- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
1999 ನೆ ಇಸವಿಲಿ ಶ್ರೀ ಗುರುಗೊ ಪೀಠಾರೋಹಣ ಮಾಡಿದ ಸಮೆಯಲ್ಲಿ ಬರದ ಕವನ
ಏರಿದೊವು ಸ್ವಾಮೀಜಿ ಧರ್ಮಪೀಠ
ಹೇಂಗೆ ವರ್ಣಿಸಲಾನು ತೆರೆದ ಪುಟ ಪುಟ ॥
ಶಂಕರಾಚಾರ್ಯನ ಪರಂಪರೆಯ ಖ್ಯಾತ
ಇವರದ್ದೆ ಸರದಿ ಮೂವತ್ತಾರನೆ ಸಂತ॥
ಪ್ರತಿಯೊಂದು ಶುಭಸಮಯಲ್ಲೂ ಗುರುಕಾಣಿಕೆ
ಪ್ರತಿಯಾಗಿ ನಮ್ಮ ಗುರಿಕ್ಕಾರನತ್ರೆ ಹರಕೆ॥
ಪೂರ್ವಿಕರಿಂದ ಬಂದ ಈ ಸಂಸ್ಕೃತಿ
ಪ್ರತಿರೂಪ ಮನಸ್ಸಿಲ್ಲಿ ಆಶೀರ್ವಾದ ಪಡೆತ್ತಿ ॥
ಹನ್ನೆರಡು ವರ್ಷಕ್ಕೊಂದು ಹಳ್ಳಿ ಹಳ್ಳಿಗೆ ಸವಾರಿ
ಹರಸಲೆ ಮಾಡೆಕ್ಕು ಪಾದ ಪೂಜೆಗೆ ತಯಾರಿ॥
ಸೀಮೆ ಮಠಂಗಳಲ್ಲಿ ಪರಿವಾರ ಸಹಿತ ಮೊಕ್ಕಾಂ
ಸರ್ವ ಹವ್ಯಕರೆಲ್ಲ ಫಲ ಮಂತ್ರಾಕ್ಷತೆ ಬೇಡಿ ತಪ್ಪೊ°॥
ಜ್ಞಾನ ಪೀಠಂದ ಆಶೀರ್ವಚನ ತೊರೆಯಾಗಿ
ಜ್ಞಾನ ದಾಹದವಕ್ಕೆ ಸಿಹಿ ನೀರ ಬುಗ್ಗೆಯಾಗಿ ॥
ಗುರುನೆಲೆ ಇಲ್ಲದ್ರೆ ಬೇರೆಂತು ನೆಲೆ ಇಲ್ಲೆ
ಹೇಳುತ್ತ ಇರ್ತು ನಾವು ಹಿರಿಯರಾ ಸೊಲ್ಲಲ್ಲೆ॥
ಗುರುಹಿರಿಯರು ಬೇಕು ನಮ್ಮ ಗುರಿ ಸಾಧನಗೆ
ಹರಸಿಕೊಡುಗವು ನಮ್ಮ ಸಕಲ ಶ್ರೇಯಸ್ಸಿಂಗೆ॥
~*~*~
ಸೂ: ಪರಂಪರಾ ಪಟ, ಹರೇರಾಮ ಬೈಲಿಂದ:
ಹರೇ ರಾಮ.
ಲಾಯಕ ಕವನ.” ಗುರುವಿನ ಗುಲಾಮನಾಗುವ ತನಕ……” ಹೇಳ್ತ ದಾಸ ವಾಣಿ ನೆಂಪಾತು.
ಹರೇ ರಾಮ।
ಚೊಲೋ ಆಯ್ದು ವಿಜಯತ್ತೆ
ಲಾಯಕಿದ್ದು.
ಹರೇ ರಾಮ ।
ತುಂಬ ತುಂಬ ಲಾಯಕ ಆಯ್ದು.
ಹರೇ ರಾಮ, ಶ್ರೀ ಗುರುಭ್ಯೋ ನಮಃ ।
ಶ್ರೀ ಗುರುಗಳ ಬಗ್ಗೆ ಅರ್ಥಪೂರ್ಣ ಕವನ.
ವಿಜಯತ್ತಿಗೆ, ಲಾಯಿಕ ಆಯಿದು.