Oppanna.com

“ಹುಟ್ಟು ಗುಣ ಗಟ್ಟ ಹತ್ತಿರೂ ಹೋಗ”-(ಹವ್ಯಕ ನುಡಿಗಟ್ಟು-82)

ಬರದೋರು :   ವಿಜಯತ್ತೆ    on   02/04/2017    2 ಒಪ್ಪಂಗೊ

ಹುಟ್ಟುಗುಣ ಗಟ್ಟ ಹತ್ತಿರೂ ಹೋಗ-(ಹವ್ಯಕ ನುಡಿಗಟ್ಟು-82)

“ಅರುಣಕ್ಕ ಅಮೇರಿಕಂದ ನಿನ್ನೆ ಬಯಿಂದಾಡ. ಅದರ ಮಗ ಆಚಕರೆ ತೋಟಂದ ದೆನಿಗೇಳಿದಾಳಿ; ತೋಡಿಂಗೆ ವಸ್ತ್ರ ಒಗವಲೆ ಹೋದೋಳು ಆಚಕರಗೆ ಮೇಗೆ ಹತ್ತಿ ಮಾತಾಡಿಕ್ಕಿ ಬಂದೆ ಅತ್ತೆ. ಅದಿತಿಗೆ,ಸೊಸೆ ವಾರುಣಿಯ ಹೊಸ ಶುದ್ದಿ ಸಿಕ್ಕಿತ್ತು.

“ಅಪ್ಪೊ, ಎಂತಾಡ ಅದರ  ವಿಶೇಷ ವರ್ತಮಾನಂಗೊ?. ಅಮೇರಿಕಲ್ಲಿ ಹೇಂಗಾವುತ್ತಾಡ?.” ಅದಿತತ್ತೆಯ ಕುತೂಹಲ!.

“ಅಮೇರಿಕದ ಶುದ್ದಿ ಹೇಳಿ ಮುಗಿಯ,ಆಚಕರೆ ಅಣ್ಣ ಆಸರಿಂಗೆ ಕೊಂಡಾಳಿ ಹೇಳಿದ್ದೂ ಅದಕ್ಕೆ ಕೇಪಿದ್ದಿಲ್ಲೆ. ಆನು ಕೇಳಿದ್ದಕ್ಕೆ ಒಂದಕ್ಕೂ ಉತ್ತರ ಇಲ್ಲೆ. ಅದುವೇ ವೀಡಿಯೋ ಸ್ವಿಚ್ ಹಾಕಿದಾಂಗೆ ಹೇಳೆಂಡು ಹೋವುತ್ತು. ಅಲ್ಲಿಗೆ ಹೋಗೆಂಡು ಬಂದಪ್ಪಗ ಅದು ಬದಲಕ್ಕು ಜಾನ್ಸಿದ್ದೆ ಅತ್ತೆ. ಆದರೆ ಅದರ ಮದಲಾಣ ಅಭ್ಯಾಸ ಬಿಟ್ಟಿದಿಲ್ಲೆ!!.”

“ ಅಯ್ಯೋ ನಿನ ಪೊಡುಂಬು. ಹುಟ್ಟುಗುಣ ಗಟ್ಟ ಹತ್ತೀರೂ ಹೋಪಲಿದ್ದೊ? ಹೇಳುಗು ಮದಲಾಣವು. ಹಾಂಗೇ ಸಮುದ್ರ ಹಾರಿ ಬೇರೆ ದೇಶಕ್ಕೆ ಹೋಗಿ ಬಂದರೂ ಹುಟ್ಟುಗುಣ ಬಿಟ್ಟು ಹೋಗ ಮಿನಿಯಾ”.

ಅದಪ್ಪು ಈ ಅತ್ತೆ-ಸೊಸೆ ಮಾತಾಡಿದಾಂಗೆ,ಕೆಲವು ಜೆನಕ್ಕೆ, ವಿದ್ಯೆಲಿ ಸುಧಾರಣೆ ಆದರೂ ವಿಚಾರಲ್ಲಿ ಬದಲೊವು. ಮನುಷ್ಯರ ಸ್ವಭಾವ, ಗುಣನಡತೆ ಬದಲಾಗ. ಈ ಗಾದೆ ಮಾತುಗೊಲ್ಲ ಮದಲಾಣವರ ತಲೆ ತಲಾಂತರದ ಅನುಭವದ ಮಾತುಗೊ.

——–೦——–

2 thoughts on ““ಹುಟ್ಟು ಗುಣ ಗಟ್ಟ ಹತ್ತಿರೂ ಹೋಗ”-(ಹವ್ಯಕ ನುಡಿಗಟ್ಟು-82)

  1. ಎಲ್ಲಿಹೋದರೂ ನಿಜ ಸ್ವಭಾವ ಬಿಟ್ಟುಹೋಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×