮಾಹಿತಿ
    ***
    [ಇರುಳಿಡೀ ಜಾಗರಣೆ ಕೂರೇಕು – ಹೇಳ್ತ ಲೆಕ್ಕಲ್ಲಿ ಏನಾರು ಬಿಂಗಿ ಮಾಡಿರೂ ಮಾಡಿದವು]. ಕೆಲವೊಂದು ಅನುಭವಂಗೊ ಆಯಿದು. ಉದಿಯಪ್ಪಗ ನೋಡಿರೆ, ಮಂಗಳೂರಿಲ್ಲಿ ಹಾಸ್ಟೆಲ್ ಎದುರು “ಬಾರ್ ಎಂಡ್ ರೆಸ್ಟೋರೆಂಟ್” ಬೋರ್ಡ್ ಇತ್ತಿದ್ದು. ಶಿವರಾತ್ರಿ ಜಾತ್ರೆ ಕಳುದು ಉದಿಯಪ್ಪಗ ವಾಹನಲ್ಲಿ ಬಪ್ಪವಕ್ಕೆ, ದಾರಿಲಿ ಇಪ್ಪ ಅಡ್ಡ ಹಾಕಿದ ಕರೆಂಟ್ ಕಂಬ, ಮರದ ತುಂಡುಗೊ, ಕಲ್ಲು ಇದರೆಲ್ಲಾ ತೆಗದು ದಾರಿ ಮಾಡಿಗೊಂಡು ಬರೆಕ್ಕಾಗಿಂಡು ಇತ್ತಿದ್ದು. ಮನೆ ಟೇರೇಸ್ ಮಾಡಿಂಗೆ ಕುಪ್ಪಿ ಇಡ್ಕಿಕ್ಕಿ ಹೋದ್ದರ ಮರುದಿನ ಪರಂಚಿಗೊಂಡು ತೆಗದ್ದು ಇತ್ಯಾದಿ. ಇತ್ತೀಚೆಗೆ ಹೀಂಗಿಪ್ಪದು ಕಮ್ಮಿ ಕಾಣ್ತು.
    ***
    ಶಿವನ ಸಂಸಾರದ ಬಗ್ಗೆ ಕೇಳಿದ ಒಂದು ವಿನೋದ ಹೀಂಗಿದ್ದು:
    ಶಿವನ ಕುಟುಂಬ ಹೇಳಿರೆ ಮಗ ಗಣಪತಿ. ಅವನ ವಾಹನ ಎಲಿ. ಈ ಎಲಿಗೂ ಶಿವನ ಕೊರಳಿಲ್ಲಿ ಇಪ್ಪ ಹಾವಿಂಗೂ ವೈರತ್ವ. ಹಶು ಅಪ್ಪ ಹಾವು, ಎಲಿ ಯಾವಾಗ ಹಿಡುದು ತಿಂಬಲೆ ಸಿಕ್ಕುಗು ಹೇಳಿ ಕಾದೊಂಡು ಇಪ್ಪದು ಸಹಜ.
    ಇನೊಬ್ಬ ಮಗ ಸುಬ್ರಹ್ಮಣ್ಯ. ಅವನ ವಾಹನ ನವಿಲು. ನವಿಲಿಂಗೂ ಶಿವನ ಕೊರಳಿಲ್ಲಿ ಇಪ್ಪ ಹಾವಿಂಗೂ ಬದ್ಧ ವೈರತ್ವ. ಈ ಹಾವು ಯಾವಾಗ ಎನಗೆ ಆಹಾರ ಅಕ್ಕುಹೇಳಿ ನವಿಲಿಂಗೆ ಅಪ್ಪದು ಕೂಡಾ ಸಹಜವೇ.
    ಶಿವನ ಹೆಂಡತಿ ಗಿರಿಜೆ. ಆದರೆ ಶಿವ ತಲೆಲಿ ಕೂರ್ಸಿಗೊಂಡದು ಗಂಗೆಯ. ಗಿರಿಜೆಗೆ ಗಂಗೆಯ ಕಾಂಬಗ ಸವತಿ ಹಾಂಗೆ ಕಾಣದ್ದಿಕ್ಕಾ?
    ಅದರೆ ಶಿವ ಇದರ ಎಲ್ಲವನ್ನೂ ಸಂಭಾಳಿಸಿಂಡು ಹೋವ್ತ. ಅವೆಲ್ಲಾ ಒಂದೇ ಕುಟುಂಬಲ್ಲಿ ಯಾವದೇ ವೈರತ್ವ ಇಲ್ಲದ್ದೆ ಇರ್ತವು.
    ನಮ್ಮ ಸಂಸಾರಂಗಳಲ್ಲಿಯೂ ಹೀಂಗಿಪ್ಪ ಘಟನೆಗೊ ಬಂದರೆ ಒಂದರಿ ಶಿವನ ಧ್ಯಾನ ಮಾಡಿರೆ, ಶಿವನ ತತ್ವ ಆಹ್ವಾನಿಸಿ ಎಲ್ಲವನ್ನೂ ಅವನ ಕೃಪೆಂದ ನಿಭಾಯಿಸಲೆ ಎಡಿಗಲ್ಲದಾ?
    ***

    1. ಶ್ರೀಶಣ್ಣಾ..
      ಶಿವನ ಸಂಸಾರದ ಕತೆ ಕೇಳಿ ಭಾರೀ ಕೊಶಿ ಆತು.
      ಇದೇ ಅರ್ತ ಬಪ್ಪ ಒಂದು ಶ್ಲೋಕವನ್ನೂ ಅಂದು ಬಟ್ಟಮಾವ ಹೇಳಿತ್ತಿದ್ದವು.
      ನಿದಾನಕ್ಕೆ ಬೈಲಿಲಿ ಹೇಳುಗು, ಅಲ್ಲದೋ?

      ಕೊಶಿ ಆದ ಶುದ್ದಿಗೆರೆಗಳ ತೋರುಸಿದ ನಿನ್ನ ಒಪ್ಪ ಕಂಡು ಮನಸ್ಸು ಒಪ್ಪಿತ್ತು! 🙂

  16. ಒಪ್ಪಣ್ಣ,
    ಶಿವರಾತ್ರಿ ಬಗ್ಗೆ ವಿವರವಾದ ಸಕಾಲಿಕ ಲೇಖನ. ಧನ್ಯವಾದಂಗೊ
    ಏನೂ ತಿಳಿಯದ್ದೆ, ಬಿಲ್ವಾರ್ಚನೆ ಮಾಡಿದ ಬೇಡಂಗೆ ಶಿವನ ಒಲುಮೆ ಸಿಕ್ಕಿದ್ದು.
    ಶಿವರಾತ್ರಿ ಸಮಯಲ್ಲಿ ಶಿವ ತತ್ವ ಜಾಸ್ತಿ ಇರ್ತಡ. ಈ ಸಮಯಲ್ಲಿ ಶಿವನ ಯಾವುದೇ ರೀತಿಲಿ ಪೂಜೆ ಮಾಡಿದರೂ ಅವನ ಅನುಗ್ರಹ ಸಿಕ್ಕಿಯೇ ಸಿಕ್ಕುತ್ತು.
    [ಮೂರುಕಣ್ಣಿನ ಶಿವ° ಮಹಾಘೋರ° ಆದರೆಯೇ ಲೋಕಕ್ಕೆ ಮಂಗಳ ಅಕ್ಕಷ್ಟೇ] ಸದ್ಯದ ಪರಿಸ್ಥಿತಿ ನೋಡಿರೆ ಹಾಂಗೆ ಕಾಣ್ತಷ್ಟೆ.
    [ನಿಂಗಳ ಶಿವರಾತ್ರಿ ಆಚರಣೆ ಹೇಂಗಾತು?]- ಮಂಗಳೂರಿನ ಕಾವೂರಿಲ್ಲಿ ಪಂಚಲಿಂಗೇಶ್ವರ ದೇವಸ್ಥಾನಲ್ಲಿ ಸುಮಾರು ೩೫ ಜೆನ ನಮ್ಮ ಬಂಧುಗೊ ಒಟ್ಟು ಸೇರಿ ಉದಿಯಪ್ಪಗ ೫.೩೦ ಕ್ಕೆ ಶತ ರುದ್ರ ಪಾರಾಯಣ ಮಾಡಿದ್ದೆಯೊ.
    ಹಾಂಗೇ ಹೊತ್ತೋಪಗ ಸುರತ್ಕಲ್ ಹತ್ರೆ ಸಧಾಶಿವ ಮಹಾಗಣಪತಿ ದೇವಸ್ಥಾನಲ್ಲಿ ಕೂಡಾ ವಲಯದ ಬಂಧುಗೊ ಸೇರಿ ರುದ್ರ ಪಠನ ಕಾರ್ಯಕ್ರಮ ಮಾಡಿದ್ದೆಯೊ.

    1. ಶರ್ಮಪ್ಪಚ್ಚೀ..
      ಒಪ್ಪವಾದ ಒಪ್ಪಕ್ಕೆ ಧನ್ಯವಾದಂಗೊ.

      ನಿಂಗಳ ನೆರೆಕರೆಯೋರು ಸೇರಿಗೊಂಡು ಶಿವರಾತ್ರಿಯ ವಿಶೇಷ ದಿನ ರುದ್ರಪಾರಾಯಣ ಮಾಡಿದ ಶುದ್ದಿ ಕೇಳಿ ಭಾರೀ ಕೊಶಿ ಆತು!

      ರುದ್ರ ಕಲ್ತು ಅದರ ಸುದಿನಲ್ಲೇ ಸದುಪಯೋಗ ಪಡುಸಿಗೊಂಡ, ಕೋಟಿರುದ್ರಲ್ಲಿ ಭಾಗವಹಿಸಿದ ನಿಂಗಳ ಬಳಗಕ್ಕೆ ನಿಂಗೊಗೆ ಗುರುವೊಲುಮೆಯೂ ಶಿವನೊಲುಮೆಯೂ ಇದ್ದೇ ಇಕ್ಕು, ಹೇಳ್ತದು ಬೈಲಿನೋರ ನಂಬಿಕೆ…
      ಹರೇರಾಮ, ಹರಹರ ಮಹದೇವ!!

  17. ಎಸ್. ಕೆ.ಗೋಪಾಲ ಭಾವಂ ವಿಭೂತಿ ತಯಾರು ಮಾಡುವ ಕ್ರಮದ ಬಗ್ಗೆ ಬರೆದ್ದು ಮತ್ತೆ ಶಿವರಾತ್ರಿ ಬಗ್ಗೆ ಒಪ್ಪಣ್ಣನ ಬರೆದ ಲೇಖನಲ್ಲಿ ತುಂಬ ಮಾಹಿತಿ ಇದ್ದು. ಓದಿ ಸಂತೋಷ ಆತು. ಅಭಿನಂದನೆಗೊ.

    1. ಪ್ರಭಾಕರಮಾವಾ..
      ಬೈಲಿಂಗೆ ಸ್ವಾಗತ.
      ಎಲ್ಲಾ ಶುದ್ದಿಗಳ ಓದಿ, ಪುರುಸೋತಿಲಿ ಒಪ್ಪ ಕೊಡೇಕು ಹೇಳ್ತದು ಒಪ್ಪಣ್ಣನ ಬಯಕೆ..
      ಬತ್ತಿರಲ್ಲದೋ?

      1. ಒಪ್ಪಣ್ಣ, ಸ್ವಾಗತಕ್ಕೆ ಧನ್ಯವಾದಂಗೊ., ಕನ್ನಡ ಟೈಪ್ ಮಾಡುವದು ಅಭ್ಯಾಸ ಅಪ್ಪಲ್ಲಿವರೆಗೆ ಟೈಪ್ ಒಪ್ಪ ಇರ ಹೇಳಿ ಹೆದರಿಕೆ ಆವುತ್ತು. ನಿನ್ನ ಈ ಪ್ರಯತ್ನ ಸ್ವಾಗತಾಹ೯.

  18. ಶಿವರಾತ್ರಿಯ ಮಹಿಮೆಯ ಬಗ್ಗೆ ಒಪ್ಪಣ್ಣ ನ ಲೇಖನ ಸಕಾಲಿಕ. ಉತ್ತಮ ಮಾಹಿತಿ, ಕಥೆಗಳ ಕೊಟ್ಟು ಬೈಲಿನವಕ್ಕೆಲ್ಲ ಶುಭವನ್ನೇ ಬಯಸಿದ್ದ. ಈಗಾಣ ಟಿವಿ ಯುಗಲ್ಲಿ, ಹೆಚ್ಚಿನವೂ ಶಿವರಾತ್ರಿಯ ದಿನ ಕಾಟು ಸಿನೆಮಾಂಗಳ ನೋಡಿ ಉದಿ ಮಾಡ್ತದು ಕಂಡು ಬತ್ತದು ಬೇಜಾರಿನ ವಿಷಯ. ಒಪ್ಪಣ್ಣ, ನಿರಾಹಾರ, ಫಲಾಹಾರ, ಉಪಾಹಾರ, ಆಹಾರ ಹೇಳಿ ವಿವರುಸಿ ಕೊಟ್ಟದು ಚೆಂದ ಆಯಿದು. ಇದರಲ್ಲಿ ಎಲ್ಲೋರು ತಿಂತ, ಜಂಕಾಹಾರ, ನಾರ್ತಾಹಾರ (North Indian) (ವಾಸನೆ ಬತ್ತ ಆಹಾರ) , ಸೌತಾಹಾರ, ಶೀತಲಾಹಾರ ಎಲ್ಲ ಸೇರಿದ್ದಿಲ್ಲೆ ಅಲ್ಲದೊ ? ದುರಭಿಮಾನಲ್ಲಿ , ಅನಗತ್ಯ ಪೈಸೆ ಖರ್ಚು ಮಾಡ್ಳೆ ಬೇಕಾಗಿಯೇ ತಿಂತ, “ಹಾಂಕಾರಾಹಾರ” ವನ್ನೂ ಬೇಕಾರೆ ಇನ್ನಿತರ ಆಹಾರಂಗಳಲ್ಲಿ ಸೇರುಸಲೆ ಅಕ್ಕು .

    1. ಬೊಳುಂಬುಮಾವಾ..
      ನಾರ್ತಾಹಾರ, ಹಾಂಕಾರಾಹಾರ ಎರಡನ್ನೂ ತಿಳಿಶಿಕೊಟ್ಟು, ಒಪ್ಪುವಒಪ್ಪವ ಕೊಟ್ಟದಕ್ಕೆ ಧನ್ಯವಾದಂಗೊ ಬೊಳುಂಬುಮಾವಾ…

  19. (ನಮ್ಮ ಬೈಲಿಲಿಯೂ ಶಿವರಾತ್ರಿಯ ವಾರ ವಿವಿಧ ಶಿವಸ್ತುತಿಗೊ ಬತ್ತಾ ಇದ್ದು: ಸಂಕೊಲೆ)
    ಒಪ್ಪಣ್ಣ,
    ಈ ಸಂಕೊಲೆ ಹಿಡುದು ಒಳ ಹೋಪಲೆ ಪ್ರಯತ್ನ ಮಾಡಿದೆ, ಎಡಿಗಾಯಿದಿಲ್ಲೆ.
    ಎಂತ ಮಾಡೆಕ್ಕು…?!

    1. ಸಂಕೊಲೆಲಿ ಒಂದು ಕೊಳಿಕ್ಕೆ ವಿತ್ಯಾಸ ಆಗಿತ್ತು.
      ಸರಿ ಮಾಡಿದೆ, ಈಗ ಹೇಂಗಾತು ಒಂದು ಗಳಿಗೆ ನೋಡಿಕ್ಕಿ!

  20. ಪ್ರದೋಷ, ಮಾಸಶಿವರಾತ್ರಿ , ಮಹಾಶಿವರಾತ್ರಿ ಬಗ್ಗೆ ಎಲ್ಲ ಸುಮಾರು ವಿಷಯಂಗ ಗೊಂತಾತು. ಧನ್ಯವಾದಂಗೋ…

  21. ಮಹಾಶಿವರಾತ್ರಿಯ ದಿನ ಎನ್ನ ಅಜ್ಜಿ ವಿಭೂತಿ ತಯಾರು ಮಾಡಿಕೊಂಡಿತ್ತಿದ್ದವು.ಅದಕ್ಕಾಗಿ ಎರಡು ವಾರ ಮೊದಲೇ ಸಗಣದ ಬೆರಟಿ ಮಾಡುಗು.ಶಿವರಾತ್ರಿಯ ದಿನ ಹೊತ್ತೋಪಗ ಅದರ ಸುಡುದು.ಮತ್ತೆ ಅದರ ನೀರು ಹಾಕಿ ಕರಡಿ ,ಜರಡಿ{ಅರಿಪ್ಪೆ]ಲಿ ಅರುಶಿ,ಗೋಮೂತ್ರ ಸೇರಿಸಿ ಒಣಗುಸುದು.ರಜಾ ಚೆಂಡಿ ಒಣಗಿಪ್ಪಗ ಮತ್ತೆ ನೀರು ಹಾಕಿ ಒಣಗಿಸುಗು.ಅನಂತರ ಅದರ ಸಣ್ಣ ಸಣ್ಣ ಉಂಡೆ ಮಾದುತ್ತಾ ಇದ್ದಿದ್ದವು.ಆ ದಿನ ಸುಟ್ಟ ಭಸ್ಮ ಮಾತ್ರ ವಿಭೂತಿ ಹೇಳುವ ಪಾವಿತ್ರ್ಯಕ್ಕೆ ಪಾತ್ರ-ಹೇಳಿ ಹಿರಿಯರ ನಂಬಿಕೆ.ಮೊದಲಾಣವು ಹೀಂಗೆಏಳು ಸರ್ತಿ ಒಣಗಿಸಿ,ನೀರು ಹಾಕಿ,ಒಣಗಿಸುದು ಮಾಡುಗಡ,ಉಂಡೆ ಮಾಡಿದ ಮೇಲೆ ಮತ್ತೆ ಕಿಚ್ಚು ಕೊಟ್ಟು[ಮಡಲು ಸುಟ್ಟು]-ಶುದ್ಧ ಮಾಡುಗಡ-ಹಾಂಗೆ ಹೇಳೀಕೊಂಡಿದ್ದಿದ್ದವು.ಹಾಂಗೆ ಮಾಡಿದ ವಿಭೂತಿ ಬೆಳೀ ಅಕ್ಕು.
    ಶಿವ ಸಮುದ್ರ ಮಥನಲ್ಲಿ ವಿಷ ಕುಡಿದು ಲೋಕವ ಕಾಪಾಡಿದ ದಿನ ಇದು ಹೇಳಿ ಕೇಳಿದ್ದೆ.ಅಧಿಕೃತವಾಗಿ ಎನಗೆ ಗೊಂತಿಲ್ಲೆ.
    ಒಪ್ಪಣ್ಣನ ಬರಹಂದಾಗಿ ಹಳೆದು ನೆಂಪಾತು.ಸಂತೋಷ ಆತು.

    1. ವಿಭೂತಿ ತಯಾರು ಮಾಡುವ ಬಗ್ಗೆ ಒಳ್ಲೆ ಮಾಹಿತಿ. ಧನ್ಯವಾದಂಗೊ
      [ಶಿವ ಸಮುದ್ರ ಮಥನಲ್ಲಿ ವಿಷ ಕುಡಿದು ಲೋಕವ ಕಾಪಾಡಿದ ದಿನ ಇದು]- ಸಮುದ್ರ ಮಥನಲ್ಲಿ ವಿಷಕುಡುದ್ದದು ದ್ವಾದಶಿ ದಿನ. ಇದರ ಬಗ್ಗೆ ಪ್ರದೋಷ ಪೂಜೆಯ ಲೇಖನಲ್ಲಿ ಬರದ್ದೆ.

      1. ಧನ್ಯವಾದ.
        ಅದು ಮಾಘ ಕೃಷ್ಣ ದ್ವಾದಶಿಯೊ?

        1. ಗೋಪಾಲಣ್ಣಾ..
          ಅದ, ಅದೊಂದು ಶುದ್ದಿ ಒಪ್ಪಣ್ಣಂಗೆ ಬಿಟ್ಟುಹೋಗಿತ್ತದ!
          ಶಿವರಾತ್ರಿಯ ದಿನ ವಿಭೂತಿ ಮಾಡ್ತದು!
          ಒಳ್ಳೆದಾತು ನೆಂಪುಮಾಡುಸಿದ್ದು.

          ಹೇಳಿದಾಂಗೆ, ಶರ್ಮಪ್ಪಚ್ಚಿಯ ಮಾಹಿತಿಪೂರ್ಣ ಒಪ್ಪವುದೇ ಬಂದು, ಸುಮಾರು ವಿಶಯ ಬೈಲಿಂಗೆ ಗೊಂತಾತು!

  22. ಒಪ್ಪಣ್ಣನ ‘ಶಿವರಾತ್ರಿಯ ಸಾರ’ ರಸವತ್ತಾಗಿ ಮೂಡಿ ಬಯಿಂದು ಹೇಳುವಲ್ಯಂಗೆ ನಮ್ಮದೊಂದು ಒಪ್ಪ.

    ಒಪ್ಪಣ್ಣ ಶಿವರಾತ್ರಿ ಆಚರಿಸಿದ್ದನೊ ಉಪವಾಸ ಕೂಯ್ದನೋ ಫಲಹಾರ ಮಾಡಿದನೋ ಮುಖ್ಯ ಅಲ್ಲ. ಬೈಲಿಂಗೆ ಈ ಹರಿಕಥೆ ಹೇಳುವ ಮೂಲಕ ಶಿವರಾತ್ರಿ ಫಲ ಖಂಡಿತಾ ಸಿಕ್ಕುಗು.

    ಆನು ಶಿವರಾತ್ರಿ ಮಾಡ್ಲೆ ಎಲ್ಲಿಗೆ ಹೋಪದು ಗ್ರೆಶಿಗೊಂಡು ಇತ್ತಿದ್ದೆ. ಬೊಂಡಡ ಮರವೂ ಕಂಡತ್ತಿಲ್ಲೆ, ಬೋರ್ಡ್ ಪೀಂಕ್ಸುವಷ್ಟು ಎಳ್ಪಲ್ಲಿ ಇತ್ತಿಲ್ಲೇ. ಹತ್ರಾಣ ಕಂಪೌಂಡ್ಲಿ ಒಂದು ನೇಂದ್ರ ಬಾಳೆಗೊನೆ ನೋಡಿ ಮಡಿಗಿದ್ದಿತ್ತೆ . ಗಂಟೆ ೨ ಆದರೂ ಈ ಪೋಲಿಸುಗೊ ಬಿಗಿಲು ಊದಿಗೊಂಡು ತಿರುಗಿಯೊಂಡೇ ಇತ್ತಿದ್ದವೋ , ಎಂತ ಮಾಡ್ಲೂ ಉಪಾಯ ಇಲ್ಲದ್ದೆ ಆಗಿ ಹೋತಯ್ಯಾ. ಶಿವನೇ ಹೇದು ಮನುಗಿ ಒರಗಿದೆ ಎನಗೆ ಎಂತದೂ ಬೇಡ ಹೇಳಿ ವಿರಕ್ತಿಲಿ.

    ಓಂ ನಮಃ ಶಿವಾಯ.

    1. ಚೆನ್ನೈ ಭಾವಾ..
      ಪಷ್ಟಾಗಿ ಒಪ್ಪ ಕೊಡ್ತಿನಿಂಗೊ!
      ಎಲ್ಲಾ ಒಪ್ಪ ಒಗ್ಗರಣೆಲಿಯೂ ಸಾಸಮೆ ಇರ್ತಿದಾ, ಅದು ಒಪ್ಪಣ್ಣಂಗೆ ಬಾರೀ ಕೊಶಿ ಆವುತ್ತ ಸಂಗತಿ!
      {ಎಂತದೂ ಬೇಡ ಹೇಳಿ ವಿರಕ್ತಿಲಿ } – ಇದು ಭಾರೀ ಪಷ್ಟಾಯಿದು ಭಾವ!!

      1. ಎಂತಾರು ಭಾವ, ಶಿವ ಕಾಪಾಡಿದ ನೋಡಿ ನಿಂಗಳ ಹರಿಕಥೆ ಓದಿದ ಕಾರಣಂದಾಗಿ. ಆನು ನಿಂಗೊ ಬರದ್ದರ ಶಿವ ಶಿವ ಹೇಳಿ ಓದಿದನೋ, ಆ ಬಾಳೆಗೊನಗೆ ಕೈ ಹಾಕದಾಂಗೆ ಪೋಲಿಸುಗಳ ಮಾರ್ಗಲ್ಲಿ ನಿಲ್ಲಿಸಿ ಇನ್ನೊಬ್ಬನ ಬಾಳೆಗೊನೆಯನ್ನೂ ಉಳಿಸಿದ, ಕೈ ಹಾಕದಾಂಗೆ ಎನ್ನನ್ನೂ ಉಳಿಸಿದ, ಆನೆಲ್ಲ್ಯಾರು ಹೋಗಿರುತ್ತಿದ್ರೆ ಪೊಲೀಸಿಂಗೂ ಮುಟ್ಟದ್ದೇ ಕೂಬಲೆಡಿಯ, ಬ್ರಾಹ್ಮಣನ್ಗೆ ಬಡುದ ಹೇಳಿ ನಾಳೆ ಪಂಚಾಂಗಲ್ಲಿ ಕಂಡರೆ ಅದೂ ಒಂದು ಕಟ್ಟ ಆವ್ತು. ಅಂತೂ ನೋಡಿ ಕಣ್ಣೆದುರೆ ನಿದರ್ಶನ. ಅಂತೂ ಶಿವರಾತ್ರಿ ಮಾಡ್ಲೆ ಎಡಿಯದ್ರೂ ಶಿವ ನಾಮ ಸ್ಮರಣೆ , ಶಿವ ಮಹಿಮೆ ಕಥೆ, ಶಿವ ಸ್ತೋತ್ರ , ಓದುವದರಿಂದಲೂ ಶಿವ ನಮ್ಮೆಲ್ಲರ ಕಾಪಾಡುತ್ತಾ ಅಪ್ಪೋ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×