Oppanna.com

ಮಕ್ಕಳ ಹೊಸ ಹೆಜ್ಜೆ….

ಬರದೋರು :   ರಾಜಣ್ಣ    on   07/09/2012    7 ಒಪ್ಪಂಗೊ

ರಾಜಣ್ಣ

ಉಡುಪಮೂಲೆ ಅನುಪಮಕ್ಕ ಬೈಲಿಂಗೆ ಒಬ್ಬನೇ ಆಗಿ ಬಯಿಂದವಿಲ್ಲೆ; ಬಪ್ಪಗ ಮನೆಯೋರ, ಹಿರಿಯೋರ, ಹತ್ತರಾಣೋರ – ಎಲ್ಲೋರನ್ನೂ ಕರಕ್ಕೊಂಡೇ ಬತ್ತವು.
ಇದಾ, ಈಗ ಅವರ ಮನೆಯೋರು “ಉಡುಪಮೂಲೆ ರಾಜಣ್ಣಂದೇ” ಬಂದವು!!
ಬೈಲಿನ ಶುದ್ದಿಗೊಕ್ಕೆ ಒಪ್ಪ ಕೊಟ್ಟೊಂಡು ಇದ್ದೋರು ಈಗ ಶುದ್ದಿ ಹೇಳುಲೆ ಸುರುಮಾಡಿದವು.
ಎಲ್ಲೋರ ಪ್ರೋತ್ಸಾಹ ಇದ್ದರೆ ಅವರ ಅಗಾಧ ಜ್ಞಾನಭಂಡಾರ ಬೈಲಿಂಗೆ ಇಳಿಸ್ಸರಲ್ಲಿ ಸಂಶಯ ಇಲ್ಲೆ.

ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಗುರುಗಳಾದ ಸಬ್ಬಣಕೋಡಿ ರಾಮಭಟ್ಟರ ಪ್ರಯತ್ನ ಶ್ಲಾಘನೀಯ.
ಇಲ್ಲಿಯ ಮಕ್ಕಳ ಮೇಳ ಬೆಂಗ್ಳೂರು, ಶ್ರಿಂಗೇರಿ, ಸಕಲೇಶಪುರ, ಪೆರ್ಲ, ಕುಂಬ್ಳೆ….ಹೀಂಗೆ 30 – 35 ಕಡೆ ಪ್ರದರ್ಶನ ಕೊಟ್ಟಿದು.
ಮಕ್ಕೊಗೆ ನಾಟ್ಯ ಮಾಂತ್ರ ಕಲಿಸಿದರೆ ಸಾಲ ಹೇಳಿ ಕೇಂದ್ರಲ್ಲಿ ಹಿಮ್ಮೇಳ ಕ್ಲಾಸುಗಳೂ ನಡೆತ್ತಾ ಇದ್ದು.

ಕಳುದ ವರ್ಷ ಮಕ್ಕಳ ತಾಳಮದ್ದಳೆ ಹೇಳಿ ಒಂದು ಹೊಸ ಹೆಜ್ಜೆ ಮಡುಗಿದವು. ಆ ಪ್ರಯತ್ನ ಫಲಕಾರಿಯೂ ಆತು.
ಮಕ್ಕಳ ತಾಳಮದ್ದಳೆ ಹತ್ತು ಹಲವು ಕಡೆ ಪ್ರದರ್ಶನಗೊಂಡತ್ತು. ಮಾಂತ್ರ ಅಲ್ಲ ಮಂಗ್ಳೂರು ಆಕಾಶವಾಣಿಲಿ ಮಕ್ಕಳ ತಾಳಮದ್ದಳೆ ಪ್ರಸಾರವೂ ಆತು.
ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಮಡುಗಿ ಮಕ್ಕಳೇ ಮುಖವರ್ಣಿಕೆ ಮಾಡ್ಯೊಂಬಲೆ ಕಲಿಶಿದವು.
ಆ ಪ್ರಯತ್ನವೂ ಫಲಕಾರಿ ಆದ ಅಹಾಗೆ ಕಾಣುತ್ತು.

ಹೀಂಗೆ ಈ ಮಕ್ಕಳ ಮೇಳ ಒಂದೊಂದೆ ಮೆಟ್ಳು ಏರಿಗೊಂಡು ಹೋಗಲಿ.
ಶಿಬಿರದ ಕೊನೆಯ ದಿನ ವೀರಮಣಿ ಕಾಳಗ ಯಕ್ಷಗಾನ ಬಯಲಾಟ ನಡದತ್ತು.
ಅದರ ಕೆಲವು ಪಟಂಗಳ ಇಲ್ಲಿ ಹಾಕುತ್ತೆ ನಿಂಗಳೂ ಒಂದರಿ ನೋಡಿಕ್ಕಿ ಆಗದಾ…..

7 thoughts on “ಮಕ್ಕಳ ಹೊಸ ಹೆಜ್ಜೆ….

  1. ಒಪ್ಪ ಕೊಟ್ಟು ಶುಭ ಹಾರೈಸಿದ ಎಲ್ಲೋರಿಂಗೂ ಧನ್ಯವಾದಂಗೊ…..

  2. ಒಳ್ಳೆಯ ಕಾರ್ಯ.. ಶುಭವಾಗಲಿ ..
    ಚೆ೦ದದ ಪಟ೦ಗೋ ರಾಜಣ್ಣಾ…

  3. ಒಳ್ಳೆ ಕಾರ್ಯ. ಒಳ್ಳೆ ಗುರುಗೊ ಸಮಾಜಲ್ಲಿ ಇರೆಕು, ಒಳ್ಳೆ ಶಿಷ್ಯಂದ್ರ ತಯಾರು ಮಾಡೆಕು, ಪರಂಪರೆಯನ್ನೂ ಉಳುಶೆಕು. ವ್ಯಾಪಾರೀಕರಣವೂ ಆಗದ್ದೆ ಸಮಾಜದ ನಾಕು ಸಮಸ್ತರಿಂಗೆ ಉಪಯೋಗ ಆಯೇಕು. ಶುದ್ದಿಗೊಂದು ಒಪ್ಪ ಇತ್ಲಾಗಿಂದ.

  4. ರಾಜ, ಪಟ೦ಗೊ ಲಾಯಕಾಗಿ ಬಯಿ೦ದು. ವಿವರಣೆಯು ಒಪ್ಪಕೆ ಬಯಿ೦ದು.ಬಾಳ ಒಳ್ಳೆ ಕೆಲಸ ಮಾಡಿದ್ದೆ ಮಿನಿಯಾ; “ಬೆಳೆಯ ಸಿರಿ ಮೊಳಕೆಯಲ್ಲಿ” ಹೇದು ಸುಮ್ಮನೆ ಹೇಳಿದ್ದವೋ ಅಜ್ಜಂದಿರು. ಮಕ್ಕಳ ಪ್ರತಿಭೆಯ ಬೈಲಿಲ್ಲಿ ಹೆರ ತಪ್ಪದರೊಟ್ಟಿ೦ಗೆ ನಿನ್ನಲ್ಲಿಪ್ಪ ಪ್ರತಿಭೆಯುದೆ ಬೆಣಚ್ಹಿ೦ಗೆ ಬ೦ತನ್ನೆ ಹೇದು ತು೦ಬಾ ಕೊಶಿ ಆತು. ಇದರ ಬಿಡದ್ದೆ ಮು೦ದುವರ್ಸು. ಶುಭ ಹಾರೈಕೆಗೊ.

  5. ರಾಜ, ಬಾಳ ಒಳ್ಳೆ ಕೆಲಸ ಮಾಡಿದ್ದೆ ಮಿನಿಯಾ; “ಬೆಳೆಯ ಸಿರಿ ಮೊಳಕೆಯಲ್ಲಿ” ಹೇದು ಸುಮ್ಮನೆ ಹೇಳಿದ್ದವೋ ಅಜ್ಜಂದಿರು. ಮಕ್ಕಳ ಪ್ರತಿಭೆಯ ಬೈಲಿಲ್ಲಿ ಹೆರ ತಪ್ಪದರೊಟ್ಟಿ೦ಗೆ ನಿನ್ನಲ್ಲಿಪ್ಪ ಪ್ರತಿಭೆಯುದೆ ಬೆಣಚ್ಹಿ೦ಗೆ ಬ೦ತನ್ನೆ ಹೇದು ತು೦ಬಾ ಕೊಶಿ ಆತು. ಇದರ ಬಿಡದ್ದೆ ಮು೦ದುವರ್ಸು. ಶುಭ ಹಾರೈಕೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×