- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಹೋಕಾಲಕ್ಕೆ ಹಿಡುದ ಬುದ್ಧಿ”—(ಹವ್ಯಕ ನುಡಿಗಟ್ಟು-15)
ಆರಾರುದೆ, ಮಾಡ್ಳಾಗದ್ದ ನೀಚ ಕೆಲಸ ಮಾಡಿಯಪ್ಪಗ ವಿಪರೀತ ಕೋಪ ಬಂದರೆ; “ಛೇ..,ಹಾಂಗಿದ್ದ ಕೆಲಸ ಮಾಡೆಕ್ಕಾತೊ!? ಇದು ಹೋಕಾಲಕ್ಕಿಡುದ ಬುದ್ಧಿಯೇ ಸರಿ” ಹೇಳುಗು ಎನ್ನಪ್ಪ. ಮಳೆಕಾಲಾಣ ದಿನಂಗಳಲ್ಲಿ ಅಪ್ಪ ಪುರಾಣಂಗಳ ಓದುವ ಕ್ರಮ ಇದ್ದತ್ತು.ಎಂಗೊ ಮಕ್ಕೊ ಸುತ್ತೂ ಕೂಬ್ಬಿಯೊಂ. ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಪುರಾಣ ಕಥಗಳಲ್ಲಿ ಬಪ್ಪ ರಾವಣ,ಮಾರೀಚ,ಸೂರ್ಪಣಕಿ, ಪೂತನಿ, ದುರ್ಯೋದನ,ದುಶ್ಯಾಸನ,ಹೀಂಗೆ ಕೆಲವು ದುಷ್ಟರ ಕಥಾಪ್ರಸಂಗ ಬಪ್ಪಾಗ “ಅದೆಂತಕೆ ಹಾಂಗೆ ಮಾಡೆಕ್ಕಾತು?” ಎಂಗೊ ಮಕ್ಕೊ ಪ್ರಶ್ನೆ ಹಾಕೀರೆ “ಹೋಕಾಲಕ್ಕೆ ಹಿಡುದ ಬುದ್ಧಿ ತೋರಿತ್ತದಕ್ಕೆ. ಹೀಂಗಿದ್ದ ಕೆಲಸ ಮಾಡ್ಳಾಗಯಿದ.ಬೇಡಂಕೆಟ್ಟ ಕೆಲಸ ಮಾಡೀರೆ ಅವಕ್ಕೆಂತಾವುತ್ತು ಹೇದು ಕಥೆ ಇಡೀ ಕೇಳಿಯಪ್ಪಗ ಗೊಂತಾವುತ್ತು”. ಎನ್ನ ಅಪ್ಪ ಹೇಳುಗು.ಅಪ್ಪು, ಕಥೆಯ ಅರ್ಧಂಬರ್ಧ ಕೇಳಿರೆ;ಅದರ ಫಲಿತಾಂಶ ಗೊಂತಾಗಯಿದ. ಬಹುಶಃ ನೀಚಕೃತ್ಯ ಮಾಡ್ತವು ಪುರಾಣ ಕಥಗಳೆಲ್ಲ ಸಂಪೂರ್ಣ ಮನನ ಮಾಡ್ಳಿಲ್ಲೆಯೊ! ಎಂತೋಪ್ಪ!!.
ನಮ್ಮ ಪರಮ ಪರಂಪರೆಯ ಪೀಠಾಧಿಪತಿಗಳ ಹೆಸರಿನ ಕಲಂಕುವ ಹುನ್ನಾರ ಮೊನ್ನೆಆತಿದ!!. ಸ್ವರ್ಗಸ್ಥರಾದ ಎನ್ನ ಅಪ್ಪನ ಅಷ್ಟೊತ್ತಿಂಗೆ ನೆಂಪಾತೆನಗೆ. ಈ ಅಪಪ್ರಚಾರ ವಾತಾವರಣಕ್ಕೆ ಅಪ್ಪ ಅಶನ ನೀರು ಬಿಟ್ಟು ಕೂರ್ತಿತವು!.ನಾವೆಲ್ಲಾ ಹಾಂಗೇ ಮಾಡೆಕ್ಕಾದ್ದು ನಿಜ!.ಏವಕೆಲಸ ಮಾಡ್ಳೂ ಮನಸ್ಸುಓಡದ್ದೆ ಕೈಕ್ಕಾಲು ನೆಡುಗಿದ ಹಾಂಗಾಯಿದೆನಗೆ. ಬಹುಶಃ ಆ ಕಾರ್ಕೋಟಕರಿಂಗೆ ಬಿಟ್ಟು ಒಳುದ ಶ್ರೀಭಕ್ತರಿಂಗೆಲ್ಲರಿಂಗೂ ಹಾಂಗಾಗಿಕ್ಕು.
ಅಲ್ಲಾ…, ರಾಮಕಥಗೆ; ರಾಮನ ಪೂಜಗೆ, ಹೊಗಳಿ ಹಾಡ್ಳೆ ಹೇಳಿ ಬಂದ ಹೂಗು, ನೀಚ ಕಾರ್ಕೋಟಕ ಹಾವಾಗಿ ಹೆಡೆ ತೆಗದ್ದದು ಸಾಕನ್ನೆ!!. ”ಇದಾ…, ನಿನ್ನಬ್ಬೆ+ಅಪ್ಪನ ಕೊಂದರೆ,ನಿನ ಇಷ್ಟು ಕೋಟಿ ಕೊಡ್ತೆ” ಹೇದು ಆರಾರು ಆಶೆ ತೋರ್ಸಿರೆ; ಅಂಬಗಳೆ ಕೊಲ್ಲುಗು ಹಾಂಗಿದ್ದವು!!. ಒಟ್ಟಿಲ್ಲಿ ಹೋಕಾಲಕ್ಕೆ ಹಿಡುದ ಬುದ್ಧಿಯೇ ಹೊರತು ಬೇರೆಂತೂ ಅಲ್ಲ ಹೇಳೆಕ್ಕಷ್ಟೆ!!. ರಾಮಕಥಗೆ ಹಾಡ್ಳೆ ಸಿಕ್ಕಿದ್ದೊಂದು ಸುಯೋಗ ಹೇದು ಜಾನ್ಸೆಂಡು ಅದರ ಒಳಿಶಿಗೊಂಡು ಬಪ್ಪಲೆ ದಾರ್ಸೆಕ್ಕನ್ನೆ!!.
ಕೆಲವು ದುಷ್ಟಂಗೊ, ಮತಿ ಹೀನಂಗೊ, ಒಳ್ಳೆಯ ಕಾಲ ಬಂದರೆ; ಅದರ ಒಳಿಶಿ-ಬೆಳೆಶದ್ದೆ; ನೀಚಂಗೊ ಆವುತ್ತವು ಹೇಳ್ವದಕ್ಕೆ ಇದು ಒಳ್ಳೆ ಉದಾಹರಣೆ!. ಒಟ್ಟಾರೆ ಹಾಂಗಿಪ್ಪ ಕೆಲಸಕ್ಕೇ ಜನ್ಮ ತಾಳಿರೆ, ಎಂತ ಮಾಡ್ಳೆಡಿಗು!!.
—–೦—–
ಹರೇ raama
ಹರೇರಾಮ , ಚೆನ್ನೈ ಭಾವಂಗೆ
ಲಕ್ಷಾಂತರ ಭಕ್ತರ ಹೃದಯವೇದನೆ ವಿಜಯತ್ತೆಯ ಶುದ್ದಿಲಿ ಅಡಗಿದ್ದು. ಹರೇ ರಾಮ
ಹಿಂಗಿದ್ದ ನೀಚ ಹೋಕಾಲ ಬಪ್ಪಹಾಂಗೆ ಆರೂ ಮಾಡ್ಳಾಗಲ್ಲೋ