Oppanna.com

ವನಜೀವನ ಯಜ್ಞ-ಮುಜುಂಗಾವು ವಿದ್ಯಾಪೀಠಲ್ಲಿ

ಬರದೋರು :   ವಿಜಯತ್ತೆ    on   30/07/2013    4 ಒಪ್ಪಂಗೊ

Vanajeevana yajnaವನಜೀವನ   ಯಜ್ಞ

ಪ್ರಕೃತಿ  ನೈಜರೂಪಲ್ಲಿ ಇದ್ದರೆ ಮನುಷ್ಯರಿಂಗೂ ನೈಜತೆ. ಅದಲ್ಲದ್ದೆ ಅದರ ವಿಕೃತಿ ಮಾಡಿರೆ  ಮನುಷ್ಯರೂ ವಿಕೃತರಕ್ಕು. ಪ್ರಕೃತಿಯ  – ಪರಿಸರವ  ಒಳಿಶಿ ಬೆಳೆಶುವದು ನಮ್ಮ ಕರ್ತವ್ಯ. ಇದು ಆಯುರಾರೋಗ್ಯಕ್ಕೆ ಒಂದು ಭಾಗವೂ ಅಪ್ಪು.
ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಶಿಕ್ಷಣಸಂಸ್ಥೆ ಆದ ಮುಜುಂಗಾವು ವಿದ್ಯಾಪೀಠಲ್ಲಿ ಇತ್ತೀಚಿಗೆ “ವನಜೀವನ ಯಜ್ಞ” ಮಹೋತ್ಸವ ಕಾರ್ಯಕ್ರಮ ಕಳಾತು. ಶಿಕ್ಷಣ ಸಂಸ್ಥೆ ಸುರುವಾದ ಲಾಗಾಯ್ತಿಂದ ಜೂನಿಲ್ಲಿ ಶ್ರೀಗುರು ನಿರ್ದೇಶಾನುಸಾರ  ವನಜೀವನ ಯಜ್ಞ ಹೇಳಿ ಮಾಡ್ತಾ ಬಯಿಂದು. ಕಳೆದ ವರ್ಷ ಕುಂಬಳೆ ಗ್ರಾಮಪಂಚಾಯ್ತು ವತಿಂದ  ಶ್ರೀಯುತ ನಾಣಿತ್ತಿಲು ಕೇಶವಪ್ರಸಾದನ ಜೀಪಿಲ್ಲಿ ಇಲ್ಲಿ ಕಲಿತ್ತ ಮಕ್ಕೊಗೆ, ಸಿಬ್ಬಂದಿ ವರ್ಗಕ್ಕೆ ಗೆಡು ವಿತರಣೆ ಮಾಡಿತ್ತಿದ್ದವು. ಅದರ ನಮ್ಮ ಕಾರ್ಯಕ್ರಮದೊಟ್ಟಿಂಗೆ ಹಮ್ಮಿಯೊಂಡಾಗಿತ್ತು. ಈ ಸರ್ತಿ ಆಡಳಿತ ಸಮಿತಿ ಮುಖ್ಯ ಸದಸ್ಯರಾದ ಶ್ರೀಯುತ ಶ್ಯಾಮರಾಜ ದೊಡ್ಡಮಾಣಿಯವರ ಸಾಧನೆಲಿ ಅರಣ್ಯ ಇಲಾಖೆ ವತಿಂದ ಗೆಡು ವಿತರಣೆಗೆ ಮಾತಾಡಿ ಆ ಕಾರ್ಯಕ್ರಮ ಪೂರೈಸಿ ಆತು.
ಕಾರ್ಯಕ್ರಮಲ್ಲಿ ಮದಲಿಂಗೆ ಸಭೆ,  ವೇದಿಕೆಲಿ ಮುಖ್ಯ ಅಥಿತಿಯಾಗಿ ಕಾಸರಗೋಡುಜಿಲ್ಲೆ ಅರಣ್ಯ ಇಲಾಖೆಯ ಮುಖ್ಯಾಧಿಕಾರಿ ಶ್ರೀಯುತ ಜಯಮಾಧವನ್, ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಮಾಜಿ ಉಪಾಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ|ಡಿ.ಪಿ.ಭಟ್ ಮತ್ತೆ ಮುಖ್ಯ ಸದಸ್ಯರಾದ ಶ್ರೀಯುತ ಶ್ಯಾಮರಾಜ ದೊಡ್ಡಮಾಣಿ, ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಯುತ ಶ್ಯಾಂಭಟ್, ದರ್ಭೆ ಮಾರ್ಗ ಮೊದಲಾದವು ಇತ್ತಿದ್ದವು.
ಕಾರ್ಯಕಮ ಚೆಂದಲ್ಲಿ ಆತು. ೨೦೦ ಮಕ್ಕೊ, ಒಂದೊಂದು ಗೆಡು, ಶಿಕ್ಷಕ ವರ್ಗದವು ಒಂದೊಂದು, ಗೆಡು ತೆಕ್ಕಂಡದಲ್ಲದ್ದೆ; ಶಾಲಾ ವಠಾರಲ್ಲಿ ಕೆಲವು ಗಿಡಂಗಳ ವ್ಯವಸ್ಥಿತ ರೀತಿಲಿ  ನೆಟ್ಟಾತು. ಪೂರೈಸಿದ ಗಿಡಂಗಳಲ್ಲಿ ನೆಲ್ಲಿ, ಬಿಲ್ವ, ಕಾಚಿ, ಹಲಸು, ತೇಕು, ಹೀಂಗೆ ನಾನಾ ತರದ ಸೆಸಿಗೊ ರಜ, ರಜಾಅಗಿ ಒಟ್ಟು ೩೦೦ ಗೆಡು ಸಪ್ಲೈ ಆತು.

ಅಂತೂ ಶ್ರೀಗುರುಗಳ ನಿರ್ದೇಶಾನುಸಾರ  ವನಜೀವನ ಯಜ್ಣ ಮಾಡಿದ  ತೃಪ್ತಿ ಮುಖ್ಯೋಪಾದ್ಯಾಯರಾದ ಶ್ಯಾಮಣ್ಣನ  ಮೋರೆಲಿ  ಮಿಂಚಿದ್ದು , ಅದು  ಎಂಗೊಗೆಲ್ಲರಿಂಗೂ ಹರಡಿದ್ದಂತೂ ಸತ್ಯ.

~~~***~~~

4 thoughts on “ವನಜೀವನ ಯಜ್ಞ-ಮುಜುಂಗಾವು ವಿದ್ಯಾಪೀಠಲ್ಲಿ

  1. ಮಕ್ಕಳಲ್ಲಿ ಸೆಸಿ ನೆಡುವ ಮನೋಭಾವ ಬೆಳೆಶುತ್ತ ಒಳ್ಳೆ ಕಾರ್ಯಕ್ರಮ. ಪ್ರತಿವರ್ಷವೂ ಮುಂದುವರಿಯಲಿ

  2. ಅಭಿನಂದನೆಗೊ

  3. ಹರೇ ರಾಮ. ಭಾಗವಹಿಸಿದ, ಪ್ರೋತ್ಸಾಹಿಸಿದ, ಸಹಕರಿಸಿದ ಪ್ರತಿಯೊಬ್ಬಂಗೂ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×