- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
-“ಅಕ್ಕᵒ ಬಂದರೂ ಅಕ್ಕಿ ಹಾಕದ್ದೆ ಅಶನ ಆಗ”-(ಹವ್ಯಕ ನುಡಿಗಟ್ಟು-84)
ಮದಲಿಂಗೆ ಎಲ್ಲಾ ಮನೆಗಳಲ್ಲೂ ಅಶನದ, ತಿಂಡಿಯ ಅಕ್ಕಿ, ಹಾಲು-ಮಜ್ಜಿಗೆ ವ್ಯವಹಾರ, ಉಪ್ಪಿನಕಾಯಿ ವ್ಯವಸ್ಥೆ, ಇದೆಲ್ಲ ಅತ್ಯೋರಕ್ಕಳ ಮೇಲ್ತನಿಕೆಲಿಪ್ಪದು(ಈಗಳೂ ಕೆಲವುದಿಕೆ ಇದ್ದು).ಹೀಂಗಿಪ್ಪಗ ಆದ ಪ್ರಸಂಗ ಇದು.
ಸೊಸೆಃ-“ಇಂದು ಅಶನಕ್ಕೆ ಅಕ್ಕಿಎಷ್ಟು ಮಡಗೆಕ್ಕತ್ತೆ?”
ಅತ್ತೆಃ-ನಿನ್ನೆಯಾಣಷ್ಟೇ ಸಾಕು ಕೂಸೆ…, ಹಾಂ, ನಿನ್ನ ಅಕ್ಕᵒ ಬತ್ತೂ ಹೇಳಿದ್ದೆಲ್ಲೊ, ಒಂದು ಪಾವು ಹೆಚ್ಚಿಗೆ ಹಾಕಿಕ್ಕು ಕೂಸೇ
ಸೊಸೆಃ-ಎನ್ನ ಅಕ್ಕᵒ ಬತ್ತೂಳಿ ಹೆಚ್ಚಿಗೆ ಹಾಕೆಕ್ಕೂಳಿಲ್ಲೆ ಅತ್ತೆ. ಅದಕ್ಕೆ ದಣಿಯ ಬೇಡತ್ತೆ!
ಅತ್ತೆಃ-ಅಕ್ಕᵒ ಬಂದರೂ ಅಕ್ಕಿ ಹಾಕದ್ದೆ ಅಶನ ಆಗ ಕೂಸೇ.
ಆರು ಬಂದರೂ ಅಕ್ಕಿ ಹಾಕಲೇ ಬೇಕನ್ನೆ ಅಶನ ಆಯೆಕ್ಕಾರೆ!. ಮತ್ತೆ ಇಲ್ಲಿ ಅಕ್ಕನ ಪ್ರಸ್ತಾಪ ಎಂತಕಪ್ಪ ಕೇಳುತ್ತೀರೊ?. ನಮ್ಮಲ್ಲಿ ದಿನನಿತ್ಯದ ಅಶನಕ್ಕೆ ಅಕ್ಕಿ ಹಾಕುದು ಹೆಮ್ಮಕ್ಕೊ. ಅವಕ್ಕೆ ಅಕ್ಕᵒ ಹೇಳಿರೆ; ಬಹು ಪ್ರೀತಿಪಾತ್ರದ ಜೆನ.ಅದು ಬಂದರೆ ಖರ್ಚಾಗ,ಮುಗಿಯ ಹೇಳುವ ಭಾವನೆ.ಈ ಭಾವನೆ ಅವಕ್ಕಿದ್ದರೆ….,ಅವರ ಮನೆವಕ್ಕೆ, ಅತ್ಯೋರಿಂಗೆ, ಇರೆಕನ್ನೇ!. ಹಾಂಗಾಗಿ ಈ ಗಾದೆ ಉಂಟಾತು. ಎಂತ ಹೇಳ್ತಿ?
————೦————
೧.ಆರು ಬಂದರೂ ಮಾಡೆಕಾದ್ದರ ಮಾಡಿರೆ ಮಾತ್ರ ಕೆಲಸ ಅಕ್ಕಷ್ಟೆ.
೨.ಬಪ್ಪದು ಯಾರಾದರೂ ಮನೆಯವಕ್ಕೆ ಕರ್ಚಿ ಇದ್ದೇ ಇದ್ದು. ಧರ್ಮಕ್ಕೆ ಏವದೂ ಆಗ.
೩.ಮನೆಗೆ ಊಟಕ್ಕೆ ಬೇರೆಯವು ಬಂದರೆ ಕರ್ಚಿ ಆವುತ್ತು,ಅಕ್ಕ ಬಂದರೆ ಸಾರ ಇಲ್ಲೇ ಹೇಳುವ ಜನಂಗೊಕ್ಕೆ ಭೇದ ಭಾವ ತಪ್ಪು ಹೇಳಿ ಗೊಂತಾಯೆಕ್ಕು.
—ಹೀಂಗೆ ಅರ್ಥ ಮಾಡಿರೆ ಹೆಂಗೆ ಚಿಕ್ಕಮ್ಮ ?
ಮಾಡೆಕ್ಕಾದ ಕಾರ್ಯ ಮಾಡದ್ದರೆ ಫಲ ಸಿಕ್ಕ ಹೇಳಿಯೂ ಅರ್ಥೈಸಲೆ ಅಕ್ಕು ಅಲ್ಲದಾ
ಶೀಲಾ ನಿನ್ನಾಂಗಿದ್ದ ತಂಗೆಕ್ಕೊ ಎತ್ತಿಕೊಡುವ ಪ್ರೋತ್ಸಾಹಂದಲೇ ಆನು ಇಷ್ಟಾದರೂ ಬರವಲೆಡಿಗಪ್ಪದು.ಆಸ್ವಾದಿಸುವ ಓದುಗರು ಸಿಕ್ಕೀರೆ ತಾನೇ ಬರವವಕ್ಕೆ ಬರವಲೆ ಉಮೇದು ಬಪ್ಪದಲ್ಲೊ ಶೀಲಾ?
ಹರೇ ರಾಮ ವಿಜಯಕ್ಕಾ, ಬೈಲಿಂಗೆ ಬಾರದ್ದೆ ಹಸಕ್ಕವೆ ಹಿಡಿದು ಹೋಗಿತ್ತಿದ್ದು. ನಿಂಗಳ ಗಾದೆ ಮಾತು ಓದಿಯಪ್ಪಗ ಖುಷಿ ಆತು. ಆನು ಈ ಗಾದೆ ಸುರೂ ಕೇಳಿದ್ದದು. ಅಂತೂ ನಿಂಗಳ ಬರವಣಿಗೆಂದ ಎನ್ನ ತಿಳುವಳಿಕೆ ಹೆಚ್ಚಾದ ಹಾಂಗಾತು.
Gade hange vevechane ollediduu.
ಪ್ರಕಾಶ ಬಯಲ್
ಪ್ರಕಾಶ, ಹೀಂಗೆ ಒಂದೊಂದಾರಿ ಬಯಲಿಂಗೆ ಬಂದು ಅಲ್ಲಿಯ ಕೃಷಿ ಅವಲೋಕನ ಮಾಡೆಕ್ಕಪ್ಪ.
ಪ್ರಕಾಶ, ಹೀಂಗೆ ಒಂದೊಂದಾರಿ ಬಯಲಿಂಗೆ ಬಂದು ಅಲ್ಲಿಯ ಕೃಷಿ ಅವಲೋಕನ ಮಾಡೆಕ್ಕಪ್ಪ.
ಬೊಳುಂಬು ಗೋಪಾಲಣ್ಣನ ಚಿಂತನೆಯ ಅಲ್ಲ ಹೇಳಿ ತಟ್ಟಿಕಳವಲೆಡಿಯ, ಆದರೆ ಎನ್ನಬ್ಬೆ, ಅತ್ತೆ ಎಲ್ಲೋರು ನೆಂಟ್ರು ಆರಾರು ಬಪ್ಪಲಿದ್ದರೆ; ಅಕ್ಕಿ ಅಳವಗ “ದಣಿಯ ಬೇಡದಾಯಿಕ್ಕು” ಹೇಳಿಯೊಂಡು; ಅಕ್ಕಿ ಮಡುಗದ್ದೆ ಅಶನಕ್ಕೋ ಹೇಳುಸ್ಸು ಕೇಳಿದ್ದೆ. ಇಲ್ಯಾಣ ವಿವರಣೆ, ಸಂದರ್ಭ ಎನ್ನದು.
ವಿಜಯಕ್ಕ ಚೆಂದಕೆ ವಿವರಿಸಿದ್ದವು. ಎನ್ನ ಅಂದಾಜಗೆ ಅಕ್ಕನ ಇಲ್ಲಿ ಪ್ರಾಸಕ್ಕೆ ಬೇಕಾಗಿ ತೆಕ್ಕೊಂಡದಾಯ್ಕು. ಅಕ್ಕಿ ಇಲ್ಲದ್ದೆ ಅನ್ನ ಆಗ ಹೇಳುವ ಉದ್ದೇಶಲ್ಲಿ ಈ ಮಾತು ಬಂದದಾಯಿಕ್ಕು. ಬೇರೆ ಯಾವ ಸಾಮಾನು ಬೇಯಲೆ ಹಾಕಿರೂ ಅಶನ ಆಗ ಹೇಳುವ ಅಭಿಪ್ರಾಯ ಆಯಿಕ್ಕೊ ವಿಜಯಕ್ಕ ?