Oppanna.com

ಸೋಮೇಶ್ವರ ಶತಕ – (6-10)

ಬರದೋರು :   ಶರ್ಮಪ್ಪಚ್ಚಿ    on   10/10/2012    12 ಒಪ್ಪಂಗೊ

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು.
ಕಳುದ ಸರ್ತಿ ಪ್ರಕಟ ಆದ ಸುರುವಾಣ ಐದು ಪದ್ಯಂಗೊ ಇಲ್ಲಿದ್ದು.
ಮುಂದಾಣ (6 – 10) ಈ ಸರ್ತಿ. ಎಲ್ಲೋರುದೇ ಓದಿ ಅರ್ತುಗೊಂಬೊ!

ಸೋಮೇಶ್ವರ ಶತಕ:

ಗಮಕ ವಾಚನ: ಶ್ರೀಶಣ್ಣ
ಅರ್ಥ ವಿವರಣೆ: ಶರ್ಮಪ್ಪಚ್ಚಿ


Someshwara Shataka (6-10): Shreesha Hosabettu

ಸೋಮೇಶ್ವರ ಶತಕ (6-10):

ಪಳಿಯರ್ ಬಂಜೆಯೆನುತ್ತ ಪುತ್ರವತಿಯೆಂಬರ್ ದೇವ ಪಿತ್ರರ್ಚನಂ |
ಗಳಿಗಂ ಸುವ್ರತಕಂ ವಿವಾಹಕೆ ಶುಭಕ್ಕಂ ಯೋಗ್ಯಳನ್ನೋದಕಂ ||
ಗಳ ನೀಡಲ್ ಕುಲಕೋಟಿ ಮುಕ್ತಿದಳೆಗುಂ ಸುಜ್ಞಾನದೊಳ್ ಕೂಡಿದಾ |
ಕುಲವೆಣ್ಣಿಂಗೆಣೆಯಾವುದೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೬||

ಒಳ್ಳೆ ಕುಲಲ್ಲಿ ಹುಟ್ಟಿದ ಹೆಣ್ಣು ಬಂಜೆ ಆದರೂ, ಆರೂ ಅವರ ಬಂಜೆ ಹೇಳಿ ಹೀಯಾಳುಸವು. ಅವರನ್ನೂ ಮಕ್ಕೊ ಇಪ್ಪವರ ಹಾಂಗೆ ತಿಳ್ಕೊಂಡು ಮರ್ಯಾದೆ ಕೊಡುಗು.
ದೇವರ ಪೂಜೆ, ಪಿತೃ ಕಾರ್ಯ,  ವಿವಾಹ, ವ್ರತಾಚರಣೆ ಎಲ್ಲದರಲ್ಲಿಯೂ ಅವು ಭಾಗವಹಿಸಲೆ ಅಕ್ಕು.  ಅವು ಅನ್ನ, ನೀರು ದಾನ ಮಾಡಿರೆ ಅವರ ವಂಶ ಮುಕ್ತಿ ಹೊಂದುತ್ತು. ಒಳ್ಳೆ ಜ್ಞಾನ ಇಪ್ಪ ಕುಲವತಿಯಾದ ಹೆಣ್ಣಿಂಗೆ ಸರಿ ಸಮಾನರು ಆರು ಇದ್ದವು?

~

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ದರ್ಮದಾ |
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದಂ |
ಸುತನೇ ಸದ್ಗತಿದಾತನೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೭||

ನಮ್ಮ ಹಿತವನ್ನೇ ಬಯಸುವವ ನಿಜವಾದ ನೆಂಟ, ಕಾಪಾಡುವವನೇ ತಂದೆ, ಧರ್ಮ ಮಾರ್ಗಲ್ಲಿ ನೆಡಕ್ಕೊಂಡು ಹೋಪ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ. ಒಂದಕ್ಷರವನ್ನಾದರೂ ಕಲಿಸಿದವ ಆದರೂ ಅವ° ಗುರುವೇ. ವೇದಂಗಳ ಪಠಿಸಿ ಅನುಷ್ಠಾನಲ್ಲಿ ಇಪ್ಪವನೇ ಮುನಿ,  ಒಳ್ಳೆಯ ವಿದ್ಯೆಯೇ ಪುಣ್ಯ ಸಂಪಾದುಸಲೆ ದಾರಿ, ಸದ್ಗತಿಗೆ ಮಗನೇ ಕಾರಣ.

~

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |
ನಿಜ ಮಂತ್ರೀಶ್ವರ  ತಂದೆ ತಾಯಿ ಸಲಹಲ್ ಬಲ್ಲಾತನೇ ಧಾರ್ಮಿಕಂ ||
ಭಜಕಂ ದೈವ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೮||

ದೇಶದ ಪ್ರಜೆಗಳ ಸರಿಯಾಗಿ ನೋಡಿಗೊಂಬವನೇ ನಿಜವಾದ ಅರಸ°, ಲಂಚಕ್ಕೆ ಆಸೆ ಮಾಡದ್ದೆ ತನ್ನ ಕೆಲಸಂಗಳ ಮಾಡುವವನೇ ಯೋಗ್ಯನಾದ ಮಂತ್ರಿ,  ಅಬ್ಬೆ ಅಪ್ಪನ ಎಲ್ಲಾ ಕಾಲಂಗಳಲ್ಲಿಯೂ ಸರಿಯಾಗಿ ನೋಡಿಯೊಂಬವನೇ ಧರ್ಮಿಷ್ಠ°, ದೇವರಲ್ಲಿ ನಂಬಿಕೆ, ಭಕ್ತಿ ಇಪ್ಪವನೇ ದೈವ ಭಕ್ತ, ಹೆದರಿಕೆ ಇಲ್ಲದ್ದೆ ಬಂದ ಕಷ್ಟಂಗಳ ಎದುರುಸುವವನೇ ನಿಜವಾದ ಸೈನಿಕ, ಸಚ್ಚಾರಿತ್ರ್ಯ ಇಪ್ಪವನೇ ದ್ವಿಜ (ಬ್ರಾಹ್ಮಣ)

~

ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್ ನಕ್ಷತ್ರವೆಷ್ಟಾದೊಡಂ |
ದೊರೆಯೇ ಚಂದ್ರಗೆ ಜೀವರತ್ನಕೆಣೆಯೇ ಮಿಕ್ಕಾದ ಪಾಷಾಣಗಳ್ ||
ಉರಗೇಂದ್ರಂಗೆ ಸಮಾನಮೊಳ್ಳೆಯೆ ಸುಪರ್ಣಂಗೀಡೆ ಕಾಕಾಳಿ ಸ |
ಕ್ಕರೆಗುಪ್ಪಂ ಸರಿಮಾಳ್ಪರೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯||

ಮಿಂಚು ಹುಳುಗೊ ಎಷ್ಟು ಇದ್ದರೂ ಸೂರ್ಯಂಗೆ ಸರಿ ಸಮಾನ ಅಕ್ಕೋ? ಇರುಳು ನಕ್ಷತ್ರಂಗೊ ಎಷ್ಟು ಇದ್ದರೂ ಚಂದ್ರಂಗೆ ಸರಿ ಸಮಾನ ಅಕ್ಕೋ? ಎಲ್ಲಾ ಕಲ್ಲುಗಳ ಜೀವರತ್ನಕ್ಕೆ ಹೋಲುಸಲೆ ಎಡಿಗೋ? ನೀರೊಳ್ಳೆ, ಆದಿಶೇಷಂಗೆ ಸಮಾನವೋ? ಕಾಕೆಗಳ ಗುಂಪು ಗರುಡಂಗೆ ಸರಿ ಸಾಟಿಯೋ?  ಉಪ್ಪು ಮತ್ತೆ ಸಕ್ಕರೆಯ ಹೋಲುಸಲೆ ಎಡಿಗೋ?

~

ಧರಣೀಶಂ ಧುರ ಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವೀ |
ಶ್ವರ ಸಂಗೀತದಿ ಜಾಣನಾಗೆ ಸುಕಲಾಪ್ರೌಢಂಗಿರಲ್ ಪ್ರೌಢೆವೆಣ್ ||
ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ |
ದೊರೆವೋಲ್ ಚಿನ್ನಕೆ ಸೌರಭಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೦||

ರಾಜ್ಯ ಆಳುತ್ತ ದೊರೆಗೆ ಯುದ್ದಲ್ಲಿ ಧೈರ್ಯ ಇರೆಕು. ಧನಿಕಂಗೆ ದಾನ ಮಾಡುವ ಬುದ್ಧಿ ಇರೆಕು. ಕವಿಗೆ ಸಂಗೀತಲ್ಲಿ ಪಾಂಡಿತ್ಯ ಇರೆಕು. ಲಲಿತ ಕಲೆಗಳಲ್ಲಿ ನಿಪುಣ ಆದವಂಗೆ ಪ್ರೌಢೆಯಾದ ಹೆಂಡತಿ ಇರೆಕು. ಲೆಕ್ಕ ಪತ್ರ ಬರೆತ್ತವಂಗೆ ಧರ್ಮಲ್ಲಿ ಹೋಪ ಸದ್ಬುದ್ಧಿ ಇರೆಕು. ಸಾಮ, ದಾನ, ಭೇದ, ದಂಡ ಹೇಳ್ತ ಚತುರೋಪಾಯಂಗಳ ಮಂತ್ರಿ ಸರಿಯಾಗಿ ತಿಳ್ಕೊಂಡು ಬೇಕಾದಲ್ಲಿ ಉಪಯೋಗಿಸಲೆ ಅನುಭವಸ್ಥನೂ ಆಗಿದ್ದರೆ, ಚಿನ್ನಕ್ಕೆ ಸುವಾಸನೆ ಕೂಡಾ ಸೇರಿದ ಹಾಂಗೆ ಅಕ್ಕು.

~*~

(ಇನ್ನೂ ಇದ್ದು)

ಸೋಮೇಶ್ವರ ಶತಕದ ಮೊದಲಾಣ ಕಂತು ಇಲ್ಲಿದ್ದು (ಸಂಕೊಲೆ) 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

12 thoughts on “ಸೋಮೇಶ್ವರ ಶತಕ – (6-10)

  1. ಮೃಡಾತಾಂ ಭಿಕ್ಷೆಯ ಬೇಡೆನೆ ದ್ರುಪಗೆ ತಾ ಟೊಳ್ಕಾಗಳೇ ಪಾಂಡವರ್
    I want to know the meaning of this sentence

  2. ಶತಕವ ಅರ್ಥದೊಟ್ಟಿಂಗೆ ಚೆಂದಕೆ ಹಾಡಿದ ಶರ್ಮಪ್ಪಚ್ಚಿ ಶ್ರೀಶಣ್ಣರ ಜೋಡಿಗೆ ಮತ್ತೊಂದರಿ ಅಭಿನಂದನೆಗೊ. ಬುದ್ದಿ ಮಾತಿನ ಜೆತೆಲಿ ರಂಜನೆಯೂ ಬೈಲಿಂಗೆ ಸಿಕ್ಕಿತ್ತು. ಧನ್ಯವಾದಂಗೊ.

  3. ಚೊಲೋಗಿದ್ದು, ಧನ್ಯವಾದ.
    ಕವಿಯ (ಸೋಮೇಶ್ವರ?) ಪರಿಚಯ ಮಾಡ್ಸಿದ್ರೆ ಚೆನಾಗಿರ್ತಿತ್ತು,ಮು೦ದಿನ ಸ೦ಚಿಕೇಲಿ ನಿರೀಕ್ಷೆ ಮಾಡ್ಲಕ್ಕಾ?…

  4. ತು೦…..ಬಾ……ಬಾ ಒಳ್ಲೆದಾಯಿದು ಭಾವಯ್ಯ ಹಾಡಿದ್ದು ಇ೦ಪಾಗಿಕೇಳಿತ್ತು ಹಿಂಗಿದ್ದು ಇನ್ನೂ ಬರಲಿ

  5. ಸರಳವಾಗಿ ವಿವರಿಸಿ ಮನ ತ೦ಪು ಮಾಡಿದ ಶರ್ಮಪ್ಪಚ್ಚಿಗೆ, ಚೆ೦ದದಲ್ಲಿ ಹಾಡಿ ಕಿವಿ ತ೦ಪು ಮಾಡಿದ ಶ್ರೀಶಣ್ಣ೦ಗೆ ಧನ್ಯವಾದ೦ಗೋ…

  6. ಒಳ್ಳೆಕೆಲಸ ಶರ್ಮಪ್ಪಚ್ಚಿ. ಲಾಯ್ಕ ಆಯ್ದು . ಶ್ರೀಶಣ್ಣನೂ ಲಾಯ್ಕ ಹಾಡಿದ್ದವು. ಅಭಿನಂದನೆಗೊ.

  7. ನಮಸ್ಕಾರಂಗೊ,ಪುಲಿಗೆರೆಯ ಸೋಮನಾಥನ ಪದ್ಯಂಗಳ ಎಲ್ಲೊರ ಕೆಮಿಗೆ ಮುಟ್ಟುಸಿದ ಶ್ರೀಶಂಣಂಗೆ ಮತ್ತೆ ವಿವರಣೆ ನೀಡಿದ ಶರ್ಮಪ್ಪಚ್ಹಿಗೆ ಧನ್ಯವಾದಮ್ಗೊ.ಎನ್ನ ಮಾಸ್ತ್ರು ಕ್ಲಾಸಿಂಗೆ ಬಪ್ಪಗ ಈ ಪದ್ಯಂಗಳ ಹೇಳಿಯೊಂಡೆ ಬಕ್ಕು.ಈಗಲೂ ಕೆಮಿಗೆ ಕೇಳ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×