- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
—“ಕವುಂಚಿ ಬಿದ್ದರೂ ಮೂಗು ಮೇಗೆ”-{ಹವ್ಯಕ ನುಡಿಗಟ್ಟು-57}
ನಾವು ಕವುಂಚಿ ಬಿದ್ದಪ್ಪಗ ಮದಾಲು ಭೂಮಿಗೆ ಸ್ಪರ್ಶ ಅಪ್ಪದೇ ಮೂಗಲ್ಲೊ.ಹಾಂಗಿಪ್ಪಗ ಆ ಮೂಗು ಮೇಗೆ ಆಗಿಹೋಪದೇಂಗೆ!?.ಅದಲ್ಲೇ ಇಪ್ಪದು ವಿಷಯ!
ಪಾಪಣ್ಣ ದೊಡಾ ನಂಬ್ರದಾರಿ ಎವಗ ನೋಡಿರೂ ಆ ನಂಬ್ರ,ಈ ನಂಬ್ರ ಹೇದೊಂಡು ಕಾಸ್ರೋಡಿಲ್ಲೇ ಇಪ್ಪದು. ನಂಬ್ರಲ್ಲಿ ಹೆಚ್ಚಿಗೆಯೂ ಸೋಲುಗುಹೇಳುವೊಂ!. ಸೋತ ವರ್ತಮಾನ ಗೊಂತಾದರೆ; ಮನೆಎಜಮಾನ್ತಿ ಹತ್ತರೆ ಅವನ ಉತ್ತರ ಹೀಂಗೆ “ಆ ತೊಟ್ಟು ಮುರುದು ಮೇಣ ನಕ್ಕುಸ್ಸಕ್ಕೆ ಕೋರ್ಟಿಂಗೆ ಬಪ್ಪಲೂ ಗೆತಿ ಬೇಕನ್ನೆ! ರಜ ಪೈಸ ಕೊಟ್ಟು, ಮಣ್ಣಾಕಿತ್ತಾಡ ಬದುಕ್ಕಿಯೊಳಲಿ ಹೇದು ಬಿಟ್ಟೆ”.
“ಇಂದ್ರಾಣ ಮೇಲಾರ ಏಕೆ ಹೀಂಗೆ!?. ಒಂದು ಪೆದ್ದನ ಹಾಂಗಾಯಿದು!. ಏವರುಚಿಯೂ ಇಲ್ಲೆಯಿದಕ್ಕೆ!”.ಉಂಬಲೆ ಕೂದೊಂಡು ಹೆಂಡತಿ ಹತ್ರೆ ಪರಂಚಿದ ಕೇಚಣ್ಣ. “ಆಚಮನೆ ಮಜ್ಜಿಗೆ ಎರದ್ದದಿದ. ನಮ್ಮಲ್ಲಿ ಮೇಲಾರಕ್ಕೆರವಲೆ ತಕ್ಕ ಮಜ್ಜಿಗೆ ಇತ್ತಿಲ್ಲೇದು ಆಚಮನೆ ಅಕ್ಕನತ್ರಂದ ರಜ ತಂದು ಮೇಲಾರ ಮಾಡಿದೆ. ಮಜ್ಜಿಗೆ ಒಳ್ಳೆದಿದ್ದರೇ ಮೇಲಾರ ರುಚಿ!” ಎಜಮಾಂತಿಯ ಸಮರ್ತನೆ!.
ಅಕ್ಕನೂ ತಮ್ಮನೂ ಶಾಲಗೆ ಹೆರಡುವಗ ಏವದೋ ವಿಷಯಕ್ಕೆ ವಾದಾಂಟ ಮಾಡಿಯೊಂಡವು.ಅಬ್ಬೆಪ್ಪಂಗೆ ಮಾಣಿಹತ್ರೇ ಕೊಂಗಾಟ ಹೇದು ಅಕ್ಕಂಗೆ ಗೊಂತಿದ್ದು.ಆ ಕಾರಣಂದಲೂ ಶಾಲಗೆ ತಡವಾವುತ್ತೂಳಿಯೂ “ಹ್ಞೂಂ…ಕವುಂಚಿ ಬಿದ್ದರೂ ಮೂಗು ಮೇಗೇಳಿ ಅಪ್ಪಂ ಹೇಳ್ತವಲ್ಲೋ ಹಾಂಗೆ ನಿನ್ನದರನ್ನೇ ನೀನು ಸಮರ್ಥನೆ ಮಾಡಿಗೊಂಬದು..” ತಾನು ಮಾಡಿದ್ದೇ ಸರೀಳಿ ತಮ್ಮನ ತರ್ಕಕ್ಕೆ ಅಕ್ಕಂ ಸುಮ್ಮನಾತು.
ಮೇಗಾಣ ಉದಾಹರಣಗಳ ಗಣನಗೆ ತೆಕ್ಕಂಡ್ರೆ ಎಂತ ಗೊಂತಾವುತ್ತು ನವಗೆ? ಸೋತರೂ ಒಪ್ಪಿಗೊಂಬಲೆ ತಯಾರಿಲ್ಲೇಳಿ ಕಾಣುತ್ತಿಲ್ಯೊ?. ಇದೇ ಅರ್ಥಯಿದ ಇಂದ್ರಾಣ ನುಡಿಗಟ್ಟಿಂಗೆ.—–೦—–
ಚೊಕ್ಕ ಆಯಿದು.
ಅಪ್ಪು ಬೊಳುಂಬು ಗೋಪಾಲ ಹೇಳುವ ನುಡಿಯನ್ನೂ ಅನು ಕೇಳಿದ್ದೆ. ಧನ್ಯವಾದ ಗೋಪಾಲಂಗೆ
ಕೆಳಾಂಗೆ ಬಿದ್ದರೂ ಮೀಸಗೆ ಮಣ್ಣಾಯಿದಿಲ್ಲೆ ಹೇಳುವ ಹಾಂಗೇ ಇತ್ತು. ಒಳ್ಳೆ ನುಡಿಗಟ್ಟು. ಉದಾಹರಣೆಗಳುದೆ ಫಶ್ಟಾಯಿದು.
ವಿಶ್ವ ಯೋಗದ ದಿನವೇ ಎನ್ನ ಈ ಶುದ್ದಿಗೆ ಒಪ್ಪ ಬಪ್ಪದು!. ಅದೂ ಶೀಲನತ್ರಂದ ಒಂದೊಳ್ಳೆ ಒಪ್ಪ ಬಂದದು ಎನ್ನ ಯೋಗವೇ . ಧನ್ಯವಾದ ಶೀಲಾ . {ಶುದ್ದಿ ಹಾಕಿ ನಾಲ್ಕಾರು ದಿನಾತು. ಆರುದೇ ಬಯಲಿಂಗೆ ಬಯಿಂದವಿಲ್ಲೆಯಾ ಜಾನ್ಸಿತ್ತಿದ್ದೆ}.
ಆಹಾ.. ಇದು ಪಷ್ಟಾಯಿದು ವಿಜಯಕ್ಕ.