- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಬೇರಿನ ಮರದು, ಕೊಂಬೆ ಏರ್ಲಾಗ” (ಹವ್ಯಕ ನುಡಿಗಟ್ಟು—11)
ಮದಲಾಣ ತರವಾಡು ಮನಗಳಲ್ಲಿ ಕನ್ನೆ ತಿಂಗಳಿಲ್ಲಿ ’ಅಷ್ಟಗೆ’ ಹೇದು ಮಾಡುಗಿದ!. ಆ ಕಾರ್ಯಕ್ರಮ ಹೇಳಿರೆ; ತಿಥಿ ಹಾಂಗೇ. ತಿಥಿ ಮಾಡುವಗ ಸತ್ತವರ ಮೂರು ತಲೆಯ ಶೆನಿಶಿರೆ; ಅಷ್ಟಗೆಲಿ ಸತ್ತ ಪೈಕಿ(ಅಜ್ಜನ ಮನೆ,ಅತ್ತೆಮನೆ,ಹೆಂಡತ್ತಿಯ ಅಪ್ಪನಮನೆ ಹೀಂಗೆ) ಹೆರಿಯವರ ಎಲ್ಲರನ್ನೂ ಶೆನಿಶಲಿದ್ದು. ಹೀಂಗೆ ಅಷ್ಟಗೆ ಮಾಡಿದ್ದು ಕಂಡು ದೊಡ್ಡ ಪೇಟೆಲಿದ್ದ ಭಾವ ಒಂದಾರಿ ಅಜ್ಜನತ್ರೆ “ ಅಜ್ಜಾ..,ಹಿಂದಾಣ ಕಾಲಲ್ಲಿ ಸತ್ತವರೆಲ್ಲರನ್ನೂ ಈಗ ನೆಂಪು ಮಡಗೆಂಡು ತಿಲೋದಕ ಬಿಡೆಕೂಳಿ ಎಂತ?” ಕೇಳಿದ. “ಅದೋ…, ಒಂದು ಮರಂದ ಫಲವಸ್ತು ಕೊಯಿವಲೆ ಮರ ಹತ್ತೆಕ್ಕಾರೆ ಅದರ ಬೇರು ಗಟ್ಟಿ ಇರೆಕಿದ!. ಹಾಂಗಿರೆಕಾರೆ, ಬುಡ ಗಟ್ಟಿ ಇದ್ದಲ್ಲಿ ಸೆಸಿ ನೆಡೆಕು,ಕಂತಮುಟ್ಟೆ ಜಾಗೆಲಿ ಗೆಡು ನೆಟ್ಟು, ಅದು ಬೆಳದು ಮರ ಆಗಿ ಫಲ ಕೊಯಿವಲೆ ಹತ್ತೀರೆ, ಮರ ಮೊಗಚ್ಚಿ ಬೀಳುಗು. ಹಾಂಗೇ ಹಿಂದಾಣ ಹೆರಿಯೋರ ನೆಂಪು ಮಡಗೆಂಡು ನಮ್ಮ ಸಾಧನೆಗಳ ಮಾಡೆಕ್ಕು. ಆ ನೆಂಪಿನ ಗಟ್ಟಿ ಮಾಡ್ಳೆ ಬೇಕಾಗಿಯೇ ಸುರುವಾಣ ಮಾಣಿಗೆ ಮನೆಅಜ್ಜನ ಹೆಸರು, ಎರಡ್ನೇವಂಗೆ ಅಜ್ಜನಮನೆಅಜ್ಜಂದು, ಮೂರನೇವಂಗೆ ಮುದಿಅಜ್ಜನಹೆಸರು. ಹೀಂಗೆ ಕೂಸುಗೊಕ್ಕೂಇದೇ ಕ್ರಮಲ್ಲಿ ಅಜ್ಜಿಯಕ್ಕಳ ಹೆಸರು ಮಡುಗ್ಗು. ಆದರೆ, ಈಗ ಹಾಂಗಿದ್ದ ಕ್ರಮ ಎಲ್ಲಿದ್ದು!? ಅಷ್ಟು ಮಕ್ಕೊ ಎಲ್ಲಿದ್ದವು!?” ಹೇಳಿದ ಅಜ್ಜ ಮತ್ತೆ ಮುಂದುವರ್ಸಿ
“ಏವದೇ ಶುಭ ಕಾರ್ಯಮಾಡುವ ಮದಾಲುದೆ, ’ನಾಂದಿ’ ಮಾಡೆಕ್ಕು ಹೇಳುಗು ಭಟ್ಟಮಾವ. ಈ ’ನಾಂದಿ’ ಕಾರ್ಯಲ್ಲಿಯೂ; ತೀರಿಹೋದ ಹೆರಿಯೋರ ನೆಂಪು ಮಾಡ್ಳಿದ್ದು. ಮನಸಾ ಆಶೀರ್ವಾದ ಬೇಡಿಗೊಂಬಲಿದ್ದು. ಹೆರಿಯೋರು ಹೇಳೀರೆ ನಮ್ಮ ಬದುಕಿನ ಬೇರು. ಈ ಬೇರು ಗಟ್ಟಿ ಇದ್ದರೆ ನವಗೊಂದು ಅಸ್ಥಿತ್ವ! ಈ ಬೇರಿನ ಮರೆಯದ್ದೆ ನೆಂಪುಮಡಗೆಂಡ್ರೇ ನವಗೆ ಉತ್ತರೋತ್ತರ ಅಭಿವೃದ್ಧಿ.” ಹೇಳಿದ ಅಜ್ಜನ ಮಾತಿಲ್ಲಿ ಅದೆಷ್ಟು ಮರ್ಮ!!.
ಹಳೆ ನುಡಿಕಟ್ಟು ಹೊಸ ತಲೆಮಾರಿನವಕ್ಕೆ ಗೊಂತಿಲ್ಲೆ. ತಿಳಿಸಿಕೊಟ್ಟದಕ್ಕೆ ತುಂಬಾ ಧನ್ಯವಾದಂಗೊ. ಇದು ಹೀಂಗೇ ಮುಂದುವರಿಯಲಿ..
ಒಳ್ಳೆದಿದ್ದು ವಿಜಯತ್ತೆ , ಹೀಂಗಿಪ್ಪದು ಇನ್ನು,ಇನ್ನು ಬರೆತ್ತಾ ಇರಿ
ಧನ್ಯವಾದ ನವೀನಂಗೆ
ನುಡಿಕಟ್ಟು ಒಳ್ಳೆ ಅರ್ಥಪೂರ್ಣವಾಗಿದ್ದು ದೊಡ್ಡಮ್ಮ. ಹಳೆ ನುಡಿಕಟ್ಟು ಹೊಸ ತಲೆಮಾರಿನವಕ್ಕೆ ಗೊಂತುಮಾದ್ಥ ನಿಂಗಳ ಕಾರ್ಯ ಒಳ್ಳೇದು.
ಹರೇರಾಮ , ಅಪ್ಪು ನರಸಿಂಹಣ್ಣ ಒಳ್ಳೆ ಅರ್ಥೈಕೆ ನಿಂಗಳದ್ದು. ಧನ್ಯವಾದಂಗೊ
ಈ ಸಂದರ್ಭಲ್ಲಿ ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಒಂದು ಪದ್ಯ ನೆಂಪಾವುತ್ತು ವಿಜಯಕ್ಕ.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |
ಹೊಸಯುಕ್ತಿ ಹಳೆತತ್ವ ದೊಡ ಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನಜೀವನಕೆ-ಮಂಕುತಿಮ್ಮ ||