ಅಕ್ಕನ ಮದುವೆ ಕಳುದ ಮತ್ತೆ ಸುಶೀಲಂಗೆ ಆನು ತುಂಬ ಚೆಂದ ಇದ್ದೆ ಹೇಳಿ ಸರಿಯಾಗಿ ಗೊಂತಾತು.ಮದುವೆ, ಸಟ್ಟುಮುಡಿಲೆಲ್ಲ ಅತ್ತಿತ್ತೆ ಓಡೋಡಿ ಸುಧರಿಕೆ ಮಾಡಿದ ಅದರ ತುಂಬಾ ಜೆನ ಹೊಗಳಿದ್ದವು ಕೂಡ.
ಹಾಂಗಾಗಿ ಶಾಲಗೆ ಹೋಪಗಳೂ ರಜ ಹೆಚ್ಚಿಗೆ ಅಲಂಕಾರ ಮಾಡ್ಲೆ ಸುರು ಮಾಡಿತ್ತು. ಈಗ ಮದ್ಲಾಣಾಂಗೆ ಅಪ್ಪ° ಶಾಲಗೆ ಬಿಡುದಲ್ಲ.ಅದುವೇ ಜತೆಕ್ಕಾರ್ತಿಗಳೊಟ್ಟಿಂಗೆ ಬಸ್ಸಿಲ್ಲಿ ಹೋಗಿ ಬಪ್ಪದು. ಶಾಲಗೆ ಹೋಪಗ ಬಸ್ಸಿಂಗೆ ಪೈಸೆ, ಅದೂ,ಇದೂ ಹೇಳಿ ಅಪ್ಪನ ಕೈಂದ ರಜ ಹೆಚ್ಚಿಗೇ ಪೈಸೆ ಪೀಂಕುಸುವ ಜಾಣೆ ಅದು. ಮೋರಗೆ ಪೌಡರು,ಕ್ರೀಮು,ಕೈ ,ಕಾಲಿಂಗೆ ಬಣ್ಣ ಬಣ್ಣದ ಟೂಟೆಕ್ಸು ,ಹಾಕುವ ಅಂಗಿಯದ್ದೇ ಬಣ್ಣದ ಮೋರಗೆ ಅಂಟುಸುವ ಬೊಟ್ಟು, ಬೇರೆ ಬೇರೆ ನಮೂನೆಯ ಕ್ಲಿಪ್ಪುಗೊ ಎಲ್ಲವೂ ಅದರ ಸಂಗ್ರಹಲ್ಲಿದ್ದು.
“ಅಂತೇ ಪೈಸೆ ಹಾಳು ಮಾಡ್ಲಾಗ ಮಗಳು” ಹೇಳಿ ಒಂದು ಮಾತು ಹೇಳಿಕ್ಕಿಯೇ ಚಂದ್ರಣ್ಣ ಪೈಸೆ ಕೊಡುದು.ಅಂದರೂ ಶಾಲಗೆ ಹೋಪ ಕೂಸುಗೊಕ್ಕೆ ಬೇರೆಂತಾರು ಅಗತ್ಯ ಇಕ್ಕು ಹೇಳಿ ರಜ ಹೆಚ್ಚಿಗೇ ಕೊಡುಗು.ಸಾಲದ್ದಕ್ಕೆ ಸಣ್ಣ ಮಗಳು ಹೇಳಿ ರಜ ಕೊಂಗಾಟ ಹೆಚ್ಚು. ಈಗಂತೂ ಶೈಲನೂ ಇಲ್ಲದ್ದ ಕಾರಣ ಎಲ್ಲಾ ಪ್ರೀತಿಯೂ ಸುಶೀಲಂಗೇ.ಹಾಂಗಾಗಿ ಮನೆಯ ರಾಜಕುಮಾರಿ ಅದು.
ಶೈಲನ ರಿಸಲ್ಟು ಬಂದಪ್ಪಗ ಅದಕ್ಕೆ ವಿಶ್ವವಿದ್ಯಾಲಯ ಮಟ್ಟಲ್ಲಿ ಎರಡನೇ ರೇಂಕು ಬಂತು.ಮುಂದೆ ಕಲಿಯೆಕು ಹೇಳಿ ಆಶೆ ಇದ್ದರೂ ಆರತ್ರೂ ಕೇಳುವ ಧೈರ್ಯ ಅದಕ್ಕಿತ್ತಿದ್ದಿಲ್ಲೆ.ಆದರೆ ಅದರ ಮನೆಯವು ವಿದ್ಯಾವಂತರು. ಅತ್ತೆ,ಮಾವ° ಸೊಸೆಯ ಮನಸ್ಸು ಅರ್ಥ ಮಾಡಿಕೊಂಡವು. ಶೈಲಂಗೆ ಟೀಚರಾಯೆಕೂಳಿ ಮದಲಿಂದಲೂ ಆಶೆಯಿದ್ದದು.ಹಾಂಗೆ ಅದು ಬಿ.ಎಡ್ ಕಲಿವಲೆ ಸೇರಿತ್ತು.
“ಮದುವೆ ಕಳುದ ಮತ್ತೆ ಲಾಯ್ಕ ಮನೆಲಿಪ್ಪದು ಬಿಟ್ಟಿಕ್ಕಿ ಪುನಾ ಕಲಿವದೆಂತಕೆ? ಆನಾದರೆ ಸುಮ್ಮನೇ ಮನೆಲಿ ಕೂರ್ತಿತೆ” ಅಕ್ಕ° ಬಿ.ಎಡ್ ಕಲಿವಲೆ ಸೇರ್ತೆ ಹೇಳಿಯಪ್ಪಗ ಸುಶೀಲ ಹೇಳಿತ್ತು. ತಂಗೆಯ ಮಾತು ಕೇಳಿ ಅಪ್ಪನಮನೆಗೆ ಬಂದ ಶೈಲಂಗೆ ನೆಗೆ ಬಂತು
“ಆತಪ್ಪಾ, ನಿನ್ನ ಮದುವೆ ಕಳುದ ಮತ್ತೆ ನೀನು ಹಾಂಗೇ ಮಾಡು,ಕಲಿಯೆಡ,ನಾಲ್ಕೈದು ಮಕ್ಕಳು ಆಗಲಿ ನಿನಗೆ, ಅವರನ್ನು ನೋಡ್ಯೊಂಡು ಮನೆಲಿ ಹಾಯಾಗಿ ಅಡಿಗೆ ಮಾಡಿಂಡು ಕೂರು”
“ಅದಕ್ಕೆಲ್ಲ ಎನ್ನ ಸಿಕ್ಕ,ಎನಗೆ ಬೇಕಾದಾಂಗೆ ಮಾಡುವೆ ಆನು, ಎನ್ನ ಮನಸಿಂಗೆ ಕೊಶಿ ಕಂಡವರ ಮಾಂತ್ರ ಆನು ಮದವೆಪ್ಪದು.ನಿನ್ನ ಹಾಂಗೆ ಅಪ್ಪ° ಒಳ್ಳೆಯವೂಳಿ ಹೇಳಿದ್ದವು, ಅವನನ್ನೇ ಆವ್ತೆ’ ಹೇಳಿ ದೊಡ್ಡ ತ್ಯಾಗಮಯಿ ಅಪ್ಪಲಿಲ್ಲೆ”
“ಆತಪ್ಪಾ, ಎನಗೆ ನಿನ್ನಷ್ಟೆಲ್ಲ ಗೊಂತಿಲ್ಲೆ, ನೀನು ಹೇಂಗೆ ಬೇಕಾರು ಇರು, ಬೇಕಾರೆ ಒಂದು ಸ್ವಯಂವರ ಮಾಡ್ಲೆ ಹೇಳ್ತೆ ಅಪ್ಪನತ್ರೆ.ಸುಶೀಲಾ ಸ್ವಯಂವರ ಹೇಳಿ, ಬೇರೆ ಬೇರೆ ಊರಿನ ಚೆಂದ ಚೆಂದದ ಮಾಣಿಯಂಗೊ ಬಕ್ಕದಾ ನಿನ್ನ ಮದುವೆಪ್ಪಲೆ, ಅಷ್ಟಪ್ಪಗ ಆರ ಕೊರಳಿಂಗೆ ಮಾಲೆ ಹಾಕುದು ಹೇಳಿ ನಿನಗೇ ತಲಗೆ ಹೋಗ.ಹ್ಹ..ಹ್ಹ..” ಶೈಲ ತಮಾಶೆ ಮಾಡಿತ್ತು.
“ಅಕ್ಕಕ್ಕು, ನೀನೇ ಹೇಳು ಅಪ್ಪನತ್ರೆ.ಆನು ಎನಗೆ ಬೇಕಾದವನ ಹುಡುಕ್ಕಿಕೊಂಬೆ” ಸುಶೀಲ ಬಿಟ್ಟು ಕೊಟ್ಟಿದಿಲ್ಲೆ
“ಕಾಶೀರಾಜ ಸ್ವಯಂವರ ಮಾಡಿ ಎಂತಾಯಿದು? ಅಜ್ಜಿ ಹೇಳುವ ಅಂಬೆಯ ಕತೆ ಗೊಂತಿಲ್ಯಾ? ಆರನ್ನೋ ಪ್ರೀತಿಸಿತ್ತು,ಇನ್ನಾರೋ ಅಪಹರಣ ಮಾಡಿದವು,ಮದುವೆ ಆಯೆಕಾದ್ದು ಮತ್ತೊಬ್ಬನ ಹೇಳಿಯಪ್ಪಗ.. .ಅದರ ಎಲ್ಲವನ್ನೂ ಬಿಟ್ಟಿಕ್ಕಿ ಬಂತು. ಅಂದರೂ ಅಕೇರಿಗೆ ಅದಕ್ಕೆ ಆರಿತ್ತಿದ್ದವು? ಬರೀ ಬೆಗುಡಿನ ಹಾಂಗೆ ಆಲೋಚನೆ ಮಾಡ್ಲಾಗ,ಇನ್ನು ನೀನು ಬರೀ ಸಣ್ಣಲ್ಲ, ಒಟ್ಟಾರೆ ಏನೇನೋ ಹೇಳ್ಲೆ”
“ಅದೆಲ್ಲ ಬರೀ ಪುರಾಣ ಬಿಡು, ಎನಗದೆಲ್ಲ ಕೇಳೆಡ, ನೀನು ರಾಮಾಚಾರಿ ಸಿನೆಮಾದ ಪದ್ಯ ಕೇಳಿದ್ದೆಯಾ? ‘ಆಕಾಶದಾಗೆ ಯಾರೋ ಮಾಯಗಾರನೂ’ ಸೂಪರ್ ಇದ್ದು.”
“ಎಂತರ ಮಕ್ಕಳೇ ನಿಂಗಳ ಪಟ್ಟಾಂಗ? ಅದು ಅಪ್ಪನಮನೆಗೆ ಅಪರೂಪಕ್ಕೆ ಬಂದಿಪ್ಪಗ ಅಂತೇ ಚರ್ಚೆ ಮಾಡೆಡ ಸುಶೀ..ಮದ್ಲಾಣಾಂಗಲ್ಲ ಅದೀಗ….” ಶಾರದೆಗೆ ಇವರ ಚರ್ಚೆ ಎಂತಕೇಳಿ ಗೊಂತಾಯಿದಿಲ್ಲೆ.
“ಬಿಡಬ್ಬೇ..ಎಂಗೊಗೆಂತ ಚರ್ಚೆ ಇಲ್ಲೆ.ಈ ವರ್ಷ ಹತ್ತನೇ ಕ್ಲಾಸು,ಸರೀ ಕಲಿ ಹೇಳುದು ಅದರತ್ರೆ” ಶೈಲ ವಿಷಯ ಜಾರ್ಸಿತ್ತು.
“ಅದೇ.. ಆನೂ ಅದನ್ನೇ ಹೇಳುದು,ನಿಂಗೊ ಆದರೆ ಇಬ್ರು ಒಂದೇ ಕ್ಲಾಸಾದ ಕಾರಣ ಅತ್ಲಾಗಿತ್ಲಾಗಿ ಮಾತಾಡಿಂಡು ಕಲಿವಲೆ ಸುಲಭಾಗಿಂಡಿದ್ದತ್ತು.ಇದಕ್ಕೆ ಹೆಚ್ಚು ಕಲಿವಲೂ ಮನಸ್ಸಿಲ್ಲೆ, ಎನಗೆ ಹೇಳಿ ಕೊಡ್ಲೂ ಅರಡಿತ್ತಿಲ್ಲೆ. ಸರೀ ಆಯಿದು” ಶಾರದೆಗೆ ಆ ವಿಷಯಲ್ಲಿ ರಜ ಬೇಜಾರವೇ.
“ಆತಪ್ಪಾ, ಆನು ಓದುತ್ತೆ.ದೊಡ್ಡ ದೊಡ್ಡ ರೇಂಕು ಬಂದ ಇದರ ಮುಂದೆ ಎನ್ನ ಎಂತಾರು ಹೇಳಿ ತಮಾಶೆ ಮಾಡೆಕೂಳಿಲ್ಲೆ” ಸುಶೀಲಂಗೆ ಅಬ್ಬೆಯ ಮಾತು ಕೇಳಿ ರಜ ಕೋಪವೇ ಬಂತು.
“ಇದರತ್ರೆ ಮಾತಾಡ್ಲೆಡಿವಲಿಲ್ಲೆ ಶೈಲಾ..ಹೀಂಗಿದಾ.ಎಂತ ಹೇಳಿರೂ ದೊಡ್ಡಕೆ ಬೊಬ್ಬೆ ಹಾಕಿರೆ ಮುಗುತ್ತದಕ್ಕೆ. ಇನ್ನೀಗ ಹಟ್ಟಿ ಹೊಸತ್ತು ಕಟ್ಲೆ ಹೆರಟಿದವು ಅಪ್ಪ°. ಈ ಆಳುಗಳ ಗೌಜಿಲಿ ಅದರ ತಲೆಲಿ ಹೊರ್ಲೆ ಪುರ್ಸೊತ್ತೂ ಸಿಕ್ಕ….!! ಎಂತ ಮಾಡ್ತೋ,ಕಲಿತ್ತೋ ದೇವರಿಂಗೇ ಗೊಂತು” ಶಾರದೆ ಹಾಂಗೆ ಹೇಳಿಂಡು ಒಳಾಣ ಕೆಲಸಕ್ಕೆ ಹೋತು.
ಬಿ.ಎಡ್ ಕೋಲೇಜಿಂಗೆ ಸೇರುವ ಮದಲೇ ನಾಲ್ಕು ದಿನ ಅಪ್ಪನಮನೆಗೆ ಬಂದು ಕೂದ ಶೈಲನ ಕ್ಲಾಸು ಸುರುವಪ್ಪಲಪ್ಪಗ ಅದರ ಮನಗೆ ಕರಕ್ಕೊಂಡು ಹೋಗಿ ಬಿಟ್ಟಿಕ್ಕಿ ಬಂದವು ಚಂದ್ರಣ್ಣ.
ಅವರ ಹಟ್ಟಿ ಹಳತ್ತಾಗಿ ಮಾಡೆಲ್ಲ ಕುಂಬಾದ ಕಾರಣ ಚಂದ್ರಣ್ಣ ಅದರ ರಿಪೇರಿ ಮಾಡ್ಸುದಕ್ಕಿಂತ ಹೊಸತ್ತೇ ಕಟ್ಟುವ ಅಂದಾಜಿ ಮಾಡಿದವು.ಮನೆಯ ಮತ್ತೊಂದು ಹೊಡೆಲಿಪ್ಪ ಗುಡ್ಡೆ ನೀಕ ತೆಗದು ಅಲ್ಲಿ ಕಟ್ಟಿರೆ ಮುಂದಂಗೆ ಹೊಸ ಮನೆ ಕಟ್ಟತ್ತರೆ ಅದುವೇ ಅನುಕೂಲ ಅಕ್ಕು ಹೇಳಿ ಜಾನ್ಸಿ ಆಳುಗಳ ಬಪ್ಪಲೆ ಹೇಳಿದವು. ಈ ಊರಿನ ಆಳುಗೊ ಹಾಂಗಿದ್ದ ಕೆಲಸವ ತಿಂಗಳುಗಟ್ಲೆ ಮಾಡ್ಲೆ ಒಪ್ಪಿದ್ದವಿಲ್ಲೆ.
“ಈ ಗುಡ್ಡೆ ಗರ್ಪಿ ತಟ್ಟು ಮಾಡೆಕಾರೆ ಸುಮಾರು ಸಮಯ ಬೇಕಣ್ಣಾ, ನಿಂಗೊಗೆ ತಮಿಳುನಾಡಿನ ಆಳುಗಳ ಬಪ್ಪಲೆ ಹೇಳುದೊಳ್ಳೆದು.ಅವ್ವಾದರೆ ಕೆಲಸಲ್ಲಿ ಜಲ್ದಿ.ನಿಂಗಳ ಕೊಟ್ಟಗೆಲೆಲ್ಲಾದರು ನಿಂಬಲೆ ವೆವಸ್ಥೆ ಮಾಡ್ತರೆ ಎನಗೆ ಗೊಂತಿಪ್ಪ ಒಂದು ಪಾರ್ಟಿ ಇದ್ದು.ನಾಲ್ಕೈದು ಜನ ಇಪ್ಪದು ಅವರ ಗುಂಪಿಲ್ಲಿ.ಅಡಿಗೆಯೂ ಅವ್ವೇ ಮಾಡ್ತವು.ಅವರತ್ರೆ ಹೇಳ್ತೆ” ಚಂದ್ರಣ್ಣನ ದೊಡ್ಡಪ್ಪನ ಮಗ ಗೆಣಪ್ಪ ಹೇಳಿದ°.
ಚಂದ್ರಣ್ಣಂಗೆ ಅವನ ಮಾತೇ ಸರಿ ಹೇಳಿ ಕಂಡತ್ತು. ಅಬ್ಬಗೂ ಪ್ರಾಯಾತು, ಶಾರದೆ ಒಬ್ಬನೇ ಎಷ್ಟು ಬಂಙ ಬಪ್ಪದು, ಮನೆ ಕೆಲಸಂಗೊ ಯೇವದನ್ನೂ ಬಿಡ್ಲೆ ಗೊಂತಿಲ್ಲೆ, ಕಾಯಮ್ಮಿನ ಆಳುಗೊ ಹೇಂಗೂ ಇದ್ದವು.ಕೊಟ್ಟಗೆಯ ಹಿಂದಾಣ ದೊಡ್ಡ ಕೋಣೆಯ ಅವಕ್ಕೆ ನಿಂಬಲೆ ಕೊಟ್ರಾತು ಹೇಳಿ ತೀರ್ಮಾನಕ್ಕೆ ಬಂದವು. ಕೇಶವನೂ ಇದಕ್ಕೆ ಒಪ್ಪಿದ°
“ಅಬ್ಬಗೆ ಬಂಙ ಆಗದ್ದ ಹಾಂಗಾದರೆ ಸಾಕಪ್ಪಾ°, ಈಗಳೇ ಬೊಡುದು ಹೋಯಿದು ಅಬ್ಬಗೆ.ಇನ್ನೂ ಎಷ್ಟು ಕೆಲಸ….”
ಗುಡ್ಡೆ ಗರ್ಪುವ ಕೆಲಸಕ್ಕೆ ಐದಾರು ಆಳುಗೊ ಬಂದವು.ಅವಕ್ಕೆ ಅಡಿಗೆ ಮಾಡ್ಲೆ ಒಂದು ಹೆಣ್ಣುದೆ ಇದ್ದತ್ತು.ಅದರ ಮಗನೂ ಕೆಲಸಕ್ಕೆ ಆ ಗುಂಪಿಲ್ಲಿ ಇತ್ತಿದ್ದಾಡ.ಮನೆಯ ಹಿಂದಾಣ ಕೊಟ್ಟಗೆಯ ತಲೇಲಿಪ್ಪ ಹಿಂಡಿ ಮಂಡಗೆ ಎಲ್ಲ ಮಡುಗಿಂಡಿದ್ದ ಉಗ್ರಾಣವ ಕಾಲಿ ಮಾಡಿ ಅವಕ್ಕೆ ನಿಂಬಲೆ ವೆವಸ್ಥೆ ಮಾಡಿ ಕೊಟ್ಟಾತು.
“ಮೀನು,ಮಾಂಸ ಇಲ್ಲಿ ತಪ್ಪಲಾಗ, ಇಲ್ಲಿ ಕುಡಿವಲೂ ಆಗ” ಹೇಳುವ ಒಪ್ಪಂದ ಮಾಡಿಕ್ಕಿಯೇ ಅವಕ್ಕೆ ಅಲ್ಲಿ ನಿಂಬಲೆ ಒಪ್ಪಿಗೆ ಕೊಟ್ಟದು ಚಂದ್ರಣ್ಣ.
ತಂಗಮ್ಮ ಹೇಳುವ ಒಂದು ಹೆಣ್ಣು, ಅದರ ತಮ್ಮಂದ್ರು ಎರಡು ಜೆನ,ಅವರ ಮಕ್ಕೊ ಎರಡು ಜೆನ., ತಂಗಮ್ಮನ ಮಗ ದಿನೇಸ ಹೀಂಗೆ ಇಷ್ಟು ಜೆನ ಇದ್ದದು ಅವರ ಸೆಟ್ಟಿಲ್ಲಿ.
ಕೆಲಸ ಸುರು ಮಾಡಿಯಪ್ಪಗ ಅದು ಮುರಕಲ್ಲಿನ ಜಾಗೆ.
“ಇಲ್ಲಿಂದಲೇ ಕಲ್ಲು ಕಡಿವೋ°, ಹಟ್ಟಿ ಕಟ್ಟುವಷ್ಟು ಕಲ್ಲು ಇಲ್ಲಿ ಸಿಕ್ಕುಗು” ಹೇಳಿದವು ಆಳುಗೊ.ಹಟ್ಟಿ ಕಟ್ಟುವಷ್ಟು ಕಲ್ಲು ಸಿಕ್ಕುತ್ತರೆ ಕಲ್ಲು ತರ್ಸುವ ಕೆಲಸ ಇಲ್ಲೆ ಹೇಳಿ ಚಂದ್ರಣ್ಣಂಗೂ ರಜ ನೆಮ್ಮದಿ.
ಹಾಂಗೆ ಸುಶೀಲಂಗೆ ಹತ್ತನೇ ಕ್ಲಾಸಿನ ಪಬ್ಲಿಕ್ಕು ಪರೀಕ್ಷೆ ಮುಗಿವ ದಿನ ಅವರ ಮನೆಲಿ ಕಲ್ಪಣೆ ಕೆಲಸ ಸುರುವಾತು.ಅದರ ನೋಡ್ಲೆ ನೆರೆಕರೆಯವೆಲ್ಲ ಬಪ್ಪಗ ಅವರೊಟ್ಟಿಂಗೆ ಸುಶೀಲನೂ ಅಲ್ಲಿಗೆ ಹೋಕು.ಅವರೊಟ್ಟಿಂಗೆ ಲೊಟ್ಟೆ ಪಟ್ಟಾಂಗ ಹೊಡದು ನೆಗೆ ನೆಗೆ ಮಾಡಿಂಡು ಮಾತಾಡುಗು.ಈ ಬೆಳಿ ಬೆಳಿ ಕೂಸು ಬೆಶಿಲಿಲ್ಲಿ ಕೆಂಪು ಕೆಂಪಾಗಿಂಡು ಬಂದರೆ ಭಾಮೆಯಕ್ಕ ಪುಳ್ಳಿಯ ಬೈಗು
“ಆಳುಗೊ ಕೆಲಸ ಮಾಡುವಲ್ಲಿ ಸೊಣಂಙುಲೆ ಹೋಪದೆಂತಕೆ ನೀನು? ನೇರ್ಪ ಮನೆಲಿ ಕೂದು ಅಬ್ಬಗೆಂತಾರು ಸಕಾಯ ಮಾಡ್ಲಾಗದಾ ಧಗಣೆ ನಿನಗೆ?
“ನಿಂಗೊಂದರಿ ಸುಮ್ಮನೇ ಕೂರಿಯಜ್ಜೀ.ಆನು ಹೋಪದು ನಮ್ಮ ಜಾಗೆಲಿ ಮಾಡುವ ಕೆಲಸ ನೋಡ್ಳಲ್ದಾ? ನಿಂಗೊ ಅಂತೇ ಎನ್ನ ಬೈವದೆಂತಕೇಳಿಲ್ಯಾ? ಆನಲ್ಲ ಧಗಣೆ ನಿಂಗಳೇ….” ಹೇಳಿ ಅಜ್ಜಿಯ ಬಾಯಿ ಮುಚ್ಚುಸುಗು ಸುಶೀಲ°.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 13: https://oppanna.com/kathe/swayamvara-13-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ತುಂಬಾ ಸೋಗಸಾಗಿ ಹೋವುತ ಇದ್ದೂ….
ಲಾಯ್ಕಲ್ಲಿ ಓದಿಸಿ ಕೊಂಡು ಹೋವುತ್ತಾ ಇದ್ದು. ಸುಶೀಲ ಭವಿಷ್ಯ ಗ್ರೇಶುಗ ಬೇಜಾರು ಆವುತ್ತು