- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಬೇಕಪ್ಪ ಸಾಮಾನು:
೪ ಮುಷ್ಟಿ ತೊಂಡೆಸೊಪ್ಪು (ಊರ ತೊಂಡೆ),
ಎಳ್ಳೆಣ್ಣೆ ೪-೬ ಚಮಚ,
೨ ಗೇಣು ಉದ್ದ + ಅಗಲದ ಬೆಳಿ ಸೆಲ್ಲೆ ವಸ್ತ್ರ,
ಮಣ್ಣಿನ ಗುಂಡಿ ಬಾಯಡೆ ೧
ಗುಟ್ಟ ದೀಪ ೧
ಹರಳೆಣ್ಣೆ ೧ ಚಮಚ.
ಮಾಡುವ ವಿಧಾನ:
ತೊಂಡೆ ಸೊಪ್ಪಿನ ಆದು ಚೆಂದಕೆ ತೊಳದು ಗುದ್ದಿ ಎಸರು ಹಿಂಡೆಕ್ಕು. ಈ ಎಸರಿಲ್ಲಿ ಬಿಳಿ ವಸ್ತ್ರವ ಮುಂಗುಸಿ ಎಸರು ಹೀರಿದ ಮೇಲೆ ನೆರಳಲ್ಲಿ ಒಣಗಿಸೆಕ್ಕು. ಲಾಯ್ಕಕ್ಕೆ ಒಣಗಿದ ವಸ್ತ್ರಂದ ನೆಣೆ ಮಾಡಿ ದೀಪಕ್ಕೆ ಎಣ್ಣೆ ಎರೆದು ದೇವರ ದೀಪ ಹೊತ್ತುಸುತ್ತ ಹಾಂಗೆ ಹೊತ್ತಿಸೆಕ್ಕು. ಆ ಹೊತ್ತುತ್ತ ದೀಪಕ್ಕೆ ಬಾಯಡೆಯ ಕವಚಿ ಹಾಕೆಕ್ಕು. ಸಾಧಾರಣ ಅರ್ಧ ಗಂಟೆಲಿ ಬಾಯಡೆಯ ಒಳ ಹೊಡೆಲಿ ಒಳ್ಳೆ ಮಸಿ ಹಿಡಿತ್ತು. ಆ ಮಸಿಯ ಹರಳೆಣ್ಣೆಲಿ ಗಟ್ಟಿ ಕಲಿಸಿ ಬೇಕಾದ ಕರಡಿಗೆಲಿ ಹಾಕ್ಯೊಂಬದು. ಇದುವೇ ಕಾಡಿಗೆ.
ಮದ್ದು: ಕಣ್ಣಿಗೆ ಚೆಂದ ಮಾತ್ರ ಅಲ್ಲ, ಕಣ್ಣು ತೊರ್ಸುದು ನೀರು ಹರಿವದು ಕಣ್ಣು ಬೇನೆ ಹೀಂಗಿದ್ದಕ್ಕೆಲ್ಲ ಇದು ಒಳ್ಳೆ ಮದ್ದು ಅಪ್ಪು.
~~~***~~~
ಭಾಗ್ಯಲಕ್ಷ್ಮಿ, ಒಳ್ಳೆ ಮೆಚ್ಚಿಗೆ ಆತೆನಗೆ. ಕಾಡಿಗೆ ಮಾಡುವಕ್ರಮ ಎರಡು ವರ್ಷ ಮೊದಲೆ ಬರದರೂ ಈಗ ಪ್ರಾಯೋಗಿಕವಾಗಿ ಮಾಡಿನೋಡಿ ಅದರ ಉಪಯೋಗಂದ ಒಳ್ಳೆದಾಯಿದು ಹೇಳಿದ್ದಕ್ಕೆ ಸಂತೋಷಾತು.ಮತ್ತೆ ಮಾನಸನತ್ರೆ ಇಮೈಲ್ ಕಳಿಸಿದ್ದಕ್ಕೆ ರಿಪ್ಲೈ ಕೊಟ್ಟಿದೆ. ಆನು ಮಾರುವಷ್ಟು ಮಾಡ್ಳಿಲ್ಲೆ . ಸ್ವಂತ ಉಪಯೋಗಕ್ಕೆ ಮದ್ದಿಂಗೋಸ್ಕರ ಮಾಡುದು.
Helo madam,
Can i get prepared one madam, did you have sale also.
ಹರೇರಾಮ ಪದ್ಯ ಮಾಂತ್ರ ನೆಂಪಪ್ಪದೊ? ??/
ಹೊಸಾ ವಿಷಯ ಒಂದು ಗೊಂತಾತು. ಲಾಯಕಿದ್ದು. ವಿಜಯತ್ತೆಗೆ ಧನ್ಯವಾದಂಗೊ.
ಕಣ್ಣಿಗೆ ಚಂದ ಕಾಡಿಗೆಯಂದ .. ಹಳೇ ಪದ್ಯ ನೆಂಪಾವ್ತಾ ಇದ್ದಾನೆ.
ಹರೇರಾಮ ಕಣ್ಣಿನ ದೋಷಂಗಳ ನೀಗಿ ರಕ್ಹಣೆ ಕೊಡುವ ಮದ್ದು ತೊಂಡೆ ಸೊಪ್ಪಿನ ಎಸರಿಂಗಿದ್ದು ಹಾಂಗಾಗಿ ಆಮದ್ದು, ಹಾಂಗೇ ಮಸಿಯ ಹರಳೆಣ್ಣೆ ಬದಲು ತುಪ್ಪಲ್ಲಿ ಕಲಸಲೂ ಅಕ್ಕು ಆದರೆ ಅದು ಬೇಗ ಜೆಡ್ಡುತ್ತು ಹರಳಣ್ಣೆ ಒೞೆ ತಂಪೂ ಆಗಿ ಗುಣವೂ ಸಿಕ್ಕುತ್ತು ಇದು ಎನ್ನ ಅನುಭವ
ನಿ೦ಗ ಕೊಟ್ಟ ಮಾಹಿತಿಗೆ ಧನ್ಯವಾದ೦ಗೊ ಅತ್ತೆ.
ತೊಂಡೆಸೊಪ್ಪಿನ ಎಸರಿಲಿ ಬೆಳಿ ವಸ್ತ್ರ ಒಣಗುಸಿ ಕಾಡಿಗೆ ಮಾಡಿದೆ . ಲಾಯಿಕಾತು . ಧನ್ಯವಾದ ವಿಜಯತ್ತೆ
ವಸ್ತ್ರವ ತೊನ್ಡೆ ಸೊಪ್ಪಿಲಿ ಅದ್ದಿ, ಒಣಗುಸುವ ಉದ್ದೇಶ ಎನ್ತ ಅತ್ತೆ?
ಪೇಟೆಲಿ ಸಿಕ್ಕುತ್ತ ಪೆನ್ಸಿಲಿಲ್ಲಿ ಗೆರೆ ಎಳವಲೆ ಎಳುಪ್ಪ ಆವ್ತು ಹೇದು ಕಣ್ಣಿನ ಆರೋಗ್ಯ ಲಗಾಡಿ ತೆಕ್ಕೊಂಬದರಿಂದ ಹೀಂಗೆ ಶುದ್ಧ ಸಾವಯವ ಕಾಡಿಗೆಯನ್ನೇ ತಯಾರು ಮಾಡಿ ಹಾಕಿಯೊಂಬದು ಎಷ್ಟೋ ಒಳ್ಳೆದು.
ಚೆಂದಕೆ ಚೆಂದವೂ ಆತು; ಆರೋಗ್ಯಕ್ಕೆ ಆರೋಗ್ಯವೂ ಆತು. ಅಲ್ಲದೋ ವಿಜಯತ್ತೆ?
ಹರೇ ರಾಮ;ಬಹಳ ಒಳ್ಳೆ ಕೆಲಸ ಮಾಡಿದ್ದಿ.ಇ೦ತದರ ಆದಷ್ಟು ನಮ್ಮ ಹೆರಿಯೋರಿ೦ದ ಸ೦ಗ್ರಹಿಸಿ ನಮ್ಮ ಒಪ್ಪಣ್ಣನ ಬೈಲಿಲ್ಲಿ ಒಳ್ಶಿ ಬೆಳೆಶಕಾದ್ದು ನಮ್ಮ ಕರ್ತವ್ಯ;ಮು೦ದಾಣ ಮಕ್ಕಗೆ ಇ೦ಥದ್ದರ ನಾವು ತಿಳಿಶಿ ಹೇಳೆಕಾದ್ದು ನಮ್ಮ ಜೆವಾಬ್ದಾರಿ.ಈ ದೃಷ್ಟಿಲ್ಲಿ ಒಳ್ಳೆ ಮೇಲ್ಪ೦ಕ್ತಿ ಹಾಕಿ ಕೊಟ್ಟ ನಿ೦ಗೊಗೆ ನಮೋನ್ನಮಃ+ ದನ್ಯವಾದ + ಒ೦ದೊಪ್ಪ.
ಶ್ರೀ ದೇವಿ, ನಿನ್ನ ಆತ್ಮೀಯ ಅಭಿಮಾನಕ್ಕೆ ಒಂದು ಪ್ರೀತಿಯ ಒಪ್ಪ, ಮುಣ್ಚಿಕಾನ ಭಾವ ಹೇಳಿದಹಾಂಗೆ ಕುಂಕುಮ ಮಾಡುವಕ್ರಮವೂ ಗೊಂತಿದ್ದು ಬರವೊ
ಒಪ್ಪ ಮಾಹಿತಿ ವಿಜಯತ್ತೆ. ಕುಂಕುಮ ಮಾಡುವ ಕ್ರಮವನ್ನೂ ಗೊಂತಿದ್ದರೆ ತಿಳಿಸಿ. ಬೇಕಾದ್ದವಕ್ಕೆ ಕಲಿವಲೆ ಅಕ್ಕು.
ವಿಜಯತ್ತೆ,
ಬೈಲಿಲಿ ನಮ್ಮದೇ ಕ್ರಮಂಗಳ ವಿವರವಾಗಿ ಹೇಳ್ತಾ ಇಪ್ಪ ನಿಂಗೊಗೆ ತುಂಬಾ ತುಂಬಾ ಧನ್ಯವಾದಂಗೊ.
ಇನ್ನುದೇ ಹಲವು ವಿಷಯಂಗ ಬತ್ತಾ ಇರಲಿ..
ಹರೇರಾಮ.
ಕಾಡಿಗೆ ಕಣ್ಣಿಂಗೊಳ್ಳೆದು
ಲೇಖನ ಲಾಯ್ಕ ಆಯಿದು.
ಕುಳ ಹೇಳಿ ಬೊಟ್ಟು ಹಾಕುವ ಒಂದು ವಸ್ತುವ ಶ್ರೀಗಂಧದ ಚೆಕ್ಕೆಂದ ಮಾಡಿಕೊಂಡಿತ್ತಿದ್ದವು.ಅದರ ಬಗ್ಗೆಯೂ ಬರೆಯಿ ಚಿಕ್ಕಮ್ಮ.
ಹರೇರಾಮ, ಜಯಗೌರಿಯ ಸಂಶಯಕ್ಕಿದ ಹೇಳ್ತೆ. ದೀಪಕ್ಕೆ ಎೞೆಣ್ಣೆ, ಮಸಿಯ ಕಲಸಲೆ ಹರಳೆಣ್ಣೆ ಉಪಯೋಗಿಸಿ.
ಗುಟ್ಟದೀಪ ಹೇಳಿರೆ ದೇವರ ಮುಂದೆ ಹೊತ್ತಿಸುವ ಹಿತ್ತಾಳೆ ದೀಪ.
ಸೆಲ್ಲೆ ವಸ್ತ್ರ ಹೇಳಿರೆ ಹತ್ತಿನೂಲಿನ ತೆಳು ವಸ್ತ್ರ.
ಇನ್ನೆಂತರ ಸಂಶಯ ಇದ್ದರೆ ಅಡ್ಡಿ ಇಲ್ಲದೆ ಕೇಳಿಯೊಳಿ.
ಮಣ್ಣಿನ ಬಾವಡೆ ಒಂದು ಸಿಕ್ಕಿರೆ ಸಂಶಯ ನಿವಾರಣೆ ಆದ ಹಾಂಗೆಃ). ಧನ್ಯವಾದ ವಿಜಯತ್ತೆ.
ಉತ್ತಮ ಮಾಹಿಥಿ ಗೆ ಧನ್ಯವಾದ೦ಗೊ..
ಎಲ… ವಿಷಯ ಪಷ್ಟಿದ್ದನ್ನೆ ಇದು. ಲಾಯಕ ಆತು ಶುದ್ದಿ. ಹರೇ ರಾಮ.
ತುಂಬ ಧನ್ಯವಾದ ಅತ್ತೆ. ಕಾಡಿಗೆ ಮಾಡುಲೆ ಊರಿಗೆ ಹೋಗಿಪ್ಪಗ ಪ್ರಯತ್ನ ಮಾಡೆಕ್ಕು.
ಸೆಲ್ಲೆ ವಸ್ತ್ರ,ಗುಟ್ಟ ದೀಪ ಹೇಳಿರೆ ಗೊತ್ತಾಯ್ದಿಲ್ಲೆ.
ದೀಪಕ್ಕೆ ಹರಳೆಣ್ಣೆ,ಎೞೆಣ್ಣೆ ಮಿಶ್ರ ಮಾಡಿ ಹಾಕುದಾ?
ಊರಿಲಿ ಮಣ್ಣಿನ ಬಾವಡೆ ಸಿಕ್ಕುಗ?