Oppanna.com

ಸಮಸ್ಯೆ 52 : ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

ಬರದೋರು :   ಸಂಪಾದಕ°    on   26/10/2013    46 ಒಪ್ಪಂಗೊ

ಈ ವಾರ

” ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು”

ನುಸಿ ನೆತ್ತರಿನ ಹೀರುವ ವರ್ಣನೆ ಅಥವಾ ಈ ಕ್ರಿಯೆಯ ಹೋಲಿಕೆಯ ಒ೦ದು ಸ೦ದರ್ಭವ ಭಾಮಿನಿ ಷಟ್ಪದಿಲಿ ಪ್ರಯತ್ನ ಮಾಡುವ°,ಹೇ೦ಗೇ?

46 thoughts on “ಸಮಸ್ಯೆ 52 : ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

  1. @ ತೆಕ್ಕುಂಜ ಕುಮಾರ ಮಾವ, ನಿಂಗೊ ವ್ಯಾಕರಣ ನಿಂಗಳ ಅಪ್ಪನ ಕೈಂದ ಕಲ್ತದರ ಈ ಹಿಂದೆ ಬರದ್ದರ ಸಾಕ್ಷಿಯಾಗಿ ಮಡಿಕೊಂಡು ಕೇಳ್ತಾ ಇದ್ದೆ —”ಸಣ್ಣಾಗಿಪ್ಪಗ ಶಾಲೆಲಿ ಎನ್ನ ಕನ್ನಡ ಪಂಡಿತರು ವ್ಯಾಕರಣ ತಪ್ಪು ಮಾಡಿರೆ ಕುಟ್ಟಿ ಕೊಡುಗು. ಅದೂ ಬೇನೆ ನಾಕು ದಿನ ಮರವವಲೆಡಿಯದ್ದ ಹಾಂಗೆ.(ಎನ್ನ ಅಪ್ಪನೇ ಎನಗೆ ಕನ್ನಡ ಪಂಡಿತರಾಗಿತ್ತಿದ್ದು, ಆತೋ)”
    ನಮ್ಮ ಸಮಾಜಲ್ಲಿ ನಡವ ಪ್ರಸ್ತುತ ವಿದ್ಯಮಾನಂಗಳ ಗಮನಲ್ಲಿ ಮಡಿಕ್ಕೊಂಡು , ಒಪ್ಪಣ್ಣನ ಬೈಲಿಲಿ ನಿಂಗೊಗೆ ವ್ಯಾಕರಣ ಹೆಚ್ಚು ಗೊಂತಿಪ್ಪ ಕಾರಣ ಮತ್ತು ಎನಗೆ ವ್ಯಾಕರಣ ನಿಂಗಳಷ್ಟು ಗೊಂತಿಲ್ಲದ್ದ ಕಾರಣ ನಿಂಗಳತ್ತರೆ ಕೇಳ್ತಾ ಇದ್ದೆ ಮಾವ –https://oppanna.com/oppa/shuddha-ganga ಆ ಲೇಖನಕ್ಕೆ ಒಪ್ಪಣ್ಣನ ಒಂದೊಪ್ಪ – ” ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಅಮ್ಮನೇ ಆಯೆಕ್ಕಷ್ಟೆ” ಹೇಳಿ ಬರದ ವಾಕ್ಯ ಸರಿಯೋ ಅಥವಾ ಆನು ಎನ್ನ ಹೆತ್ತ ಅಮ್ಮಂಗೆ ಮಗಳಾಗಿ ಇದ್ದು ಗೊಂಡು ಮತ್ತು ಆನು ೯ ತಿಂಗಳು ಎನ್ನ ಗರ್ಭಲ್ಲಿ ಹೊತ್ತು , ಮತ್ತೆ ಹೆತ್ತು ಸಾಂಕಿ ಅದೇ ಅನುಭವವ ಎನ್ನದಾಗಿ ಮಾಡಿ, ಆ ಅನುಭವ ಲೋಕದ ಎಲ್ಲಾ ಅಮ್ಮಂದ್ರಿಗೂ ಅನ್ವಯಿಸುಗು ಹೇಳಿ ಅಂದಾಜಿ ಮಾಡಿ , ಹೀಂಗೆ ಬದಲುಸುಲಕ್ಕು ಹೇಳಿ ಬರದು ತೋರುಸಿದ ವಾಕ್ಯ —–” ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಗಂಗಮ್ಮನೇ ಆಯೆಕ್ಕಷ್ಟೆ” ಹೇಳಿ ಬರದ ವಾಕ್ಯ ಸರಿಯೋ ? ಆನು ಅಮ್ಮ ಆದರುದೆ , ವ್ಯಾಕರಣದ ವಿದ್ಯಾರ್ಥಿನಿಯಾಗಿ ಕೇಳ್ತಾ ಇದ್ದೆ .ಗೊಂತಿಲ್ಲದ್ದರೆ , ಗೊಂತಿಪ್ಪೋರತ್ತ್ರೆ ತಿಳುದು ಎನಗೆ ಉತ್ತರ ಕೊಡಿ . ಆನು ಅಲ್ಲಿ ಬರದ್ದು ತಪ್ಪು ಇದ್ದರೆ ಕ್ಷಮೆ ಕೇಳಲೆ ಮತ್ತು ತಿದ್ದಿಗೊ೦ಬಲೆ ಇನ್ನುದೆ ತಯಾರಿದ್ದೆ .
    ಅಕಸ್ಮಾತಾಗಿ ಮೊನ್ನೆ ನೆಟ್ಟಿಲಿ ಒಂದು ವೀಡಿಯೊ ಸಿಕ್ಕಿತ್ತು . ಇಲ್ಲಿ ಹಾಕುತ್ತೆ . ಓದುವೋರು , ಪದ್ಯವ ಭಾವ ಸಮೇತ ಅರ್ಥ ಮಾಡಿಗೊಂದು ನೋಡಿ
    AMMA : Prayer on the MOTHER : By Sri Sri Raghaveshwara Bharati Swamiji

    1. ಭಾಗ್ಯತ್ತೇ, ನಮಸ್ತೇ.
      ತೆಕ್ಕುಂಜೆ ಮಾವ, ನಿಂಗಳ ಹಾಂಗೇ – ಒಪ್ಪಣ್ಣಂಗೂ ಒಪ್ಪಣ್ಣನ ಅಪ್ಪನೇ ಕನ್ನಡಪಂಡಿತರು.
      ಕನ್ನಡ ಮಾಂತ್ರ ಅಲ್ಲ, ಹಿಂದಿ, ಇಂಗ್ಳೀಶು, ಸಮಾಜ, ಸಂಸ್ಕೃತ – ಎಲ್ಲದಕ್ಕೂ ಅವ್ವೇ ಪಂಡಿತರಾಗಿತ್ತಿದ್ದವು. ಮುಂದೆ ಹಲವು ಜೆನ ಮಾಷ್ಟ್ರಕ್ಕೊ ಬಂದರೂ, ಪಂಡಿತರು ಹೇದು ಬೇರೆ ಆರೂ ಸಿಕ್ಕಿದ್ದವಿಲ್ಲೆ ಇದಾ!
      ಅದಿರಳಿ.
      ಮಾತೃಹೃದಯದ ನಿಂಗಳ ಅಭಿಪ್ರಾಯಂಗೊ ಒಪ್ಪಣ್ಣಂಗೆ ಅರ್ಥ ಆವುತ್ತು.
      “ಅಮ್ಮ” ಹೇಳಿ ಇಪ್ಪದು ಗಂಗಮ್ಮ ಹೇಳಿ ಆದರೆ ಬೈಲಿಲಿ ಹೆಚ್ಚು ಸಂತೋಷ ಆವುತ್ತು ಹೇಳಿ ಆದರೆ ಒಪ್ಪಣ್ಣಂಗೆ ಅದುವೇ ಖುಷಿ.
      ಸಂತೋಷಲ್ಲಿ ಬದಲುಸಿದೆ: https://oppanna.com/oppa/shuddha-ganga
      ಶುದ್ದಿಲಿ ಆದ ಸಣ್ಣ ವಿತ್ಯಾಸವ ಗುರುತುಮಾಡಿ ಅದರ ಸರಿ ಮಾಡುಸುವ ನಿಂಗಳ ಕಾಳಜಿಗೆ ನಮೋನಮಃ.
      ನಿಂಗಳ ಮಗನ ಸ್ಥಾನಲ್ಲಿಪ್ಪ ಒಪ್ಪಣ್ಣನ ಶುದ್ದಿಗಳ ಅಮ್ಮನ ಸ್ಥಾನಲ್ಲಿ ನಿಂದೇ ಓದಿಕ್ಕಿ.
      ಹರೇರಾಮ.

      1. ಸಂತೋಷ . ಎನ್ನ ವಾದಂದಾಗಿ ಬೈಲಿಲಿ ಆರಿಂಗಾರೂ ಬೇಜಾರ ಆದರೆ ಕ್ಷಮಿಸಿ .

  2. ಬೀಗರು ಬರೆಕ್ಕಾರೆ ಮದಲೇ
    ಬಾಗಿಲಿಂಗೇ ಬೀಗ ಜಡುದೂ
    ಹೋಗಿ ಬೇರೆ ಮನೆಯನೆ ಸೇರುವ ಹಾಂಗೆ ಕಂಡತ್ತು
    ರಾಗ,ತಾಳಂಗಳ ಜೆತೆಲಿಯೆ ಸ-
    ರಾಗ ಬಂದೊಂಡಿಪ್ಪ ಬಳಗದ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

  3. ಬೇಗ ಬಪ್ಪಲೆ ಸ್ವಾರ್ಥ ಸುಖದಾ
    ಭೋಗ ಜೀವನ ದೋಚಿ ಬೊಕ್ಕಸ
    ತೂಗಿ ಚಿನ್ನವ ಕಪ್ಪು ಪೈಸೆಲಿ ಹುಗುದು ಮಡುಗಿದವು
    ತೇಗಿ ತಿಂದವು ದೇಶದಾಸ್ತಿಯ
    ಮೂಗನಾಂಗೆಯೆ ನಟಿಸೆ ಸಿಂಗನ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತೊ ?? ।।

    1. ಹ.ಹಾ. ಮೂಗ ಸಿ೦ಗನ ನುಸಿಯೋ !! ಒಳ್ಳೆ ಉಪಮೆ.

  4. ರಾಗಣೇಶರ ಚಿತ್ರಕಾವ್ಯದ
    ಮೋಘ ಕಾರ್ಯಕ್ರಮವ ನೋಡೊಗ
    ಮೂಗ ಮೇಗೆಯೆ ಬೆರಳು ಮಡುಗಿದೆ ಲೋಕ ಮರದತ್ತು
    ಹೂಗಿನೆಸಳಿನ ಮೇಲೆ ಜೇನ್ಹುಳು
    ಜಾಗೆ ಹುಡುಕುತ ಕೂಪ ಹಾ೦ಗೆ ಸ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

    1. ರಾಗದ ಆಲಾಪನೆ ಒಂದರಿಂದೊಂದು ರೈಸಿದ್ದಪ್ಪ.

  5. ರೋಗವಿದು ಹಬ್ಬಿದ್ದು ಸುತ್ತ ಸ-
    ರಾಗವಾಗಿಯೆ ಪೈಸೆ ದೋಚುವ
    ವೀಗ ತು೦ಬಿದವಯ್ಯೊ ಘನ ಸರಕಾರದ೦ಗಡಿಲಿ
    ಕಾಗಿನೆಲೆಯಧಿಪತಿಯೆ ನೀನು ವಿ
    ರಾಗಿಯಾಯಿದೆಯೇಕೆ ತೋಡೀ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು
    ( ತೋಡೀ ರಾಗ = ತೋಡುವ ರಾಗ ?)

  6. ಈ ನುಸಿ ಆ ರಾಹುಲ ಗಾಂದಿಗೆ ಕಚ್ಚಿದ ಇಪ್ಪತ್ತೈದು ಸಾವಿರ ನುಸಿಗಳಲ್ಲಿ ಇತ್ತಿದ್ದೋ?

  7. ಮೇಗೆ ಪೇಟೆಯ ಕರೆಯ ಗೆದ್ದೆಗೆ
    ಮೂಗುವರೆಗು೦ಡಿಕ್ಕಿ ಹೆರಟರೆ
    ಜಾಗಟೆಗೆ ಮದ್ದಳೆಯ ತಕಧಿಮಿ ಲಯವು ಸೇರಿತ್ತು
    ಜಾಗರಣೆ ರೈಸಿತ್ತು ಸಭೆ ತಲೆ
    ತೂಗಿ ಕೇಳೊಗ ಅಜ್ಜ ಬಲಿಪರ
    ರಾಗದಾಲಾಪನೆಯ,ನುಸಿ ನೆತ್ತರಿನ ಹೀರಿತ್ತು

    1. ಬಲಿಪ್ಪಜ್ಜನ ಆಲಾಪನೆಯಷ್ಟೇ ರೈಸಿದ್ದನ್ನೆ ಈ ಪದ್ಯ.

    2. ಪೂರಣಕ್ಕೆ ಹೊಸ ದೃಷ್ಟಿಕೋನ. ಲಾಯಿಕಾಯಿದು.

  8. ಬೀಗ ಹಾಕಿದ ಬಾಗಿಲೆಡೆಲಿಯು
    ಜಾಗೆ ಮಾಡಿಯೆ ಹೊಗ್ಗಿ ಬಂದದು
    ಹೋಗಿ ಕೂರುಗು ವೈದ್ಯ ಸೇವೆಗೆ ಕುತ್ತಿ ಸೂಜಿಲಿದಾ
    ಮೇಗೆ ಬಡುದರೆ ಬೇಗ ತಪ್ಸುಗು
    ರೋಗ ಹರ್ಡಿಸಿ ತೇಗಿ ಟುಂಯ್ಯನೆ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು ||

    1. “ಟುಂಯ್ಯನೆ ರಾಗದಾಲಾಪನೆ” ಹೇಳಿ ಓದೊಗ ಕೆಮಿ ಬುಡಲ್ಲಿ ನುಸಿ ಕೂದ ಅನುಮಾನ ಬಂತು ಒಂದರಿ.
      ಪಷ್ಟಾಯಿದು ಶೈಲಜಕ್ಕ.

  9. ತೂಗುಮಂಚಲಿ ಮಗುವ ಕೂರಿಸಿ
    ಕಾಗದಹಿಡುದೆ ಪದ್ಯ ಬರವಲೆ
    ಕೂಗಿ ಬಿಟ್ಟತು ಬಾಬೆ ಘಳಿಗೆಲಿ ತುಂಬ ಜೋರಾಗಿ
    ಹೋಗಿ ನೋಡಿರೆ ಗ೦ಧೆ ಕಂಡತು
    ಜೋಗುಳದನೆಪ ಮಾಡಿ ಹಾರಿದ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು
    ‘ದಡಿಕ್ಕೆ’ ಹೇಳಿ ಉಪಯೋಗಿಸಿರೆ ‘ಲಗ೦’ ಬಪ್ಪ ಕಾರಣ ‘ಗ೦ಧೆ’ ಪದವ ಪದ್ಯಲ್ಲಿ ಹಾಕಿದ್ದೆ.

    1. ಹೋಗಿ ನೋಡ್ತೆ ದಡಿಕ್ಕೆ ಕಂಡತು – ಹೇಳಿರೆ ಉತ್ತಮ ಹಾ೦ಗಾರೆ.

  10. ಬೇಗನೆ ಕವನವ ಬರದು ಮುಗುಶಿ
    ಬಾಗಿಲ ಕರೆಲಿ ಹಾಸಿಗೆ ಬಿಡುಸಿ-
    ದಾಗಳೆ ನುಸಿಗಳ ಬಳಗದ ರಾಗವೇ ಕೇಟತ್ತು
    ಮಾಗಣಿಯ ನುಸಿಗಳೊಟ್ಟಿಂಗೇ
    ಸೋಗಲಾಡಿಯ ಹಾಂಗೆ ಬಳುಕಿದ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು
    (ಮಾಗಣಿ=ಹೋಬಳಿ,ಸೋಗಲಾಡಿ=ಒಯ್ಯಾರಿ)

    1. ಮಾವಾ,ಲಾಯ್ಕ ಆಯಿದು. ಸುರುವಾಣ ಎರಡು ಗೆರೆ ರಜ ಡ೦ಕಿದರೂ ಮಾತ್ರೆ ಸರಿ ಇದ್ದು.

    2. ಮಾಗ/ಣಿಯ ನುಸಿ/ಗಳೊ/ಟ್ಟಿಂಗೇ – ಇಲ್ಲಿ ಗಳೊ ಶಬ್ದಲ್ಲಿ ಲಗ೦ ಸಮಸ್ಯೆ ಇದ್ದು.

      1. ಈ ಗೆರೆಯ ಹೀಂಗೆ ತಿದ್ದುಪಡಿ ಮಾಡಿ ಬರೆತ್ತೆ.
        ಮಾಗಣಿಯ ನುಸಿಗಳ ಜೆತೆಲಿಯೇ

  11. ಕಳುದ ಸರ್ತಿ ಸುಕ್ರುಂಡೆ ಮಾಡಿ ಸಬ್ ಜಿಲ್ಲಾ ಮಟ್ಟಲ್ಲಿ ಸತ್ಯಣ್ಣ೦ಗೆ ಪ್ರೈಸು ಬಯಿ೦ದಡೊ . ಇನ್ನು ಜಿಲ್ಲಾ ಮಟ್ಟಕ್ಕೆ ಹೋಪಲೆ ಮೋಹನ ಲಾಡು ಮಾಡುವ ಅ೦ದಾಜಿಯಡ 🙂
    ಭೋಗ ,ಭಾಮಿನಿ ,ಕುಸುಮ ಶರಪದ
    ಸೋಗು ಹಾಕಿದ ವರ್ಣಲಿಪ್ಪಗ
    ರಾಗದಾಲಪನೆಯ ನುಸಿ ನೆತ್ತರಿನ ಹೀರಿತ್ತು
    ಹೋಗಿ ಹಿಂದೊಳವಡಿಗೆ ಮಾಡಿದ°
    ಕೋಂಗಿ ಪಾಕವದಟ್ಟಿನಳಗೆಲಿ
    ನೆಗ್ಗಿ ತ೦ದವು ಕಳಲಿ ಮೋಹನ ಲಾಡು ಕಟ್ಟುಲೆಡೊ
    ಹಿಂದೆ +ಒಳವೆ +ಅಡಿಗೆ =ಹಿಂದೊಳವಡಿಗೆ

    1. ಆ ಲಾಡು ಸುಕ್ರುಂಡೆಯ ಎಣಿಸಿದ್ದು ಆರು ಹೇದು ಕೇಳ್ತ ಅಡಿಗೆ ಸತ್ಯಣ್ಣ°. ಲೆಕ್ಕ ಸರಿ ಆಯ್ದೋಳಿ ಟೀಕೆಯವು ಹೇಳೇಕ್ಕಾಡ

    2. ಲೆಕ್ಕಚಾರ ಸರಿ ಇದ್ದು ಹೇದು ಹೇಳಿದ್ದವು, ಬೇಲೆನ್ಸು ಹಾವ.
      ಎನಗೆ ಭಾಗ್ಯಕ್ಕನ ಎರಡು ಸಂಧಿ ಅರ್ಥ ಆಯಿದಿಲ್ಲೆ.
      ೧.ಕ೦ಡೆ +ಅನು = ಕ೦ಡನು
      ೨.ಹಿಂದೆ +ಒಳವೆ +ಅಡಿಗೆ =ಹಿಂದೊಳವಡಿಗೆ

      1. ಮಾವ, ಅದು ಸರಿಯೋ ತಪ್ಪೋ ಹೇಳಿ ಎನಗೂ ಗೊಂತಿಲ್ಲೆ . ಹಾಂಗೆ ಸಂಶಯ ಇದ್ದ ಕಾರಣ ಬರದ್ದು . ತಪ್ಪಾದರೆ ಹೇಳಿಕ್ಕಿ.ಅಡಕ್ಕೆ ಹೆರ್ಕುವಾಗ , ನುಸಿ ವೀಣೆ ಸೊರ ಮೀಂಟಿ ಅನುರಾಗದ ಆಲಾಪನೆ ಮಾಡಿ ಕೈಲಿ ಕೂದ್ದು ಗೊಂತಾಯಿದಿಲ್ಲೆ . ಕ೦ಡಪ್ಪಗ ನೆತ್ತರು ಹೀರಿತ್ತಿದ್ದು ಹೇಳಿ ಎನ್ನ ಕಲ್ಪನೆ .
        ಇನ್ನೊಂದು , ಮನೆಯ ಹಿಂದೆ ;ಆದರೆ ಒಳವೆ ಅಡಿಗೆ ಮಾಡಿದ . ಹೆರ ಅಡಿಗೆ ಕೊಟ್ಟಗೆಲಿ ಅಲ್ಲ ಹೇಳಿ .

        1. ಕ೦ಡೆ + ಅನು = ಕ೦ಡನು ಹೇಳಿಯಷ್ಟೇ ಬರೆದ ಕಾರಣ ಆನು ಗ್ರೇಶಿದೆ ಸಾಲು ಅಲ್ಲಿಗೇ ಮುಗುತ್ತು ಹೇಳಿ. ಹಾ೦ಗಾಗಿ ಎನಗೂ ಅರ್ಥ ಆಗಿತ್ತಿಲ್ಲೆ ‘ಕ೦ಡನು’ ಹೇಳಿರೆ ಎ೦ಥ ಹೇಳಿ.
          ನಿ೦ಗಳ ವಿವರಣೆ ಓದಿದ ಮೇಲೆ ಗೊ೦ತಾತು, ಕ೦ಡೆ + ಅನುರಾಗದಾಲಾಪನೆ ಹೇಳಿ.
          ಒ೦ದು ಮಾಡುಲಕ್ಕು,
          ಕ೦ಡನು-
          ರಾಗ…….
          ಮೇಲೆ ಕೊಟ್ಟ ಹಾ೦ಗೆ ‘-‘ ಚಿಹ್ನೆ ಹಾಕಿದರೆ, ಓದುವಾಗ ಸುಲಭಲ್ಲಿ ಸಾಲು ಮುಗುದ್ದಿಲ್ಲೆ ಹೇಳಿ ಗ್ರಹಿಸುಲೆ ಆವ್ತು.

        2. ವ್ಯಾಕರಣ ದೃಷ್ಟಿಯಿ೦ದ ” ಕ೦ಡನುರಾಗದಾಲಾಪನೆ” ಬದಲು “ಕ೦ಡೆಯನುರಾಗದಾಲಾಪನೆ” ಹೇಳಿರೆ ಸೂಕ್ತ ಕಾಣ್ತು.

        3. ಧನ್ಯವಾದ ಅದಿತಿಯಕ್ಕ. ಕೆಳ ಬರದ ರೀತಿಲಿ ಸರಿ ಅವುತ್ತೊ? ನಿ೦ಗೊ ಸೂಚಿಸಿದಾ೦ಗೆ ಮಾಡುವಗ ಮಾತ್ರೆ ಲೆಕ್ಕ ಸರಿ ಬತ್ತಿಲ್ಲೆ. ಅಲ್ಲದಾ?
          ಲಾಗಿ ಬಪ್ಪಗ ಕ೦ಡೆ ಕೈಲ್ಯನು
          ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

        4. ವ್ಯಾಕರಣದ ದೃಷ್ಟಿಲಿ ಎರಡೂ ತಪ್ಪು. ಅದಿತಿ ಅಕ್ಕ ಹೇಳಿದ ಹಾಂಗೆ ಸರಿ ಮಾಡಿರೆ ಶುರುವಾಣ ಪದ್ಯ ಸರಿ ಬಕ್ಕು. ಎರಡ್ನೆ ಪದ್ಯಲ್ಲಿ (ಮನೆಯ ಹಿಂದೆ ;ಆದರೆ ಒಳವೆ ಅಡಿಗೆ ಮಾಡಿದ . ಹೆರ ಅಡಿಗೆ ಕೊಟ್ಟಗೆಲಿ ಅಲ್ಲ ಹೇಳಿ) ಹೀಂಗೇ ಬರೆಯೆಕ್ಕಾದ್ದಿಲ್ಲೆನ್ನೆ. ವ್ಯಾಕರಣಕ್ಕೆ ಬುದ್ದಿಮುಟ್ಟು ಆವುತ್ತು ಹೇಳಿ ಕಂಡಪ್ಪಗ ಬದಲ್ಸಿ ಬರೆರಿ.
          ಸಣ್ಣಾಗಿಪ್ಪಗ ಶಾಲೆಲಿ ಎನ್ನ ಕನ್ನಡ ಪಂಡಿತರು ವ್ಯಾಕರಣ ತಪ್ಪು ಮಾಡಿರೆ ಕುಟ್ಟಿ ಕೊಡುಗು. ಅದೂ ಬೇನೆ ನಾಕು ದಿನ ಮರವವಲೆಡಿಯದ್ದ ಹಾಂಗೆ.
          (ಎನ್ನ ಅಪ್ಪನೇ ಎನಗೆ ಕನ್ನಡ ಪಂಡಿತರಾಗಿತ್ತಿದ್ದು, ಆತೋ)

        5. ಅದಿತಿ ಅಕ್ಕ ಕಡೆ೦ಗೆ ಹೇಳಿದ ರೀತಿಲಿ ( ‘ಕೈಲಿ ಆನು ಕ೦ಡ ನುಸಿ ರಕ್ತ ಹೀರಿತ್ತು’ ಹೇಳುವ ಅರ್ಥಲ್ಲಿ ಆದರೆ ಕ೦ಡ + ಅನುರಾಗ = ಕ೦ಡನುರಾಗ ಹೇಳಿಯೇ ಮಡಿಕ್ಕೊ೦ಬಲಕ್ಕು.)ಆನು ಬರದ್ದರ ಬದಲುಸೆಕ್ಕು ಹೇಳಿ ಇಲ್ಲೆ ಹೇಳುದು ಸ್ಪಷ್ಟ ಆತು . ಎಲ್ಲೋರಿಂಗೂ ಧನ್ಯವಾದ

      2. ಅದಿತಿಯಕ್ಕ ಹೇಳಿದ ”ಕ೦ಡೆಯನು” = ೫ ಮಾತ್ರೆ ಅವುತ್ತಲ್ಲದೊ?
        ಹೆಚ್ಹಿನ೦ಶ ‘ಕೈ’ ಯ ಬಿಟ್ಟು ”ಕ೦ಡದಾನನು” ಮಾಡಿದರೆ ಅದು ಸರಿಯಕ್ಕೊಳಿ
        ”ಲಾಗಿ ಬಪ್ಪಗ ಕ೦ಡದಾನನು” ಸರಿಯೋ?

        1. ಹೀ೦ಗೆ ಮಾಡಿರೆ ಹೇ೦ಗೆ?
          …..
          ಲಾಗಿ ಬಪ್ಪಗ ಕೈಲಿ ಕೂತನು-
          ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು.
          ಕೂತ + ಅನುರಾಗದಾಲಾಪನೆಯ = ಕೂತನುರಾಗದಾಲಾಪನೆಯ

        2. @ತೆಕ್ಕುಂಜ ಕುಮಾರ ಮಾವ° ,
          ಇಲ್ಲಿ ಬೇರೆ , ಬೇರೆ ಅಭಿಪ್ರಾಯ ಇಪ್ಪ ಕಾರಣ ಸರಿಯಾದ ನಿರ್ಣಯ ತೆಕ್ಕೊ೦ಡು ತಿದ್ದುಲೆ ಎನಗೆ ಎಡಿಗಾಯಿದಿಲ್ಲೆ. ಅದಿತಿಯಕ್ಕ ಹೇಳಿದ ”ಕೈಲಿ ಕೂತನು” ಹೇಳಿದ್ದು ಸರಿ ಕ೦ಡರೂ, ಕನ್ನಡ ಪದದ ಹಾ೦ಗೆ ಅನ್ನಿಸುತ್ತು. ಛ೦ದಸ್ಸು , ವ್ಯಾಕರಣ +ನಮ್ಮ ಭಾಷೆಗೆದ ಸರಿಯಪ್ಪ ಹಾ೦ಗೆ ಯಾವದು ಸೂಕ್ತ ಹೇಳಿದರೆ ಒೞೆದಿತ್ತು.

        3. ‘ಕೈಲಿ ಕೂದನು’ ಹೇಳಿ ಬರದರೆ ಆವುತ್ತಾ ? ಎನ್ನ ಅಂದಾಜಿನ ಪ್ರಕಾರ ‘ ಕೂತನು’ ಶಬ್ದ ಬರೇ ಕನ್ನಡ ಅಲ್ಲ, ಪಂಜಸೀಮೆಯ ಹವ್ಯಕಭಾಷೆಲಿ ಹಾಂಗೆ ಹೇಳ್ತವೋ ಕಾಣ್ತು. ‘ಕೈಲಿಕೂದನು..’ ಸರಿ ಆವುತ್ತರೆ ‘ಕೈಲಿ ಕಂಡನು…’ ಕೂಡ ಸರಿಅಕ್ಕು ಅಲ್ಲದಾ[ ರಘುರಾಮ ಹೇಳಿದ ಹಾಂಗೆ] – ‘ಕೈಲಿ ಕಂಡ+ಅನುರಾಗದ…

        4. ‘ಕೂತ’ ಹೇಳಿ ಬ೦ದ ಕಾರಣ ಕನ್ನಡ ಪದದ ಹಾ೦ಗೆ ಅನಿಸಿದ್ದಾ?
          ಪ೦ಜಸೀಮೆಲಿ ‘ಕೂತ’ ‘ಕೂತಿದ’ ಹೇಳಿಯೇ ಉಪಯೋಗಿಸುದು. ಬೇರೆ ಸೀಮೆಲಿ ‘ಕೂದ’ ‘ಕೂಯಿದ’ ಹೇಳುವ ಪ್ರಯೋಗ ಇಪ್ಪದು.

        5. ಅದಿತಿ ಅಕ್ಕ ಹೇಳಿದ್ದರ ಆನು ಒಪ್ಪುತ್ತೆ.
          ಭಾಗ್ಯಕ್ಕ,
          ನಾಮ್ಮ ಭಾಷೆ, ಸಾಹಿತ್ಯ, ಶಬ್ಧಂಗಳ ಬಗ್ಗೆ ನಿಂಗಳ ಕಾಳಜಿಗೆ ಎನ್ನ ವಂದನೆ. ಈ ನಮುನೆ ಚರ್ಚೆಂದಲಾಗಿ ನವಗೆ ಅತ್ತಿತ್ತ ಹೊಸ ಶಬ್ಧಂಗಳ ಪರಿಚಯವೂ ಆವುತ್ತಲ್ಲದ. ಆದಷ್ಟು ಪರಿಪೂರ್ಣತೆಗೆ ಹತ್ತರೆ ಬಪ್ಪ ಹಾಂಗೆ ಪದ್ಯ ಬರವ ನಿಂಗಳ ಎಲ್ಲೋರ ಪ್ರಯತ್ನ ಮುಂದುವರಿಯಲಿ. ಭಾಷೆ ಬೆಳೆಯಲಿ, ಬೆಳೆಶುವ.

        6. ಭಾಗ್ಯಕ್ಕ,
          ಪದ್ಯಲ್ಲಿ ಯಾವ ಅರ್ಥ ಬರೆಕ್ಕು ಹೇಳಿ ನಿ೦ಗ ಬಯಸುತ್ತೀರಿ ಹೇಳುದರ ಮೇಲೆ ಪದಪ್ರಯೋಗ ನಿರ್ಣಯ ಮಾಡುಲಕ್ಕು ಕಾಣ್ತು.
          ‘ಕೈಲಿ ಕೂತ ನುಸಿ ರಕ್ತ ಹೀರುದರ ಆನು ಕ೦ಡೆ’ ಹೇಳುವ ಅರ್ಥ ಬರೆಕ್ಕಾದ್ರೆ, ಕ೦ಡೆ + ಅನುರಾಗ = ಕ೦ಡೆಯನುರಾಗ ಹೇಳಿಯೇ ಸ೦ಧಿ ಮಾಡೆಕ್ಕಾವ್ತು. ಹಾ೦ಗೆ ಸ೦ಧಿ ಮಾಡಿದ್ರೆ ಮಾತ್ರೆ ತಪ್ಪುವ ಕಾರಣ, ‘ಕ೦ಡೆ’ ಬದಲು ಬೇರೆ ಪದ ಹಾಕೆಕ್ಕು.
          ‘ಕೈಲಿ ಆನು ಕ೦ಡ ನುಸಿ ರಕ್ತ ಹೀರಿತ್ತು’ ಹೇಳುವ ಅರ್ಥಲ್ಲಿ ಆದರೆ ಕ೦ಡ + ಅನುರಾಗ = ಕ೦ಡನುರಾಗ ಹೇಳಿಯೇ ಮಡಿಕ್ಕೊ೦ಬಲಕ್ಕು.

    3. ಸುರುವಾಣದ್ದರ್ಲಿ ಎನಗೆ ಸ೦ಶಯ ಬೈ೦ದಿಲ್ಲೆ,ಆನು ಅರ್ಥ ಮಾಡಿಗೊ೦ಡದು –
      ಸಾಗುವಳಿ ಮಾಡುವ ಬಯಲ ಹುಣಿ
      ಲಾಗಿ ಬಪ್ಪಗ ಕೈಲಿ ಕ೦ಡ+ ಅನು-
      ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು
      ಎರಡನೆಯದ್ದು ರಜಾ ಬದಲ್ಸುಲಕ್ಕು ಸ್ಪಷ್ಟತೆಯ ದೃಷ್ಟಿ೦ದ.

    4. ಸುಕ್ರುಂಡಗೆ ೩ ದಿನದ ವಾಯಿದೆ ಆಗಿ ಅದು ಹಳತ್ತು ಆತು . ”ಈಗ ಮೈಸೂರು ಪಾಕಲ್ಲಿ ಮೈಸೂರು ಎಲ್ಲಿದ್ದು ಹೇಳಿ ಕೇಳ್ತವು ” ಹೇಳಿದ ಸತ್ಯಣ್ಣನ ಪ್ರಸ೦ಗಾವಧಾನತೆಯ ಜೋಕ್ ನೆನಪ್ಪಾಗಿ ಹೊಸ ಕಲ್ಪನೆ .ಹಾಂಗಾಗಿ ಕೆಳಾಣ ೩ ಪಾದ ಬದಲುಸಿದ್ದೆ . ಅರ್ಥ ಆಗದ್ದರೆ ,ಸತ್ಯಣ್ಣ ಬಪ್ಪಗ ಕೇಳಿಯೊ೦ಡರಾತು .
      ಭೋಗ ,ಭಾಮಿನಿ ,ಕುಸುಮ ಶರಪದ
      ಸೋಗು ಹಾಕಿದ ವರ್ಣಲಿಪ್ಪಗ
      ರಾಗದಾಲಪನೆಯ ನುಸಿ ನೆತ್ತರಿನ ಹೀರಿತ್ತು
      ಹೋಗಿ ಮಾಡುಗು ಶಾಕದಡಿಗೆಯ
      ದಾಗಿ ಪಾಕವ ಕಂಚಿನುರುಳಿಲಿ
      ನೆಗ್ಗಿ ಹೇಳುಗು ಕಳಲಿ ಮೋಹನ ಲಾಡು ಕಟ್ಯೊಂಡು
      ಶಾಖದ+ಅಡಿಗೆಯ+ ಅದಾಗಿ =ಶಾಕದಡಿಗೆಯದಾಗಿ

  12. ಹೋಗಿ ಕುರ್ಶಿಲಿ ಹತ್ತಿ ಕೂದವು
    ತೇಗಿ ಬಿಟ್ಟವು ನಾಡ ಬೊಕ್ಕಸ
    ಭೋಗ ದಾಹಲಿ ಜನರ ಕನಸಿಗೆ ಪೆಟ್ಟು ಬಿದ್ದತ್ತು
    ಹೂಗು ಮೇಲಣ ಜೇನು ನೆಳವಿನ
    ಸೋಗು ಹಾಕೆಲ್ಲೋರ ವಂಚಿಸಿ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರುತ್ತು

    1. ಪ್ರಥಮಾರ್ಧ ಲಾಯ್ಕ ಆಯಿದು.ದ್ವಿತೀಯಾರ್ಧಲ್ಲಿ ಇನ್ನೂ ಸ್ಪಷ್ಟತೆ ಬಯಿ೦ದಿಲ್ಲೆ ಹೇಳಿ ಕಾಣುತ್ತು ಅದಿತಿಯಕ್ಕ.ಒಳ್ಳೆ ಕಲ್ಪನೆ.

      1. ಮುಳಿಯ ಭಾವ ಸೂಚಿಸಿದ ತಿದ್ದುಪಡಿಲಿ ಪದ್ಯ
        ಹೋಗಿ ಕುರ್ಶಿಲಿ ಹತ್ತಿ ನುಂಗುತ
        ತೇಗಿ ಬಿಟ್ಟವು ನಾಡ ಬೊಕ್ಕಸ
        ಭೋಗ ದಾಹಲಿ ಜನರ ಕನಸಿಗೆ ಪೆಟ್ಟು ಬಿದ್ದತ್ತು
        ಲಾಗ ಹೊಡದೇ ಜೆನರ ವಂಚಿಸಿ
        ಸೋಗು ಹಾಕುತ ಹಾರಿ ಸುಳಿವಾ
        ರಾಗದಾಲಾಪನೆಯ ನುಸಿ ನೆತ್ತರಿನ ಹೀರುತ್ತು
        ಧನ್ಯವಾದ ಭಾವ.

  13. ಬೇಗ ಬಂದಿಕಿ ಕೂದರೊಳದಿಕೆ
    ಬಾಗಿಲಾಕುವೆ, ನುಗ್ಗಿ ಬತ್ತವು
    ರಾಗದಾಲಾಪನೆಯ ನುಸಿ ನೆತ್ತರಿನ ಹೀರುತ್ತು ।
    ರೋಗ ಹರಡುವ ಮಧ್ಯವರ್ತಿಗೊ
    ವೇಗದಿಂದಲೆ ಡೆಂಗ್ಯು ಹಬ್ಬುಗು
    ಜಾಗರೂಕತೆ ಮಾಡದಿದ್ದರೆ ಬೇನೆ ತಿನ್ನೆಕ್ಕು ॥
    ಸೋಗೆ ತಪ್ಪಲೆ ತೋಟಕಿಳುದರೆ
    ಮೇಗೆ ಹಾರುವ ಹಿಂಡುಹಿಂಡಿನ
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು ।
    ಬೇಗೆ ಹೆಚ್ಚಿತು, ದಡಿಕೆ ಬಿದ್ದತು,
    ಲಾಗ ಹಾಕಿರು ತೊರಿಕೆ ನಿಲ್ಲದು
    ಹೋಗಿ ಹಾಕೆಕು ಕಾಯಿಸೊಪ್ಪಿನ ಹೊಗೆಯ ಅಗ್ಗಿಷ್ಟೆ ।।

    1. ತೋಟಲ್ಲಿ ಕೇಳುವ ಗುಯಿ೦ ಹೇಳ್ತ ರಾಗದ ಆಲಾಪನೆ ರೈಸಿತ್ತು. ಎರಡು ಪೂರಣ೦ಗಳೂ ಲಾಯ್ಕ ಆಯಿದು ಅತ್ತೆ.

  14. ರೋಗದಡಕೆಯ ಕಂಡು ತೋಟಲಿ
    ಬಗ್ಗಿ ಕುರ್ವೆಗೆ ಹೆರ್ಕಿ ಹಾಕೊಗ
    ಸಾಗಿ ಸಲುಗೆಲಿ ಬಂದು ಕೂದತೊ? ವೀಣೆ ಸೊರ ಮೀ೦ಟಿ
    ಸಾಗುವಳಿ ಮಾಡುವ ಬಯಲ ಹುಣಿ
    ಲಾಗಿ ಬಪ್ಪಗ ಕೈಲಿ ಕ೦ಡನು
    ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು
    ಕ೦ಡೆ +ಅನು = ಕ೦ಡನು

    1. ಹ.ಹಾ .. ವೀಣೆ ಸೊರ ಮೀ೦ಟಿದ ನುಸಿಗೆ ಅಷ್ಟೊ೦ದು ಸಲಿಗೆಯೋ? ಲಾಯ್ಕಾಯ್ದು ಭಾಗ್ಯಕ್ಕ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×