- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಮದಾಲು ವಂದಿಸಿ ಶ್ರೀಗುರುಗಳ
ಮತ್ತೆ ಹಾಕುವೆ ತುಳಸಿ ಮಾಲೆಯ
ಮುಂದೆ ಸುಖ ಸಂತೋಷ ಒದಗಿ ಬರಲೇಳಿ
ಮತ್ತೆ ಪೂಜೆ ಅಬ್ಬೆ ಅಪ್ಪನ
ನಿತ್ಯ ನೆನೆವೆ ಶ್ರೀರಾಮಚಂದ್ರನ
ಉತ್ತಮವಾಗಿ ಗೋಮಾತಗೆ ತಲೆಬಾಗಿ ಕೈ ಮುಗಿವೆ/೧//
ಉದಯಕಾಲದಿ ನಿತ್ಯ ವಿಧಿಗಳ
ಮದಾಲು ತೀರಿಸಿ ಬಪ್ಪೆ ಬೇಗವೆ
ಒದಗೊದಗಿ ಗೋಮಾತೆಯರ ನಮಿಸುತ್ತೇ/
ಕಪಿಲೆ ಗಂಗಗೆ ತುಂಗೆ ಭದ್ರಗೆ
ಗೌರಿ ಕಾಳಿಗೆ ಪುಣ್ಯಕೋಟಿಗೆ
ಆರತಿಯ ಬೆಳಗುತ್ತ ಅಕ್ಷತೆಯ ನೀಡುತ್ತೆ//೨//
ಹರಸಿ ಗೋಮಾತೆಯರೆ ಎಂಗಳ
ಕರೆಸಿ ಬೆಸಗೊಂಡೆಂಗೊ ನಿಂಗಳ
ಪರಿಹರಿಸಿ ತೊಳೆಯಿ ಬಪ್ಪ ಕಷ್ಟ ಕೋಟಲೆಯ//
ಮನೆಒಳ ಸಂತಾನ ಭಾಗ್ಯವ
ಮನಸ್ಸಿನೊಳ ಇಷ್ಟಾರ್ಥ ಸಿದ್ಧಿಯ
ಮನಸ್ಸಿಟ್ಟು ಬೇಡುತ್ತಿಯೊಂ ನಿಂಗಳ ಭಕ್ತಿಭಾವಂದ//೩//
ನೆತ್ತರಿನೊತ್ತಡ ಹದಕ್ಕೆ ಬರಲೀ
ಮತ್ತೆ ಸಿಹಿಮೂತ್ರ ಗುಣ ಕಾಣಲಿ
ಒತ್ತೊತ್ತಿ ಕರಗಿ ಹೋಗಲಿ ರೋಗಂಗೊ ಗೋಅರ್ಕಂದ//
ಮೈತೊರಿಕ್ಕಗೆ ಕಜ್ಜು ಸಿಬ್ಬಿಂಗೆ
ಮೈಯ ಚೆಂದಕೆ ಮೋರೆ ಕಾಂತಿಗೆ
ಸಾಬೂನು ಶಾಂಪುಗೊ ಇದ್ದು ಊರ ಹಸುಗೋಮಯಂದ//೪//
ರಾಘವೇಶ್ವರಗುರುಗೊ ತೋರ್ಸಿದ
ಅರ್ಕದ ತರತರ ಮದ್ದುಗಳಿಂದ
ಓಡಿ ಹೋಗಲಿ ಎಲ್ಲ ವಿಧದ ಕ್ಯಾನ್ಸ್ರರ್ ರೋಗಂಗೊ
ಆದಿ ನಂದಿನಿ ನಿನ್ನ ಅಬ್ಬೆಯು
ಕಾಮಧೇನುವೆ ಆಗಿ ಮೆರದ್ದದು
ಯೋಗಿ ವರ್ಯರು ಪೂಜೆಮಾಡಿದ ಜಗದಂಬೆ//೫//
ಮಂಗಳವು ಪುಣ್ಯಕೋಟಿಗೆ
ಮಂಗಳವು ಕಾಮಧೇನುಗೆ
ಮಂಗಳವು ಊರತಳಿ ಸಕಲ ಸಂತತಿಗೆ
ಮಂಗಳವು ವಿಶ್ವಮಾತಗೆ
ಮಂಗಳವು ಕಾಮದುಘಕ್ಕೆ
ಮಂಗಳವು ಗೋಪುಷ್ಟಿ ಯೋಜನಗೇ//೬//
~~~***~~~
ಲಾಯಕ ಆಯಿದು ವಿಜಯಕ್ಕ….
ವಿದ್ಯಂಗೂ ಧನ್ಯವಾದಂಗೊ
ಎಂತಾಡ ಮತ್ತೆ ವರ್ತಮಾನ?
ಕಂಪ್ಯೂಟರ್ ಹಾಳಾಗಿ ಸುಮಾರು ದಿನ ಆತು. ಬೈಲಿಂಗೆ ಬಪ್ಪಲಾಯಿದಿಲ್ಲೆ. ಹೇಂಗಿದ್ದಿ ವಿಜಯತ್ತೆ?
ಪುಣ್ಯಕೋಟಿಗೆ ನಮನ ಲಾಯಿಕಾಯಿದು ವಿಜಯತ್ತೆ.
ಹರೇರಾಮ ಚೆನೈ ಭಾವಂಗೆ, ಕಿರಣಂಗೆ, ಬೊಳುಂಬು ಗೋಪಾಲಂಗೆ ಎಲ್ಲರಿಂಗು ಧನ್ಯವಾದಂಗೊ
ಗೋಮಾತೆಗೆ ನಮನ ಲಾಯಕಾಯಿದು.
ಲಾಯ್ಕಾಯ್ದು 🙂
ಭಕ್ತಿಭಾವಂದ ಪುಣ್ಯಕೋಟಿಗೆ ನಮನ ಪದ್ಯ ಲಾಯಕ ಆಯ್ದು ವಿಜಯತ್ತೆ.