Oppanna.com

ಕಠೋಪನಿಷತ್ -ಚತುರ್ಥ ವಲ್ಲೀ

ಬರದೋರು :   ಶರ್ಮಪ್ಪಚ್ಚಿ    on   06/02/2012    3 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ಚತುರ್ಥ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕಠೋಪನಿಷತ್ (ಚತುರ್ಥ ವಲ್ಲೀ)

ಪರಾಂಚಿ ಖಾನಿ ವೃತೃಣತ್ ಸ್ವಯಂಭೂಸ್ತಸ್ಮಾತ್ ಪರಾಙ್ ಪಶ್ಯತಿ ನಾಂತರಾತ್ಮನ್

ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷ್ಯದಾವೃತ್ತ ಚಕ್ಷುರಮೃತತ್ವಮಿಚ್ಛನ್ ||೧||

ಪರಾಚಃ ಕಾಮಾನನುಯಂತಿ ಬಾಲಸ್ತೇ ಮೃತ್ಯೋರ್ಯಂತಿ ವಿತತಸ್ಯ ಪಾಶಮ್ |

ಅಥ ಧೀರಾ ಅಮೃತತ್ವಂ ವಿದಿತ್ವಾ ಧ್ರುವಮಧ್ರುವೇಷ್ಟಿಹ ನ ಪ್ರಾರ್ಥಯಂತೇ ||೨||

ಯೇನ ರೂಪಂ ರಸಂ ಗಂಧ ಶಬ್ದಾನ್ ಸ್ಪರ್ಶಾಂಶ್ಚ ಮೈಥುನಾನ್ |

ಏತೇನೈವ ವಿಜಾನಾತಿ ಕಿಮತ್ರ ಪರಿಶಿಷ್ಯತೇ ||ಏತದ್ವೈತತ್ || ೩||

ಸ್ವಪ್ನಾಂತಂ ಜಾಗರಿತಾಂತಂ ಚೋಭೌ ಯೇನಾನುಪಶ್ಯತಿ |

ಮಾಹಾಂತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ ||೪||

ಯ ಇಮಂ ಮಧ್ವದಂ ವೇದ ಆತ್ಮಾನಂ ಜೀವಮಂತಿಕಾತ್ |

ಈಶಾನಂ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ ||ಏತದ್ವೈತತ್||೫||

ಯಃ ಪೂರ್ವಂ ತಪಸೋ ಜಾತಮಧ್ಭ್ಯಃ ಪೂರ್ವಮಜಾಯತ |

ಗುಹಾಂ ಪ್ರವಿಶ್ಯ ತಿಷ್ಠಂತಂ ಯೋ ಭೂತೇಭಿರ್ವ್ಯಪಶ್ಯತ ||ಏತದ್ವೈತತ್||೬||

ಯಾ ಪ್ರಾಣೇನ ಸಂಭವತ್ಯದಿತಿರ್ದೇವತಾಮಯೀ |

ಗುಹಾಂ ಪ್ರವಿಶ್ಯ ತಿಷ್ಠಂತೀಂ ಯಾ ಭೂತೇಭಿರ್ವ್ಯಜಾಯತ ||ಏತದ್ವೈತತ್||೭||

ಅರಣ್ಯೋರ್ನಿಹಿತೋ ಜಾತವೇದಾ ಗರ್ಭ ಇವ ಸುಭೃತೋ ಗರ್ಭಿಣೀಭಿಃ |

ದಿವೇ ದಿವ ಈಡ್ಯೋ ಜಾಗೃವದ್ಭಿರ್ಹ

ವಿಷ್ಮದ್ಭಿರ್ಮನುಷ್ಯೇಭಿರಗ್ನಿಃ ||ಏತದ್ವೈತತ್|| ||೮||

ಯತಶ್ಚೋದೇತಿ ಸೂರ್ಯೋSಸ್ತಂ ಯತ್ರ ಚ ಗಚ್ಛತಿ |

ತಂ ದೇವಾಃ ಸರ್ವೇ ಅರ್ಪಿತಾಸ್ತದು ನಾತ್ಯೇತಿ ಕಶ್ಚನ ಏತದ್ವೈತತ್ ||೯||

ಯ ದೇವೇಹ ತದಮುತ್ರ ಯದಮುತ್ರ ತದನ್ವಿಹ |

ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾನೇವ ಪಶ್ಯತಿ ||೧೦||

ಮನಸೈವೇದಮಾಪ್ತವ್ಯಂ ನೇಹ ನಾನಾಸ್ತಿ ಕಿಂಚನ|

ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ ನಾನೇವ ಪಶ್ಯತಿ ||೧೧||

ಅಂಗುಷ್ಟಮಾತ್ರಃ ಪುರುಷೋ ಮಧ್ಯ ಆತ್ಮನಿ ತಿಷ್ಠತಿ |

ಈಶಾನೋ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ ||ಏತದ್ವೈತತ್||೧೨||

ಅಂಗುಷ್ಟಮಾತ್ರಃ ಪುರುಷೋ ಜ್ಯೋತಿರಿವಾಧೂಮಕಃ |

ಈಶಾನೋ ಭೂತಭವ್ಯಸ್ಯ ಸ ಏವಾದ್ಯ ಸ ಉ ಶ್ವಃ ||ಏತದ್ವೈತತ್|| ||೧೩||

ಯಥೋದಕಂ ದುರ್ಗೇ ವೃಷ್ಟಂ ಪರ್ವತೇಷು ವಿಧಾವತಿ |

ಏವಂ ಧರ್ಮಾನ್ ಪೃಥಕ್ ಪಶ್ಯಂಸ್ತಾನೇವಾನುವಿಧಾವತಿ||೧೪||

ಯಥೋದಕಂ ಶುದ್ಧೇ ಶುದ್ಧಮಾಸಿಕ್ತಂ ತಾದೃಗೇವ ಭವತಿ |

ಏವಂ ಮುನೇರ್ವಿಜಾನತ ಆತ್ಮಾಭವತಿ ಗೌತಮ ||೧೫||

ಕಠೋಪನಿಷತ್ ( ನಾಲ್ಕನೆಯ ವಲ್ಲಿ)-ಕನ್ನಡ ಗೀತೆ

ಹೊರಗೆ ಮುಖವಿರುವಂತೆ ರಚಿಸಿಹ ಇಂದ್ರಿಯಂಗಳ ಸ್ವಯಂಭು

ಅಂತರಾತ್ಮನು ಕಾಣನಿಂತಿರೆ; ದೃಷ್ಟಿಯೊಳಗಡೆ ತಿರುಗಿಸಿ

ಪ್ರತ್ಯಗಾತ್ಮನ ನೋಡುತಿರುವನು ಧೀರನೊಬ್ಬನು ಲೋಕದಿ ||೧||

ಬುದ್ಧಿ ಹೀನರು ಬಾಹ್ಯ ಸುಖವನು ಬಯಸಿ ಪಡೆವರು ಪಾಶವ

ಧೀರನೊಬ್ಬನು ಅಮೃತವುಂಬನು ಬಯಸನಾತನು ಕೋಶವ ||೨||

ರೂಪ ರಸವನು ಗಂಧ ಮೈಥುನ ಶಬ್ದ ಸ್ಪರ್ಶವು ಆತ್ಮನು

ತಿಳಿಯಲೀತೆರ ಉಳಿವುದಾವುದು? ಈತನೇ ಜೀವಾತ್ಮನು ||೩||

ಸ್ವಪ್ನದಂತ್ಯದಿ ಜಾಗ್ರತಾಂತ್ಯದಿ ಆತ್ಮ ಪ್ರಭೆಯಂದರಿಯಲು

ಧೀರನಾತನು ತಿಳಿಯಲಾತ್ಮನ ಶೋಕವೆಂದಿಗು ಹೊಂದನು ||೪||

ಜ್ಞಾನ ಜೀವನ ಸವಿದ ಜೀವವು ಯಾವ ಕಾಲಕು ಈಶನು

ಶೋಕವಿರದವ ಸನಿಹವಿರುವವ; ಈತನೇ ಜೀವಾತ್ಮನು||೫||

ತಪದಿ ಜನಿಸಿದ ಜಲದ ಮುಂಚೆಯೆ ಹೃದಯ ನೆಲಸಿಹ ಆತ್ಮನು

ಪಂಚಭೂತಗಳಿಂದ ಪ್ರಕಟಿತ; ಈತನೇ ಜೀವಾತ್ಮನು ||೬||

ದಿವ್ಯ ಶಕ್ತಿಯಾ ಖಂಡವಾಗಿಹ ಪ್ರಾಣದಿಂದಲೆ ವ್ಯಕ್ತವು

ಹೃದಯದೊಳಗಿನ ಶಕ್ತಿ ಚೇತನ; ಈತನೇ ಜೀವಾತ್ಮನು ||೭||

ಮನದ ಬುದ್ಧಿಯ ಗೂಢ ತತ್ವವು ತೆರದಿ ಗರ್ಭಿಣಿ ಗರ್ಭವು

ನಿತ್ಯ ಸ್ತುತ್ಯನು ಎಚ್ಚರಿರುವವ; ಈತನೇ ಜೀವಾತ್ಮನು ||೮||

ಯಾರಿಗಾಗಿಯೆ ಉದಿಸಿ ಮುಳುಗುವ ದಿವ್ಯ ಗುಣಗಳ ಸೂರ್ಯನು

ಮೀರಲಾರರು  ಯಾರು ಆತನ ; ಈತನೇ ಜೀವಾತ್ಮನು ||೯||

ದೇಹರಹಿತನೆ ದೇಹಧಾರಿಯು ಆತನೆಲ್ಲೆಡೆ ಆತ್ಮನು

ಆತ್ಮ ಬಹುವಿಧವೆಂದು ತಿಳಿದವ ಮೃತ್ಯುಪಾಶವ ಪಡೆವನು ||೧೦||

ಎಲ್ಲ ಆತ್ಮಗಳೊಂದೆಯೆನ್ನುತ ಬೇಕು ತತ್ವವು ಮನದಲಿ

ಆತ್ಮ ಬಹುವಿಧವೆಂದು ತಿಳಿದರೆ ಜನನ ಮರಣವು ಪುನರಪಿ ||೧೧|

ಅಂಗ ಅಂಗಗಳಲ್ಲಿ ಶಕ್ತಿಯ ನೀಡುವನು ಪರಮಾತ್ಮನು

ಈಶನರಿತರೆ ಬರದು ಬೇಸರ; ಈತನೇ ಜೀವಾತ್ಮನು ||೧೨||

ಹೊಗೆಯ ಸೂಸದ ಬೆಂಕಿ ತೆರದಲಿ ದೇಹದೆಲ್ಲೆಡೆ ವ್ಯಾಪ್ತನು

ಕಾಲಕೀಶ್ವರನಿಂದು ಎಂದಿಗು; ಈತನೇ ಜೀವಾತ್ಮನು ||೧೩||

ಸ್ಥಾನ ದುರ್ಗಮದಲ್ಲಿ ಸುರಿದಿಹ ನೀರು ಹಲವೆಡೆ ಹರಿವುದು

ಹಾಗೆ ಗುಣಗಳ ಹೊಂದಿ ರೂಪಗಳಲ್ಲಿ ತೋರುವನಾತ್ಮನು ||೧೪||

ಶುದ್ಧ ನೀರಿಗೆ ಶುದ್ಧ ನೀರನು ಬೆರಸಲೆರಡು ಶುದ್ದವು

ಆತ್ಮನರಿತಿಹ ಮುನಿಯು ಆತ್ಮನೆ, ಇದುವೆ, ಗೌತಮ, ಆತ್ಮನು ||೧೫||

॥ಓಂ ಶಾಂತಿಃ ಶಾಂತಿಃ ಶಾಂತಿಃ॥

ಪಂಚಮ ವಲ್ಲೀ ಇನ್ನಾಣ ವಾರಕ್ಕೆ

ತೃತೀಯ ವಲ್ಲಿಗೆ ಇಲ್ಲಿ ನೋಡಿ

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಕಠೋಪನಿಷತ್ -ಚತುರ್ಥ ವಲ್ಲೀ

  1. [ಎಲ್ಲ ಆತ್ಮಗಳೊಂದೆಯೆನ್ನುತ ಬೇಕು ತತ್ವವು ಮನದಲಿ
    ಆತ್ಮ ಬಹುವಿಧವೆಂದು ತಿಳಿದರೆ ಜನನ ಮರಣವು ಪುನರಪಿ] – ಗಮನಸೆಳೆದ ಸಾಲು. ಧನ್ಯವಾದ ಅಪ್ಪಚ್ಚಿಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×