- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಇಡೀ ಮುಂಗಿದವಂಗೆ ಚಳಿ ಇಲ್ಲೆ”—{ಹವ್ಯಕ ನುಡಿಗಟ್ಟು-56}
ನಾವು ಕೆರೆಲಿಯೋ ಹೊಳೆಲಿಯೋ ಮೀವಗ ಅರ್ಧಂಭರ್ದ ಮುಂಗಿರೆ ಚಳಿ ಅಪ್ಪದು.ಇಡೀ ಮುಂಗಿಯಪ್ಪಗ ಚಳಿ ಇಲ್ಲೆನ್ನೆ. ಮುಂಗಿ ಮಿಂದವಕ್ಕೆಲ್ಲೋರಿಂಗೂ ಈ ಅನುಭವ ಇದ್ದು.ಇದರ ನುಡಿಗಟ್ಟಿಲ್ಲಿ ಎಂತಕೆ ಬಳಸುವದು!?.ನೋಡುವೊಂ.
ಚುಬ್ಬಣ್ಣ ಮಾವ ಒಳ್ಳೆ ಮನುಷ್ಯ. ಪ್ರಾಮಾಣಿಕ ಜೆನ.ಎಲ್ಲಾ ಮನಗಳಲ್ಲೂ ಅಪ್ಪಹಾಂಗೆ ಅವರ ಮನೆಲಿಯೂ ಪಾಲು ಪಂಚಾಯಿತಿಗೆ ಸುರುವಾತು.ತಮ್ಮ ಗವರ್ಮೆಂಟ್ ಉದ್ಯೋಗಲ್ಲಿ ಪೇಟೆಲಿದ್ದ.ಅವಂಗೆ ಈಗ ಪಾಲಾಯೆಕ್ಕು,ಆ ಪಾಲಿಲ್ಲಿ ಬಪ್ಪ ಪೈಸಲ್ಲಿ ಪೇಟೆಲಿ ಸೈಟು ತೆಗದು ಮನೆಕಟ್ಟೆಕ್ಕು ಹೇಳ್ತ ಇರಾದೆ. ಆ ಪೇಟೆಲಿ ಕೆಲಸಲ್ಲಿದ್ದ ಮಗನ ಕಡೆಂದಲೇ ಅಬ್ಬೆ-ಅಪ್ಪ ಮಾತಾಡುದು[ಹೆಚ್ಚಿನ ಮನಗಳಲ್ಲೂ ಇದೇ ಕಾಣುತ್ತು]. ಅಪ್ಪನ ಬ್ಯಾಂಕ್ ಖಾತೆಲಿ ಇಪ್ಪ ಪೈಸವ ಅವಂಗೆ ಪಾಲು ಕೊಡ್ಳಾಗದೋ ಜಾಗೆಯ ತುಂಡುಮಾಡಿ ಮಾರಿ ಮುಡ್ಚುದೆಂತಕೆ ಹೇಳಿ ಚುಬ್ಬಣ್ಣ ಹೇಳಿರೆ; ತಮ್ಮನು ಅಪ್ಪನೂ ಇಬ್ರೂ ಬೇಂಕಿಲ್ಲಿಪ್ಪ ಪೈಸೆ ಕರಗುಸುದು ಬೇಡಾಳಿ ತರ್ಕ ಹಿಡಿವವು!.
ಈ ವಾದಾಂಟ ಕಂಡು ಬೊಡುದ ಚುಬ್ಬಣ್ಣನ ಎಜಮಾನ್ತಿ ಲಕ್ಷ್ಮಿ, ಗೆಂಡನತ್ರೆ; “ಅವಕ್ಕಿಬ್ರಿಂಗು ಬೇಕಾದಾಂಗೆ ಮಾಡಿಗೊಳಲಿ.ಸುಮ್ಮನೆ ನಿಂಗೊ ನಿಷ್ಠುರ ಕಟ್ಟಿಗೊಳೆಡಿ” ಹೇಳಿಯಪ್ಪಗ “ಆನು ಹೇಂಗಾರು ಅವರ ಕಣ್ಣಿಂಗೆ ಕೆಟ್ಟವ ಆಯಿದೆ. ಇನ್ನು ಮೂಲೆ ಅಡಗಿ ಕೂರುತ್ತಿಲ್ಲೆ. ’ಇಡೀ ಮುಂಗಿದವಂಗೆ ಚಳಿ ಇಲ್ಲೆ’. ಅಪ್ಪನ ಕಾರ್ಬಾರಲ್ಲಿ ಈ ಆಸ್ತಿ ಅರೂಪಾದ್ದರ ಇಷ್ಟು ಫಲವತ್ತಾಗಿ ಮಾಡಿದ ಬಙ್ ಮಾಸಿದ್ದಿಲ್ಲೆ.ಅಷ್ಟಪ್ಪಗ ಇದರ ಹರಿಹಂಚು ಮಾಡುವ ಮನಸ್ಸೆಂತಕೆ!?”.
ಅಪ್ಪು.ಸುರು,ಸುರುವಿಂಗೆ ಚುಬ್ಬಣ್ಣಮಾವಂಗೆ; ಅಪ್ಪ,ತಮ್ಮನ ಕಾದಾಟಕ್ಕೆ ಚಳಿ ಆತು.ಆದರೆ ತನ್ನ ಪ್ರಾಮಾಣಿಕತನಕ್ಕೆ ಬೆಲೆ ಸಿಕ್ಕದ್ದಪ್ಪಗ ಆ ಚಳಿ ಬಿಟ್ಟತ್ತು. ಬೆಂದು,ಬೆಂದೂ ಬಸವಳಿದ ಪ್ರಾಮಾಣಿಕರು ಬೇರೆಯವರಿಂದ ಬಪ್ಪ ಅಪ್ರಮಾಣಿಕ ಒತ್ತಡದ ಹೊಯ್ದಾಟಕ್ಕೆ ಬೇಜಾರಾಗಿ ತೋರುವ ತುಮುಲವ ಈ ನುಡಿಗಟ್ಟಿಲ್ಲಿ ಹೆಚ್ಚಾಗಿ ಬಳಸುತ್ತೊವು.
——–೦——-
ಅಪ್ಪು ಗೋಪಾಲ , ಅದನ್ನೇ ಆನು ಬೆಂದೂ ಬೆಂದೂ ಬಸವಳಿದವು ಹೇಳಿ ಉಪಯೋಗಿಸಿದೆ . ಧನ್ಯವಾದಂಗೊ ನಿನಗೆ .
ಸರೀಸೋತು ಸುಣ್ಣ ಆದ ಮೇಲೆ ಹೇಳುವ ಮಾತು ಇದು. ಇನ್ನು ಕಳಕ್ಕೊಂಬಲೇನಿಲ್ಲೇ ಹೇಳುವ ಭಾವ
ಓದಿ ಒಪ್ಪಕೊಟ್ಟ ಶೀಲಂಗೆ ,ಬೊಳುಂಬು ಗೋಪಾಲಂಗೆ,ಮುಳಿಯ ರಘುವಿಂಗೆ ,ಶರ್ಮಭಾವಂಗೆ,ನರಸಿಂಹಣ್ಣಂಗೆ ಎಲ್ಲರಿಂಗೂ ಮನಃ ಪೂರ್ವಕ ಧನ್ಯವಾದಂಗೊ.
ವಿವರಣೆ ಲಾಯಕಾಯಿದು ವಿಜಯಕ್ಕ.
ಅರ್ಥವತ್ತಾದ ನುಡಿಗಟ್ಟು. ಧನ್ಯವಾದ ವಿಜಯತ್ತಿಗೆಗೆ
ಉದಾಹರಣೆಯೊಟ್ಟಿಂಗೆ ನುಡಿಗಟ್ಟಿನ ವಿವರಣೆ ಅರ್ಥವತ್ತಾಗಿದ್ದು .ಧನ್ಯವಾದ ಅತ್ತೆ .
ಒಳ್ಳೆ ನುಡಿಗಟ್ಟು ವಿಜಯಕ್ಕಾ. ಅರ್ಥವತ್ತಾಗಿದ್ದು.
ಲಾಯಕಿದ್ದು ವಿಜಯಕ್ಕಾ, `ಬೆಂದೂ ಬೆಂದೂ ಬಸವಳಿದ ಪ್ರಾಮಾಣಿಕರು’ ಹೇಳುವ ಪ್ರಯೋಗ ಇಷ್ಟ ಆತು.