- ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ - August 28, 2014
- ಹೊಸತ್ತರ ಒಪ್ಪಿಗೊಂಬದು - June 11, 2014
- ಪುಸ್ತಕ ಪರಿಚಯ : How to talk with God - September 3, 2013
ಬೈಲಿಂಗೆ ನಮಸ್ಕಾರ 🙂
ಕಳುದ 2 ಸರ್ತಿದೇ ಭಯಂಕರ ತಲೆ ತಿಂದಿದ˚ ಇವ˚. ಈ ಸರ್ತಿ ಇನ್ನೆಂತ ಹೇಳ್ತನೋ ಹೇಳಿ ಗ್ರೇಶೆಡಿ. ಈಸರ್ತಿ 2 ಕಥೆಗಳ ತೈಂದೆ.. 🙂
ಒಂದನೇ ಕಥೆ:
ಸೋರುತಿಹುದು ಮನೆಯ ಮಾಳಿಗೆ.. ಅಜ್ಞಾನದಿಂದ 🙂
ಮಾಣಿಯ ಕಥೆ ಹೇಂಗಾಯಿದು ಹೇಳಿರೆ,
ಪೇಟೆಲಿ ಒಂದು ಮನೆ ಬಾಡಿಗೆಗೆ ಹಿಡುದ˚
ಒಂದು ಚೆಂದದ ದೊಡ್ಡ ಮನೆ.
ಯಾವ ಕುಂದು-ಕೊರತ್ತೆಯೂ ಇಲ್ಲದ್ದದು.
ಮಾಣಿಗೆ ರಜ್ಜ ಜಾಗ್ರತೆ ಕಮ್ಮಿ ಇದಾ, ಮನೆಯ ತುಂಬಾ ಚೆಂದಕೆ ಮಡಿಕ್ಕೊಂಬ ಅಭ್ಯಾಸ ಇತ್ತಿಲ್ಲೆ ಮದಲಿಂದಲೇ,
ಮಳೆಗಾಲಲ್ಲಿ ಮಾಡಿಂದ ನೀರು ಸೋರುಲೆ ಸುರು ಆತು.
ಮಾಣಿಗೆ ಅವನ ಕಣ್ಣ ನೇರಕ್ಕೆ ಮಾತ್ರ ಕಾಂಗಷ್ಟೆ.
ಕಣ್ಣಿನ ಎತ್ತರಂದ ನೀರು ಕೆಳ ಬೀಳ್ತಾ ಇಪ್ಪದು ಕಾಣ್ತವಂಗೆ..!!
ಎಂತಾತು ನೋಡ್ಲೆ ಪುರುಸೊತ್ತಿಲ್ಲೆ, ನೀರು ಬೀಳ್ತಲ್ಲಿಗೆ,
ಒಂದು ಕೌಳಿಗೆ ತಂದು ಮಡಗಿದ˚ – ತುಂಬಿತ್ತು, ಚೆಲ್ಲಿತ್ತು,
ರಜ್ಜ ದೊಡ್ಡ ಚೆಂಬು ಮಡಗಿದ˚ – ತುಂಬಿತ್ತು, ಚೆಲ್ಲಿತ್ತು.
ಮತ್ತೆ ರಜ್ಜ ದೊಡ್ಡ ಪಾತ್ರೆ – ತುಂಬಿತ್ತು ಅದುದೇ,
ಕಠಾರ ಮಡಗಿದ˚ – ಅದೂ ತುಂಬಿತ್ತು.
.
ಎಲ್ಲೋರೂ ನೋಡ್ತವು ಹೇಳಿ,
ಅಲ್ಯೂಮಿನಿಯಂ ಇದ್ದಲ್ಲಿ ಸ್ಟೀಲು ಮಡಗಿದ˚,
ಸ್ಟೀಲು ಸಣ್ಣಾತು – ಬೆಳ್ಳಿ ಬಂತು,
ಬೆಳ್ಳಿ ಮರ್ಯಾದೆ ಒಳಿಶುಲೆ ಸಾಕಾಯಿದಿಲ್ಲೆ (ಹತ್ರಾಣ ಮನೆಲೂ ಇತ್ತನ್ನೆ..!!) ಹೇಳಿ ಚಿನ್ನದ ಪಾತ್ರೆ ಮಡಗಿದ˚.
ಮತ್ತೆ ಅದಕ್ಕೆ ವಜ್ರದ ಮಾಲೆಯೂ ಹಾಕಿ ಆತು…!
.
ತೊಂದರೆ ಸರಿ ಆತೋ ಕೇಳಿರೆ..?
ಊಹೂ˚… ಪಾತ್ರೆ ಬದಲ್ಸುವ ಕೆಲಸ ಮಾತ್ರ ಆವುತ್ತಾ ಇಪ್ಪದು.
ಮಳೆಗಾಲ ಮುಗುದು – ಚೆಳಿ ಕಳುದು – ಮೈಗೆ ಬೆಶಿ ಮುಟ್ಟಿ ಚು˚ಯ್˚ ಹೇಳಿರೂ ನೀರು ಬೀಳುದು ನಿಂದಿದಿಲ್ಲೆ..
ಹೇ°..!
ಅಂಬಗ ಪರಿಹಾರ ಹೇಂಗೆ?
ತಲೆ ಮೇಲೆತ್ತಿ ನೋಡುದೇ ಪರಿಹಾರ ಹೇಳಿ ಆರೋ ಹೇಳಿದವು.
“ಅಪ್ಪೋ? ನೋಡ್ತೆ ಅಂಬಗ” ಹೇಳಿ ತಲೆ ಮೇಲೆ ಎತ್ತಿದ˚
“ಓ ಮಾಡು ಸೋರ್ತಾ ಇದ್ದು,
ನೀರು ಅಲ್ಲಿಂದ ಬತ್ತಾ ಇಪ್ಪದು,
ಬರೇ ಪಾತ್ರ ಮಡುಗಿರೆ ಸಾಲ…!!” ಹೇಳಿ ಕಂಡತ್ತು.
ಏಣಿ ಮೆಟ್ಳು ಹತ್ತಿ ಮಾಡಿಂಗೆ ಹೋದ˚..
ಎಲ್ಲಿ ಸೋರುತ್ತಾ ಇದ್ದೋ ಅಲ್ಲಿ ಗೆ ಹೋದರೆ ಮಾಣಿಗೆ ಗೊಂತಾವುತ್ತು, ಇನ್ನೂ ಮಾಡಿಲ್ಲಿ ನೀರು ಎರುಕ್ಕಿಯೊಂಡೇ ಇದ್ದು ಹೇಳಿ,
ನೀರು ಹೆರ ಹೋಪಲೆ ಹೇಳಿ ಮಾಡಿದ ಒಟ್ಟೆಲಿ ಕಸವು ತುಂಬಿಂಡು ಇರ್ತು,
ಭಯಂಕರ ಗೋಶ್ಬಾರಿ ಮಾಣಿ..!!
ಕಸವಿನ ತೆಗದ್ದನೇ ಇಲ್ಲೆ. ನೀರೇ ಎರ್ಕಿ ಹೆರ ಹೋಪಲೆ ಜಾಗೆ ಇಲ್ಲದ್ದೆ ಸೋರುಲೆ ಸುರು ಆದ್ದು.
ಅಯ್ಯೇ..
“ಶೆಲ್ಯಾಣತ್ತು…!!” ಹೇಳುಗು ಮಾಣಿಯ ಅಜ್ಜ° ಇದ್ದಿದ್ದರೆ,
ಒಂದು ಕಾಲಲ್ಲಿ ಗೋಶ್ಬಾರಿ ಆಗಿದ್ದದು ಆದಿಕ್ಕು. ಆದರೆ ಈಗ ಹೆಡ್ಡ˚ ಅಲ್ಲ.
ನೀರು ಹೋಪಲೆ ಅಡ್ಡಿ ಮಾಡಿಯೊಂಡಿದ್ದ ಕಸವಿನ ಎಲ್ಲ ತೆಗದ˚ 🙂
ನೀರು ಸರಾಗ ಹೋಪಲೆ ಶುರು ಆತು..!!
ನೋಡ್ತರೆ,
ನೀರಿಂಗೆ ಹೆರ ಹೋಪಲೆ ಜಾಗೆ ಸಿಕ್ಕಿಯಪ್ಪಗ ಮನೆಒಳ ಸೋರುದೂ ನಿಂದತ್ತು.
ಮತ್ತೆ?
ಮಾಡು ಶುಧ್ಧ ಮಾಡಿ,
ಕೆಳ ಇಳುದು, ಮನೆಲಿ ತುಂಬಿದ ನೀರೆಲ್ಲ ಹೆರ ಚೆಲ್ಲಿದ˚. 🙂
ಮನೆ ಶುಧ್ಧ ಆತು ಮದಲಿಂಗೆ ಬಪ್ಪಗ ಇದ್ದ ಹಾಂಗೇ…!!
ಈಗ ಮನೆ ಚೆಂದ ಇದ್ದು.
ಎಲ್ಲಿ ತೊಂದರೆ ಹೇಳಿ ಗೊಂತಪ್ಪದೇ ದೊಡ್ಡ ಸಮಸ್ಯೆ, ಅದು ಗೊಂತಾದರೆ ಮತ್ತೆ ಸಮಸ್ಯೆ ಬಿಡುಸುಲೆ ದೊಡ್ಡ ಕಷ್ಟ ಇಲ್ಲೆ.
***
ಎರಡ್ಣೇ ಕಥೆ:
ಮಾಣಿಯ ಮನೆಂದ ಹೆರ ಹಾಕಿದವಡ…
ಮಾಣಿಯ ಮನೆ ಚೆಂದ ಆದ್ದು ಕೇಳಿ ಎಲ್ಲೋರಿಂಗೂ ಖುಶಿ ಆದಿಕ್ಕು ಅಲ್ಲದಾ?
ಮತ್ತೆಂತಾತು?
ಮನೆ ಚೆಂದ ಆಯಿದು ಹೇಳಿ ಖುಶೀಲಿ ಇತ್ತಿದ˚ ಮಾಣಿ.
ಒಂದರಿ ಅವನ ಮನೆಗೆ ಕೆಲವು ನೆಂಟ್ರು ಬಂದವು.
ಅವನ ಕೆಲಸಲ್ಲಿ ಸಕಾಯ ಮಾಡಿದ ಹಾಂಗೆ ಮಾಡಿದವು.
ಮಾಣಿಗೂ ಹೊಸ ನೆಂಟ್ರುಗಳ ತುಂಬ ಖುಶಿ ಆತು.
“ಪ್ರಿಯ ಜನರು” ಹೇಳುವ listಂಗೆ ಸೇರಿದವು ಎಲ್ಲೋರೂ. 🙂
.
ಕೆಲವು ದಿನಲ್ಲಿ ಪ್ರಿಯಜನರ “ಪ್ರಿಯ ಜನಂಗೊ” ಮನೆಗೆ ಬಂದವು. ಮಾಣಿ ಅವರನ್ನೂ ಸ್ವಾಗತ ಮಾಡಿದ˚
ಅವುದೇ “ತುಂಬ ಪ್ರಿಯ”ರಾದವು.
.
ಅಲ್ಲಿಗೆ,
ಮಾಣಿಯ ಮನೆತುಂಬ ಜೆನವೋ ಜೆನ.
ರಜ್ಜ ದಿನ ಕಳುದತ್ತು.
ಮಾಣಿಯ ಮನೆಲಿ ಮಾಣಿಗೇ ಜಾಗೆ ಇಲ್ಲದ್ದ ಹಾಂಗಾತು.
ಹೇ˚..!!
“ಆರೆಲ್ಲ ಇದ್ದವು ಎನ್ನ ಮನೆಲಿ” ಹೇಳಿ ನೋಡ್ಲೆ ಸುರು ಮಾಡಿದ˚ ಮಾಣಿ.
ಚಳಿ ಕೂದತ್ತು ನೆಂಟ್ರಿಂಗೆ, “ಇವ˚ ಇನ್ನು ನಮ್ಮ ಮನೆಂದ ಹೆರ ಹಾಕಿರೆ?” ಹೇಳಿ.
ಅವ್ವು ಒಂದು ಕೆಣಿ ಮಾಡಿದವು.
ಮಾಣಿ ಆರೆಲ್ಲ ಇದ್ದವು ಹೇಳಿ ನೋಡ್ಲೆ ಸುಮಾಡುವಾಗ ಅವಂಗೆ ಬೇರೆ ಕೆಲಸ ಬಪ್ಪ ಹಾಂಗೆ ಮಾಡಿದವು.
ಪ್ರತೀ ಸರ್ತಿಯೂ ಹಾಂಗೇ ಆತು.
ಮತ್ತೆ ಮಾಣಿ ಪ್ರಯತ್ನವನೇ ಕೈ ಬಿಟ್ಟ˚.
ಒಂಟೆಗೆ ಜಾಗೆ ಕೊಟ್ಟ ಅರಬ್ಬನ ಹಾಂಗಾತು ಕತೆ 🙁
ಈಗೀಗ ಆರೆಲ್ಲ ಇದ್ದವು ಹೇಳಿ ನೋಡ್ಲೇ ಹೋವುತ್ತಾ˚ ಇಲ್ಲೆಡ..!!
“ಎನ್ನನ್ನೆ ಮನೆಂದ ಹೆರ ಹಾಕಿರೆ?” ಹೇಳುವ ಹೆದರಿಕೆಲಿ 🙁
ಪ್ರಿಯರೆಲ್ಲರೂ ಹಿತರಲ್ಲ, ಹೇಳುದು ಮಾಣಿಗೆ ಗೊಂತಪ್ಪಗ ತಡವಾಯಿದು 🙁
***
ನಾವೆಲ್ಲರೂ ಹೀಂಗೇ,
ಪ್ರತಿಯೊಂದು ಖಾಯಿಲೆಗೂ ಒಂದೊಂದು ಹೆರಾಣ ಕಾರಣ ಹುಡಕುತ್ತು. ಒಳ ನೋಡ್ಳೇ ಹೋವುತ್ತಿಲ್ಲೆ.
ನಮ್ಮ ಕಣ್ಣಿನ ನೇರಕ್ಕೆ ಮಾತ್ರ ನೋಡಿಯೊಂಡಿದ್ದರೆ ಸರಿಯಾದ ಉತ್ತರ ಇಡೀ ಆಗಿ ಕಾಣ.
ತಲೆ ಎತ್ತಿ ನೋಡಿರೆ,
ಮಾಡು ಸೋರುತ್ತಾ ಇಪ್ಪದು ಕಾಣ್ತು. ಮತ್ತೆ ತುಂಬ ಸುಲಭ. ಒಟ್ಟೆ ಮುಚ್ಚಿರಾತು. 🙂
ವೇಣೂರಕ್ಕ˚ ಮನ್ನೆ ಬಸಳೆ ಬೆಂದಿ ಮಾಡುದರ ಹೇಳಿ ಕೊಟ್ಟಿದು ಅಲ್ಲದಾ?
ಅದರ ನೋಡಿ ಮಾಡ್ಲೆ ನಾವು ಹೆರಡುತ್ತು ಹೇಳಿ ಮಡಿಕ್ಕೊಂಬೊ˚
ಎಂತೆಲ್ಲ ಬೇಕು ಹೇಳಿ ನಾವು ನೋಡುತ್ತು.
ಬೇರೆಲ್ಲ ಇದ್ದು, ಬಸಳೆ ಒಂದಿಲ್ಲೆ ಹೇಳಿ ಗೊಂತಾದರೆ ಸಾಕು..!!
ಚೀಲ ಹಿಡುಕ್ಕೊಂಡು ಸರ್ತ ತರಕಾರಿ ಅಂಗಡಿಗೆ ಹೋಕು. ಬ್ಯಾರಿಯ ಚೆರ್ಪಿನ ಅಂಗಡಿಗೆ ಹೋಗ.
ಅಲ್ಲಿ ಈಗ ಬಂದ fresh ಹಾಗಲಕಾಯಿ ಇದ್ದು ಹೇಳಿಂಡು ಅದರ ತೆಕ್ಕೊಂಗಾ ನಾವು?, ಇಲ್ಲೆ.
ನೇರವಾಗಿ ಸೊಪ್ಪು ಮಾರುವ ಬಾಯಮ್ಮನತ್ರೆ ಹೋಗಿ, ಬಸಳೆ ತೆಕ್ಕೊಂಡು ಬಕ್ಕು..
ಬೆಂದಿ ಮಾಡುಗು – ತಿಂಗು.
ತೃಪ್ತಿ ಅಕ್ಕು. ಅಲ್ಲದಾ? 🙂
ಅದಲ್ಲದ್ದೆ,
ಎಂತ ಬೇಕೂ ಹೇಳಿಯೇ ಗೊಂತಿಲ್ಲದ್ದರೆ, ಮನೆತುಂಬ ಕಸವೇ ತುಂಬಿಯೊಂಗು.
ಆರು ಹೇಂಗೆ? ಆರೆಲ್ಲ ಬೇಕು ಹೇಳಿ ಗೊಂತಿದ್ದರೆ ಅವ್ವು ಮಾತ್ರ ಇಕ್ಕು,
ಇಲ್ಲದ್ದರೆ ಬೇಡದ್ದ ನೆಂಟ್ರುಗೊ ಎಲ್ಲ ಬಂದು ನಮ್ಮನ್ನೇ ಮನೆಂದ ಹೆರ ಹಾಕುಗು.
ಇದು ವ್ಯಕ್ತಿಗೆ ಮಾತ್ರ ಅಲ್ಲ ಭಾವನೆಗೊಕ್ಕುದೇ ಅನ್ವಯ ಆವುತ್ತು.
ಕೋಪ, ಬೇನೆ, ದುಃಖ, ರೋಷ, ಮೋಹ, ಲೋಭ, ಹೆದರಿಕೆ ಹೇಳಿಪ್ಪ ಭಾವನೆಗೊ ಮೊದಮೊದಲು ಒಳ್ಳೆದು ಮಾಡುವ ಹಾಂಗೆ ಕಂಡ್ರೂ , ಅವು ಹಿತ ಅಲ್ಲ.
ನಮ್ಮೊಳ ಇಲ್ಲದ್ದ ಬೇನೆಯ ಒಳ ಬಪ್ಪಲೆ ಬಿಟ್ಟರೆ, ದೇಹ ಹೇಳುವ ಮನೆಲಿ ನವಗೇ (ಆನಂದ, ಶಾಂತಿ, ನೆಮ್ಮದಿ) ಜಾಗೆ ಇಲ್ಲದ್ದ ಹಾಂಗೆ ಅಕ್ಕು. ಅದರ ತೆಗವಲೆ ಹೋದರೆ, ಅಥವಾ ಒಂದು ಗಂಟೆ ಸ್ವಸ್ಥ ಕೂದು ನಮ್ಮೊಳ ಆರೆಲ್ಲ ಬೇಡದ್ದವು ಕೂಯಿದವು ಹೇಳಿ ನೋಡ್ಳೆ ಹೆರಟರೆ, ಕೂಡಲೇ ನಮ್ಮ ಮನಸ್ಸಿನ ಬೇರೆ ಕಡೆಂಗೆ ತೆಕ್ಕೊಂಡು ಹೋವುತ್ತು ಅದು.
ಕೆಲಸ ಅರ್ಧಲ್ಲೇ ಬಾಕಿ ಆವುತ್ತು.
ಮತ್ತೆ ಮತ್ತೆ ಕೂಪಲೇ ಹೆದರಿಕೆ ಆವುತ್ತು.
ಕೊನೆಗೆ ಮನಸ್ಸು ತುಂಬಿ ಹೆರ ಹೋಪಲೆ ಜಾಗೆ ಇಲ್ಲದ್ದೆ ಒಳವೇ ಸೋರುಲೆ ಸುರು ಆವುತ್ತು.
ಅದೇ ರೋಗ.
ಇದು ಗೊಂತಪ್ಪಲೆ ಬೇಕಾದ್ದು ಧ್ಯಾನ.
ಧ್ಯಾನ ಹೇಳಿರೆ ಇಷ್ಟೇ..!!
ನಾವು ಎಂತ? ನಮ್ಮ ತೊಂದರೆ ಎಂತ ಹೇಳಿ ನಾವೇ ತಿಳುಕ್ಕೊಂಬದು.
ಅದಕ್ಕೆ ನಾವು ಒಂದು ರಜ್ಜ ಹೊತ್ತು ಸುಮ್ಮನೆ ಕೂರೆಕು.
ಸಾಧಾರಣ ಮೂರು ಗಂಟೆ.
ಹೆದರಿಕೆ ಅಕ್ಕು, ಬೇಜಾರಕ್ಕು, ಕೋಪ ಬಕ್ಕು…!!
ಆದರೂ ಕೂರೆಕು,
ಎಂತ ಹೇಳಿರೆ ಸೋರುದರ ತಡೆಯೆಕು..!!
ಅದರಂದ ಮದಲು ಸೋರುತ್ತಾ ಇಪ್ಪದು ಎಲ್ಲಿಂದ ಹೇಳಿ ಗೊಂತಾಯೆಕು…!!
ಅದರಂದಲೂ ಮದಲು ಸೋರುತ್ತಾ ಇದ್ದು ಹೇಳಿ ಗೊಂತಾಯೆಕು..!!
***
ಮುಕ್ತಾಯ:
“ಪ್ರಿಯರೆಲ್ಲರೂ ಹಿತರಲ್ಲ” ಹೇಳಿತ್ತು ಮಾಣಿಯ ಮನಸ್ಸು.
ಮಾಣಿ ಹುಶಾರಿಯೇ.
ಅವ˚ ಈ ಸರ್ತಿ ಹೆದರಿದ್ದಾ˚ ಇಲ್ಲೆ.
ಪ್ರಿಯದ ಹಾಂಗೆ ಕಂಡದೆಲ್ಲ ಹಿತ ಆಯೆಕು ಹೇಳಿ ಇಲ್ಲೆ ಹೇಳಿ ಅವಂಗೆ ಗೊಂತಾತು.
ರಜ್ಜ ನೋಡಿದ˚ ಆರೆಲ್ಲ ಇದ್ದವು ಹೇಳಿ. “ಎಲ್ಲೋರೂ ಈಗಿಂದೀಗಳೇ ಮನೆಬಿಟ್ಟು ಹೆರ ಹೋಗಿ” ಹೇಳಿ ಒಂದರಿಯಂಗೇ ಹೇಳಿದ್ದಾ˚ ಇಲ್ಲೆ.
ರಜ್ಜ ರಜ್ಜವೇ ಅವರೊಟ್ಟಿಂಗೆ ಮಾತು ಕಮ್ಮಿ ಮಾಡಿಯೊಂಡು ಬಂದ˚
ಇವ˚ ಇನ್ನು ನಮ್ಮೊಟ್ಟಿಂಗೆ ಮತಾಡ˚ ಹೇಳಿ ಗೊಂತಪ್ಪಗ ಅವ್ವಾಗಿಯೇ ಒಂದೊಂದೇ ಮನೆ ಬಿಟ್ಟು ಹೋಪಲೆ ಸುರು ಮಾಡಿದವು.
ಈಗ ಮಾಣಿಯಮನೆಲಿ ಮಾಣಿಯೂ ಅವನ ಹಿತ ಬಯಸುವವ್ವೂ ಮಾತ್ರ..!!
ಖುಶೀಲಿ ಇದ್ದ˚ ಮಾಣಿ 🙂
—
ಮನಸ್ಸು ಮತ್ತು ಆರೋಗ್ಯ – ೧ ಇಲ್ಲಿದ್ದು
ಮನಸ್ಸು ಮತ್ತು ಆರೋಗ್ಯ- 2 ಇಲ್ಲಿದ್ದು
ನಿಂಗಳ,
ಮಂಗ್ಳೂರ ಮಾಣಿ 🙂
ಒಪ್ಪ೦ಗೊ ಮ೦ಗ್ಳೂರಣ್ಣಾ..
ತುಂಬ ಧನ್ಯವಾದ ಗಣೇಶಣ್ಣಾ…
ಎರಡು ದೃಷ್ಟಾಂತ ಕತೆಗೊ ಲಾಯಿಕ ಆಯಿದು.
ಚಿಂತನೆಗೆ ಎಡೆ ಮಾಡಿ ಕೊಡುವ ಲೇಖನ (ಕತೆಗೊ)
[ಈಗ ಮಾಣಿಯಮನೆಲಿ ಮಾಣಿಯೂ ಅವನ ಹಿತ ಬಯಸುವವ್ವೂ ಮಾತ್ರ..!!] – ಇದು ಹೀಂಗೆ ಮುಂದುವರಿಯಲಿ ಹೇಳುವ ಶುಭಾಕಾಂಕ್ಷೆಗೊ
ಧನ್ಯವಾದ ಅಪ್ಪಚ್ಚೀ..
ಪ್ರೀತಿ ಇರಳಿ 🙂
ಮಾಣಿ ಕಲ್ತ ವಿಷಯಂಗಳೂ… ಅದರ ಎಲ್ಲೋರಿಂಗೆ ಅರ್ಥ ಅಪ್ಪ ಹಾಂಗೆ ಚೆಂದಕೆ ನಿರೂಪಿಸುವ ಶೈಲಿಯೂ ಭಾರೀ ಒಳ್ಳೇದು ಇದ್ದು…
ಧನ್ಯವಾದ ಜಯಕ್ಕಾ… 🙂
ಎರಡೂ ಕತೆಗೋ ಲಾಯಿಕ್ಕಾಯಿದು.
ಧನ್ಯವಾದ ಮಾವಾ˚..
‘ಮಾಣಿಯ ಮನೆಯ ಮಾಳಿಗೆ ಸೋರುತಿಹುದು’, ‘ಮಾಣಿಯ ಮನೆಂದ ಹೆರ ಹಾಕಿದವಡ …’ ಶುದ್ದಿ ಓದಿ ಕುಶೀ ಆತಿದಾ ಹೇಳುವದು – ‘ಚೆನ್ನೈವಾಣಿ’
ಏ ಭಾವಾ..
ಖುಶಿಯಾದ್ದು.. ಕಥೆಯೋ? ಮಾಣಿಯ ಹೆರ ಹಾಕಿದ್ದು ಹೇಳುದೋ? 😉
ಆಗಾತೊ ಹೀಂಗೊಂದು ಒಕ್ಕಿ ಒಕ್ಕಿ ಕೇಳುವದು!
😉
ಶುದ್ಧೀಕರಣದ ಅಗತ್ಯವ ಬಿಂಬಿಸುವ ಲೇಖನಕ್ಕೆ ಅಭಿನಂದನೆ.
ಕಥೆ ಬಪ್ಪಲೆ ಪುರುಸೊತ್ತಿಲ್ಲೆ.. ಮಾವ˚ನ ಒಪ್ಪ ಬಂದಾತದಾ?? 😉
🙂
ಖುಶಿಯಾತು ಮಾವಾ˚.. 🙂