Oppanna.com

ಬೆಳವ ಬೈಲಿನ ವಿಜಯ ಯಾತ್ರೆಲಿ ಗುರುವ ಕಾಣೆಕ್ಕು..

ಬರದೋರು :   ಒಪ್ಪಣ್ಣ    on   23/08/2013    20 ಒಪ್ಪಂಗೊ

ಮಾಣಿ ಮಠಲ್ಲಿ ಚಾತುರ್ಮಾಸ್ಯ ನೆಡೆತ್ತಾ ಇಪ್ಪದು ಎಲ್ಲೋರಿಂಗೂ ಗೊಂತಿಪ್ಪದೇ.
ಮೆಡ್ರಾಸು ಬೆಂಗ್ಳೂರು ಬೊಂಬಾಯಿ ಹೇದು ಎಲ್ಲಾ ಊರಿಂದ ಬಂದು ಸೇರ್ತದೂ ಗೊಂತಿಪ್ಪದೇ.
ಬೈಲಿನೋರುದೇ ಅವರವರ ಪುರುಸೊತ್ತಿಲಿ ಹೋವ್ತವು, ಅಟ್ಟಿನಳಗೆ ಹಿಡ್ಕೊಂಡು ಬತ್ತವು – ಅದುದೇ ಗೊಂತಿಪ್ಪದೇ.
ಈ ಒರಿಶದ ವಿಜಯ ಚಾತುರ್ಮಾಸ್ಯ ಚೆಂದಲ್ಲಿ ನೆಡೆತ್ತಾ ಇದ್ದು. ಅದಿರಳಿ.
ಕಳುದೊರಿಶ ಬೆಂಗುಳೂರಿಲಿ ನಂದನ ಚಾತುರ್ಮಾಸ್ಯ ನೆಡದ್ದದೂ ಎಲ್ಲೋರಿಂಗೂ ನೆಂಪಿಪ್ಪದೇ.
ಕಳುದೊರಿಶದ ಚಾತುರ್ಮಾಸ್ಯಲ್ಲಿ ನಮ್ಮ ಬೈಲು ಗುರುಭೇಟಿ ಮಾಡಿದ್ದುದೇ ನೆಂಪಿದ್ದೋ ನಿಂಗೊಗೆ?
ಇದ್ದರೆ ಸಮ, ಇಲ್ಲದ್ದರೆ ಒಂದರಿ ನೆಂಪುಮಾಡಿಗೊಂಬ°.
~
ಆ ದಿನ ಹೇಂಗೆ ನೆಡದತ್ತು?
ಟೀಕೆಮಾವ° ಅಂದೇ ವಿವರವಾಗಿ ಬೈಲಿಲಿ ಹೇಳಿದ್ದವು. (https://oppanna.com/vartego/bailu-milana-2012-guru-bheti-book-release), ಅದು ಮರದೋರಿಂಗೂ, ಮರೆಯದ್ದೋರಿಂಗೂ ಮತ್ತೊಂದರಿ ನೆಂಪುಮಾಡ್ಳೆ ಇಂದು ಅದನ್ನೇ ಮಾತಾಡುವೊ°. ಆಗದೋ?
~

ಏವದೇ ಗೆಡು ಬೆಳವಗ ಅದಕ್ಕೆ ಸರಿಯಾದ ಗೊಬ್ಬರವೇ ಬೇಕಾವುತ್ತು. ಅಲ್ಲದ್ದರೆ ಅಂತೇ ಬೆಳದು ಸೊಕ್ಕಿರೆ ಪ್ರಯೋಜನ ಇಲ್ಲದ್ದೆ ಅಕ್ಕು – ಹೇಳ್ತವು ಬೊಳುಂಬು ಮಾವ° ಯೇವಗಳೂ.
ಹಾಂಗೆ, ನಮ್ಮ ಬೈಲಿಂಗೂ ಸರಿಯಾದ ಮಾರ್ಗದರ್ಶನ ಇರೆಕು – ಹೇಳ್ತ ಉದ್ದೇಶಂದ ಒಂದರಿ ಗುರುಗಳ ಸನ್ನಿಧಿಲಿ ಭೇಟಿ ಅಪ್ಪದು ಹೇದು ಮಾತಾಡಿಗೊಂಡವು ಬೈಲಿಲಿ. ಆ ಪ್ರಕಾರ ಎಡಪ್ಪಾಡಿ ಭಾವನ ಮುಖಾಂತರ ಗುರುಗೊಕ್ಕೆ ಕೇಳಿಗೊಂಡೂ ಆತು.
ಒಳ್ಳೆದಿನ ಯೇವದಿದ್ದು ಹೇಳ್ತದರ ನೋಡಿಕ್ಕಿ, ಅಕ್ಕು, ಇಂತಾದಿನ ಭೇಟಿ – ಹೇದು ನಿಜಮಾಡಿದವು.
ಹಾಂಗೆ, ಅದೊಂದು ದಿನ –ತಾರೀಕು ಒಪ್ಪಣ್ಣಂಗೆ ನೆಂಪಿಲ್ಲೆ, ಶರ್ಮಪ್ಪಚ್ಚಿಗೆ ಅರಡಿಗೋ ಏನೋ – ಆ ದಿನ ಗುರುಭೇಟಿ ಮಾಡುಸ್ಸು ಹೇದು ದಿನ ನಿಘಂಟಾತು.
~
ವಿಷಯ ಗೊಂತಪ್ಪದ್ದೇ – ಬೈಲ ನೆಂಟ್ರುಗೊ ತಿಂಗಳ ಮದಲೇ ತಯಾರು ಮಾಡಿಗೊಂಡವು.
ಏಳ್ಕಾನ ಡಾಗುಟ್ರು ಕಾರು ಷ್ಟಾರ್ಟುಮಾಡಿ ಮಡಗಿಂಡವು,
ಬೊಳುಂಬು ಮಾವ° ರೈಲು ಟಿಗೇಟು ಮಾಡಿ ಮಡಗಿಂಡವು,
ದೀಪಿ ಅಕ್ಕ° ಪದ್ಯ ಕಂಠಸ್ಥ ಮಾಡಿ ಕಾಗತ ಕೈಲಿ ಹಿಡ್ಕೊಂಡವು,
ದೊಡ್ಡಜ್ಜ° ಪರ್ತಿಕಾರು ಕಾರಿನ ಬಾಡಿಗೆಗೆ ಗೊಂತುಮಾಡಿಗೊಂಡವು,
ಮಾಷ್ಟ್ರು ಮಾವ ಎಲೆಪೆಟ್ಟಿಗೆ ಸಜ್ಜಿಮಾಡಿಗೊಂಡವು, ಸುಬಗಣ್ಣಂಗೂ ಆಯೆಕ್ಕನ್ನೇ – ಹಾಂಗೆ ಹೊಗೆಸೊಪ್ಪು ನಾಕು ಹೆಚ್ಚೇ ತಿರ್ಪಿ ಹಿಡ್ಕೊಂಡವು,
ಶ್ರೀ ಅಕ್ಕ ಬಣ್ಣದ ಕಾಗದ, ಟೇಪು ಕತ್ತರುಸಿ ಮಡಿಕ್ಕೊಂಡವು, ಆಯೆತ ಮಾಡ್ಳೆ,
ಸರ್ಪಮಲೆ ಮಾವಂಗೆ ಆ ದಿನ ಬೇರೆಂತದೋ ಅಂಬೆರ್ಪು ಇದ್ದರೂ – ಬೇಗಬಂದು ಬೇಗ ಹೋಪಲೆ ಹೇದು ಬೇಗ ಬೇಗವೇ ಹೆರಟು ನಿಂದಿತ್ತಿದ್ದವು
ಯೇನಂಕೂಡ್ಳಣ್ಣ ಕೆಮರದ ಕವರು ತೆಗದು ಮಡಗಿದವು,
ಬೈಲಕರೆ ಗಣೇಶಮಾವಂಗೆ ಸಂಸಾರ ಸಮೇತ ಬಪ್ಪಲೆ ಗಳು ಕೊಟ್ಟ ಕಾರಿತ್ತು;
ಪಂಜೆಕುಂಞಜ್ಜಿ ಬಸ್ಸಿಲಿ ಬಪ್ಪಲೆ ನಿಜಮಾಡಿದವು,
ಚೆನ್ನೈಭಾವಂಗೆ ಸನ್ನೈ ಬಸ್ಸು ಇರ್ಕು,
ಹಳೆಮನೆ ಅಣ್ಣ ಹೊಸ ವೇಷ್ಟಿ ತೆಗದವು,
ಬೇಂಕಿನ ಪ್ರಸಾದಣ್ಣ ರಜೆ ಬರದು ಮಡಗಿದವು,
ಬೆಂಗುಳೂರಿಲೇ ಇರ್ತ ಭಾವಯ್ಯಂಗೊಕ್ಕೆ ಈ ತಲೆಬೆಶಿ ಇಲ್ಲೆನ್ನೇ, ಆ ದಿನ ಬಂದು ಎತ್ತಿಗೊಂಡ್ರೆ ಆತು,
ಎಡಪ್ಪಾಡಿ ಬಾವಂಗೆ ಕಾಲ್ನಡಿಗೆ ಮಾಡಿರಾತು
– ಇವು ಮಾಂತ್ರ ಅಲ್ಲ, ಪಟ್ಟಿ ಮಾಡ್ತರೆ ಅದುವೇ ಇಂದ್ರಾಣ ಶುದ್ದಿ ಅಕ್ಕು!
ಅಂತೂ – ಬೈಲ ಭೇಟಿಯ ದಿನದ ಅನುಕ್ಕೂಲ ಆವುತ್ತ ಎಲ್ಲೋರುದೇ ಹೆರಟು ನಿಂದವು, ಆ ದಿನ ಬಂದವು.
~
ನಿತ್ಯವೂ ಬೈಲಿಲಿ ಮಾಂತ್ರ ಕಂಡು ಮಾತಾಡಿಗೊಂಡಿದ್ದವು ಆ ದಿನ ಮಠಲ್ಲಿ ಪರಸ್ಪರ ಕಾಣ್ತ ಸೌಭಾಗ್ಯ.
ಅಪ್ಪು, ಆ ದಿನ ಉದಿಯಪ್ಪಗಳೇ ಮಠಲ್ಲಿ ಬೈಲು ಸೇರ್ಲೆ ಸುರು ಆತು. ಶಾಸ್ತ್ರಿಮಾವ° ಬೇಗಬರೆಕ್ಕು – ಹೇಳಿದ ಲೆಕ್ಕಲ್ಲಿ ಎಡಿಗಪ್ಪವು ಎಡಿಗಾದಷ್ಟು ಬೇಗವೂ ಬಂದಿತ್ತಿದ್ದವು.

~

ಪಾದಪೂಜೆ:
ಶಾಸ್ತ್ರಿಮಾವನ ಅಧ್ವರ್ಯುವಿಲಿ ಬೈಲಿನ ಪರವಾಗಿ ಶ್ರೀ ಗುರುಪಾದುಕಾ ಪೂಜೆ ನೆಡದತ್ತು.
ಬೈಲಿನ ಗುರಿಕ್ಕಾರ್ರು ಮಠದ ಸಮವಸ್ತ್ರಲ್ಲಿ ಕಚ್ಚೆ ಹಾಕಿಂಡು, ದಂಪತೀ ಸಮೇತರಾಗಿ ಬೈಲಿನ ಪರವಾಗಿ ನೆಡದ ಪಾದಪೂಜೆ.
ಕ್ರಿಯೆ ಮಾಡುದು ಒಬ್ಬರೇ ಮಾಡೇಕಾರೂ ಅದೊಂದು ಬೈಲ ಸಮಸ್ತರ ಕಾರ್ಯಕ್ರಮ ಆಗಿದ್ದತ್ತು.
ಬೈಲಿನ ಎಲ್ಲೋರುದೇ ಸೇರಿಗೊಂಡು ಪಾದಪೂಜೆ ನೆಡೆಶಿದವು. ಅಭಿಷೇಕ ಮಾಡುವಾಗ ಮಾಡಿದವು, ಹೊಡಾಡ್ಳೆ ಹೇಳುವಾಗ ಹೊಡಾಡಿಗೊಂಡವು, ತೀರ್ಥ ಪ್ರಸಾದ ಕೊಡುವಾಗ ತೆಕ್ಕೊಂಡವು.
ಅಂತೂ – ಪಾದಪೂಜೆ ಚೆಂದಲ್ಲಿ ಕಳಾತು.

ಹಶುಹೊಟ್ಟೆಯ ಶ್ರದ್ಧೆಲಿ ಪಾದಪೂಜೆ ಆದ ಮತ್ತೆ ಒಂದು ಉಪಾಹಾರ.
ಮಠದ ಸತ್ಯಣ್ಣ ಶುದ್ಧಲ್ಲಿ ಮಾಡಿದ ಸಜ್ಜಿಗೆಯೂ – ಕಷಾಯವನ್ನೂ ಕುಡ್ಕೊಂಡು ಹೊಟ್ಟೆ ತುಂಬುಸಿ ಆತು.
ಮತ್ತೆ ನಮ್ಮೊಳವೇ ಒಂದು ಪಂಚಾತಿಗೆ. ಏನು ಭಾವಾ, ಏನು ಅಪ್ಪಚ್ಚೀ, ಏನು ಅಕ್ಕಾ – ಹೇದು.
ಎಷ್ಟು ಮಾತಾಡಿರೂ ಮುಗಿಯ; ಆರ ಎಷ್ಟು ನೆಗೆಮಾಡಿರೂ ಮುಗಿಯ!! 🙂
ಇದೆಲ್ಲ ಆಗಿಂಡಿಪ್ಪಾಗ ಸಮಯ ಮುಂದೆ ಹೋಗಿಂಡೇ ಇತ್ತು.
~
ಮಧ್ಯಾಹ್ನದ ಊಟದ ಗವುಜಿ ಒಂದು ಹೊಡೆಲಿ; ಮಜ್ಜಾನ ಮೇಗೆ ನೆಡೆತ್ತ ಕಾರ್ಯಕ್ರಮದ ತೆಯಾರಿ ಇನ್ನೊಂದು ಹೊಡೆಲಿ.
ಮಜ್ಜಾನ ಮೇಗೆ ಎಂತರ?
ನಿಂಗೊಗೆ ನೆಂಪಿಲ್ಲೆ ಹೇದರೆ ಅಜ್ಜಕಾನಬಾವಂಗೆ ಏನೇನೂ ಸಮಾದಾನ ಆಗ.
ನಮ್ಮ ಬೈಲ ಪುಸ್ತಕಂಗಳ ಬಿಡುಗಡೆ ಅಲ್ಲದೋ! ಓಯ್!
ಹ್ಮ್, ಗುರುಗೊ ಪೀಠಕ್ಕೆ ಬಂದದು ಮಧ್ಯಾಹ್ನಮೇಗೆ ಇದಾ – ಅದರೊಳ ಊಟ ಮಾಡ್ತೋರು ಮಾಡಿಗೊಂಡವು.
ಪೀಠಕ್ಕೆ ಬಂದ ಮೇಗೆ ಎಲ್ಲೋರುದೇ ಸೇರಿಗೊಂಡವು.
ಆ ಹೊತ್ತಿಂಗೆಯೇ ನಮ್ಮ ಬೈಲ ಮೂರು ವಿಷಯಂಗೊ ಲೋಕಾರ್ಪಣೆ ಆದ್ಸು.

ಲಾಂಛನ:
ಬೈಲಿನ ಕೆಲಸದ ಗುರ್ತಕ್ಕೆ, ಬೈಲಿನ ಏಕತೆಗೆ ಸೂಚನೆ ಆಗಿ ಎಂತಾರು ಬೇಡದೋ!?ಬೇಕು.
ಹಾಂಗೆ, ನಮ್ಮ ಬೈಲಿಂಗೆ ಒಂದು ಚೆಂದದ ಲಾಂಛನವ ಗುರುಗೊ ಲೋಕಾರ್ಪಣೆ ಮಾಡಿ ಬೆಳಗುಸಿದವು.
ಪ್ರತಿಷ್ಠಾನದ ಲಾಂಛನವ ಬಿಡುಗಡೆ ಮಾಡಿದ್ದು.
ಶರ್ಮಪ್ಪಚ್ಚಿಯೂ, ಮಾಷ್ಟ್ರುಮಾವನೂ ಆ ಲಾಂಛನದ ಸುರುಳಿಯ ತೆಕ್ಕೊಂಡು ಗುರುಗಳ ಮುಂದೆ ಹೋದಪ್ಪದ್ದೇ, ಗುರುಗೊ ಅದರ ಅರಳುಸಿ – ಇದು ಲಾಂಛನ – ಹೇದು ನಿಜ ಮಾಡಿದವು.
ಅಂದಿಂದ ಆ ಲಾಂಛನ ನಮ್ಮ ಬೈಲಿನ ಅಸ್ತಿತ್ವದ ಪ್ರತೀಕ.

ಒಂದೆಲಗ:
ಅದಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ.
ಹಳೆಕಾಲಲ್ಲಿ – ಬೈಲು ಹುಟ್ಟಿ ಬೆಳೆತ್ತಾ ಇಪ್ಪ ಸಮೆಯಲ್ಲಿ ಒಪ್ಪಣ್ಣ ಶುದ್ದಿ ಹೇಳುಲೆ ಸುರುಮಾಡಿದ ಸಮೆಯದ ಕೆಲವು ಶುದ್ದಿಗಳ ಹೆರ್ಕಿ ಶುದ್ದಿ ಪುಸ್ತಕ ಮಾಡಿತ್ತಿದ್ದವು ಬೈಲಿಲಿ. ಆ ಪುಸ್ತಕ ಒಂದನೇದು. ಆಪುಸ್ತಕ ಓದೇಕಾರೆ ರುಚಿ ಇರೆಕ್ಕು. ಹಾಂಗಾಗಿ ಅದಕ್ಕೆ “ಒಂದೆಲಗ” ಹೇಳಿಯೇ ಹೆಸರುದೇ ಮಡಗಿದವು. ಆ ಪುಸ್ತಕವನ್ನೂ ಗುರುಗೊ ಲೋಕಾರ್ಪಣೆ ಮಾಡಿದವು.
ಇದು ನಮ್ಮ ಬೈಲಿನ ಸಾಹಿತ್ಯದ ಪ್ರತೀಕ.

ಹದಿನಾರು ಸಂಸ್ಕಾರಂಗೊ:
ನಮ್ಮ ಸನಾತನ ಸಂಸ್ಕಾರಲ್ಲಿ ಹೇಳಿದ ಹದಿನಾರು ಸಂಸ್ಕಾರಂಗೊ ಯೇವದೆಲ್ಲ, ಅದರ ಎಂತಕೆ ಆಚರಣೆ ಮಾಡೇಕು, ಅದರ ಹೇಂಗೆ ಆಚರಣೆ ಮಾಡೇಕು – ಹೇಳ್ತ ಸಮಗ್ರ ವಿವರವ ಹಲವು ಗ್ರಂಥಂಗಳಿಂದ ಹುಡ್ಕಿದ ಚೆನ್ನೈಬಾವಂಗೆ ಎಂತ ಅನುಸಿತ್ತೋ –
ಎನ್ನಷ್ಟೂ ಒಳುದೋರು ಬಂಙ ಬಪ್ಪದು ಬೇಡ ಹೇದು ಕಂಡತ್ತೋ ಏನೋ, ಬೈಲಿಲಿ ಒಂದೊಂದಾಗಿ ಬರದವು.
ಚೆನ್ನೈಭಾವ° ಅಂದು ಮಾಡಿದ ಕಾರ್ಯ ಎಷ್ಟೋ ಸಹಸ್ರ ಜೆನಂಗೊಕ್ಕೆ ಉಪಯೋಗ ಆವುತ್ತ ನಮುನೆದು.
ಹಾಂಗೆ ಅಂದು ಬರದ ಸಂಸ್ಕಾರ ಶುದ್ದಿಗೊ, ಒಂದು ಪುಸ್ತಕ ಮಾಡೇಕು – ಹೇದು ಅನುಸಿತ್ತು ಬೈಲಿಲಿ ಕೆಲವು ಜೆನಕ್ಕೆ.
ಹಾಂಗೆ ಆದ ಆ ಪುಸ್ತಕವುದೇ ಗುರುಗಳ ಕೈಲಿ ಲೋಕಾರ್ಪಣೆ ಕಂಡತ್ತು.
ಇದು ನಮ್ಮ ಬೈಲಿನ ಸಂಸ್ಕಾರದ ಪ್ರತೀಕ.

ಗುರುಗೊ ಈ ಎರಡೂ ಪುಸ್ತಕವ ಲೋಕಾರ್ಪಣೆ ಮಾಡಿ ಹರಸಿದವು. ಅದರೊಟ್ಟಿಂಗೇ, ಆಚಕರೆ ಮಾಣಿ, ಬೆಟ್ಟುಕಜೆ ಮಾಣಿ, ಕುಂಟಾಂಗಿಲ ಬಾವ°, ಡೈಮಂಡು ಭಾವಂದ್ರು ಎಲ್ಲೋರುದೇ ಸೇರಿಗೊಂಡು “ಶುದ್ದಿ ಪುಸ್ತಕ ಮಾರಾಟ ಮಳಿಗೆ” ಹೇದು ಕುರ್ಶಿ ಮಡಿಕ್ಕೊಂಡವು. ಒಳ್ಳೆ ಪ್ರತಿಕ್ರಿಯೆಯೂ ಇದ್ದತ್ತಾಡ.
ಒಂದೇ ದಿನಲ್ಲಿ ಭರ್ತಿ ಇನ್ನೂರಕ್ಕೂ ಹೆಚ್ಚು ಪುಸ್ತಕ ಮಾರಾಟ ಆಗಿ, ನಮ್ಮ ಸಮಾಜದ ಸಹೃದಯರ ಕೈ ಸೇರಿತ್ತು – ಹೇದು ಮುಳಿಯಭಾವ° ಕೊಶಿಪಟ್ಟುಗೊಂಡವು.
ಇದಾಗಿ ಬಂತು ಗುರುಭೇಟಿ ಸುಮುಹೂರ್ತ.

~
ಗುರುಭೇಟಿ:
ಮಠದ ತೆಂಕುಗೋಪುರದ ಮಾಳಿಗೆಲಿ ಒಂದು  ಕೋಣೆಲಿ ಬೈಲಿನೋರೆಲ್ಲ ಸೇರ್ಲೆ ಹೇಳಿದವು ಅರವಿಂದಪ್ಪಚ್ಚಿ.
ಕೋಣೆ ಸಣ್ಣ ಇದ್ದದೋ, ಬೈಲಿನೋರು ಸೇರಿ ಅಪ್ಪಗ ಕೋಣೆ ಸಣ್ಣ ಆತು ಹೇಳಿ ಆದ್ದೋ ಒಪ್ಪಣ್ಣಂಗೆ ಅರಡಿಯ!
ಆ ಪ್ರಕಾರಲ್ಲಿ ಸೇರಿಯೂ ಆತು. ಗುರುಗೊ ಅಲ್ಲಿಗೆತ್ತುವಾಗ ರಜಾ ಹೊತ್ತು ಇದ್ದತ್ತಲ್ಲದೋ –ಆ ಹೊತ್ತಿಲಿ, ಬೈಲಿನ ಸಂಗೀತ -ಭಜನಾಸಕ್ತರು ಹಾಡುಗೊ ಹೇಳುಲೆ ಸುರುಮಾಡಿದವು.
ಸಾರಡಿಪುಳ್ಳಿಯ ಶಿವಾಯ ಪರಮೇಶ್ವರಾಯ – ಭಜನೆ,
ದೀಪಿ ಅಕ್ಕನ – ವಿದಿತಾಖಿಲ ಶಾಸ್ತ್ರಸುಧಾ ಜಲಧೇ – ತೋಟಕಾಷ್ಟಕ, ಎಲ್ಲವೂ ಇಂಪಾಗಿ ಬಂತು.
ಎದುರ್ಕಳ ಅಪ್ಪಚ್ಚಿ ಆ ತೋಟಕಾಷ್ಟಕದ ಹಿಂದಾಣ ಕಥೆ, ಮುಂದಾಣ ಕಥೆ – ಎಲ್ಲವನ್ನೂ ವಿವರ್ಸಿದವು.
ಅಷ್ಟಪ್ಪಗಳೇ – ಗುರುಗೊ ಬಂದೇ ಬಿಟ್ಟವು.
ಗುರುಗೊ ಬೈಲಿಂಗೆ ಬಂದ ಸುಮುಹೂರ್ತ ಹೇದರೆ ಅದೊಂದು ದಿವ್ಯ ಆಶೀರ್ವಾದದ ಸಮಯ.
~
ಅದೊಂದು ನಿತ್ಯಪುಳಕದ ಸಂದರ್ಭ.
ಗುರುಗೊ ಪೀಠಲ್ಲಿ, ಬೈಲಿನ ನೆಂಟ್ರುಗೊ ಎದುರು ನೆಲಕ್ಕಲ್ಲಿ!
ಆ ಸಭೆಗೆ ಗುರುಗಳದ್ದೇ ಅಧ್ಯಕ್ಷಸ್ಥಾನ, ಗುರುಗಳೇ ಮುಖ್ಯ ಅತಿಥಿ, ಗುರುಗಳೇ ನಿರ್ವಹಣೆ!
ಎಲ್ಲೋರುದೇ ಅವರವರ ಪರಿಚಯ ಮಾಡಿಗೊಂಬದರ ಮೂಲಕ ಭೇಟಿ ಸುರು ಆತು.
ಹೆಸರು ಎಂತ, ಈಗ ಎಂತ ಮಾಡ್ತಾ ಇದ್ದೆ, ಎಲ್ಲಿದ್ದೆ, ಗುರುಸೇವೆಲಿ ಹೇಂಗೆ ತೊಡಗುಸಿಗೊಂಡಿದಿ – ಹೇಳ್ತ ವಿಷಯಂಗಳ ಮೂಲಕ ವಿವರ ಸುರು ಆತು. ಬೈಲಿನ ಕೆಲವು ಜೆನರ ಇತಿಹಾಸದ ಎಳೆಗೊ ಒಂದರಿ ಬಿಚ್ಚಿತ್ತು. ಅಪುರೂಪದ ಸನ್ನಿವೇಶಂಗೊ, ಸಂದರ್ಭಂಗೊ ಬೈಲಿನೆದುರು ಪ್ರಕಟ ಆತು.
ಬೊಳುಂಬುಮಾವನ ರಂಗಾಸಕ್ತಿ, ಆಚಕರೆಮಾಣಿಯ ಭರತನಾಟ್ಯಾಸಕ್ತಿ, ಶರ್ಮಪ್ಪಚ್ಚಿಯ ರುದ್ರಾಸಕ್ತಿ, ಮುಳಿಯಭಾವನ ಭಾಮಿನಿ ಆಸಕ್ತಿ, ಶ್ರೀಅಕ್ಕನ ದೃಷ್ಟಿಶೆಗ್ತಿ, ಹಳೆಮನೆ ಅಣ್ಣನ ದೃಶ್ಯ ಶೆಗ್ತಿ – ಎಲ್ಲವುದೇ ಗುರುಗಳ ಸಮ್ಮುಖಲ್ಲಿ ಗೊಂತಾತು. ಯೇಳ್ಕಾನ ವಿದ್ಯಕ್ಕನ ಬದ್ಧ ಆದ್ಸು ಗುರುಸಮ್ಮುಖಲ್ಲೇ, ಬೆಟ್ಟುಕಜೆ ಮಾಣಿ ಗುರುಪರಿವಾರದೊಳ ಸೇರಿಗೊಂಡು ಗುರುಸೇವೆ ಮಾಡಿದ್ದು, ಭಾರತೀಪ್ರಕಾಶನದ ಪುಸ್ತಕ ವ್ಯಾಪಾರದ ಪೆಟ್ಟಿಗೆ ಹೊತ್ತದು, ಬೊಳುಂಬು ಬಾವ° ತಾಂತ್ರಿಕ ವಿದ್ಯಾಭ್ಯಾಸ ಮಾಡುಸ್ಸು – ಎಲ್ಲವುದೇ ಗೊಂತಾತು. ಬೈಲಿನ ದೊಡ್ಡಜ್ಜ° ಅಂತೂ  ‘ಆನು ಬೈಲಿನ ದೊಡ್ಡಜ್ಜ°!’ ಹೇಳಿ ಸಂಭ್ರಮಲ್ಲಿ ಪರಿಚಯ ಮಾಡುದರ ಒಟ್ಟಿಂಗೆ  ತನ್ನ ಅಸೌಖ್ಯ ಜೋರಾವುತ್ತಾ ಇದ್ದು, ದೇಹಶೆಗ್ತಿ ಕ್ಷೀಣ ಆವುತ್ತಾ ಇದ್ದು – ಹೇದು ಗುರುಸಮ್ಮುಖಲ್ಲಿ ಹೇಳಿಗೊಂಡವು.
(ಆ ದಿನ ಹಾಂಗೆ ಹೇಳಿದ ದೊಡ್ಡಜ್ಜ° ಇಂದು ಅವು ನಮ್ಮೊಟ್ಟಿಂಗಿಲ್ಲೆ, ಗುರುಪಾದಕ್ಕೇ ಸೇರಿಗೊಂಡವು. ಅದು ಬೇರೆ.)
ಭೇಟಿ ಚೆಂದಲ್ಲೇ ಕಳಾತು. ಬೈಲಿನ ಒಬ್ಬೊಬ್ಬನೂ ಒಂದೊಂದು ವಿಭಾಗಲ್ಲಿ ಸಾಧನೆ ಮಾಡಿದ್ಸರ ಕಂಡು-ಕೇಳಿ ಗುರುಗೊಕ್ಕೆ ಸಂತೋಷ ಆತೋದು. ಇನ್ನೂ ಹೀಂಗೇ ಮುಂದುವರಿಯಲಿ – ಹೇದು ಚೆಂದದ ಆಶೀರ್ವಾದಲ್ಲಿ ಹರಸಿ ಕೊಟ್ಟವು.
ಅರ್ಧ ಗಂಟೆಯ ಭೇಟಿ ಒಂದೂವರೆ ಗಂಟೆ ಮುಂದುವರುದ್ದದು ಬೈಲಿನ ಸೌಭಾಗ್ಯವೇ ಸರಿ.
ಬೈಲಿನ ಕೆಮರದ ಅಣ್ಣಂದ್ರು ಇದೆಲ್ಲವನ್ನೂ ಪಟ ತೆಗಕ್ಕೊಂಡು ಚಿರ-ಅಮರವಾಗಿ ಇಪ್ಪ ಹಾಂಗೆ ನೋಡಿಗೊಂಡಿದವು.
~

ಕಳುದೊರಿಶದ ನಂದನ ಚಾತುರ್ಮಾಸ್ಯಲ್ಲಿ ಗುರುಗೊ ಲಾಂಛನ ಲೋಕಾರ್ಪಣೆ ಮಾಡ್ತದು. (ಪಟ: ಚುಬ್ಬಣ್ಣನ ಕೆಮರ)
ಕಳುದೊರಿಶದ ನಂದನ ಚಾತುರ್ಮಾಸ್ಯಲ್ಲಿ ಗುರುಗೊ ಲಾಂಛನ ಲೋಕಾರ್ಪಣೆ ಮಾಡ್ತದು. (ಪಟ: ಚುಬ್ಬಣ್ಣನ ಕೆಮರ)

ಇದೆಲ್ಲ ಹಳೇಕತೆ.
ಇಷ್ಟೆಲ್ಲ ಕಳುದು ಈಗಂಗೆ ಒಂದೊರಿಶ ಆಗಿಂಡು ಬಂತು.
ನಂದನ ಚಾತುರ್ಮಾಸ್ಯ ಕಳುದು ಈಗ ವಿಜಯ ಚಾತುರ್ಮಾಸ್ಯ ನೆಡೆತ್ತಾ ಇದ್ದು.
ಬೆಳವ ಬೈಲು ಮತ್ತೊಂದರಿ ಸೇರೆಡದೋ?
ಮತ್ತೊಂದರಿ ಗುರು ಸಮ್ಮುಖಲ್ಲಿ ಬೈಲ ಶಿಷ್ಯಂದ್ರು ಆಶೀರ್ವಾದ ಬೇಡೆಡದೋ?
ಮತ್ತೊಂದರಿ ಪಾದಪೂಜೆ ಮಾಡ್ಳೆ ಎಲ್ಲೋರುದೇ ಸೇರೆಡದೋ?
ಮತ್ತೊಂದರಿ ನಾವುನಾವು ಕಂಡು ಅತ್ತಿತ್ತೆ ಮಾತಾಡಿಗೊಳ್ಳೆಡದೋ?
ಮಾಡೇಕು, ಸೇರೇಕು, ಮಾತಾಡೇಕು.
~
ಆಯೇಕು ಹೇದು ಒಪ್ಪಣ್ಣ ಮಾಂತ್ರ ಹೇಳುಸ್ಸು ಅಲ್ಲ, ಬೈಲ ಎಲ್ಲೋರುದೇ ಹೇಳ್ತವು.
ಹಾಂಗಾಗಿ, ಮಾಣಿ ಮಠದ ಚಾತುರ್ಮಾಸ್ಯಲ್ಲಿ ಗುರುಗಳ ಭೇಟಿ ಸಮಯ ಕೇಳಿಗೊಂಡತ್ತು.
ಎಡಪ್ಪಾಡಿ ಭಾವ°, ಅರವಿಂದಪ್ಪಚ್ಚಿ – ಎಲ್ಲೋರುದೇ ಸೇರಿಗೊಂಡು – ಪಂಚಾಂಗ ಬಿಡುಸಿ ನೋಡಿ ಒಂದು ಒಳ್ಳೆದಿನವ ತೋರ್ಸಿದವು. ಗುರುಗಳೂ ಆ ದಿನಕ್ಕೆ ಪುರುಸೊತ್ತು ಕೊಟ್ಟು ಬೈಲಿನೋರತ್ರೆ ಮಾತಾಡ್ತೆ – ಹೇದು ಸಮ್ಮತಿಸಿದ್ದವು.
ಇನ್ನೆಂತ ಬಾಕಿ? ನಾವೆಲ್ಲ ಆ ದಿನ ಅಲ್ಲಿ ಸೇರ್ತದೇ ಇಪ್ಪದು.
ಶ್ರೀ ಗುರುಪಾದುಕಾ ಪೂಜೆ ನೆಡೆಶಿ, ಪ್ರಸಾದ ತೆಕ್ಕೊಂಬದೇ ಇಪ್ಪದು.
ಆ ದಿನ ಗುರು ಆಶೀರ್ವಚನ ಕೇಳ್ತದೇ ಇಪ್ಪದು,
ಅದಾದ ಮತ್ತೆ ಗುರುಗಳ ಕಾಂಬದೇ ಇಪ್ಪದು.
ಎಲ್ಲಕ್ಕಿಂದ ಮುಖ್ಯವಾಗಿ, ನಮ್ಮ ಗುರುಗೊ ನಿಜವಾದ ನಮ್ಮ ಗುರುಗೊ ಆಗಿ, ಆತ್ಮೀಯತೆಲಿ ಮಾತಾಡ್ತ ಸಂದರ್ಭವೇ ಕಾಂಬಲೆ ಇಪ್ಪದು.
ಬೈಲ ಭವಿಷ್ಯಕ್ಕೆ ಆಶೀರ್ವಾದ ತೆಕ್ಕೊಂಬಲೆ ಇಪ್ಪದು.
~

ವಿಜಯ ಚಾತುರ್ಮಾಸ್ಯಲ್ಲಿ ಒಪ್ಪಣ್ಣನ ಬೈಲಿನ ಗುರುಭೇಟಿಯ ಹೊತ್ತುವೇಳೆ:
ದಿನ: ಸೆಪ್ಟೆಂಬರ್ 14, 2013  (ಭಾದ್ರಪದ ಮಾಸ, ಶುಕ್ಲಪಕ್ಷ, ದಶಮಿಯ ದಿನ)
ವಾರ: ಶೆನಿವಾರ
ಜಾಗೆ: ಮಾಣಿಮಠ

ಬೈಲಿನ ಎಲ್ಲ ನೆಂಟ್ರಿಂಗೂ ಆಮಂತ್ರಣ – ಬನ್ನಿ, ಗುರುಗಳ ಭೇಟಿಗೆ.
ಬೈಲಿನ ಭದ್ರ ಭವಿಷ್ಯಲ್ಲಿ ನಿಂಗಳೂ ಪಾಲುದಾರರಾಗಿ,
ಗುರು ಆಶೀರ್ವಾದ ತೆಕ್ಕೊಂಬಲ್ಲಿ ನಿಂಗಳೂ ಭಾಗಿಯಾಗಿ – ಹೇದು,
ಬೈಲಿನ ಪರವಾಗಿ ಬೈಲಿನ ಎಲ್ಲ ನೆಂಟ್ರಿಂಗೂ ಹೇಳಿಕೆ.
~
ಎಲ್ಲೋರುದೇ ಬತ್ತಿರಲ್ಲದೋ?
~
ಒಂದೊಪ್ಪ: ಗುರು ಅನುಗ್ರಹದ ಬೆಣಚ್ಚಿಲಿ ಬೈಲ ಸಾಹಿತ್ಯದ ಹೂಗುಗೊ ಅರಳಲಿ!

ಸೂ:

  • ಗುರುಭೇಟಿಯ ಬಗ್ಗೆ ಹೆಚ್ಚಿನ ವಿವರಕ್ಕೆ ಸಂಪರ್ಕ:
    oppanna@oppanna.com / 9449806563 / 9591994644 / 9448271447

20 thoughts on “ಬೆಳವ ಬೈಲಿನ ವಿಜಯ ಯಾತ್ರೆಲಿ ಗುರುವ ಕಾಣೆಕ್ಕು..

  1. ಉತ್ತಮ ಕಾರ್ಯಕ್ರಮಕ್ಕೆ ಪ್ರೀತಿಯ ಶುಭ ಹಾರೈಕೆಗೋ.
    ಹರೇ ರಾಮ…

  2. ಮೊನ್ನೆ ಮೊನ್ನೆ ಅಷ್ಟೆ ಆ ದಿನ ಕಳುದ ಹಾ೦ಗೆ ಆವ್ತು, ಇನ್ನು ಈ ವರ್ಷದ ಬೈಲ ಮಿಲನವೂ ಬ೦ತು ಹೇಳಿ ಕೇಳುವಗ ಇನ್ನೂ ಖುಶಿ ಆತು. ಬೈಲಿನ ಎಲ್ಲೋರನ್ನೂ ಇನ್ನೊ೦ದರಿ ಕಾ೦ಬಲೆ ಖ೦ಡಿತಾ ಬತ್ತೆ.

  3. ಆಹಾ, ಕಳುದ ವರುಶದ ಮಧುರ ನೆಂಪಿನ ಪುನಃ ನೆಂಪು ಮಾಡಿದ ಒಪ್ಪಣ್ಣಂಗೆ ಧನ್ಯವಾದಂಗೊ. ಅಂದು ಬೆಂಗ್ಳೂರಿಲ್ಲಿ
    ನಮ್ಮ ಬೈಲಿನ ಪದ್ಯವ ದೀಪಿಕಕ್ಕ ಹಾಡುವಗ ಪುಸ್ತಕ ಬಿಡುಗಡೆ ನೆಡದ್ದು ಇನ್ನೂ ನೆಂಪಿದ್ದು. ನಮ್ಮ ಬೈಲಿನ ಪದ್ಯವ ಇನ್ನೊಂದರಿ ಹಾಡುಸೆಕು ಒಪ್ಪಣ್ಣ. ಭಾರೀ ಲಾಯಕಾವ್ತದು ಕೇಳಲೆ. ಸೆಪ್ಟೆಂಬರ್ ೧೪ಕ್ಕೆ ನಾವು ರೆಡಿ. ಈ ಸರ್ತಿ ರೈಲು ಟಿಕೇಟುದೆ ಬೇಡ.

    1. ಅಂಬಗ ಮಾವಾ.

      ಬೈಕ್ಕಿನ ಕಾಲೆಡೆಕ್ಕಿಲಿ ಸಿಕ್ಕಿಸಿರಾತು ಹೇದೋ?

      ಓ ಅಲ್ಲಿ ಆರೋ ಹೇದಾಂಗಾತು..

  4. ಹರೇರಾಮ.
    ಅಂದಿನ ಗುರುಭೇಟಿಯ ದಿನವ ಮರವಲೆಡಿಯ ಒಪ್ಪಣ್ಣ.ಈ ಸರ್ತಿ ಒಪ್ಪಣ್ಣನ ಬೈಲಿನೋರಿಂದ ಮಾಣಿಮಠದ ಜನಭವನ ತುಂಬಲಿ.

  5. ಹರೇರಾಮ. ಅಂದಿನ ಆ ಗುರುಭೇಟಿಯ ದಿನವ ಮರವಲೆಡಿಯ ಒಪ್ಪಣ್ಣ.

  6. ಹರೇರಾಮ ಒಪ್ಪಣ್ಣ…
    ಅಯ್ಯೋ ರಾಮ..ಎನಗೆ ಈ ಸರ್ತಿದೆ ಬಪ್ಪಲೆ ಎಡಿತ್ತಿಲ್ಲನ್ನೆ ಃ( ಒಪ್ಪಣ್ಣ, ಎನಗುದೆ ಗುರುಗಳಲ್ಲಿ ರಜ್ಜ ಆಶೀರ್ವಾದ ಬೇಡಿಗೊಳ್ತೀರಾ?
    ಹರೇರಾಮ…

  7. ಗುರುವಿನ ಅನುಗ್ರಹಂದ ಬೈಲು ಒೞೆಯ ರೀತಿಲಿ ಬೆಳೆತ್ತಾ ಇದ್ದು..ಅದು ಇನ್ನೂ ಹೆಚ್ಚಿನ ವೇಗ ಪದ್ಕೊಂಬಲೆ ಆದಿಕ್ಕು ಈ ಸರ್ತಿಯಾನ ಗುರುವಿನ ಭೇಟಿ..ನಾವು ಅದರಲ್ಲಿ ಸೇರದ್ರೆ ಹೇಂಗೆ..

  8. ಕಳುದ ವರುಷ ಸೌಭಾಗ್ಯ ಸಿಕ್ಕಿದ್ದು..ನೆಂಪು ಮಾಡಿಯಪ್ಪಗ ಕಣ್ಣಿಗೆ ಕಟ್ಟುತ್ತು.. ಈ ವರುಷವು ಗುರುಗಳ ದಯೆಂದ ಅಲ್ಲಿ ಇರೆಕ್ಕು ಹೇಳಿ ಮನಸು ಹೇಳ್ತು..

  9. ಎಷ್ಟು ಹೊತ್ತಿಂಗೆ? ಉದಿಯಪ್ಪಗಳೋ? ಹೊತ್ತೋಪಗಳೋ? ಅಲ್ಲ ಇಡೀ ದಿನವೋ?

    1. ಎನ್ನ ಈ ಒಂದು ಪ್ರಶ್ಣೆಗೆ ಉತ್ತರ ಸಿಕ್ಕಿತ್ತಿಲ್ಲೆನ್ನೇ… 🙁 … ಎಷ್ಟು ಹೊತ್ತಿಂಗೆ ಒಪ್ಪಣ್ಣಾ?

      1. ಹರೇ ರಾಮ,
        ಗುರುಗಳ ಸೌಕರ್ಯ ನೋಡಿಗೊಂಡು, ಯೇವ ಹೊತ್ತಿಂಗೂ ನಿಂಗೊ ತಯಾರಾಗಿ ಇರೆಕು ಹೇಳ್ತ ಸೂಚನೆ ಬೈಂದು. ನಮ್ಮ ಬೈಲಿನ ಲೆಕ್ಕದ ಪಾದಪೂಜೆ ಇದ್ದ ಕಾರಣ, ಆ ಕಾರ್ಯಕ್ರಮ ಮಧ್ಯಾಹ್ನಂದ ಮೊದಲೇ ಇಕ್ಕು, ಆದರೆ ಭೇಟಿ… ಎಷ್ಟು ಹೊತ್ತಿಂಗೆ ಅಕ್ಕು ಹೇಳಿ ನಿಘೆಂಟು ಹೇಳುಲೆ ಎಡಿಯ.

  10. ಕಳುದ ಸರ್ತಿ ಬಪ್ಪಲೆ ಎಡಿಗಾಯಿದಿಲ್ಲೆ. ಈ ಸರ್ತಿ ಬರೆಕ್ಕು..ಃ) ಬೈಲಿನವು ಎಲ್ಲರೂ ಒಟ್ಟು ಸೇರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ..ಃ)

  11. ಬಾರದ್ದೇ ಅಕ್ಕೋ/ಇಕ್ಕೋ?
    ಖಂಡಿತಾ ಎಲ್ಲೋರೂ ಬಕ್ಕು ಒಪ್ಪಣ್ಣಾ. ಎಶ್ಟು ಸಂಖ್ಯೆಲಿ ಹೇಳಿರೆ, “ಕೋಣೆ ಸಣ್ಣ ಇದ್ದದೋ, ಬೈಲಿನೋರು ಸೇರಿ ಅಪ್ಪಗ ಕೋಣೆ ಸಣ್ಣ ಆತು ಹೇಳಿ ಆದ್ದೋ ಒಪ್ಪಣ್ಣಂಗೆ ಅರಡಿಯ!” ಹೇಳಿ ನೀನು ಪುನಃ ಹೇಳೆಕಕ್ಕು ನೋಡು. ನಮ್ಮ ಅತಿ ದೊಡ್ಡ ಸಭಾಭವನವೂ ತುಂಬುಗು. 🙂

  12. ಹರೇ ರಾಮ. ಆ ಅವಿಸ್ಮರಣೀಯ ದಿನವ ಒಂದರಿ ಮೆಲುಕು ಹಾಕಿ ಮೈಮನ ಪುಳಕಗೊಂಡತ್ತು. ಇನ್ನೊಂದರಿ ಗುರುಭೇಟಿಗೆ ಸಂದರ್ಭ ಒದಗಿ ಬತ್ತು ಹೇಳ್ತರ ಓದಿ ತುಂಬಾ ಕೊಶಿ ಆತಿದ. ಶ್ರೀ ಗುರುಕೃಪೆಂದ ಈ ಬೈಲು ಸದಾ ಬೆಳಗಲಿ, ಬೆಳೆಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×