ಬಲಬೊಳ್ಳ ಬಲಾ – ಇದು ಕಂಬಳ

January 19, 2012 ರ 10:10 amಗೆ ನಮ್ಮ ಬರದ್ದು, ಇದುವರೆಗೆ 37 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ನಮಸ್ಕಾರ..

ಹೆ! ಇದೆಂತ ಹಲ್ಲಿನ ಡಾಕ್ಟ್ರು ಕಣ್ಣು ಓಪರೇಶನ್ನು ಮಾಡುಲೆ ಹೆರಟದು ಹೇಳಿ ಗ್ರೇಶೆಡಿ.
ನಾವು ಅಂತೇ ಒಂದು ರೌಂಡಿಂಗೆ ಬಂದದ್ದು. ನವಗೂ ಎಡಿಗೋ ನೋಡುಲೆ ಎಂತಾರು ಹೆಚ್ಚು ಕಮ್ಮಿ ಆದರೆ ಆರೂ ಬೈದಿಕ್ಕೆಡಿ.

ಮೊನ್ನೆ ಕೊಡೆಯಾಲಲ್ಲಿ ಯುವಜನೋತ್ಸವದ ಗೌಜಿ. ನಾವು ಹೋಗದ್ದರಕ್ಕೋ, ಅಭಾವನ ಒಟ್ಟಿಂಗೆ ನಾವುದೇ ಹೋತು.
ಬಯಲಿನವು ಯಾರೆಲ್ಲಾ ಬೈಂದವು ಹೇಳಿ ಗೊಂತಿಲ್ಲೆ ಕಂಡಾಪಟ್ಟೆ ಜೆನ ಸೇರಿತ್ತಿದಾ ಹಾಂಗಾಗಿ, ಅಲ್ಲಾ ಕಂಬ್ಳಹೇಳಿಕ್ಕಿ ಈ ಯುವಜನೋತ್ಸವ ಹೇಳಿ ಗ್ರೇಶೆಡಿ; ನಾವು ಅಲ್ಲಿಗೇ ಬತ್ತು.

ಯಾವಾಗಲೂ ಪೆಬ್ರವರಿಲಿ ಅಪ್ಪ ಪಿಲಿಕುಳ ಕಂಬಳ ಈ ಸರ್ತಿ ಯುವಜನೋತ್ಸವದ ಲೆಕ್ಕಲ್ಲಿ ಜನವರಿ ೧೫ಕ್ಕೆ ಹೆರಂದ ಬಂದವಕ್ಕೆಲ್ಲಾ ತೋರುಸುಲೆ ಒಂದು ಅವಕಾಶವುದೇ ಆತು ಹೇಳಿ ಬೇಗ ಮಾಡಿತ್ತಿದ್ದವು.
ನಮ್ಮದು ಮೊದಲೇ ಪ್ಲೇನು ಮಾಡಿ ಆಗಿತ್ತಿದಾ ಆದಿತ್ಯವಾರ ಉದಿಯಪ್ಪಗ ಎದ್ದು ಕಾಪಿಕುಡುದು ವಸ್ತ್ರ ಒಗದಿಕ್ಕಿ ಹೆರಡುದು ಹೇಳಿ, ಹಾಂಗೇ ಕೆಲಸ ಎಲ್ಲಾ ಆಗೀ ಹೆರಡುವಗ ಹೊತ್ತು ಮದ್ಯಾಹ್ನಾಅತು ಹು!
ಕಂಬಳವುದೇ ಉದಿಯಪ್ಪಗಲೇ ನೋಡುಲೆ ಹೆಚ್ಚೆಂತದೂ ಇರ್ತಿಲ್ಲೆ ಇದಾ ಹಾಂಗೆ, ನಾವಿಪ್ಪಲ್ಲಿಂದ ಹೋಪಲೆ ಹೆಚ್ಚುದೂರ ಇಲ್ಲೆ  ಕಂಬಳ ನಡೆತ್ತಲ್ಲಿಂಗೆ ಬೇಗ ಎತ್ತಿತ್ತು ನಮ್ಮ ಐರಾವತಲ್ಲಿ , ಪಿಲಿಕುಳಲ್ಲಿ ಗುತ್ತಿನ ಮನೆ ಎದುರು ಗತ್ತಿನ ಕಂಬಳ ,ನೋಡೀರೆಂತಾ ಜೆನ.
ಗೋಣಂಗೊ, ಗೋಣಂಗೊ, ಗೋಂಣಂಗೊ ಎಲ್ಲಿ ನೋಡೀರೂ ಗೋಣಂಗಳೇ, ಕೆಲವು ಎಮ್ಮಗಳೂ ಇತ್ತವು ಅದುಬೇರೆ ಪ್ರಶ್ನೆ, ವೀಡ್ಯ ಮಾಡ್ತವು ಪಟತೆಗೆತ್ತವು ದೊಡ್ಡ ಮುಂಡಾಸಿನವು ಸಣ್ಣಮುಂಡಾಸಿನವು ,ಬೆತ್ತ ಹಿಡುದವು, ಬೆತ್ತಹಿಡಿಯದ್ದವು, ಪ್ರಾಯದವು, ಸಣ್ಣ ಪ್ರಾಯದವು ಹೀಂಗೆ ಕೂಸುಗೊ ಮಾಣಿಯಂಗೊಹೇಳಿ ಜೆನ ಸುಮಾರು ನಾಕೈದುಸಾವಿರ ಅಕ್ಕು ಹೋಗಿಂಡು ಬಂದೊಂಡು ಇತ್ತವು.
ಹೋಪದೆಲ್ಲಾ ಸಮ, ಆದರೆ ಮೈ ಎಲ್ಲಾ ಕಣ್ಣಾಗಿರೆಕ್ಕು ಎಂತಕೇಳೀರೆ “ಫಟ್” ಹೇಳಿ ಬೆನ್ನಿಂಗೆ ಬೀಳುವಗ ಪಾಪ ಆಗೋಣಂಗೊ ಎಲ್ಲೆಲ್ಲಾ ಓಡುಗು ಹೇಳಿ ಹೇಳುಲೆ ಎಡಿಯ ಇದಾ..
ಹಾಂಗೇ ಹೋಪ ದಾರಿಲಿ ಸಗಣ ಹಾಕಿದ್ದದೂ ಇಕ್ಕು ಮೆಟ್ಟಿರೆ “ಅಂಬಿಟ್ ಕಾರು” ಹೇಳಿ ಅಕ್ಕು, ಕೆಮಿಗೆ ಕೇಳ್ತದು “ಫಟ್ ಫಟ್ ಫಟ್” ಹೇಳ್ತ ಪೆಟ್ಟಿನ ಶಬ್ಧ ಮಾತ್ರಾ ಅದೇ ಬೇಜಾರು.
ಕಂಬಳಲ್ಲಿ ಇನ್ನೊಂದು ಕೊಶಿ ಅಪ್ಪ ಸಂಗತಿ ಕಮೆಂಟ್ರಿ ಹೇಳ್ತದು ಅದೂ ತುಳುವಿಲಿ, ಕಂಬಳಲ್ಲಿ  ಪೆಟ್ಟೊಂದು ಬಿಟ್ರೆ ಬಾಕಿ ಎಲ್ಲವೂ ನೋಡುಲೆ ಕೊಶಿಯೇ, ಹೀಂಗೊಂದು ಬಡಿತ್ತದೆಂತಕೆ ಆ ಬಾಯಿ ಬಾರದ್ದ ಗೋಣಂಗೊಕ್ಕೆ ಹೇಳಿ ಕೇಳೀರೆ ಅದರ ಯಜಮಾನ ಹೇಳುಗೆ ಎಂಗೊಬಡಿವದು ಗೋಣಂಗಲ್ಲ ಕುಡುವಿನ ಗೋಣಿಗೆ ಹೇಳಿ…!

ಅಪ್ಪು ಈ ಕಂಬಳ ಹೇಳೀರೆಂತರ ಹೇಳಿ ಯಾರಾರು ಕೇಳೀರೆ ನಾವೆಲ್ಲಾ ಸುಲಾಭಲ್ಲಿ ಹೇಳ್ತದು ಗೋಣಂಗಳ ಓಡ್ಸುದು ಹೇಳಿ, ಆದರೆ ಇದರ ನಮ್ಮ ಸಂಸ್ಕೃತಿ, ಅಲ್ಲದ್ದರೆ ನಮ್ಮ ಊರಿನ ಜನಪದ ಕ್ರೀಡೆಹೇಳಿಯೂ ಹೇಳುಲಕ್ಕು, ಹಾಂಗೇ ಬೆತ್ತಕ್ಕೆ ಗೊಂಡೆ ಕಟ್ಟುತ್ತದು, ದುಡಿಬಳ್ಳಿಯ ನೇಯ್ಗೆ,ನೊಗಲ್ಲಿಪ್ಪ ಕುಸುರಿ ಕೆತ್ತನಗೊ ಕರಕುಶಲತೆಯ ಪ್ರದರ್ಶವೂ ಆವುತ್ತು. ಕಂಬಳ ಸ್ಪರ್ದೆಲಿ ಗೆದ್ದು ಹೇಳಿಯೂ, ಛಾಯಾ ಚಿತ್ರ ಸ್ಪರ್ದೆಗಳಲ್ಲಿ ಅದೆಷ್ಟೋ ಜೆನಕ್ಕೆ ಹೆಸರು ತಂದುಕೊಟ್ಟ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಈ ಒಂದು ಜನಪದ ಕ್ರೀಡೆಯ ಬಗ್ಗೆ ಎನಗೆ ಗೊಂತಿಪ್ಪದರ ನಿಂಗೊಗೆ ಹೇಳ್ತೆ, ಎಂತಾರು ಇದರಲ್ಲಿ ಬಿಟ್ಟು ಹೋದ್ದದು  ನಿಂಗೊಗೆ ಗೊಂತಿದ್ದರೆ ತಿಳುಶಿಕ್ಕಿ ಆತೋ.
ಈ ಕಂಬಳದ ಇತಿಹಾಸ ಎಷ್ಟು ವರುಶ ಹಳೆದು ಹೇಳಿ ಕೇಳಿದರೆ ನವಗೆ ಗೊಂತಿಲ್ಲೆ ಆದರೆ ರಾಜ ಮಹಾರಾಜರಕಾಲಲ್ಲಿಯೂ ಇದು ನಡಕ್ಕೊಂಡಿತ್ತು ಹೇಳಿ ಹೇಳ್ತವು.

ನಮ್ಮ ಊರಿನ ಪ್ರಸಿದ್ದ ಕಂಬಳಂಗೊ:

 1. ಬಜಗೋಳಿ – ಈಗ ಅಲ್ಲೇ ಹತ್ತರೆ ಮೀಯಾರು ಹೇಳ್ತಲ್ಲಿ ಆವುತ್ತು.
 2. ಬಾರಾಡಿ ಬೀಡು,
 3. ಮೂಡಬಿದಿರೆ,
 4. ಕದ್ರಿ,
 5. ವೇಣೂರು,
 6. ಬಂಗಾಡಿ,
 7. ಮೂಲ್ಕಿ – ಸೀಮೆ ಅರಸು ಕಂಬಳ,
 8. ಉಪ್ಪಿನಂಗಡಿ,
 9. ಪುತ್ತೂರು,
 10. ನಾರಾವಿ,
 11. ಹೊಸ್ಮಾರು,
 12. ಕೆರ್ವಾಶೆ
 13. ಮಿಜಾರು,
 14. ಕಟ್ಪಾಡಿ ಬೀಡು,
 15. ಈದು,
 16. ಅಳದಂಗಡಿ,
 17. ಪಿಲಿಕುಳ – ಈಗ ಹೊಸತ್ತಾಗಿ ಕಳುದ ಐದು ವರ್ಶಂದ
  -ಹೀಂಗೆ ಇನ್ನೂ ಸುಮಾರಿದ್ದು..

ಹೆಚ್ಚಾಗಿ ಗೋಣಂಗಳ ಸಾಂಕುವವು ಜೈನಂಗೊ, ಪೂಜಾರಿಗೊ ಬಂಟಕ್ಕೊ ಅಲ್ಲದಾ ಹೇಳಿ ಕೇಳೀರೆ ಅಪ್ಪು.
ಆದರೆ ಈಗ ಎಲ್ಲಾ ಜಾತಿಯವುದೇ ಸಾಂಕಲೆ ಸುರುಮಾಡಿದ್ದವು, ಹಾಂಗೇ ಕೆಲವು ಸಂಘ ಸಂಸ್ಥೆಗಳುದೇ ಗೋಣಂಗಳ ಸಾಂಕುತ್ತಾ ಇದ್ದವು, ಇದರಿಂದ ಲಾಭ ಎಂತದು ಹೇಳಿ ಕೇಳೀರೆ – ಎಂತದೂ ಇಲ್ಲೆ ಕೇವಲ ಸ್ಪರ್ಧಾ ಮನೊಭಾವ ಅಷ್ಟೇ.
ಹಾಂಗೇ ಕಂಬಳದ ಗೋಣಂಗಳ ಪ್ರಮುಖ ಆಹಾರ ಕುಡು,ಬೆಳೂಲು.

ಕಂಬಳದ ಕರೆ
ಸುಮಾರು 100 ರಿಂದ 150 ಮೀಟರಿನ ಎರಡು ಸಾಲು ಪ್ರತಿಸಾಲೂ 5 ರಿಂದ 6 ಮೀಟರು ಅಗಲ ಅದ್ರಲ್ಲಿ ಸುಮಾರು ಆರಿಂಚಿನಷ್ಟು ನೀರು ಎರ್ಕುಸುತ್ತವು ಪ್ರತಿ ಸಾಲಿಂಗೂ ಒಂದು ಹೆಸರು ಮಡುಗುತ್ತವು.  (ನಾಮಕರಣ ಹೇಳಿ ಮನುಶ್ಯರಿಂಗೆ ಮಾಡ್ತ ಹಾಂಗೆ ಮಾಡುಲೆ ಇಲ್ಲೆ )
ಮತ್ತೆ ಆ ಸಾಲಿನ ಆ ಹೆಸರಿಲಿ ದಿನಿಗೇಳ್ತವು, ಒಂದುತಲೇಲಿ ಗೋಣಂಗಳ ತಿರುಗುಸುಲೆ ರಜಾದೊಡ್ಡ ಚೌಕ ಅಥವಾ ಆಯತಾಕಾರಲ್ಲಿ ಮಾಡಿರ್ತವು ಇದು ಸ್ಟಾರ‍್ಟಿಂಗು ಪೋಯಿಂಟು, ಇನ್ನೊಂದುತಲೆ ಮಂಜೊಟ್ಟಿ ಹೇಳಿ ಹೇಳ್ತವು, ಅದು ಎಂಡಿಂಗು ಪೋಯಿಂಟು.
ಈ ಎರಡರ ಮದ್ಯಲ್ಲಿ ಎರಡೆರಡು ಸುಮಾರು ಒಂದು ಫೀಟು ಅಗಲದ ಬೆಳೀ ವಸ್ತ್ರವ ಕ್ರಮವಾಗಿ ಆರೂವರೆಯುದೇ ಏಳೂವರೆ ಕೋಲು ಎತ್ತರಲ್ಲಿ ಎರಡೂಕರಗೆ ಅಡ್ಡಕ್ಕೆ ಕಟ್ಟಿರ್ತವು ಇದರ ಉಪಯೋಗ ಕನೆಹಲಗೆ ವಿಭಾಗಕ್ಕೆ ಮಾತ್ರಾ.
ಗೋಣಂಗಳ ತಿರುಗುಸಿ ಬಿಡುವವು, ಓಡುಸುವವು, ದಿನಿಗೇಳುವವು, ಹಿಡಿವವು, ತೀರ್ಪುಗಾರರು ಕೊಂಬುಉರುಗುವವು, ಗೊಣಂಗೊ ಕಂಬಳದ ಪ್ರಮುಖ ಆಕರ್ಶಣೆ.

ಸ್ಪರ್ಧಾ ವಿಭಾಗಂಗೊ

 • ನೇಗಿಲು-ಹಿರಿಯ,
 • ನೇಗಿಲು -ಕಿರಿಯ
 • ಬಳ್ಳಿ -ಹಿರಿಯ,
 • ಬಳ್ಳಿ-ಕಿರಿಯ,
 • ಕನೆ ಹಲಗೆ
 • ಅಡ್ಡ ಹಲಗೆ

ನೇಗಿಲು – ಹೇಳಿರೆ ಓಡುಸುವವಂಗೆ ಹಿಡುಕ್ಕೊಂಬಲೆ ಇಪ್ಪದು ಗೆದ್ದೆ ಹೂಡ್ತ ನೇಗಿಲಿಂದ ಸುಮಾರು ಸಣ್ಣದು ಆದರೆ ನೊಗ ಮಾತ್ರಾ ಅದೇ,
ಬಳ್ಳಿ – ಹೆಳೀರೆ ನೇಗಿಲಿನ ಬದಲು ಬಳ್ಳಿ,
ಕನೆ ಹಲಗೆ – ಹೇಳೀರೆ ಒಂದು ಸಣ್ಣ ಹಲಗೆಗೆ ಮದ್ಯಲ್ಲಿ ಒಂದು ಒಟ್ಟೆ ಮಾಡಿ ಅದರ ಒಂದು ರೀಪಿನ ತುಂಡಿನ ಸಹಾಯಂದ ನೊಗಕ್ಕೆ ಕಟ್ಟಿರ್ತವು.
ಗೋಣಂಗೊ ಓಡ್ತ ಸ್ಪೀಡಿಂಗೆ ಆ ಒಟ್ಟೆಮೂಲಕ ನೀರು ಮೇಲೆ ಹಾರುತ್ತು, ಸುರುವಾಣ ಎರಡು ವಿಭಾಗಲ್ಲಿ ಓಟದ ವೇಗ ಪ್ರಧಾನ ಆದರೆ, ಇಲ್ಲಿ ಮೇಲೆಕಟ್ಟಿದ ನಿಶಾನೆಗೆ ನೀರು ಬೀಳೆಕ್ಕು,
ಅಡ್ಡ ಹಲಗೆ – ಹೇಳೀರೆ ಗೆದ್ದೆ ಹೂಡಿ ಆದಿಕ್ಕಿ ಅಕೇರಿಗೆ ಸಮತಟ್ಟು ಮಾಡ್ತ ಹಲಗೆಯ ಹಾಂಗೇ, ರಜಾ ಸಣ್ಣದು ಅಷ್ಟೇ.
ಈ ಹಲಗೆ ವಿಭಾಗಲ್ಲಿ ಓಡುಸುತ್ತವು ಆ ಹಲಗೆಯ ಮೆಲೇ ನಿಂದುಗೊಂಬದು ಅವು ಓಡುಲೆ ಇಲ್ಲೆ ಕೆಳ ಬೀಳದ್ದ ಹಾಂಗೆ ಹಿಡುಕ್ಕೊಂಬಲೆ ಗೋಣಂಗಳ ಬೀಲ ಮಾತ್ರಾ.

ಹಿರಿಯ ಕಿರಿಯ ವಿಂಗಡಣೆ
ಗೋಣಂಗೊಕ್ಕೆ ಪ್ರಾಯ ಲೆಕ್ಕ ಅಲ್ಲ ಏಕೇಳೀರೆ ಗೋಣಂಗೊಕ್ಕೆ “ಬರ್ತು ಸರ್ಟಿಫಿಕೇಟು” ಇಲ್ಲೆ ಇದಾ, ಹಾಂಗಾಗಿ ಹಲ್ಲು ಲೆಕ್ಕ.
ಹುಟ್ಟುವಗಳೇ ಹಲ್ಲಿರ್ತನ್ನೆ ಹೇಳಿ ಕೇಳೆಡಿ.
ಅದು ಹೋಗಿ ಹೊಸ ಹಲ್ಲು ಬಂದ ಲೆಕ್ಕ. ಎರಡಾದರೆ ಕಿರಿಯ ಅದರಿಂದ ಹೆಚ್ಚಿದ್ದರೆ ಹಿರಿಯ ವಿಭಾಗ.
ಅದರ ಗೋಣಂಗಳ ಕರಗೆ ಇಳುಶುವಂದ ಮೊದಲೇ ನೋಡಿ ನಿರ್ಧಾರ ಮಾಡ್ತವು.

ಸ್ಪರ್ದೆ ಹೇಂಗೆ
ಮೊದಾಲು ಯಾವ ಯಾವ ವಿಭಾಗಲ್ಲಿ ಹೆಚ್ಚುಗೋಣಂಗೊ ಇದ್ದವು ಹೇಳಿ ನೋಡ್ತವು.
ಮತ್ತೆ ಚೀಟಿ ಎತ್ತುವಮೂಲಕ ಯಾವುದರ ಎದುರು ಯಾವುದು ಹೇಳಿ ನಿರ್ಧಾರ ಮಾಡ್ತವು.
ಇನ್ನೂಹೆಚ್ಚಿಗೆ ಗೊಣಂಗೊ ಇದ್ದರೆ ಒಂದೊಂದೇ ಜೊತೆಯ ಓಡುಸಿ ಕಡಿಮೆ ಸಮಯಲ್ಲಿ ಓಡಿದ ಗೋಣಂಗಳ ಎದುರೆದುರು ಓಡುಸುತ್ತವು ಅದಕ್ಕೆ ಕಂಬಳದ ಭಾಶೆಲಿ ಸಾಲು ಹೇಳಿ ಹೇಳ್ತವು, ಅದರಲ್ಲಿ ಗೆದ್ದರೆ ಬಾಕಿ ಆಟಂಗಳ ಹಾಂಗೇ ಕ್ವಾಟರ್ ಫೈನಲ್ಲು, ಸೆಮಿ ಪ್ಫೈನಲ್ಲು, ಫೈನಲ್ಲು ಹೇಳಿ ನಡೆತ್ತು.
ಯಾವ ಜೊತೆ ಗೋಣಂಗೊ ಯಾವ ಕರೆಲಿ ಓಡ್ತದು ಹೇಳಿಯೂ ಚೀಟಿ ಎತ್ತುವ ಮೂಲಕವೇ ನಿರ್ಧಾರ ಅಪ್ಪದು,ಅದು ಯಜಮಾನರುಗಳ ಸಮ್ಮುಖಲ್ಲಿ.

ಗೆದ್ದ ಗೋಣಂಗೊಕ್ಕೆ ಬಹುಮಾನ ಪವನು, ಅರ್ದಪವನು.
ಓಡುಸಿದವಕ್ಕುದೇ ಏನಾರು ಕೊಡ್ತವು, ಆದರೆ ಸಾಂಕುವ ಖರ್ಚು ವೆಚ್ಚ ನೋಡೀರೆ ಇದು ತುಂಬಾ ಸಣ್ಣ ಮೊತ್ತ, ಆದರೆ “ಸ್ಪರ್ದೆಲಿ ಬಹುಮಾನ ಮುಖ್ಯ ಅದು ಎಂತರ ಹೇಳ್ತದಲ್ಲಾನ್ನೇ“.
ಇದರೆಡಕ್ಕಿಲಿ ಬೆಟ್ಟಿಂಗುದೇ ನಡೆತ್ತು ನೂದೆಟುಂಡಾ, ಐವಟುಂಡಾ, ಸಮಟ್ಟುಂಡಾ ಹೇಳಿ ಕೇಳ್ತದರ ಕೇಳಿ ಗೊಂತಿದ್ದಷ್ಟೇ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾರೆ “ಚೆನ್ನೈ ಭಾವನತ್ರೇ” ಕೇಳೆ ಕಷ್ಟೇ. ನೋಡುಲೆ ಹೋದವಕ್ಕೆ ತಿಂಬಲೆ ಬಚ್ಚಂಗಾಯಿ, ಬೊಂಡ ಇಕ್ಕು, “ಅಪ್ಪವಕ್ಕೆ” ಐಸುಕ್ರೀಮುದೆ ಸಿಕ್ಕುಗು ಪೈಸೆ ಕೊಟ್ರೆ,

ಮೊದಲಿಂಗೆ ಈ ಕಂಬಳ ಹೇಳ್ತದು ಪ್ರತೀ ಊರಿನ ದೊಡ್ಡ ಗೆದ್ದೆಗಳಲ್ಲಿ ಹೂಟೆ ಸಮಯಲ್ಲಿ ನಡಕ್ಕೊಂಡಿತ್ತಡ ಆದರೆ ಅದರಲ್ಲಿ ಪ್ರೈಸು, ಬೆಟ್ಟು ಇಲ್ಲೆ.
ಹಾಂಗೇ ಕೆಲವು ಟಿಕೇಟು ಮಡುಗಿದ ಕಂಬಳಂಗಳೂ ಆಗಿಯೊಂಡಿತ್ತು,ಎರಡೆರಡು ಮೂರುಮೂರು ದಿನನಡಗು.

ಅವಕಾಶ ಸಿಕ್ಕಿಪ್ಪಗ ಎಲ್ಲಿಯಾರು ಒಂದಾರಿ ನೋಡಿ ಎಲ್ಲೋರುದೇ, ಇಲ್ಲಿ ಹೇಳದ್ದ ಅಲ್ಲಿ ಹೋದರೆ ಮಾತ್ರಾ ಅನುಭವಿಸಲೆಡಿಗಪ್ಪ ಹಾಂಗಿದ್ದ ಕೊಶಿಯ ಸಂಗತಿಗೊ ಸುಮಾರಿರ್ತು.
ಬಡಿಯದ್ದರೆ ಗೋಣಂಗೊ ಓಡವು. ಹಾಂಗಾರೆ ಯಾರಿಂಗೆಲ್ಲಾ ಬಡಿಯೆಕ್ಕು?

ಮೊನ್ನೆ ನೆಡದ ಕಂಬುಳದ ಕೆಲವು ಪಟಂಗೊ:


,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 37 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  “ಕಂಬಳಲ್ಲಿ ಪೆಟ್ಟೊಂದು ಬಿಟ್ರೆ ಬಾಕಿ ಎಲ್ಲವೂ ನೋಡುಲೆ ಕೊಶಿಯೇ… ಹೀಂಗೊಂದು ಬಡಿತ್ತದೆಂತಕೆ ಆ ಬಾಯಿ ಬಾರದ್ದ ಗೋಣಂಗೊಕ್ಕೆ ಹೇಳಿ ಕೇಳೀರೆ ಅದರ ಯಜಮಾನ ಹೇಳುಗೆ ಎಂಗೊಬಡಿವದು ಗೋಣಂಗಲ್ಲ ಕುಡುವಿನ ಗೋಣಿಗೆ ಹೇಳಿ…!”

  ಕೆಲವು ಸರ್ತಿ ಯಜಮಾನಂಗೆ ಬಡಿಯೆಕ್ಕಾದ ಅನಿವಾರ್ಯ ಪರಿಸ್ಥಿತಿ ಆದಿಪ್ಪಲೂ ಸಾಕು… ಬೋಚ ಹೇಳಿದ ಹಾಂಗೆ ಕೆಲವು ಸರ್ತಿ ಕುದುರೆಗಳ ಓಡುಸುಲೆ ಗೊಣನ್ಗೊಕ್ಕೆ ಫಟ್ ಫಟ್ ಫಟ್ ಬಡುದ ಶಬ್ದ ಮಾಡುತ್ತವಪ್ಪ? ಅದೂ ಗೊಂತಿಲ್ಲೇ… ಅಮ್ಮ ಮಕ್ಕೊಗೆ ಶಿಕ್ಷೆ ಕೊಟ್ಟಿಕ್ಕಿ ತಾನೂ ಮಕ್ಕಳ ಜೊತೆ ಸೇರಿ ವೇದನೆ ಅನುಭವಿಸುವ ಹಾಂಗೆ ಆ ಯಜಮಾನಂಗೂ ಅನ್ನಿಸುಲೂ ಸಾಕು… ಭಾವನಾತ್ಮಕವಾಗಿ ನೋಡಿರೆ ಅಲ್ಲಿ ವೇದನೆಯೂ ಇದ್ದು… ಆನಂದವೂ ಇದ್ದು… ಕಂಬಳ ನಡೆಕಾರೆ ಅದು ಅನಿವಾರ್ಯ…

  ಕಂಬಳದ ಸರಿಯಾದ ಶೇಪು ಕೊಟ್ಟಿದಿ ಹೇಳಿ ಒಂದೊಪ್ಪ…

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಗೋಣಂಗಳ ಶುದ್ದಿ ಒಳ್ಳೆ “ಶೇಪಿಲಿ” ಬಯಿಂದು. ಒಂದರಿ ಕಂಬಳ ನೋಡಿ ಬಂದ ಹಾಂಗೆ ಆತು.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಮಾವಂಗೆ ಧನ್ಯವಾದಂಗೊ……

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣವಿದ್ವಾನಣ್ಣಪಟಿಕಲ್ಲಪ್ಪಚ್ಚಿಸುವರ್ಣಿನೀ ಕೊಣಲೆಒಪ್ಪಕ್ಕಡಾಗುಟ್ರಕ್ಕ°ಮುಳಿಯ ಭಾವದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ಅಡ್ಕತ್ತಿಮಾರುಮಾವ°ಅಕ್ಷರ°ಚೆನ್ನಬೆಟ್ಟಣ್ಣಸರ್ಪಮಲೆ ಮಾವ°ವಾಣಿ ಚಿಕ್ಕಮ್ಮಚುಬ್ಬಣ್ಣಶ್ರೀಅಕ್ಕ°ಡಾಮಹೇಶಣ್ಣಶ್ಯಾಮಣ್ಣಚೆನ್ನೈ ಬಾವ°ಜಯಶ್ರೀ ನೀರಮೂಲೆದೊಡ್ಮನೆ ಭಾವಮಾಷ್ಟ್ರುಮಾವ°ಬೋಸ ಬಾವಅನು ಉಡುಪುಮೂಲೆಪುಣಚ ಡಾಕ್ಟ್ರುರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ