Oppanna.com

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ

ಬರದೋರು :   ದೊಡ್ಮನೆ ಭಾವ    on   11/10/2012    12 ಒಪ್ಪಂಗೊ

ದೊಡ್ಮನೆ ಭಾವ

ಆವತ್ತು ಸೆಪ್ಟೆ೦ಬರ್ 22, ಶನಿವಾರ, ಸ೦ಜೆ ಐದು ಘ೦ಟೆ. ಸುಮಾರು 800ಜನ ಹಿಡಿಸೋ ಬೆ೦ಗ್ಳೂರಿನ ಗಾಯನ ಸಮಾಜದಲ್ಲಿ ಕು೦ತ್ಕಳಕ್ಕೆ ಜಾಗಇಲ್ದೆ ಜನ ಅಲ್ಲಲ್ಲಿ ನಿ೦ತ್ಕ೦ಡಿದ್ದೊ. ಗಾಯನ ಸಮಾಜ ಸಭಾ೦ಗಣಕ್ಕೆ ಅದೆ೦ತೂ ಹೊಸ್ದಲ್ಲ. ಎ೦ತಕ್ಕೆ ಅ೦ದ್ರೆ ಲಾಗಾಯ್ತಿ೦ದ ಅಲ್ಲಿ ಆಪುದೇ ಪ್ರತಿಷ್ಠಿತ ಕಾರ್ಯಕ್ರಮ, ಸೇರುವವರೂ ಅಷ್ಟೇಯ. ಅ೦ದಹಾಗೆ, ಆವತ್ತು ಸೃಷ್ಠಿಕಲಾ ವಿದ್ಯಾಲಯವತಿಯಿ೦ದ ಶ್ರೀ ನರಹರಿ ದೀಕ್ಷಿತ, ಮ೦ಚಾಲೆ ಇವ್ರಿಗೆ “ಗಾನ ಕಲಾಭಿಜ್ಞ” ಅ೦ತ ಬಿರುದು ಕೊಟ್ಟು ಸನ್ಮಾನ ಮಾಡಿದ್ದೊ. ಕನ್ನಡದ ಖ್ಯಾತ ಸಾಹಿತಿ/ಕವಿ ಶ್ರೀ ಎಚ್.ಎಸ್.ವೆ೦ಕಟೇಶ ಮೂರ್ತಿ ಅವರು, ಶ್ರೀ ಲಹರಿ ವೇಲು, ಸೃಷ್ಠಿ ಕಲಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಛಾಯಾಪತಿ ಹಾಜರಿದ್ದು ಪ್ರಶಸ್ತಿ ಪ್ರದಾನ ಮಾಡಿದವು. (ಕ.ಸಾ.ಪ. ಅಧ್ಯಕ್ಷ ಶ್ರೀ ಪು೦ಡಲೀಕ ಹಾಲ೦ಬಿಯವು ಮುಖ್ಯ ಅಥಿತಿಯಾಗಿ ಬರೋ ನಿರೀಕ್ಷೆ ಇತ್ತು, ಕಾರಣಾ೦ತರದಿ೦ದ ಬ೦ದಿದ್ವಿಲ್ಲೆ)

ನರಹರಿ ದೀಕ್ಷಿತ್ ಅ೦ದ್ರೆ ಏರು?: ನಿ೦ಗಳು ಬೆ೦ಗಳೂರಿಲ್ಲಿದ್ದು ಭಾವಗೀತೆ ಬಗ್ಗೆ ಒ೦ಚೂರು ಅಭಿಮಾನ ಇದ್ರೂ ನರಹರಿ ದೀಕ್ಷಿತ್ ಎಡತಾಗುತ! ಅಥ್ವಾ ನಿ೦ಗಳು ’ಎದೆತು೦ಬಿ ಹಾಡುವೆನು’ ಕಾರ್ಯಕ್ರಮವನ್ನ ನಿರ೦ತರವಾಗಿ ನೋಡಿದ್ರೆ ಈ ಎನ್ನ ಪೀಠಿಕೆ ಬೇಕಾಗ್ತಿಲ್ಲೆ. ಶ್ರೀ ನರಹರಿ ದೀಕ್ಷಿತ್ ಇವತ್ತು ಬೆ೦ಗಳೂರಿನಲ್ಲಿ ಸುಮಾರು 400 ಸ೦ಗೀತ ವಿಧ್ಯಾರ್ಥಿಗಳಿಪ್ಪ ಶಿಕ್ಷಕರು. ಅ೦ದ್ರೆ ನಿಸ್ಸ೦ಶಯವಾಗಿ ನ೦.1 ಸುಗಮ ಸ೦ಗೀತ ಶಿಕ್ಷಕ ಅ೦ತ ಇಟ್ಗಳ್ಳಕ್ಕು.

ಇವರದ್ದು ಈ ಕಾಲದಲ್ಲಿ ಒ೦ದು ತರದ ಹೊಸ ಪ್ರಯೋಗ. ವಿಧ್ಯಾರ್ಥಿಗಳ ಮನೇಗೇ ಹೋಗಿ ಪಾಠ ಮಾಡದು.

ಅದು ಹೀ೦ಗೆ:ಯಾವ್ದಾದ್ರೂ ಬಡಾವಣೆಯಲ್ಲಿ ಸ೦ಗೀತ ಕಲೂಲೆ ಆಸಕ್ತಿ ಇಪ್ಪ ಮಕ್ಕಳು ಇದ್ರೆ ಸುಮಾರು ಹತ್ತು ಹದ್ನೈದು ಮಕ್ಕಳನ್ನು ಅಲ್ಲೇ ಸೇರಿಸಿ ಸ೦ಗೀತ ಪಾಠ ಮಾಡೊ ಪರಿಪಾಠ. ಅಷ್ಟೇ, ಅಲ್ಲಿಗೆ ವಾರಕ್ಕೆ ಒ೦ದು ದಿನ- ಒ೦ದೂವರೆ-ಎರೆಡು ಘ೦ಟೆ ಅವರ ಮನೆಯಲ್ಲಿ ಪಾಠ. ಮತ್ತೆ ಮು೦ದಿನ ವಾರ. ಮತ್ತೆ ಬೇರೆ ಬಡಾವಣೆ ಬೇರೆ ಮನೆ, ಬೇರೆ ವಿದ್ಯಾರ್ಥಿಗಳು, ಮೇಷ್ಟ್ರು ಒಬ್ರೇ! ಅ೦ದ್ರೆ ಇವರದ್ದು ಏಕ ಶಿಕ್ಷಕರ ಶಾಲೆ. ಇದೇ ಕಾರಣದಿ೦ದ್ಲೇ ಮೊದ್ಲು “ಸ೦ಚಾರಿ ಸ೦ಗೀತ ಶಾಲೆ” ಅ೦ತ ಹೆಸರು ಇಟ್ಟಿದೊ. ನ೦ತ್ರ ಬದಲಾಯಿಸಿ “ಸೃಜನ ಸ೦ಗೀತ ಶಾಲೆ” ಅ೦ತ ಹೆಸರು ಇಟ್ಟಿದ್ದೊ. ಎ೦ತಕ್ಕೆ ಜನಪ್ರಿಯ ಅ೦ದ್ರೆ, ಇವರ ಶಿಕ್ಷಣ ಶೈಲಿ. ವಿಧ್ಯಾರ್ಥಿಗೊ ಬಯಸೊ ಪ್ರೀತಿ, ಮಧ್ಯ ಮಧ್ಯೆ ತಮಾಷೆ, ಸರಳ ಮಾರ್ಗದಲ್ಲಿ ಕಲಿಕೆ, ಪೋಷಕೊ ಅಪೇಕ್ಷಿಸೊ ಶಿಸ್ತು, ಸ೦ಯಮ,ವಿನಯ, ಮತ್ತೆ ನೈಪುಣ್ಯತೆ. ಇವರ ಸುಮಾರು ಇಪ್ಪತ್ತು ವಿಧ್ಯಾರ್ಥಿಗಳು ರಾಷ್ಟ್ರ ಮಾಟ್ಟದಲ್ಲಿ ಸಧನೆ ಮಾಡಿದ್ದೊ ಅ೦ದ್ರೆ ಬಹುಶಃ ಕಮ್ಮಿಯಲ್ಲ. ಇವರ ಶಿಷ್ಯರು ವಿದೇಶಗಳಲ್ಲೂ ಇದ್ದ. ಬೆ೦ಗ್ಳೂರು ಅಥ್ವಾ ಕರ್ನಾಟಕದ ಯಾವುದೇ ಪ್ರಮುಖ ಸ೦ಗೀತ ಸ್ಪರ್ಧೆ ಇದ್ದು ಅ೦ದ್ರೆ ಅಲ್ಲಿ ನರಹರಿ ದೀಕ್ಷಿತರ ಶಿಷ್ಯರನ್ನ – ಬಹುಮಾನ ತೆಕ್ಕೋಳದ್ನ ನೋಡ್ಳಕ್ಕು.ಸುಶ್ರಾವ್ಯವಾಗಿ ಹಾಡೋ ನಮ್ಮ ಬೈಲಿನ ದೀಪಿ-ಅಕ್ಕ ಕೂಡ ನರಹರಿ ದೀಕ್ಷಿತರ ಶಿಷ್ಯೆ ಅ೦ತ ಕೇಳಿದ್ದಿ.

ಮೂಲ: ನರಹರಿ ಮೂಲತಃ ಸಾಗರದ ಹತ್ತಿರ ಮ೦ಚಾಲೆಯವ್ರು. ಸಣ್ಣಕ್ಕಿದ್ದಾವಾಗ ಮಾಸ್ತಿಕಟ್ಟೆಯ ಹತ್ತಿರ ಅಜ್ಜನ ಮನೇಲಿ ಬೆಳದವು. ಕಡುಬಡತನದ ಹವ್ಯಕ ಕುಟು೦ಬ ಆದ್ರೆ ಮನೆಯಲ್ಲಿ ಎಲ್ಲವೂ ಚೊಲೋ ಶಾರೀರ ಇಪ್ಪವ್ವು. ಆಗ ಮಾಸ್ತಿಕಟ್ಟೇಲಿ ವರಾಹಿ ಪ್ರಾಜೆಕ್ಟಿನ ಸಿಬ್ಬ೦ದಿ ಮನೇಕ್ಕೆ ವರ್ತನೆ ಹಾಲುಕೊಡೂಲೆ ಆರೇಳು ವರ್ಷದ ನರಹರಿ ತ೦ಗಿ/ಅಕ್ಕನ ಜತೆ ಹೋಗೂದು ರೂಢಿ ಆಗಿತ್ತು. ಆಗ ಅಲ್ಲಿ ಇ೦ಜಿನಿಯರ್ ಆಗಿದ್ದ ಶ್ರೀ ರಾಘವೇ೦ದ್ರ ರಾವ್ ದ೦ಪತಿ ಕಣ್ಣಿಗೆ ಇವು ಬಿದ್ದೊ. ಪುಟ್ಟ ಮಕ್ಕಳು ಹಾಡೂದು ಗಮನಿಸಿ, ತಿ೦ಡಿ ಆಸೆ ತೋರಿಸಿ ಮತ್ತೆ ಮತ್ತೆ ಹಾಡಿಸ್ತಿದ್ವಡ. ತಮ್ಮ ಸ೦ಘದ ವತಿಯಿ೦ದ ಗಣಪತಿ ಹಬ್ಬ/ ಸ೦ಘದ ವಾರ್ಷಿಕ ಹಬ್ಬದಲ್ಲಿ ಅವುಕಾಶ ಕೊಡ್ಸಿದಾಗ ರಾಶಿ ಚೊಲೋ ಹಾಡಿದ್ವಡ, ಜೊತೆಗೆ ಚಪ್ಪಾಳೆ ಸುರಿಮಳೆ, ನೋಟಿನ ಸರ! ಇನ್ನೂ ಎರೆಡು ವರ್ಷ ಹೀ೦ಗೇ ಮು೦ದುವರೆದಾಗ ಪುಟ್ಟ ನರಹರಿಗೆ ನಿಜಕ್ಕೂ ತನ್ನಲ್ಲಿಪ್ಪ ಶಕ್ತಿಯ ಪರಿಚಯ ಆಗಿತ್ತು. ಬಹುಶಃ ಅಲ್ಲಿ೦ದ್ಲೇ ನರಹರಿಯ ಸಾಹಸ ಪ್ರಾರ೦ಭ ಆತು. (ರಾಘವೇ೦ದ್ರ ರಾವ್ – ಈ ಲೇಖಕನ ಅಣ್ಣ) ನ೦ತ್ರ ಸಾಗರದಲ್ಲಿ ಓದನ್ನ ಒ೦ದು ಹ೦ತಕ್ಕೆ ಮುಗಿಸಿ, ಬೆ೦ಗಳೂರಿಗೆ ಬ೦ದ. ಮು೦ದಿನದು ನರಹರಿ ದೀಕ್ಷಿತರ ಯಶಸ್ವೀ ಸಾಧನೆ. ಭಾವಗೀತಾ ಸ್ಪರ್ಧೆಗಳಲ್ಲಿ ಸುಮಾರು 300ಕ್ಕೂ ಹೆಚ್ಚುಪ್ರಥಮ/ದ್ವಿತೀಯ ಬಹುಮಾನಗಳು, ಆರ್ಯಭಟ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ ಮು೦. ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ ಇವೆಲ್ಲದರ ಸ೦ಗಮ ಆಗಿದ್ದ ನರಹರಿ ಇ೦ದು ಸುಗಮ ಸ೦ಗೀತಕ್ಕೆ ಹವ್ಯಕ ಜನರ ಹೆಮ್ಮೆಯ ಕೊಡುಗೆ. ಯಾವ ವಶೀಲಿ, ಲಾಬಿ, ಕಾಡಿ ಬೇಡದೆ ಒಳ್ಳೆಯ ಹೆಸರು ತೆಕ್ಕ೦ಡಿದ ಅನ್ನೂದು ಮುಖ್ಯ.

ಇವು ರಾಮಚ೦ದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಪರಮ ಭಕ್ತರೂ ಹೌದು.

ನ೦ಗಳ ಭಾಷೆ, ಹಿರಿಯರು, ಗುರುಗಳ ಬಗ್ಗೆ ಗೌರವ ಇಟ್ಗ೦ಡಿಪ್ಪ ಇವರಿಗೆ ಮು೦ದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗ್ಲಿ ಅ೦ತ ಆಶೆ ಪಡೊ, ಎ೦ತ ಹೇಳ್ತ್ರಿ?

(ದೀಕ್ಷಿತರ ಸ೦ಪರ್ಕ: 9448928611)

(ನರಹರಿ ದೀಕ್ಷಿತರ ಇನ್ನೂ ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ: http://dodmane.blogspot.com/2012/09/blog-post.html)

(ನರಹರಿ ದೀಕ್ಷಿತರಿಗೆ ಸನ್ಮಾನದ ವಿಡಿಯೋ: http://www.yourepeat.com/watch/?v=Qr2ow1MwTzw&feature=youtube_gdata )

12 thoughts on “ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ

  1. ಎನ್ನ ಉತ್ತರಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ ಉತ್ತರಿಸಿದ್ದಕ್ಕೆ THANKS ವೆಂಕಟೇಶಣ್ಣ.

    ನೀವು ತಿಳ್ಕಂಡ್ಹಾಂಗೆ, ಬ್ಲೋಗ್ ಇಟ್ಗಂಡು ಲೇಖನಗಳನ್ನ ಬರೆಯೋ ಮಟ್ಟಿಗೆ ಬೆಳೆದ ಲೇಖಕಿ ಅಲ್ಲ ಆನು. ಯಾವ್ದಾದ್ರೂ ವಿಶೇಷವಾದ ವಿಷಯ ಅಥವಾ ವ್ಯಕ್ತಿ ನನ್ನ ಗಮನಕ್ಕೆ ಬಂದ್ರೆ ಮಾತ್ರ ಬರೆಯೋ ಚಿಕ್ಕ ಹವ್ಯಾಸ ಇಟ್ಗಂಜಿ ಅಷ್ಟೆ.

    ನೀವು ಈಗಾಗಲೇ “ಶ್ರೀ ನರಹರಿ ದೀಕ್ಷಿತ್” ಅವರ ಹಾಡಿನ ಕೆಲವು ವೀಡಿಯೋ ಲಿಂಕ್ ನ್ನ ಇಲ್ಲಿ ಕೊಟ್ಟಿದ್ದು ಬಹಳ ಒಳ್ಳೆದಾತು. ಹಾಂಗೆ, ಆನೂ ಎಂಗೆ ಗೊತ್ತಿದ್ದ ಅವರ ಕೆಲವು ವಿಶೇಷ ವೀಡಿಯೋ ಲಿಂಕನ್ನ ನಮ್ಮ ಎಲ್ಲಾ ಹವ್ಯಕರಿಗೋಸ್ಕರ ಈ ಕೆಳಗೆ ಕೊಡ್ತಾ ಇದ್ದಿ. ಹವ್ಯಕರು, ಹವ್ಯಕರಿಗೋಸ್ಕರ ಮಾಡಿರೋ ಈ ವೆಬ್ ಸೈಟ್ ಈ ರೀತಿ ಸದ್ವಿನಿಯೋಗ ಆಗ್ತಿರದು ನೋಡಿ ನಿಜವಾಗ್ಲೂ ತುಂಬಾ ಸಂತೋಷ ಆಗ್ತು. ಪ್ರತಿಭಾವಂತ ಹವ್ಯಕರ ಪ್ರತಿಭೆಯನ್ನ ಹವ್ಯಕ ಸಮುದಾಯದ ಮನೆ-ಮನೆಗಳ, ಮನ-ಮನಗಳಲ್ಲಿ ಪಸರಿಸೋ ಪ್ರಾಮಾಣಿಕ ಪ್ರಯತ್ನದಲ್ಲಿರೋ ನಿಮಗೆ ಹಾಗೂ ನಿಮ್ಮ “oppanna.com” ಗೆ ಮತ್ತೊಮ್ಮೆ ಎನ್ನ ಧನ್ಯವಾದ.

    “ಶ್ರೀ ನರಹರಿ ದೀಕ್ಷಿತ್” ಅವರ …..

    ೧. “ಆರ್ಯಭಟ” ಪ್ರಶಸ್ತಿ ಸ್ವೀಕಾರ: http://youtu.be/NC7wMUDvCc8
    ೨. ಕನ್ನಡ ಚಿತ್ರಗೀತೆ “ಎಲ್ಲೆಲ್ಲು ಸಂಗೀತವೇ” : http://youtu.be/Rbg2DgFZMm8
    ೩. ಸಂತ ಶಿಶುನಾಳ ಷರೀಫರ ಗೀತೆಗಳು: http://youtu.be/ArHWnM34-vw
    ೪. ಗರ್ತಿಕೆರೆ ರಾಘಣ್ಣ ರಾಗ ಸಂಯೋಜನೆಯ ಭಾವಗೀತೆ: http://youtu.be/qlvlVJ3z8KY
    ೫. ಹಿಂದಿ ಚಿತ್ರಗೀತೆ “ಜಾನೆ ಕಂಹಾ”: http://youtu.be/joOQBVANxUQ
    ೬. ಈ ಟಿವಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದ ನಿರ್ಣಾಯಕರಾಗಿ= http://youtu.be/tVxDpN1uz2E
    ೭. ಉದಯ ಟಿವಿಯ “ಅರುಣೋದಯ” ಕಾರ್ಯಕ್ರಮದಲ್ಲಿ= http://www.youtube.com/watch?v=39jVeNasE9g&feature=channel
    ೮. ಉದಯ ಟಿವಿಯ “ದಿವ್ಯಜ್ಯೋತಿ” ಕಾರ್ಯಕ್ರಮದಲ್ಲಿ = http://www.youtube.com/watch?v=aUaUM95Xv9A&feature=related

    ವಿದ್ಯಾ ಭಟ್

  2. ವೆಂಕಟೇಶಣ್ಣಂಗೆ ನಮಸ್ಕಾರ.

    ಆನು “ವಿದ್ಯಾ ಭಟ್” ಅಂತ್ಹೇಳಿ. ಮೂಲತ: ಶಿರಸಿ. ಕಳೆದ ೧೦ ವರ್ಷದಿಂದ ಬೆಂಗಳೂರಲ್ಲಿದ್ದಿ. ನಿಮ್ಮ ಹಲವಾರು ಲೇಖನಗಳನ್ನ ಓದಿದ್ದಿ. ಬಹಳ ಚೆನ್ನಾಗಿ ಬರಿತ್ರಿ. ಮೊನ್ನೆ, ದೀಪಿಕಾ ಭಟ್ ಹೇಳಿದ್ಮೇಲೆ ನಿಮ್ಮ ಈ ಮೇಲಿನ ಲೇಖನ ನೋಡ್ದಿ. ಹವ್ಯಕ ಭಾಷೆಯಲ್ಲಿ ಹವ್ಯಕ ಸಾಧಕರೊಬ್ಬರ ಬಗ್ಗೆ ಸೂಪರ್ ಆಗಿ ಬರದ್ರಿ. ಓದಿ ರಾಶಿ ಖುಷಿ ಆತು. ಎಂಗೂ ಶ್ರೀ ನರಹರಿ ದೀಕ್ಷಿತ್‌ರವರ ಪರಿಚಯ ಇದ್ದು. ಒಂದು ಅರ್ಥದಲ್ಲಿ ಹೇಳವು ಅಂದ್ರೆ ಆನು ಅವರ ಇಂಡೈರೆಕ್ಟ್ ಸ್ಟೂಡೆಂಟ್. ಅರ್ಥ ಆಜಿಲ್ಲೆ ಅಲ್ದ? ಅಂದ್ರೆ, ಎನ್ನ ಮಗಳು “ಪ್ರತೀಕ್ಷಾ”(ಮೂರನೇ ತರಗತಿ) ಅವರ ಸ್ಟೂಡೆಂಟ್. ನಿಮ್ಗೆ ಗೊತ್ತಿದ್ಹಂಗೆ ಪಾಲಕರಿಗೂ ಅವರ ಕ್ಲಾಸಲ್ಲಿ ಇಪ್ಪಲ್ಲೆ ಅವಕಾಶ ಇದ್ದಲಿ; ಎನ್ಹಂಗೆ ಸುಮಾರು ಎಲ್ಲಾ ಪಾಲಕರೂ ಅವರ ಕ್ಲಾಸಲ್ಲಿ ಹಿಂದೆ ಕೂತ್ಗಂಡು ಅವ್ರು ಮಕ್ಕಳಿಗೆ ಹೇಳ್ಕೊಡೊ ಹಾಡೆಲ್ಲ ಕಲ್ತ್ಗತ್ಯ. ಹಂಗಾಗಿ, ಎಂಗ ಎಲ್ಲಾ ಅವ್ರ ಇಂಡೈರೆಕ್ಟ ಸ್ಟೂಡೆಂಟ್ಸ್ ಅಂತ ಹೇಳ್ಲಕ್ಕು; ಕರೆಕ್ಟ್ ಅಲ್ದ?

    ದೀಕ್ಷಿತ್ ಸರ್ ಅವ್ರ “ಗಾನಕಲಾಭಿಜ್ಞ” ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆನೂ ಬಂದಿದ್ದಿ. ಅವತ್ತು ಅವ್ರು ತಮ್ಮ ಭಾಷಣದ ಮಧ್ಯೆ ನಿಮ್ಮ ಬಗ್ಗೆಯೂ ಒಂದೆರಡು ಮಾತು ಹೇಳಿದ್ದು ನೆನಪಿದ್ದು ಎಂಗೆ. ಅಲ್ಲದೇ, ಅವರ “ಸೃಜನ ಸಂಗೀತ ಶಾಲೆ”ಯ ದಶಮಾನೋತ್ಸವದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನ ಫಸ್ಟ್ ಟೈಮ್ ಓದಿದಾಗ ನಿಜವಾಗ್ಲೂ ಕಣ್ತುಂಬಿ ಬಂದಿತ್ತು. ಅವ್ರು ಬೆಳ್ದು ಬಂದ ದಾರಿಯ ಬಗ್ಗೆ ಬಹಳ ಚೆನ್ನಾಗಿ ಬರದ್ರಿ ಅದ್ರಲ್ಲಿ. ಎಂಗ್ಳ ಮಗಳ ಗುರುಗಳ ಬಗ್ಗೆ ಎಂಗಕ್ಕೆ ಗೊತ್ತಿಲ್ದಿರೋ ಸಾಕಷ್ಟು ವಿಷಯವನ್ನ ನಿಮ್ಮ ಬರಹದ ಮೂಲಕ ತಿಳ್ಸಿಕೊಟ್ಟಿದ್ದಕ್ಕೆ ನಿಮ್ಗೆ ತುಂಬಾ-ತುಂಬಾ ಧನ್ಯವಾದಗಳು.

    ಎಂಗೆ ಗೊತ್ತಿದ್ಹಂಗೆ, ದೀಕ್ಷಿತ್ ಸರ್ ಗೆ ಬೇರೆ-ಬೇರೆ ಸಂಘ-ಸಂಸ್ಥೆಗಳಿಂದ ರಾಶಿ ಪ್ರಶಸ್ತಿ-ಪುರಸ್ಕಾರ ಸಿಕ್ಕಿದ್ದು. ಅದ್ರಲ್ಲಿ, ಅವ್ರಿಗೆ ತಮ್ಮ ಹುಟ್ಟೂರಲ್ಲಿ ಸಿಕ್ಕಿದ “ಗುರು ಸಮರ್ಥ” ಅನ್ನೋ ಬಿರುದು ಬಹಳ ಚೆನ್ನಾಗಿ ಒಪ್ತು. ಎಂತಕ್ಕೆ ಅಂದ್ರೆ ಆನು ಕಂಡಂತೆ ಅವ್ರು ನಿಜವಾಗಿಯೂ ಒಬ್ಬ ಸಮರ್ಥ ಗುರು. ಒಬ್ಬ ಉತ್ತಮ ಗುರುಗಳಲ್ಲಿರಬೇಕಾದ ಎಲ್ಲಾ ಅರ್ಹತೆ, ಗುಣ-ಲಕ್ಷಣಗಳು ಅವ್ರಲ್ಲಿದ್ದು. ಸಂಗೀತ ಗೊತ್ತಿದ್ದು; ಗೊತ್ತಿದ್ದ ಸಂಗೀತವನ್ನ ಕಲ್ಸದ್ಹ್ಯಾಂಗೆ ಗೊತ್ತಿದ್ದು; ಕಲ್ಸಿದ ಸಂಗೀತವನ್ನ ತಿದ್ದದ್ಹ್ಯಾಂಗೆ ಗೊತ್ತಿದ್ದು; ಕಲ್ತ ಸಂಗೀತವನ್ನ ಸ‍ರ್ಯಾಗಿ ಹಾಡ್ದೇ ಇದ್ರೆ ಕಿವಿ ಹಿಂಡಿ ಬೈಯದ್ಹ್ಯಾಂಗೆ ಗೊತ್ತಿದ್ದು; ಬೈದ ಮೇಲೆ ಸಮಾಧಾನ ಮಾಡದೂ ಗೊತ್ತಿದ್ದು; ಒಟ್ನಲ್ಲಿ ಸಂಗೀತವನ್ನ ಬಹಳ ಅಚ್ಕಟ್ಟಾಗಿ, ಶಿಸ್ತುಬದ್ಧವಾಗಿ ಕಲಸ್ತ್ರು. ಆ ಕಲೆ ಅವ್ರಲ್ಲಿ ದೈವದತ್ತವಾಗಿ ಬಂಜು. ಅದ್ಕೇ ಅವ್ರು ಹೇಳ್ಕೊಟ್ಟ ಹಾಡನ್ನೆಲ್ಲ ಮಕ್ಳು ಬಹಳ ಬೇಗ ಕಲ್ತು ಚೆನ್ನಾಗಿ ಹಾಡ್ತ. ಅವ್ರಿಗೆ ಅಷ್ಟೊಂದು (೪೦೦ ಕ್ಕೂ ಹೆಚ್ಚು) ವಿದ್ಯಾರ್ಥಿಗಳಿದ್ರೂ, ತಮ್ಮ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನ (ಹೆಸ್ರನ್ನಲ್ಲ) ಚೆನ್ನಾಗಿ ತಿಳ್ಕಂಜ್ರು. ಮಕ್ಳು ಚೆನ್ನಾಗಿ ಕಲಿಲಿ ಅನ್ನೋ ದೃಷ್ಟಿಯಿಂದ ಆಗಾಗ ಬಯ್ತಿರ್ತ್ರು. ಆದ್ರೂ ಅಷ್ಟೇ ತಮಾಷೆ ಮಾಡಿ ಮಕ್ಳನ್ನೆಲ್ಲ ಸಿಕ್ಕಾಪಟ್ಟೆ ನಗಸ್ತ್ರು. ಅದ್ಕೆ, ಅವ್ರ ಕ್ಲಾಸು ಯಾರಿಗೂ ಒಂಚೂರೂ ಬೋರ್ ಆಗ್ತಿಲ್ಲೆ. ಎಲ್ಲಾ ಮಕ್ಳು “ದೀಕ್ಷಿತ್ ಸರ್” ಕ್ಲಾಸು ಅಂದ್ರೆ ತುಂಬಾ ಇಷ್ಟಪಟ್ಟು (ಪಾಲಕರ ಒತ್ತಾಯ ಇಲ್ದೇ) ಬರ್ತ. ನಿಜವಾಗ್ಲೂ ಇಂಥ ಗುರುಗಳ ಹತ್ರ ಎನ್ನ ಮಗಳು ಸಂಗೀತ ಕಲೀತಿದ್ದು ಹೇಳಲ್ಲೆ ಹೆಮ್ಮೆ ಅನಸ್ತು.

    “ಶ್ರೀಯುತ ನರಹರಿ ದೀಕ್ಷಿತ್” ಅವ್ರಿಂದ ನಿತ್ಯ-ನಿರಂತರವಾದ ಸೇವೆ ಸುಗಮ ಸಂಗೀತ ಕ್ಷೇತ್ರಕ್ಕೆ ಸಿಗ್ಲಿ; ಅವ್ರು ಪಟ್ಟ ಪ್ರಯತ್ನ ಎಲ್ಲ ಸಫಲವಾಗಿ, ಅವರ ಗರಡಿಯಿಂದ ಇನ್ನೂ ಹೆಚ್ಚೆಚ್ಚು ಪ್ರತಿಭಾವಂತ ಗಾಯಕ-ಗಾಯಕಿಯರು ಬೆಳಕಿಗೆ ಬರ್ಲಿ; ಅವ್ರು ಕಟ್ಟಿ ಬೆಳೆಸಿದ “ಸೃಜನ ಸಂಗೀತ ಶಾಲೆ”ಯ ಕೀರ್ತಿ ರಾಷ್ಟ್ರವ್ಯಾಪೀ ಹಬ್ಲಿ; ಹಾಗೂ ಕಲಾದೇವಿಯ ಕೃಪಾ ಕಟಾಕ್ಷ ದೀಕ್ಷಿತರ ಹಾಗೂ ಅವ್ರ ಕುಟುಂಬದವರ ಮೇಲೆ ಸದಾ ಇರ್ಲಿ” ಹೇಳಿ ಸೃಜನ ಸಂಗೀತ ಶಾಲೆಯ ಎಲ್ಲಾ ಪಾಲಕರ ಪರ್ವಾಗಿ ಹಾಗೂ ನಮ್ಮ ಎಲ್ಲಾ ಹವ್ಯಕ ಬಾಂಧವರ ಪರ್ವಾಗಿ ಆನು ಮತ್ತು ಎನ್ನ ಯಜಮಾನ್ರು (ಶ್ರೀ ವಿಶ್ವನಾಥ ಭಟ್) ದೀಕ್ಷಿತ್ ಸರ್ ಗೆ ಶುಭ ಹಾರೈಸ್ತ್ಯ. ಮತ್ತೆ, ಎಂಗ್ಳ ಮಗಳ ಗುರುಗಳ ಬಗ್ಗೆ ಇಲ್ಲಿ ಬರ್ಯಲ್ಲೆ ಅವಕಾಶ ಮಾಡ್ಕೊಟ್ಟಿದ್ದಕ್ಕೆ ನಿಮ್ಗೆ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಹಾಗೂ ದೀಕ್ಷಿತ್‌ರವರ ಸ್ನೇಹ ಸದಾ ಹಿಂಗೇ ಇರ್ಲಿ ಹೇಳಿ ಈ ಮೂಲಕ ಆಶಿಸ್ತ್ಯ.

    (“ಶಿರಸಿ ಹವ್ಯಕ” ಭಾಷೆಲ್ಲಿ ಬರ್ಯಲ್ಲೆ ಹೋದಿ; ಆದ್ರೆ ಅದು “ಬೆಂಗ್ಳೂರ್ ಹವ್ಯಕ” ಭಾಷೆ ಆಗೋತು. ಸ‍ರ್ಯಾಗಿ ಅರ್ಥ ಆಗ್ದಿದ್ರೆ ಕ್ಷಮೆ ಇರ್ಲಿ).

    ವಿದ್ಯಾ ಭಟ್

    1. ವಿದ್ಯಾ, ನಮಸ್ಕಾರ.
      ನಿ೦ಗಳ ಕಳಕಳಿ ತು೦ಬಿದ ಉತ್ತರ ನೋಡಿ ರಾಶಿ ಕುಶಿ ಆತು. ನರಹರಿ ಒ೦ದೆರಡು ಸಲ ನಿ೦ಗಳ ಹೆಸರು ಹೇಳ್ದ೦ಗೆ ನೆನಪು, ಅವರ ಬಗ್ಗೆ ಒ೦ದು ಲೇಖನ ಬರೆಜ್ರಿ , ಅದು ವಿಜಯ ಕರ್ನಾಟಕದಲ್ಲೊ,…. ಎಲ್ಲೊ, ಒಟ್ಟಿನಲ್ಲಿ ಪ್ರಕಟ ಆಜು ಅ೦ತ ಹೇಳ್ದ೦ಗೆ ಇತ್ತು. ಎನ್ನ ಮಾಸಲು ನೆನಪಿನ ಶಕ್ತಿಗೆ ಕ್ಷಮೆ ಇರಲಿ.
      ನಿ೦ಗಳು ಹೇಳ್ದ೦ಗೆ, ನರಹರಿ ದೀಕ್ಷಿತ್ ನಮ್ಮ ಹವ್ಯಕ ಸಮಾಜಕ್ಕೇ ಕೀರ್ತಿ ತ೦ಜ. ನರಹರಿ ದೀಕ್ಷಿತ್ ಅಷ್ಟು ದೊಡ್ಡ ಹೆಸರು ಗಳಿಸಿದರೂ ಇವತ್ತೂ ಎಲ್ಲರೊ೦ದಿಗೆ ಅದೇ ಸರಳತೆ, ಅದೇ ವಿಶ್ವಾಸ ಇಪ್ಪುದು ನಿಜಕ್ಕೂ ದೊಡ್ಡ ತನ. “Greatest truths are always simple” ನರಹರಿ ವಿಷಯದಲ್ಲ೦ತೂ ಸತ್ಯ…… ಧನ್ಯವಾದ.
      (ನಿಮ್ಮ ಬರವಣಿಗೆ ನೋಡಿದರೇ ಉತ್ತಮವಾಗಿ ಬರೆಯುವ ಲೇಖಕಿ ಅ೦ತ ಗೊತ್ತಾಗ್ತು. ನಿ೦ಗಳ ಬ್ಲೊಗ್ ಇದ್ರೆ ತಿಳಿಸಿ., ನ೦ದು http://dodmane.blogspot.in ….. ಎನ್ನ ಅಪ್ಪನ ಬಗ್ಗೆ ಒ೦ದು ’ನೆನಪಿನ ಪುಸ್ತಕ’ ಬರಿತಾ ಬಿಜ್ಜಿ. ಹಾ೦ಗಾಗಿ ಆನು ಸದ್ಯಕ್ಕೆ ಇಲ್ಲಿ ಬೈಲಿಗೆ ಬರ್ತಾ ಇಲ್ಲೆ)

      1. ಎನ್ನ ಉತ್ತರಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ ಉತ್ತರಿಸಿದ್ದಕ್ಕೆ THANKS ವೆಂಕಟೇಶಣ್ಣ.

        ನೀವು ತಿಳ್ಕಂಡ್ಹಾಂಗೆ, ಬ್ಲೋಗ್ ಇಟ್ಗಂಡು ಲೇಖನಗಳನ್ನ ಬರೆಯೋ ಮಟ್ಟಿಗೆ ಬೆಳೆದ ಲೇಖಕಿ ಅಲ್ಲ ಆನು. ಯಾವ್ದಾದ್ರೂ ವಿಶೇಷವಾದ ವಿಷಯ ಅಥವಾ ವ್ಯಕ್ತಿ ನನ್ನ ಗಮನಕ್ಕೆ ಬಂದ್ರೆ ಮಾತ್ರ ಬರೆಯೋ ಚಿಕ್ಕ ಹವ್ಯಾಸ ಅಷ್ಟೆ.

        ನೀವು ಈಗಾಗಲೇ “ಶ್ರೀ ನರಹರಿ ದೀಕ್ಷಿತ್” ಅವರ ಹಾಡಿನ ಕೆಲವು ವೀಡಿಯೋ ಲಿಂಕ್ ನ್ನ ಇಲ್ಲಿ ಕೊಟ್ಟಿದ್ದು ಬಹಳ ಒಳ್ಳೆದಾತು. ಹಾಂಗೆ, ಆನೂ ಎಂಗೆ ಗೊತ್ತಿದ್ದ ಅವರ ಕೆಲವು ವಿಶೇಷ ವೀಡಿಯೋ ಲಿಂಕನ್ನ ನಮ್ಮ ಎಲ್ಲಾ ಹವ್ಯಕರಿಗೋಸ್ಕರ ಈ ಕೆಳಗೆ ಕೊಡ್ತಾ ಇದ್ದಿ. ಹವ್ಯಕರು, ಹವ್ಯಕರಿಗೋಸ್ಕರ ಮಾಡಿರೋ ಈ ವೆಬ್ ಸೈಟ್ ಈ ರೀತಿ ಸದ್ವಿನಿಯೋಗ ಆಗ್ತಿರದು ನೋಡಿ ನಿಜವಾಗ್ಲೂ ತುಂಬಾ ಸಂತೋಷ ಆಗ್ತು. ಪ್ರತಿಭಾವಂತ ಹವ್ಯಕರ ಪ್ರತಿಭೆಯನ್ನ ಹವ್ಯಕ ಸಮುದಾಯದ ಮನೆ-ಮನೆಗಳ, ಮನ-ಮನಗಳಲ್ಲಿ ಪಸರಿಸೋ ಪ್ರಾಮಾಣಿಕ ಪ್ರಯತ್ನದಲ್ಲಿರೋ ನಿಮ್ಮ “oppanna.com” ಗೆ ಮತ್ತೊಮ್ಮೆ ಎನ್ನ ಧನ್ಯವಾದ.

        “ಶ್ರೀ ನರಹರಿ ದೀಕ್ಷಿತ್” ಅವರ ………

        ೧. “ಆರ್ಯಭಟ” ಪ್ರಶಸ್ತಿ ಸ್ವೀಕಾರ: http://youtu.be/NC7wMUDvCc8
        ೨. ಕನ್ನಡ ಚಿತ್ರಗೀತೆ “ಎಲ್ಲೆಲ್ಲು ಸಂಗೀತವೇ” : http://youtu.be/Rbg2DgFZMm8
        ೩. ಸಂತ ಶಿಶುನಾಳ ಷರೀಫರ ಗೀತೆಗಳು: http://youtu.be/ArHWnM34-vw
        ೪. ಗರ್ತಿಕೆರೆ ರಾಘಣ್ಣ ರಾಗ ಸಂಯೋಜನೆಯ ಭಾವಗೀತೆ: http://youtu.be/qlvlVJ3z8KY
        ೫. ಹಿಂದಿ ಚಿತ್ರಗೀತೆ “ಜಾನೆ ಕಂಹಾ”: http://youtu.be/joOQBVANxUQ
        ೬. ಈ ಟಿವಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದ ನಿರ್ಣಾಯಕರಾಗಿ= http://youtu.be/tVxDpN1uz2E
        ೭. ಉದಯ ಟಿವಿಯ “ಅರುಣೋದಯ” ಕಾರ್ಯಕ್ರಮದಲ್ಲಿ= http://www.youtube.com/watch?v=39jVeNasE9g&feature=channel
        ೮. ಉದಯ ಟಿವಿಯ “ದಿವ್ಯಜ್ಯೋತಿ” ಕಾರ್ಯಕ್ರಮದಲ್ಲಿ = http://www.youtube.com/watch?v=aUaUM95Xv9A&feature=related

        ವಿದ್ಯಾ ಭಟ್

  3. ಒಪ್ಪಕೊಟ್ಟ ಎಲ್ಲರಿ೦ಗೂ ಧನ್ಯವಾದ. ಗೋಪಾಲಣ್ಣ ಹಾಡಿನ ನೆನಪು ಮಾಡಿದ್ದು ಚೊಲೋ ಆತು, ದೀಕ್ಷಿತರ ಹಾಡಿನ ಸ್ಯಾ೦ಪಲ್ ಈ ಕೆಳಗೆ ಇದ್ದು. ನಮ್ಮ ಬೈಲಲ್ಲಿ ದೊಡ್ಡ ಫೈಲು ಅಪ್ಲೋಡ್ ಮಾಡುಲೆ ತ್ರಾಸು ಆತು, ಹಾ೦ಗಾಗಿ ಬೇರೆ ಕಡೆ ಶೇಖರಿಸಿ ಲಿ೦ಕ್ ಕೊಟ್ಟಿದ್ದೆ. ಉತ್ತರಿಸುಲೆ ತಡ ಆಗಿದ್ದಕ್ಕೆ ಕ್ಷಮೆ ಇರಲಿ.

    1. Dixit with S.P.Balasubramanyam : http://www.youtube.com/watch?v=s0mLitVbYWQ
    2. ಭಾವ ಗೀತೆ: http://www.youtube.com/watch?v=P-DMp0jhUdc
    3. ಚಿತ್ರ ಗೀತೆ: http://www.youtube.com/watch?v=Qnk9H6UJjXQ

    ಇವರ ಬೈಲು (Website): http://www.srujanasangeetha.com/home.html

  4. ಸಪ್ಟೆಂಬರ್ ೨ರಂದು ಅವರ ಕಾರ್ಯಕ್ರಮವನ್ನು ಮಠದಲ್ಲಿ ಆನಂದಿಸಿದೆ.
    ಧನ್ಯವಾದಗಳು. ಶುಭವಾಗಲಿ.

  5. ಶುದ್ದಿ ಓದಿ ತು೦ಬಾ ಖುಶಿ ಆತು..
    ಆನು ಇವರ ಶಿಷ್ಯೆ ಹೇಳುಲೆ ತು೦ಬಾ ಹೆಮ್ಮೆ ಅ೦ಸುತ್ತು..
    ದೀಕ್ಶಿತ್ ಸರ್ ಬಗ್ಗೆ ಎಷ್ಟು ಹೇಳಿರು ಕಡಮ್ಮೆಯೇ..ಅವರ೦ದ ಸ೦ಗೀತ ಮಾತ್ರ ಕಲಿವದಲ್ಲ, ಶಿಸ್ತು,ಸಮಯ ಪ್ರಜ್ನ್ಯೆ..ಎಲ್ಲವೂ ಕಲಿಯಕ್ಕಾದ್ದೆ..
    ಮತ್ತೆ ಅವರ ಕ್ಲಾಸ್ ಅ೦ತು ಗಮ್ಮತ್ತು..೨ ಗ೦ಟೆಯ ಕ್ಲಾಸ್ ಅವರದ್ದು ಹಾ೦ಗಾಗಿ ಆರಿ೦ಗು ಚೂರುದೆ ಉದಾಸಿನ ಆಗದ್ದ೦ಗೆ ನೋಡಿಗೊ೦ಬಲೆ ಅವ್ವು ಮಾಡುವ ತಮಾಶೆಗೊ ಅ೦ತೂ ಭಾರಿ ಲಾಯ್ಕಿರ್ತು.
    ಹಾ೦ಗೇಳಿ, ಆದ ಪಾಠವ ಸರಿ ಹೇಳದ್ದರೆ,ಮರತ್ತರೆ,ಬೊಟ್ಟು ಹಾಕದ್ದೆ ಹೋದರೆ,ನಡುವಿಲಿ ಗ೦ಟೆ ನೋಡಿದರೆ,ತಡವಾಗಿ ಹೋದರೆ….ಆತು ಕತೆ, ಕೂಗುಲೆ ಬಪ್ಪಷ್ಟು ಬೈಗಾಳು..ಎಲ್ಲ್ಯಾರು ಬೈಗಾಳು ಸಿಕ್ಕಿತ್ತು ಹೇಳಿರೆ, ಚೂರು ಹೊತ್ತು ಕಳುದಕೋಡ್ಲೆ ಚೆ೦ದಕ್ಕೆ ಪ್ರೀತಿಲಿ ಮತಾಡ್ಸುತ್ತವು..
    ಒಟ್ಟಾರೆ ಒ೦ದು ಕ್ಲಾಸನ್ನುದೇ ತಪ್ಪುಸುಲೆ ಮನಸು ಬತ್ತಿಲ್ಲೆ..ಅವರಾ೦ಗಿಪ್ಪ ಗುರುಗೊ ಸಿಕ್ಕಿದ್ದು ಎನ್ನ ಪುಣ್ಯ.
    ಅವರ ಇಲ್ಲಿ ಪರಿಚಯಿಸಿದ ದೊಡ್ಮನೆ ಭಾವ೦ಗೆ ತು೦ಬಾ ಧನ್ಯವಾದ..

  6. ಅವರ ಹೆಸರು ಕೇಳಿದ್ದೆ.ಪರಿಚಯ ಓದಿ ನಮ್ಮ ಹವ್ಯಕರು ಹೇಳಿ ಗೊಂತಾತು.ಅವರ ಹಾಡು ಕೇಳಿದ್ದಿಲ್ಲೆ. ತುಂಬಾ ಸಂತೋಷ.ಅವರ ಒಂದು ಹಾಡು ಬೈಲಿಲಿ ಹಾಕುವಿರೊ?

  7. “ಎದೆ ತುಂಬಿ ಹಾಡುವೆನು” ಕಾರ್ಯಕ್ರಮಲ್ಲಿ ಹಲವಾರು ಮಕ್ಕೊ ತನ್ನ ಗುರು ನರಹರಿ ದೀಕ್ಶಿತ್ ಹೇಳಿ ಪರಿಚಯಿಸಿಗೊಂಡದರ ಕೇಳಿದ್ದೆ.
    ಅವರ ಬಗ್ಗೆ ಪರಿಚಯಾತ್ಮಕ ಲೇಖನ ಕೊಟ್ಟ ದೊಡ್ಮನೆ ಭಾವಂಗೆ ಧನ್ಯವಾದಂಗೊ.
    ಅವರ ಕೀರ್ತಿ ದೇಶಾದ್ಯಂತ ಬೆಳಗಲಿ ಹೇಳಿ ಹಾರೈಸುತ್ತೆ.

  8. ದೀಕ್ಷಿತರ ಪರಿಚಯ ಕೊಟ್ಟದು ಚಲೋ ಆತು. ಹವ್ಯಕ ಬಂಧು ಒಬ್ಬ ಹೀಂಗಿರ್ತ ಸಾಧನೆ ಮಾಡಿದ್ದು ಅಭಿಮಾನದ ಸಂಗತಿ. ಅವರ ಕೀರ್ತಿ ಪತಾಕೆ ಇನ್ನಷ್ಟು ಮೇಲೆ ಮೇಲಕ್ಕೆ ಏರಲಿ.

  9. ದೀಕ್ಷಿತ್,ಸಾರ್ ನ ಪರಿಚಯ ಓದಿ ತು೦ಬಾ ಕುಶಿ ಆತು. ( ಅವರ ಪರಿಚಯ ತು೦ಬಾ ಇದ್ದು) ಅವರ ಕ್ಲಾಸು ಹೇಳಿರೆ ಮಕ್ಕೊಗೆ ತು೦ಬಾ ಇಶ್ಟ್. ಅವಕ್ಕೆ ಮಕ್ಕಳಹತ್ತರೆ ತು೦ಬಾ ಪ್ರೀತಿ…ಅದ್ರೆ ಬಾಯಿಪಾಟ ಬಾರದ್ದರೆ ಸರೀ ಬೈಗುದೆ.ಹಾ೦ಗಾಗಿ ಮಕ್ಕ ಮತ್ತಣ ಕ್ಲಾಸಿ೦ಗೆ ಬಾಯಿಪಾಟ ಕಲ್ತು ಬತ್ತವು..ಅವರ ಪರಿಚಯಿಸಿದ ದೊಡ್ಮನೆ ಬಾವ೦ಗೆ ತು೦ಬಾ ಧನ್ಯವಾದ..

  10. ಹರೇ ರಾಮ.
    ಪರಿಚಯಕ್ಕೆ ಧನ್ಯವಾದಗಳು. ಶುದ್ದಿ ಓದು ಖುಶೀ ಆತು. ದೀಕ್ಷಿತರಿಂಗೆ ಅಭಿನಂದನೆಗೊ ಮತ್ತು ಇನ್ನಷ್ಟು ಕೀರ್ತಿ ಲಭಿಸಲಿ ಅಂತ ಶುಭಕಾಮನೆಗಳು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×