Oppanna.com

ಮಳೆಗಾಲ ಬರೆಕ್ಕಾರೇ…

ಬರದೋರು :   ಶೇಡಿಗುಮ್ಮೆ ಪುಳ್ಳಿ    on   27/03/2012    21 ಒಪ್ಪಂಗೊ

ಕೊಟ್ಟಿಗೆ ಮಾಡಿರೆ
ತಟ್ಟೆಲಿ ಹಾಕೀ
ಹೊಟ್ಟೆಯ ಸೇರುಗು ಬೇಗನೆಯೇ
ಕಟ್ಟಿಗೆ ಹಾಕುವ
ಕೊಟ್ಟಿಗೆ ಮುರುದರೆ
ಕೊಟ್ಟಿಗೆ ಬೇಯಾ ಮನೆಯೊಳವೇ

ಅಡಿಕೇ ಜಾಲಿನ
ನಡುಕೇ ಹರಗಿದ
ಅಡಕೇ ಒಣಗಿದ್ದಿಲ್ಲೆನ್ನೇ
ಬಿಡುಸೀ ಮುಚ್ಚುಲೆ
ಮಡುಸೀ ಮಡಗಿದ
ಅಡಿಕೆಯ ಹೊದಿಕೆಯ ಹೊದದರುದೇ

ಕಟ್ಟಿಗೆ ಕಡುದೂ
ಅಟ್ಟಿಯ ಓಶೀ
ಕೊಟ್ಟಿಗೆ ಒಳದಿಕೆ ಮಡುಗಿದ್ದೂ
ಹಟ್ಟಿಗೆ ಬಜವಿನ
ಒಟ್ಟಿಗೆ ಮಾಡೀ
ಹಟ್ಟಿಯ ಹತ್ತರೆ ಮಡುಗಿದ್ದೂ

ಮಳೆಯಾ ಕಾಲದ
ಕೊಳೆಯಾ ರೋಗವು
ಹಳೆಯಾ ಮದ್ದಿಲಿ ಹೋವ್ತಿಲ್ಲೇ
ಬೆಳೆಯಾ ಕಾವಲೆ
ಕೊಳೆಯಾ ರೋಗಕೆ
ಒಳ್ಳೆಯ ಮದ್ದು ಬಯಿಂದನ್ನೇ

ಅದೆಲ್ಲ ಎಂತದೇ ಇರಲಿ…,

ಬಾಳೆಯ ಕಾಯಿಗೆ
ಬೇಳೆಯ ಸೇರುಸಿ
ನಾಳೆಯೆ ಬೆಂದೀ ಮಾಡುವಿರೋ
ಬೇಳೆಯ ಒಟ್ಟಿಗೆ
ಬಾಳೆಯ ಬುಡದಾ
ಒಳ್ಳೆಯ ಕೆಸವಿನ ದಡಿ ಹಾಕೀ

ಇದೂ “ಶರ” ಶೇಪು ಬಂಧ

21 thoughts on “ಮಳೆಗಾಲ ಬರೆಕ್ಕಾರೇ…

  1. ಶೇಪು ಮಾಣಿ,

    ಶೇಪುವಿನ ‘ಶರ’ ಮಳೆಗಾಲ ಬರೆಕ್ಕಾರೆ ಮಾಡ್ತ ಎಲ್ಲ ಕೆಲಸಂಗಳ ನೆಂಪು ಮಾಡಿತ್ತು. ಲಾಯ್ಕಾಯಿದು ಮಿನಿಯಾ ಬರದ್ದದು! ನಿನ್ನ ಬತ್ತಳಿಕೆಂದ ಇನ್ನುದೇ ‘ಶರಂ’ಗ ಬತ್ತಾ ಇರಲಿ…

  2. ಶೇಪುಭಾವನ ’ಶರ’ ಛಂದೋ ಬಂಧ ವಾರಂದ ವಾರಕ್ಕೆ ಗಟ್ಟಿ ಆವುತ್ತಾ ಇಪ್ಪದು ಬೈಲಿಂಗೆ ಹೆಮ್ಮೆಯ ಸಂಗತಿ.
    ಬರಳಿ, ಮುಂದೆಯೂ ಇದೇ ನಮುನೆ ಬತ್ತಾ ಇರಳಿ.

    ಮುಳಿಯ ಭಾವನ ಭಾಮಿನಿ, ಶೇಪು ಭಾವನ ಶರ, ಸುಭಗಬಾವನ ವಾರ್ಧಕ, ಬೋಚಬಾವನ ಪುಗ್ಗ…!!!
    ಛಂದೋಬಂಧ ವಿನೋದಿನೀ!!
    ಯಬೋ ಅದ್ಭುತ!!

    1. ನಿಜವಾಗಿಯೂ ಶೇಪು ಭಾವನಿಂದಾಗಿ ಇಂದು ಇಡೀ ಬೈಲೆ ಪದ್ಯಪಾನಲ್ಲಿ ಮುಳುಗಿದ್ದು… ಇನ್ನು ರಸಪಾನ ಮಾಡಿದ ಬೈಲು ‘ಸೋಮ ರಸ’ ಪಾನ ಮಾಡಿದ ಹಾಂಗೆ ಅಕ್ಕೋ ಗೊಂತಿಲ್ಲೇ… ಶೇಪು ಭಾವಂಗೆ ಅದೆಷ್ಟು ಕೃತಜ್ಹ್ನತೆ ಸಲ್ಲುಸಿರೂ ಸಾಲ…

      ಒಪ್ಪಣ್ಣ ಸಂಶಯ ನಿವಾರಣೆಗೋಸ್ಕರ ಕೇಳುತ್ತಾ ಇದ್ದೆ. http://padyapaana.com/?page_id=637 ಹೇಳಿದ ಪ್ರಕಾರ …”ಎಳೆಕೆಸವಿನ ದಡಿ ಸೇರುಸಿಯೇ” ಪ್ರಾಸ ತಪ್ಪು ಅಲ್ಲದ?

      ಯಾವುದೇ ಗಣವು ಲಗಂ (ಗಣಾದಿಯಲ್ಲಿ ಲಘು ಗುರು)ವಿನ್ಯಾಸಲ್ಲಿ ಆರಂಭ ಅಪ್ಪಲಾಗ ಹೇಳಿರೆ ಪ್ರತ್ಯೇಕವಾಗಿ ಜಗಣವೆ ಬರೆಕ್ಕು ಹೇಳಿ ಇಪ್ಪಲ್ಲಿ ಮಾಂತ್ರ ಜಗಣ ಉಪಯೋಗಿಸೆಕ್ಕು… ಒಳುದಲ್ಲಿ ಬಪ್ಪಲಾಗ ಹೇಳಿಯೋ?

      1. ಅಕ್ಕೋ ಇದಾ ಈ ಕೆಳಾಣ ದ್ದರಲ್ಲಿ ಪ್ರಾಸ ಸರಿ ಇದ್ದೋ ಇಲ್ಲೆಯೋ ನಿಂಗಳ ಪ್ರಕಾರ….
        ವೇದ ಪುರುಷನ ಸುತನ ಸುತನ ಸ
        ಹೋದರನ ಹಮ್ಮಗನ ಮಗನ ತ
        ಳೋದರಿಯ ಮಾತುಳನ ಮಾವನ ನತುಳಭುಜಬಲದಿ
        ಕಾದು ಗೆಲಿದನನಣ್ಣನವ್ವೆಯ
        ನಾದಿನಿಯ ಜಠರದಲಿ ಜನಿಸಿದ
        ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ

          1. ಹಾಂಗಾರೆ ಈ ಎಳೆಕೆಸವಿನದಡಿಲಿ ಎಂತ ಸಮಸ್ಯೆ ಅರ್ಥ ಆತಿಲ್ಲೆನ್ನೆ ಅಕ್ಕೋ ರಜ್ಜ ವಿವರುಸುತ್ತಿರೋ ಎಡಿಗಾರೆ ಸರಿ ಮಾಡುವ ಪ್ರಯತ್ನ ಮಾಡ್ತೆ

          2. ಬಾ,ಬೇ,ನಾ ಎಲ್ಲ ಇದ್ದ ಹಾಂಗೆ ‘ಎ’ ದೀರ್ಘ ಸ್ವರ ಬರೆಕ್ಕು

          3. ಅಕ್ಕಂಗೆ ಧನ್ಯವಾದಂಗೊ ,
            ಆದರೆ ಅದರಲ್ಲಿಯೂ ಒಂದು ಸಣ್ಣ ತಿದ್ದುಪಡಿ ಇದ್ದಡ ಅಕ್ಕೋ ಅದು ಸ್ವರ ದೀರ್ಘ ಅಥವಾ ಹೃಸ್ವ ಹೇಳಿ ಅಲ್ಲ ಸುರುವಾಣ ಅಕ್ಷರದ ಮಾತ್ರೆ ಒಂದೇಹಾಂಗೆ ಇರೆಕ್ಕು ಹೇಳಿ ಅಡಾ. ತಿದ್ದಿದ್ದೆ ಈಗ ನೋಡಿಕ್ಕಿ

          4. ಮೇಲೆ ಕೊಟ್ಟ ಲಿಂಕ್ ನ ಪ್ರಕಾರ ‘ಗಜ’ ಪ್ರಾಸಲ್ಲಿ ಇಪ್ಪಗ ದೀರ್ಘ ಸ್ವರವೇ ಬರೆಕು…

            ಎಂತದೆ ಆಗಲಿ ಪ್ರಾಸಕ್ಕೋಸ್ಕರ ಚರ್ಚಿಸಿ ಪದ್ಯದ ಅಂದವ ಹಾಳು ಮಾಡುದು ಎನ್ನ ಉದ್ದೇಶ ಅಲ್ಲ. ಎಂತಕೆ ಹೇಳಿರೆ ಪ್ರಾಸ ಇಪ್ಪದೇ ಪದ್ಯದ ಸೊಗಸು ಹೆಚ್ಚುಸುಲೇ. ಮತ್ತೆ ಇತ್ತೀಚಿಗೆ ಸುರುಮಾಡಿ ಇಷ್ಟು ಅಂದದ ಪದ್ಯವ ‘ಶೇಪು ಬಂಧ’ ಲ್ಲಿ ಬಂಧಿಸೆಕ್ಕಾರೆ ಎಷ್ಟು ಶ್ರಮ ಇದ್ದು ಹೇಳಿಯೂ ಗೊಂತಿದ್ದು… ಅಭಿನಂದನೆಗೋ…

            ಇಲ್ಲಿ ನಿಂಗಳತ್ರೆ ಚರ್ಚಿಸಿದ್ದು ಎಂತಕೆ ಹೇಳಿರೆ ಆ ಮೂಲಕ ಪ್ರಾಸ ವಿಚಾರ ನಮಗೂ ಗೊಂತಾದ ಹಾಂಗೆ ಆತು… ಓದುವವಕ್ಕೆ ಎಲ್ಲ ಗೊಂತಾದ ಹಾಂಗೆ ಆತು… ಆ ಒಂದು ಉದ್ದೇಶಂದ ಮಾಂತ್ರ ಚರ್ಚಿಸಿದ್ದು…ದಯವಿಟ್ಟು ತಪ್ಪು ತಿಳುಕ್ಕೊಲ್ಲೆಡಿ…ತುಂಬಾ ಧನ್ಯವಾದಂಗ…

    2. @ ಮುಳಿಯ ಭಾವನ ಭಾಮಿನಿ, ಶೇಪು ಭಾವನ ಶರ, ಸುಭಗಬಾವನ ವಾರ್ಧಕ, ಬೋಚಬಾವನ ಪುಗ್ಗ…!!!
      ಛಂದೋಬಂಧ ವಿನೋದಿನೀ!!
      ಯಬೋ ಅದ್ಭುತ!!

      ಅಂಬಗ ಯೆನ್ನ ಬೋಪು…….????? ಪರಾಮೋಶಿ ಬಿಟ್ಟುಹೋದ್ದಾ ಅಲ್ಲಾ ಬೇಕೋಳಿ ಬಿಟ್ಟದಾ…. ? ಕೋಪ…. 🙁

      1. ಯೇ… ಬಾವಾ…. ಛೆ ಛೆ ಬೈಲಿಂಗೆ ಬಂದಮತ್ತೆ ಹಾಂಗೆಲ್ಲ ಕೋಪುಸಲಾಗಪ್ಪ. ಬನ್ನಿ ಒಂದು ಶರ್ಬತ್ತು ಕುಡಿವೋ ಮದಾಲು. ಮತ್ತೆ ಕೂದೊಂಡೇ ಮಾತಾಡುವೋ. ಬೋಪು ಇದ್ದಪ್ಪ ಇದ್ದು. ಸೋಪು ಹಾಕಿ ತೊಳದು ಬಿಡ್ತಿಲ್ಲೆ.

      2. ಅವರದ್ದೆಲ್ಲ ಬರೆ ಅದ್ಭುತ.
        ನಿಂಗಳದ್ದು ರಜ್ಜ ಅತಿಯೇ….
        ಅತಿ ಅದ್ಭುತ..!!!

        ಚಾ ಕುಡಿವಲೆ ನಾವುದೆ ಇದ್ದು ಭಾವ ಒಟ್ಟಿಂಗೆ. ಒಂದು ಬನ್ಸುದೆ ಕೊಟ್ಟಿಕ್ಕುವೋದು, ಕೋಪ ತಣಿವಲೆ.

  3. ಪ್ರಾಸದೊಟ್ಟಿಂಗೆ ಮಳೆಗಾಲದ ಮದಲಾಣ ಶೇಪು ಬಂಧ ಸೊಗಸಾಯಿದು.

  4. ಶೇಪು ಸುರುಮಾಡಿ
    ಶೇಪು ಕಲುತೆ ನಾ
    ವಾಪಸು ಬಂಧನ ಗೊಂತಿಲ್ಲೇ |
    ತಾಪದಿ ಬಳಲಿರು
    ಕೋಪಗೊಳದ್ದೇ
    ಯೋಪ ಪದ ಪೂರ ಆತನ್ನೇ ||

    ಎರಡು ದಿನಂದ ಪದ್ಯಪಾನಲ್ಲಿ ವ್ಯಾಕರಣ ಪಾಠ ಚೂರು ಚೂರು ಕಲ್ತಿದೆ…”ಎಳೆಕೆಸವಿನ ದಡಿ ಸೇರುಸಿಯೇ” ಪ್ರಾಸ ದೋಷವೋ ಅಲ್ಲ ಸರಿ ಇದ್ದೋ ಗೊಂತಿಲ್ಲೇ…

    ಪದ್ಯ ಲಾಯಕಾಯಿದು ಹೇಳಿ ಅಭಿನಂದನೆಗೋ…
    ನಿಂಗ ಶೇಪು ಬಂಧ ಸುರುಮಾಡಿ ಚೂರು ವ್ಯಾಕರಣ ಕಲಿವ ಹಾಂಗೆ ಆತು ಹೇಳಿ ಧನ್ಯವಾದಂಗ…

    1. ಅಕ್ಕೋ ಪ್ರಾಸ ಸರಿಯೋ ತಪ್ಪೋ ಹೇಳುವಷ್ಟಕ್ಕೆ ನವಗೂ ಗೊಂತಿಲ್ಲೆ
      ಆದರೆ ನಿಂಗೊ ಒಪ್ಪ ಕೊಟ್ಟದೂ ನಾವು ಬರದಾಂಗಿರ್ತದು ಹೇಳಿ ಆದರೆ ಅದರಲ್ಲಿ ಜಗಣ(ಲ ಗು ಲ) ಬಪ್ಪಲಾಗ ಹೇಳ್ತ ದರ ನೆನಪು ಮಡಿಕ್ಕೊಳೆಕ್ಕು…
      ಒಪ್ಪಕ್ಕೆ ಧನ್ಯವಾದಂಗೊ…..

      1. ಯಾವುದೇ ಗಣವು ಲಗಂ (ಗಣಾದಿಯಲ್ಲಿ ಲಘು ಗುರು)ವಿನ್ಯಾಸಲ್ಲಿ ಆರಂಭ ಅಪ್ಪಲಾಗ ಹೇಳಿ ಗೊಂತಾತು… ಧನ್ಯವಾದ…

  5. ತಪ್ಪಿದ್ದು….. ಉದ್ದಿ ಬರೆ ಭಾವಾ…..

    1. ಏ ಭಾವಾ ಅಂತೂ ಜಗ್ಗಣ್ಣನ ಹುಡುಕ್ಕಿದೆ ನೀನು ನಿನ್ನ ಇನ್ನು ಏವದಾರು ಬೇಂಕಿಂಗೆ ಮೇನೇಜರೇ ಮಾಡೆಕಶ್ಟೇ, ಇದಾ ಉದ್ದಿ ಬರದ್ದೆ ಸರಿ ಆಯಿದೋ ನೋಡಿಕ್ಕು ಎಡಿಗಾರೆ ಒಂದಾರಿ…
      ಧನ್ಯವಾದಂಗೊ.

  6. ಶರ ಛಾಪು ಬಂಧ ಇದೆಲ್ಲ ನವಗರಡಿಯ ಭಾವ.

    ಕಟ್ಟಿಗೆ ಉರಿಸಿ ಕೊಟ್ಟಿಗೆ ಮಾಡಿದ್ದಂತೂ ಲಾಯಕ ಆಯ್ದು ಹೇಳಿತ್ತು – ‘ಚೆನ್ನೈವಾಣಿ’

    1. ಭಾವಾ, ಇದಾಕೊಟ್ಟಿಗಗೆ ಕೂಡುಲೆ ಕುಜುವೆ ಕೊದಿಲುದೇ ಇದ್ದಡಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×