Oppanna.com

“ಅಶನ ಹಾಕಿದ ಮನೆಯೂ ಗೊಬ್ಬರ ಹಾಕಿದ ತೋಟವೂ ಹಾಳಾಗ” -{ಹವ್ಯಕ ನುಡಿಗಟ್ಟು-42}

ಬರದೋರು :   ವಿಜಯತ್ತೆ    on   23/11/2015    2 ಒಪ್ಪಂಗೊ

“ಅಶನ ಹಾಕಿದ ಮನೆಯೂ ಗೊಬ್ಬರ ಹಾಕಿದ  ತೋಟವೂ ಹಾಳಾಗ”-{ಹವ್ಯಕ ನುಡಿಗಟ್ಟು-42}

ಮದಲಿಂಗೆ ಕುಞ್ಞಣ್ಣಜ್ಜ  ಹೇದೊಬ್ಬ ಇದ್ದಿದ್ದಂ. ಅಂವ ಕೊಡುಗೈ ದಾನಿ  ಹೇಳ್ಲಕ್ಕು. ಮದ್ಯಾಹ್ನದ ಹೊತ್ತಿಂಗೆ ಆರು ಬಂದರೂ ಊಟ ಕೊಡದ್ದೆ ಇರಂ. ಬೇಡ್ತವು ಬಂದರೂ ಅಂತೇ ಕಳುಗಿಕ್ಕಂ. ಕೆಲವು ಸರ್ತಿ ಹೆರಾಣವು ಆರಾರು ಬಂದಪ್ಪಗ ಒಳ ಅಶನ ಇದ್ದೋ ಹೇದು ಅರ್ತುಗೊಳದ್ದೆ, ಹೆರಾಂದಲೇ ಎಜಮಾನ್ತಿಯ ದೆನಿಗೋದು; “ಮಿನಿಯಾ.., ಇವಂಗೊಂದ್ರಜ ಬಡುಸಿಕ್ಕು” ಹೇಳುಗು. ಅಷ್ಟಪ್ಪಗ ಅಲ್ಲಿ ಮುಗುದಿದ್ರೆ;   “ಕೇಳಿತ್ತೊ.., ಎಲ್ಲ ಸಮಲ್ಸಿ ಹೆರ ಹಾಕಿ ಆತು. ಅಶನ ಒಳುದ್ದಿಲ್ಲೆ. ನಿಂಗೊ ಇಲ್ಲಿ ಬಂದು ಅರಡಿಯದ್ದೆ ಅಲ್ಲಿಂದಲೇ ಬೊಬ್ಬೆ ಹಾಕಿರೆ ಹೇಂಗಪ್ಪಾ..!” ಹೇದು ಪೇಚಾಡಿಯೊಂಗು. ಬೇಡುತ್ತವಾದರೆ ಆ ಮನುಷ್ಯಂಗೆ ಒಂದು ಪಾವು ಅಕ್ಕಿ ಕೊಟ್ಟು ಕಳುಗ್ಗು. ಹಾಂಗೇ ಅವನ ಅಡಕ್ಕೆ ತೋಟಲ್ಲಿ, ಬತ್ತ ಬೆಳೆತ್ತ ಗೆದ್ದೆಲಿಯೂ ಒಳ್ಳೆ ಫಸಲು ಬಕ್ಕು. ಮಕ್ಕಳತ್ರೆಲ್ಲ ಮಾತಿಂಗೆ ಹೇಳುಗು “ ಊಟದ ಹೊತ್ತಿಂಗೆ ಬಂದವಕ್ಕೆ ಅಶನ ಹಾಕೆಕ್ಕು, ಕೃಷಿ ಭೂಮಿಗೆ ಗೊಬ್ಬರ ಹಾಕಿ ಸಾಂಕೆಕ್ಕು. ಇಂತೊವು ಏಳಿಗೆ ಆಗದ್ದಿರವು”.

ಈ ಅನ್ನದಾನ ಹೇಳುಸ್ಸು ಮನೆ ಮಾಡಿಕೂದವಕ್ಕೆ ಮಾಂತ್ರ ಅಲ್ಲ. ದೇಸ್ಥಾನಕ್ಕೂ ಅನ್ವೈಸುತ್ತು!. ಈಗ ಎಲ್ಲ ದೇವಸ್ಥಾನಂಗಳಲ್ಲಿಯೂ ಮದ್ಯಾಹ್ನದ ಹೊತ್ತಿಂಗೆ ಬಲಿವಾಡು ಕೊಂಡೋಗದ್ರೂ ಊಟದ ವ್ಯವಸ್ತೆ ಇದ್ದೇ ಇರ್ತು.ಹಾಂಗಿಪ್ಪ ಕ್ಷೇತ್ರ ಉದ್ಧಾರ ಆಗಿಯೇ ಆವುತ್ತು. ಅಂತೂ |ಅನ್ನದಾತ ಸುಖೀ ಭವ|. ಅನ್ನದಾನಕ್ಕಿದ್ದ ವಿಶೇಷ ಪುಣ್ಯ  ಒಪ್ಪೆಕ್ಕಾದ್ದೆ!.

2 thoughts on ““ಅಶನ ಹಾಕಿದ ಮನೆಯೂ ಗೊಬ್ಬರ ಹಾಕಿದ ತೋಟವೂ ಹಾಳಾಗ” -{ಹವ್ಯಕ ನುಡಿಗಟ್ಟು-42}

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×