- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಕೊಡಗಿನ ಗೌರಮ್ಮ ದತ್ತಿ ನಿಧಿ”ಯ ಲೆಕ್ಕಲ್ಲಿ ಕೊಡಗಿನ ಗೌರಮ್ಮನವರ ಸ್ಮಾರಕ ಕಥಾಸ್ಪರ್ಧೆಗಳ ಹತ್ತು ಹದಿನೈದು ವರ್ಷಂದ ನಮ್ಮ ವಿಜಯತ್ತೆ ಚೆಂದಕ್ಕೆ ನೆಡೆಶಿಗೊಂಡು ಬತ್ತಾ ಇದ್ದವು. ನಮ್ಮ ಹವ್ಯಕ ಕೂಸುಗೊಕ್ಕೆ, ಹೆಮ್ಮಕ್ಕೊಗೆ ಅವರವರ ಬರವಣಿಗೆಯ ಪ್ರತಿಭೆಯ ಹೆರಹಾಕುಲೆ ಇಪ್ಪ ಒಂದು ಸುವರ್ಣ ವೇದಿಕೆ ಇದು. ಈ ಸ್ಪರ್ಧೆಲಿ ನಮ್ಮ ರಾಜ್ಯದ ಎಲ್ಲಾ ಹವ್ಯಕ ಭಾಷೆ ಅರಡಿವ ಹೆಮ್ಮಕ್ಕೊ ಭಾಗವಹಿಸುತ್ತವು. ಬೈಲಿಲಿ ಈ ಕಥಾ ಸ್ಪರ್ಧೆಯ ಕಥೆಗೊ ಬಪ್ಪಲಿದ್ದು. ಪ್ರತಿವರ್ಷವೂ ಎಲ್ಲರನ್ನೂ ಸೇರ್ಸಿಗೊಂಡು ಉತ್ಸಾಹಲ್ಲಿ ಕಾರ್ಯಕ್ರಮ ಆಯೋಜಿಸುವ ವಿಜಯತ್ತೆಯ ಕೆಲಸಕ್ಕೆ ಗೌರವದ ನಮಸ್ಕಾರಂಗೊ.
~
ಬೈಲಿನ ಪರವಾಗಿ2011ನೇ ಸಾಲಿನ “ಕೊಡಗಿನ ಗೌರಮ್ಮ ಕಥಾಸ್ಪರ್ದೆ”ಯ ಪ್ರಥಮ ಬಹುಮಾನಿತ ಕತೆ
ಶಿರೋನಾಮೆ: “ಪರಿವರ್ತನೆ”
ಕತೆಗಾರ್ತಿ: ಲಲಿತಾಲಕ್ಷ್ಮಿ ಎನ್. ಭಟ್, ಯಶೋಧಾಮ , ಹೊನ್ನೆಗುಂಡಿ, ಸಿದ್ದಾಪುರ
ಎಂ ಕಾಂ ಆಗಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ರಾಮಚಂದ್ರನ ಕೈ ಹಿಡ್ದಾಗ ಶರಾವತಿಗಿನ್ನೂ ಎಳೆ ವಯಸ್ಸು.
ಗಂಡಂತೂ ರಾಮಚಂದ್ರ ಅಂದ್ರೆ ಶ್ರೀ ರಾಮಚಂದ್ರನೇಯ. ಪರಸ್ಥಳದಲ್ಲಿ ನೌಕರಿ,ಪಗಾರು ಕಡ್ಮೆ, ಹಾಸುಲಿದ್ರೆ ಹೊದುಲಿಲ್ಲೆ, ಹೊದುಲಿದ್ರೆ ಹಾಸುಲಿಲ್ಲೆ.
ರಾಮಚಂದ್ರನ ಅಪ್ಪ, ಅಮ್ಮ ಊರಲ್ಲಿದ್ದು, ಅಕೊಕು ಉತ್ಪನ್ನ ಹೊಟ್ಟೆಗೆ ಬಟ್ಟೆಗೆ ಸಾಕಾಪಷ್ಟು ಮಾತ್ರ ಇದ್ದಿತ್ತು. ಕಡೆಗೆ ಶರಾವತಿ ಕ್ಲರ್ಕ್ ಪರೀಕ್ಷೆ ಕಟ್ಟಿ, ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್ಮಾಡ್ತು.
ದೇವ್ರ ದಯೆಯಿಂದ ಟ್ರೆಜ್ಹರಿಲಿ ಕ್ಲರ್ಕ್ ಪೋಸ್ಟ್ ಸಿಕ್ದಾಗ ಶರಾವತಿಗೆ ಖುಶಿಯೋ ಖುಶಿ. ಈ ಮದ್ದಿದಲ್ಲ್ಲಿ ಒದ್ಮಗ್ಳೂ ಹುಟ್ಟಿತ್ತು.
ಶರಾವತಿಗೆ ಸಣ್ಣರಕರಿಂದನೂವ ಭರತನಾಟ್ಯ ಕಲಿಯೋ ಹೇಳಿ ಆಶೆಯಾಗಿತ್ತು. ಆದ್ರೆ ಹಳ್ಳೀ ಮನೆಲಿ ಅದೆಲ್ಲಾ ಎಲ್ಲಿ?
ಈಗ ತನ್ನಾಶೆನ ತನ್ನ ಮಗ್ಳ ಮೂಲ್ಕ ಆದ್ರೂ ತೀರಿಸ್ಕಳೋ ಹೇಳಿ ಶರಾವತಿಗೆ ಮನಸ್ನಲ್ಲೇ ಆಶೆ.
ಭರತನಾಟ್ಯ ಪ್ರವೀಣೆ ಪದ್ಮಾ ಸುಬ್ರಹ್ಮಣ್ಯಂ ಹಾಂಗೇ ಆಗ್ಲಿ ಹೇಳಿ ಮಗ್ಳಿಗೆ ಮುದ್ದಾಗಿ ಪದ್ಮಾ ಹೇಳಿ ಹೆಸರಿಡ್ತು. ಆದ್ರೆ “ಥಕಥೈ ಎಲ್ಲಾ ನಂಗ್ಳಂತೋರ ಮನೆಗೆ ಅಲ್ಲ, ಡಾನ್ಸ್ ಎಲ್ಲಾ ಬೇಡ.” ರಾಮು ಖಡಾಖಂಡಿತವಾಗಿ ಹೇಳ್ದಾಗ ಶರಾವತಿ ತೀಡ್ತು, ಕೂಗಾಡ್ತು, ಶಿಟ್ ಮಾಡ್ತು, ಕಡೆಗೆ ‘ನೀ ಏನೂ ಮಾಡ್ಕೊ’ ರಾಮು ಹೇಳ್ದಾಗ ‘ಅಯ್ಯಪ್ಪ, ಅಂತೂ ಭವ ಗೆದ್ದೆ’ ಹೇಳಿ ಶರಾವತಿ ಡಾನ್ಸ್ ಕ್ಲಾಸಿಗೆ ಹಾಕ್ತು. ಪದ್ಮಾ ಪುಟ್ಟ ಪುಟ್ಟ ಕೈಕಾಲುಗಳನ್ನು ಹಂದಾಡ್ಸ್ ಕತ್ನೇಯ ಡಾನ್ಸ್ ಮಾಡೆಕರೆ ಸವಕಾಶ ರಾಮುಗೂ ಖುಷಿ ಆಗ್ತಿತ್ತು. ಪದ್ಮಾ ಜಾಣೆ, ಎಂದಾಗಿ ಡಾನ್ಸ್ ಮಾಡ್ತಿತ್ತು. ಚೊಲೋ ಅಭ್ಯಾಸನೂ ಮಾಡ್ತಿತ್ತು. ಹೋದ್ ಹೋದಲ್ಲೆಲ್ಲಾ ಡೇನ್ಸ್ ಅಂದ್ರೆ ಫಸ್ಟ್ ಪದ್ಮನೆಯ. ಆದ್ರೆ ಪದ್ಮಂಗೆ ಡಾನ್ಸನ ಡ್ರೆಸ್ಸು, ಆಭರಣ ಎಲ್ಲಾ ಹೊಂದ್ಸೆಕಾರೆ ರಾಮು ಶರಾವತಿ ವದ್ದಾಡೋದೊ. ಅಲ್ದೆ ಅದ್ರ ಪ್ರೋಗ್ರಾಮಿಗೆ ಕರ್ಕಂಡ್ ಹೋಗಕರೆ ನಟುವಾಂಗದ ಖರ್ಚು, ತಿರುಗಾಟದ ಖರ್ಚು, ಬ್ಯಾಂಕಿಗೆ ಟ್ರೆಜ್ಹರಿಗೆ ರಜೆ ಹಾಕುದು, ಮನೇಲಿ ಉಳ್ಕಂಬ್ಲೆ ಜನ್ರ ವ್ಯವಸ್ಥೆ, ಹೇಳಿ ವಂದೊದ್ಸಲ ಎಂತಕ್ಕಾದ್ರೂ ಈ ಭರತನಾಟ್ಯಕ್ ಹಾಕ್ದ್ನೋ ದೇವ್ರೆ ಹೇಳಿ ವದ್ದಾಟ ದೇವ್ರಿಗೇ ಪ್ರೀತಿ. ಅದ್ಕಾಗೇ ಗಂಡ-ಹೆಂಡ್ತಿಗೆ ದಿನಬೆಳಗಾದ್ರೆ ಜಗ್ಳ, ಆದ್ರೂ ಮಗ್ಳಿಗೆ ನಂಬರ್ ಬಂದ್ಕೂಡ್ಲೆ ಜನ ಎಲ್ಲಾ ಮೆಚ್ಚಿ ಹುಗ್ಳೆಕಾದ್ರೆ ಜನ್ಮ ಸಾರ್ಥಕ ಹೇಳಿ ಕಾಣ್ತಿತ್ತು.
ಪದ್ಮಾ ದೊಡ್ಡಾಗ್ತಾ ಇದ್ದಾಂಗೆ ಶರಾವತಿ ಮತ್ತೊಂದ್ ಮಗ್ಳಿಗೆ ತಾಯಾತು. ವಂದ್ ಮಗ್ಳ ದಾನ್ಸಿಗೆ ಹಾಯ್ಕಂಡು ವದ್ದಾಡದ್ ಸಾಕು ಈ ಮಗ್ಳಿಗೆ ಲಕ್ಷಣವಾಗಿ ವಂದನಾ ಹೇಳಿ ಹೆಸರಿಡ್ತು.
ಮನೆಕೆಲ್ಸ, ನೌಕರಿಕೆಲ್ಸ, ಗಂಡಾನಕೆಲ್ಸ, ಮಕ್ಕಳಕೆಲ್ಸ, ಭರತನಾಟ್ಯದ ತಯಾರಿ ದುಡ್ಡು ಹೊಂದ್ಸುದು, ಶರಾವತಿ ಜೀವ ತೇಯ್ದದ್ದೂ ತೇಯ್ದದ್ದೇಯ. ರಾಮುನೂ ಅಷ್ಟೇ ಪರಿ ಹೋರಾಡ್ತಿದ್ದ.
ಪದ್ಮಾ ದೊಡ್ಡಾತು. ಇಂಜಿನಿಯರ್ ಮಾಡ್ತೆ ಹೇಳಿ ಹಠ. ಹಾಸ್ಗೆ ಇದ್ದಷ್ಟೇ ಕಾಲು ಚಾವ್ಹ್ವೋ ಮಗಾ ಬೇಡ, ನಿನ್ನ ಡಾನ್ಸೂ ಬಂದಾಗೋತು ಅಂದ್ರೆ ಕೇಳಗಿದ್ದೇಯ ಇಂಜಿನಿಯರಿಂಗ್ ಮಾಡ್ತೆ ಹೇಳ್ದಾಗ ಮಗ್ಳಿಗೆ ಎಂತಕ್ಕೆ ಬೇಜಾರು ಮಾಡುದು ಹೇಳಿ ತಂಗ್ಳ ಕೈಲಿ ಅಪ್ದಲ್ಲಗಿದ್ರೂ ಎಜುಕೇಶನ್ ಲೋನು, ಬ್ಯಾಂಕ್ ಲೋನು, ಆಫೀಸ್ ಲೋನು, ಅವ್ರಿವ್ರ ಹತ್ರ ಕೈಗಡ ಎಲ್ಲಾ ಮಾಡಿ ಇಂಜಿನಿಯರಿಂಗಿಗೆ ಹಾಕ್ದೊ. ವಂದನಾ ಕನ್ನಡ ಶಾಲೆಗೆ ಹೋಪಲೆ ಹಣ್ಕ್ತು.
ಬದ್ಕು ವಂದ್ನಂಬ್ನಿ ಸರಿ ಹೋಗ್ತ್ನಿದ್ದಿತ್ತು. ಪದ್ಮಾ ಎರಡು ಸೆಮ್ನಲ್ಲಿ ಚೊಲೋ ಮಾರ್ಕ್ಸ್ ತೆಕಂಡಿತ್ತು. ಮೂರನೇ ಸೆಮಿಸ್ಟರ್ನಲ್ಲಿ ಸ್ವಲ್ಪ ಕಡ್ಮೆ ಮಾರ್ಕ್ಸ್ ಬಂದಾಗ, ಬೆಂಗ್ಳೂರಲ್ಲಿರ್ತಲಿ ಈ ಸಲ ಏನಾದ್ರೂ ತೊಂದ್ರೆ ಆತನೋ ಹೇಳಿ ಗಂಡ-ಹೆಂಡ್ತಿ ಸಮಾಧಾನ ಮಾಡ್ಕಂಡ. ಈಗಿತ್ಲಗಿ ಎಂತಕ್ಕೋ ಭರತನಾಟ್ಯದಲ್ಲೂ ಆಸಕ್ತಿ ಕಡ್ಮೆಯಪ, ಎಲ್ಲೂ ಪ್ರೋಗ್ರಾಂ ಕೊಡುಲೂ ಮನ್ಸಿಲ್ಲೆ. ಡಾನ್ಸ್ ಮಾಡೆಕಾರೂ ಲಕ್ಷ ಕೊಟ್ಟು ಮಾಡ್ತಿಲ್ಲೆ. ಎಲ್ಲಿ ಸ್ಪರ್ಧೆಗೋದ್ರೂ ನಂಬರ್ ಬತ್ತಿಲ್ಲೆ. ಶರಾವತಿಮ್ ವಳ್ಗಿಂದೊಳ್ಗೆ ಕೊರ್ಗ್ಲೆ ಶುರುಮಾಡ್ತು. ಎಂತಾ ಆಗಿಕ್ಕು ಇದ್ಕೆ ಹೇಳಿ ತೆಳ್ದಿಲ್ಲೆ. ನಾಲ್ಕನೇ ಸೆಮಿಸ್ಟಾರ್ನಲ್ಲಿ ಮಗ್ಳು “ನಂಗೆ ಆರಾಮಿದ್ದಿತ್ತಿಲ್ಲೆ, ವಂದ್ ವಿಷ್ಯ ಹೋಯ್ದು” ಹೇಳಿ ಆರಾಮಾಗಿ ಹೇಳ್ದಾಗ ಶರಾವತಿ ಎದೆ ವಡ್ದೋತು. ರಾಮುನೂ ಕಂಗಾಲಾದ. ಪರಮಾತ್ಮಾ ಎಂತಕೆ ಹೀಂಗಾಗ್ತಿದ್ದೂ ಹೇಳಿ ಪದ್ಮನ ಮನೆಗೆ ಕರ್ಸಿ ಕೂತ್ಕಂಡು ವಿಚಾರ ಮಾಡ್ದ್ರೆ, ಯಾವಾಗ್ಲೂ ಎದುರುತ್ತರ ಕೂಡದ ಪದ್ಮ, ಮೆತ್ತಗೆ ಮಾತಾಡ್ವ ಪದ್ಮ, ದಿಗಡ್ ಉತ್ತರ ಕೊಡ್ತು. ಅಪ್ಪ, ಅಮ್ಮಂಗೆ ವಿರುದ್ಧ ಮಾತಾಡ್ತು “ನಾ ಡಾನ್ಸೆಲ್ಲಾ ಇನ್ ಮಾಡ್ತ್ನಿಲ್ಲೆ. ನಿಂಗ ಎಂತಾ ಮಾಡ್ದಾಂಗಾತು? ನಂಗೆ ಎಲ್ಲಾ ಗುತ್ತಿದ್ದದ್ದೇಯ.” ಮಗ್ಳ ವರಟು ಮಾತು ಕೇಳಿ ಶರಾವತಿಗೆ ತಲೆ ಕೆಟ್ಟೋತು. ”ನಡಿ ಮನಿಂದ ಹೆರ್ಗೆ, ಹಗ್ಲೂ ರಾತ್ರಿ ವದ್ದಾಟ ಮಾಡಿ ನಿಂಗೆ ನಿಂಗ್ ಬೇಕಾದಾಂಗೆ ವ್ಯವಸ್ಥೆ ಮಾಡ್ದ್ರೆ ಮನ್ಸಿಗ್ ಕಂಡಾಂಗ್ ಮಾತಾಡ್ತ್ಯ, ನಂಗ ಏನೂ ಮಾಡಿದ್ವಿಲ್ಲೆ ಹೇಳಾದ್ರೆ, ನೀ ಹೆಂಗೆ ಇಷ್ಟ್ ಪ್ರಸಿದ್ಧ ಆಗ್ತಿದ್ದೆ? ನಿನ್ನ್ ಡಾನ್ಸ್ ಟೀವಿಲೆಲ್ಲಾ ಹೇಂಗ್ ಬತ್ತಿತು, ನಂಗ ಏನೂ ಅಲ್ದಲೆ, ನೀನೂ ಏನೂ ಅಲ್ಲ, ನಂಗ್ಳ ಹೋರಾಟದ ಕಲ್ಪನೆ, ನಂಗ್ಳ ಕಷ್ಟದ ಅರಿವು ನಿಂಗಿಲ್ಲೆ ಹೇಳಾದ್ರೆ ಏನ್ ಮಾಡಿ ಏನ್ ಪ್ರಯೋಜನ? ನೀ ಮನಿಂದ ಹೊರ್ಗ್ ಹೋಗು. ಯಾರು ನಿಂಗ್ ಮಾಡ್ತ ನೋಡ್ವ” ಹೇಳಿ ಕೂಗಾಡಿ ಮಗ್ಳನ್ ಹೊರ್ಗೆ ನಿಲ್ಲಿಸ್ತು. ಹಾಂಗೆ ಹೆತ್ತ ಕರುಳನ್ನು ಹೊರ್ಗೆ ನಿಲ್ಸಕಾದ್ರೆ ಶರಾವತಿಗೆ ಏನ್ ಖುಶಿ ಇದ್ದಿತ್ತಾ? ಸ್ವಂತ ಮಗ್ಳನ್ನ ಮನಿಂದ ಹೊರ್ಗೆ ನಿಲ್ಸಕಾದ್ರೆ ಶರಾವತಿ ಕರುಳು ಕುದುದ್ ಕುದುದ್ ಹೋಗ್ತ್ನಿದ್ದತ್ತು. ಅತ್ಯಂತ ಯೋಗ್ಯತೆಯ ಮಗ್ಳು ತನ್ನ ಯೋಗ್ಯತೆ ಉಳಿಸ್ಕಳ್ಳಿ ಹೇಳು ಕಾತರ, ನೋವು, ಆಶೆ, ಅಲ್ಲಿದ್ದಿತ್ತೇ ಹೊರ್ತು ಇನ್ನೆಂತ ಸ್ವಾರ್ಥ ಇದ್ದಿತ್ತು ಅಲ್ಲಿ? ಆದ್ರೆ ಪದ್ಮ “ಬೆಳ್ಗಾಗ್ಲಿ ನಾ ಎಲ್ಲಿಗೆ ಹೋಗವೋ ಅಲ್ಲಿಗೆ ಹೋಗ್ತೆ.” ಹೇಳಿ ಉತ್ತರ ಕೊಟ್ಟಾಗ ಶರಾವತಿ ಎಷ್ಟ್ ಸಲ ಸತ್ತತೋ ದೇವ್ರಿಗೆ ಗುತ್ತಿದ್ದು.
ಪದ್ಮಂಗ ಎಸ್ತ್ಟುನೋವಾತೊ; ಬೇಜಾರಾತೊ ಹೇಳಿ ಅನ್ಸಿದ್ದು ಇಲ್ಲೆ ಎಂತಕೆ ಅಂದ್ರೆತಪ್ಪು ಪದ್ಮನ್ದಾಗಿತಲಿ? ಮಗ್ಳೆಂತಕೆ ಹಿಂಗ್ ಮಾಡ್ತಿದ್ದ್ದುಹೇಳಿ ಗುತ್ಟಾಗದ್ದೆ ಶರಾವತಿ ತೀಡ್ ತೀಡ್ ಇಡ್ತು. ಸಿಟ್ಟಿಂದ, ನೋವಿಂದ, ಭಯಂಕರವಾಗಿ ಕಣ್ ಬಿಟ್ಟಿತ್ನೆ ಮನೆ ಹೊರ್ಗೆ ನಿಂತ್ಕಂದು ಮಗ್ಲ್ನನ ರಾಮು ವಳ್ಗ ಕರ್ದ,ಶಿಟ್ನಿನಿಂದ ರೂಮಿಗೋಗಿ ಬಾಗ್ಲಹಾಕ್ಕೊಂದ್ತು ಪದ್ಮ. ಮರ್ದಿನ ರಾಮು ಮಗ್ಳಗೆ ಬುದ್ಧಿ ಹೇಳಿ ಬೆಂಗ್ಳೂರಿಗೆ ಬಿಟ್ಟಿಕಿ ಬಂದ.
ಕೆಲವ್ ದಿನ್ದ ನಂತ್ರ ಬೆಂಗ್ಲೋರಲ್ಲಿದ್ದ ರಾಮುನ ಗೆಳ್ಯ ಫೊನ್ ಮಾಡಿ ಮಾತಾಡ್ತ್ನೆಯ ”ನಿನ್ ಮಗಳ್ ಮೊನ್ನೆ ಯಾವ್ದೊ ಹುಡುಗ್ನ ಸಂಗಡ ಪಾರ್ಕಲ್ಲಿಡ್ಡಾಂಗ್ ಕಂಡ್ತು. ಹೌದೋ ಅಲ್ದೊ ಎನೇನೊ” ಹೇಳ್ದಾಗ ರಾಮುಗೆ ಹಾರ್ಟ್ ಫೇಲ್ ಆಪ್ದೊಂಡು ಬಾಕಿ. ಶರಾವತಿಗೆ ವಿಷ್ಯ ಹೇಳಗಿದ್ದೆ “ಎಂತಕೋ ಪದ್ಮನ ನೋಡೋ ಹೇಳಿ ಕಾಣ್ತಿದ್ದು, ಒಂದ್ಸಲ ಬೆಂಗ್ಳೂರಿಗೆ ಹೋಗ್ಬತ್ತೆ” ಹೇಳಿ ರಾಮು ಹೇಳ್ದಾಗ ಈ ದುಡ್ಡನ ತೊಂದ್ರೆ ಯಾಪಾರ ಶರಾವತಿಗೆ ಅನ್ಸಿದ್ದು ಎಂತದು. “ಬೆಂಗ್ಳೂರಿಗೆ ಹೋಗ್ಬಪ್ಪ ಖರ್ಚಲ್ಲಿ ಮಗ್ಳ ವಂದ್ತಿಂಗ್ಳ ಖರ್ಚು ಕಳೀತಿತ್ತು” ಹೇಳಿ. ಆದ್ರೂ ಅಮ್ಮಲ್ದ? ಮಗ್ಳ ನೋಡ್ಕಂಡ್ ಬರ್ಲಿ ಹೇಳಿ ಸುಮ್ನಾತು. ಇದ್ದದ್ರಲ್ಲೆ ಎಂತೆಂತದೋ ತಿಂಡಿ ಮಾಡಿ ಕಳ್ಸ್ತು.
ಆದ್ರೆ ಮರ್ದಿನನೇ ರಾಮು ಮಗ್ಳ ಕರ್ಕಂಡು ಬಂದ. ರಾಮು ಗರಂ ಆಗಿದ್ದಿದ್ದ. ಮಗ್ಳೂ ಎಂತ ಮಾತೂ ಆಡಿದ್ದಿಲ್ಲೆ. ಶರಾವತಿಗೆ ವಿಷ್ಯ ಎಂತದೂ ಹೇಳಿ ತಿಳ್ಯಗಿದ್ದೇ ಗಂಡನ ಹಿಂದೆ ಮುಂದೆ ತಿರ್ಗ್ತು. ರಾಮು ಮಾತೇ ಆಡಗಿದ್ದೆ ಮನಿಕಂಡ. ಮಗ್ಳು ಇಲಿ ಬಿಕ್ಲ ಸೇರ್ಕಂಡಾಂಗೆ ತನ್ನ ರೂಮು ಸೇರ್ಕಂಡ್ತು. ಶರಾವತಿ ಎಂತ ಮಾಡೋ ಹೇಳಿ ಗೊತ್ತಾಗಗಿದ್ದ ಸ್ಥಿತೀಲಿ ವಂದ್ ಅನ್ನ ತಂಬ್ಳಿ ಮಾಡ್ಕ್ಕಿ ಆಫೀಸಿಗೆ ಹೋತು. ಆಫೀಸ್ನಲ್ಲೂ ಸರಿಯಾಗಿ ಕೆಲಸ ಮಾಡುಲೆ ಆಜಿಲ್ಲೆ.
ಮನೇಗೆ ಬಂದ್ಕೂಡ್ಲೇ ಗಂಡಂಗನಿ ಚಾ ಮಾಡ್ಕೊಟ್ಕಂಡು ತಾನೂ ಕುಡಿತ್ನೇಯ “ಇದೆಂತ ನಮ್ನಿ? ಬೆಳ್ಗಿಂದ ಯಾರೂ ಎಂತದೂ ಹೇಳ್ತ್ರಿಲ್ಲೆ. ನಂಗೆತ್ತಕ್ಕೆ ತಲೆ ಬಿಶಿ ಮಾಡ್ತಿದ್ರೀ” ಹೇಳಿ ಶರಾವತಿ ಕೇಳ್ದಾಗ ರಾಮು “ನಿನ್ನ ಮಗ್ಳನ್ನೇ ಕೇಳ್ಹೋ” ಹೇಳ್ದ. ಮಗ್ಳ ಹತ್ರ “ಎಂತದೇ ಪದ್ಮ, ಎಂತ ವಿಷ್ಯ ಆರಾಮಿಲ್ಯನೇ” ಹೇಳಿ ಕೇಳ್ದಾಗ ಪದ್ಮ “ಆಯೀ ನಂಗೆ ವೋದುಲೇ ಮನ್ಸಿಲ್ಲೆ” ಅಂತು. “ಅಯ್ಯೋ ರಾಮ, ಎಂತಕ್ಕೆ ರಾಶಿ ಕಷ್ಟಾವನೇ?” ಆಯಿ ಪ್ರಶ್ನೆಗೆ ಮಗ್ಳ ಉತ್ತರ ಇಲ್ಲೆ. ರಾಮು ಒಂದೇ ಸಲ ಕೆಂಡಾಮಂಡಲವಾಗಿ “ವೋದುಲೇ ಮನಸಿಲ್ಯಡ, ಮನ್ಸಿಲ್ಲೆ ಅಲ್ಲ, ತಿಂಗಳ್ಗಟ್ಲೆ ಆತು ಕ್ಲಾಸಿಗೆ ಹೋಗಿಗಿದ್ದೆಯ, ನಿನ್ನ ಮಗ್ಳ ಕಥೆ ಸಣ್ಣ ಪುಟ್ದಲ್ಲ, ಯಾವ್ದೋ ಹುಡ್ಗನ್ ಸಂತಿಗೆ ಓಡಾಡ್ತ್ನೇ ಇದ್ದು ಹೇಳಿ ಸತೀಶ ಫೋನ್ ಮಾಡಿದ್ದ. ಹೋಗಿ ನೋಡ್ದ್ರೆ ಕಾಲೇಜಿಗೆ ಹೋಗಗಿದ್ದೇಯ ರೂಮಲ್ಲಿದ್ದು. ವಂದಿಷ್ಟ ಕಾದಂಬರಿ ವೋದ್ ರಾಶಿ ಹಾಕಿ, ಆ ಕಾದಂಬ್ರಿಲಿ ಬಂದಾಂಗೆ ಜೀವ್ನನೂವ ಹೇಳಿ ತಿಳ್ಕಂಡಿದ್ದು. ಮೊಬೈಲ್ ಬೇಡಾ, ಬೇಡಾ ಅಂದ್ರೂ ಕೇಳಿದ್ದಿಲ್ಯಲೇ? ಮೊಬೈಲ್ ಇಲ್ಲಗಿದ್ರೆ ಮಗ್ಳ ಹತ್ರ ಮಾತಾಡುಲಾಗಗಿದ್ದೇ ಸತ್ತೇ ಹೋಗ್ತೆ ಅಂದ್ಯಲೇ? ಈಗ ಅದೇ ಮೊಬೈಲೇ ನಿಬ್ನ್ನ ಮಗ್ಳ ಜೀವನ ಹಾಳು ಮಾಡ್ತು. ನಾ ಹೋದಾಗ ಫೋನ್ ಮಾಡ್ತ್ನೇ ಇದ್ದಿತ್ತು. ಆ ಸತ್ತವಂಗೇ ಆಗಿಕ್ಕು. ದೊಡ್ಡ ಡಾನ್ಸರ್ ಮಾಡ್ತೇ ಹೇಳಿ ಕುನದ್ಯಲೇ? ಅದಕ್ಕಾಗಿ ಮಾಡ್ದ ಖರ್ಚು, ಮಾಡ್ದ ಹೋರಾಟ, ಹಾಕ್ದ ರಜೆ, ಬೇರ್ಯೋರಿಗೆಲ್ಲಾ ಕೊಟ್ಟ ತೊಂದ್ರೆ ಎಲ್ಲಾ ದೊಡ್ಡ ಸೊನ್ನೆ ಆಗೋತು. ಈಗ್ ಮಗ್ಳಿಗೆ ಯಾವ ಡಾನ್ಸ್ ಮಾಡ್ಸ್ತೇ ನೋಡು” ರಾಮುವಿನ ಕೂಗಾತ ಕೇಲ್ತ್ನಿದ್ದಾಂಗೆ ಶರಾವತಿ ಕುಸ್ದು ಬಿತ್ತು. ಎಚ್ಚರ ತಪ್ಪೋತು. ಎಚ್ರಾದ್ ಮೇಲೆ ಹಿಂದ್ ಮುಂದ್ ನೋಡಗಿದ್ದೇ ಮಗ್ಳಿಗೆ ಹೋಡುಲ್ಹಣುಕ್ತು. ಅಮ್ಮನನ್ನೇ ದೂಡಿ ಪದ್ಮಾ, “ಹೋಡೆತ್ಯೇನೇ? ಹೊಡೆತ್ಯೇನೇ? ನರರೂಪ ರಾಕ್ಷಸಿ, ಇಷ್ಟ ದಿವ್ಸ ನೀ ಹೇಳದ್ದು ಕೇಳ್ದೆ, ಇನ್ನ್ ಸಾಧ್ಯಿಲ್ಲೆ, ಡೇನ್ಸ್ ಕಲಿಸಿದ್ದೆಂತಕೇ? ನಿಂಗ್ಳ ಪ್ರೆಸ್ಟೀಜಿಗಲ್ದಾ? ನಂಗೆ ನಿಂಗ ಎಂತದೂ ಮಾಡಿದ್ರಿಲ್ಲೆ, ನಂಗ್ ಅಲ್ಲಿಂದಿಲ್ಲಿಗೂ ಬಯ್ದದ್ದೇ ಅಲ್ದಾ? ನಿಂಗ್ಳಂತ ಕೆಟ್ಟ ಅಪ್ಪ ಅಮ್ಮ ಇನ್ಯಾರಿಗೂ ಇಲ್ಯಾಗಿಕ್ಕು. ಎಲ್ಲರ ಮನೆ ಹಾಂಗ್ ವಂದ್ ಮಜಾ ಇಲ್ಲೆ, ತಿರ್ಗಾಟ ಇಲ್ಲೆ, ನೆಗೆ ಇಲ್ಲೆ, ಕುಶಾಲಿಲ್ಲೆ, ಯಾವಾಗ್ಲೂ ಅಭ್ಯಾಸ ಮಾಡೂ, ಡಾನ್ಸ್ ಪ್ರಾಕ್ಟೀಸ್ ಮಾಡೂ, ನಾ ಎಂತಕ್ ನಿಂಗ ಹೇಳ್ದಾಂಗ್ ಕೇಳ? ನನ್ನ ಇಂಜಿನಿಯರಿಂಗ್ ಗೆ ಹೇಳಿ ದುಡ್ಡೂ ಇಟ್ಟೀದ್ರಲೀ, ಅದ್ರಲ್ಲಿ ನನ್ನ ಮದ್ವೆ ಮಾಡ್ಬುಡಿ ನಾ ಹೋಯ್ಕತ್ತೆ, ನಿಂಗ್ಳ ಹಂಗೇ ಬೇಡ. ಮತ್ತೆ ನನ್ನ ಮೈ ಮುಟ್ರೆ ನೋಡು ಸಣ್ಣಿರಕರೆ ಫೇಲ್ ಆದೆ ಹೇಳಿ ಬರೆ ಹಾಕಿದ್ಯಲೇ? ನನ್ನ ಮೈ ಮೇಲೆ, ನನ್ನ್ ಮನ್ಸ್ನ್ ಮೇಲೆ ಇನ್ ನಿಂಗೆ ಅಧಿಕಾರ ಇಲ್ಲೆ, ನೀ ಮದ್ವೆ ಮಾಡ್ಕುಡಗಿದ್ರೆ ನಾನೇ ವೋಡೋಗ್ತೇ”
ಸುತ್ಲೂ ಇದ್ದ ಫೊಟೋ ಶೀಲ್ಡ್ ಎಲ್ಲಾ ಗಿರಗಿರ ತಿರ್ಗ್ದಾಂಗ್ ಆಗಿ ಶರಾವತಿಗೆ ಮತ್ತೇ ಎಚ್ಚರ ತಪ್ತು. ಎಚ್ಚರಾಗದ್ದೆಂತಕ್ಕೇ? ಈ ನೋವು ಎದ್ರುಸಲಾ? ಎಲ್ ತಪ್ದೇ ನಾನು? ಪ್ರೀತಿಂದ ಹೇಳ್ದಾಗ ಮುದ್ ಮಾದ್ವಾಗ ಪ್ರೀತಿಂದಲೇ ಹೇಳಿದ್ನಲಿ? ತಪ್ಮಾಡ್ದಾಗ ಬೈಯಗಿದ್ದೇ ಪ್ರೀತಿ ಮಾಡುಲಾಗ್ತಾ? ವೋದ್ಕೋ ವೋದ್ಕೋ ತಂಗೀ ಇಲ್ಲಗಿದ್ರೆ ಫೇಲ್ ಆಗ್ತೆ, ಫೇಲಾದ್ರೆ ಬರೆ ಹಾಕ್ತೆ ಹೇಳಿ ಸಾರಿ ಸಾರಿ ಹೇಳಿದ್ದೆ. ಅಭ್ಯಾಸ ಮಾಡ್ಕಳಗಿದ್ದೇ ಫೇಲಾದಾಗ ಹೆದ್ರುಸುಲೆ ಬರೆಹಾಕದ್ ಹೌದು. ಬರೆ ಹಾಕಕರೆ ತಂಗೆಂತ ಸಂತೋಷ ಆಗಿಕ್ಕಾ? ತನ್ ಮಗ್ಳಿಂದ್ ಆಗಿ ತಂಗಿಂತಾ ಪರಿಸ್ಥಿತಿ ಬಂತೂ ಹೇಳಿ ನಂಗೂ ಎಷ್ಟು ನೋವಾಗಿಕ್ಕು? ಪದ್ಮಂಗೆ ಬರೆ ಶರೀರಕ್ಕೆ ಆದ್ರೆ ತಾನೂ ತನ್ನ ಮನ್ಸಿಗೇ ಬರೆ ಹಾಯ್ಕಂಡ್ತಲೀ? ಅದ್ರಿಂದ ಪದ್ಮಾ ಮುಂದಿನ ಪರೀಕ್ಷೆಲೇ ಹೆದ್ರಕಂಡಾದ್ರೂ ಚಲೋ ಮಾರ್ಕ್ಸ್ ತೆಕಂಡ್ತಲೀ? ಅದ್ ಮಗ್ಲ ಭವಿಷ್ಯಕ್ಕೇ ಹೊರ್ತು ತನಗಲ್ದಲೀ? ಡೇನ್ಸ್ ಕಲ್ಯೋ ಹೇಳಿ ಮಗ್ಳಿಗೆ ಆಸೆ ಇದ್ದಿತ್ತಲೀ? ಅದ್ಕಾಗೇ ಡಾನ್ಸಿಗೆ ಹಾಕದ್ದು, ಡಾನ್ಸಿಗೆ ಸೇರ್ಕಂಡ್ ಮೆಲೆ ಅದ್ನ ಸರಿಯಾಗಿ ಮಾಡ್ಲಿ, ಪ್ರಾಕ್ಟೀಸ ಮಾಡ್ಲೀ ನಂಬರ್ ಬರ್ಲೀ ಹೇಳಿ ಬಯಸುದು ತಪ್ಪಾ? ಊಟ ತಿಂಡಿ ಬಿಟ್ಟು ದುಡ್ ಉಳಿಸಿ ಮಗ್ಲ ಆಸೆನೆಲ್ಲಾ ಪೂರೈಸಿದ್ವಲೀ? ನಂಗ್ಳ ಪರಿಶ್ರಮ, ತ್ಯಾಗ, ಹೋರಾಟ್, ಯಾವ್ದೂ ಲೆಕ್ಕಕ್ಕಿಲ್ಯಾ? ಇದ್ರ ಕಾಲ್ದಲ್ಲಿ ವಂದನಾನ ಪೂರ್ಣ ಅಲಕ್ಷ್ಯ ಮಾಡ್ದ್ವಲಿ? ೨೦ ವರ್ಷದ ಮೇಲೆ ಬಂದ ಯಾವ್ದೋ ಒಬ್ಬ ಹುಡ್ಗನ ಮಾತ ಕೇಳ್ಕಂಡು ಹೊತ್ತು-ಹೆತ್ತು ಬೆಳಿಸಿ ಸಮಾಜದಲ್ಲಿ ಸರಿಯಾದ ಸ್ಥಾನ ಕೊಟ್ತ ಅಪ್ಪ ಅಮ್ಮನ್ನೇ ವಿರೋಧ ಮಾಡ್ತಿದ್ನಲೀ? ಜೀವನದ ಈ ಎಲ್ಲಾ ಹೋರಾಟದ ವಂದೇ ಉದ್ದೇಶ “ಮಗ್ಳು ವಂದ್ ದೊಡ್ಡ ಭರತನಾಟ್ಯ ಪ್ರವೀಣೆಯಾಗಿ ಒಳ್ಳೇ ಇಂಜಿನಿಯರ್ ಆಗಿ ಉತ್ತಮ ಭವಿಷ್ಯದ ಬದ್ಕು ಸಾಗಿಸ್ಲಿ” ಹೇಳಿ ಕಟ್ಟಿದ ಕನ್ಸು ಚೂರು ಚೂರು ಆಗೋತಲೀ?
ಮಗ್ಳನ್ನೂ ಕೂರ್ಸ್ಕಂದು ನಿಧಾನವಾಗಿ ಹುಡ್ಗನ ಬಗ್ಗೆ ಕೆಳ್ದಾಗ ಗುತ್ತಾದ ವಿಷ್ಯ ಭಯಂಕರ ಆಘಾತಕಾರಿ. “ಅವ ಮುಸ್ಲೀಮರವ. ದಿನಾ ಕಾಲೇಜಿಗೆ ಗಾಡಿ ಮೇಲೆ ಕರ್ಕಂಡ್ ಹೋಗ್ತಿದ್ದ. ನನ್ನ ಹೆಸ್ರ ಚಾಂದನೀ ಹೇಳಿ ಮಾಡಿದ್ದ. ನಾನೂ ಮುಸ್ಲಿಂ ಆಗ್ತೆ, ಅತು ರಾಶಿ ಚಲೋ ಧರ್ಮ, ನಿಂಗೋ ಮದ್ವೆ ಮಾಡಗಿದ್ರೆ ನಾನೇ ಹೋಗ್ತೆ” ಮಗ್ಳ ಮಾತು ಚಾಕುವಿನಂತೆ ಎದೆ ಇರಿದಾದ ಆಘಾತ ತಡ್ಕಂಬ್ಲಾಗ್ದೇ ಕುಸ್ದು ಬಿದ್ದ ಶರಾವತಿ ಮಾನಸಿಕ ಸ್ಥಿಮಿತ ಕಳಕಂಡ್ತು. ಶರಾವತಿಯನ್ನೂ ಶಿವಮೊಗ್ಗದ ಮೆಂಟಲ್ ಆಸ್ಪತ್ರೆಗೆ ಸೇರ್ಸಿ ಔಷಧಿ ಮಾಡ್ಸಕಾತು.
ಮತ್ತೆ ಮನೆಗೆ ಬಂದಾಗ ಶರಾವತಿ ವಂದು ಜೀವಂತ ಶವ. ನೋಡ್ದಲ್ಲೆಲ್ಲಾ ಮಗ್ಳಿಗೆ ಬಂದ ಶೀಲ್ಡ್, ಫೋಟೋ, ಸರ್ಟಿಫಿಕೇಟ್ ಕಣ್ಣಿರಿತ್ನಿದ್ರೆ ದೊಡ್ಡ ಭರತನಾಟ್ಯ ಪ್ರವೀಣೆಯಾಗ್ತೂ ಹೇಳಿ ಮಾಡ್ದ ಹೋರಾತ ನೆಂಟರಿಷ್ಟರ ಬಂಧುಬಳಗದ ಹಿತೈಷಿಗಳ ಪರಿಚಯದೋರ ಎದುರಲ್ಲಿ ಇದ್ದ ಸ್ಥಾನಮಾನ, ಎಲ್ಲರಿಗೂ ಇದ್ದ ನಿರೀಕ್ಷೆ, ಮಗ್ಳ ಬಾಳಿಗೆ ಬೆಂಕಿ ಇಟ್ಕಂಡ ಪರಿ ಶರಾವತಿಗೆ ಬದ್ಕಲೂ ಆಗಗಿದ್ದ ಸಾಯಲೂ ಆಗಗಿದ್ದ ಪರಿಸ್ಥಿತಿ.
“ಇದ್ಕೊಂದ್ ಸರಿಯಾದ ವ್ಯವಸ್ಥೆ ಮಾಡೋ ಹೇಳಿ ಹೊಟ್ಟೆ ಬಟ್ಟೇ ಕಟ್ಟಿ ವದ್ದಾಡದ್ದು ಇಪ್ಪತ್ತು ವರ್ಷ ಹೋರಾಟ ಮಾಡದ್ದು ದಂಡಾತಲಿ? ಅಂವ ಇದ್ರ ಪೋಲಿಷಿ ಮಾಡುಲೆ ವಂದ್ ನಲವತ್ತು ರೋಪಾಯಿನ ಚಾಕ್ಲೇಟ್ ಬಾರ್ ತೆಗಿಸ್ಕೊಟ್ಟದ್ದೇ ದೊಡ್ದಾತಾ? ಥಂಡಿ ಜ್ವರ ಆಗೋಕು ಹೇಳಿ ನಂಗೋ ಹೋಟೇಲಲ್ಲಿ ಇಡ್ಲಿ ತೆಗಿಸಿಕೊಟ್ರೆ ಅಂವ ಡಾಬಾಕ್ಕೆ ಕರ್ಕಂಡ್ ಹೋಗಿ ಗೋಬಿಮಂಚೂರಿ ತೆಗೆಸ್ಕೊಟ್ಟು ಥಂಡಿ ಮಾಡದ್ದೆ ಹೆಚ್ಚಾತಾ? ನಂಗ ಕಷ್ಟ ಪಟ್ಟು ದುಡ್ದು ಉಪಾಸಿದ್ದು ದುಡ್ಡು ಉಳಿಸಿ ಬಂಗಾರದ ಚೈನ್ ಮಾಡ್ಸ್ದಕ್ಕಿಂತ ೫೦೦ ರೂಪಾಯಿನ ಚೂಡಿದಾರ್ವೇ ಹೆಚ್ಚು ಬೆಲೆ ಪಡತ್ತಲೀ? ಬೇರೆ ಮನೆಗೆ ಟೀವಿ ನೋಡುಲೆ ಹೋಗಿ ಹೆಸ್ರ ಹಾಲಾಕ್ಕೂ ಹೇಳಿ ಸಾಲಾ ಮಾಡಿ ಮನೆಗೆ ಟೀವಿ ತಂದದ್ದು ದೊಡ್ದಾ? ಅಂವ ಬೆಂಗ್ಳೂರಲ್ಲಿ ಎಂತೆಂತದೋ ಮಳ್ ಮಳ್ ಇಂಗ್ಲೀಷ್ ಸಿನೇಮಕ್ಕೆ ಕರ್ಕಂಡೋಗದ್ದೆ ದೊಡ್ಡದಾ? ಅದ್ಕೇ ಎಲ್ಲವೂ ಅಂವಂದೇ ಸರಿ ಅನ್ನಿಸ್ತಾ? ನಂಗ್ಳಾ ಧರ್ಮನೇ ಹೀಗಳೆವಷ್ಟೆಲ್ಲಾ ಕೆಟ್ಟೋತಲಿ ಮಗ್ಳು? ಸತ್ತ ಬದ್ಕೂ ಬದ್ಕೂದೇಂಗೆ? ಸಾವಾದ್ರೂ ಯಾಕೆ ಬತ್ತಿಲ್ಯೋ ಪರಮಾತ್ಮಾ? ಮಗ್ಳಿಗೆ ಯೋಗ್ಯತೆ ಇದ್ದು ಹೇಳಿ ತಿಳ್ಕಂಡದ್ದೇ ತಪ್ಪು. ಅದ್ರ ಯೋಗ್ಯತೇನೆ ಅಷ್ಟು ಕೆಳಮಟ್ಟದ್ದು”
ವತ್ತಿ ವತ್ತಿ ಬಪ್ಪ ವಿಚಾರದ ತಾಕಲಾಟ ಹೊಟ್ಟೇನೇ ಬಗೆದು ಚೂರ್ ಮಾಡ್ಕಳೋ ವತ್ತಡದಲ್ಲಿ ಆದ ಮಾನಸಿಕ ಹೋರಾಟಕ್ಕೆ ಅಂತ ಪಾರಿಲ್ಲೆ. ಸರೀಕ್ರ ಎದುರಿಗೆ ತಲೆ ಎಲ್ಕಂಡು ತಿರ್ಗುಲಾಗಗಿದ್ದ್ ಪರಿಸ್ಥಿತಿ. ಆದ್ರೂ ದಿನಾ ಮಗ್ಳ ಹತ್ರ ನಂಬ್ರ, ಜಗ್ಳ “ನಾ ಯಾವಾಗ್ಲೋ ವೋಡೋಗ್ತಿದ್ದೆ, ಅವ್ನೇ ತಡೆ ಹೇಳಿದ್ದಾ” ಹೇಳಿ ಮಗ್ಳು ಹೇಳಿಕರೆ ವಬ್ಬ ಮುಸ್ಲಿಂ ಹುಡ್ಗಂಗಿಪ್ಪ ಯೋಗ್ಯತೆಯೂ ಇದಕ್ಕಿಲ್ಯಾ? ಅಂಧ ಪ್ರೀತಿಲಿ ಅಂಧಾಗೋಜಾ? ನನ್ನ ಹೊಟ್ಟೇಲಿ ಹುಟ್ಟಿ ಇಂಥ ಕೆಳಮಟ್ಟದ ಕೂಸು ಹೇಂಗಾಗೋತು? ನಾ ಹಾಕೊಟ್ಟ ಸಂಸ್ಕಾರವೇ ಅಷ್ಟ ಕೆಳ ಮಟ್ಟಾದ್ದಾ? ನಾಕುಡ್ಸಿದ ಹಾಲೇ ನಂಜಾಗಿತ್ತಾ? ನನ್ನ ಯಾವ ಜನ್ಮದ ಪಾಪ ಹೀಂಗ್ ಕಾಡ್ತ್ನಿದ್ದು?”
(ಇನ್ನೂ ಇದ್ದು….)
ಚಿತ್ರರೂಪ:
ಪರಿವರ್ತನೆ ಹೇಂಗೆ ಆವ್ತೂ ಹೇಳಿ ನೋಡ್ತ ಕುತೂಹಲ ಮನಸ್ಸಿಲ್ಲಿ ಇದ್ದು. ಇನ್ನಾಣ ಕಂತಿಂಗೆ ಕಾಯ್ತಾ ಇದ್ದೆ.
ಅಣ್ಣಂದ್ರು ಓದಿ ಅಕ್ಕ ತಂಗೆಕ್ಕಳ ಬರವಲೆ ಪ್ರೋತ್ಸಾಹಿಸಿ, ಕೊಡಗಿನ ಗೌರಮ್ಮಕಥಾಸ್ಪರ್ದೆ ಇನ್ನೂ ಬೆಳೆಯಲಿ ಹೇಳಿ ವಿನಂತಿ.
ಲಾಯಿಕ ಆಯಿದು ಕತೆ ನಿರೂಪಣೆ.
ಕುತೂಹಲಕ್ಕೆ ಎಡೆ ಮಾಡಿ ಕೊಟ್ಟು, ಇನ್ನಾಣ ಕಂತಿಂಗೆ ಕಾವ ಹಾಂಗೆ ಆಯಿದು.
ಕಥೆ ಭಾರೀ ಲಾಯ್ಕ ಬೈಂದು…ನೈಜ ಸನ್ನಿವೇಶವ ವಿವರ್ಸಿದ ಹಾಂಗೆ ಆತು..
ಲಾಯ್ಕ ಇದ್ದು
ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆ- ನಮ್ಮ ಸಮಾಜದ ಮಹಿಳಾ ಕಥೆಗಾರ್ತಿಯರಿಂಗೆ ಉತ್ತೇಜನ ಕೊಡ್ತ ಒಂದು ಒಳ್ಳೆ ವೇದಿಕೆ. ತನ್ಮೂಲಕ ಹವ್ಯಕ ಲೇಖಕಿಯರ ಸಂಖ್ಯೆ ಬೆಳೆಯಲಿ.
ಈ ಕಥೆಯ ಅಂತ್ಯ ಹೇಗಿಕ್ಕು ಹೇಳ್ತ ಕುತೂಹಲ ಇದ್ದು.