- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
‘’ಒಂದು ಕಡುದರೆ ಮತ್ತೆರಡು ನೆಡಿ’’—(ಮುಜುಂಗಾವಿಲ್ಲಿ ವನಜೀವನ ಯಜ್ಞ)
ನಮ್ಮ ಉಸಿರಿಪ್ಪದೇ ಹಸಿರಿಂದಾಗಿ. ಕಾಡು ಇಲ್ಲದ್ದಲ್ಲಿ ನಾಡೂ ಇಲ್ಲೆ. ಮುಜುಂಗಾವು ವಿದ್ಯಾಪೀಠ ಜನ್ಮ ತಾಳಿದಲ್ಲಿಂದ ಶ್ರೀಗುರುಗಳ ಆದೇಶಾನುಸಾರ ವನಜೀವನ ಯಜ್ಞವೂ ಗರುಗಟ್ಳೆ(ನಿಗದಿತ)ಯಾಗಿ ನೆಡದು ಬತ್ತಾಇದ್ದು.ಪ್ರತಿ ವರ್ಷ ಜೂನ್ ತಿಂಗಳಿಲ್ಲಿ ಅಪ್ಪ ಈ ಕಾರ್ಯಕ್ರಮಕ್ಕೆ, ಮುಖ್ಯ ಅಭ್ಯಾಗತರಾಗಿ ಕಾಡು ಸಂರಕ್ಷಣಾಧಿಕಾರಿಗಳ ದೆನಿಗೇಳುವ ಕ್ರಮ. ಈ ಸಂದರ್ಭಲ್ಲಿ ಶಾಲಾ ಮಕ್ಕೊಗೂ ಸಿಬ್ಬಂದಿ ವರ್ಗಕ್ಕೂ ಗಿಡಂಗಳ ಕೊಡುತ್ತಾ ಇದ್ದು. ಈ ಗೆಡುಗೊ ಒಂದಷ್ಟು ಪಂಚಾಯತು ವತಿಂದ ಬತ್ತಾ ಇದ್ದತ್ತು. ಆದರೆ ಇವಾರಿ ಕರ್ನಾಟಕ ಕಾಡು ಸಂರಕ್ಷಣಾ ಇಲಾಖೆ, ಪಂಜಿಕಲ್ಲಿಂದ ಗೆಡುಗೊ ಬಂತು.ಇಮಾಮಿ ಕಂಪೆನಿಯ ಗ್ರಾಮಾಭಿವೃದ್ಧಿ ಯೋಜನೆ ವತಿಂದ ಇದು ವಿತರಣೆ ಆತು.ತೆಂಗಿನ ಸೆಸಿ ನಾಲ್ಕು, ಎಡನಾಡು ವಲಯದ ಗುರಿಕ್ಕಾರರಾದ ಕಾವೇರಿಕಾನದ ಶ್ರೀಯುತ ಶಂಕರಭಟ್ಟರ ಕೊಡುಗೆಯಾದರೆ; ಬೇರೆ ಕೆಲವು ಗಿಡಂಗಳ ತಂತ್ರಿಗಳಾದ ಮುಜುಂಗಾವಿನ ಶ್ರೀಯುತ ಎ.ಪಿ. ಜನಾರ್ಧನ ಕೊಟ್ಟವು.ಒಟ್ಟಾರೆಯಾಗಿ 150ಕ್ಕೂ ಮೇಲ್ಪಟ್ಟು ಗೆಡುಗೊ ಬಂದಿತ್ತಾಗಿ ನೆಡ್ಳೆ ಆಸಕ್ತಿ ಇಪ್ಪ ಎಲ್ಲ ಮಕ್ಕೊಗೂ ವಿತರಣೆ ಮಾಡಿ ಆತು.ಈ ವರ್ಷ ಈ ಕಾರ್ಯಕ್ರಮ ಮೊನ್ನೆ 28/6/2014 ರಂದು ಕಳಾತು.ಇದಕ್ಕೆ ಅಭ್ಯಾಗತರಾಗಿ,ವಿಶ್ರಾಂತ ಅಧ್ಯಾಪಕ ಶ್ರೀಯುತ ಬಾಲಕೃಷ್ಣಶರ್ಮ,ಸೇಡಿಗುಳಿಯವು ಬಂದು ಮಕ್ಕೊಗೆ; ’ವನಜೀವನ ಯಜ್ಞ’ ಹೇಳಿರೆಂತರ?ವನಸ್ಪತಿಂದಪ್ಪ ಉಪಕಾರ, ಪರಿಣಾಮವಾಗಿ ಮಳೆ-ಬೆಳಗೆ ಅಪ್ಪ ಪ್ರಯೋಜನ,ಮರಗಳಿಂದ ವಾತಾವರಣಕ್ಕಪ್ಪ,ಸತ್ಪರಿಣಾಮ, ಹೀಂಗಿದ್ದರವಿವರಣೆಕೊಟ್ಟು ಮಾತಾಡಿದೊವು. ವೇದಿಕೆಲಿದ್ದ ,ಜ್ಯೋತಿಷಿಗಳಾದ ಚಂದ್ರಶೇಖರ ಭಟ್ ಮಡ್ವ, ಶ್ರೀಯುತಶ್ಯಾಮರಾಜದೊಡ್ಡಮಾಣಿ, ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ಯಾಂಭಟ್ ದರ್ಭೆ ಮಾರ್ಗ ಇವೆಲ್ಲ ಈ ವಿಷಯಲ್ಲಿ ಮಾತಾಡಿದೊವು.
ವಿದ್ಯಾರ್ಥಿ ಕೌಶಿಕ್ ಪ್ರಾರ್ಥನೆ, ಸ್ಮಿತಾ ಮಾತಾಶ್ರೀ ಸ್ವಾಗತ,ಶ್ರೀಮತಿ ಗಾಯತ್ರಿ ಮಾತಾಶ್ರೀ ನಿರೂಪಣೆ, ವಿದ್ಯಾಮಾತಾಶ್ರೀ ಧನ್ಯವಾದ ಮಾಡಿ, ವೇದಿಕೆಯ ಕಾರ್ಯಕ್ರಮ ಮುಗುಶಿಕ್ಕಿ , ಶಾಲೆಯ ಆವರಣಲ್ಲಿ ;ತೆಂಗಿನಗೆಡು,ನೆಲ್ಲಿ. ಸಂಪಗೆ, ತೇಕ ಮೊದಲಾದ ಸೆಸಿಗಳನ್ನೂ ನೆಡುವದರೊಟ್ಟಿಂಗೆ ’ವನಜೀವನ ಯಜ್ಞ’ ಅಂದಿಂಗೆ ಸಂಪನ್ನ ಆತು.
~~~***~~~
ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ
ಫಸ್ಟಾಯಿದು ದೊಡ್ಡತ್ತೆ. ಈಗ ಮುಜುಂಗಾವು ವಿದ್ಯಾಪೀಠ ಒಳ್ಳೆ ಇಂಪ್ರ್ವೂವಾಯಿದು. ಶ್ರೀಗುರು ಅನುಗ್ರಹಂದ ವನಜೀವನ ಯಜ್ಞವೂ ಶಾಲೆಯೂ ಅಭಿವೃದ್ಧಿಯಾಗಿ ಬೆಳಗಿ ಬರಲಿ
ವಿಜಯತ್ತಗೆ ಧನ್ಯವಾದಂಗೊ
ಅನುಸರಣೀಯ ಕಾರ್ಯಕ್ರಮ.
ಈ ಗೆಡುಗಳ ನೆಟ್ಟ ಪುಟ್ಟು ಮಕ್ಕಳೂ ಗೆಡುಗಳೊಟ್ಟಿಂಗೇ ಬೆಳದು ಶ್ರೀಗುರುಗಳ ಸಂಕಲ್ಪವ ಸಾಕಾರ ಮಾಡಲಿ ಹೇಳಿ ಹಾರೈಕೆ.
ಕಾರ್ಯಕ್ರಮದ ಸಮಗ್ರ ವರದಿ ಕೊಟ್ಟ ವಿಜಯತ್ತೆಗೆ ಧನ್ಯವಾದಂಗೊ.
ಹರೇ ರಾಮ