- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಲೋಕಹಿತ ಚಿಂತಕಃ ಆಚಾರ್ಯ ಶ್ರೀರಾಘವೇಶ್ವರ
ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗೊ ಪೀಠಾರೋಹಣ ಮಾಡಿದ ಲಾಗಾಯ್ತಿಂದ ಅದೆಷ್ಟು ಸಮಾಜಮುಖೀ ಬೋಧನಾತತ್ವಂಗೊ ಸಾಧನಾಕಾರ್ಯಂಗಳ,ಯೋಜನಾರೂಪಕ್ಕೆ ತಂದು ಕೆಲಸಮಾಡಿದೊವೂಳಿ ಲೆಕ್ಕಹಾಕೀರೆ ಇಲ್ಲಿ ಬರದು ಮುಗಿಯದ್ದಷ್ಟು!.ನವಗೆ ವಹಿಸಿದ ಕೆಲಸಂಗಳಲ್ಲಿ ನಾವೆಷ್ಟು ಸ್ಪಂದಿಸಿದ್ದು!?, ತಿಳಿಹೇಳಿದ ಬೋಧನೆಗಳ ಪೈಕಿ ನಾವೆಷ್ಟು ಆಚರಣಗೆ ತಯಿಂದು!? ಕೇಳಿರೆ; ಪೆಚ್ಚು ಮೋರೆ ಮಾಡಿ, ತಲೆ ಅಡಿಯಂಗೆ ಹಾಕೆಕ್ಕಾವುತ್ತೊ!?.ಬೆಟ್ಟದಷ್ಟು ಹೇಳಿರೆ; ಕಿರುಬೆರಳಷ್ಟು ಉಪಯೋಗಕ್ಕೆ ಬಕ್ಕಷ್ಟೇಳಿ ಅವಕ್ಕೆ ಗೊಂತಿದ್ದು. ಅದಕ್ಕಾಗಿಯೇ ಅಬ್ಬಗೆ ಸಮಾನರಾದ ಶ್ರೀ ಗುರುಗೊ ತಾಳ್ಮೆಲಿ ಪುನರಪಿ ನವಗೆ ಅರದು ಮೆತ್ತುವದು. ಇಷ್ಟೆಲ್ಲ ಆರಿಂಗೆ ಬೇಕಾಗಿ!?.ನಮ್ಮಶ್ರೇಯೋಭಿವೃದ್ಧಿಗಾಗಿ, ಸಮಾಜೋದ್ಧಾರಕ್ಕಾಗಿ. ರಾಮರಾಜ್ಯದ ಕನಸಿನ ಸಾಕಾರಕ್ಕಾಗಿ.
ಶ್ರೀಗುರುಗೊ ತಿಳಿಶಿದ,ಉಪಾಸನಾವಿಭಾಗಲ್ಲಿ ಶ್ರೀಲಲಿತಾಸಹಸ್ರನಾಮ ಸಹಿತ ಕುಂಕುಮಾರ್ಚನೆ[ಹೆಮ್ಮಕ್ಕೊಗೆ], ಸೌಂದರ್ಯಲಹರಿ ಶ್ಲೋಕ, ವಿಷ್ಣುಸಹಸ್ರನಾಮ, ಭಜಗೋವಿಂದಂ ಶ್ಲೋಕ ಪಠಣ, ರಾಮತಾರಕ ಮಂತ್ರ, ಹನುಮಭಜನೆ, ಮೊದಲಾದ್ದು ವಿಶೇಷವಾಗಿದ್ದು. ಪ್ರತಿ ವರ್ಷ ಒಂದೊಂದು ವಿಧದ ಉಪಾಸನಾ ಸ್ತುತಿಯ ಹೇಳಿ ಬಾಯಿಪಾಠ ಮಾಡ್ಳೆ, ಸಾಮೂಹಿಕವಾಗಿ ಹೇಳ್ಲೆ, ಶಿಷ್ಯ ವರ್ಗದವಕ್ಕೆಆದೇಶ ಮಾಡ್ತವು ಶ್ರೀ ಗುರುಗೊ. ಈ ವರ್ಷದ ಅನುಸಂಧಾನ ಹಾಂಗೂ ಉಪಾಸನಗೆ; ತುಲಸೀದಾಸರು ವಿರಚಿಸಿದ ’ಹನುಮಾನ್ ಚಾಲೀಸಾ’ ಸ್ತೋತ್ರ ಸೂಚಿಸಿದ್ದೊವು.ಆ ನಿಮಿತ್ತ ಪ್ರತಿನಿಧಿಯಾಗಿ ಮಾತೃ ಮಹಾಮಂಡಲದ ಅಧ್ಯಕ್ಷೆ ಬೇರ್ಕಡವು ಶ್ರೀಮತಿ ಈಶ್ವರಿಯವರ ಹೇಜೀಪಿಲ್ಲಿ ಜನಸಾಮಾನ್ಯರಿಂಗೂ ಶಾಲೆಮಕ್ಕೊಗೂ ಹೇಳಿಕೊಡ್ಳೆ ಮುಂದಾಯಿದೊವು. ಶ್ರೀಗುರು ಆದೇಶಿತ ಈ ಉಪಾಸನಾ ಕಾರ್ಯಕ್ರಮ ಶ್ರೀರಾಮಚಂದ್ರಾಪುರ ಮಠದ ಶಿಕ್ಷಣಸಂಸ್ಥೆಗಳಾದ ಬದಿಯಡ್ಕ ವಿದ್ಯಾಪೀಠಲ್ಲಿ ಹಾಂಗೂ ಮುಜುಂಗಾವು ವಿದ್ಯಾಪೀಠಲ್ಲಿ ಸುರುಮಾಡಿದ ವಿಚಾರ ನಮ್ಮ ಮುಂದೆ ಇದ್ದು. ಬದಿಯಡ್ಕ ವಿದ್ಯಾಪೀಠಲ್ಲಿ ಜೂನ್ ತಿಂಗಳಿಲ್ಲಿ ಪ್ರಾರಂಭವಾದರೆ ಮುಜುಂಗಾವಿಲ್ಲಿ ಮೊನ್ನೆ ಜುಲೈ 2 ನೇ ತಾರೀಕಿಂಗೆ ಶಾಲಾಮಕ್ಕಳ ನಿತ್ಯ ಪ್ರಾರ್ಥನೆ ಕಳುದ ಕೂಡ್ಳೆ ಹಮ್ಮಿಗೊಂಡವು.ಬೇರ್ಕಡವು ಈಶ್ವರಿಯಕ್ಕ ಶ್ರೀಗುರು ನಿರೂಪಿತವ ಮಕ್ಕಳ ಮುಂದೆ ಒಪ್ಪಿಸಿಕ್ಕಿ; ರಾಮನ ಬಂಟನಾದ ಹನುಮನ ಬಲ,ಬುದ್ಧಿ,ಜಾಣ್ಮೆ,ಪರಾಕ್ರಮ,ರಾಮಭಕ್ತಿ, ಬಗ್ಗೆ ಮಕ್ಕೊಗೆ ಚುಟುಕಾಗಿ ಹೇಳಿಕ್ಕಿ;”ಜ್ಞಾನಗುಣ ಸಾಗರನಾದ ಹನುಮ, ನಮಗೆ ವಿದ್ಯೆ,ಬುದ್ಧಿ,ಯಶಸ್ಸು ಕರುಣಿಸೆಂದು ಈ ಮೂಲಕ ಕೇಳೋಣ” ಈಶ್ವರಿಯಕ್ಕ ಹೇಳಿಯಪ್ಪಗ; ಮಕ್ಕಳ ಮನಸ್ಸು ಕೊಶಿಆತು. ಕಲಿಯೆಕ್ಕು, ಬುದ್ಧಿಶಾಲಿಗೊ ಆಯೆಕ್ಕೂಳಿ ಶಾಲಗೆ ಬಪ್ಪ ಮಕ್ಕೊ ತಾನೆ!.
ಆ ಮೇಲೆ ಬೆದ್ರೆಡಿ ಕಲ್ಲಕಟ್ಟದ ಸಂಗೀತ ವಿದುಷಿ ಶ್ರೀಮತಿ ವಿಜಯಲಕ್ಷ್ಮಿ,ಅವರ ಮಗಳು ಕು|ಅನನ್ಯ ಇವಿಬ್ರು ಶಾಲಾ ಮಕ್ಕೊಗೆ ಹನುಮಾನ್ ಚಾಲೀಸಿನ ಹಾಡ್ಳೆ ಹೇಳಿಕೊಟ್ಟೊವು. ಕಾರ್ಯಕ್ರಮಲ್ಲಿ ಕುಂಬಳೆ ವಲಯಾಧ್ಯಕ್ಷೆ ಶ್ರೀಮತಿ ಪದ್ಮಾವತಿ ಡಿ.ಪಿ ಭಟ್, ಡಾ| ಡಿ.ಪಿ.ಭಟ್ ,ಶ್ರೀಮತಿ ಕಿರಣ ಮೂರ್ತಿ ಏತಡ್ಕ,ಮುಜುಂಗಾವು ವಿದ್ಯಾಪೀಠದ ಆಡಳಿತಾಧಿಕಾರಿ ಶ್ರೀಯುತ ಶ್ಯಾಂಭಟ್ ದರ್ಭೆಮಾರ್ಗ,ಉಪಸ್ಥಿತರಿದ್ದಿದ್ದವು. ಶ್ರೀಮತಿ ವಿಜಯಲಕ್ಷ್ಮಿ ಕ್ರಮಾಗತಲ್ಲಿ ಮೂರುದಿನ ಬಂದು ಹೇಳಿಕೊಟ್ಟೊವು. ಶಾಲಾಮಕ್ಕೊ ಹಾಂಗೂ ಕೆಲವು ಜೆನ ಮಕ್ಕಳ ಪಾಲಕರೂ ಒಳ್ಳೆ ಆಸಕ್ತಿಲಿ ಕೇಳಿಗೊಂಡು ಹಾಂಗೇ ರಾಗಾನುಕರಣೆ ಮಾಡಿ ಹೇಳುತ್ತಿಪ್ಪದು ಕಂಡು ಸಂಬಂಧಪಟ್ಟವಕ್ಕೆ ಸಂತೋಷಾತು.
—-೦—–
ಹರೇರಾಮ ,
ಹರೇರಾಮ.ತುಂಬಾ ಲಾಯಿಕ ಕಾರ್ಯ ಕ್ರಮವ ಆಯೋಜಿಸಿದ್ದಿರಿ
ಓದಿ ನೋಡಿ ಒಪ್ಪ ಕೊಟ್ಟವಕ್ಕೆ ಧನ್ಯವಾದಂಗೊ. ನಿಂಗೊಗೆಲ್ಲೋರಿಂಗೂ ಶ್ರೀರಾಮಾನ ಅಭಯ , ಹನುಮ ಕೃಪೆ, ಶ್ರೀ ಗುರು ಅನುಗ್ರಹ ಸಿಕ್ಕಲಿ.
ಹರೇ ರಾಮ
ತುಂಬ ಒಳ್ಳೇಯ ವಿಚಾರ
http://www.hanumanchalisalyrics.co.in/2013/10/hanuman-chalisa-mp3-download-free.html
ಬೇರೆ ಬೇರೆ ಜೆನಂಗ ಹಾಡಿದ್ದು ಇಲ್ಲಿದ್ದಿದ …
ಎಲ್ಲೋರಿಂಗು ಒಳ್ಳೆಯದು ಆದರೆ ಶನಿ ಹಿಡುದವಕ್ಕೆ ಭಾರಿ ಒಳ್ಳೆಯದು (ವೃಶ್ಚಿಕ ಧನು ಮಕರ ರಾಶಿಯವಕ್ಕೆ ಅಯಿಕ್ಕು)
ಸಂತೋಷ
ಮಕ್ಕೊಗೆ ಈ ರೀತಿ ಸಂಸ್ಕಾರ ಕೊಡ್ತಾ ಇಪ್ಪ ಕುಂಬಳೆ ಸೀಮೆಯ ಮಾತೃ ವಿಭಾಗಕ್ಕೆ ಮತ್ತೆ ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ ಶಾಲಾ ಅಢಳಿತ ಮಂಡಳಿಯವಕ್ಕು ಅಭಿನಂದನೆಗೋ