ವರ್ಷ ಆರು!.. ನಿರಂತರ ಸಾಗಲಿ ಹವ್ಯಕ ಸರಸ್ವತಿಯ ತೇರು…

January 1, 2014 ರ 5:10 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಐದು ವರ್ಷ, 259 ಒಪ್ಪಣ್ಣನ ಒಪ್ಪಂಗೊ, 2,373 ಶುದ್ದಿಗೊ, 34,000ಕ್ಕೂ ಹೆಚ್ಚು ಬೆಶಿ ಬೆಶಿ ಒಪ್ಪಂಗೊ! ಒಪ್ಪಣ್ಙನ ಬೈಲಿನ ಸಾಧನೆಯ ವಿವರುಸಲೆ ಬೇರೆ ಎಂತ ಬೇಕು?

ಬ್ಲಾಗು, ವೆಬ್‌ಸೈಟ್‌ ಸುರು ಮಾಡುದು (ಒಪ್ಪಣ್ಣನ ಭಾಷೆಲಿ ಬೈಲು) ಸುಲಭ. ಹೊಸತ್ತರಲ್ಲಿ ನಾಲ್ಕಾರು ಲೇಖನಂಗಳ ಗೀಚಿ ಹಾಕುದೂ ದೊಡ್ಡ ಕೆಲಸ ಅಲ್ಲ. ಸುರು ಮಾಡಿದ್ದರ ಮುಂದುವರೆಸಿಕೊಂಡು ಹೋಪದಿದ್ದಲ್ಲ; ಅದದಾ ಕಷ್ಟಪ್ಪದು. ಎನ್ನನ್ನೂ ಸೇರಿಸಿ ಹೀಂಗಿಪ್ಪವು ನಮ್ಮೊಳವೇ ತುಂಬಾ ಜೆನ ಇಲ್ಲೆಯೋ? ಅಂತದ್ದರಲ್ಲಿ ಮದಲಿಂಗೆ ಹಿತ್ತಿಲು ಮನೆಯ ರಿಜಿಸ್ಟ್ರಿ ಮಾಡಿ (ಬ್ಲಾಗ್‌ ಹೇಳಿ ದಿನೆಗೊಳುವ° ಇಲ್ಲಿ),  ರಜ್ಜ ಸಮಯದ ನಂತರ ಅದರ ಸುತ್ತಮುತ್ತ ಇಪ್ಪ ಜಾಗೆಯನ್ನೂ, ಒಂದಷ್ಟು ನೆರೆಕರೆಯವರನ್ನು ಸೇರ್ಸಿ ಬೈಲಿನ ರಿಜಿಸ್ಟ್ರಿ ಮಾಡಿಗೊಂಡು (ವೆಬ್‌ಸೈಟ್) ಅಡೆ ತಡೆ ಇಲ್ಲದ್ದೆ ಚೆಂದಕೆ ನೆಡೆಶಿಗೊಂಡು ಹೋಪದಿದ್ದಲ್ಲಾ… ಅದು ಅಷ್ಟು ಎಳ್ಪ ಅಲ್ಲ. ಅಲ್ಲದೋ ಚೆನ್ನೈ ಭಾವ?

ಎಲ್ಲರನ್ನೂ ಚೆಂದಕೆ ಓರ್ಮೈಸಿಗೊಂಡು ಹೋಪದು ನಮ್ಮ ಗುರಿಕ್ಕಾರ್ರು. ಆದರೂ, ಬೈಲು ಹೇಳ್ವ “ಮರ”ದ ಕಲ್ಪನೆಯ ಗೆಡು ನೆಟ್ಟದು ಒಪ್ಪಣ್ಣ. ನೆಟ್ಟದು ಮಾತ್ರ ಅಲ್ಲ, ಅದಕ್ಕೆ ಬೇಕು ಬೇಕಾದಾಂಗೆ, ಕ್ರಮಲ್ಲಿ ನೀರು, ಗೊಬ್ಬರ, ಈಟು ಹೇಳೆಂಡು ಬೇಕಾದ್ದರ ಎಲ್ಲಾ ಮಾಡಿಂಡು ತಾನೂ ಬೆಳದ್ದ°. ಒಪ್ಪಣ್ಣನ ಪ್ರಾಯವೇ ಬೈಲಿಂಗು! ಎಷ್ಟು? ಐದು ಮುಗಿದು ಆರು ಸುರು.

ನಮ್ಮ ಬೈಲಿನ ಅಡಕ್ಕೆ ಮರ ಹೇಳಿ ನಾವು ಮಡುಕ್ಕೊಂಡ್ರೆ ಈಗ ಇದು ಒಳ್ಳೆ ಫಲ ಕೊಡ್ತ ಮರ. ಹು.. ಹು. ಹು… :)

ಈ ಮಾತು ಉತ್ಪ್ರೇಕ್ಷೆ ಅಲ್ಲಲೇ ಅಲ್ಲ. ನಿಜವಾಗಿಯೂ ಈ ಬೈಲು ಫಲ ಕೊಡ್ತ ಮರವೇ. ಅಡಕ್ಕೆ ಬದಲು ಇಲ್ಲಿ ಹವ್ಯಕ ಸರಸ್ವತಿ ಇದ್ದು ಅಕ್ಷರಂಗಳ ರೂಪಲ್ಲಿ. ಐದು ವರ್ಷಗಳ ಹಿಂದಂದ ನಾವು ಅವಲೋಕನ ಮಾಡಿಗೊಂಡು ಬಂದರೆ ಇದು ಸ್ಪಷ್ಟ ಆವುತ್ತು. ನಮ್ಮ ಅಬ್ಬೆ ಭಾಷೆಯಾದ ಹವ್ಯಕ ಭಾಷೆಗೆ ಮೀಸಲಾದ ಮೊದಲ ಬೈಲು ಇದು. (ಆಧುನಿಕ ಭಾಷೆಲಿ ಸಮುದಾಯ ವೆಬ್‌ಸೈಟ್ ಹೇಳ್ಳಕ್ಕು) ಮೊದಲೆಲ್ಲಾ ಅಲ್ಲೊಂದು ಇಲ್ಲೊಂದು ಹವ್ಯಕ ಲೇಖನಂಗೊ ಕಾಂಬಲೆ ಸಿಕ್ಕಿಯೊಂಡಿತ್ತಿದು. ಕಳೆದ ಐದು ವರ್ಷಂದ ಹವ್ಯಕ ಲೇಖನಂಗೊ ಹೇಳಿದರೆ “ಒಪ್ಪಣ್ಣನ ಬೈಲು” ಹೇಳ್ತಾಂಗೆ ಆಯಿದು. ಅದೇ ನಮ್ಮ ಬೈಲಿನ ಸಾಧನೆ. ಜೆಂಬ್ರಕ್ಕೆ ಎಲ್ಲಿಯಾದರೂ ಹೋದರೆ, ಒಪ್ಪಣ್ಣ ಹೇಳ್ವ ಶಬ್ದ ಬಂದರೆ ಸಾಕು ಯಾವುದು ವೆಬ್‌ಸೈಟೋ? ಹೇಳಿ ಕೇಳುವಾಂಗೆ ಆಯಿದು.

ಬುದ್ಧಿವಂತಿಕೆಯಲ್ಲಿ ಏವತ್ತೂ ಮುಂದಿಪ್ಪ ನಮ್ಮ ಸಮಾಜಲ್ಲಿ ಬರಹಗಾರರಿಂಗೆ ಕೊರತೆಯೇ? ಛೇ ಇಲ್ಲಲೇ ಇಲ್ಲೆ. ಆದರೆ ಅವಕ್ಕೆ ವೇದಿಕೆಯ ಕೊರತೆ ಇತ್ತು. ಒಪ್ಪಣ್ಣನ ಬೈಲು ಆ ಕೊರತೆಯ ನೀಗುಸಿತ್ತು. ಅದೆಷ್ಟು ಜನ ಹೊಸ  ಹವ್ಯಕಬರಹಗಾರರಿಂಗೆ ಬೈಲು ಅವಕಾಶ ಕಲ್ಪಿಸಿಕೊಟ್ಟಿದ್ದಿಲ್ಲೆ? ಸ್ವತಃ ಒಪ್ಪಣ್ಣನೇ ಪ್ರತಿಭಾವಂತ ಲೇಖಕ° ಆಗಿ ಗುರುತಿಸಿಕೊಂಡಿದ°. ಎನ್ನಂತಹ ಹಲವು ಜೆನಂಗೊ ಅಪರೂಪಲ್ಲಿ ಬರತ್ತರೂ ಇಲ್ಲಿ ಅವಕಾಶ ಇದ್ದೇ ಇದ್ದು. ಬೈಲು ಸುರುವಾದ ನಂತರ ಇಲ್ಲಿವರೆಗೆ ಶುದ್ದಿಗಳ, ಬರಹಗಾರರ ಕೊರತೆ ಎದುರಾಯಿದಿಲ್ಲೆ. ನಿರಂತರವಾಗಿ ಹವ್ಯಕ ಸರಸ್ವತಿ ಬೈಲಿಲ್ಲಿ ಕೊಣಿತ್ತಾ ಇದ್ದು! ದಿನಂಪ್ರತಿ ಸರಾಸರಿ ನಾಲ್ಕು- ಐದರ ಹಾಂಗೆ ಶುದ್ದಿಗೊ ಬತ್ತಾ ಇದ್ದು ಹೇಳ್ತದು ಹೆಮ್ಮೆಯ ಸಂಗತಿ. ಆ ಶುದ್ದಿಗಳಲ್ಲಿ ಅದೆಷ್ಟು ವೈವಿಧ್ಯತೆ! ಗಂಭೀರ, ಚಿಂತನಾರ್ಹ ಬರಹಂಗೋ, ಬೇಜಾರು ಮರೆಸಿ ನೆಗೆ ಬರುಸುವ ಹಾಸ್ಯಂಗೊ, ಹವ್ಯಕ ಪದ ಗುಚ್ಛಂಗೊ, ಛಂಧೋಬದ್ಧ ಪ್ರಶ್ನೆಗೊ ಉತ್ತರಂಗೊ, ಪುರಾಣ, ಸಂಸ್ಕೃತ ಶ್ಲೋಕಂಗಳ ವಿವರಣೆಗೊ, ಕಥೆಗೊ, ಪ್ರವಾಸ ಕಥನಂಗೊ, ರಾಜಕೀಯ ವಿಚಾರಂಗೊ, ವೈಜ್ಞಾನಿಕ ಸಮಾಚಾರಂಗೊ, ಕವನಂಗೊ, ಚಿತ್ರಂಗೊ, ವ್ಯಂಗ್ಯಚಿತ್ರಂಗೊ, ಕಾದಂಬರಿಗೊ… ಹೀಂಗೆ ಪಟ್ಟಿ ಬೆಳೆತ್ತಾ ಹೋವ್ತು.

ಹೋ ಅಷ್ಟಪ್ಪಗ ನೆಂಪಾತಿದಾ… ಬೈಲಿಲ್ಲಿ ಬಳಸಿದ ಭಾಷೆಯ ಬಗ್ಗೆ ಬರೆಯದ್ದರೆ ಈ ಶುದ್ದಿಯೇ ಅಪೂರ್ಣ ಆವುತ್ತು. ನಮ್ಮ ಸಮಾಜದ ವ್ಯಾಪ್ತಿ ಸಣ್ಣದಾದರೂ (ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು, ಉತ್ತರಕನ್ನಡ ಮತ್ತೆ ಶಿವಮೊಗ್ಗ ಜಿಲ್ಲೆ) ಭಾಷಾ ವೈವಿಧ್ಯತೆಲಿ ತುಂಬಾ ಶ್ರೀಮಂತ. ಒಂದೊಂದು ಸೀಮೆಲಿ ಒಂದೊಂದು ರೀತಿ ವ್ಯವಹಾರಿಕ ಭಾಷೆ ಇದ್ದು.

ಸಾರಾಡಿ ತೋಡಿನ ಆಸುಪಾಸಿಲ್ಲೇ ಹಲವು ಭಾಷೆಗೊ ಇದ್ದು, ಕುಂಬ್ಳೆ ಸೀಮೆಲಿ ಒಂದು, ಪಂಜ ಸೀಮೆಲಿ ಇನ್ನೊಂದು, ವಿಟ್ಲ ಸೀಮೆಲಿ ಮತ್ತೊಂದು. ನಮ್ಮ ಬೈಲಿಲಿ ಜಾಸ್ತಿ ಕುಂಬ್ಳೆ ಭಾಷೆ ಚಾಲ್ತಿಲಿ ಇದ್ದರೂ, ಎಲ್ಲಾ ಸೀಮೆ ಭಾಷೆಯ ಬಳಕೆಯೂ ಇದ್ದು. ಹಾಂಗಾಗಿ ಪ್ರತಿಯೊಬ್ಬ° ಓದುಗಂಗೂ ಎಲ್ಲಾ ಸೀಮೆಯ ಭಾಷೆ ಕಲಿವ ಅವಕಾಶವನ್ನೂ ಬೈಲು ಕೊಟ್ಟಿದು. (ಎನಗೆ ಕುಂಬ್ಳೆ ಭಾಷೆಯ ಹಲವು ಶಬ್ದಂಗೊ ಗೊಂತಿತ್ತಿಲ್ಲೆ. ಈಗ ಹೆಚ್ಚಿನ ಶಬ್ದಂಗೊ ಎನಗೆ ಗೊಂತಿದ್ದು. ಮಾತಾಡುವಾಗ, ಬರವಾಗ ಆ ಶಬ್ದಂಗಳ ಉಪಯೋಗಿಸುವ ಪ್ರಯತ್ನ ಮಾಡ್ತೆ)

ಹವ್ಯಕ ಸಮಾಜದ ಹಳೆ – ಆಧುನಿಕ ಸಂಸ್ಕೃತಿಯ ಕೊಂಡಿ ಈ ಬೈಲು. ಹಳೆ ತಲೆಮಾರಿಲ್ಲಿದ್ದ ಸಂಸ್ಕೃತಿಗಳ ಪರಿಚಯ ಇದ್ದ ಹಿರಿಯ ವ್ಯಕ್ತಿಗೊ ಇಲ್ಲಿದ್ದವು. ಈಗಿನ ತಲೆಮಾರಿಂಗೆ ಸೇರಿದ ಕಿರಿಯರೂ ಇದ್ದವು. ಹಿಂದಿನ ಆಚಾರ ವಿಚಾರಂಗಳ, ಸಂಪ್ರದಾಯಂಗಳ ಪರಿಚಯ ಮಾಡುವ ಲೇಖನಂಗೊ ಹಲವು ಪ್ರಕಟ ಆಯಿದು. ಆಧುನಿಕತೆ ಹೇಂಗೆ ನಮ್ಮ ಸನಾತನ ಸಂಸ್ಕಾರಂಗಳ ಹಾಳು ಮಾಡ್ತಾ ಇದ್ದು ಹೇಳ್ವದರ ಬಗ್ಗೆ ವಿಶ್ಲೇಷಣಾತ್ಮಕ ಬರಹಂಗಳೂ ಬೈಂದು. ಆಧುನಿಕ ಜಗತ್ತಿಲ್ಲಿಪ್ಪ ಸೌಲಭ್ಯಗಳ ಉಪಯೋಗಿಸಿಕೊಂಡು ಹಳೆ ಸಂಸ್ಕೃತಿಯ ಹೇಂಗೆ ಉಳುಶಿಗೊಂಬಲಕ್ಕೂ ಹೇಳ್ತದರ ಬಗ್ಗೆಯೂ ಇಲ್ಲಿ ಚರ್ಚೆ ಆಯಿದು. (ಒಪ್ಪಣ್ಣನೇ ಅವನ ಬಹುಪಾಲು ಶುದ್ದಿಗಳಲ್ಲಿ ನಮ್ಮ ಸನಾತನ ಸಂಸ್ಕೃತಿ ಬಗ್ಗೆ ಅದರ ಉಳುಶಿ ಬೆಳಶುವ ವಿಚಾರವನ್ನೇ ಪ್ರಸ್ತಾಪಿಸಿದ್ದ°)

“ಒಟ್ಟಾಗಿ ಹೋಪೊ°” ಈ ಬೈಲಿನ ಧ್ಯೇಯೋದ್ದೇಶ! ಐದು ವರ್ಷಲ್ಲಿ ಈ ಬೈಲಿನ ಮೂಲಕ ನಾವೆಲ್ಲರೂ ಪರಿಚಯಸ್ಥರಾಯಿದೆಯೊ°, ನೆಂಟಸ್ಥನವೂ ಬೆಳದ್ದು. ಗೆಳೆತನವೂ ಆಯಿದು. ಬೈಲಿನ ಸದಸ್ಯರ ನಡುವೆ ಅದೆಷ್ಟು ಆತ್ಮೀಯತೆ ಬೆಳದ್ದು ಹೇಳಿದರೆ, ಕಷ್ಟ -ಸುಖ, ಸೋಲು- ಗೆಲುವು ಹಂಚಿಗೊಂಬಷ್ಟು! ಈ ಗೆಳೆತನ, ಬಾಂಧವ್ಯ, ಆತ್ಮೀಯತೆ ಅದರೊಟ್ಟಿಂಗೆ ಸಮಾಜಕ್ಕೆ ಎಂತಾರು ಕೊಡುಗೆ ನೀಡೆಕ್ಕು ಹೇಳ್ತ ಬಯಕೆಯೇ ಟ್ರಸ್ಟ್ ಸ್ಥಾಪನೆಗೆ ಪ್ರೇರಣೆ ಆತು. ಟ್ರಸ್ಟ್‌ ಮಾಡ್ತಾ ಇಪ್ಪ ಕೆಲಸವೂ ಹಾಂಗೆ; ಶ್ಲಾಘನೀಯ ಮಾತ್ರ ಅಲ್ಲ ಇತರರಿಂಗೂ ಮಾದರಿಯಪ್ಪಂಥಾದ್ದು. ಶ್ರೀ ಗುರುಗೊ ಕೂಡ ಬೈಲು, ಟ್ರಸ್ಟ್ ಮಾಡಿಡಿಂಪ್ಪ ಕೆಲಸದ ಬಗ್ಗೆ ಆಶೀರ್ವಾದ ಸಮೇತ ಮಂತ್ರಕ್ಷಾತೆ ಕೊಟ್ಟು ಹರಸಿದ್ದವು. ಅದಕ್ಕಿಂತ ದೊಡ್ಡ ಭಾಗ್ಯ ಬೇರೆಂತ ಬೇಕು?

ಬೈಲಿನ ಬಗ್ಗೆ ಇಷ್ಟೆಲ್ಲ ಬರದ ನಂತರ ಮೂಲ ಕರ್ತೃ ಒಪ್ಪಣ್ಣ, ಹಾಂಗೆ ಬೈಲಿನ ಜೆವಬ್ದಾರಿ ಹೊತ್ತುಗೊಂಡಿಪ್ಪ ಗುರಿಕ್ಕಾರ್ರ ಬಗ್ಗೆ ಹೇಳದ್ದೆ ಇದ್ದರೆ, ಈ ಶುದ್ದಿಗೆ ನ್ಯಾಯ ಕೊಟ್ಟಾಂಗೆ ಆವುತ್ತಿಲ್ಲೆ. ಒಪ್ಪಣ್ಣ-ಗುರಿಕ್ಕಾರ್ರು ಇಬ್ರ ಹೆಸರು ಬಪ್ಪಗ ಎನ್ನ ಮೊದಲ ಆಯ್ಕೆ ಒಪ್ಪಣ್ಣನೇ. ಮೊದಲು ಒಪ್ಪಣ್ಣನ ಹೆಸರು ಬಂದರೂ, ಎಂತಾರು ಕಾರ್ಯ ಆಯೆಕ್ಕೋಳಿ ಇದ್ದರೆ ಗುರಿಕ್ಕಾರತ್ರೇ ಆತಷ್ಟೇ. ಅದಿರಲಿ,

ಲೇಖನಂಗಳ ಸುರುವಿಂಗೆ ಬರವದು ಸುಲಭ, ಅದರ ಮುಂದುವರಿಸಿಗೊಂಡು ಹೋಪದು ಕಷ್ಟ ಇದ್ದು ಹೇಳಿ ಆಗ ಮಾತಾಡಿದ್ದು. ಎನಗೆ ಒಪ್ಪಣ್ಣನ ಬಗ್ಗೆ ವಿಪರೀತ ಹೆಮ್ಮೆ ಅಪ್ಪದು ಇದೇ ಕಾರಣಕ್ಕೆ. ಕಳೆದ ಐದು ವರ್ಷಂದ ಪ್ರತಿ ಶುಕ್ರವಾರ ಒಂದು ದಿನವೂ ತಪ್ಪದ್ದೇ 259 ಶುದ್ದಿಗಳ ಹೇಳಿದ್ದ° ತನ್ನದೇ ಶೈಲಿಲಿ; ಕುಂಬ್ಳೆ ಸೀಮೆ ಭಾಷೆಲಿ. ಎಲ್ಲ ಶುದ್ದಿಗಳ ವಿಷಯಂಗೊ ಒಂದಕ್ಕೊಂದು ಭಿನ್ನ. ಪ್ರತಿ ವಾರ ಬರವದು ತುಂಬಾ ಕಷ್ಟ. ಪತ್ರಿಕೆಲಿ ಬರವ ಅಂಕಣಕಾರಂಗೊ ಕೂಡ ವಿಷಯಕ್ಕಾಗಿ ತಲೆಬೆಶಿ ಮಾಡ್ತವು. ಎಡಕ್ಕಿಲಿ ಒಂದು ವಾರ ಮಣ್ಣ ತಪ್ಪುಸಲೆ ನೋಡ್ತವು. ಆದರೆ ಒಪ್ಪಣ್ಣ, ಎಷ್ಟೇ ತೆರಕ್ಕು ಇದ್ದರೂ ಅದೆಷ್ಟು ಶ್ರದ್ಧೆಲಿ ಬರತ್ತಾ° ಇದ್ದ°? ಅವನ ನಿರೂಪಣಾ ಶೈಲಿ ವಿಶಿಷ್ಟವಾದ್ದು. ಆಸಕ್ತಿಲಿ ಓದಿಸಿಗೊಂಡು ಹೋಪಂಥಾದ್ದು. ಎಷ್ಟೇ ಸಣ್ಣಕೆ ಬರೆಯಲಿ, ದೊಡ್ಡಕೆ ಇರಲಿ ಒಂದೇ ಪೆಟ್ಟಿಂಗೆ ಓದುಸುತ್ತು. ಹೆಚ್ಚಾಗಿ ಹಾಸ್ಯವೋ, ವ್ಯಂಗ್ಯವೋ.. ಮಿಶ್ರಿತ ಶುದ್ದಿಗಳ ಹೇಳುವ ಒಪ್ಪಣ್ಣನ ಬಹುಪಾಲು ಶುದ್ದಿಗೊ ಚಿಂತನೆಗೆ ಹಚ್ಚುವಂಥಾದ್ದು. ಈಗಿನ ತಲೆಮಾರಿಂಗೆ ಅರಡಿಯದ್ದೇ ಇಪ್ಪಂತಹ ಹಲವು ವಿಚಾರಂಗಳ ಬಹಳ ಅರ್ಥಪೂರ್ಣವಾಗಿ ಶುದ್ದಿ ಮುಖೇನ ವಿವರ್ಸಿದ್ದ°, ವಿವರಿರ್ಸುತ್ತಾ ಇದ್ದ°, ಮುಂದೆಯೇ ವಿವರ್ಸುತ್ತ°. ಅದರಲ್ಲಿ ಯಾವುದೇ ಸಂಶಯ ಬೇಡ!

ಒಪ್ಪಣ್ಣ ಶುದ್ದಿ ಹೇಳಿ ಆಟಾಡ್ಳೆ ಹೋವುತ್ತ°. ಬೈಲಿನ ನೋಡಿಗೊಂಬಲೇ ಜೆನ ಬೇಡದೋ? ಅದಕ್ಕದಾ ಗುರಿಕ್ಕಾರ್ರು ಇಪ್ಪದು. ಬೈಲು ಸುರುವಾದ ನಂತರ ಅವು ಎಲ್ಲರನ್ನೂ ಚೆಂದಕೆ ಓರ್ಮೈಸಿಕೊಂಡು ಹೋವುತ್ತಾ ಇದ್ದವು. ಎನ್ನ ಮತ್ತೆ ಗುರಿಕ್ಕಾರ್ರ ಭೇಟಿ ನಡೆದ್ದು ಆಕಸ್ಮಿಕ. ಮಠದ ಅಂಗ ಸಂಘಟನೆ “ಅವಲಂಬನ”ದ ಲೆಕ್ಕಲ್ಲಿ ಮೇಲುಕೋಟೆ ಚೆಲುವನಾರಯಣ ಸ್ವಾಮಿ ದರ್ಶನ ಪ್ರವಾಸ ಇತ್ತಿದು 2008ರ ಆಗೋಸ್ತು  15ಕ್ಕೆ. ಎರಡು ಬಸ್‌ ಗಿರಿನಗರಂದ ಹೆರಟಿತ್ತಿದು. ಈ ಗುರಿಕ್ಕಾರ್ರು ಮತ್ತೆ ಇತರೆ ಚೆಙಾಂಯಿಗೊ ಒಂದು ಬಸ್ಸಿಲ್ಲಿ. ಆನು ಇನ್ನೊಂದು ಬಸ್ಸಿಲ್ಲಿ. ಮಂಡ್ಯದತ್ತರೆ ಕಾಪಿ ಕುಡಿವಲೆ ಹೇಳಿ ನಿಲ್ಸಿಯಪ್ಪಗ ಆದ ಆತ್ಮೀಯ ಭೇಟಿ ಇಂದಿಂಗೊರಗೆ ಮುಂದುವರಿದ್ದು. ಅಧಿಕೃತವಾಗಿ ಬೈಲು ಸುರುವಾದ ಮೇಲೆ ಎನ್ನ ಹಾಂಗೆ ಹಲವು ಜೆನರ ಬೈಲಿಂಗೆ ಎಳದು ಬರಶಿಸಿದ್ದವು, ಬೆನ್ನುತಟ್ಟಿದ್ದವು. ಎಲ್ಲಕ್ಕೂ ಹೆಚ್ಚಾಗಿ ಒಂದು ಒಳ್ಳೆ ಮಿತ್ರಸಮೂಹವ ಬೆಳಶಿದ್ದವು. ಸಮಷ್ಟಿಲಿ ತೆಕ್ಕೊಂಡುಹೋವುತ್ತಾ ಇದ್ದವು. ಭವಿಷ್ಯತ್ತಿಲ್ಲಿ ಈ ಬಾಂಧವ್ಯವೂ, ಒಪ್ಪಣ್ಣನ ಹವ್ಯಕ ಸರಸ್ವತಿ ಸೇವೆಯು ಹೀಂಗೆ ಮುಂದುವರಿಯಲಿ ಹೇಳಿ ಪ್ರಾರ್ಥನೆ.

~~

ಇಂತಿಪ್ಪ ಬೈಲಿಲ್ಲಿ ಬೆರತ್ತ, ಆಟ ಆಡ್ತ, ತಮಾಶೆ ಮಾಡ್ತ ಅವಕಾಶ ಎನಗೂ ಸಿಕ್ಕಿದ್ದು. ಇದರ ಸಕ್ರಿಯ ಸದಸ್ಯರಲ್ಲಿ ಆನೂ ಒಬ್ಬ ಹೇಳ್ತ° ಹೆಮ್ಮೆಯೂ ಎನಗಿದ್ದು. ಆರಾದ ವರ್ಷ ನೂರಾಗಲಿ, ಹವ್ಯಕ ಸರಸ್ವತಿ ತೇರು ನಿರಂತರವಾಗಿ ಸಾಗಲಿ ಹೇಳಿ ಶುಭ ಹಾರೈಸುತ್ತಾ ಹವ್ಯಕ ಭಾಷೆ, ಸಂಸ್ಕೃತಿ ಉಳಿಶಿ ಬೆಳಶುವ ಧ್ಯೇಯಲ್ಲಿ ಕೆಲಸ ಮಾಡ್ತಾ ಇಪ್ಪ ಈ ಬೈಲಿಂಗೆ ಶ್ರೀಗುರುದೇವತೆಗಳ ಅನುಗ್ರಹ ಸದಾ ಇರಲಿ ಹೇಳಿ ಬೇಡಿಗೊಳ್ತೆ.

 

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಡೈಮಂಡು ಭಾವ° ಹೇದ್ದು ಎಲ್ಲವೂ ಸಮ. ಲಾಯಕ ಆಯ್ದು ಶುದ್ದಿ.

  ಒಪ್ಪಣ್ಣನ ಶ್ರದ್ಧೆ, ಬೇಕು ಹೇಳ್ತ ಹುರುಪು, ಮನಸ್ಸು ಗಾಢವಾಗಿ ಇಪ್ಪದರಿಂದಾತು ಈ ಬೈಲು ಹೀಂಗೆ ಮುಂದುವರ್ಕೊಂಡು ಇಪ್ಪದು. ಒಟ್ಟಿಂಗೆ ಬೈಲು ನೆಂಟ್ರುಗಳ ಸಹಕಾರ ಅನನ್ಯ ಪ್ರೋತ್ಸಾಹ ಶ್ಲಾಘನೀಯ .

  ಹವ್ಯಕರಿಂಗಾಗಿ ಹವ್ಯಕಕ್ಕಾಗಿ ಚಿಗುರೊಡೆದ ಈ ಮೊಳಕೆ ಅಸಾಧಾರಣವಾಗಿ ಬೆಳೆಯಲಿ ಹೇದು ಈ ಸಂದರ್ಭಲ್ಲಿ ಸದಾಶಯ.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಡೈಮಂಡು ಭಾವ,

  [ವೇದಿಕೆಯ ಕೊರತೆ ಇತ್ತು. ಒಪ್ಪಣ್ಣನ ಬೈಲು ಆ ಕೊರತೆಯ ನೀಗುಸಿತ್ತು]

  ನೀನು ಹೇಳುದು ಸತ್ಯವೇ! ಬರವ ಅಭಿರುಚಿ ಇಲ್ಲದ್ದವ್ವು ಇಲ್ಲೆ. ಸರಿಯಾದ ವೇದಿಕೆ ಹಲವು ದಿಕ್ಕೆ ಇರ್ತಿಲ್ಲೆ. ಒಂದು ವೇಳೆ ವೇದಿಕೆ ಇದ್ದರೂ ಅದರ ಗುರಿಕ್ಕಾರಂಗೆ ಎಲ್ಲೋರ ಸೇರ್ಸಿ ಮುಂದರಿಯೆಕ್ಕು ಹೇಳ್ತ ಭಾವನೆ ಇರ್ತಿಲ್ಲೆ ಅಥವಾ ತನ್ನ ಯೋಚನೆಯ ಇನ್ನೊಬ್ಬನ ಮೇಲೆ ಹಾಕುವವ ಕಾಂಗು. ಆದರೆ ಒಪ್ಪಣ್ಣನ ಬೈಲಿಲಿ ಆ ರೀತಿಯ ಯಾವ ತೊಂದರೆಯೂ ನವಗೆ ಕಾಣ್ತಿಲ್ಲೆ. ಆರು ಬೇಕಾದರೂ ಬರವಲಕ್ಕು, ಯಾವಾಗ ಬೇಕಾದರೂ ಬರವಲಕ್ಕು. ಬೈಲಿನ ಧ್ಯೇಯಕ್ಕೆ ಹೊಂದುವ ವಿಷಯಂಗಳ ಬರವವಂಗೆ ಇಲ್ಲಿ ಮಾನ್ಯತೆ ಇದ್ದು ನಿಘಂಟು. ತನಗೆ ಸಿಕ್ಕಿದ ಜಾಗೆಯ ಸರಿಯಾಗಿ ಉಪಯೋಗ ಮಾಡಿಗೊಂಬದು ಪ್ರತಿಯೊಬ್ಬನ ಕರ್ತವ್ಯ.
  ಬೈಲಿನ ಗುರಿಕ್ಕಾರ್ರು ಆಗಲೀ, ಒಪ್ಪಣ್ಣ ಆಗಲೀ ಬರವ ಪ್ರತಿಯೊಬ್ಬನನ್ನೂ ಪ್ರೇರೇಪಿಸಿ ಬರೆಶಿದ್ದವು. ಹೊಸಬರ ಪ್ರೀತಿಲಿ ಬೈಲಿಂಗೆ ದಿನಿಗೇಳಿ ಏಕಸೂತ್ರಲ್ಲಿ ಮಡಗಿದ್ದವು. ಬೈಲಿನ ಬೆಳವಣಿಗೆಗೆ ಇದು ತುಂಬಾ ಮುಖ್ಯ ಹಾಂಗೆ ಬೈಲು ಇಷ್ಟು ಬೆಳವಲೆ ಅದುದೇ ಒಂದು ಮುಖ್ಯ ಕಾರಣ. ಆರು ಬಂದರೂ, ಶುದ್ದಿ ಬರದರೂ ಚೆನ್ನೈ ಭಾವ ಎದುರುಗೊಂಬದು ತುಂಬಾ ಕೊಶಿ ಆವುತ್ತು.

  [ಐದು ವರ್ಷಲ್ಲಿ ಈ ಬೈಲಿನ ಮೂಲಕ ನಾವೆಲ್ಲರೂ ಪರಿಚಯಸ್ಥರಾಯಿದೆಯೊ°, ನೆಂಟಸ್ಥನವೂ ಬೆಳದ್ದು. ಗೆಳೆತನವೂ ಆಯಿದು. ಬೈಲಿನ ಸದಸ್ಯರ ನಡುವೆ ಅದೆಷ್ಟು ಆತ್ಮೀಯತೆ ಬೆಳದ್ದು ಹೇಳಿದರೆ, ಕಷ್ಟ -ಸುಖ, ಸೋಲು- ಗೆಲುವು ಹಂಚಿಗೊಂಬಷ್ಟು!]

  ಬೈಲಿನ ಸಂಬಂಧ ಹೇಳಿದರೆ ಅದು ಭಾವನಾತ್ಮಕವಾದ್ದು. ಬೈಲಿಲಿ ನಾವು ಹಲವು ಜೆಂಬರಂಗಳ ಮಾಡಿತ್ತು. ಒಂದೇ ಮನೆಯವರ ಹಾಂಗೆ ಅಷ್ಟು ಚೆಂದಕ್ಕೆ ನಮ್ಮ ಮನೆ ಜೆಂಬರಂಗ ಕಳದ್ದು ನೋಡಿದರೆ ಮನಸ್ಸು ತುಂಬಿ ಬತ್ತು. ಎಷ್ಟು ಸಣ್ಣ ಕೊಶಿಯ ಸುದ್ದಿ ಆದರೂ ಬೈಲಿನ ಬಂಧುಗಳ ಹತ್ತರೆ ಹಂಚದ್ದೆ ಆವುತ್ತಿಲ್ಲೆ, ಹಾಂಗೇ ಯೇವುದೇ ಕಷ್ಟ ಬಂದರೂ ಕೂಡ ತಮ್ಮ, ಅಪ್ಪಚ್ಚಿ, ಮಾವ, ಭಾವಂದ್ರೇ ಹೇಳಿ ದಿನಿಗೆಳಿ ಬೇನೆಯ ಹಂಚಿ ಅಪ್ಪಗ ಮನಸ್ಸು ಹಗುರ ಆವುತ್ತು. ಮಾನಸಿಕ ಬೆಂಬಲ ಕೊಡುವ ಬಂಧುಗ ಇಪ್ಪಗ ನಮ್ಮ ಬದುಕುದೇ ಸುಗಮ ಅಕ್ಕು ಅಲ್ಲದಾ?
  ಬೈಲಿನ ಹೊಸವರ್ಷಕ್ಕೆ ಒಪ್ಪ ಶುದ್ದಿಯ ತಂದದಕ್ಕೆ ತುಂಬಾ ಧನ್ಯವಾದ ಡೈಮಂಡು.
  ನಮ್ಮ ಬೈಲು ಇನ್ನುದೇ ಶುದ್ದಿಗಳ ತಂದು ಬೆಳೆಯಲಿ…
  ಸಮಾಜಕ್ಕೆ ನಮ್ಮ ಬೈಲಿಂದ ಇನ್ನುದೇ ಹಲವು ಕಾರ್ಯಕ್ರಮಂಗ ನೆಡೆಯಲಿ..

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಡೈಮ೦ಡು ಭಾವ,
  ಬೈಲಿನ ಎಲ್ಲಾ ನೆ೦ಟ್ರ ಮನಸ್ಸಿನ ಭಾವನೆಗಳ ಒಟ್ಟು ಮಾಡಿ ಬರದ ಹಾ೦ಗೆ ಇದ್ದು ಈ ಶುದ್ದಿ .
  ಅ೦ತೇ ಉದ್ಯೋಗದ ದುಡಿಮೆಲಿ ಕಳದುಹೋಗಿದ್ದ ಎನ್ನ ಜೀವನಕ್ಕೆ ಬರವಣಿಗೆಯ ಹವ್ಯಾಸವ ಬೆಳೆಶುಲೆ ಮೂಲಕಾರಣ ಆದ ನಮ್ಮ ಬೈಲಿ೦ಗೆ,ಇಷ್ಟು ಜೆನ ಸಹೃದಯಿ ಬ೦ಧುಗಳ ಒಟ್ಟು ಮಾಡಿ ಮುನ್ನಡೆಸುತ್ತ ಬೈಲಿನ ಒಪ್ಪಣ್ಣ೦ಗೆ ಎಷ್ಟು ಧನ್ಯವಾದ ಹೇಳಿರೂ ಅದು ಕಡಮ್ಮೆಯೇ.

  [Reply]

  VA:F [1.9.22_1171]
  Rating: 0 (from 0 votes)
 4. ಯಮ್.ಕೆ.

  ಒಪ್ಪಣ್ಣನ ಕೆಲಸಕ್ಕೆ ವಜ್ರಸ(ಸ್ವ)ರ ಸರಿಯಾಗಿಯೇ ಒ೦ಬುತ್ತು.

  [Reply]

  VA:F [1.9.22_1171]
  Rating: 0 (from 0 votes)
 5. ಮುಣ್ಚಿಕಾನ ಭಾವ

  {ಹವ್ಯಕ ಲೇಖನಂಗೊ ಹೇಳಿದರೆ “ಒಪ್ಪಣ್ಣನ ಬೈಲು” ಹೇಳ್ತಾಂಗೆ… } ಇದು ೧೦೦% ನಿಜ ಡೈಮಂಡು ಭಾವಾ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪುಣಚ ಡಾಕ್ಟ್ರುಶ್ಯಾಮಣ್ಣಕಜೆವಸಂತ°ಮಾಲಕ್ಕ°ಗಣೇಶ ಮಾವ°ನೆಗೆಗಾರ°ಚೆನ್ನೈ ಬಾವ°ಶಾಂತತ್ತೆಶೀಲಾಲಕ್ಷ್ಮೀ ಕಾಸರಗೋಡುವೇಣೂರಣ್ಣಚುಬ್ಬಣ್ಣಅನು ಉಡುಪುಮೂಲೆಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಮಂಗ್ಳೂರ ಮಾಣಿವೆಂಕಟ್ ಕೋಟೂರುಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆಶಾ...ರೀvreddhiಶುದ್ದಿಕ್ಕಾರ°ದೊಡ್ಡಭಾವವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ