ಕಥಾ ರಚನಾ ಕಮ್ಮಟ -2012

October 16, 2012 ರ 12:07 pmಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

14-10-2012 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಲ್ಲಿ ಕೊಡಗಿನ ಗೌರಮ್ಮ ಸ್ಮಾರಕ ದತ್ತಿನಿಧಿ ಸಮಿತಿ ಹಾಂಗೂ ಕೊಡಗಿನ ಗೌರಮ್ಮ ಜನ್ಮ ಶತಮಾನೋತ್ಸವ ಸಮಿತಿಯ ನೇತೃತ್ವಲ್ಲಿ ಕಥಾ ರಚನಾ ಕಮ್ಮಟ ಇದ್ದು ಹೇದು ಗೊಂತಾತು. ಇದು ಹವ್ಯಕ ಹೆಮ್ಮಕ್ಕೊಗೆದೆ, ವಿದ್ಯಾರ್ಥಿನಿಯರಿಂಗೆದೆ ಇದ್ದ ಶಿಬಿರ. ಎನಗೆ ಅದರ ಬಗ್ಗೆ ರಜ ಆಸಕ್ತಿ ಇದ್ದ ಕಾರಣ ಆನೂ ಹೋದೆ. ಹೋಪಗಲೇ ಹೇಂಗಿರ್ತೋ….? ಆರೆಲ್ಲ ಬಕ್ಕೋ…? ಎನಗೆ ಗುರ್ತ ಇಪ್ಪವ್ವು ಆರಾದರೂ ಇರ್ತವೋ ಇಲ್ಲೆಯೋ….ಹೇದು ಮನಸ್ಸಿಲೇ ಜಾನ್ಸಿಗೊಂಡು ಹೋದೆ. ಆರ ಗುರ್ತ ಇಲ್ಲದ್ದರೂ ನಮ್ಮ ವಿಜಯತ್ತೆಯ ಗುರ್ತ ಇದ್ದನ್ನೆ. ಮತ್ತೆ ಎಲ್ಲರನ್ನೂ ಗುರ್ತ ಮಾಡ್ಯೊಂಬಲಕ್ಕನ್ನೆ.
ಸಮಿತಿಯ ಅಧ್ಯಕ್ಷೆ ಈಶ್ವರಿ ಅಕ್ಕ ಬೇರ್ಕಡವು ನೆಗೆ ನೆಗೆ ಮಾಡ್ಯೊಂಡು ಎಲ್ಲರನ್ನೂ ವಿಚಾರ್ಸಿಗೊಂಡವು.
ಶಿಬಿರಲ್ಲಿ ಭಾಗವಹಿಸುಲೆ ಬಂದೋರೆಲ್ಲ ಹೆಸರು ನೋಂದಾವಣೆ ಮಾಡ್ಸೆಕ್ಕು ಹೇದು ಹೇಳುತ್ಸು ಕೇಟತ್ತು. ಆನೂ ಹೆಸರು ಕೊಟ್ಟೆ. ಅಲ್ಲಿ ನೋಡುಗ ಅಲ್ಲಿ ಇದ್ದದು ಹೆಚ್ಚಿನೋರೂ ಎನ್ನ ಗುರ್ತದೋರೆ. ನಮ್ಮ ಹವ್ಯಕ ಸಮಾಜ ಹೇದರೆ ‘ಒಂದೇ ಗೂಟಕ್ಕೆ ಸುತ್ತಿದ ಬಳ್ಳಿಗ ‘ ಅಲ್ಲದಾ…?

ಸರಿಯಾಗಿ 10 ಗಂಟಗೆ ಶಂಖನಾದ ಮಾಡ್ಯೊಂಡು ಉದ್ಘಾಟನಾ ಕಾರ್ಯಕ್ರಮ ಶುರುವಾತು. ಶ್ರೀಮತಿಶೀಲಾಲಕ್ಷ್ಮಿ ವರ್ಮುಡಿ ಇಡೀ ಕಾರ್ಯಕ್ರಮದ ನಿರೂಪಣೆ ಭಾರಿ ಚೆಂದಕೆ ಮಾಡಿದವು. ಪುಟ್ಟು ಪುಟ್ಟು ಕೂಸುಗ ಅನನ್ಯ, ದೀಪ ,ಸುಪ್ರಿಯ ಪ್ರಾರ್ಥನೆ ಪದ್ಯ ಹೇಳಿದವು. ಕಾರ್ಯಾಡು ಯಶೋದತ್ತೆ ದೀಪ ಬೆಳಗಿಸಿದವು. ಕಾದಂಬರಿಗಾರ್ತಿ ವಿ.ಪಿ.ಮಾಲತಿ, ಶ್ರೀನಿವಾಸ ಭಟ್ ಸೇರಾಜೆ ಶಿಬಿರದ ಸಂಪನ್ಮೂಲ ವೆಗ್ತಿಗೊ. ಅವರ ಪರಿಚಯವೂ ಆತು. ಸಮಿತಿಯ ಕಾರ್ಯದರ್ಶಿ ವಿಜಯತ್ತೆ ಕೊಡಗಿನ ಗೌರಮ್ಮನ ಬಗ್ಗೆ ವಿವರವಾಗಿ ಹೇಳಿದವು. ಆನು ಗೌರಮ್ಮ ಕೊಡವೆತ್ತಿ ಆದಿಕ್ಕು ಹೇದು ಜಾನ್ಸಿತ್ತಿದ್ದೆ. ಅವು ನಮ್ಮ ಹವ್ಯಕ ಹೆಮ್ಮಕ್ಕೊ ಹೇದು ಗೊಂತಾಗಿ ಮತ್ತೂ ಕೊಶಿ ಆತು.

ಕಾರ್ಯಾಡು ಯಶೋದತ್ತೆ ‘ ಹವ್ಯಕ ಭಾಷೆ ದೊಡ್ದ ಆಲದ ಮರದ ಹಾಂಗೆ. ಇಲ್ಲಿ ತುಂಬ ಜೆನ ಅ ಪ್ರತಿಭೆಗೊ ಇದ್ದವು. ಶಿಬಿರಲ್ಲಿ ಕಥೆ ಬರೆತ್ತ ರೀತಿ ನೀತಿ ತಿಳ್ಕೊಂಡು ಕಥೆ ಬರದು ನಮ್ಮ ಒಳ ಇಪ್ಪ ಲೇಖಕಿಯ ಹೆರ ಎಳದು ತರೆಕ್ಕು’ ಹೇದು ಚೆಂದಕೆ ಹೇದವು.

ಏತಡ್ಕ ಚಂದ್ರ ಮಾವ° ‘ಹವ್ಯಕ ಭಾಷೆಯ ಬೆಳವಣಿಗೆಗೆ ಬೇಕಾಗಿ ಆದಂತಹ ಸಮ್ಮೇಳನಂಗೊ, ಈ ಭಾಷೆಲಿ ಇಪ್ಪ ಕೆಲವು ಸಾಹಿತ್ಯಂಗಳ ಬಗ್ಗೆಯೂ ತಿಳಿಶಿದವು. ಭಾಷೆ ಹೇದರೆ ಹಾಲಿನ ಹಾಂಗೆ, ಸಂಸ್ಕೃತಿ ಹೇದರೆ ನೊರೆಯ ಹಾಂಗೆ; ಹಾಲಿನ ಹದಿಯ ಹಾಂಗೆ ‘ ಹೇಳ್ತ ಮಾತಿನ ತಿಳಿಶಿದವು.

ಈ ಕಾರ್ಯಕ್ರಮದ ಖರ್ಚಿಂಗೆ ಬೇಕಾಗಿ ದ.ಕ. ಜಿಲ್ಲಾ ಹವ್ಯಕ ಪರಿಷತ್ತು ಧನಸಹಾಯ ಮಾಡಿದ್ದು. ಅಲ್ಲದ್ದೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಪರವಾಗಿ ನಮ್ಮ ಶ್ರೀಅಕ್ಕ° ಧನ ಸಹಾಯವ ಹಸ್ತಾಂತರಿಸಿದವು.
ಜೆ.ಪಿ.ಅಣ್ಣ ಪಜಿಲ, ಎಸ್.ಎನ್.ಶರ್ಮ ಪಂಜಿತಡ್ಕ ಎಲ್ಲರೂ ಇತ್ತಿದ್ದವು.

ಇದಾಗಿ ಒಂದು ಮುಖ್ಯವಾದ ಕಾರ್ಯಕ್ರಮ ಉಪಾಹಾರ

ತಿಂಡಿ ತಿಂದು ,ಮಾಲ್ಟ್ ಕುಡುದು ಆದ ಮೇಲೆ ಶಿಬಿರ ಶುರುವಾತು. ಕಥೆ ರಚನೆ ಮಾಡ್ಳೆ ಶಿಬಿರದ ಅವಶ್ಯಕತೆ ಇಲ್ಲೆ. ಅದು ಹೇಳಿಕೊಟ್ಟು ಬಪ್ಪದಲ್ಲ. ಬರೆಯೆಕ್ಕು ಹೇದು ಕೂದರೆ ಬರವಲೆ ವಿಷಯ ಸಿಕ್ಕ. ಬರವಲೆ ಸಮಯ ಇಲ್ಲದ್ದಪ್ಪಗ ವಿಷಯ ಸಿಕ್ಕುಗು. ಕಥೆ ರಚನೆ ಅಪ್ಪದು ಪ್ರಶ್ನೆ ಕೇಳುದರಲ್ಲಿ ಅಲ್ಲ ಅದರ ಸಾಕಾರಗೊಳುಸುದರಲ್ಲಿ. ಮನಸ್ಸಿಲಿ ಇಪ್ಪ ಕಲ್ಪನೆಗಳ ಅಕ್ಷರ ರೂಪಕ್ಕೆ ಇಳುಶಿದರೆ ಮಾತ್ರ ಕಥೆ ರೂಪುಗೊಳ್ಳುತ್ತು. ಕಥೆಗೆ ಒಂದು ವಸ್ತು ಬೇಕು. ಒಂದು ಘಟನೆಯ ಹಂದರಕ್ಕೆ ಕಲ್ಪನೆಯ ಹೆಣದರೆ ಮಾಂತ್ರ ಕಥೆ ಬರವಲೆ ಎಡಿಗು. ಕಥೆ ಸಂಪೂರ್ಣವಾಗಿ ವಾಸ್ತವ ಅಲ್ಲ; ಆದರೆ ವಾಸ್ತವಕ್ಕೆ ದೂರವೂ ಅಲ್ಲ. ನಮ್ಮ ಕಲ್ಪನೆಗೊ ವಾಸ್ತವಕ್ಕೆ ಹತ್ತರೆ ಹತ್ತರೆ ಇರೆಕ್ಕು. ಬರದ್ದರ ಹತ್ತು ಜೆನರ ಹತ್ತರೆ ತಿದ್ದುಲೆ ಕೊಡ್ಳೆ ಆಗ. ಆಗ ನಮ್ಮ ಕಥೆಯ ಮೂಲ ಸ್ವರೂಪವೇ ಹೋಗಿ ಬಿಡ್ತು. ಆರಾದರೂ ಒಬ್ಬ, ಅನುಭವಿ , ನಮ್ಮ ಆತ್ಮೀಯರಾದವಕ್ಕೆ ತೋರುಸಿ ಸಲಹೆ ಪಡವದು ಒಳ್ಳೆದು. ಶ್ರೀನಿವಾಸಣ್ಣನೂ, ಮಾಲತಿ ಅಕ್ಕನೂ ಎಂಗೊಗೆ ಈ ರೀತಿಯಾಗಿ ಸಲಹೆಗಳ ಕೊಟ್ಟು , ಎಂಗೊಗೆ ಇದ್ದ ಸಂಶಯಂಗಳ ಬಗೆಹರಿಸಿದವು. ತುಂಬಾ ವಿಷಯಂಗಳ ಬಗ್ಗೆ ವಿಮರ್ಶೆ, ವಿಚಾರ ವಿನಿಮಯ ನಡದತ್ತು. ಅಂತೂ ಒಳ್ಳೆ ಅನುಭವ ಪಡದೆಯ°.

ಕೊನೆಗೆ ಎಂಗಳ ಬುಡಕ್ಕೇ ಬಂತಿದಾ…. ಎಲ್ಲರೂ ಒಂದೊಂದು ಕಥೆ ಬರೆಯಲೇ ಬೇಕು ಹೇದು ಆತು. ‘ಎಂಗ ಇಷ್ಟರ ವರೆಗೆ ಬರದ್ದಿಲ್ಲೆ ಈಗ ಒಂದರಿಯೇ ಬರವಲೆ ಹೇದರೆ ಹೇಂಗೆ ಬರವದು’ ಹೇದು ಎಲ್ಲರೂ ಹೇಳುಲೆ ಶುರುಮಾಡಿದವು. ‘ಈಗ ಬರೆ ಹೇದರೆ ಬರವಲೆ ಎಡಿಯ ಆದರೆ ಎಡಿಗಾದ ಹಾಂಗೆ ಬರೆಯೆಕ್ಕು. ಎಂಗ ಓದಿ ಸಲಹೆ ಕೊಡ್ತೆಯ°’ ಹೇದು ಮಾಲತಿಅಕ್ಕನೂ, ಶ್ರೀನಿವಾಸಣ್ಣನೂ ಹೇದವು.

ಎಲ್ಲರೂ ಕೂದೊಂಡು ಬರವಲೆ ಶುರು ಮಾಡಿದೆಯ°. ಒಬ್ಬೊಬ್ಬ ಒಂದೊಂದು ರೀತಿಲಿ ಆಲೋಚನೆ ಮಾಡ್ಯೊಂಡು ಬರೆತ್ತ ಗೌಜಿಯ ಹೇಳುಲೆ ಶಬ್ದಂಗಳೇ ಇಲ್ಲೆ. ಅಷ್ಟಪ್ಪಗ ಉಂಬಲಾತು ಹೇದು ಹೇಳುತ್ಸು ಕೇಟತ್ತು. ಅಂತೂ ಇಂತೂ ಬರದಾತು. ಎಲ್ಲರೂ ಊಟಕ್ಕೆ ಹೋದೆಯ°. ಅಶನ , ತಾಳು, ತಂಬ್ಳಿ, ಹಪ್ಪಳ , ಸಾರು, ಕೊದಿಲು, ಪಾಯಸ, ಮಜ್ಜಿಗೆ, ಉಪ್ಪಿನಕಾಯಿ. ವ್ಹಾ.! ರುಚಿ ರುಚಿಯಾದ ಊಟ. ಹೊಟ್ಟೆ ಬಿರಿಯ ಉಂಡಾತು.
ಹಾಂಗೆ ಉಂಡರೆ ಆರಿಂಗಾದರೂ ವರಕ್ಕು ತೂಗುಗು ಆದರೆ ಎಂಗೊಗೆ ವರಕ್ಕು ತೂಗುಲೂ ಪುರುಸೊತ್ತೇ ಇಲ್ಲೆ. ಉಂಡಿಕ್ಕಿ ಸಮಾರೋಪ ಕಾರ್ಯಕ್ರಮ. ಅದಂದ ಮದಲು ಮುಳಿಯ ಜಿವೆಲ್ಲರಿಯ ಪಶುಪತಿ ಶರ್ಮ ಚಿನ್ನದ ವಹಿವಾಟುಗಳ ಬಗ್ಗೆ, ಚಿನ್ನವ ಆಪತ್ಧನವಾಗಿ ಬಳಸುದು, ಚಿನ್ನ ತೆಕ್ಕೊಂಬಲೆ ಇಪ್ಪ ಯೋಜನೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದವು.

ಶ್ರೀಅಕ್ಕನ ನಿರೂಪಣೆ ಸಮಾರೋಪ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟತ್ತು. ಕೊಡಗಿನ ಗೌರಮ್ಮನ ಬಗ್ಗೆ ವಿವರವಾಗಿ ಹೇಳ್ಯೊಂಡು ಸುರುವಾದ ಕಾರ್ಯಕ್ರಮ ಚೆಂದಕೆ ಸಾಗಿತ್ತು. ಎಲ್ಲಾ ಶಿಬಿರಾರ್ಥಿಗಳ ಪರವಾಗಿ ವಿನಯಕ್ಕನೂ, ಚೆಕ್ಕೆಮನೆ ಪ್ರಸನ್ನಕ್ಕನೂ ಅನುಭವವ ಹಂಚಿಗೊಂಡವು. ಎಲ್ಲರಿಂಗೂ ನೆನಪಿನ ಕಾಣಿಕೆ ನೀಡಿದವು.

ಮಾಲತಿಅಕ್ಕನ ಯೋಗವೋ…… ಎಂಗಳ ಸುಯೋಗವೋ……ಈ ಸಂದರ್ಭಲ್ಲಿ ಅವು ಬರದ ‘ಸಂತೋಷದ ಹುಡುಕಾಟ’ ಹೇಳ್ತ ಪುಸ್ತಕ ಎಂ.ಬಿ.ಮುಳಿಯ ದವರ ಕೈಲಿ ಬಿಡುಗಡೆಯೂ ಆತು. ಆಶ್ಚರ್ಯ ಹೇದರೆ ಆ ಪುಸ್ತಕ ಬಿಡುಗಡೆಗೆ ಎಲ್ಲಿಯೂ ಅವಕಾಶ ಆಗಿತ್ತಿಲ್ಲೆಡ . ಆದರೂ ಇಲ್ಲಿಗೆ ಬಪ್ಪಗ ತರೆಕ್ಕು ಹೇದು ಮನಸ್ಸಿಂಗೆ ತೋರಿ ತೆಕ್ಕೊಂಡು ಬಂದದಡ. ಇದಕ್ಕೇ ಹೇಳುತ್ಸು ಆರನೇ ಇಂದ್ರಿಯ ನವಗೆ ಮೊದಲೇ ಸೂಚನೆ ಕೊಡ್ತು ಹೇದು.

ಶ್ರೀನಿವಾಸಣ್ಣ ‘ಎಲ್ಲರ ಕಥೆಯನ್ನೂ ಓದಿದ್ದೆ. ಎಲ್ಲರೂ ಬರವಣಿಗೆಯ ಮುಂದುವರ್ಸಿದರೆ ಭವಿಷ್ಯಲ್ಲಿ ಒಳ್ಳೆ ಕಥೆಗಾರ್ತಿಗೊ ಅಪ್ಪದರಲ್ಲಿ ಸಂಶಯ ಇಲ್ಲೆ. ಎಲ್ಲರೂ ಇಷ್ಟು ಚೆಂದಕೆ ಬರಗು ಹೇಳ್ತ ನಿರೀಕ್ಷೆ ಇತ್ತಿಲ್ಲೆ’ ಹೇದು ಸಂತೋಷಲ್ಲಿ ಹೇಳಿದವು.

ವಿಶೇಷ ಅತಿಥಿಗಳಾಗಿದ್ದ ಮಹೇಶ್ವರಿ ಅಕ್ಕ ಗಡಿನಾಡಾದ ನಮ್ಮ ಕಾಸರಗೋಡಿಲಿ ಕನ್ನಡ ಒಳಿಶುಲೆ ಪ್ರಯತ್ನ ಪಡೆಕ್ಕು ಹೇಳ್ತ ವಿಷಯವ ಚೆಂದಕೆ ವಿವರಿಸಿ ಗೌರಮ್ಮನ ಬಗ್ಗೆ ಬೇಂದ್ರೆಯವು ಬರದ ಒಂದು ಕವನವ ಓದಿದವು.

ಅಧ್ಯಕ್ಷ ಸ್ಥಾನಲ್ಲಿದ್ದ ಸಾವಿತ್ರಿ ಅತ್ತೆ ‘ಎಲ್ಲರೂ ಕಥೆ ಬರದು ಸಾರಸ್ವತ ಲೋಕವ ಬೆಳಗೆಕ್ಕು. ಮನಸ್ಸು ಮಾಡಿರೆ ಅಸಾಧ್ಯ ಹೇಳ್ತದು ಏವುದೂ ಇಲ್ಲೆ. ಆನು ವಾಚಕಿ ಮಾಂತ್ರ ಆಗಿತ್ತೆ. ಆದರೂ ಲೇಖಕಿಯರ ಸಂಘದ ಅಧ್ಯಕ್ಷೆ ಮಾಡಿದವು. ಹಾಂಗಾಗಿ ಬರೆಯೆಕ್ಕು ಹೇದು ಹಟತೊಟ್ಟು ಬರದೆ. ಮನಸ್ಸು ಮಾಡಿರೆ ಎಡಿಗು ಹೇಳ್ತ ಸತ್ಯ ಅರ್ಥ ಆತು . ಎಲ್ಲರಿಂಗೂ ಒಳ್ಳೆದಾಗಲಿ’ ಹೇದು ಹಾರೈಸಿದವು. ಸಾವಿತ್ರಿ ಅತ್ತೆ ಸಾರಸ್ವತ ಲೋಕದ ಮೆಟ್ಟಿಲುಗಳ ಏರಿ ಮಾಳಿಗೆ ಮೇಲೆ ಕೂದುಗೊಂಡಿದ್ದರೂ ಆನು ಇನ್ನೂ ಒಂದನೇ ಮೆಟ್ಳಿಲಿ ಇದ್ದೆ ಹೇದು ಸರಳವಾಗಿ ಹೇದವು.

ಕಾರ್ಯಕ್ರಮಕ್ಕೆ ಬಂದಿದ್ದ ವೈ.ವಿ. ಮಾವ° ಕೊಡೆಯಾಲದ ಶ್ರೀ ಭಾರತೀ ಕಾಲೇಜಿನ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಈ ಸಂಸ್ಥೆಗೆ ಪೈಸೆಂದಲೂ ಮಕ್ಕಳ ಅವಶ್ಯಕತೆ ಹೆಚ್ಚ ಇದ್ದು ಹೇಳ್ತ ವಿಶೇಸಷವಾದ ಸುದ್ದಿಯ ಹೇಳಿದವು. ಎಲ್ಲರೂ ಬಂದು ಸಂಸ್ಥೆಯ ನೋಡಿ ಹೇದು ಅಹ್ವಾನ ಕೊಟ್ಟದಲ್ಲದ್ದೆ, ಮಕ್ಕೊಗೆ ವಿದ್ಯೆ ಒಂದೇ ಮುಖ್ಯ ಅಲ್ಲ ಸಂಸ್ಕಾರವೂ ಇರೆಕ್ಕು ಹೇದವು.

ಅಕೇರಿಗೆ ಮಹೇಶಗುತ್ತಿನ ವಿದ್ಯಕ್ಕ ಧನ್ಯವಾದ ಸಮರ್ಪಣೆ ಮಾಡಿದವು. ಅಷ್ಟಪ್ಪಗ ಮೇಗಾಣ ಲೋಕಲ್ಲಿದ್ದ ಗೌರಮ್ಮಂಗೂ ಸಂತೋಷ ಆಗಿ ಆನಂದಭಾಷ್ಪ ಸುರಿಸಿದವೋ ಹೇಳ್ತ ಹಾಂಗೆ ಮಳೆ ಹನಿ ಹನಿಯಾಗಿ ಉದುರುಲೆ ಶುರುವಾತು. ಅದರ ಅರ್ಥ ಕಾರ್ಯಕ್ರಮ ಸಂಪನ್ನಗೊಂಡತ್ತು ಹೇದು ಅಲ್ಲದೋ…..?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ನಿಂಗೊ ಬರದ ಕತೆಯ ಇನ್ನಾಣ ಕಂತಿಲಿ ಬರೆರಿ ಅನು ಅಕ್ಕ. ವರದಿ ಲಾಯಕ್ಕಾಯಿದು.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಮಾವ° ಕೆಲವೇ ದಿನಗಳಲ್ಲಿ ನಿರೀಕ್ಷಿಸಿ…..

  [Reply]

  VN:F [1.9.22_1171]
  Rating: 0 (from 0 votes)
 2. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಅನುಪಮಾ,
  ಕಮ್ಮಟದ ವಿವರವಾದ ವರದಿ ಲಾಯಕಾಗಿ ಬಯಿ೦ದು. ” ನಡವರೆಡಹದೆ ಕುಳಿತರೆಡಹುವರೆ ? ” ಕವಿವಾಣಿಯ ಅರ್ಥ ನಮ್ಮ ಅನುಭಾವ ಆಯೆಕು. ಹಿಳ್ಳೆ ಬೆಳವಣಿಗೆಯ ಹ೦ತ ಹ೦ತಲ್ಲಿ ನಿಲ್ಲುತ್ತು, ಬೀಳ್ತು; ಅದಾ ,ಮತ್ತೆ ಎಷ್ಟು ಲಾಯಕ್ಕಕ್ಕೆ ಎದ್ದೊ೦ಡು ನೆಡೆತ್ತದಾ! ಇದೂ ಅಷ್ಟೆ. ಕಟ್ಟಪುಣಿಲಿ ನಿದ್ದೊ೦ಡು ಕೆರೆಲಿ ಈಸೆಕು ಹೇದರೆಡಿಗೋ? ಬೆಳ್ಳದ ನೀರೆಲ್ಲ ಇಳ್ದಮತ್ತೆ ಗ೦ಗೆಯ ದಾ೦ಟುವೆ ಹೇದು ಅದರ ಕರೆಲಿಯೇ ಕೊದವ ದಾ೦ಟುವದಿದ್ದೋ ಹೇಳು. ಧೈರ್ಯ ಮಾಡಿಯೂ ಆತು, ಅನುಭವ ಸಿಕ್ಕಿಯೂ ಆತು. ಇನ್ನದರ ಸರಿಯಾಗಿ ದುಡಿಶಿಗೊ೦ಬದೇ ಮುಖ್ಯ. ಸದ್ಯಲ್ಲೇ ಶಿಬಿರಲ್ಲಿ ಸಿಕ್ಕಿದ ಸಾಹಿತ್ಯ೦ದ ಕತೆಯ ರಸ ಪಾಕ ಬೇಗ ಹೆರ ಬರಲಿ ಹೇಳಿ ಹಾರೈಕೆಯೊಟ್ಟಿ೦ಗೆ
  ಶುಭಾಶಯ೦ಗೊ. ಹರೇ ರಾಮ.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಅಪ್ಪಚ್ಚಿ…. ಧನ್ಯವಾದಂಗೊ
  ಪಾಕ ತಯಾರಿ ಆವುತ್ತಾ ಇದ್ದು. ಬೇಗ ಬಳುಸುತ್ತೆ.

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ°

  [..ಈಗ ಒಂದರಿಯೇ ಬರವಲೆ ಹೇದರೆ ಹೇಂಗೆ ಬರವದು’] – ಯೋ..ಪ!…. ನಿಂಗೊಗಾ ಎಡಿಯದ್ದು?!! ಭೀಮನು ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ…………….. ನಿಂಗಳೇ ಅಲ್ಲದ ಹೇಳಿಕ್ಕೊಟ್ಟದು!

  [ಎಂಗೊಗೆ ವರಕ್ಕು ತೂಗುಲೂ ಪುರುಸೊತ್ತೇ ಇಲ್ಲೆ. ] – ಅಲ್ಲದಾ ಮತ್ತೆ!! ಮತ್ತಾಣ ಪ್ರೋಗ್ರಾಂ ಏವುದು!!

  [ಮೇಗಾಣ ಲೋಕಲ್ಲಿದ್ದ ಗೌರಮ್ಮಂಗೂ ಸಂತೋಷ ಆಗಿ ಆನಂದಭಾಷ್ಪ ] – ಇದು ರೈಸಿದ್ದಿದಾ. ಅಲ್ಲಿ ಅಕೇರಿಗೆ ನಿಜಲ್ಲಿಯೇ ನಡದ್ದು ಇಲ್ಲಿ ಶುದ್ಧಿಲಿಯೂ ನಡದ್ದು.

  ಅಕ್ಕೋ ಶುದ್ದಿ ಪಷ್ಟಾಯ್ದು. ವಿವರ ವಿವರವಾಗಿ ನೀಡಿದ್ದಕ್ಕೆ ಧನ್ಯವಾದ ಹೇಳ್ಳೇ ಬೇಕು. ಪಟಂಗಳೂ ಪಷ್ಟುಕ್ಲಾಸು. ಲೈಕ್ ಒತ್ತುವೋ ಹೇದು ಗ್ರೇಶಿರೆ ಆ ಓಪ್ಶನ್ ಇತ್ತಿಲ್ಲೆ ಪಟದಡಿಲಿ. ಹಾಂಗಾಗಿ ಎಲ್ಲಾ ಪಟಂಗೊಕ್ಕೂ ಇಲ್ಲಿ ಒಟ್ಟಿಂಗೆ ಒಂದು ಲೈಕ್.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಬಾವಯ್ಯ ಧನ್ಯವಾದಂಗೊ….

  ಯೋಪ ಅಂದು ಹೇದ ಕಥೆಯ ಇಂದೂ ನೆಂಪು ಮಡುಗ್ಯೊಂಡದು ಸಾಕಪ್ಪ ನಿಂಗ.

  [Reply]

  VN:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅನುಪಮ್ಮ,ವರದಿ ಲಾಯಕ ಆಯಿದು, ನಮ್ಮ ಶ್ರೀನಿವಾಸಣ್ಣ ಮತ್ತೆ ಮಾಲತಿ ಅಕ್ಕ ನೆಡಶಿದ ಶಿಬಿರ ಹೇಳಿರೆ ಕೇಳ್ತೇ ಬೇಡ . ಹೆಮ್ಮಕ್ಕಳ

  ಮತ್ತೆ ಕೂಚಕ್ಕಂಗಳ ಕತಗೊ ಬೈಲಿಂಗೆ ಬತ್ತಾ ಇರಳಿ .ಅನುಪಮ ತೆಗದ ಪಟಮ್ಗಳೂ ಲಾಯಕ ಬೈಂದು ,ಕತೆ ಓದಲೆ ಕನ್ನಡಕ ಉದ್ದಿ ಮಡುಗಿಂದು ಕೂಯಿದೆ ಆತೋ.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ…. ಬಾಲಣ್ಣ .
  ಪಟ ಆನು ತೆಗದ್ದೂ ಇದ್ದು , ಸರಳಿ ಶಾಮಣ್ಣ ತೆಗದ್ದೂ ಇದ್ದು. ಎಂಗಳ ಇಬ್ಬರ ಪರವಾಗಿ ಧನ್ಯವಾದಂಗೊ…

  [Reply]

  VN:F [1.9.22_1171]
  Rating: 0 (from 0 votes)
 5. ಸುಮನ ಭಟ್ ಸಂಕಹಿತ್ಲು.

  ವಾಹ್! ವರದಿ ಲಾಯಿಕ ಆಯಿದು.
  ಹೀಂಗಿಪ್ಪ ಶಿಬಿರಂಗೊಕ್ಕೆ ಅಂದು ಅಪ್ಪನೊಟ್ಟಿಂಗೆ ಹೋದ್ದು ಎಲ್ಲ ನೆಂಪಾತು.
  ಕತೆ ಓದುಲೆ ಕಾಯ್ತಾ ಇರ್ತೆ ಮಿನಿಯಾ?

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ…. ಕಥೆ ರಜ ನಿಧಾನಕ್ಕೆ ಬತ್ತಾ ಇದ್ದು. ಎನ್ನ ಶಿಷ್ಯೆಯರ ಭರತನಾಟ್ಯ ಪರೀಕ್ಷೆಗೆ ಕಟ್ತುಸಿದ್ದೆ. ಅದರ ಗಡಿಬಿಡಿಲಿ ಇದ್ದೆ. ಸುಮನಕ್ಕ ಈ ಸರ್ತಿ ಒಕ್ಟೋಬರ್ 25ಕ್ಕೆ ಪರೀಕ್ಷೆ!!!!

  [Reply]

  ಸುಮನ ಭಟ್ ಸಂಕಹಿತ್ಲು. Reply:

  ಓಹ್! ಅಪ್ಪಾ? ಎಲ್ಲಾ ಶುಭವಾಗಲಿ ಹೇಳಿ ಶುಭಾಶಯಂಗೊ ಹೇಳ್ತೆ.
  ಅಂದು ಎನ್ನ ಸಂಗೀತ, ಭಾಗ್ಯ, ನಿನ್ನ ಭರತನಾಟ್ಯ ಜೂನಿಯರ್ ಪರೀಕ್ಷೆಗೆ ತಯಾರಿ ಮಾಡಿದ ದಿನಂಗೊ ನೆಂಪಾತು.

  [Reply]

  VA:F [1.9.22_1171]
  Rating: 0 (from 0 votes)
 6. ವಿಜಯತ್ತೆ

  ಇನ್ನೀಗ ಅನುವಿ೦ಗೆ ಕು೦ಡೆಊರ್ಲೆ ಪುರುಸೊತ್ತಿಲ್ಲದ್ದಹಾ೦ಗೆ ಆವುತ್ತು ಬಹುಮಾನ ಬ೦ದ ಮೇಲೆ ಪೆನ್ನುದೆ ಕೆಳ ಮಡಗಲಿಲ್ಲೆ ಮಿನಿಯಾ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿಚೆನ್ನಬೆಟ್ಟಣ್ಣಯೇನಂಕೂಡ್ಳು ಅಣ್ಣಪೆಂಗಣ್ಣ°ಗೋಪಾಲಣ್ಣವಿಜಯತ್ತೆಸುಭಗಪುಣಚ ಡಾಕ್ಟ್ರುವಿದ್ವಾನಣ್ಣವಸಂತರಾಜ್ ಹಳೆಮನೆಡಾಮಹೇಶಣ್ಣರಾಜಣ್ಣಗಣೇಶ ಮಾವ°ಪವನಜಮಾವvreddhiಶರ್ಮಪ್ಪಚ್ಚಿಕಳಾಯಿ ಗೀತತ್ತೆನೆಗೆಗಾರ°ಅನುಶ್ರೀ ಬಂಡಾಡಿಶ್ರೀಅಕ್ಕ°ಅನಿತಾ ನರೇಶ್, ಮಂಚಿವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ