ಕಣ್ಣನೂರು ಬಾವನ ಜೆಂಬ್ರಕ್ಕೆ ‘ಸಣ್ಣನೂರು’ ಜೆನ ಅಕ್ಕಡ…!

February 3, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 54 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಲಿ ಯೇವಗಳೂ ಗಾತಿ ವಿಷಯಂಗಳನ್ನೇ ಮಾತಾಡಿಂಡಿದ್ದರೆ ಹೇಂಗಕ್ಕು?
ಎಡೆಡೆಲಿ ಕುಶಾಲೂ ಬೇಕು, ನೆಗೆಯೂ ಬೇಕು, ಬೆಗುಡೂ ಬೇಕು, ಸತ್ಯವೂ ಬೇಕು – ಲೊಟ್ಟೆಯೂ ಬೇಕು!
ಒಂದು ವಾರ ಆಚಭಾವ° ಒಪ್ಪ ಕೊಡುಗು; ಮತ್ತೊಂದು ವಾರ ಬೋಚಬಾವ° ಒಪ್ಪ ಕೊಡುಗು. ಬೈಲಿಲಿ ಒಪ್ಪ ತಪ್ಪುಲಿದ್ದೋ?!
ಕಳುದವಾರ ಚಿಂತನೆಯ ಶುದ್ದಿ ಮಾತಾಡಿದ್ದಪ್ಪೋ.. ಈ ವಾರ ನೇರಂಪೋಕು ಶುದ್ದಿ ಮಾತಾಡಿರೆ ಹೇಂಗೆ?
ಅಕ್ಕಲ್ಲದೋ?
~
ನಿಂಗೊಗೆ ಕಣ್ಣನೂರುಬಾವನ ಅರಡಿಗೊ?
ದೊಡ್ಡಬಾವನ ಅಜ್ಜನಮನೆಲಿಪ್ಪ ದೊಡ್ಡಜ್ಜನ – ದೊಡ್ಡಣ್ಣನ – ದೊಡ್ಡಮಗನೇ ಕಣ್ಣನೂರು ಭಾವ°.
ಹೆಸರೇ ಹೇಳ್ತಹಾಂಗೆ ಕಣ್ಣನೂರಿಲಿ ಇಪ್ಪದು.
ದೊಡ್ಡಮನಸ್ಸಿನ ಆ ದೊಡ್ಡ ಭಾವಯ್ಯಂಗೆ ದೇವರು ದೊಡ್ಡ ದೇಹವೂ, ದೊಡ್ಡಮೀಸೆಯೂ ಕೊಟ್ಟಿದವು!
ಆದರೆ, ಸೊರ ಮಾಂತ್ರ ಬಹು ಸಣ್ಣದು – ಹೇದು ಒಂದೊಂದರಿ ಒಪ್ಪಣ್ಣಂಗೆ ಕಾಂಬಲಿದ್ದು.
ಅದಿರಳಿ, ದೊಡ್ಡಕೆ ಹೇಳುದು ಬೇಡ ಅದರ! 😉
ಮದಲಿಂಗೇ ದೊಡ್ಡಪುಸ್ತಕ ಓದಿ, ದೊಡ್ಡ ಕೆಲಸವ ಹುಡ್ಕಿ ದೊಡ್ಡ ಉತ್ಸಾಹಲ್ಲಿ ದೊಡ್ಡ ಜಾಗೆಲಿ ಜೀವನ ಮಾಡಿಗೊಂಡಿದ್ದವು.
~
ಕಣ್ಣನೂರಿಲಿ ಅಂದೇ ಇಪ್ಪ ಕಾರಣ ಜಾಗೆತೆಗದು ಮನೆಕಟ್ಟಿಯೂ ಆಯಿದು.
ಆದರೆ, ಇಕ್ಕಟ್ಟಿನ ಆ ಪೇಟೆಲಿ ಕಾಲುನೀಡ್ಳೆ ಮನೆಲಿ ಕೋಣೆಗೊ ಸಾಕಾವುತ್ತಿಲ್ಲೆ – ಹೇದು ಟಯರೀಸಿನ ಮೇಗೆ ಒಂದೆರಡು ಕೋಣೆಗಳ ಈ ಒರಿಶ ಕಟ್ಟುಸಿದವಡ.
ಯೇವದೇ ಮನೆಯ “ವಾಸ್ತು” ವಿತ್ಯಾಸ ಮಾಡಿರೆ ವಾಸ್ತುಪುರುಷನ ಹತ್ತರೆ ಅನುಮತಿ ತೆಕ್ಕೊಳೇಕು ಹೇಳ್ತರ ಚೆನ್ನೈಭಾವನ ಜೋಯಿಶರು ಹೇಳುಗಡ.
ಅದೊಂದು ವಾಡಿಕೆ; ಕಣ್ಣನೂರು ಬಾವಂಗೂ ಅರಡಿಗು.
ಹಾಂಗೆ ಒಂದು ಸಣ್ಣ ಜೆಂಬ್ರ ಇದ್ದತ್ತು ಕಳುದವಾರ, ಮನೆಒಕ್ಕಲಿನ ಲೆಕ್ಕದ್ದು.ಓ ಮೊನ್ನೆ ಇರುಳಿಂಗೆ ವಾಸ್ತು ಹೋಮ ವಗೈರೆಗಳೂ, ಅದರ ಮರದಿನ ಶಿವಪೂಜೆ-ಗೆಣವತಿಹೋಮ ವಗೈರೆ ಪೂಜೆಗಳೂ ಇದ್ದತ್ತು.
ಬೇರೆ ಜೆಂಬ್ರಂಗೊ ಎಲ್ಲ ತರವಾಡಿಲಿ ಮಾಡ್ಳಕ್ಕು, ಆದರೆ ಮನೆಒಕ್ಕಲಿನ ಹಾಂಗೆ ಮಾಡ್ಳೆಡಿಗೋ!
ಹಾಂಗೆ ಜೆಂಬ್ರ ಇದ್ದದು ಕಣ್ಣನೂರಿಲೇ ಇದಾ.
ಪರಕ್ಕಜೆ ಬಟ್ಟಮಾವನೇ ಪುರ್ಸೋತು ಮಾಡಿ ಕೂದು ಮಾಡುಸುತ್ತ ಜೆಂಬ್ರ ಅದು.

ಹೇಳಿಕೆ ಇದ್ದತ್ತು, ಆದರೆ ನವಗೆ ಹೋಪಲಾತಿಲ್ಲೆ.
ಬೈಲಿನೊಳವೇ ಜೆಂಬ್ರ ಆದರೆ ದಿನಕ್ಕೆ ಮೂರು-ನಾಕಾದರೂ ಪ್ರಶ್ನೆ ಇಲ್ಲೆ, ಆರದ್ದಾರು ಬೈಕ್ಕೋ, ಸ್ಕೂಟ್ರೋ, ಕಾರೋ – ಎಂತರ್ಲ್ಯಾರು ನುರ್ಕಿಯೊಂಡು ಸುದಾರ್ಸಲೆಡಿತ್ತು. ಆದರೆ – ದೂ…ರ ಆತುಕಂಡ್ರೆ ಮತ್ತೆ ನವಗೆ ಆ ದಿನ ಮುಗಾತು; ಬೇರೆಂತೂ ಮಾಡಿಕ್ಕಲೆಡಿಯ ಇದಾ!
ಹಾಂಗೆ – ದೂರದ ಜೆಂಬ್ರಂಗಳ ಇಲ್ಲಿಂದಲೇ ಸುದಾರುಸುದು ಸಾಮಾನ್ಯ ಕ್ರಮ. 😉
ಬೈಲಿಂದ ಆ ಜೆಂಬ್ರಕ್ಕೆ ಹೋಪೋರದ್ದು ಹಸ್ತ ಮುಟ್ಟಿಗೊಂಬದು!
ಸುಬಗಣ್ಣ ಹೋಯಿದವು ಪುರುಸೊತ್ತುಮಾಡಿಗೊಂಡು – ನಮ್ಮಲೆಕ್ಕಲ್ಲಿಯೂ ಆತದು.
ಜೆಂಬ್ರ ಎಲ್ಲ ಕಳುದು ಒಂದು ವಾರವೇ ಆತು. ಅದಿರಳಿ.
~

ನಿನ್ನೆಲ್ಲ ಮೊನ್ನೆ ಬೈಲಿಲೇ ನೆಡಕ್ಕೊಂಡು ಆಚಕರೆಗೆ ಹೋಪಗ, ಸಾರಡಿತೋಡ ಕಟ್ಟಲ್ಲಿ ಎರ್ಕಿದ ನೀರಿಲಿ ಬಾಳೆದಂಡುಕಟ್ಟಿ – ಬೇಲೆನ್ಸುಮಾಡಿಗೊಂಡು ಕಂಡತ್ತು ಸುಭಗಣ್ಣನ.
ಒಂದರಿಯಾಣ ಕೆಲಸ ಆಗಿ ತೋಡಿಂಗೆ ಮೀವಲೆ ಬಪ್ಪದು ಹಳ್ಳಿಯೋರ ವಾಡಿಕೆ ಇದಾ!
ಹಾಂಗೆ, ಕಂಡಪ್ಪದ್ದೇ ಒಂದುಗಳಿಗೆ ಮಾತಾಡಿದೆಯೊ – ಮನ್ನೇಣ ಜೆಂಬ್ರದ ಶುದ್ದಿಯೂ ಬಂತು.
“ಹೇಂಗಾತು – ಕಣ್ಣನೂರು ಬಾವನ ಮನೆಜೆಂಬ್ರ?” ಕೇಳಿದೆ.
ಜೆಂಬ್ರ ಲಾಯಿಕಾತು ಹೇದು ಗೊಂತಾತು. ಜೆಂಬ್ರದ ವಿಶಯ ಮಾತಾಡುವಗ ಸಹಜವಾಗಿ ಹಳ್ಳಿಯೋರ ಸುರೂವಾಣ  ಕುತೂಹಲ “ಜೆನ ಎಷ್ಟಕ್ಕು?” ಹೇದು.
ಅದೆಂತಕೆ ಹಾಂಗೆ ಹೇದು ಒಪ್ಪಣ್ಣಂಗೂ ಅರಡಿಯ, ಆದರೆ ಹಳಬ್ಬರ ಆ ಕುತೂಹಲ ಒಪ್ಪಣ್ಣಂಗೂ ಇಳುದುಬಯಿಂದು.
ಜೆಂಬ್ರಕ್ಕೆ ಹೋಪಲಾಯಿದಿಲ್ಲೆ ಹೇದರೂ ಆ ಜೆಂಬ್ರಕ್ಕೆ ಜೆನ ಎಷ್ಟಕ್ಕು, ಜೆಂಬ್ರದ ಗವುಜಿ ಹೇಂಗಿದ್ದಿಕ್ಕು – ಹೇದು ತಿಳ್ಕೊಂಬ ಕುತೂಹಲ. ಹಾಂಗೆ ಕೇಳಿದೆ.
“ಮಜ್ಜಾನಕ್ಕೆ ಎಷ್ಟು – ಒಂದು ಸಣ್ಣ ನೂರಕ್ಕಷ್ಟೆ” – ಹೇಳಿದವು ಸುಭಗಣ್ಣ.
~

ಮತ್ತೂ ರಜ ಹೊತ್ತು ಹಾಂಗೆ-ಹೀಂಗೆ ಮಾತಾಡಿ ನಾವು ತೋಡಕರೆಂದ ಹೆರಟತ್ತು. ನವಗೆಂತ ಕೆಲಸ ಅಲ್ಲಿ, ಅಲ್ಲದೋ? 😉
ನೆಡಕ್ಕೊಂಡು ಬಪ್ಪಗ ಸುಬಗಣ್ಣನ ಹತ್ತರೆ ಮಾತಾಡಿದ್ದೇ ತಲೆಲಿ ತಿರುಗಲೆ ಸುರುಆತು. ಜೆನ ಎಷ್ಟಕ್ಕು ಕೇಳಿದೆ, ವಿವರ ಹೇಳಿದವು – “ಸಣ್ಣನೂರೋ?” – ಅದೆಂತರ?
ನಮ್ಮೊಳದಿಕ್ಕೆ ಅದೇನೂ ದೊಡ್ಡ ವಿಶಯ ಅಲ್ಲ, ಆದರೆ ಶುಬತ್ತೆಯ ಮಗಂಗೆ “ಅದು ಎಷ್ಟು?” – ಹೇದು ಅಂದಾಜಿಅಕ್ಕೋ?
ಆ ಮಾಣಿಗೆ ಹಂಡ್ರೆಡ್ಡು – ಸಮ ನೂರು ಅರಡಿಗು. ಆದರೆ ಆ ನೂರರಲ್ಲಿಯೂ ದೊಡ್ಡಸಣ್ಣ ಇದ್ದೋ – ಅವಂಗೆ ಚೋದ್ಯ ಅಕ್ಕು, ಅಲ್ಲದೋ!
ಹ್ಮ್,
ಅದೊಂದು ನಮ್ಮ ಅಜ್ಜಂದ್ರ ಕಾಲದ “ಪದಪ್ರಯೋಗ”.
ಒಂದರಿ ಒಪ್ಪಣ್ಣಂಗೂ ಚೋದ್ಯ ಕಂಡತ್ತು, ಹಾಂಗಾಗಿ ಈ ವಾರ ಅದನ್ನೇ ಮಾತಾಡಿರಾಗದೋ?
~

ಈ ಹಂತಿಲಿ ಜೆನ ಎಷ್ಟಕ್ಕಪ್ಪಾ - ಶಂಬಜ್ಜ ಆಗಿದ್ದರೆ ಕೂಡ್ಳೇ ಹೇಳುಗು!

ಜೀವನಲ್ಲಿ ನಿಖರತೆ ಎಷ್ಟು ದಿಕ್ಕೆ ಬೇಕಾವುತ್ತೋ – ಹಾಂಗೇ ನಿಖರತೆ ಅಗತ್ಯ ಇಲ್ಲದ್ದ ಜಾಗೆಗಳೂ ಧಾರಾಳ ಇದ್ದು.
ಜೆಂಬ್ರಕ್ಕೆ ಜೆನ ಹೇಳುವ ಹಾಂಗಿಪ್ಪ ಸಂದರ್ಭಂಗಳಲ್ಲಿ – ಜೆನ ಎಷ್ಟಾತು – ಹೇಳ್ತ ನಿಖರವಾದ ಅಳತೆ ಆರಿಂಗೂ ಬೇಡ; ಸ್ವತಃ ಮನೆ ಯೆಜಮಾನಂಗೂ ಬೇಡ.
ಜೆಂಬ್ರ ತೆಗವಗಳೇ ಎಷ್ಟು ಜೆನರ ಏರ್ಪಾಡುಹೇಳ್ತದರ ಅಂದಾಜಿ ಮಾಡುಗು. ನಿಘಂಟು ಮಾಡವು; ಅಂದಾಜಿ ಮಾಡುಗು ಅಷ್ಟೇ.
ಹಾಂಗೆ ಒಂದು ತೋರಮಟ್ಟಿಂಗೆ ನೆರೆಕರೆ-ನೆಂಟ್ರು-ಚೆಂಙಾಯಿಗೊಕ್ಕೆ ಹೇಳಿಕೆಗಳೂ ಹೇಳಿಂಡು ಹೋವುತ್ಸು.
ಹೇಳಿಕೆ ಸಿಕ್ಕಿದ ಎಲ್ಲೋರುದೇ – ಆ ಜೆಂಬ್ರದ ಪ್ರಾಮುಖ್ಯತೆ, ಯೆಜಮಾನನ ಆತ್ಮೀಯತೆ, ಆ ದಿನದ ಎಡೆ- ಪುರುಸೊತ್ತು, ಜೆಂಬ್ರದ ಮನಗಿಪ್ಪ ದೂರ – ಎಲ್ಲವನ್ನೂ ನೋಡಿಗೊಂಡು, ತೂಗಿಗೊಂಡು ಲೆಕ್ಕಾಚಾರ ಹಾಕಿ ಜೆನಂಗೊ ಸೇರುಗು.
ಅಲ್ಲಿಂದ ಮತ್ತೆಯೇ ಇಂದ್ರಾಣ ಶುದ್ದಿ!

ಮೊನ್ನೆ ಮನೆಒಕ್ಕಲಿಲಿ ಹಾಂಗೇ ಆತಡ.
ಸುಭಗಣ್ಣ ವಿವರವಾಗಿ ಮಾತಾಡುವಗ ಹೇಳಿತ್ತವು,
ಹಸ್ತೋದಕಕ್ಕೆ ಗುರಿಕ್ಕಾರ್ರುದೇ, ಐದಾರು ಬಟ್ಟಮಾವಂದ್ರುದೇ, ಸಣ್ಣ ಹಂತಿ.ಹೆರ ಚೆಪ್ಪರಲ್ಲಿ ಹತ್ತು-ಇಪ್ಪತ್ತೈದು ಜೆನ. ತಟ್ಟೆಹಿಡುದು ಬಪೆಲಿ ಉಂಡೋರು ಹತ್ತು-ಐವತ್ತು ಜೆನ.
ಅದೇ – ಎಲ್ಲ ಒಟ್ಟಾಗಿ ಸಣ್ಣನೂರು ಅಕ್ಕಷ್ಟೆ – ಹೇಳಿ ವಿವರಣೆ ಕೊಟ್ಟವು.

 • ಐದಾರು ಹೇದರೆ ಐದೂ ಆಯೇಕೂದಿಲ್ಲೆ, ಆರೇ ಆಯೆಕ್ಕೂಳಿ ಇಲ್ಲೆ. ನಾಲ್ಕೋ, ಐದೋ, ಎಂಟೋ – ಒಟ್ಟು ಹತ್ತರಿಂದ ಕಮ್ಮಿ ಹೇಳಿ ಅರ್ತ.
 • ಚೆಪ್ಪರಲ್ಲಿ ಕೂದೋರು ಹತ್ತು-ಇಪ್ಪತ್ತೈದು ಜೆನ!
  ಹತ್ತು ಅಲ್ಲ, ಇಪ್ಪತ್ತೈದೂ ಆಗಿರ. ಸುಮಾರು ಹತ್ತರತ್ತರೆ – ಇಪ್ಪತ್ತರಿಂದ- ಮೂವತ್ತರ ಆಸುಪಾಸು.
  ಇಪ್ಪತ್ತರಿಂದ ನಲುವತ್ತರ ಒರೆಂಗೆ ಆಗಿಪ್ಪಲೂ ಸಾಕು. ಸರಿಯಾಗಿ ಲೆಕ್ಕ ಮಡುಗಲೆ ಆರಿಂಗೆ ಪುರ್ಸೊತ್ತಿರ್ತು, ಅಲ್ಲದೋ?
 • ಬಪೆಲಿ ಉಂಡೋರು ಹತ್ತೈವತ್ತುಜೆನ.
  ಅಲ್ಲಿಯೂ ಹತ್ತು – ಹೇಳುದು ಸುಮ್ಮನೇ ಒಂದು ಪಾರಿಭಾಶಿಕ ಶೆಬ್ದ.
  ಐವತ್ತರ ಸುತ್ತುಮುತ್ತು; ಹೇದರೆ ನಲುವತ್ತೂ ಆಯಿಕ್ಕು, ಅರುವತ್ತೂ ಆಯಿಕ್ಕು.
  ಸುಮಾರಾಗಿ ಐವತ್ತರ ಸುತ್ತುಮುತ್ತದ ಸಂಕೆ.
ಅಂಬಗ ಒಟ್ಟೆಷ್ಟಾದವು?
ಕಮ್ಮಿ ಸಂಕೆ ತೆಕ್ಕೊಂಡ್ರೆ, ನಾಕು ಬಟ್ಟಮಾವಂದ್ರು, ಇಪ್ಪತ್ತು ಹಂತಿಯೋರು, ನಲುವತ್ತು ಬಪೆಲಿ ಉಂಡೋರು. ನಲುವತ್ತೂ ಇಪ್ಪತ್ತು ಅರುವತ್ತು – ಅರುವತ್ತನಾಕು ಜೆನ!
ಹೆಚ್ಚಿಂದೇ ತೆಕ್ಕೊಂಡ್ರೆ, ಎಂಟು ಜೆನ ಬಟ್ಟಮಾವಂದ್ರು, ಮೂವತ್ತು ಜೆನ ಹಂತಿಯೋರು, ಅರುವತ್ತು ಜೆನ ಬಪೆಯೋರು. – ತೊಂಬತ್ತೆಂಟು ಜೆನ!!
ಅಂತೂ ನೂರಾಗಿರ. ಅಂಬಗ ನೂರಕ್ಕು ಹೇದು ಲೊಟ್ಟೆಬಿಟ್ಟದೋ? ಅಲ್ಲ!
ಅದಕ್ಕೇ ಹೇಳಿದ್ದು, ಸಣ್ಣ ನೂರು – ಹೇದು.
ಸುಮಾರು ಅರುವತ್ತರಿಂದ, ನೂರರ ಒಳಾಣ ಅಂದಾಜಿಯೇ – ಸಣ್ಣ ನೂರು.
~ಮದಲಿಂಗೆಲ್ಲ ಜೆಂಬ್ರದ್ದಿನ ಜೆನಲೆಕ್ಕ ಹಿಡಿಯಲೆ ಬಾಳೆಲೆಕ್ಕವೇ ಆಯೆಕ್ಕಟ್ಟೆ.
ಕಟ್ಟ ಒಂದಕ್ಕೆ ಇಪ್ಪತ್ತೈದರ ಹಾಂಗೆ ಬಾಳೆಲೆಗೊ ಮುನ್ನಾದಿನವೇ ಕಟ್ಟಿಮಡಗ್ಗು. ಹಂತಿ ಹಾಕುವಗ ಒಂದೊಂದನ್ನೇ ಬಿಡುಸಿ ಹಂತಿ ಹಾಕುದಲ್ಲದೋ.
ಹಾಂಗಾಗಿ, ಎಷ್ಟು ಕಟ್ಟ ಮುಗಾತು? – ಹೇಳ್ತರಲ್ಲಿ ಜೆನ ಅಂದಾಜಿ ಮಾಡುದು.
ಸುರುವಾಣ ಹಂತಿಲಿ ಎಂಟು ಕಟ್ಟು, ಇನ್ನೂರು ಜೆನ.
ಎರಡ್ಣೇ ಹಂತಿಗೆ ಆರುಕಟ್ಟ- ನೂರೈವತ್ತು,
ಮೂರ್ನೇಹಂತಿಗೆ ಎರಡುಕಟ್ಟ- ಐವತ್ತು – ನಾನ್ನೂರು ಜೆನ – ಹೀಂಗೆ ಲೆಕ್ಕ ಹಾಕುದು ಸರ್ವೇಸಾಮಾನ್ಯ.
ಇದರೆಡಕ್ಕಿಲಿ ತಮಾಶೆಯೂ ಇದ್ದು,
– ಸುರುವಾಣ ಹಂತಿಗೆ ತೆಕ್ಕೊಂಡು ಹೋದ ಎಂಟು ಕಟ್ಟಲ್ಲಿ – ಬಿಡುಸದ್ದೇ ಒಳುದ ಎರಡು ಕಟ್ಟವ ಸುದರಿಕೆ ಬಾವಯ್ಯ ಓ ಅಲ್ಲಿ ಮಂಚದಡಿಲಿ ಹಾಕಿ ಮಡಗ್ಗು, ಅಂಬೆರ್ಪಿಂಗೆ.
ಜೆಂಬ್ರದ ಗವುಜಿ ಕಳುದು ಒತ್ತರೆ ಮಾಡುವಗ – ಎರಡು ದಿನ ಕಳುದ ಮೇಗಲ್ಲದೋ ಜೆನ ಲೆಕ್ಕ ಕಮ್ಮಿ ಅಪ್ಪದು!!
ಹೋ, ನಾನ್ನೂರಲ್ಲ, ಮುನ್ನೂರೈವತ್ತೇ – ಹೇಳಿಗೊಂಡು.
– ಹಂತಿ ಎಡಕ್ಕಿಲಿ ಹರುದ ಬಾಳೆಲೆ ಪೋರ್ಚೆಮಾಡಿರೆ ಅದುದೇ ಲೆಕ್ಕವೇ!
ಅದೇನೇ ಇರಳಿ,
ಈಗ ಬಪೆ ಬಂದ ಮೇಗೆ ಇದೆಲ್ಲ ಸರಿನಿಲ್ಲುತ್ತಿಲ್ಲೆ, ಪ್ಲೇಟುಲೆಕ್ಕವೋ, ಹಾಳೆತಟ್ಟೆ ಲೆಕ್ಕವೋ – ಎಂತಾರು ಮಾಡಿ ಸಮಾದಾನ ಮಾಡಿಗೊಂಬದು.
ಎಷ್ಟಾರೂ ನಿಖರವಾದ ಲೆಕ್ಕ ಹಿಡಿಯಲೆ ಅಂದೂ ಎಡಿಯ, ಇಂದೂ ಎಡಿಯ, ಎಂದಿಂಗೂ ಕಷ್ಟವೇ.
ಹಾಂಗಾಗಿ, ಇಂತಾ ಸಂದರ್ಭಂಗಳಲ್ಲಿ ಓರೆ ಅಂದಾಜಿಯೇ ಸಲ್ಲೆಕ್ಕಟ್ಟೆ.
ಶಂಬಜ್ಜ°, ದೊಡ್ಡಜ್ಜನ ಹಾಂಗೆ ಕೆಲವು ಅನುಭವಿಗೊ ಹಂತಿಯ ತಲೆ ಕಂಡ್ರೆ ಸಾಕು – ಇಂತಿಷ್ಟೇ ಕೂಯಿದವು – ಹೇದು ಅಂದಾಜಿಯನ್ನೂ ಹೇಳುಗು.
ಅದುದೇ ಒಂದು ಕಲೆಯೇ ಅಲ್ಲದೋ?
~
ಅಡಿಗೆಯಣ್ಣ ಮನಗೆತ್ತಿಅಪ್ಪದ್ದೇ ಯೆಜಮಾನ ಅಂದಾಜಿ ಹೇಳುಗು.
ಭಾವಯ್ಯ, ಈ ಸರ್ತಿ ಹೇಳಿಕೆ ಹದಾಮಟ್ಟಿಂಗೆ. ಹತ್ತರಾಣ ನೆರೆಕರೆ, ನೆಂಟ್ರುಗೊಕ್ಕೆ ಮಾಂತ್ರ.
ಹಾಂಗಾಗಿ ಈ ಸರ್ತಿ ಅಡಿಗೆ ಅಂದಾಜಿಗೆ ನೂರು ಹೇಳಿ ಮಡಿಕ್ಕೊಂಬೊ° – ಹೇದು.
ಕ್ರಮ ಹೇಂಗೆ ಹೇದರೆ, ನೂರಕ್ಕೆ ಹೇದು ಬೇಶಿರೆ ಅದು ಸಣ್ಣನೂರರಿಂದ ದೊಡ್ಡನೂರರ ಒರೆಂಗೂ ಸಾಕಾಯೇಕು.
ದೊಡ್ಡನೂರೋ? ಅಪ್ಪು, ನೂರರಿಂದ ಮೇಗೆ – ನೂರ ಇಪ್ಪತ್ತು – ನೂರನಲುವತ್ತರ ಒರೆಂಗೆ ಆದರೆ ಅದಕ್ಕೆ ದೊಡ್ಡ ನೂರು ಹೇಳ್ತದು.
– ಶುಬತ್ತೆಯ ಮಗ ಪಾಪ ಮೇಗೆಕೆಳ ನೋಡುಗಪ್ಪೋ!! ಪೋ!!
~

ಆಚಕರೆ ನೆಡಕ್ಕೊಂಡೇ ಹೋವುತ್ತ ದಾರಿಲಿ ಎನಗೆ ತರವಾಡುಮನೆ ಜೆಂಬ್ರಂಗಳ ಆಲೋಚನೆ ಮಾಡಿ ಹೋತು:

 • ತರವಾಡುಮನೆಲಿ ಕೈನ್ನೀರು ಇದ್ದರೆ ಹತ್ತನ್ನೆರಡು ಜೆನ ಅಕ್ಕಟ್ಟೆ,
 • ತಿತಿ ಇದ್ದರೆ ಹತ್ತು ಮೂವತ್ತು ಜೆನ ಆಗಿಹೋಕು.
 • ದುರ್ಗಾಪೂಜೆ ಉತ್ಥಾನಕ್ಕೆ ಹತ್ತೈವತ್ತು ಜೆನ ಅಕ್ಕೋ ಏನೋ.
 • ತ್ರಿಕಾಲಪೂಜೆ ಇದ್ದರೆ, ಮಜ್ಜಾನಕ್ಕೆ ಆದರೆ ಒಂದು ಸಣ್ಣ ನೂರಕ್ಕು, ಹೆಚ್ಚಿರೆ ನೂರು ಜೆನ ಅಕ್ಕಟ್ಟೆ. ಇರುಳಿಂಗೆ ದೊಡ್ಡನೂರಕ್ಕೋ ಏನೋ.
 • ತರವಾಡುಮನೆ ಪುಳ್ಳಿಮಾಣಿ ವಿನುವಿಂಗೆ ಉಪ್ನಾನ ಏರ್ಪಾಡಿಂಗೆ ಸಣ್ಣ ಐನ್ನೂರರ ಅಂದಾಜಿ ಮಾಡಿದ್ದು.
 • ಶಾಂಬಾವನ ಮದುವೆಗೆ ದೊಡ್ಡ ಸಾವಿರವೇ ಆಗಿ ಹೋಕು – ಆ ಕಾಲಲ್ಲಿ; ಶಂಬಜ್ಜ° ಕಂಡ ಅಕೇರಿ ಜೆಂಬ್ರ ಅದುವೇ ಅಲ್ಲದೋ – ಒಳ್ಳೆತ ಗವುಜಿ ಆಯಿದು ಅದು! ನೆಂಪಿದ್ದೋ? :-)

ಅಂತೂ ಹತ್ತನ್ನೆರಡ್ರಿಂದ – ದೊಡ್ಡಸಾವಿರ ಒರೆಂಗೆ, ಎಲ್ಲಾ ಜೆಂಬ್ರಂಗಳನ್ನೂ ಕಂಡು ಗೊಂತಿದ್ದು ಬೈಲಿನೋರಿಂಗೆ.
ಅಪ್ಪೋ!
~
ಹಳಬ್ಬರ ಕೆಲವು ಪದಪ್ರಯೋಗಂಗೊ ಇಂದಿಂಗೂ ಎಷ್ಟು ಪ್ರಸ್ತುತ ಅಲ್ಲದೋ!
ಅಜ್ಜಂದ್ರ ಅನುಭವ ಒಳಗೊಂಡ ಕೆಲವು ವಿಶಯಂಗೊ ಇಂದ್ರಾಣ ಜೀವನಲ್ಲಿಯೂ ಉಪಯೋಗ ಆವುತ್ತು.
ಈಗಾಣ ಇಂಗ್ಳೀಶು ಪ್ರಭಾವಂದಾಗಿ ಅದರ ಉಪಯೋಗಮಾಡ್ತದರ ಕಮ್ಮಿ ಮಾಡಿದವೋ!
ಹೀಂಗೆ ಹೇಳಿರೆ ಸಣ್ಣವಕ್ಕೆ ಅರ್ತ ಆಗ ಹೇದು ಅಜ್ಜಂದ್ರೂ ಉಪಯೋಗ ಮಾಡದ್ದೆ, ಒಂದೊಂದೇ ಕಾಣೆ ಆವುತ್ತೋದು ಒಂದು ಹೆದರಿಕೆಯೂ ಆವುತ್ತು.

ದಿನನಿತ್ಯಲ್ಲಿ ಉಪಯೋಗ ಮಾಡಿಂಡಿದ್ದರೆ ಎಂದಿಂಗೂ ಮರದು ಹೋಗ.
ಹೀಂಗಿರ್ಸರ ಕಷ್ಟಪಟ್ಟು ನೆಂಪು ಮಡಿಕ್ಕೊಳೇಕು ಹೇದು ಏನಿಲ್ಲೆ, ಇಷ್ಟಪಟ್ಟು ನೆಂಪುಮಡಿಕ್ಕೊಂಡ್ರಾತು.
ಒಂದರಿ ಇಷ್ಟಪಟ್ಟರೆ ಸಾಕು, ಮತ್ತೆ ಮರದೇ ಹೋಗ.
~
ಆಚಕರೆ ಎತ್ತಿತ್ತು, ಈ ಶುದ್ದಿ ಮುಗಾತು!

ಒಂದೊಪ್ಪ: ಈ ಶುದ್ದಿಲಿ ಒಟ್ಟು ಶಬ್ದಂಗೊ – ಸುಮಾರು ಸಣ್ಣ ಸಾವಿರವೇ ಆಗಿ ಹೋಕೋ ಹೇಳಿಗೊಂಡು! :-)

ಸೂ: ಬೈಲಿನ ಕಣ್ಣನೂರುಭಾವ° ನಿಜಜೀವನಲ್ಲಿಯೂ ಕಣ್ಣನೂರುಭಾವನೇ ಆಗಿರ. ಆತೋ? 😉

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 54 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  “ಕಷ್ಟಪಟ್ಟು ನೆಂಪು ಮಡಿಕ್ಕೊಳೇಕು ಹೇದು ಏನಿಲ್ಲೆ, ಇಷ್ಟಪಟ್ಟು ನೆಂಪುಮಡಿಕ್ಕೊಂಡ್ರಾತು” ತುಂಬಾ ಒಳ್ಳೆ ವಾಕ್ಯ… ‘ಒಳ್ಳೆದರ ಕಷ್ಟ ಪಟ್ಟು ಆದರೂ ಇಷ್ಟ ಮಾಡಿಗೊಂಡರೆ ಜೀವನ ತುಂಬಾ ಸುಲಭ’. ಒಪ್ಪಣ್ಣನ ಹಾಂಗೆ ‘ಶುಬತ್ತೆಯ ಮಗ’ ನನ್ನೂ ‘ಶಂಬಜ್ಜ’ನನ್ನೂ ನೋಡಿ ಗೊಂತಿಪ್ಪವಕ್ಕೆ ‘ಸಣ್ಣ ನೂರು’ ವಿಧಾನ ಗೊಂತಿದ್ದರೆ ಎಷ್ಟು ಒಳ್ಳೆದು ಹೇಳಿ ಅರ್ಥ ಆವುತ್ತು… ‘ಶುಬತ್ತೆಯ ಮಗ’ ನ ಮಾಂತ್ರ ನೋಡಿ ಗೊಂತಿಪ್ಪವಕ್ಕೆ ಈ ‘ಸಣ್ಣ ನೂರು’ ವಿಧಾನಂದ ಅದೆಷ್ಟು ಉಪಯೋಗ ಇದ್ದು ಹೇಳಿ ಸುಲಭಲ್ಲಿ ಅರ್ಥ ಆಗ… ‘ಶಂಬಜ್ಜ’ನ ಮಾಂತ್ರ ಗೊಂತಿಪ್ಪವು ಎಣಿಸುಗು ಬೈಲಿಲ್ಲಿ ಇದರ ದೊಡ್ಡ ವಿಷಯ ಮಾಡಿ ಹೇಳುಲೇ ಎಂತ ಇದ್ದು ಹೇಳಿ… ಬೈಲಿನವರೆಲ್ಲರ ಮಧ್ಯೆ ‘ಸೇತು’ ಆಗಿಪ್ಪ ಒಪ್ಪನ್ನಂಗೆ ಅನಂತ ಧನ್ಯವಾದಂಗ…

  [Reply]

  VA:F [1.9.22_1171]
  Rating: 0 (from 0 votes)
 2. ಈಚ ಭಾವ
  ಈಚ ಭಾವ

  ಲೇಖನ ಲಾಯ್ಕಾದು ಭಾವ.. ಸಣ್ಣ ನೂರರ ಲೆಕ್ಕಲ್ಲಿ ಕೆಲವು ಜೆಂಬ್ರ, ಅಲ್ಯಾಣ ಗೌಜಿಗ ನೆಂಪಾತು. ಈ ಲೇಖನಕ್ಕೆ ಸದ್ಯ ಎನ್ನ ಕಮೆಂಟೂ ಸೇರ್ಸಿರೆ ಸಣ್ಣ ನಲ್ವತ್ತಕ್ಕೆ ಅಡ್ಡಿ ಇಲ್ಲೆ..! 😉

  [Reply]

  VA:F [1.9.22_1171]
  Rating: 0 (from 0 votes)
 3. ಸುಮನ ಭಟ್ ಸಂಕಹಿತ್ಲು.

  ಬರದ್ದು ಲಾಯಿಕಾಯಿದು ಯಾವತ್ತಿನಂತೆ.
  ಹರಿಯೊಲ್ಮೆ ಅಜ್ಜ ಹಾಂಗೆ ಹಂತಿ ನೋಡಿ ಜನ ಲೆಕ್ಕ ಹೇಳುದು ನೆಂಪಾತು.
  ಈಗ ಬಫೆ ವ್ಯವಸ್ತೆ ಇಪ್ಪ ಕಾರಣ ಅಪ್ಪ, ಮಾವ, ಅಪ್ಪಚ್ಚಿಯಕ್ಕೊ ಹಂತಿಲಿ ಇಷ್ಟು ಜನ ಇದ್ದಿಕ್ಕು, ಬಫೆಲಿ ಇಷ್ಟು ಇದ್ದಿಕ್ಕು ಹೇಳ್ತವು.
  ~ಸುಮನಕ್ಕ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಅಡ್ಕತ್ತಿಮಾರುಮಾವ°ವಿಜಯತ್ತೆಶ್ರೀಅಕ್ಕ°ವಿದ್ವಾನಣ್ಣಅಜ್ಜಕಾನ ಭಾವದೀಪಿಕಾಅನು ಉಡುಪುಮೂಲೆಸಂಪಾದಕ°ಕಾವಿನಮೂಲೆ ಮಾಣಿಒಪ್ಪಕ್ಕಶೇಡಿಗುಮ್ಮೆ ಪುಳ್ಳಿಪವನಜಮಾವಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆಮಾಷ್ಟ್ರುಮಾವ°ಶ್ಯಾಮಣ್ಣಜಯಗೌರಿ ಅಕ್ಕ°ಶಾ...ರೀಮಂಗ್ಳೂರ ಮಾಣಿರಾಜಣ್ಣಪಟಿಕಲ್ಲಪ್ಪಚ್ಚಿಗೋಪಾಲಣ್ಣಪ್ರಕಾಶಪ್ಪಚ್ಚಿಪುತ್ತೂರುಬಾವಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ