Oppanna.com

“ಉಪ್ಪರಿಗೆ ಮನೆ ಇದ್ದರೂ ಉಪ್ಪಿಲ್ಲದ್ದೆ ಆಗ”-{ಹವ್ಯಕ ನುಡಿಗಟ್ಟು-44}

ಬರದೋರು :   ವಿಜಯತ್ತೆ    on   08/12/2015    4 ಒಪ್ಪಂಗೊ

“ಉಪ್ಪರಿಗೆ ಮನೆ ಇದ್ದರೂ  ಉಪ್ಪಿಲ್ಲದ್ದೆ ಆಗ”-{ಹವ್ಯಕ ನುಡಿಗಟ್ಟು-44}`

.   ಮನುಷ್ಯನ ಸ್ಥಿತಿ-ಗತಿ ಏವತ್ತೂ ಒಂದೇ ಹಾಂಗಿರ. ಇದು ಪ್ರಕೃತಿ ನಿಯಮ.ಅದು ಗೊಂತಿದ್ದರೂ ಒಂದಾರಿ ಪೈಸ ತುಂಬಿಯಪ್ಪಗ, ಕೆಲವು ಜೆನಕ್ಕೆ, ಮನುಷ್ಯರ ಗುರ್ತ ಸಿಕ್ಕದ್ದೆ ಅಪ್ಪದು, ಬಡವರ ಸಸಾರ  ಕಾಂಬದು ನಮ್ಮ ಸಮಾಜಲ್ಲಿ ಬೇಕಾದಷ್ಟು  ಉದಾಹರಣೆ ಕಾಣ್ತಾ ಇದ್ದು. ಎನ್ನ ಅಜ್ಜಿ ಮದಲೆ  ಹೇಳುಗು  “ಉಡುಗಿ ಇಡ್ಕಿದ ಕುಂಟು ಹಿಡಿಯೂ ಇನ್ನೊಂದಾರಿ ಉಪಯೋಗಕ್ಕೆ ಬೇಕಕ್ಕು’’!. ಇದು ಒಪ್ಪೆಕ್ಕಾದ ಮಾತು.ಜಾಲ ತಲೇಲಿದ್ದ ಮಣ್ಣು-ಕಸವಿನ ಉಡುಗಲೆ ಬೇಕಾವುತ್ತಿದ.

ಉಪ್ಪರಿಗೆ ಮನೆ ಅನುಭವಿಸುದು ಒಳ್ಳೆ ಪೈಸೆಕ್ಕಾರಂಗೇ ಎಡಿಗಷ್ಟೆ  ಪಾಪದವಂಗೆ ಎಡಿಯ ಹೇದು ಮದಲಾಣವರ ಮಾತು.ಇಲ್ಲಿ ಉಪ್ಪರಿಗೆ ಮನೆಯ, ಶ್ರೀಮಂತರಿಂಗೂ ಉಪ್ಪಿನ, ಪಾಪದವಕ್ಕೂ ಹೋಲ್ಸಿ ಈ ನುಡಿಗಟ್ಟಿನ ಮಾಡಿದ್ದೊವು. ಉಪ್ಪರಿಗೆ  ಮನೆಲಿದ್ದವಕ್ಕೂ ಉಪ್ಪಿಲ್ಲದ್ದೆ  ಊಟ ಸೇರ!. ಅರ್ಥಾತ್ ಶ್ರೀಮಂತರಿಂಗೆ ಬಡವರೂ  ಬೇಕು ಹೇಳ್ತ  ಒಳಾರ್ಥವ  ಕೆಮೀಲಿ,  ಹೇಳುವ ಮಾತಿದು.

4 thoughts on ““ಉಪ್ಪರಿಗೆ ಮನೆ ಇದ್ದರೂ ಉಪ್ಪಿಲ್ಲದ್ದೆ ಆಗ”-{ಹವ್ಯಕ ನುಡಿಗಟ್ಟು-44}

  1. ಉಪ್ಪರಿಗೆ ಮನೆ ಇದ್ದನ್ನೇದು ಹೇದೊಂಡು ಕೂದರೆ ಉಪ್ಪರಿಗೆ ಮನೆ ಅನುಪ್ಪತ್ಯ ಬಿಡಿ ನಿತ್ಯದ ಊಟವೇ ದೊಂಡೆಂದ ಇಳಿಯ.

    ಉಪ್ಪರಿಗೆ ಮನೆಯೋನೂ ಉಪ್ಪೆಜ್ಜೆ ತಿಂಬೋನೂ ಪ್ರಕೃತಿಯ ಮುಂದೆ ಒಂದೇ ಹಾಂಗೇ ಹೇಳ್ಸು ನಾವಿಲ್ಲಿ ಕಂಡಿದಿದಾ ಮನ್ನೆ.

  2. ಬೈಲಿನ ಶುದ್ದಿಗೆ ಒ೦ದು ಮೂಡ್ಲಾಗಿ ಭಾವನ
    ಒಪ್ಪ ಕಾಣದ್ದರೆ ಆಗ ಹೇಳಿ,
    ಹೇದಾ೦ಗೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×