Oppanna.com

“ಅನನ್ಯ ಸಾಧಕಿ ಡಾ|| ಲಕ್ಷ್ಮೀ ಜಿ.ಪ್ರಸಾದ್”

ಬರದೋರು :   ವಿಜಯತ್ತೆ    on   19/01/2015    17 ಒಪ್ಪಂಗೊ

ಅಪೂರ್ವ,ಅನನ್ಯ ಸಾಧಕಿ.  ಡಾ|| ಲಕ್ಷ್ಮೀ ಜಿ.ಪ್ರಸಾದ್ಡಾ|ಲಕ್ಷ್ಮಿ ಜೆ. ಪ್ರಸಾದ್

ಮನುಷ್ಯ ತನ್ನ ಜೀವನಲ್ಲಿ ಒಂದಲ್ಲ ಒಂದು ಕನಸು ಕಾಣುತ್ತಾ ಇರುತ್ತ.ಕೆಲವು ಮಹೋನ್ನತ ಕನಸಾಗಿಕ್ಕು. ಅದು ಈಡೇರೆಕ್ಕಾದರೆ ನಿರಂತರ ಸಾಧನೆ,ಛಲ,ಪರಿಶ್ರಮ, ಬದ್ಧತೆ,  ಗುರಿ, ಅಗತ್ಯ. ನಮ್ಮ ಶ್ರೀ ಗುರುಗೊ ಹೇಳುವ ಹಾಂಗೆ  “ಗುರಿ ಮುಂದೆ, ಗುರು ಹಿಂದೆ” ಇರೆಕು. ಅರ್ಥಾತ್ ನಮ್ಮ ಹಿಂದೆ ಗುರುದೇವತಾನುಗ್ರಹ ಬೇಕೇ ಬೇಕು. ಆತ್ಮ ವಿಶ್ವಾಸಲ್ಲಿ ತನ್ನ ದಿವ್ಯ ಕನಸಿನ ಈಡೇರಿಸಿಗೊಂಡ  ಈ ತಂಗೆ; ನಮ್ಮ ಒಪ್ಪಣ್ಣ ಬಯಲಿನ  ಒಪ್ಪಕ್ಕನೇ. ಅದುವೆ ಡಾ|| ಲಕ್ಷ್ಮೀ ಜಿ. ಪ್ರಸಾದ್!. ಕಾಸರಗೋಡು ಜಿಲ್ಲೆಯ ಕೋಳ್ಯೂರಿನ ವಾರಣಾಸಿ, ವೇದಮೂರ್ತಿ ನಾರಾಯಣ ಭಟ್ಟ-ಸರಸ್ವತಿ ಅಮ್ಮ ದಂಪತಿಗಳ ಮಗಳು. ಲಕ್ಷ್ಮಿ ಮದುವೆಯಾಗಿ ಬಂದದು ಬೆಂಗಳೂರಿಲ್ಲಿ ಇಂಜಿನಿಯರಾಗಿಪ್ಪ ಪಂಜಿಗೆದ್ದೆಯ ಶ್ರೀಯುತ  ಗೋವಿಂದ ಪ್ರಸಾದನ ಸಹಧರ್ಮಿಣಿಯಾಗಿ.ಈಗ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದವು. ಪ್ರಸ್ತುತ ಕಾಲೇಜಿನವೇ ಕಳುಹಿಸಿದ ನಿಮಿತ್ತ ಬೆಂಗಳೂರಿಲ್ಲಿ  ಬಿ.ಎಡ್  ಪದವಿ ಮಾಡ್ತಾ ಇದ್ದವು.

ಲಕ್ಷ್ಮಿ ಓದಿದ ವಿದ್ಯಾಪದವಿಃ- ಲಕ್ಷ್ಮಿ, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಲ್ಲಿ  ಬಿ.ಎಸ್.ಸಿ ಮಾಡಿದ ಮತ್ತೆ ಇವರ ಸಾಧನೆ ಹರಿವ ಹೊಳೆ ಹಾಂಗೆ ಕಾಣುತ್ತು!. ಮಂಗಳೂರು ವಿಶ್ವವಿದ್ಯಾಲಯಲ್ಲಿ ಸಂಸ್ಕೃತ ಎಂ.ಎ  ಪ್ರಥಮ ರೇಂಕಿಲ್ಲಿ ಪಾಸಾದ ಹೆಗ್ಗಳಿಕೆ!. ಇಲ್ಲಿಗೇ ಮುಗುದ್ದಿಲ್ಲೆ!. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಲ್ಲಿ ಕನ್ನಡ ಎಂ.ಎ. ಅದರಿಂದ ಮತ್ತೆ ಹಿಂದಿ ಎಂ.ಎ. ಮುಂದೆ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಮುಖಾಂತರ  ರಾಷ್ಟ್ರಭಾಷಾ ಪ್ರವೀಣ ಮಾಡಿಕ್ಕಿ ಸೇಲಂ  ವಿನಾಯಕ ಯುನಿವರ್ಸಿಟಿಲಿ ಎಂ.ಫಿಲ್ ,ಹಾಂಗೇ ಎನ್.ಇ.ಟಿ[ಕನ್ನಡ]ಯು.ಜಿ.ಸಿ, ಇನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಲ್ಲಿ[ವಿಷಯಃತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ-ವಿಶ್ಲೇಷಣಾತ್ಮಕ ಅಧ್ಯಯನ]  ಪಿಎಚ್. ಡಿ, ಅಲ್ಲಿಗೂ ಸುಮ್ಮನೆ ಕೂರದ್ದೆ ಎರಡನೇ ಪಿಹೆಚ್.ಡಿ ಪದವಿ ದ್ರಾವಿಡ ವಿಶ್ವವಿದ್ಯಾಲಯಲ್ಲಿ ತುಳು ನಾಡಿನ ಅಪೂರ್ವಭೂತಗಳು ಹೇಳ್ತ ಸಂಶೋಧನ ಸಂಪ್ರಬಂಧ ಅಧ್ಯಯನಕ್ಕೆ ಇತ್ತೀಚೆ ಸಿಕ್ಕಿದ್ದು !.

ಇವರ ಸಾಧನೆ ಎಂತದೆಲ್ಲ! –ಇವು ಪುಸ್ತಕ ರೂಪಲ್ಲಿ  ಪ್ರಕಟಮಾಡಿದ  ಕೃತಿಗೊ ಹದಿನಾಲ್ಕು.೧.ಅರಿವಿನಂಗಳದ ಸುತ್ತ[ಶೈಕ್ಷಣಿಕ ಬರಹಗಳು] ೨.ಮನೆಯಂಗಳದಿ ಹೂ[ಕಥಾಸಂಕಲನ], ೩ದೈವಿಕ  ಕಂಬಳ ಕೋಣ[ತುಳು ಜಾನಪದ ಸಂಶೋಧನೆ],೩.ಸುಬ್ಬಿ ಇಂಗ್ಲಿಷ್ ಕಲ್ತದು[ಮಹಿಳೆಬರೆದಮೊದಲ ಹವಿಗನ್ನಡ ನಾಟಕ],೫.ತುಂಡು ಭೂತಗಳು-ಒಂದು ಅಧ್ಯಯನ[ಸಂಶೋಧನೆ],೬.ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು [ತೌಲನಿಕ ಅಧ್ಯಯನ], ೭.ತುಳುಪಾಡ್ದನಗಳಲ್ಲಿ ಸ್ತ್ರೀ[ಸಂಶೋಧನಾತ್ಮಕಅಧ್ಯಯನ], ೮.ಪಾಡ್ದನಸಂಪುಟ[ಸಂಪಾದನೆ], ೯.ತುಳುವಸಂಸ್ಕಾರಗಳುಮತ್ತುವೃತ್ತಿಗಳು[ಸಂಸ್ಕೄತಿಶೋಧನೆ], ೧೦.ತುಳುನಾಡಿನಅಪೂರ್ವಭೂತಗಳು[ಸಂಶೋಧನೆ], ೧೧.ಬೆಳಕಿನೆಡೆಗೆ[ಸಂಶೋಧನಾಲೇಖನಗಳು], ೧೨.ತುಳುಜನಪದ ಕವಿತೆಗಳು[ಸಂಪಾದನೆ]  ೧೩.ಚಂದಬಾರಿ ರಾಧೆ ಗೋಪಾಲ ಮತ್ತು ಇತರಅಪೂರ್ವ ಪಾಡ್ದನಗಳು[ಸಂಪಾದನೆ],೧೪.ಕಂಬಳ ಕೋರಿ ನೇಮ[ತುಳು ಜಾನಪದ ಸಂಶೋಧನೆ]. ನೂರಕ್ಕೂ ಹೆಚ್ಚು ಕಥೆ, ವೈಚಾರಿಕ ಲೇಖನಂಗೊ ಅಲ್ಲದ್ದೆ  ಜ್ಞಾನ ಪಯಸ್ವಿನಿ ಪತ್ರಿಕಗೆ “ತುಳು ಜಾನಪದ ಲೋಕ” ಹಾಂಗೂ ವಿಜಯಕಿರಣ ಪತ್ರಿಕಗೆ “ಸಾಮಾಜಿಕ ಕಳ ಕಳಿ”  ಹೇಳ್ತ ಅಂಕಣ ಬರದ್ದವು.ವಿಜಯಕರ್ನಾಟಕಲ್ಲಿ ’ತುಳು ಚಾವಡಿ’. ಕೆಲವು ಕಡೆ ಸಂಪನ್ಮೂಲ ವ್ಯಕ್ತಿಯಾಗಿ, ಇನ್ನು ಕೆಲವು ಪ್ರಬಂಧ ಮಂಡನಗೆ!.   ವಾಹ್  ಬರೋಬ್ಬರಿ  ಸಾಧನೆ, ಹಾಂಗೂ ಸಂಶೋಧನೆ  ಮಾಡಿದ್ದೆ  ಲಕ್ಷ್ಮಿ!!.

ಲಕ್ಷ್ಮಿಗೆ ಬಂದ ಪ್ರಶಸ್ತಿ,ಪುರಸ್ಕಾರಂಗೊಃ- ೧.ಬೆಂಗಳೂರಿನ ಬಸವನ ಗುಡಿ ಪೌಂಡೇಶನಿನ ’ಜಯಪ್ರಕಾಶ ನಾರಾಯಣ ಪ್ರಶಸ್ತಿ”, ೨.ಬೆಂಗಳೂರಿನ ಸಾಂಸ್ಕೃತಿಕ ಪ್ರತಿಷ್ಠಾನ ಜನತಾ ಸೈನಿಕದಳಂದ ’ಕರ್ನಾಟಕ ವಿಭೂಷಣ ಪ್ರಶಸ್ತಿ”, ೩.ಬೆಂಗಳೂರಿನ ಪದ್ಮ ಶ್ರೀ ಕಲಾಸಂಘಂದ ’ಕಲಾ ಜ್ಯೋತಿ ಪ್ರಶಸ್ತಿ’ , ೪.ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಷ್ಠಾನಂದ ’ಕಾವ್ಯಶ್ರೀ ಪುರಸ್ಕಾರ’  ಬದಿಯಡ್ಕಲ್ಲಿ ರಾಷ್ಟ್ರೀಯ ತುಳುಜಾನಪದ ಜಾತ್ರೆ  ’ತುಳುವರೆ ಆಯನೋ-2009’   ಹೀಂಗೆ ಹಲವು !. ತನ್ನ ಲೇಖನಂಗಳ ಪ್ರಕಟಿಸಿ ಪ್ರೋತ್ಸಾಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ| ಸುಬ್ಬಣ್ಣ ರೈಯವರ,  ಗೋವಿಂದ ಪೈ ಸಂಶೋಧನಾ ಕೇಂದ್ರದ ತುಳುವ ಪತ್ರಿಕೆಯ ಪ್ರಧಾನ ಸಂಪಾದಕರಾದ ಹೆರಂಜೆ ಕೃಷ್ಣಭಟ್ಟರ, ಲೋಚನದ ಪ್ರಧಾನ ಸಂಪಾದಕರಾದ  ಶ್ರೀಅಬ್ದುಲ್ ಬಶೀರ್ ಇವರ,ಹಾಂಗೇ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿಪ್ಪ ’ಸಾಧನೆ’ ಯ ಮುಖ್ಯಸಂಪಾದಕಿ ಡಾ| ಸುಮಿತ್ರಾ ಇವರೆಲ್ಲರನ್ನೂ ಡಾ||ಲಕ್ಷ್ಮೀಪ್ರಸಾದ್ ತುಂಬು ಮನಸ್ಸಿಂದ ನೆನೆತ್ತೊವು.

ಓಹ್..,ಈ ನಲುವತ್ತು ವರ್ಷದೊಳ ಅದೆಷ್ಟು ಸಾಧನೆ ಮಾಡಿದ್ದೆ  ತಂಗೆ!. ಅದೆಷ್ಟು ಸಾಹಿತ್ಯ ಕೃತಿಗಳ ಒಡತಿ ನೀನು!!.ಎಷ್ಟೊಂದು ಅಪೂರ್ವ ತುಳು ಸಂಶೋಧನೆ!!! ಡಬಲ್ ಡಾಕ್ಟರೇಟ್ ಪದವಿಗಳ ಒಡತಿ!!!!.ಹವಿಗನ್ನಡ ಭಾಷೆಲಿ ನಾಟಕ ಬರದ  ಪ್ರಥಮ ಹೆಮ್ಮಕ್ಕೊ ಈ ತಂಗೆ!!!!.  ಬಹುಶಃ ನಮ್ಮ ಹವ್ಯಕ ಹೆಮ್ಮಕ್ಕಳಲ್ಲಿ ಬೇರಾರೂ ಈ ಪ್ರಾಯಲ್ಲಿ ಇಷ್ಟೊಂದು ನಮುನೆ ಸಾಧನೆಗಳ ಮಾಡಿದ್ದು ಸಿಕ್ಕಿಕ್ಕ. ನೀನು ನಿಜಕ್ಕೂ ಧನ್ಯೆ. ಬಹುಶಃ ಹವ್ಯಕ ಸಮಾಜಂದ ಇವಕ್ಕೊಂದು ವಿಶೇಷವಾದ ಸನ್ಮಾನ ಮಾಡೆಕ್ಕಾದ ಅಗತ್ಯ ಇದ್ದು. ಈ ತಂಗೆ ಇನ್ನೂ ಎತ್ತರೆತ್ತರಕ್ಕೇರಿ ಇವರ ಸಮಗ್ರ ಆಶೋತ್ತರಂಗೊ ಈಡೇರಲಿ ಹೇಳಿ ನಾವೆಲ್ಲಾ ಶುಭ ಹಾರೈಕೆ ಹೇಳುವೊಂ. ನಮ್ಮ  ಸಮಾಜದ, ನಮ್ಮಬೈಲಿನ  ಈ ಒಪ್ಪಕ್ಕಂಗೆ ಎರಡನೇ ಪಿಹೆಚ್ ಡಿ ಸಿಕ್ಕಿದ್ದು ಎನ ಗೊಂತಾತು.ಅದರ ಸಾಧನೆಗಳ ನಮ್ಮ ಬೈಲಿಂಗೆ ಬರವೊಂ ಹೇಳಿ ಕಂಡತ್ತು.   ನಿಂಗೊಲ್ಲ ಓದಿ ಒಪ್ಪಕೊಟ್ಟು ಪ್ರೋತ್ಸಾಹಿಸುವ ಕೆಲಸ ಮಾಡಿ.

~~~***~~~

17 thoughts on ““ಅನನ್ಯ ಸಾಧಕಿ ಡಾ|| ಲಕ್ಷ್ಮೀ ಜಿ.ಪ್ರಸಾದ್”

  1. ಹೆಸರಿನೊಟ್ಟಿಂಗೆ ’ಡಾ’ ಹೇಳ್ತ ಒಂದಕ್ಷರವ ಸೇರ್ಸಿಯೊಂಬ ಉದ್ದೇಶಲ್ಲಿ ಮಾಂತ್ರ ’ಸಂಶೋಧನೆ’ ಮಾಡಿ ಒಂದಟ್ಟಿ ಪ್ರಬಂಧ ಬರದು ಗೈಡಿಂಗೆ ಒಪ್ಪುಸಿ; ಅದರ ಮೇಗಂದ ಏನಾರು ಕಾಣಿಕೆಯನ್ನು ಮಡುಗಿ ಪೀಎಚ್ಚಿಡಿ ತೆಕ್ಕೊಂಡ ಹಲವು ’ಸಂಶೋಧಕ’ರು ಇದ್ದವು. ಇವಕ್ಕೆ ಲೈಬ್ರರಿಲಿ ಕೂದೊಂಡು ಮದಲಾಣವು ಆರಾರು ಬರದ ಗ್ರಂಥಂಗಳ ಹುಡ್ಕಿ ಅಲ್ಲಿಂದ ರಜ; ಇಲ್ಲಿಂದ ರಜ ಹೆರ್ಕಿ ಸೇರ್ಸಿರೆ ಮುಗಾತು ಕೆಲಸ.
    ಆದರೆ ಲಕ್ಷ್ಮಿ ಅಕ್ಕ° ಹಾಂಗಲ್ಲ. ಪ್ರತಿಯೊಂದು ವಿಷಯವನ್ನೂ ಸ್ವತ: ಅಧ್ಯಯನ ಮಾಡಿ ಅದರ ಒಳ-ಹೆರ ಎಲ್ಲ ತಿಳ್ಕೊಂಡಿದವು.
    ಇವು ನಿಜಕ್ಕೂ ಅನನ್ಯ ಸಾಧಕಿಯೇ!
    ಗೌರವಪೂರ್ಣ ಅಭಿನಂದನೆಗೊ ಲಕ್ಷ್ಮಿಅಕ್ಕಂಗೆ.
    ಬಹು ಚೆಂದಕೆ ಇವರ ಸಾಧನೆಯ ಪರಿಚಯಿಸಿದ ವಿಜಯತ್ತೆಗೆ ಧನ್ಯವಾದಂಗೊ.

    1. ನಿಂಗಳೆಲ್ಲರ ಅಭಿಮಾನ ದೊಡ್ಡದು ,ಅಭಿಮಾನದ ಕಣ್ಣಿಂಗೆ ಸಣ್ಣ ವಿಚಾರವೂ ದೊಡ್ಡ ಸಾಧನೆ ತರ ಕಾಣುತ್ತು ಧನ್ಯವಾದಂಗ
      0 (from 0 votes)

      ನಿಂಗಳೆಲ್ಲರ ಅಭಿಮಾನ ವಿಶ್ವಾಸ ದೊಡ್ಡದು ಧನ್ಯವಾದಂಗ

  2. ವಿಜಯಕ್ಕ ಹರೇ ರಾಮ.ಸುಮಾರು ಸಮಯ೦ದ ಬಯಲಿ೦ಗೆ ಬಪ್ಪಲೇ ಆಯಿದಿಲ್ಲೆ. ಇ೦ದು ನೋಡುತ್ತೆ ಇಡೀ ಬಯಲು ಪೂರ್ತಿ ನಿ೦ಗಳದ್ದೇ ಲೇಖನ೦ಗಳ ಸುರಿಮಳೆ ! ನಿ೦ಗಳೇ ಬಯಲಿನ ಕ್ರಯ ಚೀಟು ತೆಕ್ಕೊ೦ಡಾ೦ಗೆ ಕ೦ಡತ್ತಿದ !! ಬಹಳ ಸ೦ತೋಷ ಆತು ನಿ೦ಗಳ ಎಲ್ಲ ಸುದ್ದಿಗಳ ಓದಿ. “ವಿದ್ವಾನೇವ ವಿಜಾನತಿ ವಿದ್ವಜ್ಜನ ಪರಿಶ್ರಮ೦ ” ಹೇಳುವ ಕಾಳಿದಾಸ ಮಹಾಕವಿಯ ಉಕ್ತಿ ನಿ೦ಗಳಿ೦ದ ಅರ್ಥಪಡದತ್ತು. ನಿ೦ಗಳೊಟ್ಟಿ೦ಗೆ ಲಕ್ಷ್ಮಿಯಕ್ಕ೦ಗೂ ಧನ್ಯವಾದ ಹಾ೦ಗೂ ಅಭಿನ೦ದನಗೊ.

    1. ನಿಂಗಳೆಲ್ಲರ ಅಭಿಮಾನ ದೊಡ್ಡದು ,ಧನ್ಯವಾದಂಗ ಉಡುಪುಮೂಲೆ ಅಪ್ಪಚ್ಚಿ

  3. ಬೈಲ ಗಿಳಿಬಾಗಿಲು ಅಕ್ಕನ ಬಗ್ಗೆ ಅಭಿಮಾನದ ಶುದ್ದಿಯ ಪ್ರಕಟಿಸಿದ್ದಕ್ಕೆ ವಿಜಯತ್ತಗೆ ಹರೇ ರಾಮ. ಲಕ್ಷ್ಮಿ ಅಕ್ಕಂಗೆ ಅಭಿನಂದನೆಗೊ. ಸಾಧನೆ, ಕೀರ್ತಿ ನಿಂಗೊಗೆ ಸದಾ ಇರಳಿ.

  4. ಸಣ್ಣ ತಿದ್ದು ಪಡಿ ೧.ಎನ್ನ ಎರಡನೇ ಡಾಕ್ಟರೇಟ್ ಸಂಶೋಧನಾ ಪ್ರಬಂಧ ಪಾದ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ 2 ಒಟ್ಟು 20 ಕೃತಿಗ ಪ್ರಕಟ ಆಯಿದು ವಿಜಯಕ್ಕ ಬರದ 14 ಮತ್ತೆ 15ಬಸ್ತರ್ ಜಾನಪದ ಸಾಹಿತ್ಯ ,16ಭೂತಗಳ ಅದ್ಭುತ ಜಗತ್ತು ,17ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ ,18ಬಂಗ್ಲೆ ಗುಡ್ಡೆ ಸಣ್ಣಕ್ಕ ಮೌಖಿಕ ಸಾಹಿತ್ಯ ,19ತುಳು ಜಾನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ,೨೦ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್ ಡಿ ಮಹಾ ಪ್ರಬಂಧ ),ಧನ್ಯವಾದಂಗ

  5. ವಿಜಯಕ್ಕನ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟುಲೇ ಸಾಧ್ಯ ಇಲ್ಲೆ,ಎನಗೆ ಪರಿಚಯ ಆದ ಎರಡು ವರ್ಷಗಳಿಂದ ನಿರಂತರ ಪ್ರೋತ್ಸಾಹ ಕೊಟ್ಟುಗೊಂಡೆ ಇದ್ದಿ ವಿಜಯಕ್ಕ ನಿಂಗೋಗೆ ಆನು ಆಭಾರಿ ಒಪ್ಪಣ್ಣ ಬೈಲಿನ ನೆಂಟರುಗ ಎನಗೆ ,ಎನ್ನ ಬರವಣಿಗೆಗೆ ತುಂಬಾ ಪ್ರೋತ್ಸಾಹ ಕೊಟ್ಟಿದವು ,ಆದರೂ ಎನಗೆ ಎನ್ನದೇ ಆದ ಕೆಲಸದ ಒತ್ತಡ ,(ರಜ್ಜ ಉದಾಸೀನದೆ!) ಕಾರಣಂದ ಗಿಳಿಬಾಗಿಲಿಂದ ಹೆಚ್ಚು ಬರವಲೆ ಎಡಿಗಾದಿಲ್ಲೆ ,ನಿಂಗಳ ಎಲ್ಲರ ಅಭಿಮಾನ ಪ್ರೀತಿ ವಿಶ್ವಾಸಕ್ಕೆ ಆನು ಋಣಿ ಆಯಿದೆ ಯಮ್.ಕೆ.ಅಣ್ಣ,ಶೈಲಜಾ ಕೇಕಣಾಜೆ K.Narasimha Bhat Yethadka ತೆಕ್ಕುಂಜ ಕುಮಾರ ಮಾವ° ರಘು ಮುಳಿಯ indiratte ಭಾಗ್ಯಲಕ್ಷ್ಮಿ ಧನ್ಯವಾದಂಗ

  6. ಹರಿವ ಹೊಳೆ ಹಾಂಗೆ ಕಾಣುತ್ತು!
    ಡಬಲ್ ಡಾಕ್ಟರೇಟ್-
    ಡಬಲ್ ಹ್ಯಾಟ್ರಿಕ್ಕೆ ದೂರ ಇರ
    ಹೇಳಿ ಕಾಣುತ್ತು.

  7. ಲಕ್ಷ್ಮಿ ಅಕ್ಕಂಗೆ ಅಭಿನಂದನೆಗೊ… ನಿಂಗಳ ಸಾಧನೆಯ ಹಾದಿ ಎಂಗೊಗೂ ಸ್ಫೂರ್ತಿ ಕೊಡ್ತು…..

  8. ವಾಹ್.., ನರಸಿಂಹಣ್ಣ , ಆನು ಇತ್ತಿತ್ತಲಾಗಿ ಗಮನಿಸಿದ್ದೆ. ನಿಂಗಳ ಒಳ ಸುಪ್ತವಾಗಿ ಕವಯಿತ್ರಿ ಶಾರದೆ ಕೂಯಿದು!. ನಿಂಗಳ ಕವಿತಾಶಕ್ತಿಯೂ ಇನ್ನೂ ಬೆಳಗಿ ಬರಲಿ ಹೇಳಿ ಎನ್ನದೂ ಈ ಸಂದರ್ಭಲ್ಲಿ ಶುಭ ಹಾರೈಕೆ. ಭಾಗ್ಯ ಲಕ್ಷ್ಮಿ, ರಘು ಮುಳಿಯ, ತೆಕ್ಕುಂಜೆಮಾವ,ಇಂದಿರತ್ತೆ, ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.

  9. ಅಭಿನಂದನೆ ಲಕ್ಷ್ಮೀ ಅಕ್ಕ.
    ಹಾರೈಕೆ
    ಲಕ್ಷ್ಮೀಯಕ್ಕನ ಸಿರಿ ಬರವಣಿಗೆ
    ತುಂಬಲಿ ಸರಸತಿಯ ಒಡಲ ಹೀಂಗೆ
    ಎತ್ತರ ಕ್ಕೇರಲಿ ಕೀರ್ತಿ ಪತಾಕೆ
    ಕೊಡಲಿ ಸ್ಪೂರ್ತಿಯ ಎಲ್ಲೋರಿಂಗೂ ಆಕೆ

  10. ಅಪ್ಪು, ಈ ಶುದ್ಧಿ ಯೆವಗಲೇ ಬರೆಕ್ಕಾತು. ವಿಜಯತ್ತೆಗೆ ಧನ್ಯವಾದಂಗೊ.
    ಲಕ್ಷ್ಮಿ ಅಕ್ಕ ಬೈಲಿಲಿ ಹವ್ಯಕ ನುಡಿಗಟ್ಟುಗಳ ತುಂಬ ಲಾಯಕಲ್ಲಿ ಬರದ್ದವು. ಲಕ್ಷ್ಮಿ ಅಕ್ಕನ ಸಾಧನೆಗಳ ಅವರ ಬರಹಂಗಳ, ಪ್ರಕಟಣೆಗಳ ಮುಖಾಂತರ ಮಾಂತ್ರವೆ ಅರ್ತದು. ಅವರ ಪರಿಚಯ ಓದಿ ತೃಪ್ತಿ ಆತು. ಅಕ್ಕಂಗೆ ಅಭಿನಂದನೆಗೊ. ಮತ್ತಷ್ಟು ಸಾಧನೆಯ ಕೆಲಸ ಆಗಲಿ ಹೇಳಿ ಹಾರೈಸುತ್ತೆ.

  11. ಓ ಮೊನ್ನೆ ಲಕ್ಷ್ಮಿ ಅಕ್ಕನ ತಮ್ಮ ಒ೦ದು ಜೆ೦ಬ್ರಲ್ಲಿ ಸಿಕ್ಕಿತ್ತಿದ್ದವು.ಅಕ್ಕನ ಸಾಧನೆಗಳ ವಿಷಯ ಸುಮಾರು ಮಾತುಕತೆಯಾತು. ಅಕ್ಕ ದೈವ,ಭೂತ೦ಗಳ ಅಧ್ಯಯನ ಮಾಡ್ತ ವಿಷಯ, ಅದಕ್ಕಾಗಿ ತೆಕ್ಕೊಳ್ತ ಶ್ರಮ ಎಲ್ಲವೂ ಕಣ್ಣಿ೦ಗೆ ಕಟ್ಟಿತ್ತು.
    ಅಭಿನ೦ದನೆಗೊ ಅಕ್ಕಾ. ನಿ೦ಗಳ ಪ್ರಯತ್ನ೦ಗೊ ಹೀ೦ಗೆಯೇ ಸಾಗಲಿ.ನಮ್ಮ ನಾಡಿನ ಚರಿತ್ರೆಗೆ ನಿ೦ಗಳ ಕೊಡುಗೆ ಸಲ್ಲಲಿ.
    ವಿಜಯತ್ತೇ..ಧನ್ಯವಾದ.

  12. ಲಕ್ಷ್ಮಿ ಅಕ್ಕಂಗೆ ಹೃತ್ಪೂರ್ವಕ ಅಭಿನಂದನೆಗೊ, ಹಾಂಗೆ ಈ ಸಂತೋಷದ ಸುದ್ದಿಯ ಬೈಲಿಂಗೆಲ್ಲ ಹಂಚಿ ಸಂಭ್ರಮಿಸಿದ ವಿಜಯತ್ತೆಗುದೆ ಹಾರ್ದಿಕ ವಂದನೆಗೊ.

  13. ಲಕ್ಷ್ಮಿ ಅಕ್ಕಂಗೆ ಅಭಿನಂದನೆಗೊ ! ನಿಂಗಳ ಸಾಧನೆಗೆ hats off .
    ವಿಜಯತ್ತೆ ಬರದ ಲೇಖನ ಹೃದಯಸ್ಪರ್ಶಿಯಗಿದ್ದು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×