- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಏವದಕ್ಕೂ ಕಾಲ ಕೂಡಿ ಬರೆಕು” (ಹವ್ಯಕ ನುಡಿಗಟ್ಟು—12)
ಕೆಲಾವು ವರ್ಷ ಹಿಂದೆ, ನಮ್ಮೂರಿಲ್ಲಿ ಮದುವೆ ಅಪ್ಪಲೆ ತಯಾರಾದ ಕೂಸುಗೊ ಬೇಕಾದಷ್ಟು ಸಂಖ್ಯೆಲಿ ಮನೆಒಳ ಇಕ್ಕಿದ! “ಎಲ್ಲಿ ನೋಡೀರೂ ಮಗಳಿಂಗೆ ಮನೆ ಬತ್ತಿಲ್ಲೆ ಭಾವಯ್ಯ. ಕೆಲವು ಕುಳವಾರು ಬಂದು ನೋಡಿ,ಗಡದ್ದು ಕೇಸರಿಭಾತು, ಕಾಪಿ-ಪಲಾರ ಮಾಡಿಕ್ಕಿ, ಜಾತಕ ತೆಕ್ಕೊಂಡೋಗಿ,ಒಂದಹತ್ತು ದಿನ ಮಡಗಿಕ್ಕಿ, ಜಾತಕಲ್ಲಿ ಆವುತ್ತಿಲ್ಲೆ ಹೇಳುತ್ತವಿದ!” ಇದು ಕೂಸಿನ ಅಪ್ಪನ ಬೇಜಾರದ ಮಾತು. ಅಷ್ಟಪ್ಪಗ ಆ ಭಾವನುದೆ “ಕಾಲ ಕೂಡಿ ಬಪ್ಪಗ ಅಕ್ಕು ಭಾವ”. ಹೇಳುಗು . ಆದರೆ ಇಂದ್ರಾಣ ದಿನಂಗಳಲ್ಲಿ ಸರೀ ವೆತಿರಿಕ್ತ. ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ!!.ಈ ಸಮಸ್ಯೆ ಕಡ್ಪಕೆ ಅನುಭವಿಸುವದು ತರವಾಡು ಮನೆ,ತೋಟ, ಹಟ್ಟಿಲಿ ಬೇಕಾಷ್ಟು ದನಗೊ,ಇಷ್ಟೆಲ್ಲ ಇದ್ದವು!!! ಇದೆಲ್ಲದರಿಂದ ಮದಲಾಗಿ ಮಾಣಿಗೆ ಅಬ್ಬೆ-ಅಪ್ಪ ಇದ್ದವೋ? ಕೇಳುಗು. ಮಾಣಿಗೆ ಮದುವೆ ಅಪ್ಪಲಪ್ಪಗ ಈ ಅಬ್ಬೆ-ಅಪ್ಪ ದೇಶಾಟನೆ ಹೋಯೆಕ್ಕೊ! ಉಮ್ಮಪ್ಪ!!
ತೋಟದ ತಿಮ್ಮಣ್ಣ ಭಾವ ಐದಾರು ವರ್ಷಾತು ಮಾಣಿಗೆ ಕೂಸು ಹುಡುಕ್ಕುತ್ತದು! “ಎಲ್ಲಿ ನೋಡೀರೂ ನಮ್ಮ ಮನಗೆ ಬತ್ತ ಕೂಸುಗೊ ಇಲ್ಲೆ ಮಿನಿಯ!” ಎಲ್ಲದಕ್ಕೂ ಕಾಲ ಕೂಡಿ ಬರೆಕಿದ! ಈ ಕಾಲ ಕೂಡಿ ಬರೆಕು ಹೇಳ್ತ ಮಾತು ಬರೇ ಮದುವೆ ಕಾಲಕ್ಕೆ ಮಾಂತ್ರವೋ? ಅಪ್ಪಲೇಅಲ್ಲ. ಸಂತಾನಕ್ಕೆ, ಜಾಗೆ ಕ್ರಯಚ್ಚೀಟಿಂಗೆ, ಹೊಸ ಮನೆ ಕಟ್ಟ್ಳೆ, ಉದ್ಯೋಗ ಸಿಕ್ಕಲೆ, ಹೀಂಗೆ ಜೀವನದ ಎಲ್ಲ ಮಜಲಿಲ್ಲಿ,ಎಲ್ಲಾ ವಿಶೇಷ ಕಾರ್ಯಂಗೊಕ್ಕೂ ’ಕಾಲ ಕೂಡಿಬರೆಕು’ , ದೇವರಅನುಗ್ರಹವೂ ಗುರು ಹಿರಿಯರ ಆಶೀರ್ವಾದವೂ ಸೇರೆಕ್ಕು. ಎಂತ ಹೇಳ್ತಿ?
ಓಹೋ ಏವದಕ್ಕೂ ತಾಳ್ಮೆಲಿ ಕೂದೊಂಬಲೆ ಈ ಮಾತು! ಸರಿ ವಿಜಯತ್ತೆ
ಅಪ್ಪು ನರಸಿಂಹಣ್ಣ, ಪ್ರತಿ ಬರಹಕ್ಕೂ ನಿಂಗಳ ಒಪ್ಪ ಬರೆಷಿಯೊಂಬಲೂ ಕಾಲ ಕೂಡಿ ಬರೆಕಲ್ಲೋ? ಧನ್ಯವಾದ
ಅಪ್ಪಪ್ಪು.ಒಪ್ಪ ಕೊಡ್ಲೂ ಕಾಲ ಕೂಡಿ ಬರೆಕು.ಮತ್ತೆ ಅವರವರ ಹಣೆ ಬರಹ.