Oppanna.com

“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ

ಬರದೋರು :   ವಿಜಯತ್ತೆ    on   29/10/2016    20 ಒಪ್ಪಂಗೊ

ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು, ಕೆಟ್ಟದು ಹೀಂಗೆ ಎಲ್ಲವನ್ನೂ ಸಣ್ಣದಿಪ್ಪಗಳೇ ಹೇಳಿಕೊಡೆಕು, ಮಕ್ಕೊ ಕಲಿಯೇಕು”.., ಹೇಳ್ವದು ನಮ್ಮ ಶ್ರೀಗುರುಗಳ ಸಂದೇಶ. “ವಿದ್ಯಾರ್ಥಿಗಳು ಹಣತೆ. ವಿದ್ಯೆ ಎನ್ನುವುದು ಜ್ಯೋತಿ.ಇದೆರಡೂ ಸೇರಿದಾಗ ಹಣತೆಗೆ ಸಾರ್ಥಕತೆ”.ಈ ವಾಕ್ಯ ವಿದ್ಯಾರ್ಥಿಗಳ ಮುಂದೆ ಸಂಸ್ಥಾನದವರ ದಿವ್ಯ ಕಂಠಂದ ಹೆಚ್ಚಾಗಿ ಬಪ್ಪ ಸೂಕ್ತಿ. ಎಷ್ಟು ಅರ್ಥಗರ್ಭಿತ ಸಾಲು!.
ದೀಪವೂ ಜ್ಯೋತಿಯೂ ಸರಿಯಾಗಿ ಸೇರಿ ಪರಿಪಾಕಲ್ಲಿ, ದಿವ್ಯಜ್ಯೋತಿ!!

ಮನ್ನೆ 23/10/2016 ಕ್ಕೆ ಮುಜುಂಗಾವು ವಿದ್ಯಾಪೀಠಲ್ಲಿ ಮಕ್ಕೊಗೆ ಬೇಕಾಗಿ; ’ವಿದ್ಯಾರ್ಥಿ ಸಮಾವೇಶ-2016’ ಹೇಳಿ ಕುಂಬಳೆ ಹವ್ಯಕ ವಲಯದವು ಏರ್ಪಡಿಸಿದ ಕಾರ್ಯಕ್ರಮ ಕಳಾತು. ಧ್ವಜವಂದನೆ, ಶಂಖನಾದ,ಗುರುವಂದನೆ,ಹೀಂಗೆ ಕಾರ್ಯಕ್ರಮ ಉದ್ಘಾಟನೆ ಆತು. ಮುಳ್ಳೆರಿಯ ಮಂಡಲ ಸಹಾಯ ವಿಭಾಗದ ಡಾ| ಡಿ.ಪಿ.ಭಟ್ ದೀಪ ಬೆಳಗಿ ಉದ್ಘಾಟಿಸಿದೊವು. ವಲಯ ವಿದ್ಯಾರ್ಥಿ ವಾಹಿನಿ ವಿಭಾಗದ ನಾಯ್ಕಾಪು ಗುರುಮೂರ್ತಿ ಪ್ರಾಸ್ತಾವಿಕ ಹೇಳಿದೊವು. ಮುಳ್ಳೆರಿಯ ಮಂಡಲ ವಿದ್ಯಾರ್ಥಿವಾಹಿನಿ ವಿಭಾಗದ ಕೇಶವಪ್ರಸಾದ ಎಡೆಕ್ಕಾನ, ವಲಯ ಕಾರ್ಯದರ್ಶಿ ಎಸ್.ಗೋಪಾಲಕೃಷ್ಣಭಟ್, ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಎನ್.ರಾವ್.ಮುನ್ನಿಪ್ಪಾಡಿ ಇವೆಲ್ಲ ಶುಭಾಶಯ ಹೇಳಿದೊವು. ಮತ್ತೆ ನಮ್ಮ ಶೀಲಾಲಕ್ಷ್ಮಿ ಕಾಸರಗೋಡು ಇವರ ’ಮಿಠಾಯಿ’ ಪುಸ್ತಕ ಬಿಡುಗಡೆಯನ್ನೂ ಡಾ|ಡಿ.ಪಿ.ಭಟ್ ಮಾಡಿದೊವು.(ಬದುಕಿನ ಓರೆಕೋರೆಗಳೂ ಸರಿಗೆರೆಗಳೂ) ಹೇಳಿ ವೈವಿದ್ಯಮಯ ಲೇಖನಂಗೊ ಈ ಪುಸ್ತಕಲ್ಲಿದ್ದು. ಶೀಲಾಲಕ್ಷ್ಮಿ ತನ್ನೆರಡು ಪುಸ್ತಕದೊಟ್ಟಿಂಗೆ ಕಿರುಕಾಣಿಕೆಯನ್ನೂ ಗ್ರಂಥಾಲಯಕ್ಕೆ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಹಾಂಗೂ ಗಂಥಪಾಲಿಕೆ ವಿಜಯಾ ಸುಬ್ರಹ್ಮಣ್ಯರತ್ರೆ ಹಸ್ತಾಂತರ ಮಾಡಿದುವು.. ಈ ಸಂದರ್ಭಲ್ಲಿ ಶೀಲಾ ನಿಜ ಬರಹಗಾರ್ತಿ ಹೇಳಿ ಎನ್ನ ಮನಸ್ಸಿಂಗಾತು. ಬರೆತ್ತವಕ್ಕೆ, ಓದುಗರಿಂಗೇ ಮದಾಲು ಲೈಬ್ರೆರಿ ನೆಂಪಪ್ಪದಿದ!.

ಇದಾದಮತ್ತೆ ನಾಯ್ಕಾಪು ಗುರುಮೂರ್ತಿಮಾಸ್ಟ್ರು ,ಸತ್ಯಪ್ರಕಾಶ ಮಾಸ್ಟ್ರು ಬದಿಯಡ್ಕ, ಗಾಯತ್ರಿ ಅಕ್ಕᵒ ಕಡಂಬಾರು,ಬಳ್ಳಮೂಲೆ ಗೋವಿಂದಣ್ಣ ಇವೆಲ್ಲಾ ಶಿಬಿರ ನೆಡೆಶುವ ಸಂಪನ್ಮೂಲ ಜೆನಂಗೊ ಆಗಿ ವ್ಯವಹರಿಸಿದೊವು. ಮಾತೃವಿಭಾಗದ ಮಾಲಕ್ಕᵒ, ಆದಿತ್ಯಹೃದಯ ಹೇಳ್ಸಿದವು.ಎಲ್ಲೋರೂ ಲಾಯಿಕಲ್ಲಿ ಸಹಭಾಗಿಯಾದವು.

ಬಳ್ಳಮೂಲೆಯವರ ಪಾಠ:
ಗೋವಿಂದಣ್ಣನ ಪ್ರಚಾರ ಸಮಿತಿ, ಹಾಂಗೂ ಉಲ್ಲೇಖಕ್ಕೆ ಹಾಕಿದ್ದೊವು ಗುರುಗೊ. ಶ್ರೀಗುರುಗೊ ಆಲೋಚನೆ ಮಾಡಿಯೇ ವ್ಯವಸ್ಥೆ ಮಾಡಿದ್ದೊವು. ಎಂತ ಕೇಳಿರೆ; ಇವು ಎಲ್ಲದಲ್ಲೂ ನಿಸ್ಸೀಮರೇ!. ಪ್ರಚಾರ ಮಾಡ್ಳೋ ಸಭೆಲಿ ಮಾತಾಡ್ಳೋ ಅವಕ್ಕೆ ಮೈಕ್ ಬೇಡ!. ಪ್ರಚಂಡ ವಾಕ್ಚಾತುರ್ಯ ಇದ್ದು, ಮಹಾ ಮೇಧಾವಿ!!.ಇದು ಎನ್ನೊಬ್ಬನ ಹೇಳಿಕೆ ಅಲ್ಲ; ಸಮಾಜ ಬಂಧುಗಳಿಂದ, ಅವರ ಮೇಗೆ ಗೌರವದ ಆತ್ಮೀಯ ಅನಾವರಣ!!!. ಇರಳಿ, ಹೀಂಗೇ ಗುರುಸೇವೆ ಮಾಡಿಯೊಂಡು ಮಾರ್ಗದರ್ಶನ ಕೊಟ್ಟೊಂಡಿರಳಿ ,ಹೇಳಿ ನಮ್ಮೆಲ್ಲೋರ ಸದಾಶಯ.
ಇನ್ನೀಗ ವಿಷಯಕ್ಕೆ ಬಪ್ಪೊᵒ. ಬಳ್ಳಮೂಲೆವು ನೋಡೀ..,ಅಷ್ಟರವರೆಗೆ ರೆಜಾ ’ಜಡಭರತಂಗೊ’ ಆಗಿದ್ದ ಮಕ್ಕೊ; ಬಂದು ಸುರು ಮಾಡಿದ್ದೇ ತಡ,ನಿಜಮಕ್ಕೊ ಆದವನ್ನೆ!!. “ಏಳಿ.., ಎದ್ದೇಳಿ. ಸ್ವಾಮಿ ವಿವೇಕಾನಂದನಾಂಗೆ ಸುರುಮಾಡಿ.., ಕೂರಿ.., ಹರೇರಾಮ ಹೇಳಿ, ಗಟ್ಟಿ ಸ್ವರಲ್ಲಿ ಹೇಳಿ..,ಸಣ್ಣದಾಗಿ ಹೇಳಿ, ಎಲ್ಲೋರೂ ಒಟ್ಟಿಂಗೆ ಹೇಳಿ. ನೆಗೆ ಮಾಡಿ..,” ಆಟದೊಟ್ಟಿಂಗೆ ಪಾಠವೂ ಸುರುವಾತೂಳಿ ಬೇರೆ ಹೇಳೆಡನ್ನೆ!!!.

  • “ನಿಂಗಳ ಗೋತ್ರ ಏವದು?, ಗೋತ್ರ ಇದ್ದಾಂಗೆ; ನಮಗೊಂದು ಸೂತ್ರವೂ ಇದ್ದು. ನಾವು ಹವ್ಯಕರು ಋಷಿಗಳ ವಂಶದೊವು!.
    1.ವಸಿಷ್ಠ, 2. ವಿಶ್ವಾಮಿತ್ರ, 3.ಭರದ್ವಾಜ, 4.ಕಶ್ಯಪ, 5.ಅತ್ರಿ, 6.ಗೌತಮ, 7.ಜಮದಗ್ನಿ. ಹೀಂಗೆ ಸಪ್ತ ಋಷಿಗಳ ಕೂಟದೊವು ನಾವು. ಅದದು ಋಷಿಗಳ ವಂಶ ಪಾರಂಪರ್ಯಲ್ಲಿ ಆ ಋಷಿಗಳ ನೆತ್ತರು ಹರಿತ್ತಾ ಇದ್ದು ನಮ್ಮ ದೇಹಲ್ಲಿ!.
    ಪ್ರತಿಯೊಬ್ಬನೂ ಅವರವರ ಗೋತ್ರ ಏವದು? ಗುರಿಕ್ಕಾರᵒ ಆರೂಳಿ ಗೊಂತಿರೆಕು.ಹಾಂಗೇ ನಿಂಗಳ ಜನ್ಮನಕ್ಷತ್ರ,ಇದೆಲ್ಲ ಇಂದೇ ಮನಗೆ ಹೋಗಿಯಪ್ಪದ್ದೆ ನಿಂಗಳ ಅಬ್ಬೆಪ್ಪನತ್ರೆ ಕೇಳಿ ತಿಳುಕ್ಕೊಂಡು ನೆಂಪು ಮಡಿಗಿಯೊಳಿ. ಕೆಲವು ಮಕ್ಕೊಗೆ ಗೊಂತಿದ್ದತ್ತು ಹೇಳುವೊᵒ.
    ಈ ಗೋತ್ರದೊಟ್ಟಿಂಗೆ ಇನ್ನೊಂದು ಸೂತ್ರವೂ ಇದ್ದು!!!. ಏವದಾಯಿಕ್ಕು!?.
    ಅದುವೇ ಈ ಎಲ್ಲಾ ಸಂಸ್ಕೃತಿ, ಸಂಸ್ಕಾರ, ಆಚಾರ,ವಿಚಾರಕ್ಕೆ ನಮ್ಮ ಗುರುಪರಂಪರೆ ಹಾಕಿ ಕೊಟ್ಟ ,ಸುವ್ಯವಸ್ಥೆ! ಸುಸೂತ್ರ!!
    ಉದೆಕಾಲಕ್ಕೂ ಹೊತ್ತು ಕಂತುವಗಳೂ ಮನೆ,ಮನಗಳಲ್ಲಿ ಶಂಖನಾದ ಮೊಳಗೆಕ್ಕು
    ಶಂಖ ಕೆಲವು ದಿಕೆ ಒಂದು ಸರ್ತಿ, ಕೆಲವು ಮನೆಲಿ ಎರಡು ಸರ್ತಿ, ಇನ್ನು ಕೆಲವು ಕಡೆ ಮೂರು ವಾರಿ,
    ಆದರೆ..ಒಂದ್ಸರ್ತಿ, ಮೂರು ಸರ್ತಿ, ಆಗಡ. ಎರಡು ಅಥವಾ ಮೂರರಿಂದ ಹೆಚ್ಚು ಎಷ್ಟು ಸರ್ತಿಯೂ ಅಡ್ಡಿಲ್ಲೆ.
    ಶಂಖ ಊದುವದು ಎಂತಕೆ?.
    ನಮ್ಮೊಳಗಿನ ಹಾಂಗೂ ಆಸುಪಾಸಿನ ದುಷ್ಟ ಶಕ್ತಿ ನೀಗಿ; ಇಷ್ಟ ಶಕ್ತಿ ಬಪ್ಪಲೆ ಶಂಖಧ್ವನಿ ಸಹಕಾರಿ. ಅದಲ್ಲದ್ದೆ ಇನ್ನೊಂದು ವಿಶೇಷ ಶಕ್ತಿ ಅದಲ್ಲಿದ್ದು. ಅದುವೇ ನಮ್ಮೊಳ ಇಪ್ಪ, ನಕಾರಾತ್ಮಕ ಎನರ್ಜಿಯ ದೂರಮಾಡಿ ಸಕಾರಾತ್ಮಕ ಶಕ್ತಿಯ ತುಂಬುತ್ತು.ಶ್ವಾಸನಾಳ,ಶ್ವಾಸಕೋಶ ಸ್ವಚ್ಛಾವುತ್ತು.
  • ದೇವರ ಕೋಣೆ ಹೊಸ್ತಿಲಿಂಗೆ, ಮನೆ ಎದುರು ಬಾಗಿಲಿನತ್ರೆ ರಂಗೋಲಿ (ಸೇಡಿಹೊಡಿಲಿ ಆಯೆಕ್ಕು. ಹೊಸ್ತಿಲಿಂಗೆ ಬರವದು ಹೇಳುಗು ಕುಂಬಳೆ ಸೀಮೆಲಿ.) ಹಾಕುವದೂ ಮಂಗಳಕಾರಕ ಒಟ್ಟಿಂಗೆ ಕ್ರಿಮಿ ನಾಶಕ.ಮತ್ತೆ .,ಅದರಿಂದಾಗಿ ಕ್ಷುದ್ರಶಕ್ತಿ ಪ್ರವೇಶ ಆವುತ್ತಿಲ್ಲೆ.
    ಮಾತಿನ ಬಗ್ಗೆ, ನಯ-ವಿನಯ,ನಡೆ-ನುಡಿ ಬಗ್ಗೆ, ನಾವು ತೆಕ್ಕಂಬ ಆಹಾರದ ಬಗ್ಗೆ, ಅಳು,ನಗು, ರೀತಿ,ನೀತಿ, ಶಿಸ್ತಿನ ಬಗ್ಗೆ ರಜ,ರಜ ಹೇಳಿಕೊಟ್ಟೊವು. ಕ್ಷಣಂದ ಹಿಡುದು ಪರ್ಯಂತದ ವರೆಗೆ ಹೇಂಗಿರೆಕು? ಇದೆಲ್ಲಾ ಸಂಸ್ಕಾರಂದ ಬಪ್ಪ ತೀಳುವಳಿಕೆ,
  • ಅರಿಷಡ್ವರ್ಗದ ಮಾಹಿತಿ — ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರ,ಈ ಆರು ಗುಣಂಗೊ ನಮ್ಮ ವೈರಿಗೊ.ಇದರಿಂದ ನಾವು ದೂರ ಇರೆಕು. ಅದುವೇ ಮನುಷ್ಯನ ಜೀವ ತೆಗೆಯದ್ದೆ ಕೊಲ್ಲುವ ವಿಷಯ.

ಮತ್ತೆ ಗುರುವಂದನೆ ಹೇಳುವ ಪರಿ!. ಒಟ್ಟಿಲ್ಲಿ 11-30 ರಿಂದ 1- ರವರೆಗೆ ಬಳ್ಳಮೂಲೆಯವರ ಟೈಮು. ಅದು ಮುಗುದ್ದೇ ಗೊಂತಾಯಿದಿಲ್ಲೆ.
ಶಾಂತಿ ಮಂತ್ರ,ರಾಮ ತಾರಕ ಮಂತ್ರ, ಧ್ವಜ ಅವರೋಹಣಲ್ಲಿ ಕಾರ್ಯಕ್ರಮ ಮುಕ್ತಾಯಾತು.

ಶ್ರೀಮಠದ ವ್ಯವಸ್ಥೆ –ಶ್ರೀ ಗುರುಗಳಿಂದ ಕೆಳ ಮಹಾಮಂಡಲ, ಇದರ ಕೆಳ ಹನ್ನೆರಡು ಮಂಡಲಂಗೊ, ಒಂದೊಂದು ಮಂಡಲದ ಕೆಳ ಹನ್ನೆರಡು ವಲಯಂಗೊ.ಒಂದೊಂದು ವಲಯದ ಕೆಳ, ಹನ್ನೆರಡು ಘಟಕಂಗೊ. ಒಂದೊಂದು ಘಟಕಲ್ಲಿ ಇಪ್ಪತ್ತೈದು ಮನೆ ಇರ್ತು.(ಕೆಲವು ಘಟಕಲ್ಲಿ ಐದು ಮನೆ ಹೆಚ್ಚು-ಕಮ್ಮಿ ಇಪ್ಪದೂ ಇದ್ದು.). ಒಂದೊಂದು ಘಟಕಲ್ಲಿ ಐದು ಜೆನ ಶ್ರೀಕಾರ್ಯಕರ್ತರು, ಒಬ್ಬೊಬ್ಬ ಶ್ರೀಕಾರ್ಯಕರ್ತಂಗೆ ಐದು ಮನಗೊ. ಪ್ರತೀ ಘಟಕದ ಪ್ರಮುಖᵒ ’ಗುರಿಕ್ಕಾರ’.(ಶ್ರೀಗುರುಗೊ ಗುರಿಕ್ಕಾರನ ಹೆಬ್ಬೆರಳಿಂಗೆ ಹೋಲುಸುದು ಕೇಳಿದ್ದೆ). ಗುರಿಕ್ಕಾರಂಗೆ, ಶ್ರೀಗುರುಗೊ ಸಾಟಿ,ಸನ್ನದ್ದು ಕೊಟ್ಟು ನೇಮಕ ಮಾಡ್ತೊವು.ಶಿಷ್ಯರಿಂಗೆ ವ್ಯಾಸ ಮಂತ್ರಾಕ್ಷತೆ ತಂದೆತ್ತುಸುವದು, ಮನೆಹಣ ವಸೂಲು ಮಾಡಿ ಮಠಕ್ಕೊಪ್ಪುಸುವದು, ಅವᵒ ಗುರಿಕ್ಕಾರ್ತಿಗೆ ಮಾಡ್ತಲ್ಲಿ ಏವದೇ ಶುಭ ಅಶುಭ ಕಾರ್ಯಂಗೊಕ್ಕೆ ಭಾಗಿಯಾಗಿ ಕೊಂಡುನೆಡೆಶುವ ಕೆಲಸ ಗುರಿಕ್ಕಾರಂಗೆ.ಮತ್ತೆ ಮಾತೃವಿಭಾಗ,ಮುಷ್ಠಿಭಿಕ್ಷೆ ,ಬಿಂದು-ಸಿಂಧು,ವೈದಿಕ, ಸಂಸ್ಕಾರ, ವಿದ್ಯಾರ್ಥಿವಾಹಿನಿ ಶಿಷ್ಯಮಾಧ್ಯಮ,ಉಲ್ಲೇಖ,ವೃತ್ತಿಪರ,ಸಾಮರಸ್ಯ, ಸಂಘಟನಾ, ಹೀಂಗೆ ಹತ್ತು ಹಲವು ಹಾಕಿಕೊಟ್ಟು,ಪ್ರತಿಯೊಬ್ಬಂಗೂ ಸೇವಾಕಾರ್ಯ ಸಿಕ್ಕುವ ಹಾಂಗೆ ಶ್ರೀ ಗುರುಗೊ ಹಾಕಿಕೊಟ್ಟು ಅದ್ಭುತವಾದ ಯೋಜನೆ ಮಾಡಿಗೊಂಡಿದೊವು( ಇದಿಷ್ಟು ಶ್ರೀಮಠದ ವ್ಯವಸ್ಥೆ ಸೂಕ್ಷ್ಮವಾಗಿ ಬಯಲಿಲ್ಲಿ ಗೊಂತಿಲ್ಲದ್ದವಿದ್ದರಾತೂಳಿ; ವಿಜಯತ್ತೆ ಬರದ್ದದು, ಬಳ್ಳಮೂಲೆವಕ್ಕೆ ಸಮಯ ಸಾಕಾತಿಲ್ಲೆ. ಅವು ಇನ್ನೂ ವಿಶದವಾಗಿ ಹೇಳುತಿತವು).

ವರದಿ: ವಿಜಯತ್ತೆ.
ಚಿತ್ರ: ಬಳ್ಳಮೂಲೆ ಮಾವ

~*~*~

20 thoughts on ““ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ

  1. ಗೋತ್ರ , ಸೂತ್ರ ಎಲ್ಲಾ ಸಂಧ್ಯಾ ವಂದನೆಲಿ ಬತ್ತು. ಲೇಖನ ಒಳ್ಳೆದಿದ್ದು. ಸಂಧ್ಯಾ ವಂದನೆ ಮಾಡಿರೆ ಬೇರೆ ಎಂತ ಬೇಡ ಹೇದು ಎನ್ನ ಅಪ್ಪ ಚೌರ್ಕಾಡು ಕೃಷ್ಣ ಭಟ್ ಜೋಯಿಶರು ಹೇಳುಗು. ಆದು ಅಪ್ಪು.

  2. ಶುದ್ದಿ ಹಳತ್ತಾದರೂ ವಿಷಯ ಹಳತ್ತಪ್ಪಲಿಲ್ಲೆ ಹೇಳ್ವದಕ್ಕೆ ಈ ಕುಮಾರನಾಂಗಿದ್ದ ಓದುಗರೇ ಸಾಕ್ಷಿ.

  3. ವಿಜಯತ್ತೆ, ಕಾರ್ಯಕ್ರಮಕ್ಕೆ ಹೋದ ಹಾಂಗೇ ಆತು ವರದಿಲಿ. ಚೊಕ್ಕ ಆಯಿದು.
    ‘ಮಿಠಾಯಿ’ ಚೀಪೆ ಇಪ್ಪದು ನಿಂಗೊ ಹೇಳಿ ಅಂದಾಜು ಆತು. ಇನ್ನು ಓದಿ ನೋಡಿ ಆಯೆಕ್ಕಷ್ಟೇ.
    ವರದಿಲಿ ಬಳ್ಳಮೂಲೆ ಮಾವ ಬರದ ಪಾಠ ನಿಂಗೊ ಹಾಕಿದರೂ ಅವರ ಗಟ್ಟಿ ಸೊರಲ್ಲಿ ಕೇಳಿದ ಹಾಂಗೇ ಆತು. ಕೊಶೀ ಆತು.

  4. ಚೆನ್ನೈಭಾವ, ಇಷ್ಟು ದಿನವೂ ಬಯಲಿಂಗಿಳಿಯದ್ರೆ ಅಸಕ್ಕಾವುತ್ತಿಲ್ಯೊಪ್ಪಾ ಇಲ್ಲಿ ಬೆಳದ ಬೆಳೆಯ ನೋಡೆಡದೋ!?

    1. ಬೈಲ ಕರೇಲಿಯೇ ನಿತ್ಯ ಹೋವ್ಸು. ಒಪ್ಪ ಕೊಡ್ತರ್ಲಿ ಎಂಸೋ ತಟಪಟ ಆಗಿತ್ತು ಸುಮಾರು ಸಮಯಂದ . ನಿನ್ನೆ ಕಂಪ್ಲೀಟ್ರು ಉಡುಗಿ ಉದ್ದಿ ಮಾಡಿದ ಮತ್ತೆ ಸರಿ ಆತಟ್ಟೇ.

  5. ಒಪ್ಪ . ಅತ್ಯುಪಯುಕ್ತ ಕಾರ್ಯಕ್ರಮ ಆತು

  6. ಗೋವಿಂದಣ್ಣ ಹೇಳಿರೆ ಒಂದು ಉಲ್ಲೇಖ ವಿಭಾಗವೆ.ಅವ್ವಿದ್ದಲ್ಲಿ ವಿಷಯಕ್ಕೆ ಕೊರತ್ತೆ ಇಲ್ಲೆ.ಯಾವದರ ಬಗ್ಗೂ ಅಧಿಕಾರಯುತವಾಗಿ ಮಾತಾಡ್ತ ಯೋಗ್ಯತೆ ಇಪ್ಪವು.ಹರೇ ರಾಮ.ಅವರಿಂದ ಸಮಾಜಕ್ಕೆ ಇನ್ನು ಹೆಚ್ಚು ವಿಷಯಂಗೊ ತಿಳಿತ್ತ ಹಾಂಗಾಗಲಿ.

  7. ಹೂಂ, ಅಪ್ಪು. ಓದುವಾಗ ಸರಿ ಮಾಡಿಯೊಂಡು ಓದಿದ್ರಾತು.

  8. ಮೇಲೆ ಆನು ಬರದ ಶಬ್ದ *ಬಯಲಿನ ಗುರಿಕ್ಕಾರ* ಒಪ್ಪಣ್ಣ ಆಯೆಕ್ಕು.. ಗಿರಿಕ್ಕಾರ ಅಲ್ಲ. ತಪ್ಪಿಹೋತು ಟೈಪ್ ಮಾಡುವಾಗ .

  9. ಅದಪ್ಪು ಶೀಲಾ, ಮುನ್ನಾ ದಿನ ನೀನೆನ್ನತ್ರೆ “ಮುನ್ನುಡಿ ಬರದ ನಿಂಗೊಗೆ ಪುಸ್ತಕ ಪೋಸ್ಟ್ ಮಾಡಿದ್ದೆ” ಹೇಳುವಗ. ಅಂಬಗ ಬಿಡುಗಡೆ ಕಾರ್ಯಕ್ರಮ ಬೇಡದೋ ಕೇಳಿ,ಹೀಂಗೊಂದು ಎರೇಂಜ್ ಮೆಂಟ್ ಮಾಡಿದೆ ಅಲ್ಲೊ! ಇದೆಲ್ಲಾ ಗುರುಕಾರುಣ್ಯವೇ ..

  10. ವರದಿ ಭಾರೀ ಪಷ್ಟಾಯಿದು ವಿಜಯಕ್ಕ. ಮತ್ತೇ ಕಲ್ಪನೆಯೇ ಇಲ್ಲದ್ದೆ ಆ ಶಿಬಿರಲ್ಲಿ ಭಾಗವಹಿಸುತ್ತ ಹಾಂಗಾದ್ದದೂ ಮಿಠಾಯಿ ಅಲ್ಲಿ ಹಂಚಲೆ ಎಡಿಗಾದ್ದದೂ ಎನ್ನ ಸುಯೋಗ ಹೇಳಿಯೇ ಗ್ರೇಶುತ್ತೆ .

  11. ಇಂದು ಮಕ್ಕಳ ಹಬ್ಬ(ಕುಂಬಳೆ ಸೀಮೆಲಿ ಈ ದಿನವ ಹೀಂಗೆ ಉಲ್ಲೇಖ).ವಿದ್ಯಾರ್ಥಿಗೊ ಹೇಳಿರೆ ಮಕ್ಕೊ. ಈ ವಿದ್ಯಾರ್ಥಿವಾಹಿನಿ ಶುದ್ದಿಯ ಇಂದೇ ಬಯಲಿಂಗೆ ಬೀಳುತ್ತಾಂಗೆ ಮಾಡಿದ, ಬಯಲಿನ ಗಿರಿಕ್ಕಾರ ಒಪ್ಪಣ್ಣಂಗೆ, ಪ್ರಕಟ ಆದ ಸಕಾಲಲ್ಲೇ ಓದಿ, ಎನಗೆ ಸಕಾಯ ಮಾಡಿದ; ಒಪ್ಪಣ್ಣ ಬಯಲಿನ ಅಧ್ಯಕ್ಷರಾದ ಶರ್ಮಪ್ಪಚ್ಚಿ (ಎನಗೆ ಭಾವ) ಗೆ ಮನದಾಳದ ಧನ್ಯವಾದ.

  12. ಒಂದೊಳ್ಳೆ ಕಾರ್ಯಕ್ರಮ ಅಯೋಜಿಸಿದ ಸಂಘಟಕರಿಂಗೂ,ಶಾಲೆಯ ಆಡಳಿತ ಮಂಡಳಿಯವಕ್ಕೂ , ಬಳ್ಳಮೂಲೆ ಅಣ್ಣಂಗೂ ಧನ್ಯವಾದಂಗೊ.
    ಹೀಂಗಿಪ್ಪ ಕಾರ್ಯಕ್ರಮಂಗೊ ನಮ್ಮ ಮಕ್ಕೊಗೆ ಅಗತ್ಯ ಇದ್ದು.
    ವಿವರವಾದ ವರದಿ ಬರದು, ನಮ್ಮ ಸಂಘಟನೆ ಬಗ್ಗೆ ಮಾಹಿತಿ ಒದಗಿಸಿದ ವಿಜಯತ್ತಿಗೆಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×