Oppanna.com

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 1

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   05/09/2019    3 ಒಪ್ಪಂಗೊ

ಪರಯಿ ಪೆಟ್ಟ ಪಂದಿರುಕುಲಂ
{ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ
1


ಕೇರಳಲ್ಲಿ ಅತ್ಯಂತ ಜನಪ್ರಿಯವಾದ ಕತೆ ಇದು.ಕೊಟ್ಟಾರತ್ತಿಲ್ ಶಂಕುಣ್ಣಿ ಹೇಳುವ ವಿದ್ವಾಂಸ ಸಂಗ್ರಹಿಸಿದ “ಐತಿಹ್ಯಮಾಲಾ” ಹೇಳುವ ಪುಸ್ತಕಲ್ಲಿ ಈ ಕತೆ ತುಂಬಾ ವಿಸ್ತಾರವಾಗಿ ಇದ್ದು.

ವಿಕ್ರಮಾದಿತ್ಯನ ಮಹಾರಾಜನ ಆಸ್ಥಾನಲ್ಲಿದ್ದ ದೊಡ್ಡ ವಿದ್ವಾಂಸ ವರರುಚಿ.ಮಹಾ ಪಂಡಿತ° ಆದ ಕಾರಣ ಅವನತ್ರೆ ಮಹಾರಾಜಂಗೆ ತುಂಬಾ ಪ್ರೀತಿಯುದೆ. ಹಾಂಗಿಪ್ಪಗ ಒಂದು ದಿನ ಮಹಾರಾಜಂಗೆ ಒಂದು ಸಣ್ಣ ಸಂಶಯ ಬಂತು. ರಾಮಾಯಣದ ಇಪ್ಪತ್ನಾಲ್ಕು ಸಾವಿರ ಶ್ಲೋಕಲ್ಲಿ ತುಂಬಾ ಶ್ರೇಷ್ಠವಾದ, ಸುಂದರವಾದ ಶ್ಲೋಕ ಯಾವುದು?
ರಾಜ ಅದರ ವರರುಚಿಯತ್ರೆ ಕೇಳಿದ°.ವರರುಚಿಗೆ ಅಂಬಗಳೇ ಉತ್ತರ ಕೊಡ್ಲೆ ಎಡಿಗಾಯಿದಿಲ್ಲೆ. “ಮತ್ತೆ ಹೇಳ್ತೆ” ಹೇಳಿದ°. ಅಂದು ಮನಗೆ ಬಂದು ಇಡೀ ರಾಮಾಯಣ ಗ್ರಂಥವ ಬಿಡುಸಿ ಓದಿದ°.
“ಉಹ್ಹೂಂ….ಇದರ್ಲಿ ಯಾವ ಶ್ಲೋಕ ಹೆಚ್ಚು ಶ್ರೇಷ್ಠ? ಎಲ್ಲವೂ ಅತ್ಯುತ್ತಮವಾದ್ದದೇ ಅಲ್ಲದೋ? ಇದರ್ಲಿ ಶ್ರೇಷ್ಠ ಹೇಳಿ ಗುರ್ತಮಾಡುವ ಶ್ಲೋಕ ಯೇವದು? ”
ವರರುಚಿಗೆ ತಲಗೆ ಹೋಯಿದೇ ಇಲ್ಲೆ.ಅಂದರೂ ಮರದಿನ ಮಹಾರಾಜ ಕೇಳಿಯಪ್ಪಗ ಒಂದೆರಡು ಶ್ಲೋಕ ಹೇಳಿದ°. ರಾಜಂಗದು ಸಮದಾನ ಆಯಿದಿಲ್ಲೆ ಮಾತ್ರಲ್ಲ ಇವನತ್ರೆ ಕೋಪವೂ ಬಂತು.
“ರಾಮಾಯಣದ ಶ್ರೇಷ್ಠ ಶ್ಲೋಕವ ಗುರ್ತಮಾಡಿ ಹೇಳ್ಲೆಡಿಯದ್ದ ನೀನು ಹೇಂಗಿದ್ದ ಪಂಡಿತ°?, ಇಂದಿಂದ ನಲುವತ್ತೊಂದು ದಿನದೊಳ ನೀನು ಇದಕ್ಕೆ ಉತ್ತರ ಹೇಳದ್ರೆ ನೀನು ಈ ಆಸ್ಥಾನಕ್ಕೆ ಬಪ್ಪದು ಬೇಡ, ಎನಗೆ ನಿನ್ನ ಮೋರೆ ತೋರ್ಸುದೂ ಬೇಡ”
ವರರುಚಿಗೆ ತುಂಬಾ ಬೇಜಾರಾತು. ಆರತ್ರೆ ಕೇಳುದು? ವಿಕ್ರಮಾದಿತ್ಯನ ಆಸ್ಥಾನಲ್ಲಿಪ್ಪ ಯೇವ ಪಂಡಿತಂಗೂ ಉತ್ತರ ಗೊಂತಿಲ್ಲೇಳಿ ಆದ ಮತ್ತೆ  ಬೇರೆ ಆರಿದ್ದವು ಸಂಶಯ ನಿವಾರಣೆ ಮಾಡ್ಲೆ?….
ಇದೇ ಆಲೋಚನೆಲಿ ಅವ° ಅಲ್ಲಿ ಇಲ್ಲಿ ತಿರುಗಿದ°. ಸುಮಾರು ಜೆನ ವಿದ್ವಾಂಸರತ್ರೆ ಮಾತಾಡಿದ,°.ಆರಿಂಗೂ ಉತ್ತರ ಗೊಂತಿಲ್ಲೆ. ದಿನ ನಲುವತ್ತಾತು.ಇನ್ನೊಂದೇ ದಿನ ಇಪ್ಪದು ಉತ್ತರ ಕೊಡ್ಲೆ ಬಾಕಿ!!
ಎಡಿಯದ್ರೆ ಈ ಊರಿಲ್ಲಿ ನಿಂಬಲೆಡಿಯ, ಇಷ್ಟು ಸಣ್ಣ ಪ್ರಶ್ನೆಗೆ ಉತ್ತರ ಹೇಳ್ಲೆಡಿಯದ್ದ ಆನು ಬದ್ಕಿ ಎಂತ ಪ್ರಯೋಜನ…. ಹೀಂಗೇ ಆಲೋಚನೆ ಮಾಡಿಂಡು ನಡದ ಅವ° ಸುಮಾರು ಇರುಳಪ್ಪಗ ಒಂದು ಗೋಳೀ ಮರದ ಬುಡಲ್ಲಿ ಬಂದು ಕೂದ°.
ನಡದ ಬಚ್ಚೆಲು, ಪ್ರಶ್ನಗೆ ಉತ್ತರ ಸಿಕ್ಕದ್ದ ಬೆಚ್ಚ ಎಲ್ಲಾ ಒಟ್ಟಾಗಿ ಅವಂಗೆ ಮುಂದೆ ನಡವಲೇ ಎಡಿಯದ್ದ ಹಾಂಗಾತು.
“ವನದೇವತೆಗಳೇ ಎನ್ನ ಕಾಪಾಡೀ.ಆನಿಲ್ಲಿಯೇ ಮನುಗುತ್ತೆ” ಹೇಳಿಕ್ಕಿ ಅಲ್ಲಿಯೇ ಮನುಗಿದ ವರರುಚಿ.
ಮನುಗಿರೂ ತಲೆಬೆಶಿಲಿ ಒರಕ್ಕು ಬರೆಕನ್ನೇ….! ಅಂದರೂ ಸುಮ್ಮನೇ ಕಣ್ಣು ಮುಚ್ಚಿ ಮನುಗಿದ°.ಸುಮಾರು ಇರುಳಪ್ಪಗ ಕೆಲವು ಯಕ್ಷಿಣಿಗೊ ಆಕಾಶಲ್ಲೇ ಹಾರಿ ಬಂದು ಆ ಮರಲ್ಲಿಪ್ಪ ದೇವತೆಗಳ ದಿನಿಗೇಳಿದವು
“ಇಂದು ಈ ಊರಿಲ್ಲಿ ಒಂದು ಹೆರಿಗೆ ಇದ್ದು. ಎಂಗೊ ಅಲ್ಲಿಗೆ ಹೋವ್ತೆಯ°. ನಿಂಗಳೂ ಬನ್ನೀ. ಒಟ್ಟಿಂಗೆ ಹೋಪೋ°”
ಮರಲ್ಲಿಪ್ಪ ದೇವತೆಗೊ ಹೋಪಲೆ ಒಪ್ಪಿದ್ದವಿಲ್ಲೆ,
“ಈ ಪಾಪದ ಬ್ರಾಹ್ಮಣ ಅವನ ರಕ್ಷಣೆ ಮಾಡೆಕೂಳಿ ಎಂಗಳತ್ರೆ ಹೇಳಿದ್ದ°. ಹಾಂಗಾಗಿ ಅವ° ಏಳುವ ವರೆಗೆ ಎಂಗೊ ಇಲ್ಲಿಯೇ ಇರೆಕಾವ್ತು.ನಿಂಗೊ ಹೋಗಿ ಬಂದು ಶುದ್ದಿ ಹೇಳಿರೆ ಸಾಕು”
ವನದೇವತೆಗೊ ಎನ್ನ ರಕ್ಷಣೆಗೆ ಇದ್ದವು ಹೇಳಿ ಸಮದಾನ ಆತು ವರರುಚಿಗೆ. ಅಂದರೂ ಒರಕ್ಕು ಬಯಿಂದಿಲ್ಲೆ. ಸುಮಾರು ಉದೆಕಾಲಪ್ಪಗ ಆ ಯಕ್ಷಿಣಿಗೊ ವಾಪಾಸು ಬಂದವು. ವನದೇವತೆಗೊ ಅವರ ಮರಲ್ಲಿ ಕೂಬಲೆ ಹೇಳಿ ಹೆರಿಗೆ ಮನೆಯ ಶುದ್ದಿ ಕೇಳಿದವು.
“ಎಲ್ಲಿ ಹೆರಿಗೆಯಾದ್ದದು? ಎಂತ ಶಿಶು? ಆ ಶಿಶುವಿನ ಭವಿಷ್ಯ ಹೇಂಗಿದ್ದು?”
“ಇಂದೊಂದು ಪರವನ(ಪರಯ ) ಮನೆಲಿ ಹೆತ್ತದು, ಹೆಣ್ಣು ಶಿಶು.ಆ ಶಿಶುವಿನ ಭವಿಷ್ಯ ಮಾತ್ರ ಭಾರೀ ವಿಶೇಶ ಇದ್ದಾತ” ಯಕ್ಷಿಣಿಗಳ ಮಾತು ಕೇಳಿಯಪ್ಪಗ ವನದೇವತೆಗೊಕ್ಕೆ ಕೇಳುವ ಅಂಬ್ರೆಪ್ಪು..
“ಎಂತರ ಹೇಳಿ..ಎಂಗೊ ಶಿಶುವಿನ ನೋಡದ್ದ ಕಾರಣ ಎಂಗೊಗೆ ಗೊಂತಾಗ.ಅದು ಆರ ಮದುವೆಪ್ಪದು.ಕೇಳ್ಲೆ ಆಶೆಯಾಗಿ ತಡೆತ್ತಿಲ್ಲೆ.ಇಂದೀಗ ನಿಂಗಳೇ ಹೇಳೆಕಷ್ಟೆ”
“ಹಾ….ಹೇಳ್ತೆಯ° , ಅಂಗಲ್ಪು ಮಾಡೆಡಿ, ವಿಶೇಶ ಎಂತರಾಳಿರೆ ಆ ಮಗು ಮದುವೆಪ್ಪದಾರ ಗೊಂತಿದ್ದಾ? ದೊಡ್ಡ ಪಂಡಿತನ.ಆ ಪಂಡಿತ ಬೇರೆ ಆರೂ ಅಲ್ಲ, ನಿಂಗಳ ಬುಡಲ್ಲಿ ಮನುಗಿ ಒರಗಿದ , ರಾಮಾಯಣದ ಶ್ರೇಷ್ಠ ಶಬ್ದ “ಮಾಂ ವಿದ್ಧಿ” ಹೇಳಿ ಗೊಂತಿಲ್ಲದ್ದ ಈ ಪೆದ್ದ ಪಂಡಿತ ವರರುಚಿಯನ್ನೆ….ಹ್ಹ..ಹ್ಹ..ಎಂಗೊ ಇನ್ನು ಹೆರಡುತ್ತೆಯ°, ಉದಿಯಾಗಿಂಡು ಬಂತು,ಇನ್ನೊಂದರಿ ಕಾಂಬೊ°” ಹೇಳಿಕ್ಕಿ ಆ ಯಕ್ಷಿಣಿಗೊ ಹಾರಿ ಹೋದವು.
ವರರುಚಿಗೆ ಫಕ್ಕನೆ ಆ ಶ್ಲೋಕ ನೆಂಪಾತು.
“ರಾಮಂ ದಶರಥಂ ವಿದ್ದಿ,ಮಾಂ ವಿದ್ಧಿ ಜನಕಾತ್ಮಜಾಂ
ಅಯೋಧ್ಯಾಮಟವೀಂ ವಿದ್ಧೀ ಗಚ್ಚ ತಾತ ಯಥಾ ಸುಖಂ”
ರಾಮನೊಟ್ಟಿಂಗೆ ಕಾಡಿಂಗೆ ಹೋಪಲೆ ಹೆರಟ ಲಕ್ಷ್ಮಣನತ್ರೆ ಸುಮಿತ್ರೆ ಹೇಳುವ ಶ್ಲೋಕ ಅದು. ರಾಮನಲ್ಲಿ ದಶರಥನನ್ನೂ, ಸೀತೆಯಲ್ಲಿ ಎನ್ನನ್ನೂ, ಕಾಡಿಲ್ಲಿ ಅಯೋಧ್ಯೆಯನ್ನೂ ಕಂಡುಕೊಂಡು ಸುಖವಾಗಿ ಬದ್ಕು’ ಹೇಳಿ ಇದರ ಅರ್ಥ.
ಅಂಬಗಳೇ ಕೊಶೀಲಿ ಎದ್ದು ಆಸ್ಥಾನಕ್ಕೆ ಬಂದ.ವಿಕ್ರಮಾದಿತ್ಯ ರಾಜಂಗೂ ವರರುಚಿಯ ಕಾಣದ್ದೆ ಸಭೆಯೇ ಶೂನ್ಯ ಹೇಳಿ ಆಗಿಂಡಿದ್ದತ್ತು. ರಾಮಾಯಣದ ಎಲ್ಲಾ ಶ್ಲೋಕವೂ ಶ್ರೇಷ್ಠ ಹೇಳಿ ಗೊಂತಿದ್ದರೂ ಹೀಂಗೊಂದು ಅಸಂಬದ್ಧ ಪ್ರಶ್ನೆ ಕೇಳಿ ಒಬ್ಬ° ದೊಡ್ಡ ವಿದ್ವಾಂಸನನ್ನೇ ಕಳಕ್ಕೊಂಡ ಹಾಂಗಾತೂಳಿ ಬೇಜಾರ ಪಟ್ಟುಕೊಂಡಿಪ್ಪಗಳೇ ವರರುಚಿ ಆಸ್ಥಾನಕ್ಕೆ ಬಂದದು.
ವರರುಚಿ ಬಂದಿಕ್ಕಿ ರಾಜನತ್ರೆ ಈ ಶ್ಲೋಕ ಇಡೀ ಹೇಳಿದ°.ಅದರ ಅರ್ಥವನ್ನೂ ವಿವರಿಸಿದ°.
“ಮಾಂ ವಿದ್ದಿ ಜನಕಾತ್ಮಜಾಂ” ಹೇಳುವ ವಾಕ್ಯ ಈ ಶ್ಲೋಕಲ್ಲಿ ಅತ್ಯಂತ ಹೆಚ್ಚು ಶ್ರೇಷ್ಠ. ‘ಸುಮಿತ್ರೆಯ ಸೀತೆಯಲ್ಲಿ ಕಾಣು’  ಹೇಳುವ ಮೂಲಕ ಲಕ್ಷ್ಮಣನ ಅಮ್ಮನ ಸ್ಥಾನಲ್ಲಿಪ್ಪದು ಸೀತೆ ಹೇಳಿ ಸಂಬಂಧಂಗಳ ಮೌಲ್ಯವ ತಿಳಿಸುವ ವಾಕ್ಯ ಇದು….!
ಮಹಾರಾಜಂಗೆ ಭಾರೀ ಕೊಶಿಯಾತು. ವರರುಚಿಗೆ ಅರ್ಧ ಸಿಂಹಾಸನವನ್ನೇ ಕೊಟ್ಟು ಕೂರ್ಸಿ,ಪೈಸೆ,ಚಿನ್ನಾಭರಣ,ಪಟ್ಟೆ ವಸ್ತ್ರ ಎಲ್ಲ ಕೊಟ್ಟು ಸಮ್ಮಾನ ಮಾಡಿದ°. ಅಂದರೂ ರಾಜಂಗೆ ಸಮದಾನಾಯಿದಿಲ್ಲೆ.ಇನ್ನೆಂತಾರು ಬೇಕಾರೆ ಹೇಳು! ನಿಂಗಳ ಕಾಂಬಗ ಇನ್ನೂ ಸಮದಾನ ಆದಾಂಗೆ ಕಾಣ್ತಿಲ್ಲೆ ”
ವರರುಚಿಯ ತಲೆಲಿಪ್ಪ ವಿಶಯವೇ ಬೇರೆ, ಯಕ್ಷಿಣಿಗೊ ಹೇಳಿದಾಂಗೆ ಆ ಪಂಚಮ ಕುಲದ ಹೆಣ್ಣಿನ ಮದುವೆ ಆಯೆಕಾಗಿ ಬಂದರೆ ಸತ್ಕುಲಲ್ಲಿ ಹುಟ್ಟಿದ ಎನ್ನ ಅವಸ್ಥೆ ಎಂತಕ್ಕು? ಇದಕ್ಕೆ ಪರಿಹಾರ ಎಂತರ? ..ಹೀಂಗೇ ಆಲೋಚನೆ ಮಾಡಿಕ್ಕಿ ಅಕೇರಿಗೆ ರಾಜನತ್ರೆ ಹೇಳಿದ°
“ನಮ್ಮ ಊರಿನ ಗಡೀಲಿ  ಒಂದು ಜಾಗೆಲಿ ಪಂಚಮಕುಲಲ್ಲಿ ನಿನ್ನೆ ಇರುಳು ಒಂದು ಹೆಣ್ಣು ಶಿಶುವಿನ ಜನನ ಆಯಿದು. ಅದರಿಂದಾಗಿ ಇನ್ನು ಮೂರು ವರ್ಷಪ್ಪಗ ನಮ್ಮ ರಾಜ್ಯಕ್ಕೆ ದೊಡ್ಡ ಆಪತ್ತು ಬಕ್ಕು. ಹಾಂಗಾಗಿ ಆ ಮಗುವಿನ ಬಗ್ಗೆ ನಿಂಗೊ ಒಂದು ತೀರ್ಮಾನ ತೆಕ್ಕೊಳ್ಳೆಕು”.
ರಾಜಂಗೂ ವರರುಚಿಯ ಮಾತು ಕೇಳಿಯಪ್ಪಗ ಬೆಚ್ಚಾತು.ಒಂದು ಮಗುವಿಂದಾಗಿ ಇಡೀ ನಾಡಿಂಗೇ ದೋಷ ಬತ್ತೂಳಿ ಆದರೆ ಆ ಮಗುವನ್ನೇ ಬದ್ಕುಲೆ ಬಿಡ್ಲಾಗ,ಆದಷ್ಟು ಬೇಗ ಅದಕ್ಕೊಂದು ವ್ಯವಸ್ಥೆ ಮಾಡ್ಲೆ ವರರುಚಿ ಹೇಳಿದ ಜಾಗೆಗೆ ಸೈನಿಕರ ಕಳ್ಸಿದ° ವಿಕ್ರಮಾದಿತ್ಯ.
ಅವು ಅಲ್ಲಿ ಹೋಗಿ ಮಗುವಿನ ತೆಕ್ಕೊಂಡವು.ಆದರೆ ಹೆಣ್ಣು ಮಗು,ಶಿಶು!! ,ಸ್ತ್ರೀ ಹತ್ಯೆ,ಶಿಶು ಹತ್ಯೆ..!
ಈ ಎರಡೂ ಪಂಚಮಹಾಪಾತಕಲ್ಲಿಪ್ಪ ಕಾರಣ ಸೈನಿಕರಿಂಗೆ ಅದರ ಕೊಲ್ಲಲೆ ಧೈರ್ಯ ಬಯಿಂದಿಲ್ಲೆ. ಆದರೂ ರಾಜನ ಆಜ್ಞೆ ಪ್ರಕಾರ ಮಗುವಿನ ಕೊಲ್ಲಲೇ ಬೇಕನ್ನೇ..ಹಾಂಗಾಗಿ ಒಂದು ಉಪಾಯ ಮಾಡಿದವು.ಬಾಳೆ ದಂಡಿನ ತೆಪ್ಪ ಮಾಡಿ ,ಶಿಶುವಿನ ತಲಗೆ ಒಂದು ದೊಂದಿ ಮಾಡಿ ಕುತ್ತಿಕ್ಕಿ ,ಆ ತೆಪ್ಪಲ್ಲಿ ಮನುಶಿ ಹೊಳೆಲಿ ತೇಲ್ಸಿ ಬಿಟ್ಟಿಕ್ಕಿ ಬಂದು ರಾಜನತ್ರೆ
” ನಿಂಗೊ ಹೇಳಿದ ಕೆಲಸ ಮಾಡಿಕ್ಕಿ ಬಂದೆಯೋ° ” ಹೇಳಿದವು.

ಇನ್ನೂ ಇದ್ದು…..

ಪ್ರಸನ್ನಾ ಚೆಕ್ಕೆಮನೆ

3 thoughts on “ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 1

  1. ಹೊಸ ಕತೆ. ತುಂಬಾ ಚೆಂದಕೆ ಬತ್ತಾ ಇದ್ದು. ಮುಂದುವರಿಯಲಿ.

  2. ಕಥೆ ತುಂಬಾ ಲಾಯ್ಕ ಬರದ್ದಿ…ಮುಂದಾಣ ಭಾಗಕ್ಕೆ ಕಾಯೇಕ್ಕಾವುತ್ತನ್ನೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×